ಪುಟ:Mysore-University-Encyclopaedia-Vol-1-Part-1.pdf/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಅಕ್ಕಲಕೋಟೆ - ಅಕ್ಕಸಾಲಿಗರ ಉದ್ಯಮ

ಮಹಾಶಿವರಣೆ ಎಂಬ ಹೊಗಳಿಕೆಗೆ ಪಾತ್ರಳಾದಳು. ಅಲ್ಲಿಂದ ಈಕೆ ಎಲ್ಲರ ಹರಕೆಯನ್ನೂ ಹೊತ್ತು. ತನ್ನ ಗಂಡ ಶ್ರೀಚೆನ್ನಮಲ್ಲಿಕಾಜು‌ನನ್ನು ಅರಸುತ್ತ ಶ್ರೀ ಶೈಲಕ್ಕೆ ಬಂದು, ಕದಳಿದವನ ಪ್ರವೇಶಿಸಿ, ತನ್ನ ಆರಾಧ್ಯದೈವವಾದ ಸಾನ್ನಿಧ್ಯದಲ್ಲಿ ಕೊನೆಯುಸಿರೆಳೆದಳು. ಹೀಗೆ ಸಂಪ್ರದಾಯಿಕ ಸಮಾಜದ ಸಂಕೋಲೆಗಳನ್ನು ಮುರಿದೊಗೆದು ಇವಳು ಮಾಡಿದ ಉಗ್ರಸಾಧನೆ, ಪಡೆದ ಸಿದ್ದಿ ಅಪೂವ‍ವಾದುದು. ಅಕ್ಕಮಹಾದೇವಿ ಶ್ರೇಷ್ಠ ಅನುಭಾವಿಯಾಗಿರುವಂತೆ ಶ್ರೇಷ್ಠ ವಚನ ಕಾತಿಯೂ ಅಗಿದ್ದಾಳೆ. ಚೆನ್ನಮಲ್ಲಿಕಾಜು‍ನ ಎಂಬುದು ಇವಳ ವಚನಗಳ ಅಂಕಿತ. ಇವುಗಳ ವಚನೆಗಳಲ್ಲಿ ಇವಳ ಅಂತರಂಗದ ಎಲ್ಲಾ ತುಮುಲಗಳೂ ಆಸೆ-ನಿರಾಸೆಗಳೂ ಸಂದೇಹ-ನಂಬಿಕೆಗಳೂ ವ್ಯಕ್ತವಾಗಿವೆ. ಅವು ಇವಳ ತೀವ್ರ ಅನುಭವದ ಅಗಳವಾಗಿ ಹೊಮ್ಮುವುದರಿಂದ ಅನೇಕ ಕಡೆ ಶುದ್ದ ಭಾವ ಗೀತೆಯ ಲಕ್ಷಣಗಳನ್ನು ಪಡೆದಿದೆ. ಸೃಷ್ಠಿಯಲ್ಲಿ ಒಂದಾಗಿಯೂ ಸೃಷ್ಠಿಯಿಂದ ಬೇರೆಯಾಗಿಯೂ ಇವರು ಭಗವಂತನ ನಿಲುವನ್ನು ಬಹು ಪರಿಣಾಮಕಾರಿಯಾದ ರೀತಿಯಲ್ಲಿ ಚಿತ್ರಿಸುವ ಅಕ್ಕನ ವಚನವೊಂದು ಹೀಗಿದೆ.

  ಈಳೆ ನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರಾರಯ್ಯ? 
 ಕಬ್ಬು ಬಾಳೆ ಹಲಸು ನಾರಿವಳಕ್ಕೆ ಸಿಹಿನೀರನೆರದವರಾಯ್ಯ?

ಕಳವೆ ರಾಜಾನ್ನಯ ಶಾಲ್ಯನ್ನಕ್ಕೆ ಓಗರದ ಉದಕವನೆರದವರಾರಯ್ಯ? ಮರುಗ ಮಲ್ಲಿಗೆ ಪಚ್ಚಿ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ? ಇಂತಿ ಜಲವು ಒಂದೆ ನೆಲನು ಒಂದದೆ ಅಕಾಶವು ಒಂದೆ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಹಿಹ ಹಾಗೆ ಎನ್ನ ದೇವ ಚನ್ನಮಲ್ಲಿಕಾಜು‍ನನಿಗಾಗಿ ಕಾತರಿಸಿ ಕಳವಳಪಟ್ಟ ಇವಳ ಅಂತರಂಗದ ವೇದನೆಯನ್ನು ಕೆಳಗಿನ ವಚನ ಚೆನ್ನಾಗಿ ಚಿತ್ರಿಸುತ್ತದೆ.

 ಎರೆಯಂತೆ ಕರಕರಗಿ ಮಳಲಂತೆ ಜರಿಜರಿದು,
 ಕನಸಿನಲ್ಲಿ ಕಳವಳಿಸಿ ಅನು ಬೆರಗಾದೆ,
 ಅವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದ,
 ಅಪತ್ತಿಗೆ ಸಖಿಯಾರನಾರನೂ ಕಾಣೆ,
 ಅರಸಿಗೆ ಕಾಣದ ತನುವ, ಬೆರಸಿ ಕೊಡದ ಸುಖವ,
 ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾಜು‍ನಾ

ತೆರಣೆಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ ತನ್ನ ನೂಲ ತಾನು ಸುತ್ತಿಸಾವ ತೆರನಂತೆ; ಚಂದನದ ಕಡಿದು ಕೊರೆದು ತೇದೊಡೆ ನೊಂದೆನೆಂದು ಕಂಪಬಿಟ್ಟಿತ್ತೇ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದೊಡೆಂತಯ್ಯ, ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ; ಚಿಲಿಪಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರಿ ನೀವು ಕಾಣಿರ-ಈ ಮುಂತಾದ ವಚನಗಳಲ್ಲಿ ಸಹಜ ಅನುಭವದ ತೀವ್ರತೆಯುಳ್ಳ ಭಾವಗೀತೆಯ ಲಕ್ಷಣಗಳನ್ನು ಕಾಣಬಹುದಾಗಿದೆ. ಸಾಹಿತ್ರಗುಣ ಇಂಥ ಹಲವಾರು ವಚನಗಳಲ್ಲಿ ಫನೀಭೂತವಾಗಿದೆ, ಸಮಾಜ ವಿಮ‍ಶಯ, ಭೋದನೆಯ ವಚನಗಳು ಅಕ್ಕನಲ್ಲಿ ಬಹಳ ಕಡಿಮೆ. ಈಕೆ ವಚನಗಳನ್ನಲ್ಲದೆ ಯೋಗಾಂಗ ತ್ರಿವಿಧಿ ಎಂಬ ೬೭ ತ್ರಿಪದಿಗಳನ್ನೊಳಗೊಂಡ ತಾತ್ವಿಕ ವಿಷಯನಿರೂಪಣೆಯುಳ್ಳ ಒಂದು ಗ್ರಂಥವನ್ನು ಬರೆದಿದ್ದಾಳೆ. ಇದರಲ್ಲಿ ತಾತ್ವಿಕ ವಿಷಯಗಳು ಕೆಲವು ಸಲ ಸರಳವಾಗಿಯೂ ಹಲವು ಸಲ ಬೆಡಗಿನ ವಚನಗಳ ಮಾದರಿಯಲ್ಲಿಯೂ ನಿರೂಪಿತವಾಗಿವೆ ಈ ಕೃತಿ ಚಿಕ್ಕದಾದರೂ ಅಕ್ಕನ ಅನುಭಾವಸಂಪತ್ತಿಗೆ ಸಾಕಷಿಯಾಗಿದೆ. ಇಡೀ ವಚನಸಾಹಿತ್ಯದಲ್ಲಿ ಗುಣದ ದೃಷ್ಟಿಯಿಂದ ನಾಲ್ಕಾಋಉ ಕೃತಿಕಾರರ ಹೆಸರುಗಳನ್ನು ಹೇಳಬೇಕಾದಾಗ ಅದರಲ್ಲಿ ಅಕ್ಕಮಹಾದೇವಿಯ ಹೆಸರು ಖಂಡಿತ ಸೇರುತ್ತದೆ.

 ಅಕ್ಕಲಕೋಟೆ : ಗುಲ್ಬಗ‍ಕ್ಕೆ ಸಮೀಪದಲ್ಲಿರುವ ಪ್ರಾಚೀನ ಐತಿಹಾಸಿಕ ಸ್ಥಳ ಇದು ಸಾತವಾಹನರು ಮತ್ತು ರಾಷ್ಟ್ರಕೂಟರ ರಾಜ್ಯದಲ್ಲಿ ಸೇರಿತ್ತೆಂದು ಶಾಸನಗಳಿಂದ ಗೊತ್ತಾಗುತ್ತದೆ. ಯಾದವ ಮನೆತನದವರ ಅನೇಕ ಶಾಸನಗಳು ಇಲ್ಲಿ ದೊರೆತಿರುವುದಿಂದ ೧೪ನೇಯ ಶತಮಾನದವರೆಗೆ ಇದು ಯಾದವರ ಅಳ್ವಿಕೆಯಲ್ಲಿತ್ತು ಎಂದು ತಿಳಿದು ಬರುತ್ತದೆ. ೧೬ನೇಯ ಶತಮಾನದಲ್ಲಿ ಬಿಜಾಪುರ ಮತ್ತು ಅಹಮದ್ ನಗರ ರಾಜ್ಯಗಳ ಯುದ್ಧಗಳು ಇಲ್ಲಿ ನಡೆದವು. ಶಿವಾಜಿಯ ಮೊಮ್ಮಗನಾದ ಷಾಹು ರಾಣೋಜಿ ಎಂಬ ಬಾಲಕನಿಗೆ ಫರೇಸಿಂಗ್ ಎಂಬ ಹೊಸ ಹೆಸರನ್ನು ಕೊಟ್ಟು ೧೭೧೨ರಲ್ಲಿ ಅವನಿಗೆ ಅಕ್ಕಲಕೋಟೆಯನ್ನು ಜಹಗೀರನ್ನಾಗಿ ಕೊಟ್ಟ ೧೭೬೦ರಲ್ಲಿ ಫತೇಸಿಂಗನು ಮರಣಹೊಂದಲು ಷಾಹಜಿ ಅಕ್ಕಲಕೋಟೆ ಸಂಸ್ಥಾನದ ರಾಜನಾದ. ಇವನಿಗೂ ಸಹೋದರನಾದ ತುಳಜೀ ಎಂಬುವನಿಗೂ ಅದ ಕಲಹದಲ್ಲಿ ಅಬ್ಬಾಸಾಹೇಬನ ಪರವಾಗಿ ಈಸ್ಟ್ ಇಂಡಿಯಾ ಕಂಪನಿ ಈ ಕಲಹದಲ್ಲಿ ಪ್ರವೇಶಿಸಿತು. ಅಬ್ಬಾಸಾಹೇಬನೇ ಅಕ್ಕಲಕೋಟೆಯ ರಾಜನೆಂದು ತಿಮಾ‍ನಿಸಿತು. ಇವನು ೧೮೮೨ರಲ್ಲಿ ಮರಣಹೊಂದಲು ಇವನ ಮಗನಾದ ಮಾಲೋಜಿ ರಾಜನಾದ. ಮಾಲೋಜಿ ೧೮೨೮ರಲ್ಲಿ ಮರಣ ಹೊಂದಲು ಇವನ ಮಗನಾದ ಷಾಹಜಿ ರಾಜನಾದ. ಅಗ ಇವನಿಗೆ ಕೇವಲ ೮ ವಷ‌. ಅದುದರಿಂದ ಸತಾರ ಸಂಸ್ಥಾನದ ರಾಜ ಇವನ ಪರವಾಗಿ ರಾಜ್ಯಭಾರ ಮಾಡಲು ಪ್ರಾರಂಭಿಸಿದ. ಅದರೆ ಜನಗಳು ಸತಾರದ ರಾಜನಮೇಲೆ ದಂಗೆ ಎದ್ದರು. ಬ್ರಿಟಿಷ್ ಸೈನ್ಯ ದಂಗೆಯನ್ನು ಅಡಗಿಸಿ ಬ್ರಿಟಿಷರ ಗವನ‍ರನ್ನು ನೇಮಕ ಮಾಡಿತು. ಅನಂತರ ಷಾಹಜಿ ಬ್ರಿಟಿಷರ ಅಧೀನನಾಗಿ ಆಳಿದ. ಭಾರತ ಸ್ವತಂತ್ರವಾದ ಮೇಲೆ ಅಕ್ಕಲಕೋಟೆ ಸಂಸ್ಥಾನ ಮಹಾರಾಷ್ಟ್ರ ಸಕಾ‍ರದ ಅಡಳಿತಕ್ಕೊಳಪಟ್ಟು ಶೋಲಾಪುರ ಜಿಲ್ಲೆಯ ಭಾಗವಾಗಿ ಮುಂದುವರೆಯುತ್ತಿದೆ.
  ಈಗ ಊರು ಪ್ರಮುಖ ರೈಲುನಿಲ್ದಾಣವಾಗಿದೆ. ಜನಸಂಖ್ಯೆ ೧೨,೫೦೦, ಸಮುದ್ರಮಟ್ಟದಿಂದ ೧೮೦೦' ಎತ್ತರವಿದ್ದು ಸಹ್ಯಾದ್ರಿಯ ಮಳೆಯ ನೆರಳಿನಲ್ಲಿರುವುದರಿಂದ ವಾಷಿ‍ಕ ಮಳೆ ಸು. ೬೩-೭೬ ಸೆಂ.ಮೀ ಮಾತ್ರ. ಬೋರಿ ಮತ್ತು ಹರಣಿ ನದಿಗಳು ದಕ್ಷಿಣಕ್ಕೆ ಹರಿಯುತ್ತವೆ. ನೀರು ಮತ್ತು ವಿದ್ಯೂತ್ ಪೂರೈಕೆ ಬೋರಿನದಿಯಿಂದ. ನೆಲ ಕರಿ ಮತ್ತು ಕೆಂಪು ವೃಕ್ಷರಹಿತ, ಜೋಳ, ವೀಳೆಯದೆಲೆ-ಇವು ಬೆಳೆಗಳು. ಒಕ್ಕಲುತನ, ತೋಟಗಾರಿಗೆ, ನೇಯ್ಗೆ ಇವು ಪ್ರಮುಖ ಉದ್ಯಮಗಳು. ಇಲ್ಲಿ ಸ್ವಾಮಿ ಮಹಾರಾಜರ ಸಮಾಧಿ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಲಯಗಳ ಪ್ರೇಕ್ಷಣಿಯ ಸ್ಥಳಗಳಾಗಿವೆ.
  ಅಕ್ಕಸಾಲಿಗರ ಉದ್ಯಮ : ಅಕ್ಕಸಾಲಿಗರ ಪದದ ಮೂಲ ರೂಪ ಅಕಶಾಲಿ. ಜಗತನ್ನು ಸೃಷ್ಠಿಸಿದವನೆಂದೂ ಜಗಚ್ಪಿಲ್ಪೆಯೆಂದೂ ಸವ‍ಹೃದಯಗಳಲ್ಲೂ ಸ್ಥಿತನಾಗಿರುವ ಪರಬ್ರಹ್ಮರೂಪಿಯೆಂದೂ ವೇದಗಳಲ್ಲಿ ವಣಿತನಾಗಿರುವನು. ವಿಶ್ವಕಮ‍, ವಿಶ್ವಕಮ‍, (ಅಕ್ಕಸಾಲಿಗ) ವಂಶದ ಮೂಲಪುರುಷ ಇವರ ೫ ಮಂದಿ ಮಕ್ಕಳು ಋಷಿಪುಂಗವರಾಗಿದ್ದು ೫ ಶಿಲ್ಪಕಾಯಕಗಳ ಪ್ರವತ‍ಕರಾಗಿದ್ದಾರೆ. ಮನು ಕಬ್ಬಿಣದ ಕೆಲಸಗಳನ್ನು ಪ್ರವತಿ‍ಸಿದವರು. ಮಯ ಮರಗೆಲಸವನ್ನು ತಿಳಿಸಿದವನು. ಯಜ್ಞಕಮಗಳಿಗೆ ಬೇಕಾದ ಪಾತ್ರೆ ಪಡಗಗಳನ್ನು ತಯಾರಿಸಿದವನು ತ್ವಷ್ಪ್ಯ ವಿಗ್ರಹ ಹಾಗೂ ದೇವಾಲಯಗಳ ಕತೃ‍ವೇ ಶಿಲ್ಪ. ಮಾಂಗಲ್ಯಾದಿ ಅಭರಣಗಳನ್ನು ಮಾಡಿದನು. ವಿಶ್ವಜ್ಞ ಈ ವಿವರ ಉದ್ಯಮದ ವ್ಯಾಪ್ತಿಯನ್ನು ಚೆನ್ನಾಗಿ ತಿಳಿಸುತ್ತದೆ.
