ಪುಟ:Mysore-University-Encyclopaedia-Vol-1-Part-1.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪ್ಸರೆಕೀಟ - ಅಫೀಮು

ಪೈಪೋಟಿಯ ಈ ಯುಗದಲ್ಲಿ ಹೊಸದೊಂದು ಸಂಸ್ಥೆ ಅಂಥದೇ ಹೊಸದೊಂದು ಪದಾರ್ಥವನ್ನು ಮಾರಾಟಕ್ಕಿಟ್ಟು ಇನ್ನು ಹೆಚ್ಚಿನ ಪ್ರಲೋಭನವನ್ನೊಡ್ದಿದಾಗ ಹಳೆಯ ವಸ್ತು ಅಪ್ರಚಲಿತವಾಗಬಹುದು. ಒಂದು ವಸ್ತುವಿನ ಅಪ್ರಚಲಿತತೆಗೆ ಗಿರಾಕಿಯ ಅಭಿರುಚಿ,ಮನೋಧರ್ಮಗಳು ಬಹು ಮುಖ್ಯ ಕಾರಣಗಳಾಗಿವೆ.ಸೌಲಭ್ಯ, ಬೆಲೆ, ರಂಜನೆಗಳೇ ಈ ವಿಷಯವನ್ನು ನಿರ್ಧರಿಸುವ ಅಂಶಗಳು. ಅದ್ದರಿಂದ ಉತ್ಪಾದಕರು ನಿರಂತರ ಸಂಶೋಧನೆಯಲ್ಲಿ ತೊಡಗಿ ಗಿರಕಿಗಳಿಗೆ ಹೆಚ್ಚು ಹೆಚ್ಚಿನ ಸೌಲಭ್ಯಗಳನ್ನು ಸುಲಭ ಬೆಲೆಗೆ ಒದಗಿಸುವುದರೊಡನೆ ಅವರ ರಸಿಕತೆಗೂ ತುಷ್ಟಿಯನ್ನೊದಗಿಸಬೇಕಾಗುತ್ತದೆ.


ಅಪ್ಸರೆಕೀಟ : ಮೊಟ್ಟೆಯಿಂದ ಹೊರಕ್ಕೆ ಬಂದು ಅಪೂರ್ಣ ರೂಪಾಂತರಹೊಂದಿ,ಕೊನೆಯ ಸಲ ಮೊರೆ ಬಿಟ್ಟು, ಪ್ರಾಯಕ್ಕೆ ಬರುವ ಕೀಟದ ಮರಿಯ ಹೆಸರು(ನಿಂಫ್), ಮಿಡತೆ, ತಿಗಣೆ, ಕೊಡತಿ ಹುಳು ( ಡ್ರೇಗನ್ ಫ್ಲೈ) ಮುಂತಾದ ಕೀಟಗಳ ಮರಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ಈ ಮರಿಗಳು ಮೊಟ್ಟೆಗಳಿಂದ ಹೊರಕ್ಕೆ ಬಂದಾಗ ಅವುಗಳ ಶರೀರ ರಚನೆ ಸ್ವಲ್ಪಮಟ್ಟಿಗೆ ಪ್ರಾಯದ ಅವಸ್ಥೆಯಲ್ಲಿದ್ದಂತೆಯೆ ಇರುತ್ತದೆ. ಆದರೆ ರೆಕ್ಕೆಗಳು ಮತ್ತು ಬಾಹ್ಯಜನನೇಂದ್ರಿಯ ಪೂರ್ತಿ ಬೆಳೆದಿರುವುದಿಲ್ಲ. ಬಾಯಿ ಬಾಗಗಳು, ಸಂಯುಕ್ತ ನೇತ್ರಗಳು ಪ್ರಾಯದ ಕೀಟಗಳಲ್ಲಿದ್ದಂತೆಯೇ ಇರುತ್ತವೆ.ಮರಿ ಪ್ರಾಯಕ್ಕೆ ಬರುವವರೆಗಿನ ಬೆಳೆವಣಿಗೆ ಸರಳವಾಗಿದ್ದು ಕೋಶಾವಸ್ಥೆ ಇರುವುದಿಲ್ಲ. ಮರಿ ಮತ್ತು ಪ್ರಾಯದ ಕೀಟಗಳ ನಡತೆ ಒಂದೇ; ಅವು ಒಟ್ಟಿಗೆ ಸೇರಿ ತಿನ್ನುತ್ತೆವೆ. ಮರಿಗಳು ಬೆಳೆದಂತೆಲ್ಲ ಪ್ರಾಯದ ಕೀಟಗಳನ್ನು ಹೆಚ್ಚುಹೆಚ್ಚಾಗಿ ಹೋಲುತ್ತೆವೆ.


ಮಿಡತೆ:ಮಿಡತೆಯ ಅಪ್ಸರೆ ಹುಟ್ಟಿದಾಗ ಸಾಮಾನ್ಯರೂಪಿನಲ್ಲಿ ತಾಯಿ ಮಿಡತೆಯನ್ನು ಹೋಲುತ್ತದೆ ಆದರೆ ದವಡೆ, ಕಣ್ಣು, ಕಾಲು, ರೆಕ್ಕೆ ಇವು ತಾಯಿಗಿರುವಂತೆ ಇರುವುದಿಲ್ಲ. ಮೈಮೇಲಿನ ಗುರುತುಗಳೂ ಬೇರೆಯಾಗಿರಬಹುದು ಕುಡಿಮೀಸೆ ಸರಳ ರೀತಿಯದು; ೪-೭ ಸಾರಿ ಪೊರೆಬಿಟ್ಟು ಹಂತಗಳಲ್ಲಿ ಬೆಳೆದು ಕೊನೆಯ ಸಲ ಪ್ರಾಯಕ್ಕೆ ಬರುತ್ತದೆ.೨-೩ನೆಯ ಹಂತಗಳಲ್ಲಿ ಎದೆಯ ೨ ಮತ್ತು ೩ನೆಯ ಖಂಡಗಳಮೇಲೆ ರೆಕ್ಕೆಗಳು ಕಾಣಿಸಿಕೊಂಡು ಅಪ್ಸರೆ ಬೆಳೆದಂತೆಲ್ಲ ರೆಕ್ಕೆಗಳು ದೊಡ್ಡವಾಗುತ್ತವೆ. ಹೆಣ್ಣು ಗಂಡಿನ ವ್ಯತ್ಯಾಸಗಳು ಸಹ ಮೊದಲೇ ಕಂಡುಬಂದು ಅಪ್ಸರೆ ಬೆಳೆದಂತೆಲ್ಲ ವ್ಯಕ್ತವಾಗುತ್ತವೆ.


ತಿಗಣೆ: ಮಿಡತೆಯ ಅಪ್ಸರೆಯಂತೆಯೇ ಬಣ್ಣದಲ್ಲಿ ಬದಲಾವಣೆ ತೋರುತ್ತದೆ.ಬೆಳೆದ ಹಾಗೆ ಕುಡಿಮೀಸೆ ಮತ್ತು ಕಾಲಿನ ಕೊನೆಯ ತುಂಡುಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಅ ತುಂಡುಗಳೆಲ್ಲಿ ಮೂಡಬೇಕಾದರೆ ಅಪ್ಸರೆ ಪ್ರಾಯಕ್ಕೆ ಬರಬೇಕು. ತಲೆ ಮತ್ತು ಎದೆಯ ಅಕಾರ ಪ್ರತಿ ಹಂತದಲ್ಲೂ ಬದಲಾಯಿಸುತ್ತದೆ. ೩ನೆಯ ಹಂತದಲ್ಲಿ ರೆಕ್ಕೆಗಳ ಮೊಗ್ಗುಗಳು ಸ್ವಲ್ಪ ಕಂಡು ೪ನೆಯ ಹಂತದಲ್ಲಿ ಚೆನ್ನಾಗಿ ವ್ಯಕ್ತವಾಗುತ್ತವೆ. ಅದರ ಬೆಳೆವಣಿಗೆಯ ಹಂತಗಳ ಸಂಖ್ಯೆಯಲ್ಲಿ ವ್ಯತ್ಯಾಸವುಂಟು; ಹೆಚ್ಚೆಂದರೆ ಏಳು ಹಂತಗಳಿವೆ. ತಾಯಿ ಮತ್ತು ಅಪ್ಸರೆಗಳು ಜೊತೆಯಲ್ಲಿ ಇದ್ದು ಆಹಾರ ಸೇವಿಸುತ್ತದೆ.


ಕೊಡತಿ ಹುಳು : ಮರಿ ಮೊಟ್ಟೆಯಿಂದ ಹೊರಕ್ಕೆ ಬಂದಾಗ ಪೂರ್ವಾಪ್ಸರೆ ಸ್ಥಿತಿಯಲ್ಲಿದ್ದು(ಪೋನಿಂಫ್), ಪೊರೆ ಬಿಟ್ಟು ೨ನೆಯ ಹಂತದಲ್ಲಿ ಅಪ್ಸರೆಯಾಗುತ್ತದೆ. ಇದು ಜಲವಾಸಿ; ಕೀಟಾಹಾರಿ. ಉಸಿರಾಡುವ ವಿಧಾನದ ಮೇಲೆ ಅವುಗಳಲ್ಲಿ ಎರಡು ಬಗೆಯವನ್ನು ಕಾಣಬಹುದು; ಒಂದರ ಶರೀರದ ಕೊನೆಯಲ್ಲಿ ೩ ಭಾಗಗಳಿದ್ದು ಅವು ಮುಚ್ಚಿಕೊಂಡಾಗ ಗೋಪುರಾಕೃತಿಯಾಗುತ್ತದೆ. ಆಸನದ್ದಾರ ಗೋಪ್ಯವಾಗುತ್ತದೆ. ಗುದನಾಳದಲ್ಲಿರುವ ಕಿವಿರುಗಳಿಂದ ಉಸಿರಾಟ ನಡೆಯುತ್ತದೆ. ಇನ್ನೊಂದರಲ್ಲಿ ಶರೀರದ ಕೊನೆಯ ೩ ಭಾಗಗಳು ದೊಡ್ಡವಾಗಿದ್ದು, ವಿಶೇಷ ರೀತಿಯ ಅಸನಕಿವಿರುಗಳಾಗಿ(ಆನಲ್ ಗಿಲ್ಸ್) ಉಸಿರಾಟದ ಅಂಗಗಳಾಗುತ್ತವೆ. ಗುದನಾಳದ ಕಿವಿರುಗಳಿರುವುದಿಲ್ಲ. ೧೧-೧೫ ಸಾರಿ ಪೊರೆ ಬಿಡುತ್ತದೆ. ಪೂರ್ತಿ ಬೆಳೆಯಲು ೧-೨ ವರ್ಷಗಳು ಬೇಕು. ಪ್ರಾಯದ ರೆಕ್ಕೆ ಕೊಡತಿ ಹುಳುವಾಗುವುದಕ್ಕೆ ಮುಂಚೆಯೆ ಪೂರ್ತಿ ಬೆಳೆದ ಅಪ್ಸರೆ ನೀರಿನಿಂದ ಹೊರಕ್ಕೆ ಬರುತ್ತದೆ. ಇದರ ಬಾಯ ಭಾಗಗಳಲ್ಲಿ ಒಂದು ಮುಸುಕಿದೆ. ಇದೇ ಪಾರ್ಪಾಟಾದ ಕೆಳದುಟಿ. ಕೀಟಗಳನ್ನು ಹಿಡಿದುಕೊಳ್ಳುವ ಈ ಅಂಗವನ್ನು ಮಿಂಚೆನಂತೆ ಚಾಚಿ ಕೀಟವನ್ನು ಎಳೆದುಕೊಳ್ಳುತ್ತದೆ.

ಅಪ್ಸರೆಯ ಮುನ್ನೆದೆ ಉದ್ದ. ಎದೆಯ ಉಳಿದೆರಡು ಭಾಗಗಳು ಒಂದುಗೂಡಿವೆ. ಕಾಲುಗಳು ಬಹಳ ಉದ್ದ. ಫೀಮರ್-ಟ್ರೊಕಾಂಟರ್ ಸಂಧಿ ಸುಲಭವಾಗಿ ಬಗ್ಗುತ್ತದೆ.ಈ ಉಪಾಯದಿಂದ ಅದು ಶತ್ರುವಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತದೆ. ದೇಹದಲ್ಲಿ ೧೦ ಖಂಡಗಳಿವೆ, ಕೊನೆಯಲ್ಲಿ ೩ ದೊಡ್ಡ ಬಿರುಗೂದಲುಗಳಿವೆ. ಕೆಲವು ಜಾತಿಗಳಲ್ಲಿ ಇವು ಕಿವಿರುಗಳಾಗುತ್ತವೆ.೪-೫ನೆಯ ಹಂತದಲ್ಲಿ ಜನನಾಂಗಗಳು ಕಾಣಿಸಿಕೊಳ್ಳುತ್ತವೆ.


ಅಪ್ಸರೆಯರು: ಸ್ವರ್ಗದ ಹೆಂಗಳೆಯರು; ಗಂಧರ್ವರ ಹೆಂಡತಿಯರೆಂದು ಕಲ್ಪನೆ. ನೀರಿನಲ್ಲಿ ವಿಹರಿಸುವುದು ಇವರಿಗೆ ತುಂಬ ಪ್ರಿಯವಾದ ಹವ್ಯಾಸವಾದುದರಿಂದ ಇವರಿಗೆ ಈ ಹೆಸರು (ಅಪ್ಸು ನಿರ್ಮಥನಾದೇವ ರಸಾತ್). ಹಾಲುಗಡಲನ್ನು ದೇವಾಸುರರು ಕಡೆಯುವಾಗ ಜನಿಸಿದರು. ಸಾಮಾನ್ಯವಾಗಿ ದೇವರಾಜ ಇಂದ್ರನ ಬಳಿ ಊಳಿಗದಲ್ಲಿರುವವರು.ಇಂದ್ರನಿಗೆ ಅಪ್ಸರೆಯರ ಒಡೆಯನೆಂದೇ ಹೆಸರು. ಇಂದ್ರಸಭೆಯಲ್ಲಿ ಗೀತ, ನೃತ್ಯ,ನಾಟಕಗಳನ್ನು ನಡೆಸಿ ರಂಜನೆಗೆ ಕಾರಣವಾಗುವುದೇ ಇವರ ಮುಖ್ಯ ಕೆಲಸ. ಋಷಿಗಳು ತಪಶ್ಚರ್ಯ ಮಾಡುವಾಗ ಇಂದ್ರಪದವಿಗೆ ಆತಂಕವಾದರೆ ಇಂಥವರ ತಪೋಭಂಗಮಾಡುವುದೂ ಇವರ ಕೆಲಸವೇ. ಇವರು ಬೇಕೆಂದ ಹಾಗೆ ರೂಪವನ್ನು ಮರೆಸಿಕೊಳ್ಳಬಲ್ಲರೆಂದೂ ಪ್ರಭಾವಕಾಲಿಗಳೆಂದೊ ಪುರಾಣದ ಕಥೆಗಳಿವೆ. ಇವರಿಗೆ ಸ್ವರ್ವೇಶ್ಮಯರು ಎಂದರೆ ಸ್ವರ್ಗಲೋಕದ ವೇಶ್ಯೆಯರು