ಪುಟ:Mysore-University-Encyclopaedia-Vol-1-Part-1.pdf/೧೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇದನ್ನು ಪೆರಿಡೊಟೈಟ್, ಆಲಿವಿನ್ ಗ್ಯಾಬ್ರೊ, ಗ್ಯಾಬ್ರೊ ಮುಂತಾದ ಪ್ರತ್ಯಾಮ್ಲೀಯ ಶಿಲೆಗಳಲ್ಲಿ ಗುರುತಿಸಬಹುದು. ಈ ಶಿಲೆಗಳಲ್ಲಿ ಆಲಿವಿನ್ ಕಣದ ಸುತ್ತ ಪೈರಾಕ್ಸಿನ್‍ನ ಪ್ರತಿಕ್ರಿಯಾ ವಲಯವನ್ನು ಕಾಣಬಹುದು. ಈ ಪ್ರತಿಕ್ರಿಯಾ ವಲಯವು ಜನನ ಮೂಲ ಕ್ರಿಯೆಯಿಂದ ಉಂಟಾಗಿದ್ದರೆ ಅದನ್ನು ಕರೋನ-ವಲಯ ಎಂತಲೂ, ಕೆಲವೊಮ್ಮೆ ಈ ಪ್ರತಿಕ್ರಿಯಾ ವಲಯವು ಶಿಲೆ ಘನೀಕರಿಸಿದ ಅನಂತರ ದ್ವಿತೀಯ ಕ್ರಿಯೆಯಿಂದ ಜನಿಸಿದ್ದರೆ ಅದನ್ನು ಕೆಲಿಫಿಟಿಕ್-ವಲಯ ಎಂತಲೂ ಕರೆಯುತ್ತಾರೆ. ಇವೆರಡನ್ನು ಬೇರ್ಪಡಿಸಿ ಗುರುತಿಸುವುದು ಅಷ್ಟು ಸುಲಭವಲ್ಲ. ಮರ್ಮಿಕಿಟಿಕ್ ರಚನೆ: ಇದೊಂದು ವಿಶೇಷ ರೀತಿಯ ಪ್ರತಿಕ್ರಿಯಾ ರಚನೆ. ಇದನ್ನು ಸಿಡಾರ್-ಹೋಮ್ ಎಂಬಾತ ಮೊದಲು ಗುರುತಿಸಿ ವಿವರಿಸಿದರು. ಕ್ವಾಟ್ರ್ಜ್ ಮತ್ತು ಪ್ಲೇಜಿಯೊಕ್ಲೇಸ್ ನಡುವಣ ಹೆಣಿಗೆ ವಿನ್ಯಾಸವನ್ನು ಮರ್ಮಿಕಿಟಿಕ್ ವಿನ್ಯಾಸ ಎನ್ನುತ್ತಾರೆ. ಪ್ಲೇಜಿಯೊಕ್ಲೇಸ್‍ನ ಹರಳುಗಳಲ್ಲಿ ಕ್ವಾಟ್ರ್ಜ್‍ನ ಸಣ್ಣ ಸಣ್ಣ ಮಣಿಗಳು, ಕಣಗಳು ಅಥವಾ ಹುಳುವಿನಾಕಾರದ ಗೆರೆಗಳು ಅಡಕವಾಗಿರುತ್ತವೆ. ಸಾಮಾನ್ಯವಾಗಿ ಆರ್ಥೊಕ್ಲೇಸ್- ಫೆಲ್ಡ್‍ಸ್ಪಾರ್‍ಗಳ ಸಮೀಪವಿರುವ ಪ್ಲೇಜಿಯೊಕ್ಲೇಸ್‍ಗಳ ನಡುವೆ ನಡೆಯುವ ಪಲ್ಲಟ ಕ್ರಿಯೆಯೇ ಈ ರಚನೆಗೆ ಮೂಲವೆಂದು ಭಾವಿಸಲಾಗಿದೆ. ಅನ್ಯಶಿಲೀಯ ರಚನೆಗಳು: ಅಗ್ನಿಶಿಲೆಗಳಲ್ಲಿ ಅನೇಕ ವೇಳೆ ಅನ್ಯಶಿಲೆಗಳ ಛಿದ್ರಗಳು ಹುದುಗಿರುವುದು ಕಾಣಬರುತ್ತದೆ. ಇವುಗಳಿಂದಾದ ವಿನ್ಯಾಸವನ್ನು ಅನ್ಯಶಿಲೀಯ ವಿನ್ಯಾಸ ಎನ್ನುತ್ತಾರೆ. ಅನ್ಯಶಿಲೆಗಳು ವಿವಿಧ ಗಾತ್ರ ಮತ್ತು ಆಕಾರದಲ್ಲಿ ದೊರೆಯುತ್ತವೆ. ಅನ್ಯಶಿಲೆಗೂ ಮತ್ತು ಅವು ಹುದುಗಿರುವ ಶಿಲೆಗೂ ಬಣ್ಣದಲ್ಲಿ ತೀವ್ರ ವ್ಯತ್ಯಾಸಗಳಿದ್ದರೆ ಅನ್ಯಶಿಲಾ ಛಿದ್ರಗಳನ್ನು ಸುಲಭವಾಗಿ ಗುರುತಿಸಬಹುದು. ಒಮ್ಮೊಮ್ಮೆ ಇವುಗಳಿಗೂ ಇವು ಹುದುಗಿರುವ ಶಿಲೆಗೂ ನಿಕಟವಾದ ಜನ್ಯ ಸಂಬಂಧ ಇರುವುದುಂಟು. ಇವನ್ನು ಸ್ವಜಾತಿ ಅನ್ಯಶಿಲೆಗಳು ಎನ್ನುತ್ತಾರೆ. ಇವುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಿರುವುದಿಲ್ಲ. ಕೆಲವೊಮ್ಮೆ ನಾಡಶಿಲಾ ಛಿದ್ರಗಳು ಅನ್ಯಶಿಲೆಗಳಾಗಿ ಕಾಣಿಸಿಕೊಳ್ಳಬಹುದು, ಇವನ್ನು ಆಕಸ್ಮಿಕ ಅನ್ಯಶಿಲೆಗಳೆಂದು ಕರೆಯುವರು. ಈ ಆಕಸ್ಮಿಕ ಅನ್ಯಶಿಲೆಗಳು ಶಿಲಾಪಾಕದಲ್ಲಿ ಕರಗಿ, ಒಂದು ರೀತಿಯ ಸಂಕರ ಶಿಲೆಗಳು ಅಥವಾ ಮಿಶ್ರಿತ ಶಿಲೆಗಳು ಉಂಟಾಗುತ್ತವೆ. ಒಮ್ಮೊಮ್ಮೆ ಶಿಲಾದ್ರವಕ್ಕೂ ಮತ್ತು ಅನ್ಯಶಿಲೆಗಳ ನಡುವೆ ಪ್ರತಿಕ್ರಿಯೆ ಉಂಟಾಗಿ ಪ್ರತಿಕ್ರಿಯಾ ವಲಯಗಳು ಅನ್ಯಶಿಲಾ ಛಿದ್ರಗಳನ್ನು ಆವರಿಸಲೂಬಹುದು. ಗೋಳ ವಿನ್ಯಾಸ: ಇದನ್ನು ಗ್ರಾನೈಟ್ ವರ್ಗದ ಅಂತಸ್ಥ ಶಿಲೆಗಳಲ್ಲಿ ಕಾಣಬಹುದು. ಶಿಲೆಯಲ್ಲಿ ಏಕ ಕೇಂದ್ರಕ ಮಂಡಲಗಳಿಂದಾದ ಗೋಳಾಕಾರದ ರಚನೆಗಳನ್ನು ಗುರುತಿಸ ಬಹುದು. ಈ ರಚನೆಯಲ್ಲಿ ಒಂದು ಮಂಡಲದಿಂದ ಮತ್ತೊಂದು ಮಂಡಲಕ್ಕೆ ಖನಿಜ ಸಂಯೋಜನೆ ಮತ್ತು