ಪುಟ:Mysore-University-Encyclopaedia-Vol-1-Part-1.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಚನೆ ಪ್ರ.ಶ.ಪೂ. 2ನೆಯ ಶತಮಾನದಿಂದ ಆರಂಭವಾಗಿ ಪ್ರ.ಶ. 7ನೆಯ ಶತಮಾನದವರೆಗೂ ನಡೆಯಿತು. ಪರ್ಸಿ ಬ್ರೌನ್‍ನ ಅಭಿಪ್ರಾಯದಂತೆ ಇವುಗಳ ಕಾಲಮಾನ ಈ ಪ್ರಕಾರವಿದೆ: 1 ಹೀನಯಾನ ಗುಹಾಂತರ್ದೇವಾ 8, 12, 13ನೆಯ ವಿಹಾರಗಳು. 9, ಲಯಗಳ ಗುಂಪು (ಪ್ರ.ಶ.ಪೂ 10ನೆಯ ಚೈತ್ಯ ಗೃಹಗಳು. 2ನೆಯ ಶತಮಾನದಿಂದ ಪ್ರ.ಶ. 2ನೆಯ ಶತಮಾನ) 2 ಮಧ್ಯಂತರ (ಪ್ರ.ಶ. 2ನೆಯ ಶತ ಮಾನದಿಂದ —————- ಸು. 450 ರವರೆಗೆ.) 3 ಮಹಾಯಾನ ಗುಹಾಂತರ್ದೇವಾ 11. 7, ಮತ್ತು 6ನೆಯ ವಿಹಾರಗಳು ಲಯಗಳ ಗುಂಪು (ಪ್ರ.ಶ. 450 (ಪ್ರ.ಶ.450-500) ರಿಂದ 642 ರವರೆಗೆ) 15. 10, 16, 17, 20ನೆಯ ವಿಹಾರಗಳು ಮತ್ತು 19ನೆಯ ಚೈತ್ಯಾಲಯ (ಸು. ಪ್ರ.ಶ. 550) 21 ರಿಂದ 25ರ ವರೆಗಿನ ವಿಹಾರಗಳು ಮತ್ತು 26ನೆಯ ಚೈತ್ಯಗೃಹ (ಪ್ರ.ಶ. 550ರಿಂದ 600). 1 ರಿಂದ 5 ರವರೆಗಿನ ವಿಹಾರಗಳು (ಪ್ರ.ಶ. 600-25) 26 ಮತ್ತು 27ನೆಯ ಗುಹಾಂತರ್ದೇವಾ ಲಯಗಳು (ಪ್ರ.ಶ. 625-42). ಮೇಲಿನವು 28. ಜೊತೆಗೆ ಹೊಸದಾಗಿ 2 ಗುಹೆಗಳನ್ನು ಪತ್ತೆ ಮಾಡಲಾಗಿದೆ. ಅವುಗಳ ಆಕಾರಾದಿಗಳು ಉಳಿದವುಗಳಿಗಿಂತ ಭಿನ್ನವಾಗಿವೆ. ಒಟ್ಟಿನಲ್ಲಿ ಈ ಮೂವತ್ತರ ಕ್ರಮಾಂಕಗಳನ್ನು ಪಶ್ಚಿಮದ ತುದಿಯಿಂದ ಪ್ರಾರಂಭ ಮಾಡಿ ಪೂರ್ವದಲ್ಲಿರುವ 8ನೆಯ ಗುಹಾಂತರ್ದೇವಾಲಯದವರೆಗೂ ಕೊಟ್ಟಿದ್ದಾರೆ. ಅಜಂತದ ವಾಸ್ತು