ಪುಟ:Mysore-University-Encyclopaedia-Vol-1-Part-1.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೦ ಅರಬ್ಬೀ ವಿಮರ್ಶೆ

ಗಣಿತ, ವೈದ್ಯ, ಭೂಗೋಳ-ಇತ್ಯಾದಿ ವಿಜ್ಣ್ನಾನಗಳ ವ್ಯಾಸಂಗವೂ ನಡೆದು ಅನೇಕ ಗ್ರೀಕ್ ಪಸ್ತಕಗಳು ಅರಬ್ಬಿಗೆ ಭಾಷಾಂತರಗೊಂಡವೂ. ಈ ಭಾಷಾಂತರಗಳು ವಿಜ್ಣ್ಣಾನಕ್ಕೂ ದರ್ಶನಕ್ಕೂ ಸಂಬಂಧಿಸಿದ ಅನೇಕ ಹೊಸ ಶಬ್ದಗಳನ್ನು ಭಾಷೆಗೆ ಒದಗಿಸಿದುವು. ಇವುಗಳನ್ನೆಲ್ಲ ಸೇರಿಸಿಕೊಂಡು, ಅಬ್ಬಾಸಿದ್ ಕಾಲದ ಒಬ್ಬ ಭಾಷಾವಿಜ್ಣ್ಣಾನಿ ಗುಣಿಸಿರುವ ಪ್ರಕಾರ ಆಗಿನ ಅರಬ್ಬೀ ಭಾಷೆಯಲ್ಲಿ 1,22,35,412 ಶಬ್ದಗಳಿದ್ದುವು. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಈ ಶಬ್ದಗಳ ಸಂಖ್ಯೆ 66,99,400.

ಈ ಪ್ರಕಾರ 7ನೆಯ ಶತಮಾನದಿಂದ ಈಚೆಗೆ ಇಸ್ಲಾಮ್ ಧರ್ಮ ಹರಡಿದಂತೆಲ್ಲ ಅರಬ್ಬೀ ಭಾಷೆ ಜನಜೀವನದಲ್ಲೂ ರಾಜ್ಯ ಮತ್ತು ಆಡೆಳಿತಗಳಲ್ಲೂ ತನ್ನ ಸತ್ತ್ವವನ್ನು ಮೆರೆಯಿತು. ಅರೇಬಿಯ ಪರ್ಯಾಯ ದ್ವೀಪವೋಂದರಲ್ಲೇ ಅಲ್ಲದೆ ಮಧ್ಯಪ್ರಾಚ್ಯದ ಎಲ್ಲ ಏಷ್ಯ ರಾಜ್ಯಗಳಲ್ಲೂ ಆಫ್ರಿಕದ ಉತ್ತರ ಮತ್ತು ಪೂರ್ವಭಾಗದ ಪ್ರದೇಶಗಳಲ್ಲೂ ಸ್ಪೇನ್,ಸಿಸಿಲಿ ಮುಂತಾದ ಪಾಶ್ಚಾತ್ಯ ದೇಶಗಳಲ್ಲೂ ಆರಬ್ಬೀ ಭಾಷೆ ಹರಡಲು ಮೊದಲಿಟ್ಟು ಆಯಾ ದೇಶಭಾಷೆಗಳ ಮೇಲೆ ತನ್ನ ಪ್ರಭಾವವನ್ನು ಬೀರಿತು. ಆಲ್ಲದೆ, ಕೆಲವು ಪ್ರಾಂತ್ಯಗಳಲ್ಲಿ ಈಜಿಪ್ಪಿನಲ್ಲೆಸಗಿದಂತೆ, ಸ್ಥಳೀಯ ಉಪಭಷೆಗಳನ್ನು ಮೂಲೆಗೊತ್ತಿತ್ತು. ಲೌಕಿಕಾಧಿಕಾರ ಕೆಳೆದುಕೊಂಡ ಮೇಲೂ ಅರಬ್ಬೀ ಭಾಷೆ ತನ್ನ ಮತೀಯ ಪ್ರಭಾವವನ್ನು ‌‍‍‍ದೃಢಪಡಿಸಿಕೊಳ್ಳದಿರಲಿಲ್ಲ್, ಏಕೆಂದರೆ ಈಗಲೂ ಇಸ್ಲಾಮ್ ಧರ್ಮ ಪಶ್ಚಿಮ ಏಷ್ಯದಲ್ಲೂ ಆಫ್ರಿಕದಲ್ಲೂ ಸಾರ್ವಭೌಮ ಪದವಿಯಲ್ಲಿದೆ. ಯುರೋಪಿನ ನೆಲದಲ್ಲೂ ಸ್ಪೇನ್-ಸಿಸಿಲಿಗಳು ತನ್ನನ್ನು ಹೊರಹಾಕಿದ್ದಕ್ಕೆ ತಕ್ಕ ಪರಿಹಾರವನ್ನು ಅದು ತುರ್ಕಿದೇಶದಲ್ಲಿ ಪಡೆದಿದೆ.ಈ ಪ್ರದೇಶಗಳ ಸ್ಥಳೀಯ ಪ್ರಭಾವಗಳಿಂದ ಅರಬ್ಬೀ ಭಾಷೆ ಅನೇಕ ಉಪಭಾಷೆಗಳಾಗಿ ಬೆಳೆದಿದ್ದರೂ ಕುರಾನಿನ ಭಾಷೆಯನ್ನೇ ಮಾದರಿಯನ್ನಾಗಿ ಕಳೆದ 1,400 ವರ್ಷಗಳಿಂದಲೂ ಇಟ್ಟುಕೊಂಡಿದ್ದರ ಪರಿಣಾಮವಾಗಿ ಈ ದೇಶಗಳ ಗ್ರಾಂಥಿಕ ಭಾಷೆ ಒಂದೇ ತೆರನಾಗಿ ಉಳಿದುಬಂದಿದೆ. ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಇದು ಮಾತೃಭಾಷೆಯಾಗಿರುವುದಲ್ಲದೆ, ಸಮಸ್ತ ಮಸ್ಲಿಮ್ ಜಗತ್ತಿನ ಧರ್ಮ ಮತ್ತು ಸಂಸ್ಕೃತಿಯ ಭಾಷೆಯಾಗಿದೆ. ಈ ಭಾಷೆಯಲ್ಲಿ ಸಾವಿರಾರು ದಿನಪತ್ರಿಕೆಗಳನ್ನೂ ಕಾಲಿಕ ಪತ್ರಿಕೆಗಳನ್ನೂ ಪುಸ್ತಕಗಳನ್ನೂ ಇಂದಿಗೂ ಪ್ರಕಟಿಸುರತ್ತಿರುವ ಅರಬ್ಬೀ ಭಾಷಯನ್ನಾಡುವ ದೇಶಗಳಲ್ಲಿ ಇದು ಪಾಠಪ್ರವಚನಗಳಿಗೂ ಸಂಭಾಷಣೆಗೂ ಉಪಯೋಗಿಸಲ್ಪಡುತ್ತಿದೆಯಲ್ಲದೆ ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ವಲಸೆ ಹೋಗಿ ನಿಂತಿರುವ ಅರಬ್ಬರ ನೆಲೆಗಳಲ್ಲಿ ಬರೆವಣಿಗೆಗೂ ಸಂಭಾಷಣೆಗೂ ಬಲಕೆಯಾಗುತ್ತಿದೆ. ಅನೇಕ ಸಿಮಿಟಿಕ್ ಭಾಷೆಗಳು, ಸಂದಿಗ್ಧವಾದ ಐತಿಹಾಸಿಕ ದಾಖಲೆಗಳನ್ನು ಮಾತ್ರ ಉಳಿಸಿ ನಾಶಹೊಂದಿವೆಯಾದರೂ ಅರಬ್ಬೀ ಭಾಷೆಯಲ್ಲಿ ಮಾತ್ರ ಅದರ ಬೆಳೆವಣಿಗೆಯ ಪ್ರತಿಯೊಂದು ಮುಖವನ್ನು ರೇಖಿಸುವುದಕ್ಕೂ ಅರಬ್ಬರ ರಾಷ್ಟ್ರೀಯ ಜೀವನಕ್ರಮ ಮತ್ತು ಆಲೋಚನೆಗಳ ಇತಿಹಾಸವನ್ನು ಬರೆಯುವುದಕ್ಕೂ ಸಹಕಾರಿಯಾಗುವ ವಿಪುಲ ವಿಷಯಸಂಪತ್ತು ಇದೆ.