ವಿನ್ಯಾಸಗಳಲ್ಲಿ ವಿಶಿಷ್ಟ ವ್ಯತ್ಯಾಸಗಳನ್ನು ಗುರುತಿಸಬಹುದು. ಉದಾ: ಪ್ರತಿ ಗೋಳದ ಕೇಂದ್ರಭಾಗದಲ್ಲಿ ಡಯೋರೈಟ್ ಶಿಲೆ ಇದ್ದು ಅದರ ಸುತ್ತಾ ಫೆಲ್ಡ್‍ಸ್ಪಾರ್ ಮತ್ತು ಪೈರಿಬೋಲ್ ಖನಿಜಗಳನ್ನೊಳಗೊಂಡ ವಲಯಗಳು ಒಂದಾದ ಮೇಲೊಂದು ಆವರಿಸಿರುತ್ತವೆ. ಕೆಲವೊಮ್ಮೆ ಆಕಸ್ಮಿಕ ಅನ್ಯಶಿಲಾ ಛಿದ್ರಗಳ ಸುತ್ತಲೂ ಗೋಳದ ರಚನೆ ಉಂಟಾಗಿರುವುದನ್ನು ಕಾಣಬಹುದು. ಸ್ಫೆರುಲಿಟಿಕ್ ವಿನ್ಯಾಸ: ಈ ವಿನ್ಯಾಸವನ್ನು ಸಾಮಾನ್ಯವಾಗಿ ಬಾಹ್ಯಸ್ಥಶಿಲೆ ಮತ್ತು ಮಧ್ಯಸ್ಥಶಿಲೆಗಳಲ್ಲಿ ಕಾಣಬಹುದು. ಶಿಲೆಯಲ್ಲಿನ ಮಾತೃಕೆಯಲ್ಲಿ ಅಲ್ಲಲ್ಲೆ ಕೇಂದ್ರಬಿಂದುವಿನಿಂದ ಸುತ್ತಲೂ ಕಿರಣಗಳಂತೆ ಸೂಜಿಯಾಕಾರದಲ್ಲಿ ಬೆಳೆದಿರುವ ಖನಿಜ ಕಣಗಳು ಸಮೂಹ ರಚನೆಯನ್ನು ಸ್ಫೆರುಲಿಟಿಕ್ ವಿನ್ಯಾಸ ಎನ್ನುತ್ತಾರೆ. ಸ್ಫೆರುಲೈಟ್‍ಗಳು ಗಾತ್ರದಲ್ಲಿ ಏಕರೀತಿಯಾಗಿರು ವುದಿಲ್ಲ. ಕೆಲವು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡುವಷ್ಟು ಸೂಕ್ಷ್ಮವಾಗಿದ್ದರೆ ಮತ್ತೆ ಕೆಲವು ಸು. 3 ಮೀ ವ್ಯಾಸವುಳ್ಳ ಬೃಹದಾಕಾರವನ್ನು ತಳೆದಿರುತ್ತದೆ. ವಿಗಾಜತ್ವದಿಂದಲೂ ವೇಗವಾಗಿ ಸಂಭವಿಸುವ ಘನೀಕರಣ ಕ್ರಿಯೆಯಿಂದಲೂ ಅಥವಾ ಘನೀಕರಣದ ವೇಳೆಯಲ್ಲಿ ನೀರಾವಿಯ ಕೇಂದ್ರೀಕರಣದ ಪರಿಣಾಮದಿಂದಲೂ ಈ ರಚನೆಯುಂಟಾಗಲು ಸಾಧ್ಯ. ಬಿರಿತ ವಿನ್ಯಾಸ: ಕೆಲವು ಅಗ್ನಿಶಿಲೆಗಳಲ್ಲಿ ಬಿರಿತದಿಂದ ಉಂಟಾಗುವ ವಿನ್ಯಾಸಗಳನ್ನು ಕಾಣಬಹುದು. ನೈಜಗಾಜು ಶಿಲೆಯಲ್ಲಿ ಬಿರಿತದಿಂದ ವಿವಿಧ ಆಕಾರದ ವಿನ್ಯಾಸಗಳು ಉಂಟಾಗುತ್ತವೆ. ಸೂಕ್ಷ್ಮ ಛೇದದಲ್ಲಿ ಇವು ವೃತ್ತಾಕಾರದ ಏಕಕೇಂದ್ರಕ ಬಿರಿತಗಳಾಗಿರುತ್ತದೆ. ಇವು ಮುತ್ತುಗಳನ್ನು ಹೋಲುವುದರಿಂದ ಮುತ್ತು-ಬಿರಿತ ವಿನ್ಯಾಸ ಎನ್ನುತ್ತಾರೆ. ಕೆಲವೊಮ್ಮೆ ಬಿರಿತಗಳು ಶಿಲೆಯಲ್ಲಿನ ಕೆಲವು ಖನಿಜ ಘಟಕದಲ್ಲೂ ಕಾಣಬಹುದು. ಉದಾ: ಪ್ರತ್ಯಾಮ್ಲೀಯ ಶಿಲೆಯಲ್ಲಿನ ಆಲಿವೀನ್ ಖನಿಜದಲ್ಲಿ ಸರ್ಪೆಂಟಿನೀಕರಣದಿಂದಾಗಿ ಬಿರಿತಗಳು. ಅಗ್ನಿಶಿಲೆಗಳ ವರ್ಗೀಕರಣ: ಅಗ್ನಿಶಿಲೆಗಳ ವರ್ಗೀಕರಣ ಅತ್ಯಂತ ಜಟಿಲವಾದದ್ದು. ಸರ್ವಸಮ್ಮತವಾದ ವರ್ಗೀಕರಣ ಇಲ್ಲವೆಂದೇ ಹೇಳಬಹುದು. ಬಹುಶಃ ಈ ವರ್ಗದ ಶಿಲೆಗಳಲ್ಲಿ ರಾಸಾಯನಿಕ ಸಂಯೋಜನೆ ಮತ್ತು ಖನಿಜಗಳ ದೃಷ್ಟಿಯಿಂದ ವ್ಯಾಪಕ ವೈಪರೀತ್ಯವಿರುವುದೇ ಕಾರಣ. ಶಿಲಾವಿಜ್ಞಾನಿಗಳ ವರ್ಗೀಕರಣ ಉದ್ದೇಶವೂ ಬೇಕೆಬೇಕು. ಅವುಗಳ ಜನನದ ಆಧಾರದ ಮೇಲೆ ಮಾಡುವ ವರ್ಗೀಕರಣವೇ ಬೇರೆ. ಅವುಗಳನ್ನು ಪ್ರಯೋಗಾಲಯದಲ್ಲಿ ರಾಸಾಯನಿಕ ವಿಶ್ಲೇಷಣೆ ಮಾಡಿ ವರ್ಗೀಕರಿಸುವುದೇ ಬೇರೆ. ಅದಕ್ಕೆ ಒಂದೊಂದು ಉಪಯೋಗವೂ ಉಂಟು. ಅವುಗಳಲ್ಲಿ ಪ್ರಮುಖ ವಿಧಾನಗಳೆಂದರೆ: (1) ರಾಸಾಯನಿಕ ಸಂಯೋಜನಾ ವಿಧಾನ, (2) ಶಿಲೆಯ ವರ್ಣಸೂಸಿಯನ್ನು ಆಧರಿಸಿದ ವಿಧಾನ, (3) ಖನಿಜ ಸಂಯೋಜನಾ ವಿಧಾನ, (4) ಶಿಲೆ ದೊರೆಯುವ ನೈಸರ್ಗಿಕ ಸನ್ನಿವೇಶ ಮತ್ತು ವಿನ್ಯಾಸಗಳನ್ನು ಆಧರಿಸಿದ ವಿಧಾನ, (5) ತಃಖ್ತೆವಾರು ವಿಧಾನ ಹಾಗೂ (6) ರೇಖಾಚಿತ್ರವಾರು ವಿಧಾನ. ರಾಸಾಯನಿಕ ವರ್ಗೀಕರಣ ವಿಧಾನದಲ್ಲಿ ಶಿಲೆಯ ರಾಸಾಯನಿಕ ಸಂಯೋಜನೆಯೇ ಪ್ರಧಾನ ಅಂಶ. ಇಲ್ಲಿ ಇತರ ಪ್ರಮುಖ ಲಕ್ಷಣಗಳನ್ನು