ಪುಟ:Mysore-University-Encyclopaedia-Vol-1-Part-1.pdf/೪೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


           ಅಮೆರಿಕ ಸಂಯುಕ್ತ ಸಂಸ್ಥಾನದ ಸಾಹಿತ್ಯವಿಮರ್ಶೆ 

ಗೋಮಾಂಸದ ಉತ್ಪಾದನೆ, ಉಣ್ಣೆಯ ಉತ್ಪಾದನೆಯಲ್ಲೂ ಮುಂದಿದೆ. ಇಂಥ ಅಗಾಧ ಮೂಲಸಂಪತ್ತನ್ನು ಪಡೆದಿರುವ ಸಂಯುಕ್ತ ಸಂಸ್ಥಾನ ಬೃಹತ್ ಕೈಗಾರಿಕೆಗಳನ್ನು ಬಳಸಿಕೊಂಡಿರುವುದೇನೋ ಆಶ್ಚರ್ಯವಲ್ಲ. ರಾಷ್ಟ್ರದ ಅತ್ಯಂತ ದೊಡ್ಡ ಕೈಗಾರಿಕ ಪ್ರದೇಶ ಬೃಹತ್ ಸರೋವರಗಳಿಂದ ಇಲಿನಾಯ್ಸ್ ಇಂಡಿಯಾನಗಳವರೆಗೂ ಹರಡಿದೆ. ಇತ್ತೀಚಿನ 30 ವರ್ಷಗಳಲ್ಲಿ ದೇಶದ ಆಗ್ನೇಯ, ನೈಋತ್ಯಭಾಗಳಿಗೂ ಕೈಗಾರಿಕೆ ವ್ಯಾಪ್ತಿಸಿದೆ. ಯಾಂತ್ರೀಕರಣ ಎಲ್ಲ ರಂಗಗಳಲ್ಲು ಬೆಳೆದಿರುವುದರ ಪ್ರಿಣಾಮವಾಗಿ ಕೈಗಾರಿಕೆಯಲ್ಲಿ ಯಂತ್ರಕಲಾಪರಿಣಿತರ ಸಂಖ್ಯೆ ಕೊಂಚ ಹೆಚ್ಚಿದೆಯೆ ಹೊರತು ಕಾರ್ಮಿಕರ ಸಂಖ್ಯೆ ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. 1880ರಿಂದಲೂ ರಾಷ್ಟ್ರದ ರಫ್ತು ಆಮದಿಗಿಂತಲು ಹೆಚ್ಚಾಗಿಯೇ ಇದೆ. ರಫ್ತಾಗುವ ವಸ್ತುಗಳು- ಕಲ್ಲಿದ್ದಲು ಮೊದಲಾದ ಅದಿರುಗಳು, ಹತ್ತಿ ಹೊಗೆಸೊಪ್ಪು ಮುಂತಾದ ಕಚ್ಚಾ ಪದಾರ್ಥಗಳು, ಆಹಾರ ಪದಾರ್ಥಗಳು ತಯಾರಾದ ಯಾಂತ್ರಿಕ ಸಲಕರಣೆಗಳು ಮತ್ತು ಇತರ ಸಿದ್ಧ ವಸ್ತುಗಳು. 

ವಿಶಾಲವಾದ ನದಿ ಬಯಲುಗಳು, ವಾಯುಗುಣಗಳು ವೈವಿದ್ಯ, ವಾಣಿಜ್ಯಮಾರುತಗಳು ತರುವ ಸಮೃದ್ಧಮಳೆ-ಇವುಗಳಿಂದ ಸಂಯುಕ್ತಸಂಸ್ಥಾನದ ಅತ್ಯಂತ ಸಂಪದ್ಭರಿತ ರಾಷ್ಟ್ರವಾಗಿದೆ. ಕೃಷಿ ಉತ್ಪನ್ನಗಳಲ್ಲಿ, ಕೈಗಾರಿಕೆ ಬೇಕಾದ ಸಂಪನ್ಮೂಲಗಳಲ್ಲಿ, ಮರಮಟ್ಟುಗೆಗಳಿಗೆ ಕಾಗದ ತಯಾರಿಕೆಗೆ ಬೇಕಾದ ಅರಣ್ಯ ಸಂಪತ್ತಿನಲ್ಲಿ ವ್ಯಾಪರಕ್ಕೆ ಅವಶ್ಯಕವಾದ ಸ್ವಾಭಾವಿಕ ಬಂದರುಗಳಲ್ಲಿ, ಯಾವುದರಲ್ಲೂ ಈ ರಷ್ಟ್ರಕ್ಕೆ ಕೊರತೆಯಿಲ್ಲ. ಅದರ ಐಹಿಕ ಪ್ರಗತಿಗೆ ಇದೇ ಮೂಲ. ಚಂದ್ರಲೋಕಕ್ಕೆ ಮಾನವನನ್ನು ಕಳಿಸುವಂತಹ ಸಾಹಸ ಅವರಿಗೆ ಸಾಧ್ಯವಾಗಿರುವುದು ಅಪಾರ ಸಂಪತ್ತಿನ ಸಹಾಯದಿಂದ ಅವರು ಹೊಂದಿರುವ ವೈಜ್ಞಾನಿಕ ಪ್ರಗತಿಯಿಂದ. ಅಂತರಾಷ್ಟ್ರಿಯ ದೃಷಿಟಿಯಿಂದ ನೋಡುವುದಾದರೆ ವಿಶ್ವಸಂಸ್ಥೆ ಹುಟ್ಟಿ ಬೆಳೆದಿರುವುದು ಇಲ್ಲಿಯೇ.

ಉತ್ತರ ಅಮೆರಿಕ, (ನೋಡಿ) ಅಮೆರಿಕದ ಇತಿಹಾಸ, ಅಮೆರಿಕದ ಕಾಯಿದೆ, ಅಮೆರಿಕದ ಚರಿತ್ರೆಯಲ್ಲಿ ನೀಗ್ರೊ, ಅಮೆರಿಕದ ರಿಪಬ್ಲಿಕನ್ ಪಕ್ಷ, ಅಮೆರಿಕ ಡೆಮಾಕ್ರೆಟಿಕ್ ಪಕ್ಷ, ಅಮೆರಿಕದ ಸ್ವಾತಂತ್ರ್ಯ.

