ಪುಟ:Mysore-University-Encyclopaedia-Vol-1-Part-1.pdf/೧೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಗ್ನಿಪರ್ವತ ಕಡಿಮೆ ಸಿಲಿಕ ಸಂಯೋಜಿತವಾಗಿರುವವುಗಳನ್ನು ಪ್ರತ್ಯಾಮ್ಲ (ಬೇಸಿಕ್) ಶಿಲಾರಸಗಳೆಂದೂ ವಿಂಗಡಿಸಿದ್ದಾರೆ. ಆಮ್ಲಶಿಲಾರಸಗಳು ಬಿಳಿ ಅಥವಾ ಬೂದು ಮಿಶ್ರವಾದ ಪ್ರತ್ಯಾಮ್ಲ ಶಿಲಾರಸಗಳು ತೀರ ಕಪ್ಪಗೂ ಇರುತ್ತವೆ. ಶಿಲಾರಸದ ಉಷ್ಣತೆಯನ್ನು ನಿರ್ದಿಷ್ಟವಾಗಿ ಕಂಡುಹಿಡಿಯುವುದು ಅಷ್ಟಾಗಿ ಸುಲಭವಲ್ಲ.ಆದರೂ ಅಗ್ನಿಪರ್ವಥದ ಕುಂಡದಿಂದ ಆಗ ತಾನೇ ಹೊರಚಿಮ್ಮಿದ ಶಿಲಾರಸದ ಉಷ್ಣಾಂಶ ಸು. ೧೫೦೦-೧೬೦೦ಸೆ ಇರಬೇಕೆಂದು ನಿರ್ಧರಿಸಲಾಗಿದೆ. ಲಾವಾರಸದ ಭೊಉತಹುಣ: ಜ್ವಾಲಮುಖಿಯ ಕೋಷ್ಟದೊಳಗಿನ ಶಿಲಾಪಾಕದ ಉಷ್ಣತೆಯನ್ನು ಸ್ಫೋಟವಾದ ಅನಂತರ ಹೊರಚಿಮ್ಮುವ ಲಾವಾರಸದ ಉಷ್ಣತೆಯನ್ನಳೆದು ಅರಿಯಬಹುದು. ಜ್ವಾಲಮುಛಿಯ ಕೊಳವೆಯ ಬಿಳಿಯೇ ದ್ರುಕ್ ಜ್ವಾಲಮಾಪಕಗಳನ್ನಿಟ್ಟು (ಆಫ್ಫಿಕಲ್ ಪೈರೋಮೀಟರಸ್) ಅವಲೋಕನ ಮಾಡಬಹುದು. ಪ್ರಾತ್ಯಾಮ್ಲೀಯ ಲಾವರಸದ ಬಗ್ಗೆ ಸರಿಸುಮಾರು ಸನಿಹವೆನ್ನಬಹುದಾದ ಉಷ್ಣತೆಗಳನ್ನು ಅಳೆಯಲಾಗಿದೆ. ವಿಶೇಷವಾಗಿ ಹವಾಯಿ ದ್ವೀಪದ ಲಾವಾರಸದ ಉಷ್ಣತೆ ೧೨೦೦-೧೧೦೦ಸೆ. ಗಳೆಂದು ತಿಳಿದುಬಂದಿದೆ. ತಗ್ಗುಗಳಲ್ಲಿ ಸಂಚಯಿಸಿದ ಶೈತ್ಯಗೊಂಡ ಲಾವಾರಸ ೯೮೦ ಸೆ. ತಲುಪುತ್ತಲೇ ಘನೀಕರಿಸಿರುವುದನ್ನೂ ದಾಖಲೆ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಕೆಳ ಉಷ್ಣಾಂಶಗಳಲ್ಲೂ ಪ್ರತ್ಯಾಮ್ಲ ಲಾವಾರಸ ವಿಲೀನವಾದ ಬಾಷ್ಟನಿಲಗಳಿಂದಾಗಿ ತರಲ ಸ್ವಭಾವವನ್ನು ಉಳಿಸಿಕೊಂಡಿರುವ ಸಂದರ್ಭಗಳೂ ಉಂಟು. ಜಪಾನಿನ ಓಷಿಮಾ ಜ್ವಾಲಾಮುಖಿಯ ಕೊಳವೆ ಬಳಿ ಉಷ್ಣತೆ ೧೦೪೦-೧೦೫೦ಸೆ. ವರೆಗೆ ಇದ್ದುದ್ದನ್ನು ಜ್ವಾಲಾಮುಖಿತಗ್ನರು ೧೯೫೦-೫೧ರಲ್ಲಿ ಅಳೆದಿದ್ದಾರೆ. ಕೆಲವೊಮ್ಮೆ ಅನಿಲಗಳು ಕೊಳವೆ ಬಳಿ ದಹಿಸುವುದರಿಂದ ಸ್ಥಳೀಯ ಉಷ್ಣತೆ ೧೪೦೦ಸೆ.ಗೂ ಏರಲು ಸಾಧ್ಯ. ಸಿಲಿಕಾ ಪ್ರಧಾನವಾದ ಲಾವಾರಸದ ಉಷ್ಣತೆ ಅಳೆಯುವುದು ತುಸು ಕಷ್ಟವೇ. ಏಕೆಂದರೆ ಸ್ಪೋಟನೆ ಉಗ್ರರೀತಿಯದ್ದಗಿರುತ್ತದೆ. ಹಾಗೆಯೇ ಸ್ನಿಗ್ಧತೆಯನ್ನು ಛೇದಮಾಪಕದಿಂದ (ಪೆಟ್ರೋಮೀಟರ್) ಅಳೆಯಬಹುದು. ಕಿಲೊಉಯಿಯ ಜ್ವಾಲಾಮುಖಿಯ ಲಾವಾರಸ ೧೧೩೦-೧೧೩೫ಸೆ. ಉಷ್ಣತೆಯಲ್ಲಿ ೬೫೦೦-೭೫೦೦ ಪಾಯ್ಸಸ್ ಸ್ನಿಗ್ಧತೆ ವ್ಯಕ್ತಪಡಿಸಿದೆ. ಐಸ್ಲೆಂಡಿನ ಬಳಿಯ ಹಕ್ಲಾ ಜ್ವಾಲಾಮುಖಿಯ ಸಿಲಿಕಾ ಪ್ರಧಾನ ಲಾವಾರಸ ತೋರಿರುವ ಸ್ನಿಗ್ಧತೆಯ ಮೊಉಲ್ಯ ೧೦,೦೦೦ ಪಾಯ್ಸಸ್. ಸರ್ವಸಾಮಾನ್ಯವಾಗಿ ಸಲಿಕಾಪ್ರಧಾನ ಶಿಲಾರಸ ಹೆಚ್ಛು ಸ್ನಿಗ್ಧ ಎಂಬುದು ಪ್ರಮಾಣೀಕೃತವಾಗಿದೆ. ಜ್ವಾಲಾಮುಖಿಗಳನ್ನು ಅವುಗಳ ಸ್ವರೂಪವನ್ನಾಧರಿಸಿ ವರ್ಗೀಕರಿಸುವಂತೆ ಸ್ಫೋಟಿಸುವ ಬಗೆಯನ್ನು ಪರಿಗಣಿಸಿ ವರ್ಗೀಕರಿಸುವ ಕ್ರಮವಿದೆ. ಲಾವಾರಸದ ದ್ರವ ಪ್ರಾವಸ್ಥೆಯಲ್ಲಿ (ಲಿಕ್ವಿಡ್ ಫೇಸ್) ಅದರ ಸ್ನಿಗ್ಧತೆ ಎಶ್ಟಿರುತ್ತದೆ ಎನ್ನುವ ಅಂಶದ ಮೇಲೆ ಸ್ಫೋಟನಾ ಲಕ್ಶಣಗಳು ಅವಲಂಬಿಸಿವೆ. ಅದರಲ್ಲಿ ವಿಲೀನವಾಗಿರುವ ಅನಿಲ ಪ್ರಮಾಣ, ಸ್ಥಿತಿ ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸ್ನಿಗ್ಧತೆ, ಶಿಲಾರಸದ ರಾಸಾಯನಿಕ ಸಂಯೋಜನೆ, ದ್ರವದ ಉಷ್ಣತೆ, ಘನ ಸ್ಫಟಿಕಗಳ ರೂಪದಲ್ಲಿದೆಯೋ ಅಥವಾ ಗುಳ್ಳೆಗಳ ರೂಪದಲ್ಲಿದೆಯೋ ಎಂಬ ಅಣ್ಶಗಳನ್ನು ಆಧರಿಸಿದೆ. ಸ್ಫೋಟಿಸುವ ಬಗೆಯನ್ನು ಆಧರಿಸಿ ಜ್ವಾಲಾಮುಖಿಯನ್ನು ಕೆಳಕಂಡಂತೆ ವರ್ಗೀಕರಿಸಿದೆ. ಹವಾಯಿ ಬಗೆ: ಸ್ಫೋಟದ ತೀವ್ರತೆ ತುಂಬ ಕಡಿಮೆ. ಲಾವಾರಸ ಹೆಚ್ಚು ತರಲ (ಘ್ಲೂಯಿಡ್). ಲಾವಾರಸದಿಂದ ಬಿಡುಗಡೆಯಾಗುವ ಅನಿಲ ಪ್ರಮಾಣ ಅತ್ಯಲ್ಪ. ಅತಿ ತೆಳು ಲಾವಾರಸ ದೂರ ಹರಿದು ವ್ಯಾಪಿಸುತ್ತದೆ. ಜ್ವಾಲಾಮುಖಿಯ ಬಾಯಿಯೊಳಗೆ ಅತಿ ಹಚ್ಚು ಸ್ನಿಗ್ಧ ಗುಣದ ಲಾವಾರಸದ ಮೇಲೆ ತೆಳು ಲಾವಾರಸ ಮಡುವುಗಟ್ಟಿರುತ್ತದೆ. ಸ್ಟ್ರಾಂಬೋಲಿ ಬಗೆ: ಹೆಚ್ಚು ಸ್ಫೋಟನ ಗುಣವುಳ್ಳ ಜ಼್ವಾಲಾಮುಖಿ. ಲಾವಾರಸ ಹೆಚ್ಚು ಸ್ನಿಗ್ಧ. ಅಗ್ನಿಶಿಲಾಭಿದ್ರಗಳು ಹೆಚ್ಚು ಉತ್ಪನ್ನವಾಗುತ್ತವೆ. ಚಿಮ್ಮುವಾಗ ಬಾಂಬ್ ಮತ್ತು ಲ್ಯಾಪಿರಿ ಬೇರೆ ಬೇರೆ ಆಕಾರ ತೆಳೆಯುವುದುಂಟು. ತಾಡಿಸಿದಾಗ ಅವುಗಳ ರೂಪ ಬದಲಾವಣೆಯಾಗದು. ವಲ್ಕ್ಯಾನಿಯನ್ ಬಗೆ: ಜ್ವಾಲಾಮುಖಿಯ ಗುಮ್ಮಟ ರೂಪುಗೊಳ್ಳುವಷ್ಟು ಸ್ನಿಗ್ಧ ಲಾವಾರಸ ಹೊರಬೀಳುವುದ. ಬಾಯಿಯ ಸುತ್ತಲೂ ಸಂಚಯಿಸುತ್ತದೆ. ಪಾರ್ಶ್ವ ಬಲು ಕಡಿದು. ಗುಮ್ಮಟ ಭಾಗಶಃ ಕುಸಿಯುವುದು ಅಥವಾ ಸ್ಫೋಟಗೊಳ್ಳುವುದು ಸರ್ವಸಾಮಾನ್ಯ. ಪ್ಲಿನಿಯನ್ ಬಗೆ: ಅತಿ ಉಗ್ರ ಸ್ವರೂಪದ ಜ್ವಾಲಾಮುಖಿ. ಬೂದಿಗಲ್ಲು ಮತ್ತು ಬೂದಿಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಎರಚುತ್ತದೆ. ಬಹುತೇಕ ಸಿಲಿಕಾ ಅಧಿಕಾಣ್ಶದ ಲಾವ ಸ್ಫೋಟಿಸಿ ಮೂಲ ಬಾಯಿ ಕುಸಿಯುವುದು ಇದರ ಲಕ್ಶಣ. ಇಟಲಿಯ ವೆಸೂವಿಯಸ್ ಜ಼್ವಾಲಾಮುಖಿ ಈ ಬಗೆಯದು. ಶಿಲಾರಸಗಳ ಚಹರೆ ಹಲವು ಬಗೆಯಾಗಿರುತ್ತದೆ. ಕೆಲವು ಶಿಲಾಪ್ರವಾಹಗಳ ಮೇಲುಭಾಗ ನೊರೆಗಟ್ಟಿರುತ್ತದೆ. ದ್ರವತ್ವ ಕಡಿಮೆಯಿದ್ದಲ್ಲಿ ಇನ್ನೂ ಕೆಲವು ಗಟ್ಟಿಯಾದ ತಾರಿನಂತೆ ಹಗ್ಗದೋಪಾದಿಯಲ್ಲಿ ರೂಪುಗೊಳ್ಳುತ್ತವೆ. ರಸ ಕ್ರಮೇಣ ತಣ್ಣ್ನಗಾಗುತ್ತಾ ಬಂದಹಾಗೆಲ್ಲ ಮಿಲನವಾಗಿದ್ದ ಅನಿಲಗಳಲ್ಲವೂ ಸಣ್ಣ ಸಣ್ಣ ರಂಧ್ರಗಳ ಮೂಲಕ ಹೊರಹೊರಟು ರಂಧ್ರಗಳು ಹಾಗೆಯೇ ಪೊಳ್ಳು ಪೊಳ್ಳಾಗಿ ಉಳಿದು, ಗಟ್ಟಿಯಾದ ಮೇಲೆ ಸ್ಪಂಜಿನಂತ ಉಳಿದ ಕೆಲವು ಹಗುರಾಗುತ್ತವೆ. ಅಗ್ನಿಪರ್ವತದಿಂದ ಹೊರಬರುವ ಘನಾಂಶವನ್ನು ಅಗ್ನಿಶಿಲಾಛಿದ್ರಗಳೆಂದು ಕರೆಯುತ್ತಾರೆ. ಇವುಗಳ ಗಾತ್ರ ಸಣ್ಣ ಕಣಗಳಿಂದ ಹಿಡಿದು ದೊಡ್ಡ ಬಂಡೆಗಳವರೆಗೂ ಇರುತ್ತದೆ. ಧೂಳು ಅಥವಾ ಬೂದಿ, ಶಿಲಾರಸದ ಮುದ್ದೆ ಮತ್ತು ಶಿಲಾರಸದ ಗುಂಡು ಎಂದು ಇವನ್ನು ವಿಭಾಗಿಸಬಹುದು (ನೋಡಿ: ಪ್ಯುಮಿಸ್, ಅಗ್ನಿಶಿಲಾಛಿದ್ರಗಳು, ಲ್ಯಾಪಿಲ್ಲಿ). ಭೂವಿಗ್ನಾನದ ರೀತ್ಯ, ಹಲವು ಪರ್ವತಶ್ರೀಣಿಗಳು ಇತ್ತೀಚೆಗೆ ಉದ್ಭವವಾದವು. ಇಂಥವುಗಳ ಸ್ಥಿರತೆ ಕಡಿಮೆಯಾದ್ದರಿಂದ ಇವು ಅಗ್ನಿಪರ್ವತಗಳಿಗೆ ಆವಾಸಸ್ಥಾನವಾಗಿರುತ್ತವೆ. ಆಪ್ಲ್ಸ್ ಮತ್ತು ಹಿಮಾಲಯ ಪರ್ವತಶ್ರೇಣಿ, ರಾಕಿ ಮತ್ತು ಆಂಡೇಸ್ ಪರ್ವತಶ್ರೇಣಿಗಳು ಕೆಲವು ಪ್ರಸ್ಥಭೂಮಿಗಳು ಕೂಡ ಜ್ವಾಲಾಮುಖಿಗಳ ತವರು. ಇವಲ್ಲದೆ ಯ್ಯವ ವಿವರಂಎಗೂ ಸೇರದ ಕೆಲವು ಆಗ್ನಿಪರ್ವತಗಳು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿವೆ. ಜಾಗೃತ ಅಗ್ನಿಪರ್ವತಗಳ ವಯಸ್ಸಿನ ಪ್ರಮಾಣ ಒಂದರಿಂದ ವ್ಯತ್ಯಾಸಗೊಳ್ಳುತ್ತದೆ. ಸಿಸಿಲಿ ದ್ವೀಪದ ಏಟ್ನಾ ಅಗ್ನಿಪರ್ವತ ಕಳೆದ ೨೫೦೦ ವರ್ಷಗಳಿಂದಲೂ ಜೀವಂತವಾಗಿದೆ. ಕೆಲವು ಸುಪ್ತ ಅಗ್ನಿಪರ್ವತಗಳ ವಿರಾಮಾವಧಿ ನೂರು ವರ್ಷಕ್ಕೂ ಮೀರಿರಬಹುದು. ಜ್ವಾಲಾಮುಖಿಗಳ ಹಂಚಿಕೆ: ಕ್ರಿಯಾಶೀಲ ಜ್ವಾಲಾಮುಖಿಗಳ ನೆಲೆಯನ್ನು ಗಮನಿಸಿದರೆ ಅವುಗಳ ಹಂಚಿಕೆ ಯಾದೃಚ್ಛಿಕವಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದು ನಿರ್ಧಿಷ್ಟ ಜಾಡಿಗೆ ಸೀಮಿತವಾಗಿವೆ. ಶ್ರೇ. ೬೦ ಭಾಗ ಜ್ವಾಲಾಮುಖಿಗಳು ಪೆಸಿಫಿಕ್ ಸಮುದ್ರದ ಅಂಚಿಗೆ ಸೀಮಿತವಾಗಿದೆ. ಇದರಲ್ಲಿ ದಕ್ಷಿಣ ಅಮೆರಿಕದ ಆಯಂಡಿಸ್, ಮಧ್ಯ ಅಮೆರಿಕ, ಮೆಕ್ಸಿಕೊ, ಉತ್ತರ ಅಮೆರಿಕದ ಕ್ಯಾಸ್ಕೊಕ್ ಶ್ರೇಣಿ, ಅಲ್ಯಾಸ್ಕ, ಜಪಾನ್, ಫಿಲಿಪ್ಪೀನ್ಸ್, ಇಂಡೊನೇಷ್ಯ, ನ್ಯೂಜಿಲೆಂಡ್, ಅಂಟಾರ್ಕ್ಟಿಕ್ ಖಂಡದ ದಕ್ಷಿಣದ ತುದಿಯಲ್ಲಿರುವ ಮೊಉಂಟ್ ಎರೆಟಿಕ್ ಜ್ವಾಲಾಮುಖಿ- ಈ ಭಾಗಗಳಲ್ಲಿರುವ ಜ್ವಾಲಾಮುಖಿಗಳು ಸೇರುತ್ತವೆ. ಪೆಸಿಫಿಕ್ ಸಾಗರದ ಅಂಚನ್ನು ಹೂಮಾಲೆಯಂತೆ ಸುತ್ತಿರುವ ಈ ಜಾಡನ್ನು ಜ್ವಾಲಾವರ್ತುಲ ಎಂದು ಕರೆಯುತ್ತಾರೆ. ಇನ್ನೊಂದು ಪಟ್ಟೆ ಮಡಿಟರೇನಿಯನ್ ಬೋಗುಣಿಯಲ್ಲಿ ಆಫ್ರಿಕ ಮತ್ತು ಯುರೋಪು ಶಿಲಾಫಲಕವಗಳ ನಡುವೆ, ಫಲಕಗಳ ಅಪಸರಣ ಗಡಿಯಲ್ಲಿ (ಕನ್ವರ್ಜೆಟ್ ಬೊಉಂಡರಿ) ನೆಲೆಯಾಗಿದೆ. ಇದನ್ನು ಮೆಡಿಟರೇನಿಯನ್ ಪಟ್ಟಿಜಾಡು ಎಂದು ಕರೆಯುತ್ತರೆ. ಇದು ಒಟ್ಟು ಜ್ವಾಲಾಮುಖಿಗಳ ಶ್ರೇ. ೨೦ ಭಾಗವನ್ನು ಒಳಗೊಳ್ಳುತ್ತದೆ. ಇಟಲಿಯ ಮೊಉಂಟ್ ವೆಸುವಿಯಸ್ ಎಟ್ನಿ, ಗ್ರೀಸ್ನ ಸ್ತ್ರ್ಯಾಂಬೊಲಿ ಮುಂತಾದ ಕ್ರೀಯಾಶೀಲ ಜ್ವಾಲಾಮುಖಿಗಳು ಇದರಲ್ಲಿ ಸೇರಿವೆ. ಪ್ರ.