ಪುಟ:Mysore-University-Encyclopaedia-Vol-1-Part-1.pdf/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


           ಅಂತರಿಕ್ಷ ಸಂಶೋಧನೆ

ಸರಣಿಯ ಉಪಗ್ರಹವನ್ನು ರಷ್ಯನ್ನರು ಅತಿದೀರ್ಘ ವೃತ್ತಪಥದಲ್ಲಿ ಹಾರಿಸಿದರು. ಇದು ತನ್ನ ಪಥದಲ್ಲಿ ದೂರ ದೂರ ಹೋದಂತೆಲ್ಲ ಭೂಮಿಯ ಹೆಚ್ಛು ಹೆಚ್ಚು ಭಾಗದ ಚಿತ್ರಗಳನ್ನು ತೆಗೆದು ಕಳುಹಿಸಿತು. ಕಾಸ್ಮಾಸ್-೧೪೯ ಭೂಮಿಯಿಂದ ಹೊರದಡುವ ಉಷ್ಣ ವಿಕಿರಣವನ್ನು ವಿವಿಧ ರೋಹಿತವಿಭಾಗಗಳಲ್ಲಿ ಆಳೆಯಿತು. ಇಂದು ಹವಾಮಾನ ಉಪಹಗ್ರಹಗಳ ಪೈಕಿ ಕೆಲವು ಭೂಮಿಯಿಂದ ಕೆಲವು ನೂರು ಕಿಮೀ. ಎತ್ತರವಿದ್ದು ಧ್ರುವ ಪ್ರದೇಶಗಳ ಮೇಲೆ ಹಾದು ಹೋಗುವ ಕಕ್ಶೆಯಲ್ಲಿವೆ. ಮತ್ತೆ ಕೆಲವು ಭೂಮಿಯಿಂದ ೩೬೦೦೦ ಕಿಮೀ. ಎತ್ತರದ ಭೂಸ್ಥಿರ ಕಕ್ಶೆಗಳಲ್ಲಿದೆ. ಆವುಗಳಲ್ಲಿ ಆಮೆರಿಕದ ಟೈರೋಸ್, ಗೋಸ್, ರಷ್ಯಾದ ಮೀಟಿಯೋಸ್ಯಾಟ್ ಮತ್ತು ಜಪಾನಿನ ಹಿಮವಾರಿ, ಇವನ್ನು ಹೆಸರಿಸಬಹುದು.

(೩)ಸಂಪರ್ಕ ಸಾಧನೋಪಗ್ರಹಗಳು: ಸೂಕ್ಶ್ಮತರಂಗ ಮತ್ತು ಟೆಲಿವಿಷನ್ ಪ್ರಸಾರಗಳನ್ನು ದೃಷ್ಟಿನೇರದಲ್ಲಿ ಮಾತ್ರಗ್ರಹಿಸಬಹುದು. ಆದ್ದರಿಂದ ದೂರಪ್ರಸಾರಕ್ಕೆ ಅಲ್ಲಲ್ಲಿ ಪುನಃ ಪ್ರಸಾರಕೇಂದ್ರಗಳಮನ್ನಿಡಬೇಕು. ಒಂದು ಉಪಗ್ರಹದಲ್ಲಿ ಮರುಪ್ರನಸಾರೋಪಕರಣಗಳನ್ನಿಟ್ಟರೆ ಈ ತೊಂದರೆ ಬಲುಮಟ್ಟಿಗೆ ಪರಿಹಾರವಾಗುವುದು. ನೂರಾರು ಕಿಮೀ. ಎತ್ತರದಲ್ಲಿರುವ ಉಪಗ್ರಹದ ದೃಷ್ಟಿ ನೇರದಲ್ಲಿ ಸಾವಿರಾರು ಕಿಮೀ.ಗಳಷ್ಟು ಭೂಭಾಗ ಬರುವುದರಿಂದ ಇಂಥ ಉಪಗ್ರಹ ಸಾವಿರಾರು ಕಿಮೀ.ವ್ಯಾಪ್ತಿಯ ಪ್ರಸಾರಕ್ಕೆ ಸಾಕಾಗುತ್ತದೆ. ೧೯೬೦ ಡಿಸೆಂಬರಿನಲ್ಲಿ ಅಮೆರಿಕನ್ನರು ೧೦೦ ಅಡಿ ವ್ಯಾಸದ ಲೋಹಲೇಪಿತ 'ಎಕೋ' ಎಂಬ ಪ್ಲಾಸ್ಟಿಕ್ ಬೆಲೂನನ್ನು ಹಾರಿಸಿದರು. ಅದರ ಮೂಲಕ ಧ್ವನಿಯನ್ನೂ ಛಾಯಾಚಿತ್ರಗಳನ್ನೂ ಭೂಮಿಯ ಒಂದು ಸ್ಧಳದಿಂದ ಮತ್ತೊಂದು ಸ್ಧಳಕ್ಕೆ ಪ್ರತಿಫಲಿಸಿ ಕಳುಹಿಸುವುದು ಸಾಧ್ಯವೆಂದು ತಿಳಿದು ಬಂತು. ರಿಲೀ-೧ ಎಂಬ ಉಪಗ್ರಹವನ್ನು ಅಮೆರಿಕ ೧೯೬೨ ದಿಸೆಂಬರ್ ೧೩ರಿಂದ ಉದಾಯಿಸಿತು. ತನ್ನತ್ತ ಉದ್ದೇಶಿತವಾಗಿಯೇ ಭೂಕೇಂದ್ರವೊಂದು ಪ್ರಸಾರ ಮಾಡಿದ ದೂರಸಂಪರ್ಕ ಹಾಗೂ ದೂರದರ್ಶನದ ಸಂ‌ಜೆಗಳನ್ನು ಪಡೆದು,ವೃದ್ಧಿಸಿ ಮರುಪ್ರಸಾರವನ್ನು ಮಾಡುವ ಸಾಮರ್ಥ್ಯ ಆ ಉಪಗ್ರಹಕ್ಕೆ ಇತ್ತು. ಇದು ಅಮೆರಿಕ ಮತ್ತು ಯುರೊಪುಗಳ ನಡುವೆ ಟೆಲಿಫೋನ್ ಮತ್ತು ಬಣ್ಣದ ಟೆಲಿವಿಷನ್ ಸಂಪರ್ಕವನ್ನೇರ್ಪದಿಸಿತು. ೧೯೬೪ ಜನವರಿಯಲ್ಲಿ ಹಾರಿಸಿದ ರಿಲೇ-೨ ಉಪಗ್ರಹ ಅಮೆರಿಕ ಮತ್ತು ಜಪಾನುಗಳ ನದುವೆ ಸಂಪರ್ಕವನ್ನೇರ್ಪಡಿಸಿತು. ಮುಂದೆ ಹಾರಿಸಿದ ಟೆಲ್ ಸ್ಟಾರ್ ಉಪಗ್ರಹಗಳೂ ಮೇಲಿನಂತೆ ಕೆಲಸ ಮಾಡಿದರೂ ಅವುಗಳ್ ರಚನೆ ಬೇರೆ ರೀತಿಯದಾಗಿತು.೧೯೬೨ರಲ್ಲಿ ಟೆಲ್ ಸ್ಟಾರ್-೧ ಮತ್ತು ೧೯೬೩ರಲ್ಲಿ ಟೆಲ್ ಸ್ಟಾರ್-೨ ಉಪಗ್ರಹಗಳನ್ನು ಹಾರಿಸಿದರು. ಆದರೆ ಮೇಲೆ ಹೇಳಿದ ಉಪಗ್ರಹಗಳ ಪರಿಭ್ರಮಣಾವಧಿ ಆವರ್ತನಾವಧಿಗಿಂತ ಕಡಿಮೆಯಿರಲಾಗಿ ಅವು ಸದಾಕಾಲ ಭೂಮಿಯ ಮೇಲೆ ಒಂದೇಕಡೆ ಇರುತ್ತಿರಲಿಲ್ಲ. ಆದ್ದರಿಂದ ಅವು ಒಂದು ಪ್ರದೇಶದ ದೃಷ್ಟಿನೇರದಲ್ಲಿರುವಷ್ಟು ಸಮಯ ಮಾತ್ರ ಅವುಗಳ ಮೂಲಕ ಆ ಪ್ರದೇಶದಲ್ಲಿನ ಜನರು ಸಂಪರ್ಕಗಳನ್ನು ಹೊಂದಬಹುದಾಗಿತ್ತು. ಆನಂತರ ಅವು ಪುನಃ ಆ ಪ್ರದೇಶದ ಮೇಲೆ ಬರುವ ತನಕವೂ ಕಾಯಬೇಕಾಗಿತ್ತು. ಈ ತೊಂದರೆಯನ್ನು ತಪ್ಪಿದಬೇಕಾದರೆ ೩೬೦೦ಕಿಮೀ ಎತ್ತರದ ಮರ್ತುಳೀಯ ಕಕ್ಷೆಯಲ್ಲಿ ಉಪಗ್ರಹವನ್ನು ಹಾರಿಸಬೇಕು. ಆಗ ಅದರ ಪರಿಭ್ರಮಣಾವಧಿ ೨೪ ಗಂಟೆಗಳು. ಇದರಿಂದಾಗಿ ಅಂತಹ ಉಪಗ್ರಹವೊಂದು ಭೂಮಿಯ ಒಂದೇ ಪ್ರದೇಶದ ಮೇಲೆ ಸ್ಥಿರವಾಗಿ ನಿಂತಂತೆ ವರ್ತಿಸುತ್ತದೆ. ಇಂಥ ಉಪಗ್ರಹದ ಕಕ್ಷೆಗೆ ಭೂಸ್ಥಿರಕಕ್ಷೆ(ಜಿಯೋಸ್ಟೇಷನರಿ ಆರ್ಬಿಟ್)ಎಂದು ಹೆಸರು. ಈ ಬಗೆಯ ಸಿಂಕಾಮ್-೨ ಎಂಬ ಉಪಗ್ರಹವನ್ನು ಬ್ರೆಜ಼ಿಲ್ ದೇಶದ ಮೇಲೆ ನಿಲ್ಲುವಂತೆ ಹಾರಿಸಿದರು. ಶ್ರೇಣಿಯಲ್ಲಿ ಹಾರಿಸಿದ 'ಆರ್ಲಿಬರ್ಡ್' ಎಂಬ ಉಪಗ್ರಹ ೩೬೦೦೦ ಕಿಮೀ ಎತ್ತರದಲ್ಲಿದ್ದು ೨೪ ಗಂಟೆಗಳಿಗೊಂದಾವರ್ತಿ ಭೂಪರಿಭ್ರಮಣೆ ಮಾಡುತ್ತ ಸದಾಕಾಲವೂ ಒಂದೇ ಸ್ಥಾನದಲ್ಲಿದ್ದಂತೆ ವರ್ತಿಸಿತ್ತಿತ್ತು. ಹೀಗೆ ಮೂರು ಉಪಗ್ರಹಗಳನ್ನು ಭೂಮಿಗೆ ಸದಾಕಾಲವೂ ದೃಶ್ಯವಾರ್ತಾ ವಿನಿಮಯವನ್ನೊದಗಿಸುವ ಸಾಧ್ಯಾಸಾಧ್ಯತೆಗಳನ್ನು ವಿಜ್ನ್ಯಾನಿಗಳು ಕಂಡುಕೊಂಡರು.