ಶಿಲ್ಪ, ಮೂರ್ತಿಶಿಲ್ಪಗಳಲ್ಲಿನ ಕಲೆ ಸಾಕಷ್ಟು ಉತ್ತಮಮಟ್ಟದ್ದಾಗಿದ್ದು ವೈವಿಧ್ಯಮಯವಾಗಿದೆ. ಕಂಬಗಳ ಮಾಟ, ಅಲಂಕಾರ ಪದ್ಧತಿ, ಮೂರ್ತಿಗಳ ಮೈಕಟ್ಟು, ಪ್ರಮಾಣ, ಅಲಂಕಾರ ಕಲೆ ಮನ ಮೆಚ್ಚುವಂತಿವೆ. ನಿರ್ಮಾತೃಗಳಾದ ಸ್ಥಪತಿಗಳು ಒಳ್ಳೆ ದಕ್ಷತೆಯಿಂದ ಕೆಲಸ ಮಾಡಿ ಮೂರ್ತಿಗಳಲ್ಲಿ, ವರ್ಣಚಿತ್ರಗಳಲ್ಲಿ ಜೀವಕಳೆ ತುಂಬಿದ್ದಾರೆ. ಅಜಂತದ ಚೈತ್ಯಗಳಿಗೆ ಕಂಬಗಳುಳ್ಳ ಮುಖಮಂಟಪ, ಹಿಂಬದಿಯಲ್ಲಿ ಅರ್ಧವರ್ತುಲಾ ಕಾರದ ನಡು ಅಂಕಣ, ಅದರ ಪಕ್ಕಗಳಲ್ಲಿ ಕಂಬಗಳ ಸಾಲಿನಿಂದ ಬೇರ್ಪಡಿಸಿದ ಬದಿಯ ಅಂಕಣಗಳು, ಸ್ತೂಪ, ಗುಮ್ಮಟ, ಚಾವಣಿಯ ಕೋಣೆ-ಇತ್ಯಾದಿ ಇರುತ್ತವೆ. ಹೀನಯಾನ ಪಂಥದ ವಿಹಾರಗಳಲ್ಲಿ ಬಾಗಿಲು ದಾಟಿದ ಕೂಡಲೆ ಒಂದು ವಿಶಾಲವಾದ ನಡುಸಾಲೆ ಕಾಣುತ್ತದೆ. ಅದರ ಮೂರು ಗೋಡೆಗಳಲ್ಲಿ ಕಲ್ಲಿನ ಹಾಸಿಗೆಯುಳ್ಳ ಸಣ್ಣ ಕೋಣೆಗಳಿವೆ. ಇವುಗಳ ಕಾಲ ಪ್ರ.ಶ.ಸು. 3ನೆಯ ಶತಮಾನದವರೆಗೆ. ಮಹಾಯಾನ ತಲೆದೋರಿದಂದಿನಿಂದ ವಿಹಾರಗಳ ರಚನೆಯಲ್ಲಿ ಮಾರ್ಪಾಡಾಯಿತು. ಮಧ್ಯದ ಮಂಟಪದ ಸುತ್ತ ನಾಲ್ಕು ಕಡೆಗೂ ಹೋಗಲು ಬರುವಂತೆ ಮೊಗಸಾಲೆಗಳಾದುವು. ಎದುರಿನ ಗೋಡೆಯ ಮಧ್ಯದಲ್ಲಿ ಗರ್ಭಗುಡಿ ಬಂದಿತು. ಅದರಲ್ಲಿ ಬುದ್ಧನ ಮೂರ್ತಿಯನ್ನು ಕಡೆದು ಪೂಜಿಸಹತ್ತಿದ್ದರು. ಮಹಾಯಾನದಲ್ಲಿ ಚಿತ್ರ ಮತ್ತು ಮೂರ್ತಿಗಳಿಗೆ ಅವಕಾಶ ದೊರೆತದ್ದರಿಂದ ಬದಿಯ ಅಂಕಣಗಳಲ್ಲಿ ಮಾಡಗಳನ್ನು ಕೊರೆಯುವ ಮತ್ತು ಹೆಚ್ಚು ಹರವಾದ ಒಳಗೋಡೆಗಳನ್ನು ನಿರ್ಮಿಸುವ ಆವಶ್ಯಕತೆ ಉಂಟಾ ಯಿತು. ಇದಕ್ಕೆ ಕಂಬಗಳು ನೆರವಾದುವು. 