ಪುಟ:Mysore-University-Encyclopaedia-Vol-1-Part-1.pdf/೩೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.                      ಅಬಿಡಾಸ್

ಮೊದಲನೆಯದು,ಹವೆ ತಂಪಾಗಿದ್ದು ಹೆಚ್ಚು ಮಳೆ ಬೀಳುವ ಪರ್ವತ ಮತ್ತು ಪ್ರಸ್ಥಭೂಮಿ ಪ್ರದೇಶ; ಇಲ್ಲಿ ಎತ್ತರ ಮತ್ತು ಮಳೆಯ ಪ್ರಮಾಣಕ್ಕನುಸಾರವಾಗಿ ಕಾಡುಗಳಿವೆ. ಕಾಫಾಪ್ರಾಂತ್ಯ ಕಾಫಿಗಿಡದ ಮೂಲನೆಲೆ; ಆದ್ದರಿಂದಲೆ ಕಾಫಿ ಎಂಬ ಹೆಸರು ಬಂದಿರುವುದು.ಎರಡನೆಯದಾಗಿ ನಿಶ್ಚಿತವಾದ ಮಳೆಯಿಲ್ಲದೆ ಉಷ್ಣತೆ ಹೆಚ್ಚಿರುವ ತಗ್ಗುಭೂಮಿ ಪ್ರದೇಶ; ಇಲ್ಲಿ ಆಕೇಷಿಯ ಎಂಬ ಜಾಲಿಜಾತೀಯ ಮರಗಳು ಹೆಚ್ಚು ಕೆಲವು ಕಡೆ ಹುಲ್ಲುಗಾವಲುಗಳಿವೆ. ಉತ್ಕ್ರ್ಸಷ್ಟ ದಿಮ್ಮಿಗಳನ್ನು ಕೊಡುವ ಮರಗಳಲ್ಲದೆ ಇತರ ಅನೇಕ ಉಪಯುಕ್ತ ಮರಗಳೂ ಇವೆ. ತಾಳೆ,ಸೈಕಮೋರ ಎಂಬ ಅಂಜೂರದ ಮರ , ಗೋಂದು ಕೊಡುವ ಮರ , ಕಿತ್ತಲೆ,ನಿಂಬೆ,ದಾಳಿಂಬೆ,ಪೀಚ್,ಬಾಳೆ,ದ್ರಾಕ್ಷಿ,ಹತ್ತಿ,ನೀಲಿ,ಕಬ್ಬು ಇವು ಇತರ ಮುಖ್ಯ ಬೆಳೆಗಳು.ನೀಲಗಿರಿ ಮರಗಳನ್ನು ಇತ್ತೀಚಿಗೆ ಹೆಚ್ಚಾಗಿ ಬೆಳೆಸುತ್ತಿದ್ದಾರೆ. ರಾಜಧಾನಿ ಆಡಿಸ್ ಅಬಾಬ . ಮಸಾವ ಮತ್ತು ಅಸಾಬುಗಳು ಮುಖ್ಯ ಬಂದರುಗಳು.ಖನಿಚೋತ್ಪನ್ನಗಳಾದ ಬಂಗಾರ , ಕಬ್ಬಿಣ, ಪ್ಲಾಟಿನಂ ಮುಂತಾದವು ಈ ಬಂದರುಗಳಿಂದ ರಫ್ತಾಗಿದೆ.ಪರ್ವತ ಪ್ರದೇಶವಾದ್ದರಿಂದ ಸಂಚಾರ ಸೌಲಭ್ಯ ಕಡಿಮೆ, ಒಂದೇ ಪ್ರಮುಖ ರೈಲುಮಾರ್ಗವಾಗಿದೆ. ಪಶ್ಚಿಮ ನೈಲ್ ಪ್ರದೇಶ ಪ್ರಾಚೀನ ಸಂಸ್ಕ್ರಿತಿಗಳ ಸಂಪರ್ಕವನ್ನು ಹೊಂದಿದೆ.ಪೂರ್ವಭಾಗದ ಸಮುದ್ರತೀರಗಳು ವ್ಯಾಪಾರಕ್ಕೆ ಬಹಳ ಅನುಕೂಲವಾಗಿದ್ದು ಅಭ್ಯುದಯಕ್ಕೆ ಕಾರಣವಾಗಿವೆ.ಅದರಲ್ಲೂ ಸೂಯೇಜ್ ಕಾಲುವೆಯನ್ನು ಕಟ್ಟಿದ ಮೇಲೆ ವ್ಯಾಪಾರ ಬಹುಮಟ್ಟಿಗೆ ಹೆಚ್ಚಿದೆ.ಈ ದೇಶದ ಜನರು ನ್ಯೂಬಿಯನ್ನರು ಮತ್ತು ಈಜಿಪ್ಟ್ ನವರ ಂತೆ ಹೆಮಿಟೆಕ್ ಕುಲಕ್ಕೆ ಸೇರಿದವರು.ಇವರು ಏಡನ್ ಕೊಲ್ಲಿಯ ತೀರದಲ್ಲಿ ನೆಲಸಿ ಮುಂದೆ ಫಿನೀಷಿಯನ್ನರ ಸಂಪರ್ಕ ಪಡೆದರು. ಅರೇಬಿಯರಿಂದ ಸೆಮಿಟೆಕ್ ಕುಲದವರೂ ಬಂದು ನೆಲೆಸಿರಬಹುದು.ನೀಗ್ರೊಗಳಿಗೆ ಈ ದೇಶದ ಹವಾಮಾನ ಒಗ್ಗದೆ ನೈಲ್ ನದಿಯ ಮಧ್ಯಭಾಗದ ಪ್ರದೇಶಗಳಲ್ಲಿ ಮಾತ್ರ ನೆಲೆಸಿದರು.ಇಲ್ಲಿನ ಜನ ಗ್ರೀಜ್ ಎಂಬ ಸೆಮಿಟೆಕ್ ಭಾಷೆಯನ್ನು ಆಡುತ್ತಿದ್ದರು.ಈಗ ಇದು ಬಳಕೆ ತಪ್ಪಿ ಕೇವಲ ಕ್ರೈಸ್ತ ದೇವಾಲಯದ ಪೂಜೋಪಚಾರಿಗಳಲ್ಲಿ ಮಾತ್ರ ಉಪಯೊಗದಲ್ಲಿದೆ.ಇದರಿಂದ ಹುಟ್ಟಿದ ಅಂಹರೀಷ್ ಮತ್ತು ಟೈಗ್ರಿಸ್ ಎಂಬ ಭಾಷೆಗಳು ಈಗ ಬಳಕೆಯಲ್ಲಿವೆ. ಈಜಿಪ್ಟ್ ನಾಗರಿಕತೆ ನಪತ ರಾಜ್ಯದ ಮೂಲಕ ಇಲ್ಲಿಗೆ ವಿಸ್ತರಿಸಿ ಅರಬ್ಬೀ ಮತ್ತು ಇತರ ನಾವಿಕರ ಪ್ರಭಾವದಿಂದ ಮತ್ತಷ್ಟು ಪ್ರಬಲವಾಯಿತು.ಈ ದೇಶದ ಇತಿಹಾಸ ಪುರಾತನವದುದು.ಆಧುನಿಕ ಟಿಗ್ರಾಪ್ರದೇಶ ಅಂದರೆ ಸಮುದ್ರಕ್ಕೆ ಹತ್ತಿರವಿರುವ ಉತ್ತರ ಪ್ರಾಂತ್ಯಗಳು ಅಬಿಸೀನಿಯ ನಾಗರಿಕತೆಯ ತಾಯ್ನೆಲ.ಅದ್ದಕ್ಕೆ ನೈಋತ್ಯ ದಿಕ್ಕಿನಲ್ಲಿ ಇಥಿಯೋಪಿಯದ ಹಿಂದಿನ ರಾಜಧಾನಿಯಾಗಿದ್ದ ಅಕ್ಸಂ ರಾಜ್ಯ ಯಾವಾಗ ಸ್ವತಂತ್ರವಾಯಿತೆಂಬುದು ಗೊತ್ತಿಲ್ಲ. ಒಂದನೆಯ ಶತಮಾನದಲ್ಲಿ ಅರಬ್ಬೀರಾಜ್ಯದ ತೀರದಲ್ಲಿನ ಹಬಷತ್ ರಾಜ್ಯದ ಉಪಶಾಖೆಯಾಗಿ ಉದ್ಬವಿಸಿತೆಂದು ಮಾತ್ರ ಹೇಳಬಹುದು. ಅಬಿಸೀನಿಯದ ದಂತಕಥೆಗಳಿಂದ ದೇಶದ ಹಿಂದಿನ ಚರಿತ್ರೆಯನ್ನು ಊಹಿಸಬಹುದಾಗಿದೆ. ಮಹಾಪ್ರಳಯಾನಂತರ ಹ್ಯಾಮ್ನ ಮಗನಾದ ಕುಷ್ ಎಂಬುವನು ಆಕ್ಸ್ಂ ನಗರದ ಸ್ಥಾಪಕನೆಂದೂ ಕುಷ್ ಮಗನಾದ ಇಥಿಯೋಪ್ಸ್ ಎಂಬುವನಿಂದ ಇಥಿಯೋಪಿಯ ಎಂಬ ಹೆಸರು ಬಂದಿತೆಂದೂ ಐತಿಹ್ಯವಿದೆ.ಈ ಮಾತಿಗೆ ಗ್ರೀಕಿನಲ್ಲಿ ಸುಟ್ಟು ಕಪ್ಪಾದ ಮುಖಗಳು ಎಂಬ ಅರ್ಥವಿದೆ.ಬೈಬಲ್ಲಿನ ಇನ್ನೊಂದು ದಂತಕಥೆ ಈ ರೀತಿ ಇದೆ.ಪ್ರ.ಶ.ಪೂ.೧೧ನೆಯ ಶತಮಾನದಲ್ಲಿ ಅಕ್ಸ್ಂ ರಾಜ್ಯದಲ್ಲಿ ಆಳುತ್ತಿದ್ದ ಷೀಬದ ರಾಣಿಯಾದ ಮಕೆಟ್ ಎಂಬುವಳು ಸಾಲಮನ್ ರಾಜ್ಯನವನ್ನು ಭೇಟಿ ಮಾಡಿದಳೆಂದೂ ಅವರ ಮಗನಾದ ಮೆನಿಲೆಕ್ ಇಬ್ನ್ ಹಕಿಂ ಎಂಬುವನು ಮೊದಲನೆಯ ಡೇವಿಡ್ ಎಂಬ ಹೆಸರಿನಿಂದ ಇಥಿಯೋಪಿಯ ರಾಜಮನೆತನವನ್ನು ಸ್ಥಾಪಿಸಿದನೆಂದು ತಿಳಿದುಬಂದಿದೆ.ಇಥಿಯೋಪಿಯ ರಾಜರು ತಾವು ಅವನ ಸಂತತಿಯವರೆಂದು ಈಗಲೂ ಹೇಳುತ್ತಾರೆ.ವಾಸ್ತವವಾಗಿ ಪ್ರಾಚೀನ ಪ್ರಪಂಚದಲ್ಲಿ ಗ್ರೀಕರು ತಮ್ಮ ಪ್ರಭಾವವನ್ನು ಹರಡುವವರೆಗೂ ಅಕ್ಸ್ಂ ರಾಜ್ಯದಲ್ಲಿ ನಾಗರಿಕತೆ ಬೆಳೆಯಲು ಸಾಧ್ಯವಾಗಲಿಲ್ಲ.ಈಜಿಪ್ಟಿನಲ್ಲಿ ಟಾಲಾಮಿಗಳು ಆಳುತ್ತಿದ್ದಾಗ ದಂತ ವ್ಯಾಪಾರಿಗಳು ಮತ್ತು ಇತರರು ಆಗ್ಗಾಗೆ ಕೆಂಪು ಸಮುದ್ರದ ತೀರಕ್ಕೆ ಭೇಟಿಕೊಡುತ್ತಿದ್ದರು. ಈಗಿನ ಮಸ್ಸೋವ ನಗರದ ಹತ್ತಿರ ಅದುಲೆಸ್ ಎಂಬ ವ್ಯಾಪಾರಠಾಣ್ಯವನ್ನು ಸ್ಥಾಪಿಸಿ ದೇಶದ ಒಳಭಾಗಕ್ಕೆ ಸೈನ್ಯಪಡೆಗಳನ್ನು ಕಳುಹಿಸುತ್ತಿದ್ದರು.