ಪುಟ:Mysore-University-Encyclopaedia-Vol-1-Part-1.pdf/೩೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾನೂನಿನ ಪ್ರಕಾರ ಮಾನನಷ್ತದ ಮಾತುಗಳಿಗೆ ಈ ಸಂದರ್ಭಗಳಲ್ಲಿ ವಿಶೇಷ ರಕ್ಷಣಯಿದೆ. ಗ್ರಂಥಕರ್ತ ಒಬ್ಬ ವ್ಯಕ್ತಿಯ ಹೆಸರು ಬರೆದ ಮಾನನಷ್ಟ ಮಾಡಿದಾರೆ, ಆ ವ್ಯೆಕ್ತಿಗ್ರಂಥಕರ್ತನ ಗಮನದಲ್ಲಿದೆ ಇದ್ದರೂ ಬರಿಯ ಕಾಲ್ಪನಿಕ ವ್ಯೆಕ್ತಿಯಾಗಿದ್ದರೂ ಅಂಥವನಿಗೆ ಅದು ಅನ್ವಯದಾಗುವುದಾದರೆ ಮಾನನಷ್ಟಕ್ಕೆ ಗುರಿಯಾಗುತ್ತಾನೆ. ಲಂಡನ್ ಪತ್ರಿಕೆಯೊಂದು ಜೋನ್ಸ್ (ಎಂಬ ಒಬ್ಬ ಪಾದಿ ) ಪ್ರಾನ್ಸ್ ದೇಶದಲ್ಲಿ ಒಂದು ಹಬ್ಬದಲ್ಲಿ ತನ್ನ ವಿಪರೀತ ನಡೆವಳಿಕೆಯಿಂದ ಅವಮಾನವಾಗುವ ರೀತಿಯಲ್ಲಿ ವರ್ತಿಸಿದನೆಂಬ ಪ್ರಕಟಣೆ ಮಾಡಿತು. ಅದೀ ಸಮಯದಲ್ಲಿ ಲಂಡನ್ನಿನ್ನಲ್ಲಿ ಆರ್ಡಿಮಿನ್ ಜೋನ್ಸ್ ಎಂಬ ಬ್ಯಾರಿಸ್ಟರೊಬ್ಬನಿದ್ದ. ಅವನ ಸ್ನೇಹಿತರು ಈ ವರ್ತಮಾನವನ್ನು ಊದಿದೊಡನೆ ಇದು ತಮ್ಮ ಸ್ನೇಹಿತ ಜೋನ್ಸ್ ಗೆ ಅನ್ವಯಿಸುತ್ತದೆಂದು ತಾವು ಭಾವಿಸುವುದಾಗ ಸಾಕ್ಷ್ಯ ಹೇಳಿದರು. ಪತ್ರಿಕೆ ಜೋನ್ಸ್ ಗೆ ಮಾನನಷ್ಟ ಪರಿಹಾರ ಕೊಡಬೇಕೆಂದು ತೀರ್ಮಾನ್ವಾಯಿತು (ಹುಲ್ವನ್ ವರ್ಸಸ್ ಜೋನ್ಸ್ 1910, ಎ.ಸಿ.20).