ಅಮೆರಿಕ ಸಂಯುಕ ಸಂಸ್ಥಾಪನದ ಸಾಹಿತ್ಯವಿಮರ್ಶೆ ; ಅಮೆರಿಕ ಸಂಯುಕ್ತ ಸಂಸ್ಥಾನದ ಸಾಹಿತ್ಯಚರಿತ್ರೆಯ ಹಲವಾರು ಘಟ್ಟಗಳಲ್ಲಿ ಸಮಾನ್ಯವಾಗಿ ಕಾಣಬರುವ ಅನುಕರಣ ಒಂದು ಮುಖ್ಯ ಅಂಶ . ಇದರಲ್ಲಿ ಒಂದು ನಾಟಕವನ್ನು ನೋಡುವವರ ಮತ್ತು ಒಂದು ಸಹಿತ್ಯಕೃತಿಯನ್ನು ಓದುವವರ ಪ್ರತಿಕ್ರಿಯೆಗೆ ಹೆಚ್ಚು ಮಹತ್ವವಿದೆ. ಇದು ಕವಿಯ ಭಾವನಾಶಕ್ತಿ ಮತ್ತು ನೈತಿಕಸ್ವಭಾವಕ್ಕೆ ಹೆಚ್ಚು ಗಮನ ಕೊಡುತ್ತದೆ. ಈ ದಿಸೆಯಲ್ಲಿ ಅಮೆರಿಕದಲ್ಲಿ ಎಮರ್ ಸನ್ನನದ್ದು ದೊಡ್ದ ಹೆಸರು. 
       ಆ ರಾಷ್ಟ್ರದ ಸಾಹಿತ್ಯವಿಮರ್ಶೆಯಲ್ಲಿ ಅನುಕರಣತತ್ವದ ಪಾತ್ರ ತೀರ ಚಿಕ್ಕದು.ಅರಿಸ್ಟಾಟಲನ ಪೊಯೊಟಿಕ್ಸ್ ಎಂಬ ಗ್ರಂಥ ಬಹಳ ಕಾಲದಿಂದಲೂ ಅಮೆರಿಕದ ವಿಶ್ಯವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿದೆ. ಅರಿಸ್ಟಾಟಲ್ ಕಥಾವಸ್ತುವಿಗೆ ಕೊಟ್ಟಿರುವ ಮಹತ್ವವನ್ನು ಆಧುನಿಕ ಕಾಲದ ಅಲ್ಲಿನ ಕಾದಂಬರಿಕಾರರು ಮತ್ತು ವಿಮರ್ಶಕರು ಅರ್ಥಮಾಡಿಕೊಂಡಿದ್ದಾರೆ. ಶಿಕಾಗೊ ವಿಶ್ವವಿದ್ಯಾನಿಲಯದ ನವೀನ ಆರಿಸ್ಟೋಟಿಲಿಯರನ್ನು ಆರಿಸ್ಟಾಟಲನ ಪೊಯೆತಿಕ್ಸನ್ನು ಆಧರಿಸಿ ವಿಮರ್ಶೆಯ ಒಂದು ಹೊಸ ತತ್ವವನ್ನು ರೂಪಿಸಿದ್ದಾರೆ. ಅದರಲ್ಲಿ ಅನುಕರಣೆಗೆ ಮಹತ್ವ ಕೊಟ್ಟಿದಾರೆ. ರೊನಾಲ್ಡ್ ಕ್ರೇನ್ ಸಂಪಾದಿಸಿರುವ ಕ್ರಿಟಿಕ್ಸ್ ಅಂಡ್ ಕ್ರಿಟಿಸಿಸಮ್ (1952) ಎಂಬ ಗ್ರಂಥದಲ್ಲಿ ಈ ತತ್ವದ ಬೆಂಬಲಿಗರ ವಿಚಾರಧಾರೆಯನ್ನು ಕಾಣಬಹುದು. ಸಾಹಿತ್ಯದ ಚಾರಿತ್ರಿಕ ಮತ್ತು ಪೌರಾಣಿಕ ಅಭ್ಯಾಸದ ಮೂಲಕವೂ ಅನುಕರಣಾ ತತ್ವ ಅಮೆರಿಕದ ಸಾಹಿತ್ಯವನ್ನು ಪ್ರವೇಶಿಸಿದೆ. ವಿಮರ್ಶಕ ಥಾಟ್ (3 ಸಂಪುಟಗಳು) ಎಂಬ ಕೃತಿಯಲ್ಲಿ ಸಾಹಿತ್ಯ ಕೃತಿಯನ್ನು ಅದರ ಹಿನ್ನೆಲೆಗೆ ಸಂಬಂಧಿಸುತ್ತಾನೆ.

ವಿಲಿಯಮ್ ಕುಲೆನ್ ಬ್ರಯಾಂಟ್ ತನ್ನ ಆನ್ ದಿ ನೇಚರ್ ಅಫ್ ಪೊಯೆಟ್ರಿಯಲ್ಲಿ (1826) ಕವಿಯ ಭಾವನಾಶಕ್ತಿ ಮತ್ತು ಸಂಕೇತಗಳಿಂದ ಶಕ್ತಿಯುತ ಭಾವಗಳನ್ನು ಸೃಷ್ಟಿಸುವ ಮತ್ತು ಉದ್ದೀಪಿಸುವ ಸಾಮರ್ಥ್ಯವನ್ನು ಒತ್ತಿ ಹೇಳುತಾನೆ. ಅಂತೆಯೆ ಓದುಗರ ನೀತಿಯನ್ನು ಉತ್ತಮಗೊಳಿಸಲು ಪಾತ್ರವನ್ನು ಕಾವ್ಯಕ್ಕೆ ಆರೋಪಿಸುತ್ತಾನೆ. ಎಮರ್ ಸನ್ನನ ಬರವಣಿಗೆಗಳಲ್ಲಿನ ದಿ ಪೊಯೆಟ್ (1844)ವಾದಗಳು ಬಹುಮಟ್ಟಿಗೆ ಬ್ರಯಾಂಟನ ವಾದವನ್ನು ಹೋಲುತ್ತದೆ.

