ಪುಟ:Mysore-University-Encyclopaedia-Vol-1-Part-1.pdf/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಂತರಗ್ನಿಶಿಲೆಗಳ ವಿಶೇಷಕ್ಕೆ ವಿನ್ಯಾಸಕ್ಕೆ ಕಾರಣ ಅವು ಆಳದಲ್ಲಿ ನಿಧಾನವಾಗಿ ಆರಿ ಸ್ಫಟಿಕೀಕರಿಸುವುದಾಗಿದೆ. ಜೊತೆಗೆ ಅವುಗಳ ಅಂತಸ್ಸರಣದ ರೂಪ ಗಾತ್ರ ಮತ್ತು ಸ್ಥ್ಹಳೀಯ ಉಷ್ಣಾಂಶತೆಯೂ ಮುಖ್ಯ ಕಾರಣಗಳಾಗಿವೆ.

ಅಂತರಗ್ನಿಶಿಲಾಕಾರ್ಯಗಳ ರೂಪ ಮತ್ತು ವಿಸ್ತಾರ ವ್ಯಾಪಕತೆಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ.ಅತ್ಯಂತ ವಿಶಾಲವಾದುವು ಸಾವಿರಾರು ಕಿಮೀಗಳವರೆಗೆ ಹರಡಿರುತ್ತವೆ.ಅತಿ ಚಿಕ್ಕವು ಕೆಲವು ಸೆಂ.ಮೀ ಮಾತ್ರವಿತರುತ್ತವೆ.ಅಂತರಗ್ನಿಶಿಲಾಪ್ರಭೇದಗಳಲ್ಲಿ ಮುಖ್ಯವಾದವು ಸಿಲ್,ಲ್ಯಾಕೊಲಿತ್,ಡಿಕು,ಬ್ಯಾಥೊಲಿತ್,ಸ್ಟಾಕ್ಸ್ ಮತ್ತು ಪ್ಲುಟಾನುಗಳು. ಅವುಗಳ ಸ್ವಭಾವಗಳನ್ನು ಸ್ಥೂಲವಾಗಿ ಇಲ್ಲಿ ತಿಳಿಸಿದೆ: ಸಿಲ್ಗಳು ಸ್ಥಳೀಯ ಶಿಲೆಗಳಹರವನ್ನನುಸರಿಸಿ ಅವುಗಳ ಪದರಗಳ ಮಧ್ಯದಲ್ಲಿ ಹರಿದು ಹರಡಿರುವ ಶಿಲಾಪಾಕದ ಪದರಗಳಾಗಿವೆ.ದೊಡ್ಡ ದೊಡ್ಡ ಸಿಲ್ಗಳ ಮಂದ ನೂರಾರು ಮೀಟರುಗಳಷ್ಟುಹರವು ಅನೇಕ ಸಾವಿರ ಕಿ.ಮೀ. ಸಾಮಾನ್ಯವಾಗಿ ಅವುಗಳ ರಾಸಾಯನಿಕ ಸಂಯೋಜನೆಯಲ್ಲಿ ಸಿಲಿಕಾಂಶ ಅಲ್ಪವಾಗಿರುತ್ತದೆ. ಫೇಕೊಲಿತ್ಗಳು ಮಡಪುಗಳ ತಳ ಮತ್ತು ಶಿಕರಗಳಲ್ಲಿ ರೂಪುಗೊಂಡ ಮಸೂರಾಕಾರದ ಮತ್ತು ಬಾಗಿದ ಅಂತಸ್ಸರಣಗಳು. ಲೋಪೊಲಿತ್ಗಳು ಪದರವಾಗಿರುವ ಅಥ್ಹವಾ ಬಾನೆಯಂತಿರುವ ಅಂತಸ್ಸರಣಗಳು ಕುಸಿದು ಆದವು. ಅತ್ಯನ್ತ ದೊಡ್ಡದಾಗಿರುವ ಕೆಲವು ಅಂತಸ್ಸರಣಗಳು ಶಿಲೆಗಳಿಂದಾಗಿರುತವೆ.ಒಡ್ಡುಗಳು ಇಕ್ಕಟ್ಟಾಗಿಯೂ ಸಮಾನಾಂತರವಾದ ಪಕ್ಕಗಳಿರುವ ರಚನೆಗಳು.ಇವು ನೇರವಾಗಿ ಅಥವಾ ಕಡಿದಾಗಿ ಇಳಿವೋರೆಯಾಗಿ ಸ್ಥಳೀಯ ಶಿಲಾಪದರಗಳನ್ನೂ ಇತರ ರಚನೆಗಳುನ್ನೂ ಛೇದಿಸಿರುತ್ತವೆ.ಒಂದು ಕೇಂದ್ರದಿಂದ ಹೊರಹರಡಿದ್ದರೆ ಹೊರೆಗಾಮಿ ಒಡ್ಡುಗಳೆನ್ದು.ಚಕ್ರಾಕಾರವಾಗಿದ್ದರೆ ಒಡ್ಡುಗಳ ಚಕ್ರವೆಂದು ಹೆಸರು. ಬ್ಯಾಥೊಲಿತ್ಗಳು ಕಡಿದಾಗಿ ಇಳಿಜಾರಾಗಿರುವ ಗೋಡೆಗಳುಳ್ಳ ಮತ್ತು ಸಾಮಾನ್ಯವಾಗಿ ತಳ ಕಾಣದಂತಿರುವ ಬೃಹದಾಕಾರದ ಅಂತಸ್ಸರಣಗಳು.ಇವುಗಳಲ್ಲಿ ಅಧಿಕ ಸಿಲಿಕಾಂಶ ಶಿಲೆಗಳಾದ ಗ್ರಾನೇಟ್,ಗ್ರಾನೊಡಯೊರೆಟ್ ಮತ್ತು ಅವುಗಳಿಗೆ ಸಂಬಂಧ ಪಟ್ಟ ಶಿಲೆಗಳಿರುತ್ತದೆ. ಇವುಗಳಲ್ಲಿ ದೊಡ್ಡವು ಸಾವಿರಾರು ಚ.ಕಿಮೀ ಹರಡಿರುತ್ತವೆ. ಕೆಲವು ಬ್ಯಾಥೊಲಿತ್ಗಳನ್ನು ಹೋಲುವ,ಆದರೆ ಗಾತ್ರದಲ್ಲಿ ಚಿಕ್ಕದಾಗಿರುವ ಈ ರೀತೀಯ ಶಿಲಾರೂಪಕ್ಕೆ ಸ್ಟಾಕ್ಸ್ ಎಂದು ಹೆಸರು.ಪ್ಲುಟಾನುಗಳು ಮೇಲೆ ತಿಳಿಸಿದ ಯಾವುದನ್ನೂ ಹೋಲದಿರುವ ಅಂತಸರಣಗಳು. ವಿನ್ಯಾಸ: ಅಂತರಗ್ನಿಶಿಲೆಗಳ ವಿನ್ಯಾಸದ ವಿಶೇಷ ಲಕ್ಶಣವೆಂದರೆ ಪೂರ್ಣ ಸ್ಫಟಿಕತ್ವ ಮತ್ತು ಸಮಕಣವಿನ್ಯಾಸ. ಇದಕ್ಕೆ ಗ್ರಾನಿಟಿಕ್ ವಿನ್ಯಾಸ ಎಂದು ಹೆದಸರು. ಉದಾ:ಗ್ರಾನೆಟ್ ಶಿಲೆ, ಎವೆರಡು ರಚನೆಗಳೂ ಶಿಲಾಪಾಕ ನಿಧಾನವಾಗಿ ಸ್ಫಟೀಕೀಕರಿಸುವುದರಿನ್ದ ಉಂಟಾದವು. ಎದರಿಂದ ಒಂದಕ್ಕೊಂದು ಹಣೆದು ಕೊಂಡಿರುವ ಮತ್ತು ಒಂದಕ್ಕೊಂದು ಮಿತಿ ಕಲ್ಪಿಸುವ ವಿನ್ಯಾಸ ಬೆಳೆದಿರುತ್ತದೆ.ಈ ಗುಮ್ಪಿನ ಅಲ್ಪಸಿಕಾಂಶ ಶಿಲೆಗಳಲ್ಲಿ ಖನಿಜಣಗಳು ನಿರಾಜಕಾರ ವುಳ್ಳವಾಗಿಯೂ ಅಧಿಕ ಸಿಲಿಕಾಂಶ ಶಿಲೆಗಳಲ್ಲಿ ಅಪೂರ್ಣಾಕಾರವುಳ್ಳವಾಗಿಯೂ ಇವೆ.

ರಾಸಾಯನಿಕ ಸಂಯೋಜನೆ: ಅಂತರಗ್ನಿಶಿಲೆಗಳಲ್ಲಿ ಇತರ ಅಗ್ನಿಶಿಲೆಗಳಲ್ಲಿರುವಂತೆಯೇ ಶಿಲಿಕಾಂಶವು ಶೇ.೩೫ ರಿಣಂದ ಶೇ.೭೫ ವರೆಗಿರುತ್ತದೆ.ಶಿಲಿಕಾಂಶದ ಅಧಾರದ ಮೇಲೆ ಈ ವರ್ಗದ ಶಿಲೆಗಳನ್ನು ಅಧಿಕಶಿಲಿಕಾಂಶ ಶಿಲೆಗಳು, ಸಮ ಸಿಲಿಕಾಂಶ ಶಿಲೆಗಳು ಅಥವಾ ಮಧ್ಯವರ್ತಿಶಿಲೆಗಳು ಮತ್ತು ಅತ್ಯಲ್ಪಶಿಲಿಕಾಂಶ ಶಿಲೆಗಳು ಎಂದು ನಾಲ್ಕು ವಿಧಗಳಾಗಿ ವಿಭಾಗಿಸಲಾಗಿದೆ. ವರ್ಗೀಕರಣ: ಶಿಲಿಕಾಂಶ ಕ್ರಮೇಣ ಹೆಚ್ಚುವ ಕ್ರಮದಲ್ಲಿ ಕೆಳಗೆ ಕಂಡಂತೆ ವರ್ಗೀಕರಿಸಲಾಗಿದೆ: ೧. ಗ್ರಾನೆಟ್ ಡಯೋರೈಟ್ ಸಮೂಹ: ಕ್ವಾರ್ಟ್ಜ್, ಪೊಟ್ಯಾಷ್ ಫೆಲ್ಡ್ಸ್ಸ್ಟಾರ್,ಸೋಡಿಕ್ಪ್ಲೇಜಿಯೋಕ್ಲೇಸ್ಗಳೊಂದಿಗೆ ಬಯೋಟೈಟ್ ಮತ್ತು ಅಥವಾ ಹಾರನ್ಬ್ಲ್ಂಡ್ ಖನಿಜಗಳು ವಿವಿಧ ಪ್ರಮಾಣದಲ್ಲಿರುವ ಗ್ರಾನೈಟ್, ಸೋಡಗ್ರಾನೈಟ್ ಅಡಮೆಲೈಟ್.

೨.ಸಯನೈಟ್ ಸಮೂಹ:ಫೆಲ್ಡ್ಸ್ಸ್ಟಾರ್ಗಳ ಮತ್ತು ಇತರ ಅಧಿಕ ಸಿಲಿಕಾಂಶ ಖನಿಜಗಳ ಜೊತೆಗೆ ಸಿಲಿಕಾಂಶ ಕಡಿಮೆಯಿರುವ ನೆಫೆಲೀನ್, ಲ್ಯೂಸೈಟ್, ಸೋಡಲೈಟ್ ಖನಿಜಗಳು ಸೋಡ ಪ್ರಮಾಣ ಅಧಿಕವಾಗಿರುವ ಆಂಫಿಬೋಲ್ ಮತ್ತು ಪೈರಾಕ್ಸೀನ್ಗಳೂ ಇರುವ ಸಯನೈಟ್ ಶಿಲೆಗಳು ಈ ಗುಂಪಿಗೆ ಸೇರಿದುವು.

