ಪುಟ:Mysore-University-Encyclopaedia-Vol-1-Part-1.pdf/೧೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


-188-

ಅಂಜಂತದೊಡ್ಡ ಪಠ್ಯ 

ತನ್ನ ಬೆಂಬಲಿಗರು ರಾಮರಾಯನ ಬಲವನ್ನು ಮುರಿದಿದ್ದನ್ನು ತಿಳಿದು 1530 ರ ಪೂರ್ವಾರ್ಧ ದಲ್ಲಿ ವಿಜಯನಗರಕ್ಕೆ ಬಂದ ರಾಮರಾಯನೊಡನೆ ಒಪ್ಪಂದ ಮಾಡಿಕೊಂಡು, ಕೃಷ್ಣದೇವರಾಯನ ಮಗನ ಪರವಾಗಿತಾವಿಬ್ಬರೂ ಆಳ್ವಿಕೆಯಲ್ಲಿ ಸಹಾಭಾಗಿಗಳಾಗಿರುವಂತೆ ಒಪ್ಪಿದ. ಇದಾದ ಅನಂತ ಮೂರನೆಯ ಸಲ ಇವನ ಪಟ್ಟಾಭಿಷೇಕ ವಿಜಯನಗರದಲ್ಲಿ ನಡೆಯಿತು. ಈ ಏರ್ಪಾಡು 1535ವರೆಗೆ ಸಮರ್ಪಕವಾಗಿ ಮುಂದುವರಿಯಿತು. ಆಹೊತ್ತಿಗೆ ಕೃಷ್ಣದೇವರಾಯನ ಕಿರಿಯ ಮಗ ಮೃತನಾದ್ದರಿಂದ ರಾಮರಾಯನ ಬಲಕುಗ್ಗಿತ್ತು. ಇದರಿಂದ ಅಚ್ಯುತ್ತರಾಯನ ಧೋರಣೆ ಬದಲಾಯಿತು, ಅಂತರ್ಯದ್ಧ ಪ್ರಾರಂಭವಾಯಿತು. ಕೊನೆಗೆ ರಾಮರಾಯ ಅಚ್ಯುತರಾಯನನ್ನೇ ಸೆರೆಹಿಡಿದು ತಾನೇ ರಾಜನೆಂದು ಘೋಷಿಸಿಕೊಂಡ ಆದರೆ ಇದಕ್ಕೆ ಶ್ರೀಮಂತರ ವಿರೋಧ ವಿದ್ದುದರಿಂದ ಅಚ್ಯುತರಾಯನ ತಮ್ಮನ ಮಗನಾದ ಸದಾಶಿವರಾಯನ ಹೆಸರಿನಲ್ಲಿ ಆಡಳಿತವನ್ನು ನಡೆಸಲಾರಂಭಿಸಿದ, ಅದೇ ವೇಳೆಗೆ ರಾಜ್ಯದ ದಕ್ಷಿಣ ಭಾಗದಲ್ಲಿ ಉದ್ಬವವಾದ ದಂಗೆಗಳನ್ನು ಅಡಗಿಸಲು ರಾಮರಾಯ ರಾಜಧಾನಿಯನ್ನು ಬಿಡಬೇಕಾಯಿತು. ಆಸಂದರ್ಭದಲ್ಲಿ ಅಚ್ಯುತರಾಯ ಬಿಡುಗಡೆ ಹೊಂದಿದ ಕೂಡಲೇ ರಾಮರಾಯ ಹಿಂದಿರುಗಿ ಅಚ್ಯುತರಾಯನೊಡನೆ ಒಪ್ಪಂದ ಮಾಡಿಕೊಂಡ ಈ ಒಪ್ಪಂದದ ಪ್ರಕಾರ ಅಚ್ಯುತರಾಯನ ರಾಜತ್ವ ಭದ್ರವಾಯಿತು ಈ ಅಂತಃಕಲಹಗಳ ಜೊತೆಗೆ ಕೃಷ್ಣದೇವರಾಯನ ಮರಣದ ತರುಣದಲ್ಲೇ 1530-31ರಲ್ಲಿ ಬಿಜಾಪುರದ ಸುಲ್ತಾನನಾಗಿದ್ದ ಅದಿಲ್ ಷಾ ವಿಜಯ ನಗರದ ಮೇಲೆ ದಂಡೆತ್ತಿ ಬಂದು ರಾಯಚೂರು ಮತ್ತು ಮುದ್ಗಲ್ ಪ್ರದೇಶವನ್ನು ಆಕ್ರಮಿಸಿಕೊಂಡ ಮತ್ತೆ ಎರಡನೇಬಾರಿ ನಾಗಲಾಪುರ ದವರೆಗೆ ದಂತ್ತಿಬಂದು ಅದನ್ನು ಹಾಳುಮಾಡಿದ ಆದರೆ ಅಚ್ಯುತರಾಯ ಅವನ್ನು ಪುನಃ ಸ್ವಾಧೀನ ಪಡಿಸಿಕೊಂಡ 1531-32 ರಲ್ಲಿ ತಿರುವಡಿ (ಈಗಿನ ತಿರುವನಂತಪುರ ಮತ್ತು ತಿನ್ನವೆಲ್ಲಿ ಜಿಲ್ಲೆಯ ಭಾಗಗಳು) ರಾಜನ ಮೇಲೆ ದಂಡೆತ್ತಿ ಹೋದ ಇದರ ಫಲವಾಗಿ ತಿರುವಾಡಿ ರಾಜ ಅಧಿನನಾಗಿ ಕಪ್ಪ ಕೊಡಲು ಒಪ್ಪಿದ. ಾಗ ದಂಗೆ ಎದ್ದಿದ ುಮ್ಮತ್ತೂರು ಪಾಳೆಯಗಾರರನ್ನೂ ಆಡಗಿಸಿದ ಸ್ವಲ್ಪ ಕಾಲಾನಂತರ ತಿರುವಡಿ ರಾಜ ಪಾಂಡ್ಯ ರಾಜ್ಯದ ದೊರೆ ಜಟಾವಮ್ನ್ ತ್ರಿಭುವನ ಚಕ್ರವರ್ತಿ ವಲ್ಲಭ ದೇವನನ್ನು ಸೋಲಿಸಿ ಅವನ್ನು ಪದಚ್ಯುತಗೊಳಿಸಿದ ಅಚ್ಯುತರಾಯ ಪಾಂಡ್ಯ ರಾಜನಿಗೆ ಅವನ ರಾಜ್ಯವನ್ನು ಪುನಃ ಕೊಟ್ಟು ಅವನ ಮಗಳಾದ ವರದಾಂಬಳನ್ನು ವಿವಾಹವಾದ 1531 ರಲ್ಲಿ ಒರಿಸ್ಸ ರಾಜನಾಗಿದ್ದ ಪ್ರತಾಪರುದ್ರ ಹಿಂದೆ ಕೃಷ್ಣದೇವರಾಯನಿಗೆ ಒಪ್ಪಿಸಿದ್ದ ಕೃಷ್ಣಾನದಿಯ ದಕ್ಷಿಣಭಾಗದ ಪ್ರದೇಶಗಳನ್ನು ಸುಲ್ತಾನ ಕುತ್ಬ್ ಷಾನ ಬೆಂಬಲದೊಡನೆ ಆಕ್ರಮಿಸಿದ. ಅಚ್ಯುತರಾಯ ಅವನನ್ನು ಸೋಲಿಸಿ ಒರಿಸ್ಸದವರೆಗೆಹೋಗಿ ಅಲ್ಲಿ ತನ್ನ ವಿಜಯ ಸ್ತಂಭವನ್ನು ನೆಟ್ಟಿ ಶಾಸನದ ಹೇಳಿಕೆಗಳ ಪ್ರಕಾರ ಸಿಂಹಳ ಅಚ್ಯುತರಾಯನ ಅಧಿನ ರಾಜ್ಯವಾಗಿತ್ತು. 