ಪುಟ:Mysore-University-Encyclopaedia-Vol-1-Part-1.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತರೀಕ್ಷ ಸಂಶೋಧನೆ

೧. ವೈಜ್ಞಾನಿಕ ಉಪಗ್ರಹಗಳು (ಎ) ರಷ್ಯಹ ಉಪಗ್ರಹಗಳು. ೧. ಸ್ಪುಟ್ನಿಕ್-ಗಳು: ಅಂತರಿಕ್ಷಯುಗ ಪ್ರಾರಂಭವಾದುದು ಇವುಗಳಿಂದಲೇ. ೧೯೫೭ ಅಕ್ಟೋಬರ್ ೪ರಂದು ಉಡಾಯಿಸಿದ ಮೊದಲನೆಯ ಸ್ಪುಟ್ನಿಕ್-ನಿಂದ ಅಯೋನಾವರಣದ ಎಲೆಕ್ಟ್ರಾನ್ ಸಾಂದ್ರತೆ, ಉಪಗ್ರಹದೊಳಗಿನ ಉಪಕರಣಗಳು ತೃಪ್ತಿಕರವಾಗಿ ಕೆಲಸ ಮಾಡಲು ಇರಬೇಕಾದ ಅನುಕೂಲತೆಗಳು, ಉಷ್ಣನಿಯಂತ್ರಣ, ಉಪಕರಣಗಳ ದಕ್ಷತೆ ಮುಂತಾದವುಗಳ ಅಧ್ಯಯನವನ್ನು ನಡೆಸಿದರು. ಇದರ ಜೊತೆಗೆ ವಾತಾವರಣದ ಮೇಲ್ಭಾಗದಲ್ಲಿ ಹಾದುಹೋಗುವ ಹಾಗೆ ಅದರ ಪಥವನ್ನು ನಿರ್ದೇಶಿಸಿದ್ದರು. ಆ ಮೂಲಕ ನಾತಾವರಣಸಾಂದ್ರತೆಯನ್ನು ಗಣಿಸಲಾಯಿತು. ೧೯೫೭ರ ನವೆಂಬರ್ ನಲ್ಲಿ ಹಾರಿಸಿದ ಎರಡನೆಯ ಸ್ಪುಟ್ನಿಕ್, ಲೈಕಾ ಎಂಬ ನಾಯಿಯನ್ನು ಹೊತ್ತಿತು. ಇದರ ನೆರವಿನಿಂದ ಅಂತರಿಕ್ಷ ಪರಿಸರದಲ್ಲಿ ಜೀವವೈಜ್ಞಾನಿಕ ಪರಿಣಾಮಗಳನ್ನು ಅಧ್ಯಯನ ಮಾಡಿದರು. ೧೯೫೮ ಮೇ ತಿಂಗಳಿನಲ್ಲಿ ಉಡಾಯಿಸಿದ ಮೂರನೆಯ ಸ್ಪುಟ್ನಿಕ್, ವಾತಾವರಣದ ಸಾಂದ್ರತೆ, ಒತ್ತಡ, ಅಯೋನಾವರಣದಲ್ಲಿರುವ ಧನವಿದ್ಯುತ್ಕಣ ಸಾಂದ್ರತೆ, ಭೂ ಕಾಂಕ್ಷೇತ್ರ, ವಿಶ್ವಕಿರಣಗಳು, ಸೂಕ್ಷ್ಮ ಉಲ್ಕೆಗಳು, ಮುಂತಾದವುಗಳ ಅಧ್ಯಯನ ನಡೆಸಿತು. ಇವಲ್ಲದೆ ರಷ್ಯ ಹಾರಿಸಿದ ಲೂನ-೧ ಎಂಬ ಉಪಗ್ರಹ ಭೂಮಿಯ ಆಕರ್ಷಣೆಯಿಂದ ಪಾರಾಗಿ, ಚಂದ್ರಮಂಡಲವನ್ನು ದಾಟಿ ಬಾಹ್ಯಾಕಾಶದಲ್ಲಿ ಸೂರ್ಯನಿಗೆ ಒಂದು ಕೃತಕಗ್ರಹವಾಯಿತು. ಇದಾದ ಅನಂತರ ೧೯೫೦ ಜನವರಿ, ಮಾರ್ಚ್ ಮತ್ತು ಅಕ್ಟೋಬರ್ ಗಳಲ್ಲಿ ರಷ್ಯ ಕ್ರಮವಾಗಿ ಲುನಿಕ್-೨ ಮತ್ತು ಲುನಿಕ್-೩ ಎಂಬ ಉಪಗ್ರಹಗಳನ್ನು ಹಾರಿಬಿಟ್ಟಿತು. ಲುನಿಕ್-೩ ಚಂದ್ರನನ್ನು ಬಳಸಿ ಪ್ರಪ್ರಥಮ ಬಾರಿಗೆ ಅದರ ಅಗೋಚರ ಪಾರ್ಶ್ವದ ಛಾಯಾಚಿತ್ರವನ್ನು ಭೂಮಿಗೆ ರವಾನಿಸಿತು. ಅಂತರಿಕ್ಷ ಸಂಶೋದನೆಯಲ್ಲಿ ಇದೊಂದು ಮಹತ್ವದ ಹೆಜ್ಜೆ. ೧೯೬೦ ಮೇ ೧೫-೧೯೬೧ ಮಾರ್ಚ್ ತನಕ ರಷ್ಯ ಬಹಳ ಭಾರವಾದ ಉಪಗ್ರಹಗಳನ್ನು ಉಡಾಯಿಸಿತು. ಇವು ವಿಶ್ವಕಿರಣ, ಕ್ಷ ಕಿರಣ, ಅತಿನೇರಿಳೆಕಿರಣ ಮುಂತಾದವುಗಳಾ ಅಧ್ಯಯನದ ಜೊತೆಗೆ ಮುಂದೆ ಮಾನವನನ್ನೊಳಗೊಂಡ ಉಪಗ್ರಹಗಳಿಗಿರಬೇಕಾದ ಗುಣವಿಶೇಷಗಳನ್ನೂ ಅಧ್ಯಯನ ಮಾಡಿದವು. ೨. ಕಾಸ್ಮಾಸ್ ಉಪಗ್ರಹಗಳು: ಮೊದಲ ಕಾಸ್ಮಾಸ್ ನ್ನು ೧೯೬೨ ಮಾರ್ಚ್ ೧೬ರಂದು ರಷ್ಯ ಹಾರಿಸಿತು.ಅಲ್ಲಿಂದೀಚೆಗೆ ಸು.೨೦೦ಕ್ಕೂ ಹೆಚ್ಚು ಕಾಸ್ಮಾಸ್ ಹೆಸರಿನ ಉಪಗ್ರಹಗಳನ್ನು ಹಾರಿಸಲಾಗಿದೆ. ಇವು ವಿವಿಧ ಆಕಾರಗಳಲ್ಲಿದ್ದು ವಿವಿಧ ರೀತಿಯ ಕಕ್ಷಗಳಲ್ಲಿ ಭೂಮಿಯನ್ನು ಸುತ್ತುತ್ತಿವೆ. ಭೂಮ್ಮಿಯನ್ನು ಆವರಿಸುವ ವಿಕರಣ ಪದಗಳು ಭೂಕಾಂತಕ್ಷೇತ್ರ ಮೊದಲಾದವುಗಳ ಅಧ್ಯಯನವನ್ನು ಈ ಉಪಗ್ರಹಗಳ ನೆರವಿನಿಂದ ಮಾಡಲಾಗಿದೆ. ಕೆಲವು ಕಾಸ್ಮಾಸ್-ಗಳ ಸಹಾಯದಿಂದ ಅಂತರಿಕ್ಷನೌಕೆಗಳ ರಚನೆ, ಅವುಗಳ ದಿಙ್ನನಿಯಂತರಣ, ಅವನ್ನು ಭೂಮಿಗೆ ಮರಳ್ಸ್ವ ವಿಧಾನಗಳು, ಅವುಗಳನ್ನು ಅಳವಡಿಸುವ ಜೀವಸೌಕರ್ಯಗಳು