ಪುಟ:Mysore-University-Encyclopaedia-Vol-1-Part-1.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೆರೆದುಕೊಂಡಾಗ ಪರ್ವತ ಪಂಕ್ತಿಯ ಓಟಕ್ಕೆ ಸಮಾಂತರವಾಗಿ ಮತ್ತು ನೀಳವಾಗಿ ನೆಲೆಯಾಗಿರುತ್ತವೆ. ಮೇಲ್ಭಾಗ ಗುಮ್ಮಟಾಕಾರ ಹೊಂದಿದ್ದು ಆಳಕ್ಕೆ ಹೋದಂತೆಲ್ಲ ಅವುಗಳ ಪಾಶ್ರ್ವಗಳು ಅಧಿಕ ಇಳಿವೋರೆಯನ್ನು ತೋರಿಸುತ್ತ ಕ್ರಮೇಣ ಗಾತ್ರದಲ್ಲಿ ವಿಸ್ತರವಾಗುತ್ತಾ ಹೋಗುತ್ತವೆ. ಒಮ್ಮೊಮ್ಮೆ ಇವುಗಳ ಹೊರಮೈ ನುಣುಪಾಗಿರದೆ ಅವುಗಳನ್ನು ಆವರಿಸಿದ್ದ ನಾಡಶಿಲೆಗಳ ಉಳಿಕೆಗಳು ಮಾತ್ರ ಅಲ್ಲಲ್ಲಿ ಕಂಡುಬರುತ್ತವೆ. ಇವೇ ಅನ್ಯಶಿಲೆ (ಕ್ಸಿನೋಲಿತ್). ಕೆಲವೊಮ್ಮೆ ಬ್ಯಾತೊಲಿತ್‍ನ್ನು ಆವರಿಸಿರುವ ನಾಡಶಿಲೆಗಳು ಪೂರ್ಣವಾಗಿ ಬ್ಯಾತೊಲಿತ್‍ನಲ್ಲಿ ಐಕ್ಯಗೊಳ್ಳದೆ ಅವುಗಳ ಮಧ್ಯೆ ಮಧ್ಯೆ ಸ್ತಂಭದೋಪಾದಿಯಲ್ಲಿ ಗುಮ್ಮಟ ಚಾಚುಗಳು (ಛಿuಠಿoಟಚಿs) ಕಂಡುಬರುತ್ತವೆ. ಆಳದಲ್ಲಿ ಇವುಗಳು ಮುಖ್ಯ ಬ್ಯಾತೊಲಿತ್‍ನೊಡನೆ ಐಕ್ಯಗೊಳ್ಳುತ್ತವೆ. ಬ್ಯಾತೊಲಿತ್‍ಗಳು ಪರ್ವತೋದ್ಭವ ಸ್ಥಳಗಳಿಗೆ ಸೀಮಿತವಾಗಿದ್ದು ಮುಖ್ಯ ಪರ್ವತಜನ್ಯ ಕಾರ್ಯಕ್ಕೆ ಮುನ್ನ ತಲೆದೋರುತ್ತವೆ. ಇವು ಸಾಮಾನ್ಯವಾಗಿ ನಾಡಶಿಲೆಗಳನ್ನು ಅಡ್ಡ ಹಾಯ್ದು ಭೇದಿಸುತ್ತವೆ. ಈ ಬಗೆಯ ಕೆಲವು ಶಿಲೆಗಳು, ವಿಸ್ತಾರದಲ್ಲಿ 40 ಚದರ ಮೈಲುಗಳಿಗಿಂತಲೂ ಕಡಿಮೆ ಇದ್ದಾಗ ಅಂಥವುಗಳನ್ನು ಸ್ಟಾಕ್ ಮತ್ತು ಬಾಸ್ ಎಂದು ಕರೆಯಲಾಗುವುದು. ಶಿಲಾಸ್ವರೂಪ ನಕ್ಷೆಯಲ್ಲಿ ಇವುಗಳ ಬಾಹ್ಯರೂಪವು ವೃತ್ತಾಕಾರ (ಅಂಡಾಕಾರ)ವಾಗಿದ್ದರೆ ಬಾಸ್‍ಗಳೆಂದೂ ಹಾಗಿಲ್ಲದಿದ್ದರೆ ಸ್ಟಾಕ್‍ಗಳೆಂದೂ ಕರೆಯುತ್ತಾರೆ. ಬಾಸ್ ಮತ್ತು ಸ್ಟಾಕ್‍ಗಳ ಶಿಖರವು ಸಾಮಾನ್ಯವಾಗಿ ಸಮತಟ್ಟಾಗಿರುತ್ತದೆ. ಅಂತರಗ್ನಿ ಶಿಲೆಗಳಲ್ಲಿ ಬಹು ಅಂತಸ್ಸರಣಗಳು (muಟಣiಠಿಟe iಟಿಣಡಿusioಟಿs), ಸಂಯುಕ್ತ ಅಂತಸ್ಸರಣಗಳು (ಛಿomಠಿosiಣe iಟಿಣಡಿusioಟಿs) ಮತ್ತು ವಿಭೇಕೀಕೃತ ಅಂತಸ್ಸಕರಣಗಳು (ಜiಜಿಜಿeಡಿeಟಿಣiಚಿಣeಜ iಟಿಣಡಿusioಟಿs) ಎಂದು ಗುರುತಿಸಬಹುದು. ಮಾತೃಶಿಲಾದ್ರವವು ಒಂದೇ ಸ್ಥಳಕ್ಕೆ ಒಂದಕ್ಕಿಂತ ಹೆಚ್ಚು ಸಲ ಒಂದೇ ಕೂಪದ ಮೂಲಕ ನುಗ್ಗಿದಾಗ ಬಹು ಅಂತಸ್ಸರಣಗಳು ರೂಪುಗೊಳ್ಳುತ್ತವೆ. ಇವುಗಳ ಶಿಲಾ ಸಂಯೋಜನೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಆದರೂ ಅವುಗಳ ಅಂಚಿನಲ್ಲಿ ಕಾಣಬರುವ ಸೆಡೆತದ ವಿನ್ಯಾಸದಿಂದ ಸುಲಭವಾಗಿ ಗುರುತಿಸಬಹುದು. ಕೆಲವು ಬಹು ಅಂತಸ್ಸರಣಗಳಲ್ಲಿ ಶಿಲಾ ಸಂಯೋಜನೆ ಬೇರೆಬೇರೆಯಾಗಿದ್ದರೆ ಅಂತಹವುಗಳನ್ನು ಸಂಯುಕ್ತ ಅಂತಸ್ಸರಣಗ ಳೆಂದು ಹೆಸರಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಸಿಲ್ ಮತ್ತು ಡೈಕ್ ಸ್ವರೂಪಗಳಲ್ಲಿ ಕಾಣಬಹುದು. ಕೆಲವು ಸಂದರ್ಭಗಳಲ್ಲಿ ಮಾತೃಶಿಲಾದ್ರವವು ನಾಡಶಿಲೆಗಳನ್ನು ಭೇದಿಸಿ ಮೇಲಕ್ಕೆ ಬಂದ ಅನಂತರ ಅನುಕೂಲಕರ ಸನ್ನಿವೇಶದಡಿಯಲ್ಲಿ ಮಂದಗತಿಯಲ್ಲಿ ಆರಲು ಪ್ರಾರಂಭಿಸಿ ವಿವಿಧ ಹಂತಗಳಲ್ಲಿ ವಿವಿಧ ಖನಿಜಗಳು ರೂಪುಗೊಳ್ಳುತ್ತವೆ. ಆದ್ದರಿಂದ, ಒಂದೇ ಅಂತಸ್ಥಶಿಲೆಯ ವಿವಿಧ ಮಟ್ಟಗಳಲ್ಲಿ ಪರಸ್ಫರ ಜನ್ಯ ಸಂಬಂಧ ತೋರುವ ವಿವಿಧ ಶಿಲೆಗಳು ಕಂಡುಬರುತ್ತವೆ. ಇದು ವಿಭೇದಾತ್ಮಕ ಅಂತಸ್ಸರಣಗಳು. ಅಗ್ನಿಶಿಲೆಗಳ ಸ್ಥೂಲ ರಚನೆ: ಬಾಹ್ಯಸ್ಥ ಶಿಲೆಗಳಿಗೆ ತಮ್ಮದೇ ಆದ ಸ್ಥೂಲ ರಚನೆಗಳಿರುತ್ತವೆ. ಇವುಗಳನ್ನು ಬರಿಗಣ್ಣಿನಿಂದಲೆ ವೀಕ್ಷಿಸಬಹುದು. ಬಾಹ್ಯಸ್ಥ ಶಿಲೆಗಳ ಸ್ಥೂಲ ರಚನೆಗಳನ್ನು ಈ ಕೆಳಗೆ ವಿವರಿಸಲಾಗಿದೆ. ರಂಧ್ರಕ ರಚನೆ: ಈ ರಚನೆಯು ಜ್ವಾಲಾಮುಖಿಗಳ ಬಹುಮುಖ್ಯ ಲಕ್ಷಣ. ಮಾತೃಶಿಲಾದ್ರವದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನಿಲಾಂಶಗಳು ಅಯಾಣು ರೂಪದಲ್ಲಿ ಸಂಯೋಜನೆಗೊಂಡಿರುತ್ತದೆ. ಈ ದ್ರವವು ಹೊರಚಿಮ್ಮಿದಾಗ, ಅದರಲ್ಲಿನ ಅನಿಲಾಂಶವು ದ್ರವದಿಂದ ಅನಿಲಗಳಾಗಿ ಬೇರ್ಪಟ್ಟು ವಾತಾವರಣವನ್ನು ಸೇರುತ್ತದೆ. ಈ ಕ್ರಿಯೆ ಸಂಭವಿಸುವಾಗ ಶಿಲಾದ್ರವದಿಂದ ಬೇರ್ಪಟ್ಟ ಅನಿಲಗಳು ವೈವಿಧ್ಯಮಯ ಗಾತ್ರ ಮತ್ತು ಆಕಾರವುಳ್ಳ ರಂಧ್ರಗಳನ್ನು (ಬಾಹ್ಯಸ್ಥಶಿಲೆ) ಜ್ವಾಲಾಮುಖಿಜಗಳಲ್ಲಿ ಸೃಷ್ಟಿಸುತ್ತವೆ. ಕೆಲವೊಮ್ಮೆ ಈ ರಂಧ್ರಗಳು ಕೊಳವೆಯೋಪಾದಿಯಲ್ಲಿ ಇರಬಹುದು. ಅಸಂಖ್ಯ ರೂಪರಹಿತ ಅನಿಲ ರಂಧ್ರಗಳುಳ್ಳ ಶಿಲೆಗಳನ್ನು ಕಿಟ್ಟ ಅಥವಾ ಸ್ಕೊರಿಯ ಎನ್ನುತ್ತಾರೆ. ನೊರೆಯಂತೆ ಕಾಣುವ ಇಂತಹ ಶಿಲೆಗಳನ್ನು ಫ್ಯೂಮಿಸ್ ಎಂದು ಹೆಸರಿಸಲಾಗಿದೆ. ಅಮಿಗ್ಜಲಾಯಿಡ್ ರಚನೆ: ಮೇಲೆ ವಿವರಿಸಿದ ಜ್ವಾಲಾಮುಖಿಜಗಳಲ್ಲಿನ ರಂಧ್ರಕಗಳಲ್ಲಿ ಕ್ರಮೇಣ ಆನುಷಂಗಿಕ ಖನಿಜಗಳು (ದ್ವಿತೀಯಕ) ರೂಪುಗೊಳ್ಳಬಹುದು. ಇಂತಹ ಆನುಷಂಗಿಕ ಖನಿಜಗಳನ್ನು ಅಮ್ಡಿಗೇಲ್‍ಗಳೆಂದೂ ರಂಧ್ರಕಗಳನ್ನು ಅಮಿಗ್ಜಲಾಯಿಡ್‍ಗಳೆಂದೂ ಹಾಗೂ ರಚನೆಯನ್ನು ಅಮಿಗ್ಡಲಾಯಿಡ್ ರಚನೆ ಎಂದೂ ಕರೆಯುತ್ತಾರೆ. ಈ ಬಗೆಯಲ್ಲಿ ರೂಪುಗೊಂಡ ಆನುಷಂಗಿಕ ಖನಿಜಗಳಲ್ಲಿ ಬಹು ಮುಖ್ಯವಾದವುಗಳು; ಜಿಯೊಲೈಟ್, ಸಿಲಿಕ, ಕ್ಯಾಲ್ಸೈಟ್, ಕ್ಲೋರೈಟ್, ಇತ್ಯಾದಿ. ಕೆಲವೊಮ್ಮೆ ಆನುಷಂಗಿಕ ಖನಿಜಗಳು ನಿಕ್ಷೇಪದ ಪ್ರಮಾಣದಲ್ಲಿ ದೊರೆಯುವ ಸಾಧ್ಯತೆಗಳುಂಟು. ಉದಾ: ಭಾರತದ ಪೂನಾ ಬಳಿ ದಖನ್-ಬಸಾಲ್ಟ್ ಶಿಲೆಯಲ್ಲಿ ಈ ಬಗೆಯ ನಿಕ್ಷೇಪಗಳು ದೊರೆಯುತ್ತವೆ. ಬ್ಲಾಕ್ ಲಾವ: ಲಾವಸ್ತರದ ಹೊರಮೈ ಸ್ವರೂಪದಲ್ಲಿ ನಾನಾ ಗಾತ್ರದ ಮತ್ತು ನಾನಾ ಆಕಾರದ ಶಿಲಾಛಿದ್ರಗಳು ಕಂಡುಬಂದಲ್ಲಿ ಅದನ್ನು ಬ್ಲಾಕ್ ಲಾವ ಎಂದು ಕರೆಯುತ್ತಾರೆ. ರೋಪಿ ಲಾವ: ಲಾವಸ್ತರದ ಹೊರಮೈ ನುಣುಪಾಗಿದ್ದು ಹಗ್ಗದ ಸುರಳಿಗಳಂತೆ ಕಂಡುಬಂದಲ್ಲಿ, ಇಂತಹ ಲಾವಸ್ತರಗಳನ್ನು ರೋಪಿ ಲಾವ ಎಂದು ಹೆಸರಿಸಲಾಗಿದೆ. ಪಿಲ್ಲೊ (ದಿಂಬು) ಲಾವ: ಈ ರಚನೆಯು ಸಮುದ್ರದ ತಳಭಾಗದಲ್ಲಿ ಹರಿಯುವ ಲಾವಸ್ತರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಸಮುದ್ರದ ತಳಭಾಗದಲ್ಲಿ ಲಾವ ತೀಕ್ಷ್ಣವಾಗಿ ಶೈತ್ಯಗೊಳ್ಳುವುದರಿಂದ ಗುಳ್ಳೆ ಆಕಾರದಲ್ಲಿ ಅನಿಲಗಳು ಬಿಡುಗಡೆಯಾಗುತ್ತವೆ ಹಾಗೂ ಮೇಲ್ಪದರದ ನೀರಿನ ಒತ್ತಡಕ್ಕೆ ಅನುಗುಣವಾಗಿ ದಿಂಬಿನ ಆಕಾರದ ರಚನೆಯು ಲಾವಸ್ತರಗಳ ಹೊರಮೈ ಮೇಲೆ ಕಂಡುಬರುತ್ತವೆ. ದಿಂಬುವಿನ ನಡುವೆ ಚೆರ್ಟ್ ಎಂಬ ಸೂಕ್ಷ್ಮ ಕಣಶಿಲೆಗಳಿರುತ್ತವೆ. ಈ ರಚನೆಯು ಅಂತಹ ಲಾವ ಸ್ತರಗಳ ಒಳಭಾಗದಲ್ಲಿ ಕಾಣುವುದಿಲ್ಲ. ಇದನ್ನು ಪಿಲ್ಲೊಲಾವ ಅಥವಾ ದಿಂಬುಲಾವ ರಚನೆ ಎಂದು ಹೇಳುವುದು. ಚಿತ್ರದುರ್ಗದ ಹಿರಿಯೂರು ಬಳಿಯ ಮರಡಿಹಳ್ಳಿ ಎಂಬಲ್ಲಿ ಈ ಬಗೆಯ ರಚನೆಗಳಿವೆ. ಭಾರತೀಯ ಭೂವೈಜ್ಞಾನಿಕ ಸರ್ವೆ ಸಂಸ್ಥೆ ಈ ದಿಬ್ಬವನ್ನು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿ ರಕ್ಷಿಸಿದೆ. ಪ್ರವಾಹ ರಚನೆ: ಶಿಲಾರಸವು ಜ್ವಾಲಾಮುಖಿಯ ಮುಖ್ಯ ಕೊಳವೆಯ ಮೂಲಕ ಹೊರ ಹೊಮ್ಮಿದಾಗ ಭೂಮಿಯ ಹೊರಮೈನ ಇಳಿಜಾರಿಗೆ ಅನುಗುಣವಾಗಿ ಪ್ರವಾಹವಾಗಿ ಹರಿಯುತ್ತದೆ. ಈ ಪ್ರವಾಹದ ಪ್ರಭಾವದಿಂದ ಲಾವ ಶಿಲಾರೂಪ ತಾಳಿದಾಗ ಲಾವದಲ್ಲಿದ್ದ ಶಿಲಾಛಿದ್ರಗಳು, ಪ್ರವಾಹ ಗೆರೆಗಳು ಹಾಗೂ ವರ್ಣವ್ಯತ್ಯಾಸಗಳು ಪ್ರವಾಹದ ದಿಕ್ಕಿನತ್ತ ಓರಣಗೊಂಡು ಪರಸ್ಫರ ಸಮಾಂತರವಾಗಿರುತ್ತವೆ. ಈ ರಚನೆಗೆ ಪ್ರವಾಹರಚನೆ ಎಂದು ಹೆಸರು. ಶಿಲಾಸೀಳು ಮತ್ತು ಪದರ ರಚನೆಗಳು: ಇಂತಹ ಸೀಳು ರಚನೆಗಳು ಸಾಮಾನ್ಯವಾಗಿ ಎಲ್ಲ ಬಗೆಯ ಶಿಲೆಗಳಲ್ಲೂ ಕಾಣಬಹುದು. ಈ ರಚನೆಗಳು, ಅಗ್ನಿಶಿಲೆಗಳು ಆರುವ ಸಮಯದಲ್ಲಿ ಅಥವಾ ಅನಂತರದ ಭೂ ಚಟುವಟಿಕೆಗಳಿಗೆ ಒಳಗಾದಾಗ ರೂಪುಗೊಳ್ಳುತ್ತವೆ. ಸೀಳು ರಚನೆಗಳು ಅನೇಕ ವಿಧವಾದ ರೂಪಗಳಲ್ಲಿ ಕಂಡುಬರುತ್ತವೆ. ಬಾಹ್ಯಸ್ಥ ಶಿಲೆಗಳಲ್ಲಿ ಬಹು ಮುಖ್ಯವಾದುದು ಸ್ತಂಭಾಕೃತಿಯ ಸೀಳುಗಳು. ಬಸಾಲ್ಟ್ ಶಿಲಾ ಪ್ರವಾಹವು ತಣ್ಣಗಾಗುವಾಗ ಚಿತ್ರದಲ್ಲಿ ತೋರಿಸಿರುವಂತೆ ಸಮಾಂತರದಲ್ಲಿ ಹರಡಿರುವ ಸೆಳೆತದ ಕೇಂದ್ರಬಿಂದುಗಳು ಉದ್ಭವಿಸುತ್ತವೆ. ಈ ಬಿಂದುಗಳ ನಡುವಿನ ಅಂತರದಲ್ಲಿ ಶಿಲೆಯು ವಿರುದ್ಧ ದಿಕ್ಕಿನಲ್ಲಿ ಕುಗ್ಗುವುದರಿಂದ ಆ ಸ್ಥಳದಲ್ಲಿ ಸೀಳುಗಳು ಉದ್ಭವಿಸಿ ಸ್ತಂಭಾಕೃತಿಯನ್ನು ಪಡೆಯುತ್ತವೆ. ಈ ಸೀಳುಗಳು ಪ್ರವಾಹಕ್ಕೆ ಲಂಬವಾಗಿರುತ್ತವೆ. ಇಂತಹ ಮನಮೋಹಕ ರಚನೆಗಳನ್ನು ಕರ್ನಾಟಕದ ಮಲ್ಪೆ ಬಂದರಿಗೆ ಸಮೀಪವಿರುವ ಸೈಂಟ್‍ಮೇರೀಸ್ ಐಲೆಂಡ್‍ನಲ್ಲಿ ವಿಳಾಲವಾಗಿ ಕಾಣಬಹುದು. ಇವುಗಳನ್ನು ಮೊದಲು ವರದಿ ಮಾಡಿದವರು ಬೆಂಗಳೂರು ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಿ. ನಾಗಣ್ಣ. ಶಿಲಾವಿನ್ಯಾಸ: ಶಿಲೆಗಳ ವಿನ್ಯಾಸವನ್ನು (ಸೂಕ್ಷ್ಮ ರಚನೆಯನ್ನು) ಅವುಗಳ ಖನಿಜಗಳ ಸ್ಫಟಿಕೆ, ಗಾತ್ರ, ಆಕಾರ ಮತ್ತು ಅವುಗಳ ಪರಸ್ಫರ ಸಂಬಂಧಗಳಿಂದ ವಿವರಿಸಬಹುದು. ಶಿಲೆ ಉಂಟಾದ ಬಗೆಯನ್ನು, ಆಗ ಇದ್ದ ಸನ್ನಿವೇಶದ ಬಗ್ಗೆ ವಿನ್ಯಾಸದ ಅಧ್ಯಯನ ತಿಳಿಸಿಕೊಡುತ್ತದೆ. ಶಿಲೆಯಲ್ಲಿನ ಸ್ಫಟಿಕಾಕಾರದ ಖನಿಜಗಳು ಮತ್ತು ಅಸ್ಫಟಿಕ ವಸ್ತುಗಳ ನಡುವಿನ ಪರಿಮಾಣವೇ ಸ್ಫಟಿಕತೆ. ಮೂರು ಬಗೆಯ ಸ್ಫಟಿಕತೆಯನ್ನು ಗುರುತಿಸಲಾಗಿದೆ. ಶಿಲೆಯ ಎಲ್ಲ ಕಣಗಳು ಸ್ಫಟಿಕಗಳಾಗಿ ರೂಪುಗೊಂಡಿದ್ದರೆ ಅಂತಹವುಗಳನ್ನು ಪೂರ್ಣ ಸ್ಫಟಿಕತೆ, ಶಿಲೆಯಲ್ಲಿ ಕೆಲವು ಖನಿಜ ಸ್ಫಟಿಕಾಕಾರವನ್ನು ತಳೆದಿದ್ದು ಉಳಿದವು ಅಸ್ಫಟಿಕಾಕಾರವನ್ನು ಹೊಂದಿದ್ದರೆ ಅರೆ ಸ್ಫಟಿಕತೆ ಮತ್ತು ಶಿಲೆಯಲ್ಲಿ ಯಾವ ಸ್ಫಟಿಕಾಕಾರದ ಕಣಗಳು ಕಂಡು ಬರದಿದ್ದಲ್ಲಿ ಅಸ್ಫಟಿಕತೆ ಎಂದು ಹೇಳಲಾಗುವುದು. ಸಾಮಾನ್ಯವಾಗಿ ಪೂರ್ಣ ಸ್ಫಟಿಕತೆಯನ್ನು ಅಂತಸ್ಥ ಶಿಲೆಗಳಲ್ಲಿಯೂ, ಅರೆ ಸ್ಫಟಿಕತೆಯನ್ನು ಮಧ್ಯಸ್ಥ ಶಿಲೆಗಳಲ್ಲಿಯೂ ಮತ್ತು ಅಸ್ಫಟಿಕತೆಯನ್ನು ಬಾಹ್ಯಸ್ಥ ಶಿಲೆಗಳಲ್ಲಿಯೂ ಕಾಣಬಹುದು. ಪೂರ್ಣ ಅಸ್ಫಟಿಕತೆಯುಳ್ಳ ಶಿಲೆಯನ್ನು ನೈಜಗಾಜುಶಿಲೆ ಎಂದು ಕರೆಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಇಂತಹ