ಪುಟ:Mysore-University-Encyclopaedia-Vol-1-Part-1.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೪ ಅನುಕೂಲಣೆ-ಅನುಕ್ರಮ ವಿಶ್ಲೇಷಣೆ

ಬೇರೆ ಬೇರೆ ಪ್ರಭೇದಗಳು ಕೂಡ ಹೀಗೆ ಅನುಕರಿಸಬಲ್ಲವು . ಮಿಣುಕುಹುಳುವಿನ ಹತ್ತಿರ ಸಂಬಂಧಿಯಾದ ಲೈಸಿಡ್ ಜೀರುಂಡೆಗಳೂ,ರುಚಿಯಿಲ್ಲದ ಹುಳುಗಳು. ಆ ಜೀರುಂಡೆಯನ್ನು ಬೇರೆ ಜಾತಿಯ ಜೀರುಂಡೆಗಳೂ ಅಲ್ಲದೆ ತಗಣೆಗಳೂ ಕೀಟಗಳೂ ಅನುಕರಿಸಬಲ್ಲವು. ರುಚಿಯಿಲ್ಲದ ಪ್ರಭೇದಗಳನ್ನು, ರುಚಿಕರವಾದ ಪ್ರಭೇದಗಳು ಅನುಕರಿಸುವುದನ್ನು ಬೇಟ್ಸಿಯನ್ ಅನುಕರಣೆ ಎಂದು ಕರೆಯುವರು.ಕೆಲವುವೇಳೆ ರುಚಿಯಿಲ್ಲದ ಚಿಟ್ಟೆಯನ್ನು ಮತ್ತೊಂದು ರುಚಿಯಿಲ್ಲದ ಪ್ರಾಣಿ ಅನುಕರಿಸುವುದೂ ಉಂಟು;ಅಂದರೆ ಅನುಕರಿಸಲ್ಪಡುವ ಪ್ರಾಣಿಗಳೂ ಅನುಕರಿಸುವ ಪ್ರಾಣಿಗಳೂ ಅರುಚಿಗಳಾಗಿರುತ್ತವೆ. ಆ ರೀತಿಯ ಅನುಕರಣೆಯನ್ನು ಮುಲ್ಲೇರಿಯನ್ ಅನುಕರಣೆ ಎನ್ನುವರು. ಆಕ್ರಮಣಕಾರಿ ಅನುಕರಣೆಯನ್ನು ಮಾಂಸಾಹಾರಿಗಳಲ್ಲಿ ಕಾಣಬಹುದು.ಕೀಟಗಳನ್ನು ತಿಂದು ಬದುಕುವ ಕೆಲವುಜಾತಿಯ ಹಳದಿಬಣ್ಣದ ಜೇಡಗಳು ಗೋಲ್ಡನ್‍ರಾಡ್ ಮತ್ತು ಇತರ ಹೂಗಳ ಮೇಲೆ ಕುಳಿತಾಗ ಹೂವಿನ ಬಣ್ಣದೊಡನೆ ಸಮರಸವಾಗುವುದರಿಂದ ಕೀಟಗಳಿಂದ ಮರೆಯಾಗಿರುತ್ತವೆ . ಕೀಟಗಳು ಮಕರಂದಕ್ಕಾಗಿ ಹೂವಿಗೆ ಬಂದೊಡನೆ ವಂಚನೆಯಿಂದ ಅವುಗಳ ಮೇಲೆ ಎರಗುತ್ತವೆ. ಆಕ್ರಮಣಕಾರೀ ಅನುಕರಣೆಯಲ್ಲಿ ಇದು ಮರೆಮಾಚಿಕೊಳ್ಳುವ ಮಾದರಿಗೆ ಸೇರಿದೆ. ಮಾನ್ಪಿಡೆ ಕುಟುಂಬದ ಕೀಟಗಳೂ ಈ ರೀತಿಯ ಅನುಕರಣೆಯನ್ನು ತೋರಿಸುತ್ತವೆ. ಕೆಲವುಲಜಾತಿ ಜೇಡಗಳು ಆಕೇಡ್ ಹೂಗಳನ್ನು ಬಣ್ಣ ಮತ್ತು ಆಕಾರದಲ್ಲಿ ಅನುಕರಿಸಿ ಹೂವಿನಂತೆ ಮೋಹಗೊಳಿನಸುವ ಅಥವಾ ಪ್ರಚಾರ ಮಾಡುವ ಬಣ್ಣಗಳಿಂದ ಕೂಡಿದ್ದು ಕೀಟಗಳನ್ನು ಆಕಷಿಸುತ್ತವೆ ; ಮಕರಂದಕ್ಕಾಗಿ ಬರುವ ಕೀಟಗಳ ಮೇಲೆ ಎರಗುತ್ತವೆ. ಇದು ಆಕ್ರಮಣಕಾರೀ ಅನುಕರಣೆಯಲ್ಲಿ ಮರುಳುಮಾಡುವ ಬಗೆಗೆ ಸೇರಿದೆ . ಆಫ್ರಿಕದ ಒಂದು ಜಾತಿ ಓತಿಕೇತ (ಹೆಂಟಿಗೊದ್ದ,ಊಸರವಳ್ಳಿ) ರಕ್ಷಣೆಯ ಬಣ್ಣವನ್ನು ಹೊಂದಿದ್ದು ಬಾಯ ಅಂಚುಗಳಲ್ಲಿ ಆಕಷಕವಾದ ಹೂವನ್ನು ಹೋಲುವ ಬಣ್ಣವನ್ನು ಹೊಂದಿರುತ್ತದೆ.ಆ ಬಣ್ಣ ಕೀಟಗಳನ್ನು ಮೋಹಗೊಳಿಸುವುದರಿಂದ ಅವು ಓತಿಯ ಬಾಯಿಗೆ ಬಂದು ಬೀಳುತ್ತವೆ. ಅರ್ಥಾಪ್ಪರ ಉಪವಗದ ಮಾನ್ಪಿಡ್ ಕುಟುಂಬಕ್ಕೆ ಸೇರಿದೆ ಹೈಮಿನಾಪಸೆ ಕರೋನೇಟಸ್ ಎಂಬ ಪ್ರಭೇದದ ಕೀಟ ತನ್ನ ಜೀವನಚರಿತ್ರೆಯಲ್ಲಿ ಹಿಂದೆ ಹೇಳಿದ ಅನೇಕ ರೀತಿಯ ಅನುಕರಣೆಗಳನ್ನು ಪ್ರದರ್ಶಿಸುತ್ತದೆ. ಇದರ ಹುಳು ಸಾಮಾನ್ಯವಾಗಿ ಪ್ರಕಾಶಮಾನವಾದ ಎಳೆಗೆಂಪಿನಿಂದ ಕೂಡಿರುತ್ತದೆ. ಚಲಿಸದ ರೆಂಬೆಗಳ ಮೇಲೆ ಕುಳಿತಾಗ ತನ್ನ ದೇಹದ ಹಿಂಬಾಗವನ್ನು ಬೆನ್ನಿನಮೇಲೆ ತಿರುಗಿಸಿಟ್ಟುಕೊಂಡ್ಡು. ಅಗಲವಾದ ದಳಗಳನ್ನು ಹೋಲುವ ಕಾಲುಗಳನ್ನು ಚಾಚುವುದರಿಂದ ಹೂವನ್ನು ಅನುಕರಿಸಿ ಶತ್ರುಪಕ್ಷಿಗಳಿಂದ ಮರೆಮಾಚಿಕೊಳ್ಳುತ್ತದೆ. ಇದಲ್ಲದೆ ಹೂವೆಂದು ಭ್ರಮಿಸಿ ಸಣ್ಣ ಕೀಟಗಳು ಜೇನಿಗಾಗಿ ಬಂದಾಗ , ಅವುಗಳ ಮೇಲೆರಗಿ ಕಬಳಿಸುತ್ತದೆ . ರೂಪಾಂತರದಪರಿವರ್ತನೆಯನ್ನು ಹೊಂದಿದ ಮೇಲೆ ಹೊರಬರುವ ಎಳೆಯ ಕೀಟ ಕಪ್ಪುಚುಕ್ಕ್ಕೆಗಳುಳ್ಳ ಕೆಂಪುಬಣ್ಣದಿಂದ ಕೂಡಿದ್ದು. ಸಸ್ಯಗಳ ಮೇಲೆ ವಾಸಿಸುವ ಅರುಚಿಯಾದ ಒಂದು ಜಾತಿ ತಿಗಣೆಯನ್ನು (ಪ್ಲಾಂಟ್‍ಬಗ್) ಅಣಕಿಸಿ ಶತ್ರುಪ್ರಾಣಿಗಳಿಂದ ಪಾರಾಗುತ್ತದೆ. ಅದು ಬೆಳೆದಂತೆ ಕೊನೆಯ ಪೊರೆ (ಮಾಲ್ಫ್) ಬಿಟ್ಟ ಅನಂತರ ದೇಹ ಮತ್ತು ಬಣ್ಣದಿಂದ ಹೂವನ್ನು ಅಣಕಿಸಿ ಆಕ್ರಮಣಕೃತ್ಯದ ಜೀವನವನ್ನು ತಾನೇ ಅನುಸರಿಸುತ್ತದೆ. ಬುದ್ದಿಪೂರ್ವಕವಾದ ಅನುಕರಣೆಯ ಗುಂಪಿಗೆ ಸೇರಿಸಬಹುದಾದ ಮತ್ತೊಂದು ಬಗೆಯೆಂದರೆ ಸಾವಿನ ಅಣಕ . ಅಮೆರಿಕದ ಒಪಾಸಮ್ ಎಂಬ ಒಂದು ಸ್ತನಿಪ್ರಾಣಿ ತನ್ನ ಮೇಲೆ ಯಾವುದಾದರೂ ಶತ್ರು ಎರಗಿದಾಗ ಸತ್ತಂತೆ ನಟಿಸಿ ಸಾವಿನ ದವಡೆಯಿಂದ ಪಾರಗುವುದು . ಅದನ್ನು ಒಪಾಸಮ್ ನಟನೆ ಎಂದು ನಾಣ್ಣುಡಿಯಾಗಿ ಕರೆಯುವುದುಂಟು . ಈ ನಟನೆ ಬುದ್ದಿಪೂರ್ವಕವಾದ ಅನುಕರಣೆ ಎಂದು ಕೆಲವರ ಅಭಿಪ್ರಾಯ : ನಟನೆಯಲ್ಲ. ಅದು ಕೇವಲ ಭಯದಿಂದ ಒದಗಿದ ಮೂರ್ಛೆ ಎಂದು ಕೆಲವರ ಅಭಿಪ್ರಾಯ . ಗಡಸುದೇಹದ ದುಂಬಿಗಳು ಕೂಡ ಇಂಥ ಅನುಕರಣೆಯನ್ನು ತೋರಿಸುತ್ತವೆ . ಅವು ಕೆಳಗೆ ಬಿದ್ದಾಗ ಅಷ್ಟಾ ಗಿ ದೇಹಕ್ಕೆ ಗಾಯವಾಗುವುದಿಲ್ಲ . ಯಾವುದಾದರು ಪ್ರಾಣಿ ಅದನ್ನು ಹಿಡಿಯಲು ಹೋದಾಗ ಕೆಳಕ್ಕೆ ಬಿದ್ದು ಕಲ್ಲಿನ ಚೂರಿನಂತೆ ನಿಶ್ಚೇಷ್ಟಿತವಾಗುತ್ತವೆ . ಬೇಟೆಯ ಪ್ರಾಣಿಗಳು ಎಲೆ ಹುಲ್ಲುಗಳ ಮಧ್ಯೆ ಅವಕ್ಕಾಗಿ ಹುಡುಕಿ ವಿಫಲವಾಗಿ ಹಿಂತಿರುಗುತ್ತವೆ. ವಾಲಸ್ ಎಂಬ ವಿಜ್ಞಾನಿ ರಕ್ಷಣೆಯ ಅನುಕರಣೆ ಪ್ರಕೃತಿಯಲ್ಲಿ ಸಂಭವಿಸಬೇಕಾದರೆ ಇರಬೇಕಾದ ಕೆಲವು ಅಂಶಗಳನ್ನು ಪಟ್ಟಿಮಾಡಿದ್ದಾನೆ.೧ ಅನುಕರಿಸುವ ಪ್ರಾಣಿಯ ಪ್ರಭೇದ ಮತ್ತು ಅನುಕರಿಸಲ್ಪಡುವ ಪ್ರಾಣಿಯ ಪ್ರಭೇದಗಳು ಒಂದೇ ಪ್ರದೇಶದಲ್ಲಿರಬೇಕು: ೨ ಅನುಕರಿಸುವ ಪ್ರಾಣಿಗಳು ಯಾವಾಗಲೂ ರಕ್ಷಣೆಯಿಲ್ಲದವು: ೩ ಅನುಕರಿಸುವ ಪ್ರಾಣಿಗಳು ಯಾವಾಗಲೂ ಹೆಚ್ಚು ಸಂಖ್ಯೆಯಲ್ಲಿರುತ್ತವೆ: ೪ ಅನುಕರಣೆ ಕೇವಲ ಪ್ರಾಣಿಯ ಬಹಯರೂಪಕ್ಕೆ ಸಂಬಂಧ ಪಟ್ಟಿರುತ್ತದೆಯೇ ಹೊರತು ಒಳರಚನೆಯಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡುವುದಿಲ್ಲ. ಅನುಕರಿಸುವ ಜೀವಿಗಳು ಹೇಗೆ ವಿಕಾಸಗೊಂಡವು ಎಂಬುದರ ಬಗ್ಗೆ ಅನೇಕ ವಾದವಿವಾದಗಳಿವೆ. ಡಾರ್ವಿನ್ ಪ್ರತಿಪಾದಿಸಿದ ನೈಸರ್ಗಿಕ ಆಯ್ಕೆಯೆ ಅದಕ್ಕೆ ಕಾರಣ ಎಂಬುದು ಮೀಸ್ ಮನ್ ಎಂಬುವ ಅಭಿಪ್ರಾಯ. ಅದರಂತೆ, ಪ್ರಾರಂಭದಲ್ಲಿ ಒಂದು ಪ್ರಭೇದದ ಪ್ರಾಣಿಗಳು ತಾವು ಅನುಕರಿಸಬೇಕಾದ ಮಾದರಿಯನ್ನು ಅಷ್ಟಾಗಿ ಹೋಲಲಾರವು. ಆದರೆ ಒಂದು ಸಂತತಿಯಲ್ಲಿ ಆ ಮಾದರಿಯನ್ನು ಆದಷ್ಟು ಹೆಚ್ಚಾಗಿ ಹೋಲುವ ಪ್ರಾಣಿಗಳು ಜೀವನ ಸಂಗ್ರಾಮದಲ್ಲಿ ಉಳಿಯುತ್ತವೆ. ಮಿಕ್ಕವು ಅಳಿಯುತ್ತವೆ. ಉಳಿದ ಪ್ರಾಣಿಗಳು ಮಾತ್ರ ತಮ್ಮ ಸಂತತಿಯನ್ನು ಮುಂದುವರಿಸುತ್ತಚೆ. ಹೀಗೆ ಪ್ರತಿಯೊಂದು ಸಂತತಿಯಲ್ಲೂ ಹೆಚ್ಚು ಹೆಚ್ಚು ಹೋಲಿಕೆಯನ್ನು ತೋರಬಲ್ಲ ಪ್ರಾಣಿಗಳನ್ನು ಮಾತ್ರ ಪ್ರಕೃತಿ ಆಯ್ದು ಉಳಿಸಿ ಬೆಳೆಸುತ್ತದೆ. ಕೊನೆಯಲ್ಲಿ ಚೆನ್ನಾಗಿ ಅನುಕರಿಸಬಲ್ಲ ಪ್ರಾಣಿಜಾತಿಗಳು ವಿಕಸಿಸುತ್ತವೆ. ಈ ವಾದ ನಿಜವಾದರೆ, ಒಂದು ಮಾದರಿಯನ್ನು ಅಸ್ಪಷ್ಟವಾಗಿ ಹೋಲುವ ಅನುಕರಿಸುವ ಪ್ರಣಿಗಳು ಇಂದಿಗೂ ಹೇರಳವಾಗಿವೆ. ಇವು ಪ್ರಕೃತಿಯ ಆಯ್ಕೆಯ ವಾದಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಅಬಾಧಿತವಾಗಲು ರುಚಿಯಿರದ ಬೇರೆಯ ಜಾತಿಗಳನ್ನು ಅನುಕರಿಸುತ್ತ ಪ್ರಾಣಿಗಳು ವಿಕಸಿಸಿವೆ ಎನ್ನುವುದಾದರೆ. ಒಂದು ರುಚಿಯಿರದ ಪ್ರಾಣಿಯನ್ನು ಮತ್ತೊಂದು ರುಚಿಯಿರದ ಪ್ರಾಣಿ ಅಣಕಿಸುವ ಮುಲ್ಲೇರಿಯನ್ ಅನುಕರಣೆಯೂ ಅಂಥದೇ ಸಮಸ್ಯೆಯನ್ನು ಒಡ್ಡುತ್ತದೆ. ಅನುಕರಿಸಲ್ಪಡುವ ಮಾದರಿಗಳು ಹೇರಳವಾಗಿರುವ ಪ್ರದೇಶದಲ್ಲಿ ಅನುಕರಿಸಲು ಯತ್ನಿಸುವ ಪ್ರಾಣಿಗಳ ಸಂಖ್ಯೆ ಬಹಳ ವಿರಳ: ಅನುಕರಿಸಲ್ಪಡುವ ಮಾದರಿಗಳು ವಿರಳವಾಗಿರುವ ಪ್ರದೇಶದಲ್ಲಿ ಅನುಕರಿಸುವ ಪ್ರಾಣಿಗಳ ಸಂಖ್ಯೆ ಬಹಳ ಹೇರಳವಾಗಿರುತ್ತದೆ. ಇದೂ ಒಂದು ಸಮಸ್ಯೆ. ಈ ಸಮಸ್ಯೆ ಪ್ರಕೃತಿಯಲ್ಲಿ ಪ್ರಚಾರದಲ್ಲಿರುವ ಮರುಟ್ಟುವೆಯ (ಮ್ಯುಟೇಷನ್) ನಿಯಮ ಅನುಕರಿಸುವ ಪ್ರಾಣಿಗಳು ವಿಕಾಸಕ್ಕೆ ಕಾರಣವಿರಬಹುದೇ ಎಂಬ ವಾದಕ್ಕೆ ಅವಕಾಶವೀಯುತ್ತದೆ. ಅನುಕರಿಸುವ ಜೀವಿಗಳ ವಿಕಾಸಕ್ಕೆ ಸಂಬಂಧಪಟ್ಟ ನಿರ್ದಿಷ್ಟವಾದ ಕಾರಣ ಇದೇ ಎಂಬುದಾಗಿ ಕಾರಣ ಎಂಬ ವಾದಕ್ಕೆ ಪುರಸ್ಕಾರವಿದೆ. ಮನುಷ್ಯ ವಿವರಿಸಿರುವ ಪ್ರಾಣಿಯ ಅನುಕರಣೆ ಇತರ ಪ್ರಾಣಿಗಳ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಫಲಕಾರಿಯಾಗಿದೆ ಎಂಬುದು ಒಂದು ಕುತೂಹಲಕಾರಿ ಪ್ರಶ್ನೆ. ಮನುಷ್ಯನ ಕಣ್ಣಿಗೆ ಬೀಳುವ ವರ್ಣವಿನ್ಯಾಸಗಳು ಪ್ರಾಣಿಗಳ ಕಣ್ಣಿಗೆ ಅದೇ ರೀತಿಯಲ್ಲಿ ಬೀಳಲಾರವು ಎಂಬುದು ಕೆಲವರ ಅಭಿಪ್ರಾಯ. ಈ ವಿಷಯವಾಗಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಒಬ್ಬ ವಿಜ್ಞಾನಿ ಒಂದು ಪಂಜರದಲ್ಲಿ ಮರೆಮಾಚಿಕೊಳ್ಳುವ ಬಣ್ಣಗಳುಳ್ಳ ಕೀಟಗಳೊಡನೆ ಬೇರೆ ಬೇರೆ ವರ್ಣ ವಿನ್ಯಾಸಗಳಿದ್ದ ಕೀಟಗಳನ್ನೂ ಬಿಟ್ಟ ಅದೇ ಪಂಜರದಲ್ಲಿ ಕೀಟಾಹಾರಿಪಕ್ಷಿಗಳನ್ನೂ ಓತಿಕೇತಗಳನ್ನೂ ಬಿಟ್ಟಾಗ ಅವು ಪ್ರಕಾಶಮಾನವಾದ ವರ್ಣವಿನ್ಯಾಸಗಳಿದ್ದ ಕೀಟಗಳ ಗೋಜಿಗೆ ಹೋಗದೆ ಮರೆಮಾಚಿಕೊಳ್ಳುವ ಬಣ್ಣಗಳಿದ್ದ ಕೀಟಗಳನ್ನು ಹಿಡಿದು ತಿಂದುವು. ಆಕ್ರಮಣಕಾರೀ ಪ್ರಾಣಿಗಳು ತಮ್ಮ ಆಹಾರವನ್ನು ವಾಸನೆಯಿಂದ ಆರಿಸಿಕೊಳ್ಳುತ್ತಾವೆಯೇ ವಿನಾ ದೃಷ್ಟಿಬಲದಿಂದಲ್ಲ ಎಂಬುದು ಆ ಪ್ರಯೋಗದ ತೀರ್ಮಾನ. ಪ್ರಾಣಿಗಳ ಅನುಕರಣತಂತ್ರದ ನಿಜಸ್ವರೂಪ ಮತ್ತು ಪ್ರಭಾವಗಳ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಸಾಹಸದ ಮಾತಾಗುತ್ತದೆ. (ಎಚ್.