ಪುಟ:Mysore-University-Encyclopaedia-Vol-1-Part-1.pdf/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೬ ಅಜೀಗರ್ತ-ಅಚೋಲ

ಅಜೀಗರ್ತ: ಭೈಗುವಂಶದ ಒಬ್ಬ ದೊಡ್ದ್ ಋಷಿ. ಕ್ಷಾಮಕಾಲದಿಂದ ತನ್ನ ಸಂಸರಾವನ್ನು ಕಾಪಾಡಲು ಅಶಕ್ತನಾದಾಗ ಈತ ತನ್ನ ಮಗ ಶುನಶ್ಯೇಫನನ್ನು ನರಯಜ್ಣ್ಣಾ ಪಶುವಾಗಿ ಹರಿಶ್ಚಂದ್ರನಿಗೆ ಮಾರಿದ. ಈ ಪಾಪದ ಸಲುವಾಗಿ ಪಿಶಾಚಿಯಾಗಬೇಕಾಯಿತು. ಶುನಶ್ಯೇಫ ತನ್ನ ತಪೋಬಲದಿಂದ ತಂದೆಯ ಈ ದುರವಸ್ಟೆಯನ್ನು ಹೋಗಲಾಡಿಸಿದ.

ಅಜೀರ್ಣ: ಅಹಾರನಾಳದಲ್ಲಿ ಏನಾದರೂ ಕೆಟ್ಟೋ ತಿನ್ನಬಾರದ್ದನ್ನು ತಿಂದೋ, ಕುಡಿದೋ ಹೊಟ್ಟೆ ಏದೆಯ ಕೆಳಭಾಗ, ಇಲ್ಲವೇ ಕಿಬ್ಬೊಟ್ಟೆಯಲ್ಲಿ ನೋವು, ನುಲಿತ, ಭಾರವಿರುವಂಥ ಅನುಭವ ಆಗುವುದೇ ಅಜೀರ್ಣ (ಅಗ್ನಿಮಾಂದ್ಯ). ಇದು ಇನ್ನೂ ಹೆಚ್ಚಿಕೂಂಡು ಓಕರಿಕೆ, ವಾಂತಿ, ತೇಗು, ಸುಸ್ತೂ ಅಗಬಹುದು. ಹಲವಾರು ಒಳಾಂಗಗಳ ಬೇನೆಗಳ, ನಿಜಗೆಲಸ ಕೆಟ್ಟುದರ, ಹೊರಗಣ ಚ್ಚಿಹ್ನೆ ಅಥವಾ ಲಕ್ಷಣವೇ ಹೊರತು ಅಜೀರ್ಣ ಒಂದು ರೋಗವಲ್ಲ. ನೋವು ನುಲಿತದೊಂದಿಗೆ ಹಸಿವಿನ ನಾಶೆ, ನಾಲಗೆ ರುಚಿಗೆಡಿಕೆ, ಬಾಯಲ್ಲಿ ನೀರೂರಿಕೆ, ಎದೆಮುಗುಳಲ್ಲಿ ಭಾರದ ಅನುಭವ ಆಗಬಹುದು. ಮಲ ಕಟ್ಟುವುದು ಆಜೀರ್ಣದಲ್ಲಿ ಸಾಮಾನ್ಯವಾದರೂ ಉಚ್ಚಾಟ ಅಪೂರ್ವವಲ್ಲ.

