ಪುಟ:Mysore-University-Encyclopaedia-Vol-1-Part-1.pdf/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಂತರೀಕ್ಷ ಸಂಶೋಧನೆ ಕಕ್ಷಿಸುತ್ತಿರುವ ಖಗೋಳ ವೇಧಶಾಲೆ:(ಆರ್ಬಿಟ್ಂಗ್ ಅಸ್ಟ್ರನಾಮಿಕಲ್ ಆಬ್ಸರ್ವೇಟರಿ-‌ ಒಎಒ): ಅಂತರಿಕ್ಷದಿಂದ ಬರುವ ಅನೇಕ ವಿಧವಾದ ವಿದ್ಯುತ್ಕಾಂತೀಯ ತರಂಗಗಳನ್ನು ಭೂಮಿಯ ವಾತಾವರಣ ಹೀರಿಕೊಳ್ಳುತ್ತದೆ.ಇದರಿಂದಾಗಿ ಭೂಮಿಯ ಮೇಲಿಂದಲೇ ಮಾಡುವ ಖಗೋಳಾಧ್ಯಯನ ಕುಂಠಿತವಾಗಿದೆ. ಆದ್ದರಿಂದ ಭೂಮಿಯ ವಾತಾವರಣದ ಮೇಲ್ಭಾಗದಿಂದ ಅಧ್ಯಯನ ನಡೆಸಿದವು. ಹೀಗೆ ನಡೆಸಿದ ಅಧ್ಯಯನದ ಫಲವಾಗಿ ಭೂಮಿಯ ಮೇಲಿನ ವಾಯುಮಂಡಲದ ಸ್ವಭಾವ, ಪರಿಣಾಮ ತಿಳಿಯುವುದರ ಜೊತೆಗೆ ನಕ್ಷತ್ರ, ನೀಹಾರಿಕೆ ಮುಂತಾದ ಆಕಾಶಕಾಯಗಳನ್ನು ಕುರಿತು ಹಚ್ಚು ನಿಖರವಾದ ವಿವರಗಳನ್ನು ಸಂಗ್ರಹಿಸುವುದು ಕೂಡ ಸಾಧ್ಯವಾಯಿತು. ಇಂಥ ಅಧ್ಯಯನ ಅಂತರಿಕ್ಷಯಾನಕ್ಕೆ ಅತ್ಯವಶ್ಯಕ. ೫. ಹಬಲ್ ಅಂತರಿಕ್ಷ ದೂರದರ್ಶಕ: ಗೋಚರ ಬೆಳಕು ಅತಿನೇರಳೆ ಕಿರಣಗಳು ಅವರಕ್ತ ಕಿರಣಗಳು ಇವನ್ನು ದಾಖಲಿಸುವ ಮೂಲಕ ಆಕಾಶಕಾಯಗಳನ್ನು ಅಭ್ಯಾಸಿಸಬಲ್ಲ ಹಬಲ್ ಅಂತರಿಕ್ಷ ದೂರದರ್ಶಕವನ್ನು ಅಮೇರಿಕ ೧೯೯೦ರಲ್ಲಿ ಭೂಕಕ್ಷೆಗೆ ಉಡಾಯಿಸಿತು. ಸೌರವ್ಯೂಹದ ಗ್ರಹಗಳಿಂದ ಹಿಡಿದು ಸಾವಿರ ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದ ಭ್ರಹ್ಮಾಂಡಗಳ ಚಿತ್ರಗಳನ್ನು ರವಾನಿಸಿರುವ ಆ ವೈಜ್ಞಾನಿಕ ಉಪಗ್ರಹ ಖಗೋಲ ವೀಕ್ಷಣಾ ಕ್ಷೇತ್ರದಲ್ಲಿ ಮಹತ್ತರವಾದ ಮುನ್ನಡೆ ತಂದಿದೆ. ೬. ಚಂದ್ರ ಕ್ಷಕಿರಣ ವೇಧಶಾಲೆ; ಭಾರತೀಯ ಸಂಜಾತ ಅಮೇರಿಕದ ಖಗೋಲ ಭೌತವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್(೧೯೧೦-೯೫) ಅವರ ಹೆಸರುಳ್ಳ ಈ ದೊಡ್ಡ ವೈಜ್ಞಾನಿಕ ಉಪಗ್ರಹ ಭೂಮಿಯನ್ನಿಂದು ಸುತ್ತುತ್ತಿದೆ.ಈ ಬ್ರಹ್ಮಾಂಡದ ಅನೇಕ ಕುತೂಹಲಕಾರಿ ಆಕಾಶಕಾಯಗಳಾದ ಮಹಾಸೇವಾಗಳು, ಕಪ್ಪು ರಂಧ್ರಗಳು, ಬ್ರಹ್ಮಾಂಡಗಳು ಮುಂತಾದವುಗಳ ಬಗ್ಗೆ ೧೯೯೯ರಲ್ಲಿ ಉಡಾಯಿಸಿದ ಆ ಉಪಗ್ರಹ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತಿದೆ.ಲೊತೆಗೇ ಯುರೋಪಿನ ಎಕ್ಸ್.ಎಮ್.ಎಮ್ ಉಪಗ್ರಹವೂ ಕ್ಷಕಿರಣಗಳ ಅಧ್ಯಯನವನ್ನು ನಡೆಸುತ್ತಿದೆ. ಇದಕ್ಕೆ ಮೊದಲು ಸ್ಕೈಲ್ಯಾಬ್ (ಮಾನವಸಹಿತ) ಅಂತರಿಕ್ಷ ನಿಲ್ದಾಣದ ಉಪಕರಣಗಳೂ ಕ್ಷಕಿರಣ ಖಗೋಲವಿಗ್ನಾನಕ್ಕೆ ಪ್ರಮುಖವಾದ ನೆರವು ನೀಡಿದವು. ೭. ಲೈಮನ್ ಸ್ಪಿಟ್ಸರ್ ಅತಿರಕ್ತ ವೇಧಶಾಲೆ: ಅಮೇರಿಕ ಉಡಾಯಿಸಿದ ಈ ವೈಜ್ಞಾನಿಕ ಉಪಗ್ರಹವು ನೀಹಾರಿಕೆಗಳು, ನಕ್ಷತ್ರಗಳ ಜನನ, ಕ್ಷೀಣ ನಕ್ಷತ್ರಗಳು ಮುಂತಾದ ವಿಷಯಗಳ ಬಗ್ಗೆ ಅಮೂಲ್ಯವಾದ ಮಾಹಿತಿ ಒದಗಿಸುತ್ತದೆ. ಜೊತೆಗೆ ಯುರೋಪಿನ ಐ.ಎಸ್.ಒ ಉಪಗ್ರಹವು ಅವರಕ್ತ ಕಿರಣಗಳ ಅಧ್ಯಯನಕ್ಕೆ ನೆರವನ್ನು ನೀಡುತ್ತದೆ. ೮. ಕಾಂಷ್ಟನ್ ಗಾಮಾಕಿರಣ ವೇಧಶಾಲೆ: ೧೯೯೧ರಲ್ಲಿ ಕಕ್ಷೆಗೆ ತೆರಳಿದ ಈ ಉಪಗ್ರಹದ ನಮ್ಮಲ್ಲಿ ಬ್ರಹ್ಮಾಂಡದಲ್ಲಿ ( ಅಂಡರೆ ಆಕಾಶಗಂಗೆಯಲ್ಲಿ) ಜರುಗುವ ಅನೇಕ ಶಕ್ತಿಯುತವಾದ ವಿಧ್ಯಮಾನಗಳ ಅಧ್ಯಯನದಲ್ಲಿ ಮಾನವವಿಗೆ ಒಂದು ದಶಕದ ಕಾಲ ಅಮೂಲ್ಯ ನೆರವನ್ನು ನೀಡಿತು. ೨೦೦೫ರಿಂದೀಚೆಗೆ ಯುರೋಪಿನ ಇಂಟಿಗ್ರಲ್ ಎಂಬ ವೈಜ್ಞಾನಿಕ ಉಪಗ್ರಹ ಗ್ಯಾಮಾಕಿರಣಗಳ ಅಧ್ಯಯನಕ್ಕೆ ಸಂಬಂಧದಲ್ಲಿ ಅತಿನೇರಳೆ ಕಿರಣಗಳನ್ನು ದಾಖಲು ಮಾಡಿ ಕೊಳ್ಳಬಲ್ಲವಾಗಿದ್ದ ಐ.