ವಿ.ಕೆ.) ಅನುಕೂಲಣೆ: ಅನುಕೂಲ ಪಡೆವ ಆವೇಗಕ್ಕೆ (ಇಂಪಲ್ಸ್) ಸರಿಸಮನಾದ ಕೊನೆಯ ಪರಿಣಾಮವಿರುವ ಒಂದು ಆವೇಗದ ಸಾಗಣೆಯಿಂದ, ಸಾಗಿಸುವ ದಾರಿಯ ಮೇಲೆ ಆಗುವ ಇನ್ನೊಂದರ ಮೇಲೆ ತೋರುವ ಈ ಅನುಕೂಲಣೆ ಒಂದಾದ ಮೇಲೆ ಇನ್ನೊಂದರಂತೆಯೋ ಒಟ್ಟಾಗಿಯೋ ಆಗಬಹುದು. ಒಂದು ಅವೇಗ ಒಂದು ಬಾರಿ ಸಾಗಿಹೋದ ನರಕಣಗಳ ಹಿಮ್ಮುರಿಗೆಯಲ್ಲಿ (ರಿಪ್ಲೆಕ್ಸ್) ಹೇಗೋ ಬದಲಾವಣೆ ಆಗುವುದರಿಂದ ಮುಂದಿನ ಆವೇಗಕ್ಕೆ ಅಷ್ಟೊಂದು ತಡೆಯಿರದು. ಇದರಿಂದಾಗಿ, ಗೊತ್ತಾದ ಒಂದು ಆವೇಗ ಯಾವಾಲೂ ನಿರ್ದಿಷ್ಟ ನರದ ದಾರಿಯಲ್ಲೇ ಮತ್ತೆ ಮತ್ತೆ ಸಾಗುವುದು. ಇನ್ನೆಲ್ಲೋ ಹುಟ್ಟಿದ ಆವೇಗಗಳು ಹಿಮ್ಮುರಿಗೆಯ ಕೇಂದ್ರಕ್ಕೆ ಬಂದು ಹಿಮ್ಮುರಿಗೆ ಮತ್ತಿರತ ನರದ ಚಟುವಟಿಕೆಯನ್ನು ಬಲಗೊಳಿಸುತ್ತವೆ. ಸಾಕಷ್ಟು ಬಲವಿಲ್ಲದ ಚೋದನೆಗಳನ್ನು (ಸ್ಟಿಮುಲಿ) ಬಳಿ ಅನುಕೂಲಣೆ ಆಗನಹುದು. ಮುಂಚೆಯೇ ಒಂದು ಆವೇಗದಿಂದ ಚೋದನೆ ಆಗಿರುವುದರ ಪರಿಣಾಮವಾಗಿ, ಒಂದು ನರದ ಸಾಗುದಾರಿಯಲ್ಲಿ ನರದ ಆವೇಗದ ಸಾಗಣೆಯಲ್ಲಿ ಇನ್ನಷ್ಟು ಸುಲಭ ಆಗಿರುವುದಕ್ಕೆ ಬಾನಂಗ್ ಎಂಬ ಜರ್ಮನ್ ಹೆಸರಿದೆ. (ಡಿ.ಎಸ್.ಎಸ್) ಅನುಕ್ರಮ ವಿಶ್ಲೇಷಣೆ: ಸಂಖ್ಯಾಶಾಸ್ತ್ರದಲ್ಲಿ ನಿರ್ಣಯಕ್ಕೆ ಬರಲು ಅನುಸರಿಸುವ ಒಂದು ವಿಧಾನ (ಸೀಕ್ವೆನ್ಷಿಯಲ್ ಆನ್ಯಾಲಿಸಿಸ್). 1940ರ ಆದಿಭಾಗದಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದ ಪ್ರಧಾನಾಧ್ಯಾಪಕ ಅಬ್ರಹಾಂ ವಾಲ್ಡ್ ಇದನ್ನು ಬಹುಮಟ್ಟಿಗೆ ಬೆಳೆಸಿದರು. ಸಾಂಪ್ರದಾಯಿಕ ವಿಧಾನದಲ್ಲಿ (ಕ್ಲ್ಯಾಸಿಕಲ್ ಮೆಥಡ್) ಎಲ್ಲ ಆವೇಕ್ಷಣೆಗಳನ್ನೂ ಮೊದಲೇಮಾಡಿ.