ತಿಂದ ಆಹಾರ ಚೆನ್ನಾಗಿ ಪಚನ ಆಗದಿದ್ದರೆ ಅಜೀರ್ಣ ಆಗುತ್ತದೆ. ಬಾಯಿಂದ ಹಿಡಿದು ಗುದದ ತನಕ ಆಹಾರನಾಳದಲ್ಲಿ ಎಲ್ಲಾದರೂ ಹೀಗಾಗಿ, ಹಲವಾರು ಪಚನ ರಸಗಳ ಸುರಿಕೆಗಳ ವ್ಯತ್ಯಾಸ, ಆಹಾರ ಮುಂದೆ ಸಾಗುವ ವೇಗದಲ್ಲಿ ಹೆಚ್ಚೂ ಕಡಿಮೆ ಪಚನವಾದ ಉಣಿಸು ಹೀರಿಕೊಂಡು ರಕ್ತಗತವಾಗುವುದರಲ್ಲಿ ನಿಧಾನ, ಜಠರ ಕರುಳುಗಳಲ್ಲಿ ಏಳುವ ಹುಣ್ಣು ಇವುಗಳಿಂದಲೂ ಅಜೀರ್ಣ ಕಾಣಿಸಿಕೊಳ್ಳುವುದು ಸಾಮಾನ್ಯ. ಅಜೀರ್ಣಕ್ಕೆ ಮನಸ್ಸಿನ ಇರುಸುಮುರುಸುಗಳೂ ಕಾರಣವಾಗಬಹುದು. ಆದುದರಿಂದಲೇ ಊಟದ ಹೊತ್ತಿನಲ್ಲಿ ಯಾವ ಚಿಂತೆಗಳನ್ನೂ ಹತ್ತಿರ ಸುಳಿಯಗೊಡಬಾರದು. ಜಠರ ಕರುಳಿಸುವ ಮಸಾಲೆ, ಕರಿದ ತಿಂಡಿಗಳನ್ನು ಬಿಟ್ಟು ತಿನ್ನುವುದನ್ನು ಚೆನ್ನಾಗಿ ನಿಧಾನವಾಗಿ ಆಗಿದು ಜೊಲ್ಲಿನೊಂದಿಗೆ ನುಂಗುವುದರಿಂದ ಅಜೀರ್ಣ ತುಸುಮಟ್ಟಿಗೆ ತಗ್ಗುವುದು. ಒಬ್ಬರ ಪಚನ ಬಲವನ್ನು ನಾಲಗೆಯನ್ನು ನೋಡಿ ತಿಳಿಯಬಹುದು. ಹುಳುಕು ಹಲ್ಲು ಹಲ್ಲಿರದಿರುವಿಕೆ, ಒಸಡುಹುಣ್ಣು ಇವು ಅಜೀರ್ಣಕ್ಕೆ ದಾರಿ ಮಾಡಿಕೊಡುತ್ತವೆ. ಮಿತಿಗೆಟ್ಟು ತಿನ್ನುವುದು, ಕುಡಿತ, ರಾತ್ರಿ ಹೊತ್ತುಮೀರಿ ಹೊಟ್ಟೆಬಿರಿಯ ತಿನ್ನುವುದು-ಇವುಗಳಿಂದ ಅಜೀರ್ಣ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಊಟಗಳ ನಡುವೆ ತಿಂಡಿಗಳನ್ನು ಕುರುಕುತ್ತಿರುವುದು ಕೆಟ್ಟದ್ದು. ಈಲಿ (ಲಿವರ್), ಮಾಂಸದಲಿ (ಪ್ಯಾಂಕ್ರಿಯಾಸ್), ಪಿತ್ತಕೋಶ, ಕರುಳುವಾಳ (ಅಪೆಂಡಿಕ್ಸ್), ಅಲ್ಲದೆ ಆಹಾರ ನಾಳದಲ್ಲಿ ಎಲ್ಲಾದರೂ ಏಳುವ ಸಾಮಾನ್ಯ ಗಂತಿಗಳೂ ಏಡಿಗಂತಿಗಳು. ಅಂತಹ ಸ್ರಾವ ಗ್ರಂಥಿಗಳ ಕೆಲಸ ಕೆಟ್ಟಿದ್ದರೂ ಅಜೀರ್ಣವಾಗಬಹುದು. ಅಡ್ರಿನಲ್ ಗ್ರಂಥಿಯ ರೋಗವಾದ ಅಡಿಸನ್ನಿನ ರೋಗದಲ್ಲಿ ವಾಂತಿ, ಸುಸ್ತು ಸಾಮನ್ಯಗುರಾಣಿಕ (ತೈರಾಇಡ್) ಗ್ರಂಥಿ ರೋಗದಲ್ಲೂ ಅಜೀರ್ಣ ಕಳೆಯದಿದ್ದರೆ, ವೈದ್ಯರ ಸಲಹೆಯನ್ನು ಕೂಡಲೇ ಪಡೆಯಬೇಕು.

ಅಜೀವಿಕರು: ಬುದ್ಧ ಮತ್ತು ಮಹಾವೀರರ ಕಾಲದಲ್ಲಿ (ಪ್ರಶ.ಪೂ.6ನೆಯ ಶತಮಾನ) ಭಿಕ್ಷಾಟನೆಯಿಂದ ಜೀವಿಸುತ್ತಿದ್ದ ಒಂದು ಪಂಥದ ಅನುಯಾಯಿಗಳು. ಗೊಸಾಲ ಮಂಖಲಿ ಪುತ್ತ ಈ ಪಂಥದ ಸ್ಥಾಪಕ. ಅಜೀವವೆಂದರೆ ಜೀವನಕ್ರಮ, ಕರ್ಮದ ಶೃಂಖಲೆಯಿಂದ ಮುಕ್ತನಾಗುವವನೇ ಅಜೀವಿಕ; ಭಿಕ್ಷಾಟನೆಯೇ ಇವನ ಜೀವನವೃತ್ತಿ ಎಂದು ಗೊಸಾಲ ಹೇಳಿರುವನು. ಭೌದ್ಧಧರ್ಮದ ಪ್ರಕಾರ ಭಿಕ್ಷುಗಳು ಅನುಸರಿಸಬೀಕಾದ 8 ಮಾರ್ಗಗಳಲ್ಲಿ ಸಮ್ಯಕ್-ಜೀವನ ಒಂದು ಮುಖ್ಯ ಮಾರ್ಗ. ಮಹಾವೀರನಿಗೆ ಗೊಸಾಲನ ಪರಿಚಯವಿತ್ತು. ಅಪ್ರಾಮಾಣಿಕನೆಂದು ತಿಳಿದ ಮೇಲೆ ಗೋಸಾಲನ ಸ್ನೀಹ ಬಿಟ್ಟನು. ಮತ್ತೆ ಇವರಿಬ್ಬರು ಕಕ್ಷಿ-ಪ್ರತಿಕಕ್ಷಿಗಳಾಗಿ ಸಂಧಿಸಿ ಹೋರಾಡಿದರು. ಕೊನೆಗೆ ತನ್ನ ಹೀನ ಕೃತ್ಯಗಳನ್ನು ಒಪ್ಪಿಕೊಂಡ ಗೋಸಾಲ ಮಹಾವೀರನ ಶಿಷ್ಯನಾದ.ಅಜೀವಿಕರಿಗೆ ದಶರಥ (ಅಶೋಕನ ಮೊಮ್ಮಗ) ಗುಹೆಗಳಲ್ಲಿ ಕೆಲವು ಆಶ್ರಮಗಳನ್ನು ಕೊಟ್ಟಿದ್ದ.

ಪುರುಷಪ್ರಯತ್ನದ ಮೇಲೆ ಯಾವುದೂ ಆಧಾರಗೊಂಡಿಲ್ಲ. ಮನುಷ್ಯರಲ್ಲಿ ಕಂಡುಬರುವ ವ್ಯತ್ಯಾಸಕ್ಕೆ, ಭ್ರಷ್ಟತೆಗೆ, ಪತನಕ್ಕೆ ವಿಧಿ (ವಾತಾವರಣ, ಸ್ವಭಾವ) ಕಾರಣವೆಂದು ಈ ಪಂಥದ ತತ್ತ್ವ.

ಅಜೀಲಿಯನ್ ಸಂಸ್ಕೃತಿ: ದಕ್ಷಿಣ ಫ್ರಾನ್ಸ್, ಮಧ್ಯ ಯುರೋಪ್, ಬೆಲ್ಜಿಯಂ ಮತ್ತು ಉತ್ತರ ಬ್ರಿಟನ್ ಪ್ರದೇಶಗಳಲ್ಲಿ ಹರಡಿದ್ದೆ ಸೂಕ್ಷ್ಮ ಶಿಲಾಯುಗದ ಸಂಸ್ಕೃತಿ. ಫ್ರಾನ್ಸಿನ ಪಿರನಸ್ ಪರ್ವತೆ ಪ್ರದೇಶಗಳಲ್ಲಿರುವ ಮಜ್-ದ-ಅಜಿಲ್ ಎಂಬ ಸ್ಥಳದಲ್ಲಿ ಮೊದಲು ಗುರುತಿಸಲ್ವಟ್ಟದ್ದರಿಂದ ಅಜೀಲಿಯನ್ ಎಂಬ ಹೆಸರು ರೂಢವಾಯಿತು. ಹಳೆಯ ಶಿಲಾಯುಗದ ಮ್ಯಾಗ್ಡಲೀಯನ್ ಅವಶೇಷಗಳ ಮೇಲ್ವದರಗಳಲ್ಲಿ ಇದರ ಅವಶೇಷಗಳು ಸಿಕ್ಕುವುದರಿಂದ ಇದರ ಕಾಲ ಪ್ರ.ಶ.ಪೂ.8,000 ಇರಬಹುದೆಂದು ಹೇಳಬಹುದು. ಬೇಟೆಯಿಂದಲೇ ಜೀವಿಸುತ್ತಿದ್ದ ಈ ಜನ, ಬಹು ಸಣ್ಣ ಶಿಲಾಯುಧಗಳನ್ನೂ ಎಲುಬಿನ ಆಯುಧಗಳನ್ನೂ ಮೀನಿನ ಬೇಟೆಗಾಗಿ ಕೆಂಪು ಜಿಂಕೆಯ ಕೊಂಬಿನಿಂದ ಮಾಡಿದ ಹಾರ್ಪೂನ್ ಎಂಬ ಆಯುಧವನ್ನು ಉಪಯೋಗಿಸುತ್ತಿದ್ದರು. ಈ ಕಾಲದಲ್ಲಿ ಪಶುಪಾಲನೆ ಬಳಕೆಯಿರಲಿಲ್ಲವಾದರೂ ನಾಯಿ ಮಾತ್ರ ಪಳಗಿದ ಪ್ರಾಣಿಯಾಗಿದ್ದಿತು. ಚುಕ್ಕೆಗಳು, ಉದ್ದ ಅಡ್ಡ ಗೆರೆಗಳು, ವೃತ್ತಗಳು, ಮುಂತಾದ ಕಪ್ಪು ಬಣ್ಣದ ಚಿಹ್ನೆಗಳಿಂದ ಆಫ್ನೆಟ್ ನಲ್ಲಿ ದೊರಕಿರುವ ಈ ಕಾಲದ ತಲೆಬುರುಡೆಗಳ ಗುಡ್ಡೆಗಳು. ಈ ಜನರು ಆಚರಿಸುತ್ತಿದ್ದ ಶವಸಂಸ್ಕಾರ ರೀತಿಯ ಬಗ್ಗೆ ಮಾಹಿತಿ ನೀಡುತ್ತವೆ.