೩.ಡಯೊರೈಟ್ ಸಮೂಹ: ಬೆಣಚು, ಆಂಡಿಸೀನ್ ಪ್ಲೇಚಿಯೋಕ್ಲೇಸ್, ಬಯೋಟೈಟ್, ಹಾರನ್ಬ್ಲ್ಂಡ್ ಮುತಾಂದ ಖನಿಜಗಳು ಸಾಮಾನ್ಯವಾಗಿರುವ ಕ್ವಾರ್ಟ್ಸ್ಡಯೋರೈಟ್ ಮತ್ತು ಆಗೈಟ್ಡಯೋರೈಟ್ ಈ ಗುಂಪಿಗೆ ಸೇರಿದವು.

೪.ಆಲ್ಕಲಿ ಗ್ಯಾಬ್ರೊ ಸಮೂಹ: ಆಲ್ಕಲಿ ಖನಿಜಗಳಿರುವ ಟೆಶ್ಚನೈಟ್, ತೆರಲೈಟ್, ಎಸ್ಸೆಕ್ಸೈಟ್,ಪಿಕ್ರೈಟ್, ಶಾಂಕಿನೈಟ್ ಈ ಗುಂಪಿಗೆ ಸೇರಿದವು.

೫.ಗ್ಯಾಬ್ರೊ ಸಮೂಹ: ಲ್ಯಾಬ್ರೊಡಾರೈಟ್,ಅಗೈಟ್ ಕೆಲವು ವಿಧಗಳಲ್ಲಿ ಆಲಿವೀನ್ ಖನಿಜಗಳು ಸಾಮಾನ್ಯವಾಗಿ ಉಳ್ಳ ಆಲಿವೀನ್ಗ್ಯಾಬೊ ಅನಾರ್ಥೊಸೈಟ್,ಟ್ರಾಕ್ಟೊಲೈಟ್ ಮುಂತಾದ ಶಿಲೆಗಳು ಈ ಗುಂಪಿಗೆ ಸೇರಿದವು.

೬.ಪೆರಿಡೊಟೈಟ್ ಸಮೂಹ: ಪೈರಾಕ್ಸೀನ್, ಆಲಿವೀನ್ ಮತ್ತು ಅಧಿಕ ಕ್ಯಾಲ್ಸಿಯದೆ ಇರುವ ಪ್ಲೇಜಿಯೊಕೇಸ್ ಮುಂತಾದ ಖನಿಹಜಗಳನ್ನು ಸಾಮಾನ್ಯವಾಗಿ ಉಳ್ಳ ಪೈರಾಕ್ಸಿನೈಟ್, ಪೆರಿಡೊಟೈಟ್ ಮತ್ತು ಡನೈಟ್ ಮುಂತಾದ ಶಿಲೆಗಳು ಈ ಗುಂಪಿಗೆ ಸೇರಿದವು.

ಅಂರತ್ರಯ: ಸಾಹಿತ್ಯಕ್ಕೆ ಅನ್ವಯಿಸುವ ಗಂಭಿರವೂ ಅರ್ಥಪೂರ್ಣವು ವೈವಿಧ್ಯಮಯವೂ ವಿಶಾಲವೂ ಆದ ಈ ತತ್ವವನ್ನು ಮೂರು ಹಿನ್ನಲೆಗಳು ಎನ್ನಬಹುದು; ಮೂರು ವ್ಯಾಪ್ತಿಗಳು ಎಂಥರೂ ಸಲ್ಲುತದೆ. ೧೯ನೆಯ ಶತಮಾನದಲ್ಲಿ ನಾಟಕ ಅದರೊಂದಿಗೆ ಸ್ಪರ್ಧೆ ಹೂಡಿ. ಸಲ್ಲಮಟ್ಟಿಗೆ ಗಮನೀಯವಾಯಿತು. ಆದರೂ ಕಾದಂಬರಿಯ ಅಧಿಕಾರವಾಗಲಿ ಪ್ರಭಾವವಾಗಲಿ ಶಕ್ತಿಯಾಗಲಿ ಪ್ರಗತಿಯಾಗಲಿ ಕೊಂಚವೂ ಕುಗ್ಗಲಿಲ್ಲ. ಆದರೆ ಕಾದಂಬರಿ ಮೇಳಣ ವಿಮರ್ಶೆ ಅದಕ್ಕೆ ಯುಕ್ತವಾಗಶ್ಟು ಬೆಳೆದುಬಂದಿಲ್ಲ; ಆಗಾಗ ಅಲ್ಲಲ್ಲಿ ಅದೊ ಇದೊ ಸೂತ್ರವೊ ಸಿಧ್ಹಾಂತವೊ ಎದ್ದುಬಂದು ಕಾದಂಬರಿಯ ಸಂಕೀರ್ಣ ಕಲೆಗಾರಿಕೆಯ ಮೇಲೆ ಬೆಳಕನ್ನು ಚೆಲ್ಲುತ್ತದೆ.ಅಷ್ಟಿಷ್ಟು ಕಥೆಯನ್ನು ನಡೆಸುವ ಪಾತ್ರಗಳಿಗೆ ಸನ್ನಿವೇಶ ಸಾಮಾನು ಸರಂಚಾಮು ಮೂಂತಾದ ಭತ ಪದಾರ್ಥಗಳು ಬೇಕೆಬೇಕು. ಅವುಗಳನ್ನು ನಿಯಂತ್ರಿಸುವಾಗ ಕಾದಂಬರಿಕಾರ ಒಂದು ಪದಾರ್ಥದಿಂದ ಮೂರು ಸೂಚನೆಗಳನ್ನು ಹಿಂಡಿಕೊಳ್ಳಬಹುದು. ಹಳ್ಳಿಯ ದೇವಾಲಯವನ್ನು ತೆಗೆದುಕೊಳ್ಳೊಣ; ಅದೂ ಅದರ ಸರಹದ್ದೂ ಕಥಾನಾಯಕ ನಾಯಕಿಯರ ಕಾರ್ಯಕ್ಶೆತ್ರವೆನ್ನೋಣ. ಅದು ಮೊದಲನೆಯ ಹಿನ್ನಲೆ, ಎರಡನೆಯ ಹಿನ್ನಲೆ, ನಾಡಿನ ಎತರ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ದೇವಾಲಯಗಳ ನೆನಪು. ಇನ್ನೂ ಮುಂದೆ ಹೊಗಿ ಲೇಖಕ ಜಗತ್ತಿನ ಎತರ ಭುಭಾಗಗಳ ದೇವಸ್ಥಾನಗಳೊಡನೆ ಸಾದ್ರುಶ್ಯ ವೈದ್ರುಶ್ಯಗಳನ್ನು ಸೂಚಿಸಬಹುದು. ಎಂದರೆ ಎಂಥ ಪುಷ್ಪಿಯನ್ನು ಒಚಿತ್ಯ ಭಂಗವಾದರೆ ಬರಹಕ್ಕೆ ತಂದು ಕೊಡಬೇಕಾದರೆ ಉತ್ಕ್ರುಷ್ಟಪ್ರತಿಭೆ ಲೇಖಕನ ಆಂತರ್ಯದಲ್ಲಿರಬೇಕು. ಘಟನಾವಳಿಗೂ ಅದೇ ಬಗೆಯ ಹೆಚೂವರಿಕೆ ಸಾಧ್ಯ ತಂದೆಗೆ ಎದುರುಬಿದ್ದು, ಬಹಿಷ್ಕ್ರುತನಾಗಿ, ಮಗ ಮನೆಯಿಂದಾಚೆ ಹೋಗುತ್ತನೆ ಎನೋಣ. ಕಾರ್ಯದ ಪ್ರಥಮ ಆಕಾರ ಅದು.ದ್ವಿತೀಯ ಆಕಾರವಾವುದೆಂದರೆ, ದೆಶದ ಇತರ ಕಡೆಗಳಲೂ ಕಾಣಬರುವ ಪಿತ-ಪುತ್ರ ವಿವಾದದ ಪರಿಚಯ, ಧರಿತ್ರಿಯನ್ನು ಆಕ್ರಮಿಸಿರುವ ಮಾನವರಲ್ಲಿ ತೋರಿಬರುವ