11, 7 ಮತ್ತು 6ನೆಯ ವಿಹಾರಗಳು ಮಧ್ಯಂತರದ ಅವಸ್ಥೆಯನ್ನು ಸೂಚಿಸುತ್ತವೆ. ಅವುಗಳ ರಚನೆ ಹೀನಯಾನ ವಿಹಾರಗಳ ರಚನೆಯಿಂದ ಬೇರೆಯಾಗಿದ್ದರೂ ಮಂಟಪ ದಲ್ಲಿಯ ಕಂಬಗಳ ರಚನೆಯಲ್ಲಿ ಕಟ್ಟಡಗಳಲ್ಲಿ ಹಿಂದೆ ಬಳಸಲಾದ ನಮೂನೆಯಿದೆ. ಈ ಮೂರು ವಿಹಾರಗಳಲ್ಲಿ 11ನೆಯದು ಎಲ್ಲಕ್ಕೂ ಮೊದಲು ಹುಟ್ಟಿದೆ. ಇದರಲ್ಲಿಯ ನಾಲ್ಕು ಕಂಬಗಳು ಪ್ರಾಕಾರದ ಮಧ್ಯದಲ್ಲಿ ತಯಾರಿಸಿದ ಒಂದು ಚಪ್ಪರವನ್ನು ನಿರ್ದೇಶಿಸುತ್ತವೆ. 7ನೆಯದರಲ್ಲಿ ಇಂಥ ಎರಡು ಚಪ್ಪರಗಳನ್ನು ಕಾಣುತ್ತೇವೆ. ಮುಂದೆ ಅನೇಕ ಕಂಬಗಳು ಕೂಡಿಕೊಂಡು ದೊಡ್ಡ ಮಂಟಪದ ರಚನೆಗೆ ಕಾರಣವಾದುವು. 1, 4, 16, 17, 21, ಮತ್ತು 23ನೆಯ ಗುಹಾಂತರದೇವಾಲಯಗಳಲ್ಲಿ ಶಿಲ್ಪಕಲಾ ಕುಶಲತೆಯ ಉತ್ತಮ ವೈವಿಧ್ಯ ಕಾಣಬರುತ್ತದೆ. ಪ್ರ.ಶ. 6ನೆಯ ಶತಮಾನದಲ್ಲಿ ನಿರ್ಮಾಣವಾದ 16ನೆಯದು ಇವುಗಳಲ್ಲಿ ಅತ್ಯುತ್ತಮವಾದುದು. ಇದು ಮತ್ತು 1ನೆಯ ಗುಹಾಂತರ್ದೇವಾಲಯ ಗಳು ಸಾಮಾನ್ಯವಾಗಿ ಒಂದೇ ರೀತಿಯವು. ಇವೆರಡಕ್ಕೂ 65' ಉದ್ದವಾದ ಮೊಗಸಾಲೆ, 65‘ ಚಚ್ಚೌಕದ 20 ಕಂಬಗಳ ಸಾಲಿನಿಂದೊಡಗೂಡಿದ ನಡುಸಾಲೆಗಳಿರುವುವು. 16ನೆಯದರ ನಡುಸಾಲೆ, ಮೊಗಸಾಲೆಗಳ ಗೋಡೆಗಳಲ್ಲಿ 16 ಚಚ್ಚೌಕದ ಸಣ್ಣ ಕೋಣೆಗಳಿವೆ. ಮತ್ತು ಹಿಂಬದಿಯ ಗೋಡೆಯಲ್ಲಿ ಒಂದು ಅಗಲವಾದ ಗರ್ಭಗುಡಿಯನ್ನು ನಿರ್ಮಿಸಿದ್ದಾರೆ. ಅದರಲ್ಲಿ ಬುದ್ಧನ ದೊಡ್ಡ ವಿಗ್ರಹ ವಿರಾಜಮಾನವಾಗಿದೆ. ಈ ಗುಹೆಯಲ್ಲಿ ವಾಕಾಟಕ ಹರಿಷೇಣನ ಶಿಲಾಶಾಸನವಿದೆ. 