ಪುಟ:Mysore-University-Encyclopaedia-Vol-1-Part-1.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಕ್ಷ ವಸ್ತು ಮತ್ತು ಇವೆರಡಕ್ಕೂ ಮಧ್ಯವರ್ತಿಯಾದ ಅಂತಃಕರಣವೃತ್ತಿ- ಇವು ಮೂರು ಇರಬೇಕು. ಈ ಅಂತಃಕರಣವೃತ್ತಿ ತಿಳಿಯಬೇಕಾದ ವಸ್ತುವಿಗೆ ಸದೃಶವಾದ ಆಕಾರವನ್ನು ಪಡೆಯುತ್ತದೆ. ಈ ಅಕಾರ ಹುಟ್ಟಬೇಕಾದರೆ, ಬುದ್ಧಿಯಲ್ಲಿರುವ ತಮಸ್ ಮತ್ತು ರಜಸ್ ಕರಗಿ, ಸತ್ತ್ವಗುಣ ಮಾತ್ರ ವಿಕಾಸವಾಗಬೇಕು. ಈ ಸತ್ತ್ವಗುಣ ವಿಕಾಸವಾದಾಗಲೇ ನಮಗೆ ಜ್ಞಾನ ಪ್ರಾಪ್ತಿ. ಈ ರೀತಿ ಹುಟ್ಟಿದ ಜ್ಞಾನಕ್ಕೆ ಅಧ್ಯವಸಾಯ ಎಂದು ಹೆಸರು. ಅಧ್ಯಕ್ಷ: ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ಶಾಸನಸಭೆಗಳಲ್ಲಿ ಕಾರ್ಯಕಲಾಪಗಳನ್ನು ನಿಯಂತ್ರಿಸುವುದಕ್ಕೆ, ಆ ಸಭೆಗಳ ಘನತೆ ಗೌರವಗಳನ್ನು ಕಾಪಾಡುವುದಕ್ಕೆ, ಆರಿಸಲ್ಪಟ್ಟ ಅಧಿಕಾರಿ (ಸ್ಪೀಕರ್). ಶಾಸನ ಸಭೆಯಲ್ಲಿ ಸದಸ್ಯರು ಚರ್ಚಿಸಿ ಕೈಗೊಳ್ಳುವ ನಿರ್ಣಯಗಳು ಅನುಮೋದಿಸುವ ಕಟ್ಟಳೆಗಳು ನಾಡಿನ ಭವಿಷ್ಯಗಳನ್ನು ರೂಪಿಸುತ್ತವೆ. ವಿರೋಧಾಭಿಪ್ರಾಯಗಳಿಂದ ಕೂಡಿದ ಈ ಚರ್ಚೆಯಲ್ಲಿ ಭಾಗವಹಿಸುವವರು ಔಚಿತ್ಯ ಸಭ್ಯತೆಗಳನ್ನು ಮರೆತು ಆರೋಪ ಪ್ರತ್ಯಾರೋಪಗಳಿಂದ ಮರ್ಯಾದೆಗೆಟ್ಟ ರೀತಿಗಳಲ್ಲಿ ನಡೆದುಕೊಂದಡರೆ ನಾಡಿಗೆ ಅಪಕೀರ್ತಿ. ನಾನಾ ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಬೇಕಾದ ಈ ಶಾಸನಸಭೆಯಲ್ಲಿ ಕಾಲಕ್ಕೆ ಬಹಳ ಬೆಲೆ; ಅನಾವಶ್ಯಕವಾದ ವಾದಗಳಿಂದ ದೀರ್ಘ ಭಾಷಣಗಳಿಂದ ಸಭೆಯ ಕಾರ್ಯಕ್ಕೆ ಅಡ್ಡಿಯಾಗಕೂಡದು. ಮೊದಲೇ ಹಾಕಿಕೊಂಡ ಪಟ್ಟಿಗನುಸುರವಾಗಿ ಕಾರ್ಯಲಾಪಗಳು ಅಚ್ಚುಕಟ್ಟಾಗಿ ನಡೆಯಬೇಕು. ಇವೆಲ್ಲವನ್ನು ನಿಯಂತ್ರಿಸುವ ಗುರುತರ ಜವಾಬ್ದಾರಿ ಅಧ್ಯಕ್ಷರದು. ಸಭೆಯ ಅಧಿವೇಶನದ ಕಾಲದಲ್ಲಿ ಅಧ್ಯಕ್ಷನಾಗಲೀ ಇವನ ಗೈರು ಹಾಜರಿಯಲ್ಲಿ ಉಪಾಧ್ಯಕ್ಷರಾಗಲೀ, ಸಭೆಯ ಕಾರ್ಯಾಲಾಪಗಳನ್ನು ನಡೆಸುತ್ತಾರೆ; ಈ ಕಾರ್ಯಾಲಾಪಗಳಿಗೆ ಸಂಬಂಧಿಸಿದ ನಿಯಮಗಳನ್ನು ಎಲ್ಲರೂ ಪಾಲಿದಸಿವಂತೆ ನೋಡಿಕೊಳ್ಳುತ್ತಾರೆ. ಅಧ್ಯಕ್ಷನೇ ಈ ನಿಯಮಗಳ ಮೂರ್ತರೂಪವನ್ನಬಹುದು; ಆತನ ತೀರ್ಮಾನಕ್ಕೆ ಎಲ್ಲರು ತಲೆಬಾಗಬೇಕು. ಕೂಡಲೆ ಚರ್ಚೆ ನಡೆಯಬೇಕೆಂದು ತುರ್ತು ಪರಿಸ್ಥಿತಿಯ ವಿಷಯವೊಂದನ್ನು ಸದಸ್ಯರಲ್ಲೊಬ್ಬರು ಮಂಡಿಸಿದಾಗ, ಆ ವಷಯವನ್ನು ಕೂಡಲೇ ತೆಗೆದುಕೊ೯ಳ್ಳುವುದು ಬಿಡುವುದು ಅಧ್ಯಕ್ಷನ ತೀರ್ಪಿಗೆ ಸೇರಿದ್ದು. ಸೂಚಿಸಿದ ತಿದ್ದು ಪಡೈಗಳಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ತಲಳ್ಳಿಹಾಕಬೇಕು ಎಂಬುದನ್ನು ನಿರ್ಧರಿಸುವುದು ಅವನ ಕೆಲಸ. ಅವನು ಅಸಂಬದ್ಧವಾದ ಭಾಷಣಗಳನ್ನು ಪುನರಾವೃತ್ತಿಗಳನ್ನು ತಡೆಗಟ್ಟುವ ಅಧಿಕಾರ ಹೊಂದಿದ್ದಾನೆ. ಸದಸ್ಯರಲ್ಲಿ ಅಕ್ರಮವಾದ ಅಥವಾ ಗಲಭೆ ಎಬ್ಬಿಸುವ ನಡತೆ ಕಂಡುಬಂದಲ್ಲಿ ಅವನಿಗೆ ಎಚ್ಚರಿಕೆ ಕೊಡುತ್ತಾನೆ. ಆಡಿದ ಮಾತುಗಳನ್ನು ಹಿಂತೆಗೆದುಕೊಳ್ಳುವಂತೆ ಅವರಿಗೆ ಆಜ್ಞೆ ಮಾಡಿತ್ತಾನೆ. ಇದನ್ನು ಲೆಕ್ಕಿಸದೆ ಮುಂದುವರಿದವರು ಅವಿಧೇಯರೆಂದು ಪರಿಗಣಿಸುವ (ನೇಮಿಂಗ್ ಎ ಮೆಂಬರ್) ಕೆಲಸ ಅಧ್ಯಕ್ಷರದು. ಆಗ ಅವನ ಸದಸ್ಯತ್ವವೇ ತಾತ್ಕಾಲಿಕವಾಗಿ ರದಾಗುತ್ತದೆ. ಸಾಮೂಹಿಕ ಗಲಭೆಯೆದ್ದ ಸಂದರ್ಭದಲ್ಲಿ ಅಂದಿನ ಅಧಿವೇಶನವನ್ನು ಅಧ್ಯಕ್ಷ ಮುಕ್ತಾಯಗೊಳಿಸಬಹುದು. ಎಲ್ಲ ಕ್ರುಷ್ಟಿಕೋನಗಳಿಂದಲೂ ಚರ್ಚಿತ ವಿಷಯದ ಮೇಲೆ ಬೆಳಕು ಬೀಳಬೇಕೆಂಬ ಉದ್ದೇಶದಿಂದ ಚರ್ಚೆಯಲ್ಲಿ ಭಾಗವಹಿಸುವವರ ಕ್ರಮಪಟ್ಟಿಯನ್ನು ಆತನೇ ತಯಾರಿಸುತ್ತಾನೆ. ಅವನ ಸಮಸದರ್ಶಿತ್ವ ವ್ಯಾಪಕವಾದ ಅವನ ಅಧಿಕಾರದಷ್ಟೇ ಮುಖ್ಯವಾದದ್ದು. ಅಧ್ಯಕ್ಷನಾಗಿ ಆರಿಸಲ್ಪಟ್ಟ ಕೂಡಲೆ ಅವನು ತನ್ನ ರಜಕೀಯ ಪಕ್ಷ ಅಥವಾ ಕೂಟದ ಸಂಬಂಧವನ್ನು ತ್ಯಜಿಸುತ್ತಾನೆ; ನ್ಯಾಯವಾದ ನಿರ್ಣಯ ಹೊರಬೀಳಬೇಕಾದರೆ ನಾನಾಱ್ ಪಕ್ಷಗಳಿಂದ ಸಂಸತ್ತಿನಲ್ಲಿ ಪ್ರತಿಯೊಂದು ಪಕ್ಷದವರ ಅಭಿಪ್ರಾಯಕ್ಕೂ ಅವನು ಸಮಾನ ಮನ್ನಣೆ ಗೌರವಗಳನ್ನು ಕೊಡಲೇಬೇಕಾಗುತ್ತದೆ. ನಡೆವ ಚರ್ಚೆಯಲ್ಲಿ ತನ್ನ ವೈಯಕ್ತಿಕ ಒಲವು ಅಭಿಪ್ರಾಯಗಳಿಗೆ ಎಡೆಗೊಡುವಂತಿಲ್ಲ. ಸಭೆಯಲ್ಲಿ ಸದಸ್ಯರು ನ್ಯಾಯಸಮ್ಮತರೀತಿಯಲ್ಲಿ ತಮ್ಮ ನಿಶ್ಚಿತಾಭಿಪ್ರಾಯಗಲನ್ನು ಮಂಡಿಸಲು ಅವಕಾಶ ಕೊಡುವುದು ಅವನ ಪ್ರಥಮ ಕರ್ತವ್ಯವಾದ್ದರಿಂದ, ಉದ್ವೇಗಗೊಂಡು ವಿನಯಮೀರಿ ಮಾತನಾಡುವುದು, ವೈಯಕ್ತಿಕದೋಷಣೆ, ಅವಾಚ್ಯಶಬ್ದಗಳ ಪ್ರಯೋಗ, ಅನಾವಶ್ಯಕ ಟೀಕೆ ಮುಂತಾದ ಅಕ್ರಮಗಳನ್ನು ಸಂವಿಧಾನ ಅಧಿಕಾರಬಲದಿಂದ ತಡೆಗಟ್ಟುತ್ತಾನೆ. ಪಕ್ಷಾತೀತನಾಗಿರುವುದರಿಂದ ಅವನು ಚರ್ಚೆದ್ಗಳಲ್ಲಿ ಭಾಗವಹಿಸುವುದೇ ಇಲ್ಲ. ಮತದಾನದಲ್ಲಿ ಪಕ್ಷಗಳು ನೀಡಿದ ಮತಗಳು ಸಮಸಱ್ಂಖ್ಯೆಯಲ್ಲಿದ್ದರೆ, ಆಗ ಮಾತ್ರ ತನ್ನ ನಿರ್ದಾರಕ ಅಭಿಮತವನ್ನು (ಕ್ಯಾಸ್ಟಿಂಗ್ ವೋಟ್) ನೀಡುತ್ತಾನೆ; ಆದರೆ ಆಗಲೂ ವಿಷಯದ ಯುಕ್ತತೆ ಅಥವಾ ಯೋಗ್ಯತೆಯ ವಿಚ್ಚಾರವಾಗಿ ತನ್ನ ಅಭಿಪ್ರಾಯ ನೀಡಲು ಅಧಿಕಾರವಿಲ್ಲ. ಹೀಗೆ ಅಧ್ಯಕ್ಷ ಶಾಸನಸಭೆಯ ಪ್ರತಿನಿಧಿ; ಸಭೆಯ ಸ್ವಾತಂತ್ರ್ಯ ಗೌರವಗಳ ಸಂಕೇತ, ಶಾಸನಸಭೆ ಪ್ರಜೆಗಳ ಪ್ರತಿನಿದಿಯಾಗುವುದರಿಂದ ಅಧ್ಯಕ್ಷ ಒಂದು ದ್ರುಷ್ಟಿಯಲ್ಲಿ ರಾಷ್ಟ್ರಸ್ವಾತಂತ್ರ್ಯವನ್ನೇ ಪ್ರತಿನಿಧಿಸುತ್ತಾನೆ. ಆದ್ದರಿಂದ ಅವನ ಸ್ಥಾನ ಅತ್ಯಂತ ಘನವಾದದ್ದು ಗೌರವಯುತವಾದದ್ದು, ಆ ಸ್ಥಾನವನ್ನಲಂಕರಿಸುವವನು ಸುವ್ಯಕ್ತವಾದ ಸಾಮರ್ಥ್ಯ್ತ ಮತ್ತು ನಿಷ್ಪಕ್ಷಪಾತಗಳನ್ನು ಹೊಂದಿರಬೇಕು. ಭಾರತದಲಿ ಅಧ್ಯಕ್ಷಸ್ಥಾನ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ. ಇಲ್ಲಿ ಅಧ್ಯಕ್ಷರು ಹೊಂದಿರುವಷ್ಟು ಅಧಿಕಾರವನ್ನು ಬ್ರಿಟಿಷ್ ಕಾಮನ್ವೆಲ್ತ್ ರಾಷ್ಟ್ರ ಸಮುದಾಯದ ಇರತ ಯಾವ ರಾಷ್ಟ್ರ ವೂ ಹೊಂದಿಲ್ಲ. ಲೋಕಸಭೆಯ ರಚನೆ, ಕಾರ್ಯಕ್ರಮ ಮುಂತಾದವುಗಳಿ೮ಗೆ ಇಂಗ್ಲೆಂಡಿನ ಹೌಸ್ ಆಫ್ (ಸಾಮಾನ್ಯರ ಸಭೆ) ಕಾಮನ್ಸ್ ಸಭೆಯನ್ನೇ ಮಾದರಿಯಾಗಿ ಇಟ್ಟುಕೊಳ್ಳಲಾಗಿದೆ. ಆದರೂ ಅಧ್ಯಕ್ಷನ ಅಧಿಕಾರವ್ಯಾಪ್ತಿ ಹೆಚ್ಚಾಗಿರುವುದಕ್ಕೆ ಕಾರಣ-ಮೊದಲಲ್ಲೆ ಅಧ್ಯಕ್ಷಸ್ಥಾನವನ್ನಲಂಕರಿಸಿದ ಇಬ್ಬರು ಭಾರತೀಯರ ದಿಟ್ಟತನ ಮತ್ತು ಸಾಹಸ. ೧೯೨೫ರಲ್ಲಿ ಕೇಂದ್ರ ಶಸನಸಭೆಯ ಅಧ್ಯಕ್ಷಸ್ಥಾನಕ್ಕೆ ಚುನಾವಣೆ ನಡೆದಸಗ, ಸರ್ಕಾರದ ಬೆಂಬಸ್ಲ ಪಡೆದಿದ್ದ್ಱ ತನ್ನ ಪ್ರತಿಸ್ಪರ್ಧಿಯನ್ನು ಎರಡು ವೋಟುಗಳಿಂದ್ಚ ಸೋಲಿಸಿ ವಿಠಲ್ಭಾಯ್ ಪಟೇಲರು ಅಧ್ಯಕ್ಷರಾದರು. ಸರ್ಕಾರದಿಂದ ಸೂಚಿಸಲ್ಪಟ್ಟ ಸ್ಪರ್ಧಿಯನ್ನೇ ಸೋಲಿಸಿದ್ದರಿಂದ ಇನ್ನುಇ ಮುಂದೆ ತಾವು ಶಾಸನಸಭೆಗೆ ಮಾತ್ರ ಜವಾಬ್ದಾರರೆಂದು ಬೇರೆ ಯಾರಿಗೂ ಅಧೀನರಲ್ಲವೆಂದೂ ಸಾಧಿಸಿದರು. ಸಭೆಯ ಕಾರ್ಯಕಲಾಪಗಳಲ್ಲಿ ಸರ್ಕಾರದ ಕಾರ್ಯಾಂಗದ ಕೈವಾಡ ನಿಂತುಹೋಯಿತು. ರಾಷ್ಟ್ರರಕ್ಷಣೆಗೆ ಸಂಬಂಧಪಟ್ಟ ಮಸೂದೆಯೊಂದಱ್ನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಸರಕಾರದಿಂದಱ್ ಸೂಚನೆ ಬಂದಾಗ, ಅದನ್ನು ತೆಗೆದುಕೊಳ್ಳುವುದು ಬಿಡುವುದು ತಮ್ಮ ವಿವೇಚನೆಗೆ ಸಂಬಂಧಿಸಿದ್ದೆಂದು ತಿಳಿಸಿ ಅಧ್ಯಕ್ಷರು ಅದನ್ನು ತಳ್ಳಿಹಾಕಿದರು. ತಮ್ಮ ಕೆಲವು ತೀರೆಮಾನಗಳನ್ನು ಸರ್ಕಾರದ ಪಕ್ಷ ಬಹಿರಂಗವಾಗಿ ಹಳಿಯುತ್ತಿದ್ದುದನ್ನು ಕಂಡು, ಪ್ರತ್ಯೇಕವಾಗಿ ವಿಧಿಗನುಸಾರವಾದ ಸೂಚನೆಯನ್ನು ಸಭೆಯಲ್ಲಿ ಮಂಡಿಸದೆ ಆ ರೀತ್ಗಿ ಟೀಕಿಸುವುದು ಸಭೆಯ ಗೌರವಕ್ಕೆ ಕುಂದುಂಟು ಮಾಡುತ್ತದೆಂದು ತಿಳಿಸಿದರು. ಸಭೆಯಲ್ಲಿ, ಅದ್ಚಕ್ಕೆ ಸೇರಿದ ಆವರಣದಲ್ಲಿ, ಶುಸ್ತುಭಧ್ರತೆಗಳನ್ನು ಕಾಪಾಡುವುದು ತಮ್ಮ ಸ್ವಂತ ಅಧಿಕಾರವ್ಯಾಪ್ತಿಗೆ ಒಳಪಟ್ಟೈಅದ್ದೆಂಬುದನ್ನು ಸಾಧಿಸಿದರು. ಶಾಸಕಾಂಗದ ಕಚೇರಿಯ ಅಧಿಕಾರಿಗಳು ತಮ್ಮ ಹತೋಟಿಯಲ್ಲಿರಬೇಕು, ಆಡಳಿತದ ಬೇರೆ ಯಾವ ಶಾಖೆಯೂ ಅವರ ಮೇಲೆ ಪ್ರಭಾವ ಬೀರದಂತಿರಬೇಕು ಎಂಬ ನೀತಿಯನ್ನು ಸಮರ್ಥಿಸಿ, ೧೯೨೮ರಲ್ಲಿ ಸರ್ಕಾರ ಅದನ್ನು೮ ಅನುಮೋದಿಸುವಂತೆ ಮಾಡಿದರು. ಮಾವಳಂಕರ್ ಅಧ್ಯಕ್ಷರಾಗಿದ್ದ ಕಾಲ ಶಾಸನಸಭೆಯ ಘನತೆ ಗೌರವಗಳ ಬೆಳೆವಣಿಗೆಯಲ್ಲಿ ಇನ್ನೂಂದು ಸ್ಮರಣೀಯ ಘಟ್ಟ ೧೯೪೬' ಭಾರತೀಯರ ಸ್ವಾತಂತ್ರ್ಯ ಸಮರದ ಅಂತಿಮಕಾಲ. ಆಗ ಇವರು ಕೇಂದ್ರ ಶಾಸನಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. ಸ್ಪೀಕರ್ ಎಂಬ ಹೆಸರು ಪ್ರಯೋಗಕ್ಕೆ ಬಂದುದು ೧೯೪೭ರಲ್ಲಿ ಸ್ವಾತಂತ್ರ್ಯಘೋಷಣೆಯಾದ ಅನಂತರ. ಸಂವಿಧಾನರಚನೆ (ಕಾನ್ ಸ್ಟಿಟ್ಯುಎಂತಟ್ ಅಸೆಂಬ್ಲಿ) ಶಾಸನಸಭೆಯ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅವರೇ ಅಧ್ಯಕ್ಷರಾಗಿ ಮುಂದುವರಿದರು. ಲೋಕಸಭೆ, ರಾಜ್ಯಸಭ್ಗಳ ರಚನೆಯಾದಮೇಲೆ ೧೯೫೬ ಮೇ ೨೭ರಂದು ಲೋಕಸಭೆಯ ಹೊಸ ಸಂವಿಧಾನಕನುಸಾರವಾಗಿ ಲೋಕಸಭೆ ನಿರ್ಮಾಣವಾದ ಆ ಪರ್ವಕಾಲದಲ್ಲಿ ನಾಲ್ಕು ವರ್ಷ (೧೯೫೬ರ ವರೆಗೆ) ಅಧ್ಯರಾಗಿದ್ದು ಆ ಸ್ಥಾನದ ಘನತೆ ಗೊಉರವಗಳನ್ನು ಭದ್ರಪಡಿಸಿದರು. ಭಾರತ ಸಂವಿಧಾನಕ್ಕನುಗುಣವಾಗಿ ಅಧ್ಯಕ್ಷರ ಅಧಿಕಾರಕ್ಕೆ ರೂಪುಕೊಟ್ಟವರು ಅವರು. ಭಾರತ ಸಂವಿಧಾನದಲ್ಲಿ ಶಾಸನ ಸಭೆಯ ರಚನೆ ಕಾರ್ಯಕಲಾಪಗಲ ವಿಷಯವಾಗಿ ನಿರ್ದಿಷ್ಟನಿಯಮಗಳಿವೆ. ಅಧ್ಯಕ್ಷಸ್ಥಾನಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವಲ್ಲಿ ಮಾವ್ಲ್ಂಕರ್ ರವರು ನಿರ್ವಹಿಸಿದ ಪಾತ್ರ ಶ್ಲಾಘನೀಯ. ಅಧ್ಯಕ್ಷರ ವಿಷಯದಲ್ಲಿ ಇತರ ಅನೇಕ ದೇಶಗಲಲ್ಲಿ-ಇಂಗ್ಲೆಂಡಿನಲ್ಲೂ-ಅನುಕರಣೆಯಲ್ಲಿರುವ ಆಡಂಬರದ ಶಿಷ್ಟಾಚಾರಗಳನ್ನುಇ ತೆಗೆದುಹಾಕಿ, ಭಾರತಸಂಸ್ಕೃತಿಗನುಗುಣವಾದ ಸರಳತೆಯನ್ನು ಆಚರಣೆಗೆ ತರಲಾಗಿದೆ. ಅವರು ಇಂಥ ಉಡುಪನ್ನೇ ಧರಿಸಬೇಕೆಂಬ ನಿಯಮವಿಲ್ಲ. ೧೯೪೬ರಲ್ಲಿ ತಾವು ಅಧ್ಯಕ್ಷರಾಗಿ ಬಂದ ಕೂಡಲೆ ಮಾವ್ಲ್ಂಕರರು ಅಧಿಕಾರ ಸೂಚಕವಾಗಿ ಧರಿಸಬೇಕಾಗಿದ್ದ ಕೃತ್ಗದ ತಲೆಗೂದಲ ಕುಲಾವಿಯನ್ನು (ವಿಗ್) ತ್ಯಜಿಸಿದರು. ಅಧ್ಯಕ್ಷಸಭೆಗೆ ಬರುತ್ತಿದ್ದರೆಂಬುದನ್ನು ಶಿಸ್ತುಪಾಲನಾಧಿಕಾರಿಯೊಬ್ಬ ಶ್ರುತಪಡಿಸುತ್ತಾನೆ. ಕೂಡಲೆ ಎಲ್ಲರೂ ಎದ್ದು ನಿಲ್ಲುತ್ತಾರೆ. ತಮ್ಮ ಪೀಠದ ಹತ್ತಿರ ಬಂದಕೂಡಲೆ ಅಧ್ಯಕ್ಷರು ಎಲ್ಲರಿಗೂ ಬಾಗಿ ವಂದಿಸಿ ಕುಳಿತುಕೊಳ್ಳುತ್ತಾರೆ. ಅನಂತರ ಎಲ್ಲರೂ ಕೂರುತ್ತಾರೆ. ಶಿಸ್ತು ಪಾಲನಾಧಿಕಾರಿ ಸಮವಸ್ತ್ರ ಧರಿಸಿರುತ್ತಾನೆ. ಆದರೆ ಅವನ ಕೈಯಲ್ಲಿ ಅಧಿಕಾರದಂಡ (ಮೇಸ್) ಇಲ್ಲ. ಯಾವ ಅನುಕ್ರಮದಲ್ಲಿ ವಿಷಯಗಳನ್ನು ಚರ್ಚೆಘೆ ತೆಗೆದುಕೊಳ್ಳಬೇಕ್ಲೆಂಬುದನ್ನು ಅಧ್ಯಕ್ಷರು ನಿರ್ಧರಿಸುತ್ತಾರೆ. ಇದರಲ್ಲಿ ಅನೇಕವೇಳೆ ಸಭೆಯ ಮುಕ್ಯಸ್ಥೆನ (ಲೀಡರ್ ಆಫ್ ದಿ ಹೊಯ್ಸ್) ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತಾರೆ. ಸಭೆಯಲ್ಲಿ ಕಾರ್ಯವೆಷ್ಟಿದೆಯ್ಂಬುದನ್ನು ಗಮನಿಸಿ, ಅದಕ್ಕೆ ಅನುಸಾರವಾಗಿ ಸಭೆಯ ಅಧಿವೇಶನ ಪ್ರತಿನಿತ್ಯ ಯಾವ ಕಾಲದಲ್ಲಿ, ಎಷ್ಟುದಿನ ನಡೆಯಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಸದಸ್ಯರು ಭಾಷಣದ ಕಾಲವನ್ನೂ ನಿರ್ಣಯಿಸುತ್ತಾರೆ. ಸದಸ್ಯರು ಪ್ರಶೆಗಲ ಯುಕ್ತಾಯುಕ್ತತೆ, ಸೂಕ್ತಕಾಲ ಇವನ್ನೆಲ್ಲ, ನಿರ್ಧರಿಸುವವರು ಅಧ್ಯಕ್ಷರು. ಸಭಿಕರು ಮುಂದೊಡ್ಡುವ ಗೊತ್ತುವಳಿಗಳ, ತಿದ್ದುಪಡಿಗಲ ವಿಚಾರದಲ್ಲೂ ಹೀಗೆಯೇ. ಸ್ಥಾಯೀನೆಬಂಧನೆಗಳ ರಚನೆಯಲ್ಲೂ ಲೋಕಸಭೆ ಅಧ್ಯಕ್ಷರ ಅಭಿಪ್ರಾಯ ವರ್ತನೆಯ ಬಗ್ಗೆ ಖಂಡನಾಸೂಚನೆಯನ್ನು ಮಂಡಿಸುವುದಕ್ಕೆ ಸದಸ್ಯರಿಗೆ ಅವಕಾಶವಿದೆ. ಆದರೆ ಇದು