ಪರಿಗಣಿಸಲಾಗುವುದಿಲ್ಲ. ಇದೇ ಈ ವಿಧಾನದ ದೊಡ್ಡ ನ್ಯೂನತೆ. ಶಿಲೆಯ ರಾಸಾಯನಿಕ ಸಂಯೋಜನೆಯನ್ನು ಸಾಮಾನ್ಯವಾಗಿ 14 ಆಕ್ಸೈಡ್ ರೂಪದಲ್ಲಿ ಪ್ರಸ್ತುತಪಡಿಸುತ್ತಾರೆ. ಈ ಅಂಕಿ-ಅಂಶಗಳನ್ನು ಕೆಲವು ಸೈದ್ಧಾಂತಿಕ ಆಧಾರದ ಮೇಲೆ ಮರು ಲೆಕ್ಕಾಚಾರ ಮಾಡಿ ಕೆಲವು ಉಪಯುಕ್ತ ಮಾದರಿಗಳನ್ನು ಸೃಷ್ಟಿಸಿ ಶಿಲೆಗಳನ್ನು ವರ್ಗೀಕರಿಸುತ್ತಾರೆ. ಇವುಗಳಲ್ಲಿ ಬಹು ಮುಖ್ಯವಾದವು: (1) ಅIPW ವಿಧಾನ; (2) ಆಸ್ಸಾನ್ (ಔssಚಿಟಿ) ವಿಧಾನ; (3) ನಿಗ್ಲಿ ವಿಧಾನ; (4) ಷ್ಯಾಂಡ್ ವಿಧಾನ. ಅIPW ವಿಧಾನದಲ್ಲಿ ವಿಜ್ಞಾನಿಗಳು ರೂಪಿಸಿರುವ ನಿಯಮಾನುಸಾರ ಪ್ರಮಾಣಿತ ಖನಿಜಗಳನ್ನು ಶಿಲೆಯ ರಾಸಾಯನಿಕ ಸಂಯೋಜನೆಯಿಂದ ಗಣನೆ ಮಾಡಲಾಗಿದೆ. ಈ ಪ್ರಮಾಣಿತ ಖನಿಜಗಳನ್ನು ಸ್ಯಾಲಿಕ್ ಖನಿಜಗಳು (ಕ್ವಾಟ್ರ್ಜ್, ಆರ್ಥೊಕ್ಲೇಸ್, ಆಲ್‍ಬೈಟ್, ಅನಾರ್ಥೈಟ್, ಲೂಸೈಟ್, ಕೊರಂಡಮ್, ಜ಼ಿರ್ಕಾನ್) ಎಂತಲೂ; ಹಾಗೂ ಫೆಮಿಕ್ ಖನಿಜಗಳು (ಡಯಾಪ್ಸೈಡ್, ಹೈಪರ್‍ಸ್ತೀನ್, ಆಲಿವೀನ್, ಆಕ್ಮೈಟ್, ಮ್ಯಾಗ್ನಟೈಟ್, ಇಲ್ಮೆನೈಟ್, ಹಿಮಟೈಟ್, ಅಪಟೈಟ್) ಎಂತಲೂ ಎರಡು ಗುಂಪುಗಳನ್ನಾಗಿ ಮಾಡಿ, ಅವುಗಳ ನಿಷ್ಪತ್ತಿಗೆ ಅನುಸಾರವಾಗಿ ಶಿಲೆಗಳನ್ನು ವರ್ಗೀಕರಿಸಲಾಗುವುದು. ಸ್ಯಾಲಿಕ್ / ಫೆಮಿಕ್ > 7 ಇದ್ದರೆ ಪರ್‍ಸ್ಯಾಲಿಕ್ ಶಿಲೆಗಳೆಂತಲೂ 7 - 1.667, 1.667 - 0.6, 0.6 - 0.143ಕ್ಕಿಂತ ಕಡಿಮೆಯಿದ್ದರೆ ಕ್ರಮವಾಗಿ ಡೊಸ್ಯಾಲಿಕ್, ಸ್ಯಾಲ್‍ಫೆಮಿಕ್, ಡೋಫೆಮಿಕ್, ಪರ್‍ಫೆಮಿಕ್ ಶಿಲೆಗಳೆಂದು