2ನೆಯ ಗುಹಾಂತರದೇವಾಲಯದಲ್ಲಿ ಬ್ರಾಹ್ಮೀಲಿಪಿ ಮತ್ತು ಸಂಸ್ಕøತ ಭಾಷೆಯಲ್ಲಿರುವ ಕ್ಷಾಂತಿವಾದಿ (ತಾಳ್ಮೆಯ ಬೋಧಕ), ಸುರಸುತಿ (ಸರಸ್ವತಿ) ಮೈತ್ರೀ, ಬಲಜಾತಕ ಕ್ಷಾಂತಿಜಾತಕದ ಒಂದೆರಡು ಶ್ಲೋಕಗಳನ್ನು ಬಣ್ಣದಲ್ಲಿ ಬರೆಯಲಾಗಿದೆ. 19ನೆಯದು ಉತ್ತಮರೀತಿಯಲ್ಲಿ ರಚಿತವಾದ ಚೈತ್ಯಾಲಯ. ಇದೇನೂ ಅಷ್ಟು ದೊಡ್ಡದಲ್ಲ. ಹೊರಗೆ 11.5'ಮೀ ಉದ್ದ 9.7'ಮೀ ಅಗಲವಾಗಿದೆ. ಒಳಭಾಗದ ಉದ್ದ 14'ಮೀ, ಅಗಲ 7.3'ಮೀ. ಹಿಂದೆ ಒಂದು ಹೊರಪ್ರಾಕಾರವೂ ಎರಡೂ ಬದಿಗಳಲ್ಲಿ ಕಿರುದೇವಾಲಯಗಳೂ ಇದ್ದಿರಬೇಕು. ಮುಂದಿನ ಗೋಡೆಗೆ ಮೂರು ಪ್ರವೇಶದ್ವಾರಗಳ ಬದಲಾಗಿ ಒಂದೇ ಇದೆ. ಮುಂದುಗಡೆ ಹೊರಮಂಟಪ ಇದ್ದು ಚೈತ್ಯಾಲಯಕ್ಕೆ ಕಳೆ ತಂದುಕೊಟ್ಟಿದೆ. 26ನೆಯದೂ ಒಂದು ಚೈತ್ಯಾಲಯ. 20.7'ಮೀ ಉದ್ದ, 10.9'ಮೀ ಅಗಲ ಮತ್ತು 9.4'ಮೀ ಎತ್ತರವಿದೆ. ಪ್ರವೇಶದ್ವಾರದಲ್ಲಿಯ ಎರಡು ಕಂಬಗಳಲ್ಲದೆ ಇದಕ್ಕೆ 12' ಎತ್ತರವಾದ 26 ಕಂಬಗಳಿವೆ. ಅಲಂಕಾರ ಹೆಚ್ಚು. ಸ್ತೂಪದ ಮೇಲೆ ಹಲವು ಕೆತ್ತನೆಗಳಿವೆ. ಆದರೆ, ಮೊದಲಿನ ಚೈತ್ಯಗಳಲ್ಲಿದ್ದ ನಯ ಮತ್ತು ಲಯ ಇಲ್ಲಿ ತಪ್ಪಿದೆ. ಚೈತ್ಯ ಕಿಂಡಿಯ ಹತ್ತಿರ ಸುಂದರವಾದ ಅನೇಕ ಆಕೃತಿಗಳನ್ನು ಕೆತ್ತಿದ್ದಾರೆ. ಇಲ್ಲಿಯ ಮೂರ್ತಿಗಳು ವಿಶೇಷ ಪ್ರಮಾಣದಲ್ಲಿದ್ದರೂ ವೈವಿಧ್ಯವಿಲ್ಲದ್ದರಿಂದ ಮನಸ್ಸನ್ನು ಸೆಳೆಯುವುದಿಲ್ಲ. 1ನೆಯ ಗುಹಾಂತರದೇವಾಲಯದಲ್ಲಿಯ ಶಿಲಾಮೂರ್ತಿಗಳು ಬಹು ಸುಂದರವಾಗಿದ್ದು. ಮುಂಭಾಗದಲ್ಲಿ ಉತ್ತಮ ರೀತಿಯ ಕೆತ್ತನೆ ಕೆಲಸ ಮಾಡಿದ್ದಾರೆ. 