 ಬಂಗಾರದ ಅಭರಣಗಳನ್ನು ಮಾಡುವಡೆಯನ್ನು ಕೌಟಿಲ್ಯ ತನ್ನ ಅಥಶಾಸ್ತ್ರದಲ್ಲಿ ಅಕಶಾಲೆಯೆಂದು ಪ್ರಸ್ತಾಪಿಸುತ್ತಾನೆ. ಅಕ್ಕಶಾಲೆಗೆ ಈಗ ಕನ್ನಡ ಪ್ರತ್ಯಯ ಸೇರಿ ತದ್ಬವವಾದಾಗ ಅಕ್ಕಸಸಾಲಿಗ ಆಗುತ್ತದೆ.
 ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸುವ ಕುಶಲಕಮಿಗಳಾದ ಅಕ್ಕಸಾಲಿಗರಿಗೆ ಓಜರು, ಚಿನಿವಾರರು, ಋಥಕಾರರು, ನಾಡಿಂದಮರು, ಸೂನೆಗಾರರು ಎಂಬ ಹೆಸರುಗಳು ಇವೆ. ಬಂಗಾರ, ಬೆಳ್ಳಿ, ವಜ್ರ, ರತ್ನ, ಮಣಿಗಳು ಮುಂತಾದ ಪ್ರಶಸ್ತ ವಸ್ತುಗಳನ್ನು ಬಳಸಿ ಸೂಕ್ಷಮತಮ ಕುಸುರಿಕೆಲಸಗಳನ್ನು ನಡೆಸಿ ಅಭರಣಗಳನ್ನು ಸಿದ್ದಪಡಿಸುವುದರಲ್ಲಿ ಇವುರ ನಿಷ್ಣಾತರು.
 ಗತಕಾಲದ ನಾಗರಿಕತೆಯನ್ನು ಗುರುತಿಸುವಾಗೆಲ್ಲಾ ಆ ತಲೆಮಾರುಗಳ ಅಕ್ಕಸಾಲಿಗರು ರಚಿಸಿದ ವಿನ್ಯಾಸಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪ್ರಾಚೀನ ಶಿಲ್ಪ ಹಾಗೂ ಚಿತ್ರಗಳಲ್ಲಿ ಅಕ್ಕಸಾಲಿಗರ ನಿಮಾ‍ಣ ಕೌಶಲ್ಯ ವ್ಯಕ್ತವಾಗುತ್ತದೆ. ಅನೇಕ ವೇಳೆ ಶಿಲ್ಪಗಳಲ್ಲಿ ಉಡುಪಿಗಿಂತಲೂ ಹೆಚ್ಚಾಗಿ ಧರಿಸಲಾಗಿರುವ ಆಭರಣಗಳನ್ನು ಕಾಣಬಹುದಲ್ಲದೇ ಅವುಗಳ ವಿನ್ಯಾಸವೂ ಕಾಲಕಾಲಕ್ಕೆ ಬದಲಾಗಿರುವುದು ಗೋಚರವಾಗುತ್ತದೆ.
