ಪುಟ:Mysore-University-Encyclopaedia-Vol-1-Part-1.pdf/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


          ಅಟ್ಲಾಂಟೀಕ್ ಸನ್ನದು - ಅಟ್ಲಿ, ಕ್ಲೆಮೆಂಟ್ ಆರ್                            ೨೦೧
  ಅಟ್ಲಾಂಟಿಕ್ ಸನ್ನದು : ವಿಶ್ವಸಂಸ್ಥೆಯನ್ನು ಸ್ಥಾಪಿಸಲು ಪ್ರಪಂಚದ ಅನೇಕ ರಾಷ್ಟ್ರಗಳೂ ಅವುಗಳ ನಾಯಕರೂ ನಡೆಸಿದ ಅನೇಕ ಪ್ರಯತ್ನಗಳಲ್ಲಿ ಈ ಸನ್ನದು ಬಹು ಮುಖ್ಯವಾದ ಒಂದು ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.ಅದು ಈಗಿನ ವಿಶ್ವಸಂಸ್ಥೆಯ ಅಡಿಗಲ್ಲೆಂದೇ ಹೇಳಬಹುದು. ಈ ಸನ್ನದು 1941 ಆಗಸ್ಟ್ 14ನೆಯ ತಾರೀಖು ಪ್ರಪಂಚದ ಎರಡು ಮುಖ್ಯ ರಾಷ್ಟ್ರಗಳಾದ ಅಮೆರಿಕ ಸಂಯುಕ್ತಸಂಸ್ಥಾನಗಳು ಮತ್ತು ಇಂಗ್ಲೆಂಡ್ ದೇಶಗಳಿಂದ ಪ್ರಕಟಿಸಲಾಯಿತು. ಸಂಯಕ್ತಸಂಸ್ಥಾನಗಳ ಪರವಾಗಿ ಆಗಿನ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ರೂಸ್ವೆಲ್ಪರೂ ಇಂಗ್ಲೆಂಡ್ ದೇಶದ ಪರವಾಗಿ ಆಗಿನ ಮಹಾ ಪ್ರಧಾನಿಗಳಾಗಿದ್ದ ವಿನ್‍ಸ್ಟನ್ ಚರ್ಚಿಲರೂ ಉತ್ತರ ಅಟ್ಲಾಂಟಿಕ್‍ನಲ್ಲಿ ಒಂದು ಯುದ್ಧದ ಹಡಗಿನಲ್ಲಿ ಸಂಧಿಸಿ ಒಂದು ತೀರ್ಮಾನಕ್ಕೆ ಬಂದಾದಮೇಲೆ ಅವರಿಬ್ಬರ ಹೆಸರಿನಲ್ಲಿ ಈ ಸನ್ನದನ್ನು ಪ್ರಕಟಿಸಲಾಯಿತು. ಪ್ರಪಂಚದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕೂ ವಿಶ್ವದಲ್ಲಿ ಯುದ್ಧಗಳನ್ನು ತಡೆಗಟ್ಟುವುದಕ್ಕೂ ವಿಶ್ವಸಂಸ್ಥೆಯನ್ನು ಸ್ಥಾಪಿಸುವುದಕ್ಕೂ ಮತ್ತು ವಿಶ್ವದ ಭವಿಷ್ಯದ ಏಳಿಗೆಗೂ ಪ್ರಯತ್ನಿಸಬೇಕೆಂದು ಎರಡು ರಾಷ್ಟ್ರಗಳೂ ಈ ಕೆಲವು ತತ್ತ್ವಗಳನ್ನು ಪಾಲಿಸಬೇಕೆಂದು ಒಪ್ಪಿಕೊಳ್ಳಲಾಯಿತು.
   1. ಎರಡು ರಾಷ್ತ್ರಗಳೂ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸ್ವಪ್ರತಿಷ್ಠೆಯಿಂದ ಪ್ರಾದೇಶಿಕ ವಿಸ್ತರಣೆಗೆ ಪ್ರಯತ್ನಿಸಬಾರದು. 2. ಯಾವುದೇ ಒಂದು ದೇಶದ ಜನಗಳ ಅಭಿಲಾಷೆಗೆ ವಿರುದ್ಧವಾಗಿ ಪ್ರಾದೇಶಿಕ ಬದಲಾವಣೆಗಳಾವುದು ಆಗಕೂಡದು. ಅಂಥ ಬದಲಾವಣೆಗಳಿಗೆ ಎರಡು ದೇಶಗಳೂ ಉತ್ತೇಜನ ಕೊಡುವುದಿಲ್ಲ. 3. ಎಲ್ಲ ರಾಷ್ಟ್ರಗಳ ಜನರೂ ತಮಗೆ ಯಾವ ವಿಧವಾದ ಸರ್ಕಾರ ಬೇಕೊ ಅಂಥದನ್ನು ರಚಿಸಿಕೊಳ್ಳುವುದನ್ನು ಮತ್ತು ಅವರ ಹಕ್ಕುಗಳನ್ನು ಕಾಪಾಡಿಕೊಳ್ಳುವುದನ್ನು ಎರಡು ರಾಷ್ತ್ರಗಳೂ ಗೌರವಿಸುತ್ತವೆ. 4. ಎಲ್ಲ ರಾಷ್ತ್ರಗಳ ವಾಣಿಜ್ಯ ವ್ಯಾಪಾರಗಳ ಮತ್ತು ಅರ್ಥಿಕ ಅಭಿವೃದ್ದಿಗೂ ಎರಡು ರಾಷ್ಟ್ರಗಳೂ ಪ್ರಯತ್ನಿಸುತ್ತವೆ. 5. ಎರಡು ರಾಷ್ತ್ರಗಳು ಎಲ್ಲ ರಾಷ್ತ್ರಗಳ ಸಾಮಾಜಿಕ ಭದ್ರತೆ, ಆರ್ಥಿಕ ಅಭಿವೃದ್ಧಿ ಮತ್ತು ಜನರ ಜೀವನಮಟ್ಟ ಹೆಚ್ಚಿಸಲು ಶ್ರಮಿಸುತ್ತವೆ. 6.ವಿಶ್ವದಲ್ಲಿ ಶಾಂತಿಯನ್ನು ಏರ್ಪಡಿಸಿ, ಜನಗಳನ್ನು ಯುದ್ಧಭೀತಿಯಿಂದ ಮತ್ತು ಸಾಮಾನ್ಯ ಕೊರತೆಗಳಿಂದ ಪಾರುಮಾಡಲು ಎರಡು ರಾಷ್ತ್ರಗಳೂ ಕೆಲಸ ಮಾಡುತ್ತವೆ. 7. ಸಮುದ್ರಯಾನದ ಹತೋಟಿ ಯಾವ ಒಂದು ರಾಷ್ತ್ರದ ಹಕ್ಕಲ್ಲ. ಪ್ರಪಂಚದ ಎಲ್ಲ ರಾಷ್ತ್ರಗಳ ಜನರೂ ವಿಶ್ವದ ಯಾವ ಭಾಗಕ್ಕಾದರೂ ಹೋಗುವಂತೆ ಅವಕಾಶ ಕಲ್ಪಿಸಲು ಎರಡು ರಾಷ್ತ್ರಗಳೂ ಸಹಾಯಮಾಡುತ್ತವೆ. 8.ಯುದ್ಧವನ್ನೂ ಆಕ್ರಮಣ ಭೀತಿಯನ್ನುಂಟು ಮಾಡುವುದನ್ನೂ ಸಾರ್ವತ್ರಿಕವಾಗಿ ನಿಷೇಡಿಸುವುದಲ್ಲದೆ ಪ್ರಪಂಚದ ಯಾವ ರಾಷ್ತ್ರವೂ ಬಲಪ್ರಯೋಗ ಮಾಡದಂತೆ ಎರಡು ರಾಷ್ತ್ರಗಳೂ ನೋಡಿಕೊಳ್ಳುತ್ತವೆ.
¨   ಈ ಮೇಲಿನ ಎಂಟು ತತ್ತ್ವಗಳು ಅಟ್ಲಾಂಟಿಕ್ ಸನ್ನದಿನಲ್ಲಿ ಸೇರಿವೆ. ಇವು ವಿಶ್ವದಲ್ಲಿ ಶಾಂತಿ ಸ್ಥಾಪಿಸಲು ಬಹು ಮುಖ್ಯವಾಗಿವೆ. ಆದುದರಿಂದ ಅಂತಾರಾಷ್ಟ್ರೀಯ ರಾಜಕೀಯ ಕ್ಷೇತ್ರದಲ್ಲಿ ಅಟ್ಲಾಂಟಿಕ್ ಸನ್ನದಿಗೆ ಒಂದು ಮುಖ್ಯವಾದ ಸ್ಥಾನ ಏರ್ಪಟ್ಟಿದೆ. (ಎಂ.ಕೆ.ಆರ್)          
   ಅಟ್ಲಾಂಟಿಕ್ ಸಾಗರ : ಭೂಮಿಯ ವಿಸ್ತೀರ್ಣದಲ್ಲಿ ಶೇ.20 ಪ್ರದೇಶವನ್ನು ಆವರಿಸಿರುವ ಇದು ದೊಡ್ಡ ಮಹಾಸಾಗರಗಳಲ್ಲಿ ಎರಡನೆಯದು. ಇದು ಉತ್ತರದಲ್ಲಿ ಗ್ರೀನ್‍ಲೆಂಡ್‍ ಐಸ್‍ಲೆಂಡ್ ಪ್ರದೇಶದಿಂದ ದಕ್ಷಿಣದಲ್ಲಿ ಬೋವೆಟ್ ದ್ವೀಪದವರೆಗೆ ವ್ಯಾಪಿಸಿದೆ. ಪೂರ್ವಕ್ಕೆ ಯುರೋಪು, ಆಫ್ರಿಕ ಖಂಡಗಳು, ಪಶ್ಚಿಮಕ್ಕೆ ಉತ್ತರ, ದಕ್ಷಿಣ ಅಮೆರಿಕ ಖಂಡಗಳೂ ಇವೆ. ವಿಸ್ತೀರ್ಣ 82,440,000 ಚ.ಕಿಮೀ. ಈ ಸಾಗರಕ್ಕೆ ಸೇರಿದ ಅನೇಕ ಸಮುದ್ರಗಳೊಡನೆ ಇದರ ಒಟ್ಟು ವಿಸ್ತೀರ್ಣ ಸುಮಾರು 106,450,000 ಚ.ಕಿಮೀ. ಮೆಕ್ಸಿಕೊ ಆಖಾತ, ಉತ್ತರ ಸಮುದ್ರ, ಬಾಲ್ಟಿಕ್ ಸಮುದ್ರ, ಮೆಡಿಟರೇನಿಯನ್ ಸಮುದ್ರ,ಕೆರಿಬಿಯನ್ ಸಮುದ್ರ, ಸ್ಕಾಷಿಯ ಸಮುದ್ರ ಮುಂತಾದವು ಈ ಸಾಗರದ ಶಾಖೆಗಳು. ಇದಕ್ಕಲ್ಲದೆ ಬೇರಾವ ಸಾಗರಕ್ಕೂಅಷ್ಟೊಂದು ದೊಡ್ಡ ನದಿಗಳು ಬಂದು ಸೇರುವುದಿಲ್ಲ. ಈ ಸಾಗರದ ಮೂಲಕ ಸಮಭಾಜಕವೃತ್ತ ಹಾದು ಹೋಗುವುದರಿಂದ, ಇದನ್ನು ಉತ್ತರ ಅಟ್ಲಾಂಟಿಕ್ ಮತ್ತು ದಕ್ಷಿಣ ಅಟ್ಲಾಂಟಿಕ್ ಎಂದು ವಿಭಾಗಿಸಲಾಗಿದೆ.
