೨೪೨ ಅತಿಶೀತಶಾಸ್ತ್ರ 60,000' – 70,000' ಎತ್ತರಕ್ಕೆ ಮುಟ್ಟಿ, ಮ್ಯಾಖ್ ಅಂಕ 2-3ರ ವರೆಗಿನ ಅತಿಶಬ್ದ ವೇಗದಲ್ಲಿ ವಿಮಾನ ಕ್ರಮಿಸುತ್ತದೆ, ಮೊಳಗಿನ ಸಾಂದ್ರತೆ ವಿಮಾನದ ಗಾತ್ರ ಮತ್ತು ತೂಕಗಳಿಗೂ ಅನುಗುಣವಾಗಿರುವುದರಿಂದ ಅತಿಶಬ್ದ ವಿಮಾನ ಯಾನ ಅಭಿವೃದ್ಧಿ ಹೊಂದುವುದರೊಡನೆಯೇ ಈ ಮೊಳಗಿನ ಸಮಸ್ಯೆಗೂ ಪರಿಹಾರ ಕಾಣಬೇಕಾಗಿರುತ್ತದೆ. ಯಾನದ ಆಕೃತಿ (ಪ್ಲಾನ್ ಫಾರಮ್): ಅತಿಶಬ್ದ ವೇಗ ಯಾನದ ತರಂಗ ಸೆಳೆತವನ್ನು ಮಿತಿಯಲ್ಲಿದ ಲೋಸುಗ ಅದರ ದಪ್ಪ ಉದ್ದ – ಇವುಗಳ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕಾದ್ದು ಉಚಿತವಾದರೂ ಯಾನದ ಆವಶ್ಯಕ ತೂಕ ಮತ್ತು ಸದ್ಯತೆಗಳನ್ನು ಗಮನದಲ್ಲಿಟ್ಟಿರಬೇಕಾಗುತ್ತದೆ, ಆದ್ದರಿಂದ ಈ ತರಂಗ ಸೆಳೆತವನ್ನು ಬೇರೆ ರೀತಿಗಳಲ್ಲಿ ಕಡಿಮೆಗೊಳಿಸಬಹುದಾದ ಸಾಧ್ಯತೆಯನ್ನು ಅನ್ವೇಷಿಸಲಾಗುತ್ತಿದೆ. ಬೂಸ್ಮಾನ್ನಂದ ಸೂಚಿತವಾದ ದ್ವಿಫಲಕ ವಿಮಾನ (ಬೈ ಪ್ಲೇನ್) ಇವುಗಳ ಲ್ಲೊಂದು. ಇದು ಒಂದರ ಮೇಲೊಂದರಂತೆ ಎರಡು ಆಧಾರ ಫಲಕಗಳುಳ್ಳದ್ದಾಗಿದ್ದು, ಮೇಲಿನ ರೆಕ್ಕೆಯಿಂದ ಉತ್ಪಾದಿತವಾದ ತರಂಗಗಳು ಕೆಳಗಿನ ರೆಕ್ಕೆಯಿಂದಾದ ತರಂಗಗಳಿಂದ ಸರಿದೂಗಿಸಲ್ಪಟ್ಟ ಸದಸ್ಯರ ಅಲ್ಪಸುವುದರಿಂದ ಪ್ರಭಾವ ವಿತವಾಗುತ್ತವೆ, ತರಂಗ ಸೆಳವೂ ಇಲ್ಲವಾಗುತ್ತದೆ. ಬೆಳ್ಳಿಗಳು ಹಿಂದಕ್ಕೆ ಬೇಡಿಕೊಂಡಂತಿರುವರು (ವ್ ಬ್ಯಾಕ್) ಇನ್ನೊಂದು ರಚನಾವೈಖರಿ. ರೆಕ್ಕೆಯ ಮುಂಚೂಣಿಯ ಏಣಿನ ಲಂಬದಿಶೆಯ ವೇಗಪರಿಮಾಣಕ್ಕೆ ಅನುಗುಣವಾಗಿ ಸೆಳೆತ ಇರುವುದರಿಂದ ರೆಕ್ಕೆಯನ್ನು ಆದಷ್ಟು ಹಿಂಬದಿಗೆ ಬೀಸುವುದರಿಂದ ಅದರ ವೇಗ ಎಷ್ಟೇ ಇದ್ದರೂ ಈ ದಿಶೆಯ ಅದರ ವೇಗ ಪರಿಮಾಣವನ್ನು ಶಬ್ದಮಿತಿಗೆ ಒಳಪಡಿಸಲು ಸಾಧ್ಯ. ಅತಿಶಬ್ದವೇಗದ ಸೈನಕವಿಮಾನಗಳು ಈ ರೀತಿ ಬಾಣದ ತುದಿಯ ಅಥವಾ ಡಟ್ಟದ (A) ಆಕಾರವನ್ನು ಹೊಂದಿರುತ್ತವೆ ಇಲ್ಲಿ ಒಂದು ಸಮಸ್ಯೆ ಉದ್ಭವಿಸುತ್ತದೆ. ಒಂದು ಶಬ್ದಾತೀತ ವೇಗಕ್ಕೆ ಸರಿಹೊಂದುವಂತೆ ರೆಕ್ಕೆಗೆ ಹಿಂಬೀಸಿದಂತೆ ಯಾವ ಆಕಾರವನ್ನು ಕೊಟ್ಟರೂ ಮಿಕ್ಕ ವೇಗಗಳಿಗೆ ಅದರ ಗುಣಲಕ್ಷಣ ಸರ್ವಸಮರ್ಪಕವಾಗಿ ಹೊಂದಿಕೊಳ್ಳದಿದ್ದರಿಂದ ಬಗೆ ಬಗೆಯ ರೇಖಾವಿನ್ಯಾಸಗಳನ್ನು ವಿವರವಾಗಿ ಪರೀಕ್ಷಿಸಲಾ ಯಿತು. ರಕ್ಕೆಗಳ ವಿನ್ಯಾಸ ಒಂದೇ ರೇಖಾವಿನ್ಯಾಸಗಳನ್ನು ವಿವರವಾಗಿ ಪರೀಕ್ಷಿಸಲಾಯಿತು. ರೆಕ್ಕೆಗಳ ವಿನ್ಯಾಸ ಒಂದೇ ಆಕೃತಿಯಲ್ಲಿರುವ ಬದಲು ವೇಗಕ್ಕನುಗುಣವಾಗಿ ಮಡಿಸಿ ಕೊಳ್ಳುವಂತಿದ್ದರೆ ಅಧಿಕ ಮ್ಯಾಖ್ ಅಂಕದ ಯಾನದಲ್ಲಿ, ಬಾಣದ ತುದಿಯಂತೆ ರೆಕ್ಕೆಗಳನ್ನು ಹಿಂದಕ್ಕೆ ಮಡಚಿಕೊಂಡು ಅಧಿಕ ದಕ್ಷತೆಯಿಂದ ಹಾರುವುದಲ್ಲದೆ, ಕಡಿಮೆ ವೇಗದ ಮತ್ತು ಶಬ್ದಮಿತ ನಿರ್ವಹಣೆಯಲ್ಲಿ ರೆಕ್ಕೆಗಳನ್ನು ಮುಂದಕ್ಕೆ ಚಾಚುವುದರಿಂದ ಅಗತ್ಯವಾದ ನಗವನ್ನು ಉಂಟುಮಾಡಿಕೊಳ್ಳಲಾಗುವುದಲ್ಲದೆ ಯಾನದ ದಕ್ಷತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರುತ್ತದೆ. ಚಿತ್ರ 3, ರಸ್ತೆಯ ಸುತ್ತಲಿನ ವಿವಿಧ ವೇಗದ ಪ್ರವಾಹ (V) ಮತ್ತು