ಎಂದೂ ವ್ಯವಹಾರವಿದೆ. ಇವರಲ್ಲಿ ೧೪ ಬಗೆಯುಂಟೆಂದು ಬಾಣಭಟ್ಟ ತಿಳಿಸುತ್ತಾನೆ. ಊರ್ವಶೀ, ಮೇನಕಾ, ರಂಭಾ, ತಿಲೋತ್ತಮಾ ಇವರ ರೂಪದ ವ್ಯೆಶಿಷ್ಟ್ಯವೂ ತಪೋವಿಘ್ನಸಾಮರ್ಥ್ಯವೊ ಹಲವಾರು ಕಥೆಗಳಲ್ಲಿ ಬಂದಿದೆ. ನರನಾರಾಯಣ ಋಷಿಗಳು ಬದರಿಯಲ್ಲಿ ತಪಶ್ಚರ್ಯ ಮಾಡುತ್ತಿದಾಗ, ಅವರ ತಪಸ್ಸನ್ನು ಭಂಗಪಡಿಸಲು ಅಪ್ಸರೆಯರು ಬಂದು ನಾರಾಯಣ ಋಷಿಯ ತೊಡೆಯನ್ನು ಕೆರೆದರೆಂದೊ ಅದರಿಂದ ಸುರಸುಂದರಿಯಾದ ಊರ್ವಶಿ ಹೊರಬಂದಳೆಂದೂ ಅವಳ ಲಾವಾಣ್ಯರಾಶಿಯನ್ನು ಕಂಡು ಉಳಿದ ಅಪ್ಸರೆಯರು ನಾಚಿ ಹಿಂದಿರುಗಿದರೆಂದೂ ಕಥೆಯಿದೆ. ಈ ಊರ್ವಶಿ ಶಾಪದಿಂದ ಭೂಮಿಗೆ ಬಂದು ಸುರೂರವನೆಂಬ ರಾಜನೊಂದಿಗೆ ಬಾಳಿದಳು. ಅರ್ಜುನನಿಗೆ ನಪುಂಸಕನಾಗುವಂತೆ ಶಾಪ ಕೊಟ್ಟವಳೂ ಇವಳೇ. ವಿಶ್ವಮಿತ್ರನ ಯಪೋಭಂಗ ಮಾಡಿ ಮೇನಕೆ ಆತನಿಂದ ಶಕುಂತಲೆಯನ್ನು ಪಡೆದಳು. ರಂಭೆ ಕಶ್ಯಪ ಋಷಿಯ ಮಗಳು; ಪ್ರಾಧೆ ಅವಳ ತಾಯಿ. ಈಕೆ ತುಂಬುರು ಎನ್ನುವ ಗಂಧರ್ವಗಾಯಕನ ಹೆಂಡತಿ. ವಿಶ್ವಮಿತ್ರನು ಇವಳನ್ನು ಶಿಲೆಯಾಗುವಂತೆ ಶಪಿಸಿದ ಕಥೆ ರಾಮಾಯಣದಲ್ಲಿ ಬರುತ್ತದೆ. ರಂಭೆ ಕುಬೇರನ ಪ್ರೆಯಸಿಯೆಂದೂ ಕಥೆಯಿದೆ. ತಿಲೋತ್ತಮೆ ವಿಶ್ವಕರ್ಮನ ಮಗಳು; ಅರಿಷ್ಟೆ ಅವಳ ತಾಯಿ. ಉಳಿದ ಅಪ್ಸರೆಯರಿಗಿಂತ ಇವಳು ಒಂದು ಎಳ್ಳು ಕಾಳಿನಷಾದರೂ ಹೆಚ್ಚು ರೂಪವತಿ (ತಿಲೋತ್ತಮಾ). ದುರ್ವಾಸ ಋಷಿಯಿಂದ ಈಕೆಗೆ ಶಾಪ ಒದಗಿದ ಕಥೆ ಹರಿವಂಶದಲ್ಲಿ ಬರುತ್ತದೆ.


ಅಫಜಲಪುರ : ಗುಲ್ಬರ್ಗ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಒಂದು ತಾಲ್ಲೂಕು ಹಾಗೂ ಆಡಳಿತ ಕೇಂದ್ರ. ಉತ್ತರ ದಿಕ್ಕಿಗೆ ಆಳಂದ್ ತಾಲ್ಲೂಕು ಮತ್ತು ಸೋಲ್ಲಾಪುರ ಜಿಲ್ಲೆ. ಪೂರ್ವದಲ್ಲಿ ಗುಲ್ಬರ್ಗ ತಾಲ್ಲೂಕು ಮತ್ತು ದ‍ಕ್ಷಿಣದಲ್ಲಿ ಜೇವರಗಿ ತಾಲ್ಲೂಕು ಮತ್ತು ಬಿಜಾಪುರ ಜಿಲ್ಲೆ. ಇವು ಈ ತಾಲ್ಲೂಕ್ಕನ್ನು ಸುತ್ತುವರಿದಿವೆ ನಿಜಾಮರ ಆಳ್ವಿಕೆಯ ಕಾಲದಲ್ಲಿ ಅಫಜಲಪುರ ಪೈಗಾ ತಾಲ್ಲೂಕು ಆಗಿತ್ತು. ಈಗ ಇದು ಗುಲ್ಬರ್ಗ ಉಪವಿಭಾಗದಲ್ಲಿದೆ. ತಾಲ್ಲೂಕಿನ್ಲ್ಲಿರುವ ಗ್ರಾಮಗಳು ೯೦. ಸರ್ಕಲ್ (ಹೋಬಳಿ)ಗಳು ಮೂರು-ಅಫಜಲಪುರ, ಅತ್ನೂರು ಮತ್ತು ಕರಜಗಿ. ತಾಲ್ಲೂಕಿನ ವಿಸ್ತಿರ್ಣ ೧೩೦೫ಚ.ಕಿಮೀ. ಜನಸಂಖ್ಯೆ ೧,೭೯,೮೧೬.


ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣ ಗಡಿಗುಂಟ ಭೀಮನದಿ ಹರಿಯುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಆಮರಜ ನದಿ ತಾಲ್ಲೂಕಿನ ಮಧ್ಯದಲ್ಲಿ ಹಾದು ಗಾಣಗಾಪುರದ ಬಳಿ ಭೀಮಾ ನದಿಯನ್ನು ಕೂಡುತ್ತದೆ. ಬೋರಿ ಎಂಬ ಚಿಕ್ಕ ನದಿ ಸಹ ಉತ್ತರ-ದಕ್ಷಿಣವಾಗಿ ಹರಿದು ಅಫಜಲಪುರಕ್ಕೆ ಸ್ವಲ್ಪ ಪಶ್ಚಿಮದಲ್ಲಿ ಬೀಮಾನದಿಯನ್ನು ಸೇರುತ್ತದೆ. ಬೀಮಾನದಿಗೆ ಅಫಜಲಪುರದ ಬಳಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ದಖನ್ ಟ್ರಾಪ್ ಹರಡಿರುವ ಈ ತಾಲ್ಲೂಕಿನ ಕರಿಎರೆ ಮತ್ತು ಮರಲುಮಿಶ್ರಿತ ಕೆಂಪುಮಣ್ಣಿನ ಭೂಮಿ ಇದೆ. ಬಾವಿಗಳ ನೀರಾವರಿ ಸೌಕರ್ಯದಲ್ಲಿ ಅಫಜಲಪುರ ತಾಲ್ಲೂಕು ಗುಲ್ಬರ್ಗ ಜಿಲ್ಲೆಯಲ್ಲಿ ೩ನೆಯ ಸ್ಥಾನ ಪಡೆದಿದೆ. ಬತ್ತ, ಜೋಳ, ಹತ್ತಿ, ಕಡಲೆ, ತೊಗರಿ, ಕಡಲೆಕಾಯಿ ಇಲ್ಲಿನ ಮುಖ್ಯ ಬೆಳೆಗಳು. ಗೋಧಿ, ಜವೆ(ಬಾರ್ಲಿ) ಬಾಳೆಹಣ್ಣು, ಕಾಯಿಪಲ್ಯೆ ಮತ್ತು ಮೆಣಸಿನಕಾಯಿ ಸಹ ಬೆಳೆಯಲಾಗುತ್ತದೆ.