ಗ್ರೀಕ್ ಭಾಷೆ ಕ್ರಮೇಣ ಆಡಳಿತ ಭಾಷೆಯಾಯಿತು.ಗ್ರೀಕರ ಪುರಾಣಕಥೆಗಳು ದೇಶಿಯ ದಂತಕಥೆಗಳಲ್ಲಿ ಲೀನವಾದುವು.ಶ್ರೀಮಂತರು ಗ್ರೀಕ್ ಕಲೆ ಮತ್ತು ಸಂಸ್ಕ್ರ್ತತಿಗೆ ಪ್ರೊತ್ಸಾಹ ಕೊಟ್ಟರು. ಕ್ರೈಸ್ತಧರ್ಮ ಬಹುಲಕಾಲದ ಮೇಲೆ ತನ್ನ ಪ್ರಭಾವ ಬೀರಿತು.ಪ್ರ.ಶ.೩೩೩ರಲ್ಲಿ ಉಯಿಜನಸ್ ಎಂಬ ರಾಜ ಉತ್ತರ ಅಬಿಸೀನಿಯ ಮತ್ತು ದಕ್ಷಿಣ ಅರೇಬಿಯಗಳಿಗೆ ಒಡೆಯನಾಗಿದ್ದನೆಂದೂ ಕ್ರೈಸ್ತ ಪ್ರವರ್ತಕನಾದ ಪ್ರೊಮೆಂಟಿಯಸ್ನಿಂದ ಕ್ರೈಸ್ತ ಧರ್ಮಕ್ಕೆ ಸೇರಿದನೆಂದೂ ಅವನ ಶಾಸನದಿಂದ ತಿಳಿದುಬಂದಿದೆ.ರಾಜಕೀಯದಲ್ಲಿ ಎಷ್ಟೇ ಅಲ್ಲೋಲ ಕಲ್ಲೋಲಗಳಾದರೂ ಕ್ರೈಸ್ತ ಧರ್ಮ ಅಬಿಸೀನಿಯದಲ್ಲಿ ಶಾಶ್ವತವಾಗಿ ನೆಲೆಸಿ ಇಂದಿಗೂ ಅಲ್ಲಿನ ಜನರ ಆಧ್ಯಾತ್ಮಿಕ ಜೀವನವನ್ನು ರೂಪಿಸುತ್ತಿದೆ. ಇದಾದ ಮೇಲೆ ಅನೇಕ ಶತಮಾನಗಳ ಕಾಲ ಈ ದೇಶದ ಚರಿತ್ರೆ ಕತ್ತಲೆಯಿಂದ ಕೂಡಿತ್ತು.ಆ ಕಾಲದ ರಾಜರ ಹೆಸರುಗಳ ವಿನಾ ಇನ್ನೇನೂ ತಿಳಿದುಬಂದಿಲ್ಲ.ಅನಂತರ ಅಬಿಸೀನಿಯ ಸೆಮಿಟೆಕ್ ನಾಗರಿಕತೆಯಲ್ಲಿ ಲೀನವಾಗಿ ದಕ್ಷಿಣ ಅರೇಬಿಯದಲ್ಲಿ ತನ್ನ ಪ್ರಭಾವವನ್ನು ಬೀರಿತು.ಗ್ರೀಕ್ ದೇಶಗಳೊಡನೆ ಸಂಚಾರಸಂಪರ್ಕವನ್ನು ಬೆಳೆಸಿತು.ದಕ್ಷಿಣ ಅರೇಬಿಯದಲ್ಲಿ ಯೆಹೂದ್ಯರು ಕ್ರಿಶ್ಚಿಯನ್ನರಿಗೆ ಕೊಡುತ್ತಿದ್ದ ಹಿಂಸಾತ್ಮಕ ಕಿರುಕುಳಗಳನ್ನು ತಡೆಗಟ್ಟಲು ಪ್ರ.ಶ.೫೩೨ರಲ್ಲಿ ಜಸ್ಟಿನಿಯನ್ ಚಕ್ರವರ್ತಿ ಆಕ್ಸ್ಂ ರಾಜನಾದ ಕ್ಯಾಲೆಬ್ ಎಂಬುವನಿಗೆ ಮನವಿ ಮಾಡಿಕೊಂಡ.ಕ್ಯಾಲೆಬ್ ಹಾಗೆ ಮಾಡಿ ಮತ್ತೊಮ್ಮೆ ದಕ್ಷಿಣ ಅರೇಬಿಯಾದಲ್ಲಿ ತನ್ನ ಅಧಿಕಾರವನ್ನು ವಿಸ್ತರಿಸಿದ.ಪ್ರ.ಶ.೫೭೧ರಲ್ಲಿ ಪೈಗಂಬರ ಮಹಮ್ಮದನು ಹುಟ್ಟಿದ ವರ್ಷದಂದು ಒಬ್ಬ ಅಬಿಸೀನಿಯ ಸೈನ್ಯಾಧಿಕಾರಿ ಮೆಕ್ಕದ ಮೇಲೆ ದಂಡಯಾತ್ರೆ ಮಾಡಿದ.ಆದರೆ ಅದು ಫಲಿಸಲಿಲ್ಲ. ಇಥಿಯೋಪಿಯ ಸೈನ್ಯಭಾಗದಲ್ಲಿ ಸಿಡುಬು ರೋಗ ತಲೆದೋರಿದ್ದರಿಂದ ದಕ್ಷಿಣ ಸೈನ್ಯ ಅರೇಬಿಯನ್ನು ತ್ಯಜಿಸಬೇಕಾಯಿತು.ಇಸ್ಲಾಂ ಮತ ಇದೇ ಸಂದರ್ಭದಲ್ಲಿ ಆಫ಼ೀಕದ ಎಲ್ಲೆಡೆ ಹರಡಿದ್ದರೂ ನ್ಯೂಬಿಯ ಮತ್ತು ಇಥಿಯೋಪಿ ದೇಶಗಳ ಮೇಲೆ ಯುದ್ಧ ಮಾಡಲೆಬೇಕಾಯಿತು.ಅಬಿಸೀನಿಯ ದೇಶದ ರಾಜರು ಪೋರ್ಚುಗಲ್ ಮತ್ತು ಇತರ ಪಾಶ್ಚಾತ್ಯ ದೇಶಗಳ ಸಹಾಯವನ್ನು ಪಡೆಯಬೇಕಾಯಿತು.ಆದರೆ ಇಥಿಯೋಪಿಯನ್ನರು ಜೆಸೂಟರ ಪ್ರಭಾವಕ್ಕೆ ಒಳಗಾಗದೆ ಕೆಥೊಲಿಕ್ ಪಂಥವನ್ನು ನಿರಾಕರಿಸಿ, ಪೌರಾಸ್ತ್ಯ ಪಂಥದ ಅನುಯಾಯಿಗಳಾದರು. ೧೮ ಮತ್ತು ೧೯ನೆಯ ಶತಮಾನದಲ್ಲೇ ದೇಶದಲ್ಲಿ ವಿಚ್ಛೇದಕಶಕ್ತಿಗಳು ಪ್ರಬಲವಾಗಿ ಅಂತರ್ಯುದ್ಧಗಳಿಂದ ಏಕತೆಗೆ ಭಂಗವುಂಟಾಯಿತು.ಅನೇಕ ಪ್ರಾಂತ್ಯಗಳು ಸ್ವತಂತ್ರವಾದವು.ಗಲ್ಲ ಎಂಬುವರು ಹಣದಾಸೆಯಿಂದ ಶ್ರೀಮಂತರ ಕೈಗೊಂಬೆಗಳಾಗಿ ಪ್ರಾಬಲ್ಯಕ್ಕೆ ಬಂದರು.ಉತ್ತರ ಮತ್ತು ದಕ್ಷಿಣ ಆಬಿಸೀನಿಯ ಬೇರೆಯಾದವು.ಎಲ್ಲೆಲ್ಲೂ ಅವ್ಯವಸ್ಥೆ ಹಬ್ಬಿತು.ರಾಸ್ ಮೈಕೆಲ್ ಎಂಬ ಸಾಮಂತ ತನ್ನ ದೌರ್ಜನ್ಯಗಳಿಂದ ಅಪಕೀರ್ತಿ ಪಡೆದ.