1534 ರಲ್ಲಿ ಇಸ್ಮಾಯಿಲ್ ಆದಿಲಾ ಷಾನ ಮರಣಾನಂತರ ಕಾಲದಲ್ಲಿ ಸ್ನೇಹಿತರಾಗಿದ್ದ ಪೋರ್ಚುಗೀಸರು ಇವನ ಕಾಲದಲ್ಲಿ ವಿರೋಧಿಗಳಾದರು ತೀರಪ್ರದೇಶದಲ್ಲಿ ವಸಾಹತುಗಳನ್ನು ಸ್ಥಾಪಿಸಿದರು, ದೇವಸ್ಥಾನಗಳನ್ನು ಕೊಳ್ಳೆ ಹೊಡೆದರು, ಜನರ ಕಗ್ಗೋಲೆ ಮಾಡಿದರು ಇವನು ಅವರೊಡನೆ ಸ್ನೇಹಕ್ಕೆ ಪ್ರಯತ್ನಿಸಿದ 1536-37 ರಲ್ಲಿ ಗುತ್ತಿಗೆ ದಂಗೆಯನ್ನು ಅಡಗಿಸಿದ. ತನ್ನ ಆಳ್ವಿಕೆಯ ಉದ್ದಕ್ಕೂ ಇವನು ರಾಜಕೀಯ ಪ್ರಕ್ಷುಬ್ದತೆಯ ಮಧ್ಯೆ ತೊಳಲಾಡಬೇಕಾಗಿ ಬಂದರೂ ಈ ರಾಜ್ಯದ ಒಟ್ಟು ಕ್ಷೇಮಕ್ಕೆ ಭಂಗಬರದಂತೆ ದೈರ್ಯ ಹಾಗೂ ಉಪಾಯದಿಂದ ಆಡಳಿತ ನಿರ್ವಹಿಸಿದನೆಂದೇ ಹೇಳಬಹುದು ಅಚ್ಯುತರಾಯ ದೇವಸ್ಥಾನಗಳಿಗೆ ಬ್ರಾಹ್ಮಣರಿಗೆ ಆನೇಕ ದಾನವನ್ನು ಮಾಡಿದ್ದಾನೆ ವೈಷ್ಣವಮತಾವಲಂಬಿಯಾಗಿದ್ದ ಈತ ಕಂಚಿಯಲ್ಲಿ ವರದರಾಜ ದೇವಸ್ಥಾನಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟ ಅಲ್ಲಿ ಲಕ್ಷ ಹೋಮವನ್ನು ಮಾಡಿದ ಅನೇಕ ತೆರಿಗೆಗಳಿಗೆ ವಿನಾಯಿತಿ ನೀಡಿದ ವಿಜಯನಗರದ ವಿಠಲ ಸ್ವಾಮಿ ದೇವಸ್ಥಾನದಲ್ಲಿ ಹನ್ನೇರಡು ಶ್ರೀ ವೈಷ್ಣವ ಆಳ್ವರರ ಪ್ರತಿಮೆಗಳನ್ನು ಸ್ಥಾಪಿಸಿದ ಆನಂದ ನಿಧಿ ಎಂಬ ಪುದುವಟ್ಟನ್ನು ಸ್ಥಾಪಿಸಿದ ಕಂಚಿಯಲ್ಲಿ ತುಲಾಭಾರವನ್ನು ಮಾಡಿಕೊಂಡು ಒಂದು ಸಾವಿರ ಗೋವುಗಳನ್ನು ದಾನಮಾಡಿದ ಅಚ್ಯುತರಾಯಾಭ್ಯುದಯಮ್ ಮತ್ತು ಭಾಗವತ ಚಂಫೂಗಳನ್ನು ಬರೆದ ರಾಜನಾಥ ಡಿಂಡಿಮ ವರದಾಂಬಿಕಾಪರಿಣಯದ ಕರ್ತೃ ತಿರುಮಲಾಂಬಾ ಇವನ ಪೋಷಣೆಯಲ್ಲಿದ್ದ ಮುಖ್ಯ ಕವಿಗಳು ಅಚ್ಯುತರಾಯನಿಗೆ ವರದಾಂಬಿಕಾ ಅಲ್ಲದೆ ಇನ್ನಿಬ್ಬರು ಪತ್ನಿಯರೂ ಇದ್ದರೂ ಈತನಿಗೆ ವೆಂಕಟದ್ರಿ ಎಂಬ ಮಗನಿದ್ದು ಅವನಿಗೆ 1530ರಲ್ಲಿ ಯುವರಾಜಪಟ್ಟವೂ ಆಗಿತ್ತು ಅಚ್ಯುತರಾಯ 1542 ರಲ್ಲಿ ಮೃತನಾದ ಅಂಜಂತ ಈಗಿನ ಮಹಾರಾಷ್ಟ್ರದ (ಹಿಂದಿನ ಹೈದರಾಬಾದ್ ಸಂಸ್ಥಾನದ) ಔರಂಗಾಬಾದ್ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ಇದು ಮಲೆಸೀಮೆ ಚಂದರ್, ಶತಮಾಲ, ವಿಂದ್ಯಾದ್ರಿ, ಸಹ್ಯಾದ್ರಿ ಎಂದು ಕರೆಯಲ್ಪಡುವ ಪಶ್ಚಿಮ ಘಟ್ಟಗಳ ಬೆಟ್ಟಗಳು ಸುತ್ತಲೂ ಇವೆ.ಇವುಗಳ ಸರಾಸರಿ ಎತ್ತರ 1,220ಮೀ. ಇವು ಮನಮಾಡದಿಂದ ಬೀರಾರಿನವರೆಗೆ ವಿಸ್ತರಿಸಿವೆ. ಅಲ್ಲಲ್ಲಿ ವ್ಯಾಪಾರಿಗಳ, ಸೈನ್ಯದ ಓಡಾಟ ಸಾಗಣೆಗಳಿಗನು ಕೂಲವಾದ ಕಣಿವೆ ದಾರಿಗಳಿವೆ. ದಕ್ಷಿಣ ಪ್ರಸ್ಥಭೂಮಿಯ ಉತ್ತರಗಡಿಯಾದ ಈ ಶ್ರೇಣಿ ಬೀರಾರಿನಲ್ಲಿ 610ಮೀ. ಎತ್ತರವಾಗಿದೆ. ಮಾರ್ಕಿಂಡ (1,336ಮೀ), ಸಪ್ತಶೃಂಗ (1,420ಮೀ), ಧೊಡಕ್ (1,445ಮೀ), ತುದ್ರೆ(1,380ಮೀ)-ಇವು ಇಲ್ಲಿನ ಮುಖ್ಯ ಶಿಖರಗಳು. ಅಜಂತ ಕಣಿವೆ ಔರಂಗಾಬಾದ್ ಮತ್ತು ಎಲ್ಲೋರಗಳಿಂದ 152 ಕಿ.ಮೀ ದೂರದಲ್ಲಿದೆ. (ಎಸ್ ಡಿ.ಎಂ) ಊರಿಗೆ 3 ½ 5,63ಕಿಮೀ ದೂರದಲ್ಲಿ ಜಗತ್ಪ್ರಸಿದ್ಧವಾದ ಅಜಂತ ಗುಹಾಂತ ರ್ದೇವಾಲಯಗಳು ವಾಫ್ ಕಣಿವೆಯ ಮನೋಹರವಾದ ನೈಸರ್ಗಿಕ ಸನ್ನಿವೇಶದಲ್ಲಿವೆ. ಕಲೆಯ ಪ್ರಭೇದಗಳಾದ ಶಲ್ಪ, ಕೆತ್ತನೆ ಹಾಗೂ ವರ್ಣಲೇಪನ ಇವುಗಳ ಕೇಂದ್ರವೆನಿಸಿರುವ ಅಜಂತ ಭಾರತೀಯ ಪರಮೋತ್ಕೃಷ್ಪ ಕಲಾನೈಪುಣ್ಯಕ್ಕೆ ಚಿರಂತನಸಾಕ್ಷಿಯಾಗಿದೆ. ಇಲ್ಲಿ ಬೆಟ್ಟವನ್ನು ಕೊರೆದು ಗುಹಾಲಯಗಳನ್ನು ನಿರ್ಮಿಸಿ ಚಿತ್ರಗಳನ್ನು ಬಿಡಿಸುವ ಕಾರ್ಯ ಪ್ರ.ಶ.ಪೂ. 2ನೆಯ ಶತಮಾನದಲ್ಲಿ ಪ್ರಾರಂಭವಾಗಿ ಅವಿಚ್ಛಿನ್ನವಾಗಿ ಪ್ರ.ಶ. 7ನೇಯ ಶತಮಾನದವರೆಗೂ ಮುಂದುವರಿಯಿತು. ಸಾತವಾಹನ, ವಾಕಾಟಕ ಮತ್ತು ಬಾದಾಮಿ ಚಳುಕ್ಯ ಸಂತತಿಗಳ ಅರಸರು ಬೌದ್ಧಭಿಕ್ಷುಗಳಿಗಾಗಿ ಗುಹಾಂತರ್ದೇವಾಲಯಗಳನ್ನು ನಿರ್ಮಿಸಿದರು. ಶಲ್ಪಿಗಳು ಗುಹಾಲಯಗಳು ನಿರ್ಮಾಣ ಹಾಗೂ ಕಲಾವಿನ್ಯಾಸದಲ್ಲಿ ತಮ್ಮ ಚಾತುರ್ಯವನ್ನು ತೋರಿಸಿರುವರು. ಮತನಿಷ್ಠೆ ಹಾಗೂ . ಪರಂರಾನುಗತವಾಗಿ ಬೆಳೆಸಿಕೊಂಡು ಬಂದ ಕಲಾಪರಿಪೂರ್ಣತೆಯನ್ನು ವರ್ಣಲೇಪನದಲ್ಲಿ ಬೌದ್ಧಭಿಕ್ಷುಗಳು ಅತ್ಯುನ್ನತವಾಗಿ ಪ್ರದರ್ಶಿಸಿರುವರು. 7 ನೆಯ ಶತಮಾನದಲ್ಲಿ ಅಜಂತಕ್ಕೆ ಭೇಟಿಯಿತ್ತಿದ್ದ ಯುವಾನ್. ಚಾಂಗ್ ಬರವಣಿಗೆಗಳಿಂದ, ಇಲ್ಲಿ ಬಹು ಸಂಖ್ಯೆಯಲ್ಲಿ ಬೌದ್ಧಭಿಕ್ಷುಗಳು ವಾಸಿಸುತ್ತಿದ್ದರೆಂದೂ ಅವರು ಹತ್ತಿರದಲ್ಲಿದ್ದ ಇಂದ್ರಕಾಂತವೆಂಬ ಪಟ್ಟಣಕ್ಕೆ ಆಗಾಗ ಭಿಕ್ಷಾಟನೆಗಾಗಿ ಹೋಗುತ್ತಿದ್ದರೆಂದೂ ತಿಳಿದುಬರುತ್ತದೆ. ಇವನು ಅಜಂತ ಕಲಾಕೇಂದ್ರದ ಪ್ರಕೃತಿ ಸೌಂದರ್ಯವನ್ನೂ ಗುಹಾಂತರ್ದೆವಾಲಯಗಳ ಸೌಂದರ್ಯವನ್ನೂ ವಿಶೇಷವಾಗಿ ಪ್ರಶಂಸಿಸಿರುವನು. ಬೌದ್ಧಧರ್ಮ ಕ್ಷೀಣಿಸಿದ ಮೇಲೆ ಈ ಸ್ಥಳ ನಿರ್ಲಕ್ಷಿಸಲ್ಪಟ್ಟು ಪೊದೆಗಳು