ಖಿಲ್ಲರ್ ಜಾತಿಯ ದನದ ಸಾಕಣೆ ಇಲ್ಲಿ ವಿಶೇಷ ಬೀಮಾನದಿಯ ದಂಡೆಯುದ್ದಕ್ಕೂ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಗಾಣಗಾಪುರದಲ್ಲಿ ಭೀಮಾನದಿಯ ದಂಡೆಯ ಮೇಲೆ ಮೀನುಗಳ ಬೆಳವಣಿಗೆ ಮತ್ತು ಸಂಗ್ರಹಕ್ಕಾಗಿ ಕಾರ್ಯಕ್ರಮವೊಂದಿದೆ.


ಈ ತಾಲ್ಲೂಕಿನಲ್ಲಿರುವ ಗಾಣಗಾಪುರ ಪವಿತ್ರ ಯಾತ್ರಾಸ್ಥಳವೆಂದು ಪರಿಗಣಿತವಾಗಿದೆ. ಭಗವತಿ ದೇವಾಲಯವಿರುವ ಘಟ್ಟೆರ್ಗ, ಸಿದ್ಧರಾಮೇಶ್ವರ ದೇವಾಲಯವಿರುವ ಹವಲ್ಗ, ಬಸವೇಶ್ವರ ದೇವಾಲಯವಿರುವ ಅತ್ನೂರು, ಮಹಂತೇಶ್ವರ ಗುಡ್ಡ ಮಠ ಇರುವ ಚಿನಮಗೇರೆ, ಶಹಾಬುದ್ದೀನ್ ಎಂಬ ಸಂತರ ದರ್ಗ ಇರುವ ಕರಜಗಿ ಈ ಗ್ರಾಮಗಳು ಈ ಸುತ್ತಿನ ಜನರಿಗೆ ಪವಿತ್ರವೆನಿಸಿವೆ.


ತಾಲ್ಲೂಕಿನ ಮುಖ್ಯಸ್ಥಳ ಅಫಜಲಪುರ. ಜನಸಂಖ್ಯೆ ೧೯,೧೧೪. ಈ ಊರಿನಿಂದ ಚೌಡಾಪುರಕ್ಕೆ ಮತ್ತು ಮಣ್ಣೂರಿನ ಮೂಲಕ ಗುಲ್ಬರ್ಗಕ್ಕೆ ಒಳ್ಳೆಯ ರಸ್ತೆ ಸಂಪರ್ಕ ಇದೆ. ಬಿಜಾಪುರದ ೨ನೆಯ ಆದಿಲ್ ಷಾನ ಸರದಾರನಾಗಿದ್ದು ಶಿವಾಜಿಯಿಂದ ಪ್ರತಾಪಗದದಲ್ಲಿ ಹತನಾದ ಅಫ್ಜಲಖಾನನಿಂದ ಊರಿಗೆ ಈ ಹೆಸರು ಬಂದಿದೆ.


ಅಫೀಮು : ಗಸಗಸೆ ಗಿಡದ ಅಪಕ್ವ ಹಣ್ಣಿಗೆ ಕಚ್ಚುಮಾಡಿದಾಗ ಸ್ತವಿಸುವ ಹಾಲನ್ನು ಶೇಖರಿಸಿ ಒಣಗಿಸಿ ಪಡೆಯಲಾಗುವ ವಸ್ತು ( ಓಪಿಯಮ್). ಗಸಗಸೆ ಪೆಪಾವರೇಸೀ ಕುಟುಂಬದ ಪೆಪಾವರ್ ಸೋಮ್ನಿಫರಮ್ ಜಾತಿಯ ಒಂದು ಪ್ರಭೆದ. ಈ ಗಿಡದ