ಜೇಮ್ಸ್ ರಸ್ಸಲ್ ಲೊವೆಲ್ ತನ್ನ ದಿ ಫನ್ಕ್ಷನ್ ಆಫ್ ದಿ ಪೊಯೆಟ್ ನಲ್ಲಿ (1855) ಮತ್ತು ವಾಲ್ಟ್ ವಿಟ್ಮನ್ ತನ್ನ ಲೀವ್ಸ್ ಆಫ್ ಗ್ರಾಸ್ನ್ (1855) ಪೀಠಿಕೆಯಲ್ಲಿ ಕವಿ ಒಬ್ಬ ವೀಕ್ಷಕ, ಆತ ಅಮೂಲ್ಯವಾದ ನೈತಿಕ ಸತ್ಯಗಳನ್ನು ಎತ್ತಿ ತೋರುತ್ತಾನೆ ಎಂದು ಹೇಳುತ್ತರೆ. ಒಟ್ಟಿನಲ್ಲಿ 19ನೇ ಶತಮಾನದ ಅಮೆರಿಕ ಸಂಯುಕ್ತ ಸಂಸ್ಥಾಪನದ ಸಾಹಿತ್ಯ ವಿಮರ್ಶೆ ಬಹುಮಟ್ಟಿಗೆ ಕೋಲ್ ರಿಜ್ ನ ಅಭಿವಾದವನ್ನು ಅನುಸರಿಸುತ್ತದೆ.

ವಾಸ್ತವಿಕ ಮತ್ತು ವ್ಯಕ್ತಿಪರ ತತ್ವಗಳಿಲ್ಲಿ ಕೆಲವು ಸದೃಶ್ಯಗಳಿವೆ. ಎಡ್ ಗರ್ ಅಲೆನ್ ಷೊ ಒಬ್ಬ ವಾಸ್ತವಿಕ ಮತ್ತು ಪ್ರತಿಭಾವಂತ ವಿಮರ್ಶಕ. ಕಾವ್ಯದ ಸೌಂದರ್ಯಕ್ಕೆ, ಅದು ಎಷ್ತರ ಮಟ್ಟಿಗೆ ಕಲಾಕೃತಿ ಎಂಬುದಕ್ಕೆ, ಪೊ ಮಹತ್ವ ಕೊಡುತ್ತಾನೆ. ಕಾವ್ಯದ ನೀತಿಭೋದೆಯಲ್ಲಿ ಅವನಿಗೆ ನಂಬಿಕೆಯಿಲ್ಲ. ದಿ ಪೊಯೆಟಿಕ್ ಪ್ರಿನ್ಸಿಪಲ್ (1850)ಎಂಬುದರಲ್ಲಿ ನೀಳ್ಗವಿತೆ ಎಂಬುದು ಒಂದು ಅರ್ಥಸಾಮಂಜಸ್ಯವಿಲ್ಲದ ಪದ ಎಂದು ಹೇಳುತ್ತಾನೆ. ಅವನು ಕೋಲ್ ರಿಜನ್ ನ ಬಯಾಗ್ರಫಿಯ ಛಂದೊಬದ್ಧ ಸೃಷ್ಟಿ ಸುಂದರವೂ ಬೋಧಕವೂ ಆಗಿದ್ದರೆ ಅದು ಬರಿಯ ಆಕಸ್ಮಿಕ. ಪೊ ತಾನು ಹೇಳಿದ್ದನ್ನು ಆಚರಣೆಯಲ್ಲಿ ತಂದ. ಅವನು ತೋರಿಸಿಕೊಟ್ಟ ವಿಮರ್ಶನಾಮಾರ್ಗ ಒಂದು ದೊಡ್ಡ ಪರಂಪರೆಯಾಗಬಹುದಾಗಿತ್ತು. ಆದರೆ ಅವನ ವಿಮರ್ಶನಮಟ್ಟಗಳು ವಾಸ್ತವಿಕತತ್ತ್ವವನ್ನು ಒತ್ತಿ ಹೇಳುತ್ತಾನೆ. ತನ್ನ ದಿ ಆರ್ಟ್ ಆಫ್ ಫನ್ಕ್ಷನ್ ನಲ್ಲಿ (1888) ಕಾದಂಬರಿ ಒಂದು ಅನುಕರಣೀಯ ಕಲೆ, ಬರಹಗಾರನ ಬುದ್ಧಿಮಟ್ಟ ಮತ್ತು ಅವನ