ರಷ್ಯನ್ನರು ೧೯೬೫ ಏಪ್ರಿಲ್ ೨೩ ರಂದು ಹಾರಿಸಿದ ಮೋಲ್ನಿಯಾ-೧ ಸಂಪರ್ಕ ಉಪಗ್ರಹ ಆತಿದೀರ್ಘವೃತ್ತ ಪಥದಲ್ಲಿದ್ದು (ಇದರ ನೀಚಸ್ಥಾನ ೫೦೦ ಕಿಮೀಗಳು ಮತ್ತು ಉಚ್ಚಸ್ಥಾನ ೩೬೦೦೦ ಕಿಮೀಗಳು) ಉಚ್ಚಸ್ಥಾನದಲ್ಲಿರುವಾಗ ಯುರೊಪ್ಲ ಮತ್ತು ರಷ್ಯಗಳ ಮೇಲೆ ಇದ್ದವು.ಆದ್ದರಿಂದ ಇದರ ೧೨ ಗಂಟೆ ಆವರ್ತಸಮಯದಲ್ಲಿ ೧೦ ಗಂಟೆಗಳ ಕಾಲ ರಷ್ಯನರು ಇದನ್ನು ಸಂಪರ್ಕ ಸಾಧನವಾಗಿ ಉಪಯೋಗಿಸಿದರು. ಈಗ ಸಂಪರ್ಕ ಸಾಧನೋಪಗ್ರಹಗಳನ್ನು ಆಂತಾರಾಷ್ಟ್ರೀಯ ವಾಣಿಜ್ಯೋದ್ಯಮ ಮಾಧ್ಯಮವಾಗಿ ಬಳಸುತ್ತಿದ್ದಾರೆ.

