ಪುಟ:Mysore-University-Encyclopaedia-Vol-1-Part-1.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯದಲ್ಲಿ ಈತ ಪವಿತ್ರ ಭಾವನೆಗಳನ್ನೂ ಉದಾತ್ತ ವಿಚಾರಗಳನ್ನೂ ತನ್ನ ಸ್ವತಂತ್ರ ಸುಂದರಶೈಲಿಯಲ್ಲಿ ಹೇಳಿದಾನೇ.ದೀನ್ ಇಲಾಹಿ ಎಂಬ ನೂತನ ಧರ್ಮದ ರಚನೆಯಲ್ಲಿ ಅಕ್ಬರನಿಗೆ ಸಹಾಕನಾದ.ಖುತ್ಬಾ ಎಂಬ ಪ್ರಾರ್ಥನೆಯನ್ನು ಫೈಜಜಜ಼್ಯೇ ರಚಿಸಿದೆ. ಭಾಸ್ಕರಾಚಾರ್ಯ ಬರೆದ ಲೀಲಾವತಿ ಎಂಬ ಸಂಸ್ಕೃತ ಗಣಿತಗ್ರ್ಂಥವನ್ನೂ ಭಗವದ್ಗಿತೆಯನ್ನೂ ಪಾರಸಿಭಾಷೆಗೆ ಈತ ಪರಿವರ್ತಿಸೆದುದು ಗಮನಾರ್ಹವಾದ ಅಂಶ.

     ಅಬು ಸಿಂಬೆಲ್:ಎರಡೆನೆಯ ರಾಮ್ಸೆಸ್ ದೊರೆಯ (ಪ್ರಶ.ಪೂ.ಸು.13ನೆಯ ಶತಮಾನ) ದೇವಾಲಯ ಸಮೂಹ ಇರುವ ಸ್ಥಳ. ಈಜಿಪ್ಟಿನ ಆಸ್ವಾನ್ ಪ್ರಾಂತದಲ್ಲಿ (ಪ್ರಾಚೀನ ನುಬಿಯ) ನೈಲ್ ನದೀತಿರದಲ್ಲಿದೆ.ಮರಳುಗಲ್ಲಿನ ಹೆಬ್ಬಂಡೆಗಳನ್ನು ಕೊರೆದು ಇ ದೇವಾಲಯಗಳನ್ನು ರಚಿಸಿದ್ದಾರೆ.ಇವುಗಳಲ್ಲಿ ಎರಡು ಸುಪ್ರಸಿದ್ಧವಾದುವು.ದೊಡ್ಡ ದೇವಾಲಯದ ಮುಂಭಾಗದಲ್ಲಿ ದೊರೆಯ ನಾಲ್ಕು ಬೃಹತ್ ವಿಗ್ರಹಗಳನ್ನು ಬಾಗಿಲ ಇಕ್ಕಡೆಗಳಲ್ಲೂ ಎರಡೆರಡರಂತೆ ಕಡೆದಿದ್ದಾರೆ ಕುಳಿತಿರುವ ಈ ಒಂದೊಂದು ವಿಗ್ರಹದ ಎತ್ತರ 20ಮೀ. ತೋಕ 1,200ಟನ್. ಮುಂದೆ ಈ ವಲಯಕ್ಕೆ

ದಳಿಯಿಟ್ಟ ಗ್ರೀಕ್,ಕಾರಿಯನ್ ಮತ್ತು ಫೊನೀಶಿಯನ್ ಯೋಧರು ಇವುಗಳಒ ಕಾಲುಗಳ ಮೇಲೆ ಮತ್ತು ಸಮೀಪದಲ್ಲಿ ತಮ್ಮ ಹೆಸರುಗಳನ್ನು ಸ್ವಂತ ಲಿಪಿಗಳಲ್ಲಿ ಕೆತ್ತಿದ್ದಾರೆ. ಇವು (ವಿಶೀಷವಾಗಿ ಫೊನೀಶಿಯನ್) ಆಯಾ ಲಿಪಿಗಳ ಬಳಕೆಯ ಬಗ್ಗೆ ಅತ್ಯಂತ ಪ್ರಚೀನ ಕುರುಹುಗಳು.