ಉಂಟಾಗುವ ನೆಗನು (L) ಬಲೋತ್ಪಾದಕದ ವಿಕಾಸ: ಸದ್ಯದಲ್ಲಿನ ಅತಿಶಬ್ದ ವೇಗದ ಸೈನಿಕ ವಿಮಾನಗಳ ಉರುವಲಿನ ವ್ಯಯ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಇವು ಶಬ್ದಾತೀತ ವೇಗದಲ್ಲಿ ಬಹುದೂರಕ್ಕೆ ಹೋಗುವಂತೆ ರೂಪುಗೊಂಡವಲ್ಲ. ವಾಸ್ತವವಾಗಿ ಇವು ಶಬ್ದ ಮಿತಗಮನದ ವಿಮಾನಗಳೇ ಆಗಿದ್ದು, ಶಬ್ದಾತೀತ ವೇಗಕ್ಕೆ ನುಗ್ಗಬಲ್ಲ ಸಾಮರ್ಥ್ಯವುಳ್ಳವಾಗಿರುತ್ತವೆ. ಟರ್ಬೊ ಜೆಟ್ ಎಂಜಿನ್ನಿನಲ್ಲಿ ತರುವಾಯದ ದಹನವನ್ನುಂಟು ಮಾಡುವುದರಿಂದ ಇದು ಸಾಧ್ಯವಾಗುತ್ತದೆ. ಸಣ್ಣ ಎಂಜಿನ್ನನಲ್ಲೂ ಈ ರೀತಿ ಅಧಿಕ ನೂಕು ಬಲವನ್ನು ಉತ್ಪಾದಿಸಬಹುದಾದರೂ ವೆಚ್ಚ ಅಧಿಕವಾಗುತ್ತದೆ. ಅತಿಶಬ್ದವೇಗದ ವಾಹಕಗಳೀಗಾಗಿಯೇ ರೂಪುಗೊಂಡ ಎಂಜಿನ್ನು ತನ್ನ ಸಾಮಾನ್ಯ ಯಾನದ ವೇಗದಲ್ಲಿ ಒಟ್ಟಾರೆ ದಕ್ಷತೆಯನ್ನು ಅಧಿಕವಾಗಿ ಹೊಂದಿದ್ದಾಗಿರಬೇಕು. ಹೊಸದಾಗಿ ರೂಪುಗೊಳ್ಳುತ್ತಿರುವ ಟರ್ಬೊ ಫ್ಯಾನ್ ಎಂಜಿನ್ನುಗಳು, ಶಬ್ದರೇಖೆಯನ್ನು ದಾಟಲು ಬೇಕಾದ ವೇಗೋತ್ಕರ್ಷಕ್ಕೆ ಅಗತ್ಯವಾದಷ್ಟು ಮಾತ್ರ ತರುವಾಯದ ದಹನವನ್ನುಂಟುಮಾಡಿ ಅನಂತರ ವಿಮಾನ ತನ್ನ ರೂಪಿತ ಮ್ಯಾಖ್ ಅಂಕದಲ್ಲಿ ಮಿತ ಉರುವಲಿನ ವ್ಯಯದಿಂದ ಯಾನ ಮಾಡಲು ಸಾಧ್ಯವಾಗುವಂತೆ ರಚಿತವಾಗುತ್ತವೆ. ಅಲ್ಲದೆ ಇದು ಕಡಿಮೆ ಆರ್ಭಟ ಮಾಡುವವಾಗಿದ್ದು ಹೆಚ್ಚದಂತೆ ಮಿತಗೊಳಿಸುತ್ತವೆ. ಪಕ್ಕಾ ತರಂಗ - జాడు ಚಿತ್ರ 4. ಬೂಸ್ಮಾನ್' ದ್ವಿಫಲಕ ವಿಮಾನ ಸುತ್ತಲಿನ ಪ್ರವಾಹ ಅಮೆರಿಕದ ಅತಿಶಬ್ದವೇಗದ ವಾಹಕಯಾನ ಕಾರ್ಯಕ್ರಮದಂತೆ, 1970ರಲ್ಲಿ ಪ್ರಥಮ ಹಾರಾಟ ನಡೆಸಿ 1974ರ ವೇಳೆಗೆ ವಾಣಿಜ್ಯ ಸೇವೆಗೆ ಒದಗುವಂತೆ ರೂಪಗೊಳ್ಳುತ್ತಿರುವ, ಗಂಟೆಗೆ 2000 ಮೈಲಿ ವೇಗದಲ್ಲಿ ಯಾನಮಾಡಬಲ್ಲ ವಿಮಾನಗಳನ್ನು ಈಗಾಗಲೇ ಸಿದ್ಧಗೊಳಿಸಲಾಘುತ್ತಿದೆ. ಇವು ಮಡಿಚಬಲ್ಲ ರೆಕ್ಕೆಗಳನ್ನು ಹೊಂದಿದ್ದು ರೆಕ್ಕೆಗಳ ಹರಹನ್ನು 200-72° ವರೆಗೆ ಬದಲಾಯಿಸಿಕೊಳ್ಳುವಂತಿರುತ್ತವೆ. ಇಂಥ ವಿಮಾನದ ಉದ್ದ 306', ಅಗಲ 197', ಒಳಗಿನ ಎತ್ತರ 88'. ಅತಿಶು ವೇಗದಲ್ಲಿ 2003 ಸಮುದ ವಿಮಾನಗಳ ವಿಶಿಷ್ಟ ಅಗತ್ಯಗಳ ಪೂರೈಕೆಗಾಗಿ ಮಿಶ್ರಲೋಹಗಳನ್ನು ವಿಮಾನ ರಚನೆಯಲ್ಲಿ ಉಪಯೋಗಿಸಲಾಗುತ್ತದೆ. (ಕೆ.ಎ.ಎಸ್.) ಅತಿಶೀತವಾದ್ರೆ - ಆತಿ ತಾರಸಿ ಅದರ ಮಾತನ, ಅನಾವಸ್ಥೆಯಲ್ಲಿ ಉ೦ಟಾಗುವ ಪರಿಗಮಗಳು ಮತ್ತು ಅವುಗಳ ವಿವರಣೆಯನ್ನೊಳಗೊಂಡಿರುವ ಶಾಸ್ತ್ರ (ಕ್ರಯೋಜೆನಿಕ್ಸ್: ಲೋಟೆಂಪರೇಚರ್ ಫಿಸಿಕ್ಸ್), ಸಾಮಾನ್ಯವಾಗಿ ಪ್ರಯೋಗಶಾಲೆಗಳಿ ಗಿಂತ ಕಡಿಮೆ ಉಷ್ಣತೆಯಲ್ಲಿ ನಡೆಸುವ ಅಧ್ಯಯನ ಅತಿಶೀತಶಾಸ್ತ್ರದ ವ್ಯಾಪ್ತಿಗೆ ಒಳಪಟ್ಟಿದೆ. ನಿಖರವಾಗಿ ಹೇಳುವುದಾದರೆ ಆಕ್ಸಿಜನ್ನ ಕುದಿಬಿಂದುವಿಗಿಂತ ಕಡಿಮೆ ಉಷ್ಣತೆಗೆ ಸೇರಿದ ಪ್ರಯೋಗಗಳನ್ನು ಇದರಲ್ಲಿ ಗಣಿಸುತ್ತಾರೆ. ಆಟೋತ್ಪಾದನೆ ಅತಿಕಾವ್ಯ ಉಷ್ಣತೆಯನ್ನು ಸೃಜಿಸುವ ಕಾರ್ಯ ಒಂದು ಸಾಹಸವೇ ಆಗಿದೆ. ಒತ್ತಡ ಮತ್ತು ಉಷ್ಣತೆಗಳ ಪರಸ್ಪರ ಸಂಬಂಧವನ್ನು ಕುರಿತು ಆಮನ್ಟನ್ಸ್ ನಡೆಸಿದ ಪ್ರಯೋಗಗಳಿಂದ ನಿರಪೇಕ್ಷ ಶೂನ್ಯಾಂಶ-2730 ಸೆಂ.