ಮುಂತಾದವುಗಳ ಅಧ್ಯಯನ ನಡೆಸಲಾಯಿತು. ೧೯೬೭ ಅಕ್ಟೋಬರ್ ೩೦ರಂದು ಉಡಾಯಿಸಿದ ಆದೆಶಗಳ ಅನುಸಾರ ಕಾಸ್ಮಾಸ್-೧೮೮ ಅದರ ಮೂರು ದಿನಗಳ ಮೊದಲೇ ಹಾರಿಸಿದ್ದ ಕಾಸ್ಮಾಸ್-೧೮೬ನ್ನು, ಭೂಮಿಯಿಂದ ಬಂದ ಆದೇಶಗಳಿಗನುಗುಣವಾಗಿ ಸೇರಿಕೊಂಡಿತು. ಇವೆರಡೂ ಒಟ್ಟಿಗೆ ೩ ೧/೨ ಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ಅನಂತರ ಬೇರ್ಪಟ್ಟವು. ಪುನಃ ೧೯೬೮ ಎಪ್ರಿಲ್ ೧೫ರಂದು ಕಾಸ್ಮಾಸ್-೨೧೨ ಮತ್ತು ಕಾಸ್ಮಾಸ್-೨೧೩ ಉಪರಹಗಳು ಒಂದೊನ್ನೊಂದು ಸೇರಿದವು. ಅವು ಒಟ್ಟಿಗೆ ೩ ಗಂಟೆ ೩೦ ಮಿನಿಟುಗಳು ಹಾರಾಡಿದವು. ಅನಂತರ ಬೇರೆ ಬೇರೆಯಾಗಿ ಬೇರೆ ಬೇರೆ ಪಥಗಳಲ್ಲಿ ಸಂಚರಿಸಿದವು. ೫ ದಿನಗಳಾ ಅನಂತರ ಅವೆರೆಡೂ ಸುರಕ್ಷಿತವಾಗಿ ಭೂಮಿಗೆ ಮರಳಿದವು. ೩. ಎಲೆಕ್ಟ್ರಾನ್ ಉಪಗ್ರಹಗಳು: ಹ್ಬೂಮಿಯನ್ನಾವರಿಸುವ ವ್ಯಾನ್ ಅಲೆನ್ ವಿಕರಣಪದಗಳ ರಚನೆ, ರೂಪು ರೀತಿ ಮತ್ತು ಅವುಗಳಲ್ಲಿರುವ ಕಣಗಳನ್ನು ಅಧ್ಯಯನ ಮಾಡಲು ಈ ಉಪಗ್ರಹಗಳನ್ನು ಹಾರಿಸಿದರು. ವಿದ್ಯುದ್ರೋಹಿತ (ಎಲೆಕ್ತ್ರೋ ಮ್ಯಾಗ್ನಟಿಕ್ ಸ್ಪೆಕ್ಟ್ರಮ್) ಬಹಳ ವಿಶಾಲವಾಗಿರುವುದರಿಂದ ಅಂತರಿಕ್ಷದ ವಿವಿಧ ಭಾಗಗಳಲ್ಲಿ ಒಂದೇ ಸಾರಿ ಅಳತೆಗಳನ್ನು ತೆಗೆಯುವುದು ಸುಲಭ. ಎದಕ್ಕಾಗಿ ಒಂದೇ ರಾಕೆಟ್ಟಿನಿಂದ ಎರಡು ಉಪಗ್ರಹಗಳನ್ನು (ಎಲೆಕ್ಟ್ರಾನ್-೧ ಮತ್ತು ಎಲೆಕ್ಟ್ರಾನ್-೨) ಬೇರೆ ಬೇರೆ ಪಥಗಳಲ್ಲಿ ೧೯೬೪ ಜನವರಿಯಲ್ಲಿ ಉಡಾಯಿಸಿದರು. ರೋಹಿತ್ಯಾಧ್ಯಯನದ ಜೊತೆಗೆ ಭೂಕಾಂತಕ್ಷೇತ್ರ, ವಿಶ್ವಕಿರಣಗಳು, ಸೂರ್ಯನಿಂದ ಬರುವ ಕಡಿಮೆ ತರಂಗಮಾನ ರೇಡಿಯೋ ತರಂಗಗಳು, ವಿಶ್ವರೇಡ್ಯೋ ಪ್ರಸರಣ. ಸೂಕ್ಷ್ಮ ಉಲ್ಕೆಗಳು-ಮುಂತಾದವುಗಳ ಮೇಲೆ ಕೂಡ ಇವು ಅಧ್ಯಯನ ನಡೆಸಿದವು ಎಲೆಕ್ಟ್ರಾನ್-೩ ಮತ್ತು ಎಲೆಕ್ಟ್ರಾನ್-೪ ಉಪಗ್ರಹಗಳು ಮುಂದುವರಿಸಿದುವು. ೪.ಪ್ರೋಟಾನ್ ಉಪಗ್ರಹಗಳು: ಮೂಲ ವಿಶ್ವಕಿರಣಗಳಲ್ಲಿ ಪ್ರಬಲ ಶಕ್ತಿಯ ವಿದ್ಯುತ್ಕರಣಗಳಿರುತ್ತವೆ. ಇವುಗಳ ಶಕ್ತಿ ೧೦-೧೯ ರಿಂದ ೧೦-೨೦ ರಷ್ಟು ಎಲೆಕ್ಟ್ರಾನ್ ವೋಲ್ಟುಗಳು. ಈ ಕಣಗಳ ಅಧ್ಯಯನವನ್ನು ಮಾಡಲು ದೊಡ್ದ ಪ್ರೋಟಾನ್ ಉಪಗ್ರಹಗಳನ್ನು ಹಾರಿಸಿದರು. (ಬಿ)ಅಮೇರಿಕಾದ ಉಪಗ್ರಹಗಳು ೧.ಎಕ್ಸ್ಪ್ಲೋರರ್ ಉಪಗ್ರಹಗಳು: ಅಮೆರಿಕ ತನ್ನ ಮೊದಲ ಉಪಗ್ರಹವಾದ ಎಕ್ಸ್ಪ್ಲೋರರ್-೧ನ್ನು ೧೯೫೮ ಜನವರಿ ೩೧ರಂದು ಹಾರಿಸಿತು. ಇದು ಮುಖ್ಯವಾಗಿ ವ್ಯಾನ್ ಅಲೆನ್ ವಿಕಿರಣ ಪಟ್ಟಿಯನ್ನು ಪತ್ತೆ ಹಚ್ಚಿತು. ಈ ಮುಂದಿನ ಇದರ ಜೊತೆಗೆ ಈ ಶೇಣ್ಯಲ್ಲಿ ಆಮೇಲೆ ಹಾರಿಸಿದ ಎಕ್ಸ್ಪ್ಲೋರರ್-ಗಳು: ಕೆಳಕಂಡ ಚಿಷಯಗಳಲ್ಲಿ ಹೆಚ್ಚು ಗ್ನ್ಯಾನವನ್ನು ಸಂಪಾದಿಸಿಕೊಟ್ಟವು. ಉಲ್ಕಗಳು, ಒತ್ತಡ, ಉಷ್ಣತೆ, ರಶ್ಮಿ, ಭೂಕಾಂತಕ್ಷೇತ್ರ, ಸೌರ ಚಟುವಟಿಕೆಗಳು ಭೂಮಿಯ ವಾತಾವರಣದ ಮೇಲೆ ಉಂಟುಮಾಡುವ ಪರಿಣಾಮಗಳು, ಶಕ್ತಿಯುತ ವಿದ್ಯುತ್ಕಣಗಳ ಲಕ್ಷಣಗಳು, ಅಯೋನಾವರಣದ ರಚನೆ ಮತ್ತು ಗ್ಯಾಮಾ ಕಿರಣಗಳು. ೨.ವ್ಯಾನ್-ಗಾರ್ಡ್ ಉಪಗ್ರಹಗಳು: ಇವು ಅಂತಾರಾಷ್ಟ್ರೀಯ ಭೂಭೌತ ವರ್ಷದ ಅಂಗವಾದ ಉಡಾಯಿಸಿದ ಉಪಗ್ರಹಗಳು. ೧೯೫೮ ಮಾರ್ಚಿನಲ್ಲಿ ಎಡಾಯಿಸಿದ ವ್ಯಾನ್-ಗಾರ್ಡ್ - ೧ರಿಂದ ಭೂಮಿಯ ಆಕಾರ ಸುಮಾರಗಿ ಗೇರುಬೀಜದಂತಿದೆಯೆಂದು ತಿಳಿದುಬಂದಿತು.