26ನೆಯ ಗುಹಾಂತರದೇವಾಲಯದಲ್ಲಿ ಬುದ್ಧ ನಿರ್ವಾಣದ ಬೃಹತ್ ಚಿತ್ರವನ್ನು ಕೆತ್ತಿದ್ದಾರೆ. ಆನಂದನೇ ಮೊದಲಾದ ಅವನ ಅನುಯಾಯಿಗಳು ದೇಹದ ಹತ್ತಿರ ಕುಳಿತು ಶೋಕಿಸುತ್ತಿದ್ದಾರೆ. ಚಿತ್ರಸಂಯೋಜನೆ ಸುಂದರವಾಗಿದೆ. 1ನೆಯ ಗುಹಾಂತರ್ದೇವಾಲಯದ ಒಂದು ಕಂಬದ ಬೋದಿಗೆಯ ಮೇಲೆ ನಾಲ್ಕು ದೇಹ, ಒಂದೇ ಮುಖವುಳ್ಳ ನಾಲ್ಕು ಚಿಗರೆಗಳನ್ನು ಬಹು ಸುಂದರವಾಗಿ, ಜೀವಂತವೋ ಎನ್ನುವಂತೆ ಕೆತ್ತಿದ್ದಾರೆ. ಚೌಕಟ್ಟಿನ ಮೇಲಿರುವ ಕೆತ್ತನೆ ಮನಮೋಹಕವಾಗಿದೆ. ಅಜಂತದ ಒಂದು ವಿಹಾರದಲ್ಲಿ ಗರ್ಭಗುಡಿಯಲ್ಲಿಯ ಬುದ್ಧನ ಮೂರ್ತಿ, ಎದುರಿನಿಂದ ನೋಡಿದರೆ ಗಂಭೀರ ಮೌನದಲ್ಲಿದ್ದಂತೆ ತೋರುತ್ತದೆ. ಅದನ್ನೇ 45º ಕೋನದಲ್ಲಿ ನಿಂತು ನೋಡಿದರೆ ನಗುವಂತೆ ತೋರುತ್ತದೆ. (ಎ.ಎಂ.ಎ.) ಅಜಂತದ ಭಿತ್ತಿ ಚಿತ್ರಗಳು : ಅಜಂತದ ಗುಹೆಗಳ ಉತ್ಕøಷ್ಟವಾದ ಶಿಲ್ಪ, ಚಿತ್ರ ರಚನೆಗಳು ಗುಪ್ತರ ಕಾಲದ ಕಲಾ ಔನ್ನತ್ಯವನ್ನೂ ಗಾಂಧಾರ, ಪಾರಸಿಕ, ಚೀನಾ ಸಂಪರ್ಕದ ಸಂಕೀರ್ಣತೆಯನ್ನೂ ಸೂಚಿಸುತ್ತವೆ. ಆದರೆ ಹೈಂದವ ಕಲಾ ಸಂಸ್ಕøತಿ ಬೌದ್ಧರ ಯುಗಕ್ಕಿಂತ ಅತಿ ಪ್ರಾಚೀನವಾದದ್ದು. ಈ ಸಂಸ್ಕøತಿಯಿಂದ ಸಂಗ್ರಹಿಸಲಾದ ಚಿತ್ರ ಲಕ್ಷಣಗಳನ್ನು ವಾತ್ಸಾಯನ ತನ್ನ ಕಾಮಸೂತ್ರದಲ್ಲಿ ಹೀಗೆ ವರ್ಣಿಸಿರುತ್ತಾನೆ: ‘ರೂಪಭೇದ ಪ್ರಮಾಣಾನಿ ಭಾವಲಾವಣನ್ಯ ಯೋಜನಂ| ಸಾದೃಶ್ಯಂ ವರ್ಣಿಕಾ ಭಂಗಮಿತಿ ಚಿತ್ರಂ ಷಡಂಗಕಮ್||. ಅಜಂತದ ಚಿತ್ರಕಾರರು ಈ ಷಡಂಗಗಳನ್ನು ನಿಷ್ಠೆಯಿಂದ ತಮ್ಮ ಕೃತಿಗಳಲ್ಲಿ ಅನುಸರಿಸಿದ್ದಾರೆ. ಸರ್ವಾನುಮತವಾಗಿ ಅಜಂತದ 30 ಗುಹೆಗಳನ್ನು ಕಾಲಾನುಕ್ರಮವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ: