ಪುಟ:Mysore-University-Encyclopaedia-Vol-1-Part-1.pdf/೨೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಡಗಟ್ಟು - ಅಡರುಬಳ್ಳಿಗಳು ಅಡಕೆ ಎಲೆಗಳನ್ನು ಸಣ್ಣ ತುಂಡುಗಳಾಗಿ ಮಾಡಿ ದನಗಳ ಮೇವಾಗ ಉಪಯೋಗಿಸಬಹುದು. ಅಡಕೆ ಹಾಳೆಯನ್ನು ವಿವಿಧ ಮಾದರಿಯ ಹಲಗೆಗಳಾಗಿಯೂ ಚಪ್ಪಲಿಗಳಿಗೆ ಹಾಕುವ ಅಟ್ಟೆಯನ್ನಾಗಿಯೂ ಸಾಮಾನು ಸುತ್ತುವ ಕಾಗದವನ್ನಾಗಿಯೂ ಉಪಯೋಗಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅಡಕೆ ಬೆಲೆ ಇಳಿಮುಖವಾದಾಗಿನಿಂದ ಅಡಕೆಯನ್ನು ಎಣ್ಣೆ, ಪ್ರೊಟೀನ್, ರೆಸಿನ್, ಆಲ್ ಕಾಲಾಯ್ಡ್ ಗಳ ಉತ್ಪಾದನೆಗೆ ಉಪ್ಯೋಗಿಸುವ ಬಗ್ಗೆ ಪರಿಶೋಧನೆ ನಡೆಸಲಾಗುತ್ತಿದೆ. ಅಡಕೆ ತೋಟಗಳಲ್ಲಿ ವಾಣ್ಜ್ಯ ಬೆಳೆ ವೆನಿಲಾವನ್ನೂ ಇತ್ತೀಚೆಗೆ ಬೆಳೆಯಲಾಗುತ್ತಿದೆ.(ಬಿ.ವಿ.ವಿ) ಅಡಗಟ್ಟು : ಮೋಟರು ಬಂಡಿಯ ಬಲೋತ್ಪಾದಕ ಎಂಜಿನ್ನು ಮತ್ತು ವಾಹನ ಚಾಲನೆಗೆ ಅಗತ್ಯವಾದ ಯಾಂತ್ರಿಕ ಸಜ್ಜನ್ನು ಒಳಗ್ಂಡಿರುವ ಭಾಗ (ಛಾಸಿಸ್, ನ್ಯಾಧಾರ) ನಾಲ್ಕೂ ಚಕ್ರಗಳಿಂದ ಸ್ಪ್ರಿಂಗುಗಳ ಮೂಲಕ ಸೂಕ್ತ ರೀತಿಯಲ್ಲಿ ನೇತುಹಾಕಿರುವ ಲೋಹದ ಒಂದ ಚೌಕಟ್ಟು ಸಾಧಾರಣವಾಗಿ ಇದರ ಆಧಾರ. ಈಗಿನ ಸಮೂಹ ಉತ್ಪಾದನೆಗೆ ಹೊಂದಿಕೊಂಡಂತೆ ಇದ್ದು ಒಡಲಿನ (ಬಾಡಿ) ಪ್ರತ್ಯೇಕ ವಿಭಿನ್ನ ಶೈಲಿಗಳಿಗೂ ಹೊಂದಿ ಕೊಂಡು, ಅದಕ್ಕೇ ಕೂಡಿಕೊಳ್ಳುವಂತೆ ಅಡಗತ್ತು ರಚಿತವಾಗಿರುತ್ತದೆ. ಚೌಕಟ್ಟು: ಮೋಟಾರು ವಾಹನಗಳಿಗೆ ಚೌಕಟ್ಟೇ ಆಧಾರ. ಬಂಡಿಯ ಒಡಲು ಮತ್ತು ಇತರ ಸಜ್ಜುಗಳು ಅದಕ್ಕೆ ಬಂಧಿಸಲ್ಪಟ್ಟಿರುವುದರಿಂದಲೂ ಇಂಜಿನ್ನು ಮತ್ತು ಚಾಲಕ ಸಜ್ಜುಗಳನ್ನು ಅದು ಹೊತ್ತಿರುವುದರಿಂದಲೂ ಚಕ್ರಗಳು ಮತ್ತು ಅಚ್ಚಿನ ಮೂಲಕ ರಸ್ತೆಯ ಸ್ಥಿತಿಯಿಂದಾಗಿ ಅದಕ್ಕೆ ತಗಲುವ ಧಕ್ಕೆ ಮತ್ತು ಬಡಿತಗಳನ್ನು ತಡೆದು ಲೀನವಾಗಿಸಿ ಕೊಳ್ಳುವ ದೃಢತ್ವ (ರಿಜಿಡಿಟಿ) ಅದಕ್ಕಿರಬೇಕು. ಅದರ ರಚನೆಗೆ ಪರಿಗಣಿಸಬೇಕಾದ ಅಗತ್ಯ ಅಂಶಗಳೆಂದರೆ ಭದ್ರತೆ ಮತ್ತು ಅಂಗೀಕಾರಾರ್ಹವಾದ ಕನಿಷ್ಟ ಮಿತಿಯ ತೂಕ. ಎರಡೂ ಪಾರ್ಶ್ವಗಳಲ್ಲಿ ಉಕ್ಕಿನ ಒಂದೊಂದು ದ್ವಾರಕೊಳವೆ (ಚಾನಲ್) ವಿಭಾಗಗಳು ಮತ್ತು ಅವುಗಳನ್ನು ಪರಸ್ಪರ ಬಂಧಿಸುವ ಅದೇ ವಿಭಾಗದ ಅಡ್ಡ ಅಥವಾ ಕತ್ತರಿಗಟ್ಟಿನಿಂದ ಚೌಕಟ್ಟು ರಚಿತವಾಗಿರುತ್ತದೆ. ತೂಕವನ್ನು ಕಡಿಮೆಮಾಡುವ ದೃಷ್ಟಯಿಂದ ಈ ಪಕ್ಕದ ವಿಭಾಗಗಳು ಅಧಿಅಬಾಗುವ ಮಹತ್ವವಿರುವ (ಬೆಂಡಿಂಗ್ ಮೊಮೆಂಟ್) ನಡುಭಾಗದಲ್ಲಿ ಆಳವಾಗಿದ್ದು, ತುದಿಗಳತ್ತ ಬಾಗುವ ಮಹತ್ವ ಕಡಿಮೆಯಾದಂತೆ ಇವು ಕ್ರಮೇಣ ಚೂಪಾಗುತ್ತವೆ. ವಾಹನ ಚಲಿಸುತ್ತಿರುವಾಗ ಮುಂದಿನ ಚಕ್ರಗಳಿಗೆ ಸಲೀಸಾಗಿ ತಿರುಗಿಕೊಳ್ಳಲು ಅವಕಾಶವಾಗುವಂತೆ ಚೌಕಟ್ಟಿನ ಮುಂಭಾಗದ ಅಗಲ ಕಡಿಮೆಯಾಗಿರುವುದಲ್ಲದೆ ವಾಹನದ ಗುರುತ್ವಕೇಂದ್ರ ಆದಷ್ಟು ಕೆಳಮಾಟ್ಟದಲ್ಲಿದ್ದು ಹಿಂಭಾಗದ ಸ್ಪ್ರಿಂಗ್ ಜೋಡಣೆಗೆ ಹೊಂದಿಕಒಳ್ಳುವಂತೆ ಚೌಕಟ್ಟಿನ ಹಿಂದಿನ ತುದಿಯನ್ನು ಎತ್ತರಿಸಲಾಗಿರುತ್ತದೆ. ವಾಹನದ ಒಡಲು ಈ ಚೌಕಟ್ಟಿಗೆ ನೇರವಾಗಿ ಬಂಧಿತವಾಗಿರುವುದರಿಂದ ಈ ಚೌಕಟ್ಟಿನಲ್ಲೇನಾದರೂ ಬಾಗು ಅಥವಾ ತಿರುಚು (ಟ್ವಿಸ್ಟ್) ಉಂಟಾದರೆ ಅದು ಒಡಲಿಗೂ ಸಾಗಿ ವಾಹನ ಕೀಚುಗುಟ್ಟುವುದು ಮತ್ತು ರಟ-ರಟಗುಟ್ಟುವುದರಿಂದ ಅದನ್ನು ಚೌಕಟ್ಟಿನ ಕತ್ತರಿಗಟ್ಟು ತಡೆಯುತ್ತದೆ. ದ್ವಾರಕೊಳವೆಗಳ ಬದಲು ಪೆಟ್ಟಿಗೆಯಾಕಾರದ ಉಕ್ಕಿನ ದೂಲಗಳನ್ನು (ಗರ್ಡರ್) ಉಪಯೋಗಿಸುವುದರಿಂದ ದೃಢತ್ವವನ್ನು ಸಾದಿಸಿದಂತಾಗಿ ಕತ್ತರಿಗಟ್ಟನ್ನು ಉಪಯೋಗಿಸದಿರಬಹುದು. ಹಾಗೆಯೇ ವಾಹನದ ಒಡಲನ್ನೇ ಸೂಕ್ತ ರೀತಿಯಲ್ಲಿ ಭದ್ರಪಡಿಸಿ, ಚೌಕಟ್ಟಿನ ಕಾರ್ಯವನ್ನು ಲಘುವಾಗಿರಿಸಿ ರಚನೆಯನ್ನು ಸರಳಗೊಳಿಸಿರುವುದೂ ಉಂಟು. ಮುಂತುದಿಯ ಚೋಲಣೆ: ಇತ್ತೀಚಿನ ಮೋಟಾರು ವಾಹನಗಳ ಮುಂದಿನ ಚಕ್ರಗಳು ಚೌಕಟ್ಟಿನಿಂದ ಸ್ವತಂತ್ರವಾಗಿ ಚೋಲಣೆಯಾಗಿದ್ದು, ಹಿಂದೆ ಬಳಕೆಯಲ್ಲಿದ್ದ ಮುಂದಿನ ಚಕ್ರಗಳ ಸ್ಥಿರ ಅಚ್ಚಿನ ದೆಸೆಯಿಂದುಂಟಾಗುತ್ತಿದ್ದ ಮುಂಭಾಗದ ಅದಿರಾಟವನ್ನು ಎಷ್ಟೋ ಕಡಿಮೆ ಮಾಡಿವೆ. ಒಂದೊಂದು ಚಕ್ರದ ಚಲನೆಯೂ ಒಂದು ಮಿತಿಗೊಳಪಟ್ಟು ಮತ್ತೊಂದರಿಂದ ಅಬಾದಿತವಾಗಿರುತ್ತದೆ. ಸಾಮಾನ್ಯವಾಗಿ ಚಕ್ರ ಎರಡು ಸಮಾನಾಂತರಕೊಂಡಿಗಳ ಅಥವಾ ಹತೋಟಿಯ ತೋಳುಗಳ ಹಿಡಿತದಲ್ಲಿದ್ದು, ಕೆಳತೋಳಿಗೂ ಚೌಕಟ್ಟಿಗೂ ಸುರುಳಿ (ಸ್ಪ್ರಿಂಗ್) ಇರುತ್ತದೆ. ಚಲನೆಯಲ್ಲಿ ಒಂದು ಚಕ್ರ ಸ್ವಲ್ಪ ಮೇಲಕ್ಕೂ ಮತ್ತೊಂದು ಕೆಳಕ್ಕೂ ಹೋದಾಗ ಹೆಚ್ಚು ಕಡಿಮೆ ಲಂಬವಾದ ನಿಲುವುಂಟಾಗುವಂತೆಯೂ ಇದು ಬಾಗಿ ತಿರುಗುವಾಗ ಚಾಲಕ ಚಕ್ರ (ಸ್ಟಿಯರಿಂಗ್) ವಾಸ್ತವಿಕ ಹತೋಟಿಗೊಳಪಟ್ಟಿರುವಂತೆಯೂ ಎರಡೂ ಚಕ್ರಗಳ ನಡುವೆ ತಿರುಗಿಸುವ ಮತ್ತು ದೃಢಗೊಳಿಸುವ ಕೊಂಡಿಗಳಿರುತ್ತವೆ. ಹಿಂತುದಿಯ ಚೋಲಣೆ: ಹಿಂಭಾಗದ ಚಕ್ರಗಳಿಗೂ ಸ್ವತಂತ್ರ ಚೋಲಣೆಯ ಪ್ರಯತ್ನ ನಡೆದಿದ್ದರೂ ಇದು ಸಾಮಾನ್ಯವಾಗಿ ಬಳಕೆಯಲ್ಲಿರದೆ, ರೇಕು ಪದರದ (ಲಾಮಿನೇಟೆಡ್ ಲೀಫ್) ಸ್ಪ್ರಿಂಗು ಅಥವಾ ಸುರುಳಿ ಮತ್ತು ನಾಭಿ ಕೊಂಡಿ (ರೇಡಿಯಸ್ ರಾಡ್) ಇವುಗಳ ಮೂಲಕ ಚೋಲಣೆಯಾಗಿರುವ ಹಿಂಬದಿಯ ಅಚ್ಚಿನ ರಚನೆಯೇ ಹೆಚ್ಚು ಬಳಕೆಯಲ್ಲಿದೆ. ರಸ್ತೆಯ ಧಕ್ಕೆಯನ್ನು ಲೀನಗೊಳಿಸುವುದನ್ನು, ಬಿರಿ (ಬ್ರೇಕ್) ಹಾಕುವಾಗ ಮತ್ತು ಚಾಲನೆಯಲ್ಲಿ ತಿರುಗಿ ಪ್ರತಿಕ್ರಿಯೆಯನ್ನು ತಡೆದುಕೊಳ್ಳುವುದನ್ನು ಗಮನದಲ್ಲಿರಿಸಿ ಚೋಲಣೆಯ ರಚನೆಗೆ ಲಕ್ಷ್ಯಕೊಡಬೇಕಾಗುತ್ತದೆ. ರೇಕುಪದರದ ಸುರುಳಿಯನ್ನು ಉಪಯೋಗಿಸಿರುವಲ್ಲಿ ಅದರ ಒಂದು ತುದಿಯನ್ನು ಚೌಕಟಿಗೆ ತಿರುಗಣಿಯಾಗಿರುವಂತೆ ನೇರವಾಗಿ ಕಟ್ಟಿ ಮತ್ತೊಂದು ತುದಿಯನ್ನು ಒಂದು ತೂಗುಕೊಂಡಿಯ ಮೂಲಕ ಬಂಧಿಸಿರುವುದರಿಂದ, ಸುರುಳಿ ಬಾಗುವುದರಿಂದ ಆಗುವ ಅದರ ಉದ್ದದಲ್ಲಿನ ವ್ಯತ್ಯಾಸಕ್ಕೆ ಅವಕಾಶ ಕೊಟಂತಾಗುತ್ತದೆ. ಹಿಂಬದಿಯ ಅಚ್ಚಿನ ಆವರಣ (ಹೌಸಿಂಗ್) ಕೋಶವನ್ನು ಸುರುಳಿಯ ಎರಡೂ ತುದಿಗಳ ನಡು ಭಾಗದಲ್ಲಿ ಬಂಧಿಸಲಾಗಿರುತ್ತದೆ. ಧಕ್ಕಾ ಲೀನಕ್ಕೆ ಹಾಗೂ ದ್ರುಡಕಾರಕಗಳು: ಸುರುಳಿಗಳ ಪ್ರವಣತೆ ಮತು ಆರಂಭದಲ್ಲಿನ ಅಧಿಕ ಸಂಕೋಚನ ಅಥವಾ ವಿಸ್ತರಣ ಇವುಗಳನ್ನು ತಡೆಯಲು ಧಕ್ಕಾ ಲೀನಕಗಳನ್ನು (ಷಾಕ್ ಅಬ್ಸಾರ್ಬರ್) ಉಪಯೋಗಿಸಲಾಗುತ್ತದೆ. ವಿವಿಧ ಬಗೆಯಲ್ಲಿದ್ದು ಸಾಮಾನ್ಯವಾಗಿ ದ್ರವ್ಯ ಸಾಮರ್ಥ್ಯದ (ಹೈಡ್ರಾಲಿಕ್) ರೀತಿಯವಾಗಿದ್ದು ನಾಲ್ಕು ಚಕ್ರಗಳೂ ಅವುಗಳ ಅಚ್ಚು ಮತ್ತು ಚೌಕಟ್ಟಿನ ನಡುವೆ ಅಳವಡಿಸಲಾಗಿರುತದೆ. ರಸ್ತೆಯ ತಿರುವಿನಲ್ಲಿ ಬಂಡಿಯು ಉರುಳುವಂತಾಗುವ ಪ್ರವೃತ್ತಿ ದೃಢಕಾರಕ ಕೊಂಡಿಯ ತಿರುಚುವಿಕೆಯಿಂದಾಗಿ ತಡೆಯಲ್ಪಡುವುದಾಗಿದ್ದು ಹಿಂದಿನ ಮತ್ತು ಮುಂದಿನ ಚಕ್ರಗಳೆರಡಕ್ಕೂ ಉಪಯೋಗದಲ್ಲಿರುತ್ತದೆ. ಬಿರಿಗಳು: ಮೋಟಾರು ವಾಹನಗಳು ಸಾಮಾನ್ಯವಾಗಿ ಎರಡು ರೀತಿಯ ಪ್ರತ್ಯೇಕ ಬಿರಿಗಳಿಂದ (ಬ್ರೇಕ್ಸ್) ಸಜ್ಜಾಗಿರುತ್ತವೆ. ವಾಹನ ಚಲಿಸುತ್ತಿರುವಾಗ ಉಪಯೋಗಿಸುವ ಕಾಲಮೆಟ್ಟಿನಿಂದ ಪ್ರಚಲಿತವಾಗುವ ದ್ರವಚಾಲಿತ ಬಿರಿಯೊಂದು, ವಾಹನವನ್ನು ನಿಲ್ಲಿಸಿರುವಾಗ ಬಾಳಸುವ ಮೇಟು ಸರಳಿನಿಂದ ಪ್ರಚಲಿತವಾಗುದಿನ್ನೊಂದು, ಕಾಲುಮೆಟಿನ ಒತ್ತಡಕ್ಕಿಂತ ಹೆಚ್ಚು ಬಲ ಅಗತ್ಯವಾಗುವ ಭಾರವಾದ ಟ್ರಕ್ಕು ಮತ್ತು ಬಸ್ಸುಗಳಲ್ಲಿ ವಾಯುಪ್ರೇರಿತ ಬಿರಿಯನ್ನು ಉಪಯೋಗಿಸಲಾಗುತ್ತದೆ. ಚಕ್ರಗಳು ಮತ್ತು ಟೈರುಗಳು: ಪ್ರಾರಂಭದಿಂದಲೂ ಹಲವು ರೀತಿಯ ಮಾರ್ಪಾಡುಗಳಿಗೊಳಗಾಗಿರುವ ಮೋಟಾರು ವಾಹನ ಚಕ್ರದ ಈಗಿನ ಮಾದರಿ ಸಮಗ್ರ ಅಂಚುಳ್ಳ ಒತ್ತಿಕ್ಕಿ ರೂಪಿಸಿದ ಉಕ್ಕಿನ ಪಾಳೆಯದಾಗಿದ್ದು ಸಮಗ್ರವಾಗಿ ಅದನ್ನು ಹೊರತೆಗೆದು ಟೈರನ್ನು ಬದಲಾಯಿಸುವುದು ಸಾದ್ಯವಾಗಿದೆ. ಹಾಗೆಯೇ ಟೈರೂ ಸಹ, ಹಿಂದೆ ನೀಡುತ್ತಿದ್ದ ಅಧಿಕ ಒತ್ತಡದಿಂದ ಇಂದಿನ ಕೆಳ ಒತ್ತಡಕ್ಕಿಳಿದಿರುವುದಲ್ಲದೆ, ಅದರ ಮೇಲೆ ಬಿಳುವ ಹೊರೆಯಿಂದಾಗಿ ಅದರ ಆಯುಷ್ಯ ಕ್ಶೀಣಿಸುವುದನ್ನು ತಡೆಗತ್ತಲು ವೈಜ್ನ್ಯಾನಿಕ ರೀತಿಯ ಮೆಟುಗಳ ವಿನ್ಯಾಸ. ಗಾಳಿ ಇಳಿದುಹೋಗದ ಟ್ಯೂಬುಗಳು-ಇತ್ಯಾದಿ ವಿಧಾನಗಳಿಂದ ಟೈರಿನ ತಯಾರಿಕೆಯಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಚಾಲಕ (ಸ್ತಿಯರಿಂಗ್) ಗೇರ್:ಮೋಟಾರು ವಾಹನದ ಚಾಲಕಚಕ್ರವನ್ನು ಒಂದು ಉದ್ದನೆಯ ಚಾಲಕಸ್ತಂಭದ ಮೂಲಕ ಅದರ ಸುತ್ತ್ತುಚಲನೆಯನ್ನು ನೇರ ಚಲನೆಯನ್ನಾಗ ಮಾರ್ಪಡಿಸುವ ವರ್ಮ್ ಮತ್ತು ವರ್ಮ್ ವೃತ್ತಖಂಡದ ವ್ಯೂಹಕ್ಕೆ ಸೇರಿಸಲಾಗಿರುತ್ತದೆ. ಈ ನೇರಚಲನೆ ಸೂಕ್ತ ಕೊಂಡಿವ್ಯೂಹದ ಮೂಲಕ ಮುಂದಿನ ಎರಡು ಚಕ್ರಗಳಿಗೂ ಒಯ್ಯಲ್ಪಟ್ಟು ಅವು ತಿರುಗುವಂತೆ ಮಾಡುತ್ತದೆ. ಅಡಪು : ನೇರವಾಗಿ ನಾಯಿಯಿಂದಲೋ ಅದರ ತಳಹಾಸು, ಬಟ್ಟೆ ಬೆರೆ, ಕುಂಚಗಳ ಮೂಲಕವೋ ಮಾನವನಿಗೂ ಅಂಟಬಹುದಾದ ಕಜ್ಜಿ. ಮೈಕೈಗೆಲ್ಲ ಹರಡುವುದು ಅಪೂರ್ವ. ಕೈ ಬೆರಳುಗಳಿಗೆ ಅಂಟಿ ಕೆಲವು ಕಾಲ ಇದ್ದು ಹೋಗುವ ಅಂಟುರೋಗ, ಕಜ್ಜಿ ಹತ್ತಿಸುವ ಹುಳಿದ ಜಾತಿಗಳು ಒಂದೊಂದು ಪ್ರಾಣಿಯಲ್ಲೂ ಬೇರೆಬೇರೆ ಆಗಿರುವುದರಿಂದ ಇನ್ನೊಂದು ಪ್ರಾಣಿಯನ್ನು ಸೇರಿದಾಗ ಬೇಗನೆ ಸಾಯುತ್ತವೆ. ನಾಯಿಕಜ್ಜಿಯ ಹುಳ ಮಾತ್ರ ಹೀಗೆ ಬೇಗ ಸಾಯದು. ನಾಯಿಯಿಂದ ಬಂದ ಕಜ್ಜಿಗೂ ಮನುಷ್ಯನ ಕಜ್ಜಿಯ ಚಿಕಿತ್ಸೆಯೇಸಕಾಗುವುದು. ಕುರಿಗಳಲ್ಲಿ ಅಪೂರ್ವವಾಗಿ ಈ ಕಜ್ಜಿ ಅಂಟುವುದಾದರೂ ಸಾಕಿದ ಪ್ರಾಣಿಗಳಲ್ಲಿ ನಾಯಿ, ಬೆಕ್ಕು, ಕುದುರೆಗಳಲ್ಲಿ ಸಾಮಾನ್ಯ. ದನಕರುಗಳಿಗೂ ನರಿ, ಹಂದಿಗಳಿಗೂ ಹತ್ತಬಹುದು. ಹಕ್ಕಿಗಳಲ್ಲಿ ಕಜ್ಜಿ ಎದ್ದರೆಪುಕ್ಕಗಳು ಉದುರುತ್ತವೆ. ಒಂದೊಂದು ಪ್ರಾಣಿಯ ಕಜ್ಜಿಹುಳವು ಬೇರೆಯಾಗಿದ್ದರೂ ನಾಯಿಗೆ ಮಾತ್ರ ಎರಡು ಜಾತಿ ಹುಳದ ಕಜ್ಜಿ ಹತ್ತಬಹುದು. ಅದರಲ್ಲೂ ಕರಿಕಜ್ಜಿ ಹತ್ತಿದರಂತೂ ವಾಸಿಯಾಗುವುದು ತೀರ ಕಷ್ಟ. (ಡಿ.ಎಸ್.ಎಸ್) ಅಡರುಬಳ್ಳೀಗಳು : ದುರ್ಬಲವಾದ ಕಾಂಡಗಳನ್ನು ಪಡೆದಿದ್ದು ತಮಗೆ ತಾವೇ ನೇರವಾಗಿ ಇತರ ಗಿಡಗಳಂತೆ ಬೆಳೆಯಲಾರದ ಸಸ್ಯಗಳು (ಕ್ಲೈಂಬರ್ಸ್). ಇವು ಮೇಲ್ಮುಖವಾಗಿ ಬೆಳೆಯಲು ಬೇರೆ ಆಧಾರಗಳು ಬೇಕು. ಇಂಥ ಬೆಂಬಲ ದೊರೆತಾಗ, ಆಶ್ರಯದಾತ ಸಸ್ಯಗಳನ್ನೂ ಯಾವುದೇರೀತಿಯ ಕಂಬ ಇತ್ಯಾದಿ ವಸ್ತುಗಳನ್ನೂ, ತಮ್ಮ ಮುಖ್ಯ ಕಾಂಡದಿಂದ ಇಲ್ಲ್ವೆ ಕೆಲವು ರೀತಿಯ ವಿಶೇಷ ರೀತಿಯ ಅಂಗಾಂಗಗಳ ನೆರವಿನಿಂದ, ಸುತ್ತಿಕೊಂಡು, ಏರಿಕೊಂಡು ಬೆಳೆಯುತ್ತವೆ. ಇವಕ್ಕೆ ಸುರುಳಿಬಳ್ಳಿಗಳು (ಟ್ವೈನರ್ಸ್), ಏರುಬಳ್ಳಿಗಳು(ಸ್ಟ್ರಾಗ್ಲರ್ಸ್) ಎಂಬ ಇನ್ನಿತರಹೆಸರುಗಳೂ ಉಂಟು. ಎಲ್ಲ ಅಡರುಬಳ್ಳಿಗಳೂ ಬೆಂಬಲವಿತ್ತ ವಸ್ತುಗಳನ್ನು ಹತ್ತಿ, ಹಬ್ಬಿ ಬೆಳೆಯದೇ ಇರಬಹುದು. ಅನೇಕ ಪೊದೆಗಳು ಮಂದಗತಿಯಲ್ಲಿ ಬೆಳೆದು ಬೆಂಬಲ ದೊರೆತಾಗ ಮಾತ್ರ ವಿಶೇಷ ಉಪಾಂಗಗಳನ್ನು ಬೆಳೆಸಿಕೊಂಡು ವೃದ್ಧಿಯಾಗುವುವು. ಕೆಲವು ಗುಲಾಬಿ