ಅಜೇಲಿಯ: ಎರಿಕೇಸೀ ಕುಟುಂಬಕ್ಕೆ ಸೇರಿದ ಸುಂದರ ಸಸ್ಯ ಇದರ ಅನೇಕ ಪ್ರಭೇದಗಳು ಹೆಚ್ಚಾಗಿ 200ಮೀ ಎತ್ತರವಿರುವ ತಂಪಾದ ಸಹ್ಯಾದ್ರಿ, ಹಿಮಾಲಯ,ಊಟಿಗಳಂಥ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಸಣ್ಣ ಮರಗಳಾಗಿ ಬೆಳೆಯುತ್ತವೆ. ಇದರ ಸಮೀಪಬಂಧು ರೋಡೋಡೆಂಡ್ರನ್. ಇವರಡೂ ಒಂದೇ ಜಾತಿಯವೆಂಬುದು ಸಸ್ಯಶಾಸ್ತ್ರಜರ ಅಭಿಫ್ರಾಯ. ಅಜೇಲಿಯದ ಸು.850 ಪ್ರಭೇದಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿಕೊಂಡಿವೆ. ಚೇನದ ಪಶ್ಚಿಮ ಭಾಗದಲ್ಲಿರುವ ಯುನಾನ್ ಎಂಬ ಸಣ್ಣ ಪ್ರದೇಶ ವೊಂದರಲ್ಲಿಯೇ ಸು.200 ಪ್ರಭೇದಗಳು ಕಂಡುಬರುವುದರಿಂದ, ಅದೇ ಈ ಸಸ್ಯಗಳ ಮೂಲಸ್ಥಾನ ಆಗಿರಬೇಕೆಂದು ಬಹು ಜನರ ಅಭಿಪ್ರಾಯ. ಈ ಸಸ್ಯವನ್ನು ಸು.75-80 ವರ್ಷಗಳ ಹಿಂದೆ ಲಂಡನ್ ನಗರದ ಉದ್ದಾನದಲ್ಲಿ ಮೊದಲು ಬೆಳಸಿದವರು ವರ್ಗೀಕರಣ ಶಾಸ್ತ್ರಜ್ ಹೂಕರ್. ಪುಷ್ಪಮಂಜರಿ ಸ್ವಲ್ಪಮಟ್ಟಿಗೆ ಗುಲಾಬಿಯಂತೆ ಕಾಣುವುದರಿಂದ ಇತ್ತೀಚೆಗೆ ಉದ್ಯಾನಗಳಲ್ಲಿ ಇದನ್ನು ಹೆಚ್ಚಾಗಿ ಬೆಳಸುತ್ತಿದ್ದಾರೆ. ಗುಲಾಬಿ ಸೌಂದರ್ಯದ ದೃಷ್ಟಿಯಲ್ಲಿ ಪುಷ್ಪರಾಣಿ ಎನಿಸಿಕೊಂಡರೆ, ಅಜೇಲಿಯ ರೋಡೋಡೆಂಡ್ರನ್ ಗಳು ಪುಷ್ಪರಾಜ ಎಂಬ ಅಭಿಪ್ರಾಯವಿದೆ.