ಇದರ ಜೊತಿಗೆ ಮುಂದೆ ಪ್ರಯೋಗಿಸಿದ ವ್ಯಾನ್-ಗಾರ್ಡ್ ಉಪಗ್ರಹಗಳು, ಭೂಮಿಯ ವಾಯುಗುಣ, ಭೂಕಾಂತಕ್ಷೇತ್ರ, ವ್ಯಾನ್ ಅಲೆನ್ ಉಲ್ಕೆಗಳ ಸಾಂದ್ರತೆ-ಮುಂತಾದ ವಿಚಾರಗಳ ಮೇಲೆ ಅಧ್ಯಯನ ನಡೆಸಿದವು. ೩. ಡಿಸ್ಕವರರ್ ಉಪಗ್ರಹಗಳು: ೧೯೫೯ ಫೆಬ್ರವರಿಯಲ್ಲಿ ಮೊದಲನೆಯ ಡಿಸ್ಕವರರ್ ಉಪಗ್ರಹಗವನ್ನು ಧ್ರುವಪಥದಲ್ಲಿ ಹಾರಿಸಲಾಯಿತು. ಅಂತರಿಕ್ಷ ನೌಕೆಗಳನ್ನು ಭೂಮಿ ಸುರಕ್ಷಿತವಾಗಿ ವಾಪಸ್ಸು ಪಡೆಯುವ ವಧಾನಗಳನ್ನು ಅಭ್ಯಸಿಸಲಾಯಿತು. ಜೊತೆಗೆ ಚಾಲನೆ (ಪ್ರೋಪಲ್ಷನ್) ಸಂಪರ್ಕಸಾಧನಗಳು, ಬಾಹ್ಯಾಕಾಶದಿಂದ ಬರುವ ರೇಡಿಯೋ ಸಂಜ್ಞೆಗಳು ಮುಂತಾದುವನ್ನು ಅಧ್ಯಯನ ಮಾಡಲಾಯಿತು. ೪. ಕಕ್ಷಿಸುತ್ತಿರುವ ಭೂಭೌತ ವೇಧಶಾಲೆಗಳು (ಆರ್ಬಿಟ್ಂಗ್ ಜಿಯೋಫಿಸಿಕಲ್ ಆಬ್ಸರ್ವೇಟರೀಸ್-ಒಜಿಒ): ಹೆಸರೇ ಸೂಚಿಸುವಂತೆ ಇವನ್ನು ಭೂಭೌತ ವಿಜ್ಞಾನಾಧ್ಯಯನಕ್ಕೆ ಉಪಯೋಗಿಸಲಾಯಿತು. ಕಕ್ಷಿಸುವ ಸೌರವೇಧ ಶಾಲೆ ( ಆರ್ಬಿಟಿಂಗ್ ಸೋಲಾರ್ ಆಬ್ಸರ್ವೇಟರೀಸ್-ಒಎಸ್ಒ): ವೃತ್ತಾಕಾರಪಥದಲ್ಲಿ ಹಾರಿಸಿ ಇವನ್ನು ಭೂಮಿಯ ವಾತಾವರಣದ ಮೇಲಿನಿಂದ ಸೌರ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಉಪಯೋಗಿಸಲಾಯಿತು. ಇವುಗಳಲ್ಲಿ ಕ್ಷ-ಕಿರಣ ಮತ್ತು ಲೈಮಾನ ಅಲ್ಪರೋಹಿತ ಮಾಪಕಗಳೂ ( ಸ್ಪೆಕ್ಟ್ರಾಮೀಟರ್) ನ್ಯೂಟ್ರಾನ್ ಮತ್ತು ಗ್ಯಾಮಾ ಗಣಕಗಳೂ ಇದ್ದವು.