ಇಡಿ ಒಂದು ಗುಂಪನ್ನೇ ಮಾನನಷ್ಟಕ್ಕೆ ಈಡು ಮಾಡಬಹುದು . ಆಗ ಆ ಗುಂಪಿನ್ವರಿಗೆ ಪರಿಹಾರ ಪಡೆಯುವ ಹಕ್ಕಿದೆ. ಆದರೆ ಯಾವುದೊಂದು ಗುಂಪಿಗೂ ಅನ್ವಯಿಸಲು ಸಾಧ್ಯವಿಲ್ಲದಿರುವ ಹಗು ಸರ್ವರಿಗೂ ಅನ್ವಯಿಸುವ ಮಾತುಗಳು ಪರಿಹಾರಕ್ಕೆ ಅವಕಾಶ ಕೊಡುವುದಿಲ್ಲ. ನ್ಯಾಯಾಧೀಶರನ್ನಗಲಿ,ನ್ಯಾಯಾಲಯದ ವ್ಯವಹಾರಗಳ ವಿಷಯದಲ್ಲಾಗಲಿ ಅವಮಾನಕರವಾದ, ಅವಹೇಳನ ಮಾಡುವ ಹೇಳಿಕೆಗಳು ಮಾನನಷ್ಟದ ವರ್ಗಕ್ಕೆ ಸೇರುತ್ತವೆ. ಅಲ್ಲದ ಕಂಟೆಂಪ್ಟ್ ಆಫ್ ಕೂರ್ಟ್ ನ್ಯಾದ್ಯಾಲಯದ ನಿಂದನ ನಿಯಮದ ವ್ಯಾಪ್ತಿಗೆ ಒಳಪಡುತ್ತವೆ. ನ್ಯಾಯಾಧೀಶರು. ಸಾಕ್ಷಿಗಳು. ವಕೀಲರು ಮತ್ತು ಕಕ್ಷಿಗಾರರಿಗೆ ವಿಶೇಷ ವಿನಾಯಿತಿಗಳಿವೆ ಪರಿಮಿತಿಗಳು ಇವೆ. (ದಿ ಕಂಟೆಂಪ್ಟ್ ಆಫ್ ಕೂರ್ಟಾ ೧೯೫೨) ೪ ಇತರ ತಪ್ಪುಗಳು : ಮೋಸ: ಅಡ್ವೊಕೇಟ್ ಆಗಿಲ್ಲದಿದ್ದರು ಗೌನ್ ಮತ್ತು ಬ್ಯಾಂಡ್ಗಳನ್ನು ಧರಿಸಿ ಇತತರಿಗೆ ತಪ್ಪು ತಿಳಿವಳಿಕೆ ಬರುವಂತೆಮಾಡಿ ವಕಾಲತು ಪಡೆದರೆ, ಮಾತನಾಡದಿದ್ದರೂ ಮೋಸ ಮಾಡದಂತಾಗುತ್ತದ್ದೆ. ಒಂದು ಕಂಪನಿಯ ಡೈರೆಕ್ಟರುಗಳೂ ಸಾಲ ತೆಗೆಡುಕೊಳ್ಳುವ ಜಾಹಿರಾತಿನಲ್ಲಿ ಸುಳ್ಳು ಉದ್ದೇಶಗಳನ್ನು ನಮೂದಿಸಿದಲ್ಲಿ ಅದು ಮೋಸವೆನ್ನಿಸುತ್ತದೆ (ಡೆರಿ ವರ್ಸಸ್ ವೀಕ್ ೧೮೮೯, ೧೪, ವಿ, ಸಿ.೩೩೭, ವಿಶೇಷ ಸಂದರ್ಭದ ವಿವರಣೆ). ಭಿಕಾರಿ ( ಪಾಪರ್) ಆಗಿರುವನ್ನನ್ನು ಆಸ್ತಿವಂತನೆಂದು ಹೇಳಿ ಸಾಲ ಕೊಡಿಸುವುದು ಮೋಸ . ಏಜೆಂಟರುಗಳ ಮೋಸದ ಹೇಳಿಕೆಗಳಿಗೆ ಯಜಮಾನ ನಷ್ಟತುಂಬಿಕೊಡಬೇಕು. ಇದ್ದಕೆ ಕೇವಲು ನಿಯಮಗಳಿವೆ. ಉದಾಸೀನತೆ : Aಯ ವಿಷಯದಲ್ಲಿ ಕರ್ತವ್ಯ ನಿರ್ವಹಣೆಯ ಭಾರಹೊತ್ತ B ತನ್ನ ಕರ್ತವ್ಯನ್ನುಲ್ಲಂಘಿಸಿ ಅದರಿಂದ Aಗೆ ಬಾಧೆ ತಂದರೆ B ಪರಿಹಾರ ಕೊಡಬೇಕಾಗುತ್ಥದೆ. ಸ್ನೇಹಿತನೊಬ್ಬ ತಂದ ಸೀಸೆಯಿಂದ ಒಬ್ಬಕೆ ಸ್ವಲ್ಪ ಬೀರ್ ಬಗ್ಗಿಸಿಕೊಂಡು ಸೇವಿಅ ಸಿ, ಮತ್ತೆ ಸ್ವಲ್ಪ ಸೇವಿಸಲು ಬಗ್ಗಿಸಿದ್ದಾಗ ಅದರಿಂದ ಸತ್ತು ಕೊಳೆತ ಬಸವನ ಹುಳು ಹೊರಕ್ಕೆ ಬಂತು. ಇದರಿಂದ ತಲ್ಲಣ್ಣಗೊಂಡ ಆಕೆ ರೋಗಪೀಡಿತಳಾದಳು. ತಯಾರಕರು ಕರ್ತವ್ಯವನ್ನುಲಂಘಿಸಿದ್ದಾರೆಂದೊ ಪರಿಹಾರ ಕೊಡಬೇಕೆಂದೂ ತೀರ್ಮಾನವಾಯಿತು ಹೀಗೆಯೆ ವೈದ್ಯರು ವಕೀಲರು ಹಾಗೂ ಇನ್ನಿತರ ಬಾಬುಗಳ್ಳಲ್ಲಿ ನೈಪುಣ್ಯ ಪಡೆದವರೂ ಕರ್ತವ್ಯ ದಲ್ಲಿ ಉದಾಸೀನರಾದರೆ ಪರಿಹಾರ ಕೊಡಬೇಕಾಗುತ್ತದೆ.ಶಸ್ತ್ರಚಿಕಿತ್ಸೆಯಲ್ಲಿ ಪರಿಣತನಾದ ವೈದ್ಯನೊಬ್ಬ ಒಬ್ಬನ ಉದರಶಸ್ತ್ರಕ್ರಿಯ ಮಾಡಿದ ಕೆಲವು ದಿನಗಳ ಅನಂತರ ಅವನ ಉದರದಲ್ಲಿ ಹೀರೊತ್ತು ಕಾಣಿಸಿತು. ವೈದ್ಯ ಪರಿಹಾರ ಕೊಡಬೇಕೆಂದು ತೀರ್ಮಾನವಾಯಿತು. ಪೀಡೆ, ಅನಿಷ್ಟ; ಮತ್ತೊಬ್ಬರ ಚರಾಸ್ತಿಯ ಉಪಯೋಗದಲ್ಲಿ ಅಥವ ಸಂಬಂಧಪಟ್ಟ ಅವನ ಹಕ್ಕಿನ ವಿಷಯದಲ್ಲಿ ಕಾನೂನುಬದ್ಧವಲ್ಲದ ರೀತಿಯಲ್ಲಿ ಅದ್ದಿ ತರುವುದು ಅನಿಷ್ಟ ಅಥವ ಪೀಡೆಯಾಗಿರುತ್ತದೆ. ಅನಿಷ್ಟದಲ್ಲಿ ಎರಡು ಬಗೆ. ವ್ಯಕ್ತಿಗೆ ಅನಿಷ್ಟಮತ್ತು ಸಾರ್ವಜನಿಕರಿಗೆ ಅನಿಷ್ಟ ಎಂದು. ಅಡ್ಡಿ ಯಾವ ರೀತಿಯ,ಆದರಿಂದ ಅನಿಷ್ಟ ಉಂಟಾಗಿದೆಯೆ, ಎಂಬುದನ್ನು ನ್ಯಾಯಾಲಯ ನಿರ್ಣಯಿಸುತ್ತದೆ. ವಿದ್ಯುಚ್ಕ್ತಿಯ ಟ್ರಾನ್ಸ್ ಫಾಮರ್ ಉಂಟು ಮಾಡುವ ಶಬ್ದ ಚರ್ಚಿನ ಧರ್ಮೂಪನ್ಯಾಸಕ್ಕೆ ಪೀಡೆಯಲ್ಲಿ. ಕೆಳಮನೆಯ ಕಾಗದದ್ ಡಬ್ಬ ಮಾಡುವವ ಉಪಯೋಗಿಸುವ ಶಾಖದಂದ ಮೇಲ್ಮನೆಯವ ಇಟ್ಟಿದ್ದ ಸೂತ್ಷ್ಮರೀತಿಯ ಕಾಗದ ಅನುಪಯುಕ್ತವಾಗುವುದು ಪೀದೆಯಲ್ಲಿ. ಸಂಗೀತಕಾರನೊಬ್ಬ ಪಕ್ಕದ ಮನೆಯಲ್ಲಿದ್ದವನೊಬ್ಬ ಸಂಗೀತದ ನಿತ್ತ್ಯಪಾಟಗಳಿಓದ ತೊಂದರೆಗೊಂಡು, ಸಂಗೀತ ಆರೊಭವಾದೊಡಣೆ ಕೂಗುವುದು, ಶಿಕ್ಶೆ ಹೊಡೆಯುವುದು, ತಟ್ಟೇ ಬಡಿಯುವುದು ಮುಂತಾದುವನ್ನು ಮಾಡಿ ಪಾಟ ಮುಂದುವರಿಯದಂತೆ ಅಡ್ಡೇ ಮಾಡಿದ. ಸಸಂಗೀತಕಾರನಿಗೆ ಆತ ಪರಿಹಾರ ಕೊಡಬೇಕೆಂದು ತೀರ್ಮಾನವಾಯಿತು ಅನಿಷ್ಟದ ವ್ಯಾಪ್ತಿ ಸುವಿಸ್ತಾರವಾಗಿದೆ. ಆದರ ಸ್ವರೂಪವನ್ನು ನ್ಯಾಯಾಲಯಗಳ ತೀರ್ಪುಗಳಿಂದ ತಿಳಿಯಬಹುದು. ವಿಶೇಷ ಹೊಣೆ: ಯಾವ ದುರುದ್ದೆಶ ಅಥವಾ ಉದಾಸೀನತೆಯಿಲ್ಲದಿದ್ದರೂ ಕೆಲವು ನಿಯಮಿತ ಸಂಧರ್ಭಗಳಲ್ಲಿ ಒಬ್ಬ ವಿಶೇಶ ಹೊಣೆಗೆ ಬಧನಾಗಬಹುದು.ಇದ್ದಕೆ ರೈಲ್ಯಾಂಡ್ ವರ್ಸಸ್ ಪ್ಲೇಚರ್ ಹೊಣೆ ಎಂದು ಕರೆಯುತ್ತರೆ.ಒಬ್ಬ ಗಿರಣೆ ಮಾಲೀಕ ತನ್ನ ಸ್ವಂತ ಭೂಮಿಯಲ್ಲಿ ಒಂದು ದೊಡ್ಡ ನೀರಿನ ತೊಟ್ಟಿ ಕಟ್ಟಲು ಕಂಟ್ರಾಕ್ಟರನ್ನು ನೇಮಿಸಿದ.ತೊಟ್ಟಿ ಕಟ್ಟುವ ಜಾಗಕ್ಕೊ ಪಕ್ಕದ ಮತ್ತೊಬ್ಬನ ಗಣಿಗೊ ಮಧ್ಯೆ ಕಂದಕಳಿದ್ದು. ಅವುಗಳನ್ನು ಕೊಡುಗಂಬಗಳಿಂದ ಮುಚ್ಚಿದರು.ಕಲ್ಲುಮಣ್ಣೆ ನಿಂದ ಮುಚ್ಚಿದ ಅವು ಹೋಚರವಾಗುವಂತಿರಲಿಲ್ಲ. ತೊಟ್ಟಿ ನಿರ್ಮಿಸಲ್ಪಟ್ಟ ಅನಂತರ ಅದ್ದಕ್ಕೆ ಪೂರ್ತಿ ನೀರು ತುಂಬಲಾಯಿತು. ನೀರು ಕೊಡುಕಂಬಗಳಿಂದ ಮುಚ್ಚಿದರು. ಕಲ್ಲುಮಣ್ಣೆ ನಿಂದ ಮುಚ್ಚಿದ ಅವು ಗೋಚರವಾಗುವಂತಿರಲಿಲ್ಲ. ತೊಟ್ಟೀ ನಿರ್ಮಿಸಲ್ಪಟ್ಟ ಅನಂತರ ಅದಕ್ಕೆ ಪೂರ್ಥಿ ನೀರು ತುಂಬಲಾಯಿತು. ನೀರು ಕೊಡುಕಂಬಗಳನ್ನೊಡೆದುಕೊಂಡು ಗಣಿಗೆ ಪ್ರವಹಿಸಿತು. ಓದಾಸೀನ್ಯ್ವಿಲ್ಲದಿದ್ದರು ದುರುದ್ದೇಶದಿಲ್ಲದಿದ್ದರು ಗಿರಣಿ ಮಾಲಿಕ ಪರಿಹಾರ ಕೊದಬೇಕೆಂದು ತೀರ್ಮಾನಿಸಲಾಯಿತು .ವಿಶೇಷ ಹೊಣೆಯ ವ್ಯಾಪ್ತಿ ಅಪಕ್ರತ್ಯದಲ್ಲಿ ಗಮನಾರ್ಹ ಸ್ಥಾನ ಪಡೇದಿದೆ. ಅಪಚಾರ: ಧರ್ಮನಿಂದೆ,ದೇವನಿಂದೆ ಗುರುನಿಂದೆ ಅಪವಿತ್ರ ವಾಟ್ಶ್ರಯೋಗ ಮುಂತಾದವು. ಪ್ರಾಚೀನ ಗ್ರೀಸ್ ದೋಮ್ ದೇಶದಲ್ಲಿ ಅಪಚಾರವನ್ನು ಒಂದು ಅಪರಾದವಾಗಿ ಪರಿಗಣಿಸಿದ್ದರು; ಜನರ ದುರ್ಮಾರ್ಗ ಪ್ರವ್ರತ್ತಿಗೆ ಇದು ಪ್ರೇರಕವೆಂಬ ಕಾರಣದಿಂದ, ಸಾಕ್ರಟೀಸನನ್ನು ಗುರಿಪಡಿಸಿದ್ದು ಒಂದು ಉದಾಹರಣೆ. ಆದರೆ ಇದೊಂದು ಮಹಾಪಾಪವೆಂಬ ಕಲ್ಪನೆ ಏಕೆ ದೇವತಾವದವನ್ನು ಎತ್ತಿಹಿಡಿಯುವ ಯಹೊದಿ ಮತ್ತು ಕ್ರಿಸ್ತದರ್ಮಗಳ ವೈಶಿಷ್ಟ್ಯವೆನ್ನಬಹುದು. ದೆವದ್ರೋಹಿಗಳಾದ ಪಾಷಂಡಿಗಳಿಗೆ ಅವರು ಮರಣದಂಡಣೆಯನ್ನೊ ವಿಧಿಸುತ್ತಿದ್ದರು. ದೇವನಿಂದೆಯಂತೆ, ಧರ್ಮ ಹಾಗು ಧಾರ್ಮಿಕ ಸಂಸ್ಥೆಗಳ ದ್ರೋಹವನ್ನೊ ಅಪಚಾರವೆಂದು ಪರಿಗಣಿಸಲಾಗುತ್ತಿತ್ತು. ಮಧ್ಯಯುಗ ಅನಂತರ ಯುರೋಪಿನಲ್ಲಿ ಅಪಚಾರವನ್ನು ಪಾತಕವೆನ್ನದಿದ್ದರು ಸಮಾಜ ಘತುಕ ಪ್ರವ್ರತ್ತಿಯೆಂದೇ ತಿಳಿಯುತ್ತ ಬಂದಿದ್ದಾರೆ. ಎಸ್ಲಾಂ ಧರ್ಮದಲ್ಲಿ ಕೊಡ ದೇವನಿಂದೆ ಪಾತಕವೆನಿಸುತ್ತದೆ. ಹಿಂದೂಧರ್ಮದಲ್ಲಿ ಧರ್ಮದೊಹಿಕ ಇಹದಲ್ಲಿ ಧರ್ಮಬಹಿಷ್ಕಾರಾದಿಶಿಕ್ಶೆಗಳೊ ಪರದಲ್ಲಿ ನರಕಪ್ರಾಪ್ತಿಯೇ ಮುಂತಾದ ದುರ್ಗತಿಗಳು ಉಕ್ತವಾಗಿದ್ದರೊ ರಾಜಕೀಯವಾಗಿ ದಂಡನೆ ವಿಧಿಸುತ್ತಿದಂತೆ ಕಾಣುವುದಿಲ್ಲ. ಅನೇಕ ದೇವತೆಗಳನ್ನೊಪ್ಪುವ ಭಾರತೀಯರಲ್ಲಿ ಪ್ರತಿಯೊಬ್ಬನಿಗೆ ಯಾವುದಾದರು ಒಬ್ಬ ದೇವನಲ್ಲಿ ಶ್ರದ್ಧೆ ಇರುತ್ತದಾದ ಕಾರಣ ಯಾರ ಮೇಲೊ ದೈವನಿಂದೆಯ ಕಳಂಕ ಹೊರಿಸುವ ಅಗತ್ಯ ಕಾಣಲಿಲ್ಲ. ವೇದಪುರಾನಗಳ ಕಾಲನಂತರ ಶಿವ ವಿಷ್ಣು ಮುಂತಾಗಿ ಏಕದೇವವಾದಗಳು ಪ್ರಾಬಲ್ಯಕ್ಕೆ ಬಂದಾಗ ಶೈವ, ವೈಷ್ಣವ, ಮುಂತಾದ ಧರ್ಮಗಳಲ್ಲೊ ಅಪಚಾರವೆಸಗಿರುವ ಜೀವ ತೆಗೆಯಬೇಕೆನ್ನುವವರೆಗೆ ಅಪಚಾರಭಾವನೆ ವಿಕಸವಾಲ್ಗುವುದನ್ನು ಕಾಣಬಹುದು. ಧರ್ಮಕ್ಕಾಗಿ ಕಾದುವುದನ್ನು ಒಪ್ಪುವ ವೀರಶೈವ. ವೀರವೈಷ್ಣವ. ಸಿಖ್ ಮುಂತಾದ ಪಂಥಗಳೂ ಭಾರತದಲ್ಲಿ ಕಡೆಕಡೆಗೆ ಉದಿಸಿದುವಾದರೂ ಅಲ್ಲೆಲ್ಲಿಯೂ ಪ್ರಾಶ್ಚಾತ್ಯದೇಶಗಳಂತೆ ಧರ್ಮಾಂಧತೆ ನಮ್ಮ ದೇಶದ ರಾಜಕಾರಣವನ್ನು ಕಪಿಮುಷ್ಟಿಯಲ್ಲಿ ಹಿಡಿಯಲಿಲ್ಲ. ರಾಜಕೀಯಮೈರಿಗಳನ್ನು ನಾಶಮಾಡಲು ಅಪಚಾರ್ವನ್ನು ಒಂದು ಅಸ್ತ್ರವನ್ನಾಗಿ ಬಳಸಿದ್ದು ಭಾರತ ಇತಿಹಾಸದಲ್ಲಿ ತುಂಬ ವಿರಳ.