ಟಿಗ್ರಾದ ರಾಜರು ಪ್ರಾಬಲ್ಯಕ್ಕೆ ಬರಲು ಪ್ರಯತ್ನಿಸಿದರು.ಕೊನೆಗೆ ಅಮ್ಹರದಲ್ಲಿ ಆಳುತ್ತಿದ್ದ ರಾಸ್ ಆಲಿ ದೇಶದಲ್ಲಿ ಐಕ್ಯ ಮತ್ತು ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟ.ಇವನ ಅಳಿಯನಾದ ಕಸೈ ಎಂಬುವನು ಥಿಯೋಡರ್ ಎಂಬ ಹೆಸರಿನಿಂದ ೧೮೫೫ರಲ್ಲಿ ಸಿಂಹಾಸನಕ್ಕೆ ಬಂದ.ಸಮರ್ಥನಾದ ಈತ ದಕ್ಷಿಣಪ್ರಾಂತ್ಯಗಳನ್ನು ಜಯಿಸಿ , ಗಲ್ಲರನ್ನು ಅಡಗಿಸಿ ಸ್ಥಿರವಾದ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಪಟ್ಟ.ಆದರೂ ದೇಶದಲ್ಲಿ ಎಲ್ಲೆಲ್ಲೂ ದಂಗೆಗಳಾದವು.ಸೈನಿಕರ ಹಾವಳಿ ಹೆಚ್ಚಾಯಿತು.೧೮೬೪ರಲ್ಲಿ ಥಿಯೋಡರ್ ಕ್ರೈಸ್ತ ಪಾದ್ರಿಗಳನ್ನೂ ಫ್ರೆಂಚ್ ಮತ್ತು ಇಂಗ್ಲಿಷ್ ರಾಜನಿಯೋಗಿಗಳನ್ನೂ ಸೆರೆಯಲ್ಲಿಟ್ಟ.ಕೊನೆಗೆ ೧೮೬೮ರಲ್ಲಿ ರಾಬರ್ಟ್ ನೇಪಿಯರ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಮುಸ್ಸೋವಕ್ಕೆ ದಕ್ಷಿಣದಲ್ಲಿ ಸೂಲ ಎಂಬಲ್ಲಿ ನೆಲೆಸಿದ.ಬ್ರಿಟಿಷರ ಸೈನ್ಯ ಸುಲುಭವಾಗಿ ದೇಶದೊಳಕ್ಕೆ ನುಗ್ಗಿ ಆಕ್ರಮಣಮಾಡಿತು.ಥಿಯೋಡ್ರ್ ಆತ್ಮಹತ್ಯೆ ಮಾಡಿಕೊಂಡ.ಅವನ ಮಗ ಇಂಗ್ಲೆಂಡಿಗೆ ಓಡುಹೋಗಿ ಅಲ್ಲಿಯೇ ಸತ್ತುಹೋದ.ಅಬಿಸೀನಿಯದಲ್ಲಿ ಪಾಳೆಯಗಾರರ ಪ್ರಭಾವದಿಂದ ನಿರುಕಂಶಪ್ರಭುತ್ವ ಏರ್ಪಟ್ಟಿತು.ಥಿಯೋಡರ್ ತಾತ್ಕಾಲಿಕವಾಗಿ ಏಕತೆಯನ್ನು ಸ್ಥಾಪಿಸಿ ತನ್ನ ರಾಜಾಧಿಕಾರದ ಕೀರ್ತಿಯನ್ನು ಹೆಚ್ಚಿಸಿದ.