                                               (ಎಂ.ಎ.ಎಂ)

ಅರಬ್ಬೀ ವಿಮರ್ಶೆ: ಪ್ರ.ಶ. ಪೂ. 10ನೆಯ ಶತಮಾನಕ್ಕಿಂತ ಮುಂಚೆ ಅರಬ್ಬೀ ಸಾಹಿತ್ಯದಲ್ಲಿ ಗುರುತಿಸಿ ಹೆಸರು ಹೇಳುವಂಥ ವಿಮರ್ಶನ ಗ್ರಂಥಗಳು ತೀರಾ ವಿರಳವೆಂದೇ ಹೇಳಬಹುದು. ಸ್ವಂತಿಕೆಯಳ್ಳ ವಿಮರ್ಶೆಯ ಸಂಪ್ರದಾಯವನ್ನು ಕಾಣುವುದು ಇನ್ನೂ ಕಷ್ಟ ಮುಸ್ಲಿಮ್ ಪವಿತ್ರಗ್ರಂಥ ನಿರ್ದೇಶಿಸಿದ ಕಟ್ಟುಪಾಡುಗಳು, ರೂಪಿಸಿದ ಸಂಪ್ರದಾಯಶೀಲತೆ,ದರ್ಮಶ್ರದ್ಧೆ, ಆಷ್ಡಾಗಿ ಸಾಹಿತ್ಯ ವಿಮರ್ಶೆಯ ಬೆಳೆವಣಿಗೆಗೆ ನರವು ನೀಡಿದಂತೆ ಕಾಣುವುದಿಲ್ಲ. ಪರ್ಷಿಯನ್, ಗ್ರೀಕ್ ಸಂಪರ್ಕದಿಂದ ಸ್ಫೂರ್ತಿ, ಪ್ರಭಾವಗಳನ್ನು ಪಡೆದಾಗ ಅರಬ್ಭೀ ಸಾಹಿತ್ಯ ತನ್ನ ಸಾಮರ್ಥ್ಯದ ಸಾಧ್ಯತೆಗಳನ್ನು ಗುರುತಿಸಿಕೊಂಡಿರಬೇಕೆನ್ನುವ ಮಾತು ಆ ಭಾಷೆಯ ಸಾಹಿತ್ಯ ವಿಮರ್ಶೆಗೂ ಅನ್ವಯಿಸುತ್ತದೆ.