ಯು.ಐ ಮತ್ತು ಇ.ಯು.ವಿ.ಯಿ. ಉಪಗ್ರಹಗಳು ಅಮೂಲ್ಯ ನೆರವನ್ನು ನೀಡಿದವು. ಇತರ ದೇಶಗಳ ಉಪಗ್ರಹಗಳು: ಇಂಗ್ಲೆಂಡ್, ಕೆನಡ, ಇಟಲಿ, ಫ಼್ರಾನ್ಸ್,ಇಸ್ರೇಲ್, ಜರ್ಮನಿ, ನೆದರ್ ಲೆಂಡ್ಸ್ ಹಾಗೂ ಇನ್ನೂ ಅನೇಕ ದೇಶಗಳು ವೈಜ್ಞಾನಿಕ ಉಪಗ್ರಹಗಳನ್ನು ಹಾರಿಸಿವೆ. ಇಲ್ಲವೆ ಅಂಥ ಉಪಗ್ರಹಗಳನ್ನು ಹೊಂದಿವೆ. ಕ್ಷ-ಕಿರಣಗಳನ್ನು ಅಭ್ಯಸಿಸಬಲ್ಲ ಪಿ ಆರ್ ಎಸ್-ಪಿ೩, ಗಾಮಾಕಿರಣಗಳ ಸ್ಫೋಟನೆಗಳನ್ನು ಹಾಗೂ ಭೂಮಿಯ ಅಯಾನು ಮಂಡಲವನ್ನು ಅಭ್ಯಸಿಸಬಲ್ಲ ಸ್ರಾಸ್-ಸಿ ೩ ಮತ್ತು ಸ್ರಾಸ್-ಸಿ೨ ಉಪಗ್ರಹಗಳನ್ನು ಹಾರಿಬಿಟ್ಟ ಭಾರತ ಆ ಮೂಲಕ ಅಂತರಿಕ್ಷದಿಂದ ಖಗೋಲವೀಕ್ಷಣೆಯನ್ನು ನಡೆಸಿದೆ. (೨) ಹವಾಮಾನ ಉಪಗ್ರಹಗಳು: ಭೂಮಿಯ ಮೇಲಿನ ಮೋಡಗಳ ವಿತರಣ ಎತ್ತರ, ಧ್ರುವ ಪ್ರದೇಶಗಳಲ್ಲಿಯ ಮಂಜಿಗಡ್ಡೆಗಳು, ಭೂಪ್ರದೇಶದ ಉಷ್ಣತೆ ಮುಂತಾದವು ವಾಯುಗುಣದ ಮೇಲೆ ಬಹಳವಾಗಿ ಪರಿಣಾಮ ಬೀರುತ್ತವೆ. ಅದೂ ಅಲ್ಲದೆ ಒಂದು ಕಡೆಯ ವಾಯುಗುಣ ಅದರ ಸುತ್ತಮುತ್ತಲಿನ ಸಾವಿರಾರು ಕಿ.ಮೀ ವ್ಯಾಪ್ತಿಯಲ್ಲಿಯ ಪ್ರದೇಶದ ವಾಯುಗುಣವನ್ನು ಅವಲಂಬಿಸಿದೆ. ಆದ್ದರಿಂಡ ಭೂಮಿಯ ಬಹುಭಾಗದ ವಾಯುಗುಣವನ್ನು ಒಂದೇ ಸಾರಿಗೆ ಪರಿಶೀಲಿಸುವುದು ಅಗತ್ಯ.ಇದನ್ನು ಉಪಗ್ರಹಗಳು ಮಾತ್ರ ಮಾಡಬಲ್ಲವು. ಇವು ನೂರಾರು ಕಿ.