ಗ್ರೇ. ಎಂದು ಮೊದಲಬಾರಿಗೆ ತಿಳಿಸಿದ. ಮುಂದೆ ಉಷ್ಣಚಲನಶಾಸ್ತ್ರದ ಭದ್ರ ತಾತ್ವಿಕ ತಳಹದಿಯ ಪ್ರಕಾರ ಇದರ ನಿಖರವಾದ ಬೆಲೆ-27316° ಸೆಂ.ಗ್ರೇ, ಎಂದು ಸ್ಥಿರವಾಯಿತು. ಇದನ್ನು ಕೆವೈಷ್ಣವ ನಿರಪೇಕ್ಷ ಯಂತ್ರ (ಟ್) ಉಪಮಾಪಕದಲ್ಲಿ (ಅಥವಾ ಸರಳವಾಗಿ ನಿರಪೇಕ್ಷ ಉಷ್ಣತಾಮಾಪಕದಲ್ಲಿ) 0° ಕೆಲ್ವಿನ್ ಅಥವಾ 0° K ಎಂದು ಪರಿಗಣಿಸುತ್ತಾರೆ. ಈ ಮಾಪಕದಲ್ಲಿ ನೀರಿನ ಕುದಿಬಿಂದುವಿನ ಉಷ್ಣತೆ 373.16° ಏ (100 ಸೆಂ. ಗ್ರೇ.) ಅತಿಶೀತವನ್ನುಂಟುಮಾಡುವುದೆಂದರೆ, ಪ್ರಾಯೋಗಿಕವಾಗಿ ಆಕ್ಸಿಜನ್, ಗಾಳಿ ಹಾಗೂ ಶಾಶ್ವತ ಅನಿಲಗಳೆಂದು ಕರೆಯಲಾಗುವ ಹೈಡೋಜನ್, ಹೀಲಿಯಂಗಳನ್ನು ದ್ರವೀಕರಿಸುವುದು ಎಂದು ತಿಳಿಯುತ್ತೇವೆ. ಈ ಕ್ರಿಯೆಯನ್ನು ಸಾಮಾನ್ಯವಾಗಿ ಎರಡು ವಿಧಾನಗಳಿಂದ ನೆರವೇರಿಸುತ್ತೇವೆ. 1. ಬಾಹ್ಯ ಕೆಲಸವನ್ನು ಮಾಡುವ ಸಮೋಷ್ಣವಿಕಾಸವಿಧಾನ (ಏಡಿಯಾಬಿಟಿಕ್ ಎಕ್ಸ್ಪ್ಯಾನ್ಸನ್) 2. ಚೌಲ್-ಕೆಲ್ವಿನ್ ಪರಿಣಾಮವನ್ನು ಆಧರಿಸುವ ನಿಯಂಕ ಕವಾಟವಿಕಾಸ (ಥಾಟಲ್ ಎಕ್ಸ್ಪ್ಯಾನ್ಸನ್) ವಿಧಾನ. ಈ ಎರಡು ವಿಧಾನಗಳಲ್ಲಿಯೂ ದ್ರವೀಕರಿಸಬೇಕಾದ ಅನಿಲವನ್ನು ಮೊದಲು ಸಮತಾಪಸಂಪೀಡನೆಗೆ (ಐಸೊಥರ್ಮಲ್ ಕಂಪ್ರೆಶನ್) ಒಳಪಡಿಸಲಾಗುವುದು. ಅನಂತರ, ಮೊದಲನೆಯ ವಿಧಾನದಲ್ಲಿ, ಅವಧಿಕ (ಕ್ರಿಟಿಕಲ್) ಉಷ್ಣತೆಗಿಂತ ಕಡಿಮೆ ಉಷ್ಣತೆಗೆ
ಪುಟ:Mysore-University-Encyclopaedia-Vol-1-Part-1.pdf/೨೪೨
ಗೋಚರ