ಕೊನೆಗೆ ೧೮೭೧ರಲ್ಲಿ ಬ್ರಿಟಿಷರ ಸಹಾಯದಿಂದ ಟಿಗ್ರಾರ ರಾಜಾಕುಮಾರ ಕಸೇ ಎಂಬುವನು ಜಾನ್ ಎಂಬ ಹೆಸರಿನಿಂದ ಸಿಂಹಾಸನಕ್ಕೆ ಬಂದ.ಈಜಿಪ್ಟಿನ ಸೈನ್ಯಗಳು ಅಬಿಸೀನಿಯದ ಮೇಲೆ ಆಕ್ರಮಣ ಮಾಡಿ ವಿಫಲವಾದವು. ಈ ಸಂದರ್ಭದಲ್ಲಿ ಇಟಲಿ ಅಬಿಸೀನಿಯದ ಮೇಲೆ ತನ್ನ ವಕ್ರದೃಷ್ಟಿಯನ್ನು ಬೀರಿ ಆಫ್ರಿಕದ ವಿಭಜನೆಯಿಂದ ತನ್ನ ಸಾಮ್ರಾಜ್ಯಷಾಹಿಯನ್ನು ವಿಸ್ತರಿಸಲು ಸಂಕಲ್ಪಿಸಿತು.ಅಬಿಸೀನಿಯದ ಭೌಗೊಳಿಕಸ್ಥಿತಿ ಮತ್ತು ಹವ ಇಟಲಿಯವರಿಗೆ ಅನುಕೂಲವಾಗಿದ್ದುವು.ಬ್ರಿಟಿಷರು ಈಜಿಪ್ಟ್ ನ್ನಲ್ಲಿ ಆಕ್ರಮಣಕ್ಕೆ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ.೧೮೮೫ರಲ್ಲಿ ಇಟಲಿ ಮುಸ್ಸೋವ ಎಂಬ ಸಮುದ್ರತೀರವನ್ನು ಆಕ್ರಮಿಸಿ ತನ್ನ ರಕ್ಷಣಾಠಾಣ್ಯವನ್ನು ಸ್ಥಾಪಿಸಿತು.ಸಮುದ್ರತೀರದ ೬೦೦ಚ.ಮೈ.ಇಟಲಿಯ ರಕ್ಷಣೆಗೆ ಒಳಗಾಯಿತು.ಈ ಸಂದರ್ಭದಲ್ಲಿ ಅಬಿಸೀನಿಯ ಸೈನ್ಯ ಪ್ರಬಲವಾಗಿ ಶಿಸ್ತಿನಿಂದ ಕಾಪಾಡಲು ಸಿದ್ದವಾಯಿತು.ರಷ್ಯ ಮತ್ತು ಫ್ರಾನ್ಸ್ ದೇಶಗಳು ಇಟಲಿಗೆ ಸೋತು ಅಬಿಸೀನಿಯ ಸ್ವತಂತ್ರವಾಯಿತು. ಆದರೆ ೧೯೩೫ರಲ್ಲಿ ಇಟಲಿ ಮತ್ತೊಮ್ಮೆ ಆಕ್ರಮಣ ನಡೆಸಿತು.ಇಟಲಿಯ ನಿರಂಕುಶಾಧಿಕಾರಿ ಮುಸೋಲಿನಿ ಆಫ್ರಿಕದಲ್ಲಿ ಮತ್ತೆ ಇಟಲಿಯ ಸಾಮ್ರಾಜ್ಯವನ್ನು ಸ್ಥಾಪಿಸಲು ಸಂಕಲ್ಪಿಸಿದ.ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಸಂಧಾನದಿಂದ ಸಮಸ್ಯೆಯನ್ನು ತೀರ್ಮಾನಿಸಲು ಪ್ರಯತ್ನಮಾಡಿದ್ದು ವಿಫಲವಾಯಿತು.೧೯೩೬ರಲ್ಲಿ ಆಬಿಸೀನಿಯ ಇಟಲಿಗೆ