ಮೀ. ಎತ್ತರದಿಂದ ಮೋಡಗಳ ಚಿತ್ರಗಳನ್ನು ತೆಗೆದು ರೇಡಿಯೋ ತರಂಗಗಳ ಮೂಲಕ ಭೂಮಿಗೆ ರವಾನಿಸುತ್ತವೆ. ಈ ಚಿತ್ರಗಳ ಸಹಾಯದಿಂದ ಬಿರುಗಾಳಿ, ಹಿಮಪಾತ, ಚಂಡಮಾರುತ, ಪ್ರವಾಹಗಳು- ಮುಂತಾದವನ್ನು ಮೊದಲೇ ಪತ್ತೆಹಚ್ಚಿ ಅವುಗಳಿಂದುಂಟಾಗುವ ವಿನಾಶವನ್ನು ಹಡಿಮೆ ಮಾಡಬಹುದು. ನಂಬಲರ್ಹವಾದ ಹವಾಮಾನದ ವಿವರಗಳನ್ನು ಮುಂಚೆಯೇ ತಿಳಿಯುವುದರಿಂದ ಹಡಗುಗಳು ಮತ್ತು ವಿಮಾನಗಳು ಸುರಕ್ಷಿತವಾಗಿ ಓಡಾಡಬಹುದು. ಈ ಕೆಲಸಕ್ಕಾಗಿಯೇ ಮೀಸಲಾದ ಕೆಲವು ಉಪಗ್ರಹಗಳನ್ನು ಉಡಾಯಿಸಲಾಗಿದೆ. ಅಮೇರಿಕನ್ನರು ಹವಾಮಾನ ಅಧ್ಯಯನಕ್ಕಾಗಿ ಮೊದಲು ಟೈರೋಸ್ ಶೇರ್ಷಿಕೆಯಲ್ಲಿ ಎಂಟು ಉಪಗ್ರಹಗಳನ್ನು ಉಡಾಯಿಸಿದರು. ಮುಂದೆ ಇವುಗಳ ಸುಧಾರಿತ ಉಪಗ್ರಹಗಳಾದ ಎಸ್ಪಾ-೧ ಮತ್ತು ೨ನ್ನೂ ಬಳಿಕ ಇನ್ನೂ ಉತ್ತಮಪಡಿಸಿದ ನಿಂಬಸ್ ಉಪಗ್ರಹಗಳನ್ನೂ ಹಾರಿಸಿದ್ದರು, ನಿಂಬಸ್ ಗಳಲ್ಲಿ ಸ್ವಯಂಚಾಲಿತ ಚಿತ್ತಪ್ರಸಾರ (ಎಪಿಟಿ) ಉಪಕರಣಗಳಿದ್ದವು. ಇವು ಭೂಮಿಯನ್ನು ಸುತ್ತುವಾಗ ಎಪಿಟಿ ಕ್ಯಾಮರ ಸದಾ ಭೂಮಿಯನ್ನೇ ಮೀಕ್ಷಿಸುತ್ತಿದ್ದು ೨೦೮ ಸೆಕೆಂಡ್ ಗಳಿಗೊಮ್ಮೆ ಮೋಡಗಳ ಚಿತ್ರಗಳನ್ನು ತೆಗೆದು ಭೂಮಿಗೆ ಪ್ರಸಾರ ಮಾಡುತ್ತಿತ್ತು. ಈ ಚಿತ್ರಗಳನ್ನು ೪೪ ಸ್ಥಳಗಳಿಂದ ಗ್ರಹಿಸಲಾಗುತ್ತಿತ್ತು. ಇವುಗಳಲ್ಲಿ ಮುಂಬಯಿಯ ಕೊಲಾಬಾ ವೇಧಶಾಲೆಯಲ್ಲಿ ಸೇರಿತ್ತು. ರಷ್ಯಾದೇಶ ಮೊದಲಿಗೆ ಕಾಸ್ಮಾಸ್-೧೨೨ ಉಪಗ್ರಹದಿಂದ ಮೋಡಗಳ ಚಿತ್ರಗಳನ್ನು ತೆಗೆಯಿತು. ಕಾಸ್ಮಾಸ್-೧೪೪ ಮತ್ತು ಕಾಸ್ಮಾಸ್ ೧೫೬ ಒಟ್ಟಿಗೆ ಕೆಲಸ ಮಾಡಿ ಪ್ರತಿ ೬ ಗಂಟೆಗೊಮ್ಮೆ ಭೂಮಿಯ ಪೂರ್ಣ ಚಿತ್ರಗಳನ್ನು ಕೊಡುತ್ತಿದ್ದುವು. ಮೋಲ್ನಿಯಾ