        ಈ ದೇವಾಲಯಗಳ ನಿರ್ಮಾಣಕಾಲ 3200 ವರ್ಷಗಳಿಗಿಂತಲೂ ಹಿಂದೆ .ಈಜಿಪ್ಟಿನ ದೇವಾಂಶ ಸಂಭೊತರಾದ ಎರಡೆನೆಯ ರಾಮ್ಸೆಸ್,ಅವನ ಪ್ರಿಯಪತ್ನಿ ಮಹರಾಣಿ ನೆಫೆರ್ತಾರಿ ಇವರ ಯಶಸ್ಸು,ವ್ಶೆಭವಗಳ

ಸಂಕೇತಸ್ಮಾರಕಗಳಿವು.ದೊಡ್ಡ ದೇವಾಲಯದ ಪ್ರವೇಶದ್ವಾರದಲ್ಲಿ ಕುಳಿತಿರುವ ರಾಮ್ಸೆಸ್ ನ ನಾಲ್ಕು ವಿಗ್ರಹಗಳಲ್ಲಿ ಒಂದರೆ ಮೇಲೆ ಭಾಗ ತುಂಡಾಗಿ ಕೆಳಗೆ ಬಿದ್ದಿದೆ.ಇದರ ಗರ್ಭಾಗುಡಿಯಲ್ಲಿ ಶಿಲಾವಿಗ್ರಹಗಳ ಮೇಲೆ ವರ್ಷದಲ್ಲಿ ಎರಡು ಸಲ ಉದಯರವಿ ಕಿರಣಗಳು ನೇರವಾಗಿ ಬೀಳುವಂತೆ ರಚನೆಯ ಏರ್ಪಾಡು.ದೇವಾಲಯ ಸೂರ್ಯನಿವೇದಿತವಾದರೂ ರಾಜನನ್ನೇ ದೇವತ್ವದ ಪಟ್ಟಿಕ್ಕೇರಿಸಿರುವುದು ಇಲ್ಲಿ ಕಾಣುತ್ತದೆ.ಸಮಿಪದ ಸಣ್ಣ ದೇವಾಲಯ ರಾಣಿಯ ಗೌರವಾರ್ಥ ಸ್ಮಾರಕ.ಇದರ ನುಗ್ಗು ಬಾಗಿಲಿನಲ್ಲಿ ರಾಜರಾಣಿಯರ ಆರು ಪ್ರತಿಮೆಗಳು ಒತ್ತಟ್ಟಿಗೆ ನಿಂತಿವೆ. ರಾಮ್ಸೆಸ್ ಇನ್ನೂ ಆರು ದೇವಾಲಯಗಳನ್ನು ನುಬಿಯದಲ್ಲಿ ಹೆಬ್ಬಂಡೆಗಳಲ್ಲಿ ಕಂಡರಿಸಿದ್ದಾನೆ. ಅಬು ಸಿಂಬೆಲ್ ಕಲೆ ಮತ್ತು ತಾಂತ್ರಿಕ ವಿಜ್ಞಾನಗಳ ಅಪೂರ್ವ ಮೇಳ.

        ರಾಮ್ಸೊಸ ನ್ ಮರಣಾನಂತರ ದೇವಾಲಯಗಳ ಕ್ರಮೇಣ ಮಾಸಲಾರಂಭಿಸಿದುವು. ಫಶ್ಛಿಮ ಮರುಭೂಮಿಯ ಮರಳ ಕಣಗಳ ನಿರಂತರ ಹೊಯ್ಲು. ಮುಂದಿನ ಪೀಲಿಹೆಯವರ ಆನಾಸ್ಥೆ ಈ ಕಾರಣಗಳಿಂದ ಅಬು ಸಿಂಬೆಲ್ ಭೌತಿಕವಾಗಿಯೂ ಮುಚ್ಚಿಹೋಗತೋಡಗಿತು. ಅಬು ಸಿಂಬೆಲ್ ವಿಚಾರ ಪ್ರಶ.ಪೂ.6ನೆಯ ಶತಮಾನದವರೆಗೆ ಸಾಕ್ಷಿ ದೊರೆಯುತ್ತದೆ.ಮುಂದೆ ಚಿರನಿದ್ರೆಗೀಡಾದ ಈ ವೈಭವದ ಪುನರ್ದರ್ಶನವಾದದ್ದು ಪ್ರಶ್. 1813ರಲ್ಲಿ ಸುಮಾರು ೨೩೦೦ ವರ್ಷಗಳ ಅನಂತರ. ಜಾನ್ ಲೆವಿಸ್ ಬುರ್ಖಾಡೆ ಎಂಬ ಅವನಿಗೆ ತೀರ್ಮಾನಿಸಲಗಲಿಲ್ಲ . ಮುಂದಿನ ದಿಟ್ಟ ಹೆಜ್ಜೆ ಇಟ್ಟ ಕೀರ್ತಿ ಇಟಲಿಯ ಪ್ರವಾಸಿ ಜಿ.ಬಿ. ಬೆಲ್ಜೋನಿಯದು(೧೮೧೭). ಶತಮಾನಗಳು ಹರಡಿದ್ದ ಮರಳರಾಶಿಯನ್ನು ಅತ ತೆಗೆದು ದೇವಾಲಯಪ್ರವೇಶ ಮಾಡಿದ. ಅದರೊಳಗಿನ ಅಧುನಿಕ ಜಗತ್ತು ಅಬು ಸಿಂಬೆಲ್ ನ ಪುನರ್ದರ್ಶನ ಮಾಡಿತು.