    ಅಟ್ಲಾಂಟಿಕ್ ಸಾಗರದ ಸರಾಸರಿ ಆಳ 3,330 ಕಿಮೀ.ದಕ್ಷಿಣ ಅಟ್ಲಾಂಟಿಕ್ ಸಾಗರ ಹೆಚ್ಚು ಆಳವಾಗಿದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಖಂಡಾವರಣ ಪ್ರದೆಶ ಹೆಚ್ಚಾಗಿರುವುದರಿಂದ ಆಳ ಕಡಿಮೆ. ಅಟ್ಲಾಂಟಿಕ್ ಸಾಗರದ ಮಧ್ಯದಲ್ಲಿ ಐಸ್‍ಲೆಂಡ್‍ನಿಂದ ದಕ್ಷಿಣದಲ್ಲಿರುವ ಬೊವೆಟ್ ದ್ವೀಪದವರೆಗೆ ಹಾವಿನಾಕಾರದ ಮಧ್ಯ ಅಟ್ಲಾಂಟಿಕ್ ಶ್ರೇಣಿ ಎಂಬ ಜಲಾಂತರ್ಗತ ಪರ್ವತದ ಸಾಲು ಇದೆ. ಇದರ ಮೇಲೆ ಸುಮಾರು 2745ಕಿಮೀ ನೀರಿದೆ. ಸಮಭಾಜಕವೃತ್ತ ಹಾದುಹೋಗುವ ಭಾಗದಲ್ಲಿ ರೊಮಾಚ್ ಫೆರ್ರೊ ಎಂಬ ಕಣಿವೆಯುಂಟು. ಇದರ ಆಳ 4572ಕಿಮೀ ಉತ್ತರಕ್ಕಿರುವ ಶ್ರೇಣಿಯ ಭಾಗಕ್ಕೆ ಡಾಲ್ಫಿನ್ ಶ್ರೇಣಿ ಎಂದೂ, ದಕ್ಷಿಣ ಶ್ರೇಣಿಗೆ ಛಾಲೆಂಜರ್ ಶ್ರೇಣಿಯೆಂದೂ ಹೆಸರು ಈ ಮಧ್ಯಶ್ರೇಣಿಯ ಮುಳುಗದಿರುವ ಭಾಗ ಅಜ಼ೋರ್ಸ್, ಸೇಂಟ್ ಪಾಲ್, ಅಸೆನ್ಷಿಯನ್, ಸೇಂಟ್ ಹೆಲಿನಾ, ಟ್ರಿಪ್ಟಾನ್‍ ಡ ಕೂನ್ಯಾ, ಗಾಫ್, ಬೋವೆಟ್ ಮುಂತಾದ ದ್ವೀಪಗಳಂತೆ ಕಾಣುವುದು. ಈ ಶ್ರೇಣಿಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಕೆಲವು ಶ್ರೇಣಿಗಳ ಶಾಖೆಗಳಿವೆ. ವಾಲ್ವಿಸ್ ರಿಡ್ಜ್ ಎಂಬುದು ಪೂರ್ವದ ಕಡೆಗೆ 20° ದ. ಅಕ್ಷಾಂಶದ ಭಾಗದಲ್ಲಿ ಆಫ್ರಿಕದತ್ತ ಹಬ್ಬಿದೆ.ರಯೋಗ್ರ್ಯಾಂಡ್ ರೈಜ್ ಎಂಬುದು ಪಶ್ಚಿಮದಲ್ಲಿ ದಕ್ಷಿಣ ಅಮೆರಿಕ ಕಡೆಗೆ 30° ದ.ಅಕ್ಷಾಂಶದವರೆಗೆ ಹಬ್ಬಿದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ವೈವಿಲೆ ಥಾಮ್ಸನ್ ರಿಡ್ಜ್ ಮತ್ತು ಸೇಂಟ್ ವಿನ್ಸೆಂಟ್ ರೈಜ಼್ ಎಂಬ ಶ್ರೇಣಿಗಳು ಪೂರ್ವದ ಕಡೆಗೆ ಹಬ್ಬಿವೆ. ಈ ಎಲ್ಲ ಶ್ರೇಣಿಗಳೂ ಈ ಸಾಗರವನ್ನು ಬ್ರೆಜ಼ಿಲ್,ಅರ್ಜೆಂಟೀನ , ಅಂಗೋಲ, ಕೇಪ್ ದ್ರೋಣಿಗಳೆಂದೂ ವಿಭಾಗಿಸಿದ್ದಾರೆ. ವೆಸ್ಟ್ಇಂಡೀಸ್ ದ್ವೀಪಗಳಿರುವ ಕರಿಬ್ಬಿಯನ್ ಸಮುದ್ರ ಅಟ್ಲಾಂಟಿಕ್ ಸಾಗರದ ಉಪಸಮುದ್ರ. 
     ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ 1,600ಕಿಮೀ ಅಗಲವುಳ್ಳ ಕೇವಲ 366ಕಿಮೀ ಆಳದಲ್ಲಿರುವ ವಿಶಾಲವಾದ ಟೆಲಿಗ್ರಾಫ್ ಜಲಾಂತರ ಪ್ರಸ್ಥಭೂಮಿಯಿದೆ.ಇದು ಉತ್ತರ ಬ್ರಿಟನ್ನಿನಿಂದ ಗ್ರೀನ್‍ಲೆಂಡ್ ಮತ್ತು ಲ್ಯಾಬ್ರಡಾರ್ ಪ್ರದೇಶಗಳವರೆಗೆ ಹಬ್ಬಿದೆ. ಈ ಸಾಗರದಲ್ಲಿ ಪೋರ್ಟೊರಿಕೋ(9,220ಕಿಮೀ),ದಕ್ಷಿಣ ಸ್ಯಾಂಡ್‍ವಿಚ್ (8,264ಕಿಮೀ), ನಾರೆಪ್ (6,995ಕಿಮೀ), ಎಂಬ ಆಳವಾದ ಕೂಪ (ತಗ್ಗು)ಭಾಗಗಳಿವೆ.
     ಈ ಸಾಗರದಲ್ಲಿ ಪಶ್ಚಿಮ ಯುರೋಪ್, ಉತ್ತರ ಅಮೆರಿಕದ ಈಶಾನ್ಯಭಾಗ, ಮೆಕ್ಸಿಕೊ ಕೊಲ್ಲಿ- ಈ ಭಾಗಗಳು ವಿಶಾಲವಾದ ಖಂಡಾವರಣ ಪ್ರದೀಶಗಳು.
      ಅಟ್ಲಾಂಟಿಕ್ ಸಾಗರದಲ್ಲಿ ಗಿನಿ ಆಖಾತದಿಂದ ಮೆಕ್ಸಿಕೊ ಆಖಾತದವರೆಗಿನ ಪ್ರದೇಶದಲ್ಲಿ ಅಧಿಕ ಉಷ್ಣತೆ ಇದೆ. ಉತ್ತರದಲ್ಲಿ ಗ್ರೀನ್‍ಲೆಂಡಿನ ಹತ್ತಿರವೂ 40° ದ ಅಕ್ಷಾಂಶದ ದಕ್ಷಿಣ ಭಾಗದಲ್ಲೂ ಅತಿ ಶೀತಭಾಗಗಳಿವೆ. ಈ ಸಾಗರದಲ್ಲಿ ಸಮಭಾಜಕವೃತ್ತಪ್ರದೀಶದಲ್ಲಿರುವ ಸಾರ್ಗಾಸೋ ಸಮುದ್ರವೆಂಬ ಭಾಗದಲ್ಲಿ ಸಮುದ್ರಪಾಚಿ ಮುಂತಾದ ಸಸ್ಯಗಳು ಹೆಚ್ಚಾಗಿ ಕಂಡುಬರುತ್ತವೆ. ವಾಯವ್ಯ ಭಾಗದಲ್ಲಿ ದಟ್ಟವಾದ ಮಂಜು ಕವಿದಿರುವುದು ಇನ್ನೊಂದು ವಿಶೇಷ ಅಂಶ.
      ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗಿನಿ ಪ್ರವಾಹ, ಗಯಾನಾಪ್ರವಾಹ, ಫ್ಲಾರಿಡಾ, ಗಲ್ಫ್ ಸ್ಟ್ರೀಮ್ (ಉಷ್ಣ), ಉತ್ತರ ಅಟ್ಲಾಂಟಿಕ್ ಪ್ರವಾಹ, ಕ್ಯಾನರೀಸ್ ಪ್ರವಾಹಗಳೂ ಗ್ರೀನ್‍ಲೆಂಡ್ ಮತ್ತು ಲ್ಯಾಬ್ರಡಾರ್ (ಶೀತ) ಪ್ರವಾಹಗಳೂ ಕಂಡುಬರುವುವು. ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಬ್ರೆ‌‍‌ಜ಼ಿಲ್ ಪ್ರವಾಹ, ದಕ್ಷಿಣ ಪ್ರವಾಹ, ಬೆಂಗ್ವೆಲ್ಲಾ ಪ್ರವಾಹಗಳು ಅಪ್ರದಕ್ಷಿಣೆಯಾಗಿ ಹರಿಯುವುವು. ಸಮಭಾಜಕವೃತ್ತದ ಭಾಗದಲ್ಲಿ ಒಂದು ಪ್ರತಿ ಪ್ರವಾಹ ಪೂರ್ವದ ಕಡೆಗೆ ಚಲಿಸುತ್ತದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಆಗಾಗ್ಗೆ ಆವರ್ತ ಮಾರುತ(ಸೈಕ್ಲೋಸ್)ಗಳುಂಟಾಗಿ ಬಿರುಗಾಳಿಗಳುಂಟಾಗುತ್ತವೆ. ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ 40°ದ.ಅಕ್ಷಾಂಶದ ಭಾಗದಲ್ಲಿ ಮಾತ್ರ ಬಿರುಗಾಳಿಗಳು ಬೀಸುವುವು.
     ಅಟ್ಲಾಂಟಿಕ್ ಸಾಗರದಲ್ಲಿರುವ ಗ್ರ್ಯಾಂಡ್ ಬ್ಯಾಂಕ್ಸ್, ಬಹಾಮಾ ಬ್ಯಾಂಕ್ಸ್, ಜಾಜ್ ಬ್ಯಾಂಕ್ಸ್,ಸ್ಕಾಷಿಯ ಪ್ರದೇಶ, ಐರಷ್ ಸಮುದ್ರ, ಉತ್ತರ ಸಮುದ್ರ,ದಕ್ಷಿಣ ಆಫ್ರಿಕದ ನೈರುತ್ಯಭಾಗ- ಇವು ಮೀನುಗಾರಿಕೆಯ ಮುಖ್ಯ ಜಲಪ್ರದೇಶಗಳು. ಈ ಸಾಗರ ಪ್ರಪಂಚದ ಮುಖ್ಯ ವಾಣಿಜ್ಯ ಹೆದ್ದಾರಿಯಾಗಿವೆ. ಪ್ರಪಂಚದ ಪ್ರಮುಖ ಸಾಗರ ಮಾರ್ಗಗಳಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ ಮಾರ್ಗದಲ್ಲಿ ಹೆಚ್ಚಾಗಿ ಹಡಗುಗಳು ಸಂಚರಿಸುತ್ತವೆ. (ಎ.ಕೆ.)
     ಅಟ್ಲಾಸ್ ಪರ್ವತಗಳು : ಆಫ್ರಿಕದ ವಾಯವ್ಯತೀರಕ್ಕೆ ಸಮಾಂತರವಾಗಿ 1,500 ಕಿಮೀ ವಿಸ್ತಾರವಾಗಿ ಮೊರಾಕೊ ಆಲ್ಜೀರಿಯ ಟ್ಯುನಿಸಿಯಗಳ ಮುಖಾಂತರ ಹಾದುಹೋಗುತ್ತವೆ. ಇದರ ಉತ್ತರಕ್ಕೆ ಮೆಡಿಟರೇನಿಯನ್ ಸಮುದ್ರವೂ ದಕ್ಷಿಣಕ್ಕೆ ಸಹರ ಮರುಭೂಮಿಯೂ ಇವೆ. ಮುಖ್ಯಶ್ರೇಣಿ ಮಧ್ಯಸ್ಥಾನದಲ್ಲಿದೆ. ಸರಾಸರಿ ಎತ್ತರ 1100 ಅಡಿ ವರ್ಷದ ಹೆಚ್ಚುಕಾಲ ಇಲ್ಲಿಯ ಶಿಖರಗಳು ಹಿಮದಿಂದ ಕೂಡಿರುತ್ತವೆ. ಉತ್ತರದ ಹಾಗೂ ಶಿಖರಗಳ ಇಳಿಜಾರಿನ ಭಾಗಗಳು ದಟ್ಟವಾದ ಕಾಡುಗಳಿಂದ ಕೂಡಿವೆ. 