ಪ್ರ.ಶ. ೨೫೦೦ರ ಸಮಯದ ಹಿಂದೂ ಕಣವೆ ನಾಗರಿಕತೆಯ ಅಕ್ಕಸಾಲಿಗರು ಬೆಳ್ಳಿ ಬಂಗಾರ ಮತ್ತು ತಾಮ್ರದ ಆಭರಣಗಳನ್ನು ತಯಾರಿಸಿದ್ದಾರೆ. ಛಂಕವನ್ನೂ (ಒಂದೂ ಬಗೆಯ ಕೊಂಬು) ರಕ್ತವಣ‍ದ ಮೆಲೆಗಳನ್ನೂ ಆಗಿನ ಜನ ಆಭರಣಗಳಿಗಾಗಿ ಬಳಸುತ್ತಿದ್ದಾರೆ. ಅಲ್ಲಿನ ಅಕ್ಕಸಾಲಿಗರು ಬೆಳ್ಳಿ, ಬಂಗಾರ, ಮಣೆಗಳು, ನಣುಪು ಶಿಲೆಯ ಹರಳುಗಳು-ಇವನ್ನು ಬಳಸಿ ಹಾರಗಳನ್ನು ತಯಾರಿಸುತ್ತಿದ್ದರು. ಪ್ರ.ಶ.ಪೊ ೧೫೦೦ರ ಹೊತ್ತಿಗೆ ಭಾರತಕ್ಕೆ ಬಂದ ಆಯ‍ರು ಅಳಿದುಳಿದ ಹಿಂದೂ ಕಣವೆ ನಾಗರಿಕರಂತೆಯೇ ಬೆಳ್ಳಿ ಬಂಗಾರಗಳ ಕುಶಲತೆಯಲ್ಲಿ ಚೆನ್ನಾಗಿ ತರಪೇತಾಗಿದ್ದವರೇ. ಅಲ್ಲಿಂದ ಮುಂದೆ ಪ್ರ.ಶ.ಪೂ. ೩೦೦ರವರೆಗೆ ಅಕ್ಕಸಾಲಿಗರ ಕಲೆಯ ಬಗ್ಗೆ ಸ್ಪಷ್ಟ ದಾಖಲೆ ಸಿಗುವುದಿಲ್ಲ. ಸುವಣ‍ಯುಗ ಎಂದು ಕರೆಯಲದ ಗುಪ್ತರ ಆಳ್ವಿಕೆಯ ಕಾಲವು ಭಾರತೀಯ ಕಲೆಯ ಚರಿತ್ರೆಯ ದೃಷ್ಠಿಯಿಂದ ಮಹತ್ತರವಾದದ್ದು. ಪ್ರ.ಶ.ಪೂ. ೩೦೦ ರಿಂದ ಪ್ರ.ಶ.ಪೂ. ೬೦೦ರವರೆಗೆ ಹರಡುವ ಆ ಆವಧಿಯಲ್ಲಿ ಇಡೀ ಭರತ ಖಂಡವನ್ನು ಪ್ರತಿನಿಧಿಸಲಾಗುವಂಥ ಭಾರತೀಯ ವಿನ್ಯಾಸಕಲೆ ಮತ್ತು ನಿಮಾ‍ಣಕಕಲೆಗಳಿಗೆ ಮೂತರೂಪ ಬಂತು. ಕೌಟಿಲ್ಯನ ಅಥಶಾಸ್ತ್ರದಲ್ಲಿ ಅಕ್ಕಸಾಲಿಗರು, ಅವರ ವೃತ್ತಿ, ಸಕಾ‍ರದ ನಿಯಂತ್ರಣ ಇವುಗಳ ಬಗ್ಗೆ ಮಾಹಿತಿಗಳು ಸಿಗುತ್ತವೆ. ಹುಟಟಿನಿಂದ ಪ್ರಶಸ್ತಾನದ ಮತ್ತು ಸದಾಚಾರವಂತನಾದ ನುರಿತ ಕುಶಲ ಅಕ್ಕಸಾಳಿಗನೊಬ್ಬನಿಗೆ ನಡುರಸ್ತೆಯಲ್ಲಿ ಅಂಗಡಿಯೊಂದನ್ನು ಇಟ್ಟುಕೊಳ್ಳಲು ನಿಯಮಿಸಲಾಗುತ್ತಿತ್ತು. ಬೆಳ್ಳಿ ಬಂಗಾರಗಳ ಅಭರಣಗಳನ್ನು ಜನರು ಕೊಳುವುದರಲ್ಲೂ