ವರ್ಗೀಕರಿಸಬಹುದು. ನಿಗ್ಲಿ ವಿಧಾನದಲ್ಲಿ ಶಿಲೆಯ ರಾಸಾಯನಿಕ ಸಂಯೋಜನೆಯ ಸಹಾಯದಿಂದ Si, ಂಟ, ಈm, e, ಂಟಞ ಎಂಬ ನಿಗ್ಲಿವರ್ಟಿಗಳಾಗಿ ಒಂದು ನಿರ್ದಿಷ್ಟ ನಿಯಮಾನುಸಾರ ಪರಿವರ್ತಿಸಿ ಇದನ್ನು ಮತ್ತೆ ಕಿ, ಐ ಮತ್ತು ಒ ಎಂಬ ನಿಗ್ಲಿ ಬೇಸಸ್‍ಗಳಾಗಿ ಗುಂಪು ಮಾಡಿ, ಇವುಗಳ ಸಹಾಯದಿಂದ ಶಿಲೆಯ ಮಾತೃಶಿಲಾದ್ರವದ ಮಾದರಿ ಮತ್ತು ಜನನವನ್ನು ಅರಿಯಬಹುದು. ಷ್ಯಾಂಡ್ ವಿಧಾನದಲ್ಲಿ ಶಿಲೆಯ ರಚನೆಯನ್ನು ಪ್ರಧಾನವಾಗಿರಿಸಿಕೊಂಡು ಅನಂತರ Sio2 ಅಂಶವನ್ನು ಪರಿಗಣಿಸಿ, ಅನಂತರ ಂಟ2ಔ3 ಮತ್ತು ಓಚಿ2ಔ + ಇತರ ಕ್ಷಾರೀಯ ಧಾತುಗಳನ್ನು ಉಪಯೋಗಿಸಿ ಶಿಲೆಗಳನ್ನು ವರ್ಗೀಕರಿಸಬಹುದು. ರಚನೆಯನ್ನಾಧರಿಸಿ, ಘಿ (ಸ್ಫಷ್ಟ ರಚನಾ ವರ್ಗ) ಮತ್ತು ಆ (ಅಸ್ಫಷ್ಟ ರಚನಾ ವರ್ಗ) ಎಂದು ವಿಂಗಡಿಸಿ ಮತ್ತೆ ಈ ಎರಡು ವಿಧದಲ್ಲಿ Siಔ2 ಅಂಶದ ಆಧಾರದ ಮೇಲೆ, ಔ (ಅಧಿಪರ್ಯಾಪ್ತ ಶಿಲೆಗಳು = ಔveಡಿ Sಚಿಣuಡಿಚಿಣeಜ ಡಿoಛಿಞs), S (ಪರ್ಯಾಪ್ತ ಶಿಲೆಗಳು), ಗಿ, U, W (ಅಪರ್ಯಾಪ್ತ ಶಿಲೆಗಳು) ಎಂದು ವಿಭಾಗ ಮಾಡಲಾಗುತ್ತದೆ. ಗಿ ಯಲ್ಲಿ ಆಲಿವೀನ್ ಖನಿಜಗಳಿರುತ್ತವೆ, U ಮತ್ತು W ನಲ್ಲಿ ಪರ್ಯಾಪ್ತ ಮತ್ತು ಅಪರ್ಯಾಪ್ತ ಕೃಷ್ಣಖನಿಜಗಳಿರುತ್ತವೆ. ಈ ಔ, S, ಗಿ, U ಮತ್ತು W ಶಿಲೆಗಳನ್ನು ಂಟ2ಔ3 ಮತ್ತು ಓಚಿ2ಔ ಅಂಶಗಳನ್ನು ಆಧರಿಸಿ ಠಿ (ಪರ್ ಅಲ್ಯೂಮಿನಸ್), m (ಮೆಟಾ ಅಲ್ಯುಮಿನಸ್), s (ಸಬ್ ಅಲ್ಯುಮಿನಸ್) ಮತ್ತು ಞ (ಪರ್ ಆಲ್ಕಾಲೈನ್) ಶಿಲೆಗಳಾಗಿ ಪುನರ್ ವಿಂಗಡಿಸಬಹುದು. ಹೀಗೆ ಅಗ್ನಿಶಿಲೆಗಳನ್ನು 