     ಈ ಪರ್ವತಗಳು ಎರಡು ಮುಖ್ಯ ಶ್ರೇಣಿಗಳನ್ನಾಗಿ ವಿಂಗಡಿಸಬಹುದು : 1. ಸೆಂಟಾದಿಂದ ಟಾನ್ ಭೂಶಿರದವರೆಗೆ ಹರಡಿರುವ ಸಾಗರಿಕ ಶ್ರೇಣಿ 2. ಘಿರ್ ಭೂಶಿರದಿಂದ ದಕ್ಷಿಣತೀರಕ್ಕೆ ಹರಡಿರುವ ಒಳ ಹಾಗೂ ಹೆಚ್ಚು ಎತ್ತರದ ಶ್ರೇಣಿ. ಇಲ್ಲಿಯ ಗಣಿಗಳಲ್ಲಿ ಫಾಸ್ಪೇಟುಗಳು ಹೇರಳವಾಗಿ ಸಿಗುತ್ತವೆ.
     ಅಟ್ಲಿ , ಕ್ಲೆಮೆಂಟ್ ಆರ್ : ಇಂಗ್ಲೆಂಡಿನ ಪ್ರಢಾನಿಯಾಗಿದ್ದ ಕಾರ್ಮಿಕ ಮುಖಂಡ. ಮಧ್ಯಮವರ್ಗದ ಮನೆತನವೊಂದರಲ್ಲಿ ಹುಟ್ಟಿ ಹೆಸರಾಂತ ಹೇಲ್‍ಬರಿ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗಮಾಡಿ ಆಧುನಿಕ ಇತಿಹಾಸದಲ್ಲಿ ಪದವೀಧರರಾದರು. ಕಾನೂನನ್ನು ಅಭ್ಯಾಸಮಾಡಿ 1905ರಲ್ಲಿ ವಕೀಲರಾದರು. ಮುಂದೆ 4ವರ್ಷ ವಕೀಲಿ ವೃತ್ತಿಯ ಸಮಯದಲ್ಲಿ ಹೇಲ್‍ಬರಿಯ ಸಾಮಾಜಿಕ ಪರಿಸ್ಥಿತಿಯನ್ನು ಪ್ರತ್ಯಕ್ಷಕಂಡು ಅವರ ದಾರಿದ್ರ್ಯವನ್ನು ಅರಿತುಕೊಂಡರು. ಒಂದನೆಯ ಮಹಾಯುದ್ಧದಲ್ಲಿ ಒಂದು ವರ್ಷ ಸೇನಾಸೇವೆ ಸಲ್ಲಿಸಿ 1922ರ ತನಕ ದೀನದಲಿತರ ಉದ್ಧಾರದಲ್ಲಿ ತೊಡಗಿದರು. 1913ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಸಮಾಜ ವಿಜ್ಞಾನದ ಅಧ್ಯಾಪಕರಾಗಿ ಸೇರಿ 1923ರ ತನಕ ಸೇವೆಸಲ್ಲಿಸಿದರು. ಒಂದನೆಯ ಮಹಾಯುದ್ಧದಲ್ಲಿ ಭಾಗವಹಿಸಿದ ಅನಂತರ ಫ್ರಾನ್ಸಿಗೆ ಮರಳಿ ಅಲ್ಲಿ ಮೇಜರ್ ಹುದ್ದೆಗೇರಿದರು.