ಪುಟ:Mysore-University-Encyclopaedia-Vol-1-Part-1.pdf/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಾಲದಿಂದಲೂ ಪುರಾಣ ಸಾಹಿತ್ಯದಲ್ಲಿ ಅವರ ಪ್ರಸ್ತಾಪವಿದೆ. ಗ್ರೀಸಿನ ಆಗ್ನೇಯ ಭಾಗವಾದ ಅಟಿಕಕ್ಕೆ ಅವರು ಪ್ರ ಶ.ಪೂ. ೧೨೫೬ರಲ್ಲಿ ನುಗ್ಗಿದ್ದರಂದೂ ಅವರನ್ನುಹೊಡೆದಟ್ಟಲಾಯಿತೆಂದೂ ಪೇರಾಸ್‍ನ ಶಿಲಾಲೇಖವೊಂದರಿಂದ ತಿಳಿದುಬರುತ್ತದೆ. ಗ್ರೀಸಿನ ಪ್ರಸಿದ್ಧ ವೀರ ಹರ್ಕ್ಯುಲೀಸ್ ಮಾಡಬೇಕಾಗಿದ್ದ ಹನ್ನೆರಡು ಸಾಹಸಕಾರ್ಯಗಳಲ್ಲಿ, ಅಮೆಜಾನ್ ರಾಣಿಯ ಕಟಿಬಂಧವನ್ನು ತರುವುದೊಂದು. ಥೀಸಿಯಸ್ ಎಂಬ ವೀರ ಅವಳನ್ನೊ ಅವಳ ತಂಗಿಯನ್ನೊ ಮದುವೆಯಾದನಂದು ಕಥೆ. ಗ್ರೀಕರಿಗೂ ಟ್ರಾಯ್ ದೇಶದವರಿಗೂ ನಡೆದ ಯುದ್ಧದಲ್ಲಿ ಟ್ರೋಜನರ ಸೈನ್ಯದಲ್ಲಿ ಒಂದು ದೊಡ್ಡ ಅಮೆಜಾನ್ ಪಡೆಯೇ ಇತ್ತೆಂದೂ ಅದರ ದಂಡನಾಯಕಿಯಾದ ಪೇಂತಸೀಲಿಯ ಎಂಬುವಳನ್ನು ಅಕಿಲೀಸ್ ಕೊಂದನೆಂದೂ ಆಗಿನ ಬರೆಹಗಳಿಂದ ತಿಳಿದುಬರುತ್ತದೆ. ಭಾರತೀಯರಲ್ಲೂ ಇಂಥ ಸ್ತ್ರೀರಾಜ್ಯದ ಕಲ್ಪನೆಯಿತ್ತೆಂಬುದು ಪಮೀಳಾರ್ಜುನೀಯ ಕಥೆಯಿಂದ ತಿಳಿದುಬರುತ್ತದೆ. ಈ ಪುಟದ ಉಳಿದ ಎಲ್ಲ ಮಾಹಿತಿಯನ್ನು

ವಿಕಿಸೋರ್ಸ್ ಗೆ ಸೇರಿಸಲಾಗಿದೆ