ಶ.ಪೂ. ೧೫೦೦ರಿಂದ ಈವರೆಗೆ ೧೫೦ ಬಾರಿ ಮೊಉಂಟ್ ಎಟ್ನ ಸ್ಫೋಟಿಸಿದೆ. ತೀರ ಈಚಿನದು ಪ್ರಶ. ೨೦೦೦ರಲ್ಲಿ. ಪ್ರಶ.೭೯ರಲ್ಲಿ ವೆಸುವಿಯಸ್ ಜ್ವಾಲಾಮುಖಿ ಸ್ಫೋಟಿಸಿ ಪಾಂಪೆ ಮತ್ತು ಹರ್ಕುಲೇನಿಯಮ್ ನಗರಗಳನ್ನು ಸಂಪೂರ್ಣವಾಗಿ ದ್ವಂಸಮಾಡಿತ್ತು. ಕ್ರಿಯಾಶೀಲ ಜ್ವಾಲಾಮುಖಿಗಳ ಮತ್ತೊಂದು ಪ್ರಮುಖ ಜಾಡೆಂದರೆ ಮಧ್ಯಸಾಗರ ಏಣಿನ ಆಸುಪಾಸು. ಮಧ್ಯ ಅಟ್ಲಾಂಟಿಕ್ ಏಣು ಮತ್ತು ಪೂರ್ವ ಪೆಸಿಫಿಕ್ ಏರು- ಇವೆರಡೂ ಜ್ವಾಲಾಮುಖಿಗಳಿಗೆ ಪ್ರಸಿದ್ಧ. ಅಭಿಸರಣ ಫಲಕಗಳ ಗಡಿ (ಡೈವರ್ಜೆಂಟ್ ಪ್ಲೇಟ್ ಬೊಉಂಡರಿ): ಪ್ರತ್ಯಾಮ್ಲೀಯ ಲಾವಾರಸ ತರಲ ಸ್ವಭಾವದ್ದಾಗಿದ್ದು ಈ ಪರಿಸರದಲ್ಲಿ ಅಗ್ನಿಶಿಲಾ ಛಿದ್ರಗಳ ಉತ್ಪತ್ತಿ ನಗಣ್ಯ ನೀರಿನ ಸಂಮರ್ದ ಅನಿಲ ಬಿಡುಗಡೆಯಾಗದಂತೆ ತಡೆದಿರುತ್ತದೆ. ಈ ಭಾಗದಲ್ಲಿ ಮೈದಳೆಯುವ ಜ್ವಾಲಾಮುಖಿಗಳು ಬಹುತೇಕ ಗುರಾಣಿ ಜ್ವಾಲಾಮುಖಿಗಳು. ಮಧ್ಯಸಾಗರ ಏಣು, ವಿಶೇಷವಾಗಿ ಐಸ್ಲೆಂಡ್ ಬಳಿಯ ಸರ್ಟ್ಸ್ ಜ್ವಾಲಾಮುಖಿ ಇದಕ್ಕೊಂದು ಉದಾಹರಣೆ. ಇಂಡಿಯನ್ ಏಣು ಮತ್ತು ಪೂರ್ವ ಪೆಸಿಫಿಕ್ ಏರುವಿನ ಬಳಿಯೂ ಇದೇ ಬಗೆಯ ಜ್ವಾಲಾಮುಖಿಗಳನ್ನು ಕಾಣಬಹುದು. ಅಪಸರಣ ಫಲಕಗಳ ಗಡಿ (ಕನ್ವರ್ಜೆಂಟ್ ಪ್ಲೇಟ್ ಬೊಉಣ್ಡರಿ): ಅಪಸರಣ ಫಲಕಗಳು ಗಡಿಯಲ್ಲಿ ಫಲಕಗಳು ಒಂದರಮೇಲೊಂದು ಸವಾರಿಮಾಡುತ್ತವೆ. ಪೆಸಿಫಿಕ್ ಸಾಗರದ ಅಂಚು, ಮೆಡಿಟರೇನಿಯನ್ ಬೋಗುಣಿ ಎರಡರಲ್ಲೂ ಈ ಬಗೆಯ ಸ್ಥಿತಿಯಿದೆ. ಇಲ್ಲಿ ಮೈದಳೆಯುವ ಜ್ವಾಲಾಮುಖಿಗಳು ಬಹುತೇಕ ಸಂಕೀರ್ಣ