ಪುಟ:Mysore-University-Encyclopaedia-Vol-1-Part-1.pdf/೩೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೨ ಸೂಸುವುದರಿಂದ ಅಥವಾ ಎಚ್ಚರಿಕೆಯ ಕೃತಕಸಂಕೇತಗಳಿಂದ ಶತ್ರುಗಳನ್ನು ದೂರವಿಡಬಲ್ಲವು. ಒಳ್ಳೆಯ ಭಕ್ಷ್ಯವೆನಿಸಿದ ಕೆಲವು ಪ್ರಾಣಿಗಳು ರುಚಿಯಲ್ಲದ ಪ್ರಾಣಿಗಳನ್ನು ಅನುಕರಿಸುವುದರಿಂದ ಶತ್ರುಗಳನ್ನು ಮೋಸಗೊಳಿಸಬಲ್ಲವು.ಹೀಗೆ ತಮ್ಮನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಬೇರೆ ಬೇರೆ ಸಂದಭ‍ಗಳಲ್ಲಿ ಪ್ರಾಣಿಗಳು ವಿಧವಿಧವಾದ ಅನುಕರಣತಂತ್ರಗಳನ್ನು ಅನುಸರಿಸುತ್ತವೆ.

ಉದ್ದೇಶದ ಆಧಾರದ ಮೇಲೆಮುಖ್ಯವಾಗಿ ಎರಡುಬಗೆಯ ಅನುಕರಣೆಗಳನ್ನು ವಿವರಿಸಬಹುದು.ಒಂದು ರಕ್ಷಣೆಯ ಅನುಕರಣೆ,ಮತ್ತೊಂದು ಆಕ್ರಮಣಕಾರೀ ಅನುಕರಣೆ. ರಕ್ಷಣೆಯ ಅನುಕರಣೆಯನ್ನು ಮರೆಮಾಚಿಕೊಳ್ಳುವ ಅನುಕರಣೆ ಮತ್ತು ಎಚ್ಚರಿಸುವ ಅನುಕರಣೆ ಎಂದು ಎರಡು ವಿದಗಳಾಗಿ ವಿಂಗಡಿಸಲಾಗಿದೆ.ಹೀಗೆಯೆ ಆಕ್ರಮಣಕಾರೀ ಅನುಕರಣೆಯನ್ನು ಮರೆಮಾಚಿಕೊಳ್ಳುವ ಮತ್ತು ಮರುಳುಮಾಡುವ ವಿಧಗಳನ್ನಾಗಿ ವಿಂಗಡಿಸಲಾಗಿದೆ.ಪುನಃ ಅನುಕರಣ ಜೀವಿಗಳು ತೋರಿಸುವ ಚಟುವಟಿಕೆಯನ್ನು ಆಧರಿಸಿ ಅನುಕರಣೆಯನ್ನು ಎರಡು ವಿಧವಾಗಿ ವಿವರಿಸಲಾಗಿದೆ.ಷಟುವಟಿಕೆಯೇ ಇಲ್ಲದೆ ಕೇವಲ ಆಕಾರ ಮತ್ತು ಬಣ್ಣಗಳಿಂದ ಅನುಕರಿಸುವುದು ತಟಸ್ಥರೀತಿಯ ಅನುಕರಣೆ; ಬುದ್ಧಿಪೂರ್ವಕವಾದದ್ದು ಸಕ್ರಿಯಾನುಕರಣೆ.