ಪ್ರಶ.ಪೂ. 10ನೆಯ ಶತಮಾನಕ್ಕಿಂತ ಪೂರ್ವದಲ್ಲಿ ಕುರಾನಿನಲ್ಲಿನ ಭಾಷಾಸೌಂದರ್ಯವನ್ನು ಕುರಿತ ವಿಶ್ಲೇಷಣೆ ಹಲವು ಗ್ರಂಥಗಳಲ್ಲಿ ಕಂಡುಬರುತ್ತದೆ. ಧರ್ಮಗ್ರಂಥವನ್ನು ವಿವರಿಸುವ ಲೇಖನಗಳೇ ಅರಬ್ಬೀ ಸಾಹಿತ್ಯ ಹಾಗೂ ಶೈಕ್ಷಣಿಕ ಸಂಪ್ರದಾಯದ ರೀತಿನೀತಿಗಳನ್ನು ರೂಪಿಸಿತು.ಬಾಗ್ದಾದ್ದಿನ ಆಬ್ಬಾಸಿದ್ ಮನೆತನದ ಆಳ್ವಿಕೆಯ ಕಾಲದ ಸಾಹಿತ್ಯದಲ್ಲಿ ಮಾನವೀಯತೆ ಹಾಗೂ ವಿಚಾರಪ್ರವೃತ್ತಿಯ ಅಂಶಗಳು ವ್ಯಕ್ತವಾದುವು. ಆ ಯುಗದ ಚಿಂತನಶಲಕ್ತಿ ಅರಬ್ಬೀ ಸಾಹಿತ್ಯ ಸಂಪ್ರದಾಯಕ್ಕೆಹೊಸ ದಾರಿ ಸೂಚಿಸಿತು.ಅಲ್ ಆಮೀದಿ (10ನೆಯ ಶತಮಾನ) ಬರೆದ ಭಾಷಾಶಾಸ್ತ್ರ ಗ್ರಂಥ ಹಾಗೂ ಪತ್ರಗಳಲ್ಲಿ ಕಾಣಸಿಗುವ ಅಬು ತಮಾಮ್ ಮತ್ತು ಅಲ್ ಬುಹ್ತುರಿ ಎಂಬ ಕವಿಗಳನ್ನು ಕುರಿತ ತೌಲನಿಕ ವಿವರಣೆ ಆ ಕಾಲದ ವಿಮರ್ಶನ ಸಾಹಿತ್ಯದ ರೂಪುರೆಷಗಳನ್ನು ಚಿತ್ರಿಸೌತ್ತದೆ. ಗ್ರೀಕ್ ಅಲ್ಂಕಾರಶಾಸ್ತ್ರದ (ರೆಟೋರಿಕ್) ಸೂತ್ರಗಳನ್ನು ಅರಬ್ಬೀ ಸಾಹಿತ್ಯಕ್ಕೆ ಅನ್ವಯಿಸುವಂತೆ ಪ್ರಯೋಗಿಸುವ ಸೂಚನೆ ಖುದಾಮಾ- ಇನ್ನು- ಚಾಫರ್ನ- (10ನೆಯ ಶತಮನ) ಗ್ರಂಥದಲ್ಲಿದೆ. ಒಂದೇ ದಿನ ಕಲೀಫನಾಗಿದ್ದು ಕೊಲೆಗೀಡಾದ ದುರ್ದೈವಿ, ಅಬ್ಬಾಸಿದ್ ಮನೆತನದ ರಾಜಕುಮಾರ ಇಬ್ನ್ ಆಲ್ ಮುತಾಜ್ ಬರೆದ ಕಿತಾಬ್ ಆಲ್ ಬಾದಿ ಅರಬ್ಬೀಭಾಷೆಯಲ್ಲಿನ ಪ್ರಥಮ ಕಾವ್ಯ ಮೀಮಾಂಸ ಗ್ರಂಥ; ಅರಬ್ಬೀ ವಿಮರ್ಶೆ ತನ್ನತನ ಮತ್ತು ಸ್ವಾತಂತ್ರ್ಯ ಪ್ರಿಯತೆಯನ್ನು ಪ್ರದರ್ಶಿಸುವ ಸ್ವಾರಸ್ಯವಾದ ಶಾಸ್ತ್ರಗ್ರಂಥ. ಅತು- ಹಿಲಲ್- ಆಲ್- ಅಸ್ಕಾರಿಯ ಗ್ರಂಥ ಕಿತಾಬ್ -ಆಲ್-ಸಿನಾ ಆ ತಯನ್ ನಲ್ಲಿ ಗದ್ಯ ಪದ್ಯ ರಚನೆಯನ್ನು ಕುರಿತ ಸೂತ್ರಗಳ ವಿವೇಚನೆ ಇದೆ. ಕುರಾನಿನ ಅದ್ಭುತ ಗದ್ಯ ಶೈಲಿಯನ್ನು ಕುರಿತು ಆತ ನೀಡಿದ ವಿವರಣೆ ಆನಂತರದ ಹಲವು ಲೇಖಕರನ್ನು ಆಕರ್ಷಿಸಿತು. ಆಲ್ ಬಾಖಿಲಾನಿ ಧರ್ಮಗ್ರಂಥದ ಶೈಲಿಯನ್ನು ಕಿರಿತು ಬರೆದ ಲೇಖನವೇ ಅರಬ್ಬೀ ಸೌಂದರ್ಯ ಶಾಸ್ತ್ರದ ಆಕರಗ್ರಂಥವೆನ್ನುತ್ತಾರೆ. 10-11ನೆಯ ಶತಮಾನದ ಸಪ್ರಸಿದ್ದ ಅರಬ್ಬೀ ಸಾಹಿತಿಗಳಲ್ಲಿ ಪ್ರಮುಖರಾದ ಆಲಲ್- ಮುತನ್ ಅಬ್ಬಿ ಮತ್ತು ಅಬುಲ್ -ಆಲಾ ಆಲ್ - ಮಅರ್ರಿ ಕಾವ್ಯ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟರು.

ಪ್ರ.ಶ.ಪೂ. 1080ರಲ್ಲಿ ಕಾಲವಾದ ಅಬು-ಮನ್ ಸುರ್-ಥಾ ಅಲಿಬಿ ತನ್ನ ಸಮಕಾಲೀನ ಕವಿಗಳ ಕೃತಿಗಳನೋಂಡ ಒಂದು ಕಾವ್ಯ ಸಂಕಲನವನ್ನು (ಯತಿ ಮತ್ ಅಲ್ ದಹ್) ಸಿದ್ಧಪಡಿಸಿದ. ಅದು ಆಂದಿನ ಅಭಿರುಚಿ, ವೈದುಷ್ಯಗಳ ಪ್ರತಿಬಿಂಬವೆನ್ನುತ್ತಾರೆ . ಇಬ್ನ ರಷೀಖ್ ನ ಅಲ್ ಉಮ್ ದಾದಲ್ಲಿ ಹಳತು ಹೊಸತುಗಳ ಫರ್ಷಣೆ ಹಾಗೂ ಹೊಸಕಾಲದ ಕವಿಗಳನ್ನು ಕುರಿತು ಹೇಚ್ಚು ಸ್ವಾತಂತ್ರ್ಯ ಪ್ರವೃತ್ತಿಯುಳ್ಳವರು. ಬೇರುಸತ್ತ ಹಳೆಯ ಸಂಪ್ರದಾಯವನ್ನು ಅವರು ಪೂರ್ಣವಾಗಿ ತ್ಯಜಿಸಿದರೆ ಹೆಚ್ಚಿನ ಮನ್ನಣೆಗಳಿಸಬಹುದು. ಕವಿಗಳು ವಾಸ್ತವಿಕತೆ ಹಾಗೂ ಪ್ರಕೃತಿಯಿಂದ ಸ್ಫೂರ್ತಿ ಪಡೆಯಬೇಕು. ಹಳೆಯ ರಚನಾತಂತ್ರ, ಪ್ರಕಾಕರಗಳನ್ನು ಕುರುಡು ಕುರುಡಾಗಿ ಅನುಕರಿಸುವುದನ್ನು ನಿರಾಕರಿಸಬೇಕು ಇತ್ಯಾದಿ. ಈ ಮಾತುಗಳು ಸಾರ್ವತ್ರಿಕವಾದ ಕೆಲವು ವಿಮರ್ಶನ ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತವೆ; ಅರಬ್ಬೀ ವಿಮರ್ಶೆಯ ಸ್ವರೂಪದ ಒಂದು ಮುಖವನ್ನು ಚಿತ್ರಿಸುತ್ತವೆ. ಪ್ರಕೃತಿ ವಿಜ್ಣ್ಣಾನವನ್ನು ಆಭ್ಯಸಿಸಿ ಆಳವಾದ ಅರಿವನ್ನು ಪಡೆದಿದ್ದ ಹಲವರು ಹೊಸ ಸಾಹಿತ್ಯ ಸೂತ್ರಗಳನ್ನು ಕುರಿತ ತಮ್ಮ ಕಳಕಳಿಯನ್ನು ಪ್ರದರ್ಶಿಸಿದರು.

16ನೆಯ ಶತಮಾನದ ಅನಂತರ ಖಿಲವಾಗುತ್ತ ಬಂದ ಅರಬ್ಬೀ ಪ್ರಭಾವ ಅವರ ಸಾಹಿತ್ಯದ ಇತಿಹಾಸವನ್ನು ಮಸುಕುಗೊಳಿಸಿತು. ಹೊಸ ಹುಟ್ಟಿನ (ರಿನೇಸಾನ್ಸ್) ಕಾಲದಲ್ಲಿ ಯುರೋಪಿನ ಮೂಲೆ ಮೂಲೆಯಲ್ಲಿ ಹೊಸ ಚೈತನ್ಯ,ಉತ್ಸಾಹ ತುಳುಕಿ ಅಲ್ಲಿನ ವಿವಿಧ ದೇಶೀಯ ಸಾಹಿತ್ಯಗಳಲ್ಲಿ ಹೊಸ ತಳಿರು ಚಿಗುರುತ್ತಿದ್ದಾಗ ಆರಬ್ಬರ ಪ್ರಭಾವ ಕ್ಷೀಣವಾಗಲು ಐತಿಹಾಸಿಕ ಘಡನೆಗಳೂ ಸ್ವಲ್ಪಮಟ್ಟಿಗೆ ಕಾರಣ. ವ್ಯಾಪಾರಕ್ಕಾಗಿ ಹೊಸ ಕಡಲುಮಾರ್ಗಗಳನ್ನು ಕಂಡುಹಿಡಿದಾಗ ಮೆಡಿಟೇರಿಯನ್ ಸುತ್ತಲಿನ ಅರಬ್ಬೀ ಪ್ರದೇಶಗಳು ಹಿಂದುಳಿದವು. ಆದರೂ ಅರಬ್ಬೀ ಸಾಹಿತಿಗಳು ಮಂದಗಾಮಿಗಳಾದರೂ ಸತ್ತ್ವರಹಿತವಾಗಿರಲಿಲ್ಲ. ಇದಕ್ಕೆ ಆ ಕಾಲದ ಸ್ಪೇನಿನ ಮುಸ್ಲಿಮ್ ಲೇಖಕರ ಉಜ್ಜಲ ಇತಿಹಸವೇ ಸಾಕ್ಷಿ. ಆದರೆ ವಿಮರ್ಶೆಯ ದೃಷ್ಟಿಯಿಂದ ಗಮನಾರ್ಹ ಅಂಶವೆಂದರೆ ಆ ಕಾಲದಲ್ಲಿ ರಚಿತವಾದ ವೈಜ್ಣ್ಣಾನಿಕ ಗ್ರಂಥ; ಗ್ರಂಥದಲ್ಲಿ ಸೇರಿಸಲಾದ ಆರಬ್ಬೀ ಗ್ರಂಥಗಳ ಪ್ರಮಾಣ ಗ್ರಂಥಸೂಚಿ (ಬಿಬ್ಲಿಯೊಗ್ರಫಿ).