ಅಮೃತಸರ – ಅಮೆಜಾನ್' ಆ ಚಿತ್ರಪದ್ಧತಿಯನ್ನು ಕಂಡು ಭಾರತೀಯರ ಅಂತರ್ಯ ವನ್ನು ಇನ್ನೂ ಆಳವಾಗಿ ತಿಳಿದಳು. 1938-1941ರಲ್ಲಿ ಅವಳು ಚಿತ್ರಿಸಿದ ಕಲೆಯಲ್ಲಿ ಆಕೆಯ ಮನೋಭಾವದ ಬದಲಾವಣೆ ಕಂಡುಬರುತ್ತದೆ. ಆಕೆಯ ಚಿಕಲೆಯನ್ನು ಭಾರತದೇಶದ ನವ್ಯ ಪಂಥದವರು ಒಪ್ಪಲಿಲ್ಲ. ಈ ಮನೋವೃತ್ತಿಯ ಫಲವಾಗಿ ಚಿತ್ರಕಲೆಯಲ್ಲಿ ಆಕೆಗಿದ್ದ ಆಸಕ್ತಿ ಕ್ಷೀಣಿಸಿತು. ಅಷ್ಟರಲ್ಲಿ ತನ್ನ 28ನೆಯ ವಯಸ್ಸಿನಲ್ಲಿ ಆ ನ್ಯೂಮೋನಿಯದಿಂದ ನಿಧನಳಾದಳು. (ಯು.ಎಸ್.ಕೆ.) ಅಮೃತಸರ : 5,024 ಚ.ಕಿಮೀ ವಿಸ್ತಾರವಾಗಿದ್ದು ಸಮತಟ್ಟಾದ ಮೈದಾನವಾಗಿದೆ. ಸ್ವಲ್ಪವೇ ಈಶಾನ್ಯದಿಂದ ನೈಋತ್ಯಕ್ಕೆ ಇಳಿಜಾರಿನಿಂದಕೂಡಿದೆ. ಇಲ್ಲಿ ಸಿಂಧೂನದಿಯ ಉಪನದಿಗಳಾದ ರಾವಿ ಮತ್ತು ಬಿಯಾಸ್ ನದಿಗಳು ಅನುಕ್ರಮವಾಗಿ ಪಶ್ಚಿಮ ಮತ್ತು ಪೂರ್ವಗಡಿ ಭಾಗಗಳಲ್ಲಿ ಹರಿಯುತ್ತದೆ. ಒಟ್ಟು ಜನಸಂಖ್ಯೆ 10,077, ಜನಸಾಂದ್ರತೆ ಚ.ಕಿಮೀಗೆ 603 ಜನರು ಸಾಕ್ಷರತೆ ಶೇ. 68. ಇತರ ಪ್ರಮುಖ ನಗರಗಳೆಂದರೆ ತರನ್ ರನ್, ಸ್ವರ್ಣ ಮಂದಿರ ಪಟ್ಟಿ, ಜಂದಿಯಾಲ, ಛಹಾರ್ತ, ಮಜಿತ, ಖೆಂಖರನ್, ಸೂರ್‌ಸಿಂಗ್ ಮತ್ತು ಸುಲ್ತಾನ್‌ಂಡ್ ಕೃಷಿ ಜಿಲ್ಲೆಯ ಪ್ರಮುಖವೃತ್ತಿ ನೀರಾವರಿ ಸೌಲಭ್ಯ ಉತ್ತಮವಾಗಿದೆ. ಗೋದಿ, ದ್ವಿದಳಧಾನ್ಯ ಮೆಕ್ಕೆಜೋಳ, ಹತ್ತಿ, ಕಬ್ಬು ಮತ್ತು ಎಣ್ಣೆಕಾಳು ಬೆಳೆಗಳು ಮುಖ್ಯವಾದವು. ಹತ್ತಿ ಗಿರಣಿ ಮತ್ತು ಸಕ್ಕರೆ ಕಾರ್ಖಾನೆಗಳಿವೆ. ರಸ್ತೆ ಮತ್ತು ರೈಲು ಸಾರಿಗೆ ಸೌಲಭ್ಯವಿದೆ. ಅಮೃತಸರ ಜಿಲ್ಲೆ : ಭಾರತದ ಉತ್ತರದಲ್ಲಿರುವ ಪಂಜಾಬ್ ರಾಜ್ಯದ ಒಂದು ಜಿಲ್ಲೆ ಹಾಗೂ ಜಿಲ್ಲಾಡಳಿತ ಕೇಂದ್ರನಗರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ. ಸಿಖ್‌ರ ಯಾತ್ರಾಸ್ಥಳ ಮತ್ತು ಧರ್ಮ ಕೇಂದ್ರ ನಾಲ್ಕನೆಯ ಗುರು ರಾಮದಾಸನಿಂದ ಸ್ಥಾಪನೆಯಾಯಿತು (1977), ಪ್ರಸಿದ್ಧ ವ್ಯಾಪಾರ ಕೇಂದ್ರ, ಜನಸಂಖ್ಯೆ ಸು. 1011327 (2001). ಇಲ್ಲಿ ವಿಶ್ವವಿಖ್ಯಾತ ಸ್ವರ್ಣಮಂದಿರವಿದೆ. ಸಿಖ್‌ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ. ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ. ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಚಿನ್ನದ ದೇವಾಲಯವಿರುವ 'ಅಮೃತಸರ'ವೆಂಬ ಪವಿತ್ರ ಕೊಳದ ನಿರ್ಮಾಣವು 4ನೆಯ ರಾಮದಾಸರ ಕಾಲದಲ್ಲಿ ಪ್ರಾರಂಭವಾಯಿತು. ಈ ಕೊಳದ ಹೆಸರಿನಿಂದಲೇ ಈ ನಗರ ಮತ್ತು ಜಿಲ್ಲೆಗೆ ಹೆಸರು ಬಂದಿತು. (00.AT.) ಅಮೃತಸರದ ಕೌಲು : 1809ರ ಏಪ್ರಿಲ್ 25ರಂದು ರಣಜಿತ್ ಸಿಂಗನಿಗೂ ಬ್ರಿಟಿಷರಿಗೂ ಆದ ಈ ಕೌಲು ಬ್ರಿಟಿಷರ ವ್ಯಾಪ್ತಿಯನ್ನು ಹೆಚ್ಚಿಸಿತಾಗಿ ಭಾರತದ ಚರಿತ್ರೆಯಲ್ಲಿ ಮುಖ್ಯವಾಗಿದೆ. ರಣಜಿತ್ ಸಿಂಗ್ ತನ್ನ ಸ್ಥಾನವನ್ನು ಬಲಪಡಿಸಿಕೊಂಡ ಮೇಲೆ ಸಟ್ಲಜ್ ನದಿಯ ಸುತ್ತಮುತ್ತಲ ಸಣ್ಣಪುಟ್ಟ ರಾಜ್ಯಗಳಲ್ಲವನ್ನೂ ತನ್ನ ಅಧೀನಕ್ಕೆ ಒಳವರಿಯಲ್ಲಿ ಬದು ಸಿಖ್ ಸಾಮಾಜ್ಯವನ್ನು ಸ್ಥಾಪಿಸಬೇಕಂಬ ಆಸೆಯಿಂದ 18506-07ರಲ್ಲಿ ಮುನ್ನುಗ್ಗಿದೆ. ಇದನ್ನು ಗಮನಿಸಿದ ಬ್ರಿಟಿಷರು ಬಲವಂತನಾದ ಅವನು ಫ್ರೆಂಚರ ಮೇಲೆ ಯುದ್ಧಮಾಡಲು ತಮಗೆ ಸಹಾಯಕನಾಗುತ್ತಾನೆಂದು ಭಾವಿಸಿ ಅವನೊಡನೆ ಒಪ್ಪಂದವನ್ನು ಮಾಡಿಕೊಳ್ಳಲು ಯೋಚಿಸಿದರು. ಅಷ್ಟರಲ್ಲಿ ನೆಪೋಲಿಯನ್ ಭಾರತದ ಮೇಲೆ ದಂಡೆತ್ತಿಬರುವ ಸಂಭವ ಕಡಿಮೆಯಾಗಲು ಬ್ರಿಟಿಷರು ರಣಜಿತ್ ಸಿಂಗನೊಡನೆ ಒಪ್ಪಂದ ಮಾಡಿಕೊಳ್ಳುವ ಬದಲು ಅವನ ಮೇಲೆ ಒಂದು ಸೈನ್ಯವನ್ನು ಕಳುಹಿಸಿದರು. ಸಪ್ಲೆಜ್ ನದಿಯ ಪೂರ್ವಕ್ಕಿರುವ ಸಣ್ಣಪುಟ್ಟ ಸಿಖ್ ರಾಜ್ಯಗಳು ಈ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯಕರಾಗಿ ತನ್ನ ಮೇಲೆ ಯುದ್ಧಮಾಡಬಹುದೆಂಬ ಶಂಕೆಯಿಂದ, ರಣಜಿತ್ ಸಿಂಗ್ ಬ್ರಿಟಿಷರೊಡನೆ ಯುದ್ಧಕ್ಕೆ - ಬದಲು ಕೌಲು ಮಾಡಿಕೊಂಡ. ಇದರ ಪ್ರಕಾರ ರಣಜಿತ್‌ಸಿಂಗ್ ಸಟ್ಲಜ್ ನದಿಯ ಬಲಭಾಗದ ಪ್ರದೇಶಗಳಲ್ಲಿ ಮಾತ್ರ ರಾಜ್ಯವಾಳಬೇಕೆಂದೂ ಮಿಕ್ಕ ಇತರ ಸಿಖ್ ರಾಜ್ಯಗಳು ಬ್ರಿಟಿಷರ ಆಧಿಪತ್ಯಕ್ಕೆ ಒಳಪಡಬೇಕೆಂದೂ ತೀರ್ಮಾನವಾಯಿತು. ಇದರಿಂದ ಬ್ರಿಟಿಷರ ರಾಜ್ಯ ಸಟ್ಲಜ್ ನದಿಯವರೆಗೂ ವಿಸ್ತರಿಸಿತು ಮತ್ತು ಲೂಧಿಯಾನ ನಗರದಲ್ಲಿ ಬ್ರಿಟಿಷರ ಸೈನ್ಯ ತಂಗುವ ಏರ್ಪಾಡೂ ಆಯಿತು. (ಎಂ.ಎಸ್.ಬಿ.) ಅಮೃತಾಪುರ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿ ಕಸಬೆಯಿಂದ ಈಶಾನ್ಯಕ್ಕೆ ಸು.10ಕಿಮೀ ದೂರದಲ್ಲಿರುವ ಒಂದು ಹಳ್ಳಿ ಇಮ್ಮಡಿ ವೀರಬಲ್ಲಾಳನ ದಂಡನಾಯಕ ಅಮಿತಯ್ಯನ (ಅಮೃತಯ್ಯ) ಹೆಸರಿನ ಮೇಲೆ ಊರಿಗೆ ಈ ಹೆಸರು ಬಂತೆಂದು 1210ರ ಒಂದು ಶಾಸನದಿಂದ ಗೊತ್ತಾಗುತ್ತದೆ. ಅಮಿತಲು ದಂಡಾಯಕ ಇಲ್ಲಿನ ಅಮೃತೇಶ್ವರ ದೇವಾಲುವನ್ನು ಕಟ್ಟಿಸಿದನೆಂದೂ ಸು.1547ರ ವರೆಗೆ ಅನೇಕ ಧರ್ಮದತ್ತಿಗಳು ಈ ದೇವಾಲಯಕ್ಕೆ ಒದಗಿಬಂದುವೆಂದು ಇತರ ಶಾಸನಗಳಿಂದ ತಿಳಿಯುತ್ತದೆ. ಇಲ್ಲಿಯ ಸುಮಾರು 20 ಶಾಸನಗಳಲ್ಲಿ 1196ರ ಒಂದು ಶಾಸನ ಕನ್ನಡದ ಪ್ರಸಿದ್ಧ ಕವಿ ಜನ್ನನಿಂದ ರಚಿತವಾದುದು. (ಎಚ್.ವಿ.ಎಸ್.) ಅಮೃತೇಶ್ವರ ದೇವಾಲಯ ಉತ್ತಮ ಹೊಯ್ಸಳ ವಾಸ್ತು ಕೃತಿಗಳಲ್ಲೊಂದು. ಇದರಲ್ಲಿ ಗರ್ಭಗೃಹ, ಅಂತರಾಳ, ನವರಂಗ ಮತ್ತು ಮಹಾಮಂಟಪ ಇವೆ. ನವರಂಗದಿಂದ ದಕ್ಷಿಣದ ಕಡೆಗೆ ತೆರೆದಂತಿರುವ ಮುಖಮಂಟಪವೂ ಇದೆ. ಸುತ್ತಲೂ ಎತ್ತರದ ಪಾಕಾರವಿದೆ. ಮಹಾಮಂಟಪದ ತಳವಿನ್ಯಾಸ ಚೌಕ ಶಿಲುಬೆ. ಉಳಿದ ಭಾಗಗಳೂ ಚೌಕಗಳೇ ಆದರೂ ಪರಿಘದ ಹಿನ್‌ಸರಿತ ಮತ್ತು ಮುನ್‌ಸರಿತಗಳಿಂದ ಗರ್ಭಗುಡಿಯ ಭಾಗ ಸ್ವಲ್ಪಮಟ್ಟಿಗೆ ನಕ್ಷತ್ರಾಕಾರ ಅಥವಾ ಕುಂಡಾಕಾರವಾಗಿದೆ. ಈ ಭಾಗ 1196ರ ರಚನೆಯಾದರೆ, ಮುಂದಿನ ಮಹಾಮಂಟಪವನ್ನು ಸು.1206ರಲ್ಲಿ ಕಟ್ಟಿದಂತೆ ತೋರುತ್ತದೆ. ಗರ್ಭಗೃಹದಲ್ಲಿ ಅಮೃತೇಶ್ವರ ಲಿಂಗವಿದೆ. ಗರ್ಭಗುಡಿಯ ದ್ವಾರಬಂಧ ಉತ್ತಮ ಕೆತ್ತನೆಯಿಂದ ಕೂಡಿದೆ. ಸುಕನಾಸಿಯ ದ್ವಾರವೂ ಅಷ್ಟೇ ಚೆನ್ನಾಗಿದೆ. ಇದರಲ್ಲಿ ರತಿಮನ್ಮಥರ ವಿಗ್ರಹಗಳಿರುವುದು ವಿಶೇಷ. ಈ ದ್ವಾರದ ಪಕ್ಕಗಳಲ್ಲಿ ಕುಸುರಿ ಕೆಲಸದ ಜಾಲಂಧಗಳಿವೆ. ನಾಲ್ಕು ಕಂಬಗಳಿರುವ ನವರಂಗದ ಭುವನೇಶ್ವರಿಗಳು ಸುಮಾರು 2 ಅಡಿಗಳಿಗಿಂತ ಹೆಚ್ಚು ಆಳವಾಗಿದ್ದು ಇಳಿಬಿದ್ದ ಪದ್ಮ, ಮೋತೆ ಇತ್ಯಾದಿಗಳಿಂದ ಸೂಕ್ಷ್ಮ ಕೆತ್ತನೆಗಳೊಡನೆ ಭವ್ಯವಾಗಿ ಅಲಂಕೃತವಾಗಿವೆ. ನವರಂಗದ ಒಳಗೆ ಗಣಪತಿ, ಸಪ್ತಮಾತೃಕೆಯರು, ಸರಸ್ವತಿ, ನಾಗದಂಪತಿಗಳು ಇತ್ಯಾದಿ ವಿಗ್ರಹಗಳಿವೆ. ಮಹಾಮಂಟಪ ಹೊಯ್ಸಳ ಮಾದರಿಯ ಹೊಳಪುಳ್ಳ 36 ಕಂಬಗಳಿಂದ ಕೂಡಿದೆ. ನಾಲ್ಕು ಕಡೆಯ ಚಾಚುಗಳಲ್ಲೂ ಇನ್ನೂ ಎರಡೆರಡು ಕಂಬಗಳಿವೆ. ಇಲ್ಲಿಯ ಎಲ್ಲಾ ಭುವನೇಶ್ವರಿಗಳೂ ಸುಂದರ ನಿರೂಪಣೆಗಳು. ಹಲವುಗಳ ಮೇಲೆ ಅವನ್ನು ರೂಪಿಸಿದ ಮಲ್ಲಿತಮ್ಮ, ಪದುಮಣ್ಣ, ಬಲುಗ, ಮಲಯ ಮೊದಲಾದ ಶಿಲ್ಪಿಗಳ ಹೆಸರುಗಳಿವೆ. ಮಹಾಮಂಟಪದ ಸುತ್ತಲಿನ ತಳಗೋಡೆಯ ಹೊರಮೈ ಅನೇಕ ಪುರಾಣಕಥೆಗಳು ಮತ್ತು ಇತರ ಶಿಲ್ಪಗಳಿಂದ ಅಲಂಕೃತವಾಗಿದೆ. ಅವುಗಳ ಮೇಲೆ ಜಾಲಂಧ್ರಗಳಿವೆ. ಗರ್ಭಗೃಹ ಹಾಗೂ ನವರಂಗದ ಹೊರಮೈಯಲ್ಲಿ ಅರೆಕಂಬಗಳು ಹಾಗೂ ದ್ರಾವಿಡ ಮತ್ತು ನಾಗರ ರೀತಿಯ ಶಿಖರಾಲಂಕಾರಗಳಿವೆ. ದೇವಾಲಯದ ಸುತ್ತಲೂ ಹಬ್ಬಿರುವ ಇಳಿ ಕಪೋತಗಳ ಮೇಲೆ ಅನೇಕ ಸೂಕ್ಷ್ಮ ಕೆತ್ತನೆಗಳಿರುವ ಹಾರಪಂಕ್ತಿ ಇದೆ. ಗರ್ಭ ಗೃಹದ ಮೇಲಿನ ಶಿಖರ ಸಹ ವೈಶಿಷ್ಟ್ಯಪೂರ್ಣವಾಗಿದೆ. ಸುಮಾರು ನಕ್ಷತ್ರಾಕಾರದ ವಿನ್ಯಾಸವಿದ್ದು ಅನೇಕ ಶಿಲ್ಪಗಳಿಂದ ಅಲಂಕೃತವಾಗಿದೆ. ಮುಂಭಾಗ ಬಿಟ್ಟು ಇತರ ಮುಂದೆಣಿಗಳಲ್ಲಿ ಮೇಲೆದ್ದು ನಿಯತಿಯನ ಶಿಲ್ಪಗಳು ಒಂದರ ಮೇಲೊಂದರಂತೆ ಹಲವು ಸಾಲುಗಳಲ್ಲಿವೆ. ಸುಕನಾಸಿಯ ಮೇಲೆ ಶಿಖರದ ಚಾಚಣಿಕೆ ಇದ್ದು ಅದರ ಮೇಲೆ ಹೊಯ್ಸಳ ಲಾಂಛನದ ಶಿಲ್ಪವಿದೆ. ಮಹಾಮಂಟಪದ ಉತ್ತರದ ದ್ವಾರಮಂಟಪದ ಎದುರು ಸುಮಾರು ಇದೇ ಕಾಲದ ಒಂದು ಮಂಟಪ (ಸೂಳೆಮಂಟಪ) ಇದೆ. ದೇವಾಲಯದ ಆತ್ಮೀಯಕ್ಕೆ ಇನ್ನೊಂದು ಗುಡಿ ಇದ್ದು ಅದೀಗ ಶಿಥಿಲವಾಗಿದೆ. ಗರ್ಭಗೃಹ, ನವರಂಗ ಮತ್ತು ಮುಖಮಂಟಪವಿದ್ದ ಈ ಗುಡಿ ಸರಸ್ವತಿಯದೆಂದು ಊಹೆ. ಇವೆಲ್ಲವನ್ನೂ ಒಳಗೊಂಡಿರುವ ಸುತ್ತಲ ಪಾಕಾರ ಈಗ ಶಿಥಿಲವಾಗಿದ್ದರೂ ಒಮ್ಮೆ ಅದರ ತಲೆಯಂಚಿನಲ್ಲಿ ಸುತ್ತಲೂ ಅನೇಕ ವೃತ್ತಾಕಾರದ ಶಿಲ್ಪಾಲಂಕೃತ ಹೆನ್ನಾಲಗೆಗಳು ಸಾಲಾಗಿದ್ದು ದೇವಾಲಯದ ಭವ್ಯತೆಯನ್ನು ಹೆಚ್ಚಿದ್ದುವು ವಿನ್ಯಾಸದಲ್ಲಿ ಹಾಗೂ ಶಿಲ್ಪಕ ಯಲ್ಲಿ ಅಮೃತೇಶ್ವರ ದೇವಾಲಯ ಹೊಯ್ಸಳ ಕಾಲದ ಒಂದು ವಿಶಿಷ್ಟ ಸಾಧನೆ. ಅಮೆಜಾನ್' : ಗ್ರೀಸ್ ದೇಶದ ಪುರಾಣ ಸಾಹಿತ್ಯದಲ್ಲಿ ಉಲ್ಲೇಖಿತರಾಗಿರುವ ಯೋಧರು. ತಮ್ಮ ರಾಜ್ಯದಲ್ಲಿ (ಏಷ್ಯ ಮೈನರ್) ಪುರುಷರನ್ನು ಇರಗೊಡುತ್ತಿರಲಿಲ್ಲ. ಸಂತಾನಕ್ಕಾಗಿ ನೆರೆದೇಶಗಳ ಪುರುಷರೊಂದಿಗೆ ಸಂಬಂಧ ಬೆಳೆಸಿ, ಹುಟ್ಟಿದ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಗಂಡುಮಕ್ಕಳನ್ನು ಕೊಂದುಹಾಕುತ್ತಿದ್ದರು; ಇಲ್ಲವೆ ದೇಶದ ಹೊರಕ್ಕೆ ಅಟ್ಟಿಬಿಡುತ್ತಿದ್ದರು. ಬೇಟೆಯಾಡುವುದ ರಿಂದ ಮಾಡುವುದು ಧಾರ ಅವಾಸಗಳು, ಇಂಥ ದೇಶಗಳಿದ್ದವೆಂಬುದನ್ನು ನಂಬುವುದೇ ಸಾಧ್ಯವಿಲ್ಲ. ಆದರೂ ಹೋಮರನ
ಪುಟ:Mysore-University-Encyclopaedia-Vol-1-Part-1.pdf/೪೦೨
ಗೋಚರ