      ಸ್ಥಳಾಂತರ:- ಈಜಿಪ್ಟ್ ದೇಶದ ಮಹಾಭಿಧಮನಿ ಎಂದು ಪ್ರಸಿದ್ಧವಾಗಿರುವ ನೈಲ್ ನದಿಗೆ ಆಸ್ವಾನ್ ಪ್ರಾಂತದಲ್ಲಿ ಅದೇ ಹೆಸರಿನಿಂದ ಒಂದು ದೊಡ್ಡ ಆಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿತು. ಬೆಂಗಾಡಿನ ದುಃಖಕ್ಕೆ ನೀರು ಸರಬರಾಜು ಮಾಡಿ ಅದರಲ್ಲಿ ಹಸುರುನಗು ತರಿಸುವ ಉಪಾಯ ಇದೊಂದೆ. ಆದರೆ ಇದರಿಂದ ಶೇಖರಣೆಯಾಗುವ ನೀರಿನ ರಾಶಿ ಅಬು ಸಿಂಬೆಲನ್ನು ಮುಳುಗಿಸುವುದು ಎಂದು ತಿಳಿಯಿತು. ೧೯೬೦ ರಲ್ಲಿ ಈಜಿಪ್ಟ್ ಮತ್ತು ಸೂಡಾನ್ ಸರ್ಕಾರಗಳು ಯುನೆಸ್ಕೋಗೆ (ಯುನೈಟೆಡ್ ನೇಷನ್ಸ್ ಎಜ್ಯುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಜರಲ್ ಆರ್ಗನೈಜೇಷನ್ಸ್) ಅಬು ಸಿಂಬೆಲನು ಹೇಗಾದರೂ ರಕ್ಷಿಸಬೇಕು ಎಂದು ಮನವಿ ಸಲ್ಲಿಸಿದವು. ಸಮಸ್ಯಯ ಗಭೀರತೆಯನ್ನು ಗಮನಿಸಿದ ಯುನೆಸ್ಕೋ ಅದರ ಪರಿಹಾರಕ್ಕಾಗಿ ಪ್ರಪಂಚದ ಎಲ್ಲ ರಾಷ್ಟ್ರ ಗಳಿಗೂ ಕರೆನೀಡಿತು. ಇದರ ಫಲ ಸಿಂಬೆಲ್ ಸ್ಥಳಾಂತರ, ಬೃಹದ್ವಾಸ್ತು ಶಿಲ್ಪ ರಕ್ಷಣೆಯಲ್ಲಿ ನೆರವೇರಿದ ಅದ್ವಿತೀಯ ಸಾಹಸ. ರಕ್ಷಣೆಗೆ ಬಂದ ಸೂಚನೆಗಳು ಹಲವಾರು-ಸುತ್ತಲೂ ದೊಡ್ಡ ಒಡ್ಡುಗಳನ್ನು ಕಟ್ಟಿ ದೇವಾಲಯಗಳಿಗೆ ನೀರು ಬರದಂತೆ ಮಾಡಬೇಕು;ಭಾರೀ ಪಾರದರ್ಶಕ ಕವಚದಿಂದ ದೇವಾಲಯಗಳನ್ನು ಮುಚ್ಚಿ ಒಳಗೆ ವಿದ್ಯುದ್ದೀಪಗಳನ್ನು ಉರಿಸಿ ಜಲಾಂತರ್ಗತ ಅಬು ಸಿಂಬೆಲನ್ನು ಜನರಿಗೆ ತೋರಿಸಬೇಕು;ತಳಹದಿ ಸಮೇತ ದೇವಲಯಗಳನ್ನು ಕಿತ್ತು ಸ್ಥಳಾಂತರಿಸಬೇಕು, ಇತ್ಯಾದಿ. ಪ್ರಾಯೋಗಿಕತೆ, ವೆಚ್ಜ, ಕಾಲಾವಕಾಶ ಈ ದೃಷ್ಟಿಯಿಂದ ಪರಿಶೀಲಿಸಿದಾಗ ಈ ಪರಿಹಾರಗಳು ಸ್ವೀಕೃತವಾಗಲಿಲ್ಲ. ಸ್ವೀಕೃತಯೋಜನೆಯ ವಿವರವಿಷ್ಟು;ಎತ್ತಿ ಸ್ಥಳಾಂತರಿಸಲು ಅನುಕೂಲಿಸುವಂತೆ ಸಮಗ್ರಶಿಲರಚನೆಯನ್ನೂ ಹೋಳು ಹೋಳಾಗಿ ವಿಭಾಗಿಸಲು ಬಲುದೊಡ್ಡ ನಕಾಶ ಸಿದ್ಧವಾಯಿತು;ಇಲ್ಲಿ ಕೃತಿಗಳಿಗೆ ಇನ್ನಿತೂ ಊನ ಬರಬಾರದು;ಇದರ ಪ್ರಕಾರ ಬೆಟ್ಟದ ಮೇಲುಭಾಗದಿಂದ ಗರಗಸ ಕೊಯ್ತದ ಅರಂಭ;ನಕಾಶೆ ವಿಧಿಸಿರುವ ಗೆರೆಗಳ ಮೇಲೆ ನಿಖರವಾಗಿ ಗರಗಸ ಹರಿಯಬೇಕು;ಯಾವ ಕೊಯ್ತದ ಗಾಯವು ೬ ಮಿಮೀಗಿಂತ ಹೆಚ್ಚು ಅಗಲವಾಗಕೋಡದು;ಗರಗಸ ಹರಿಯದಲ್ಲಿ ಬಲುನಿಯಂತ್ರಿತವಾಗಿ ಅಕ್ಕ ಪಕ್ಕ ದಲ್ಲಿ ಏನು ಅಪಘಾತ ಸಂಭವಿಸದಂತೆ ದೈನಮೈಟ್ ಪ್ರಯೋಗ ಕೊಯ್ದು ಶಿಲಾಖಂಡಗಳನ್ನು ಕ್ರೇನ್ ಮುಂತಾದವುಗಳ ಸಹಾಯದಿಂದ ಮಗುವನ್ನು ಎತ್ತಿದಷ್ಟು ಹಗುರವಾಗಿ ಎಚ್ಜರಿಕೆಯಿಂದ ಸಾಗಿಸಬೇಕು; ಹೀಗೆ ಮಾಡುವಾಗ ಒಂದು ವಿಭಾಗದ ಸ್ಥಾನ ನಿರ್ದೇಶಗಳನ್ನು ಸೂಚಿಸುವ ಸ್ಪಷ್ಟ ಸಂಕೇತಗಳನ್ನು ಅದರ ಮೇಲೆ ನಿರೂಪಿತವಾಗಿರಬೇಕು;ಈ ಕೊಯ್ತ ಸ್ಥಳಾಂತರ ಮುಗಿದನಮೇಲೆ ಕೆಳಗಿನಿಂದ ಮೇಲಕ್ಕೆ ಶಿಲಾಖಂಡಗಳನ್ನು ಕ್ರಮಬದ್ಧವಾಗಿ ಜೋಡಿಸಿ ಅಬು ಸಿಂಬೇಲ್ ಪುನಾರಚನಯನ್ನು ಪೂರ್ಣಗೊಳಿಸಬೇಕು. ಈ ಯೋಜನೇಯ ಪ್ರಕಾರ ಎರಡು ದೇವಾಲಯಗಳನ್ನು ಕೊಯ್ದು ಒಟ್ಟಿದ್ದಾಗ ಅವು ೯೫೦ ವಭಿನ್ನ ಶಿಲಾಖಂಡಗಳ ಅಪೂರ್ವ ಮೇಳವಾಗಿದ್ದವು.
         ದೇವಾಲಯಗಳ ಹೊಸ ನಿವೇಶನ ಹಳೆಯ ಸ್ಥಾನದಿಂದ ಸುಮಾರು ೧೯ ಮೀ ಎತ್ತರದಲ್ಲಿಯೂ ನದಿದಂದಯಿಂದೆ ೬೦ ಮೀ ದೂರದಲ್ಲಿಯೂ ಇದೆ.
         ರಾಮ್ಸಸ್ ವಿಗ್ರಹದ ಖಂಡದ ಭಾರ ೧೯ ಟನ್. ೧೯೬೪ ರಲ್ಲಿ ಪ್ರಾರಂಭವಾದ ಈ ಪರಮ ತಾಂತ್ರಿಕ ಸಾಹಸ ಆಸ್ವಾನ್ ಜಲಾಸಯದ ಮಟ್ಟ ಏರುತ್ತಿದ್ದಂತೆ ಅನುರೂಪ ವೇಗದಿಂದ ಮುಂದುವರಿದು ೧೯೬೯ ರ ಹೊತ್ತಿಗೆ ಪೂರ್ಣವಾಯಿತು. ಖರ್ಚು ೫೦ ಮಿಲಿಯನ್ ಡಾಲರ್ಗಿಂತಲೂ ಹೆಚ್ಜು.