40 ಪ್ರಧಾನ ಗುಂಪುಗಳನ್ನಾಗಿ ವಿಂಗಡಿಸಿದ್ದಾರೆ. ಆಸ್ಸಾನ್ ವಿಧಾನದಲ್ಲಿ ಶಿಲೆಯ ರಾಸಾಯನಿಕ ಆಕ್ಸೈಡ್‍ಗಳನ್ನು ಂ = ಏ2ಔ+ಐi2ಔ+ಓಚಿ2ಔ; ಅ = ಂಟ2o3-ಂ; ಈ = [ಅಚಿಔ + ಈeಔ + ಒಟಿಔ + ಒgಔ + ಓiಔ + Sಡಿಔ + ಃಚಿಔ]-ಅ ಎಂಬುದಾಗಿ ಪರಿಗಣಿಸಿ, ಈ ಮೊತ್ತವನ್ನು 30ಕ್ಕೆ ಪರಿವರ್ತನೆ ಮಾಡಿ, ಂಅಈ ಸಮಬಾಹು ತ್ರಿಭುಜದಲ್ಲಿ ಪ್ರತಿ ಶಿಲೆಯ ರಾಸಾಯನಿಕ ಸಂಯೋಜನೆಯನ್ನು ಬಿಂದುವಾಗಿ ಗುರುತಿಸಿ ಅದರ ಸ್ಥಾನದ ಆಧಾರದ ಮೇಲೆ ಶಿಲೆಯ ಜನನವನ್ನು ಊಹಿಸಬಹುದು. ವರ್ಣಸೂಚಿಯ ಆಧಾರದ ಮೇಲೆ ಶಿಲೆಗಳನ್ನು 3 ಗುಂಪುಗಳಾಗಿ ವರ್ಗೀಕರಿಸ ಬಹುದು: ಲ್ಯೂಕೋಕ್ರ್ಯಾಟಿಕ್ (ಶ್ವೇತ ಖನಿಜಗಳೇ ಪ್ರಧಾನವಾಗಿರುತ್ತದೆ), ಮೀಸೊಕ್ರ್ಯಾಟಿಕ್ (ಶ್ವೇತ ಮತ್ತು ಕೃಷ್ಣ ಖನಿಜಗಳ ಸಮ ಪ್ರಮಾಣ) ಮತ್ತು ಮೆಲನೊಕ್ರ್ಯಾಟಿಕ್ (ಕೃಷ್ಣ ಖನಿಜಗಳೇ ಪ್ರಧಾನ). ಶಿಲೆಯಲ್ಲಿನ ಖನಿಜಗಳು ಸಂಪೂರ್ಣ ಕೃಷ್ಣ ಖನಿಜಗಳಾಗಿದ್ದರೆ ಅದರ ವರ್ಣಸೂಚಿಯನ್ನು 100 ಎಂತಲೂ ಬದಲಿಗೆ ಅವುಗಳು ಸಂಪೂರ್ಣ ಶ್ವೇತ ಖನಿಜಗಳಾಗಿದ್ದರೆ ಅದರ ವರ್ಣಸೂಚಿಯನ್ನು ಎಂತಲೂ ಪರಿಗಣಿಸಬಹುದು. ಹೀಗಾಗಿ, ಶಿಲೆಯ ಬಣ್ಣವನ್ನು, ಶ್ವೇತ ಖನಿಜಗಳ ಮತ್ತು ಕೃಷ್ಣ ಖನಿಜಗಳ ನಿಷ್ಪತ್ತಿಯ ಆಧರಿಸಿ ನಾಲ್ಕು ವರ್ಗಗಳನ್ನಾಗಿ ಗುರುತಿಸಲಾಗಿದೆ: ಲ್ಯೂಕ್ರೊಕ್ರ್ಯಾಟಿಕ್ (ವರ್ಣಸೂಚಿ 0-30), ಮೀಸೊಕ್ಸ್ಯಾಟಿಕ್ (ವರ್ಣಸೂಚಿ 30-60), ಮೆಲನೊಕ್ಸ್ಯಾಟಿಕ್ (ವರ್ಣಸೂಚಿ 50-90) ಮತ್ತು ಹೈಪರ್‍ಮೆಲಾನಿಕ್ (ವರ್ಣಸೂಚಿ (90-100).