ಭೂಸ್ಥಿರ ಕಕ್ಷೆಯಲ್ಲಿಬನ ಮೂರು ಸಂಪರ್ಕ ಉಪಗ್ರಹಗಳಿಂದ ಬಹುಮಟ್ಟಿಗೆ ಇಡೀ ಜಗತ್ತನ್ನು ಜೋಡಿಸುವ ಕಾರ್ಯ ೧೯೬೯ರಲ್ಲಿ ಸಫಲವಾಯಿತು. ೧೯೭೦ ಹಾಗೂ ೮೦ರ ದಶಕಗಳಲ್ಲಿ ಕೆನಡ, ಇಂಡೊನೇಷಿಯ, ಭಾರತ,ಮೆಕ್ಸಿಕೋ ಮುಂತಾದ ದೇಶಗಳು, ೧೯೭೦ರ ದಶಕದಿಂದ ರಷ್ಯನ್ನರು ಸಂಪರ್ಕ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗಳು ಹೊಂದಲಾರಂಭಿಸಿದವು.

ಆ ಮೂಲಕ ತಮ್ಮೊಳನಿನ ಸಂಪರ್ಕಕ್ಕಗಿ ಭೂಸ್ಥಿರ ಕಕ್ಷೆಯು ಸಂಪರ್ಕ ಉಪಗ್ರಹಳನ್ನು ಬಿಳಿಸಿಕೊಳ್ಳಲಾರಂಭಿಸಿದವು. ಜೊತೆಗೆ ೧೯೮೦ರ ದಶಕದಿಂದ ಟಿ.ವಿ.ಪ್ರಸಾರಕ್ಕಾಗಿ ಜಗತ್ತಿನಾದ್ಯಂತ ಉಪಗ್ರಹಗಳನ್ನು ಬಾರಿ ಪ್ರಮಾಣದಲ್ಲಿ ಅವಲಂಬಿಸುವುದು ಆರಂಭವಾಯಿತು. ನಂತರ ೧೯೯೦ರ ದಶಕದ ಮಧ್ಯಭಾಗದ ಸುಮಾರಿನಿಂದ ಸಂಪರ್ಕ ಉಪಗ್ರಹಗಳನ್ನು ಹಿಂಡು ಹಿಂಡಾಗಿ ಭೂಮಿಗೆ ಹತ್ತಿರವಿರುವ ಕಕ್ಷೆಗಳಿಗೆ ಹಾರಿಬಿಡುವ ಕಾರ್ಯ ಪ್ರಸಾರವಾಯಿತು.

(೪)ದೂರಸಂವೇದಿ ಉಪಗ್ರಹಗಳು: ಸೂಕ್ಷ್ಮ ಎಲೆಕ್ಷ್ರಾನಿಕ್ ಕ್ಯಾಮರಾಗಳನ್ನು ಹೊತ್ತ ಕೃತಕ ಭೂ ಉಪಗ್ರಹಗಳ ನೆರವಿನೊಂದಿಗೆ ಭೂ ಸಂಪನ್ಮೂಲಗಳ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬಹುದು. ಭೂಮಿಯ ಮೇಲಿನ ವಸ್ತುಗಳು ಹಾಗೂ ವಿದ್ಯಮಾನಳ ಬಗ್ಗೆ ಅಂತರಿಕ್ಷದಿಂದಲೇ ಗಮನಹರಿಸುವ ಉಪಗ್ರಹಗಳಿಗೆ ದೂರಸಂವೇದಿ ಉಪಗ್ರಹಗಳು ಎಂದು ಹೆಸರು. ಇವುಗಳನ್ನು ದೀರ್ಘಕಾಲದ ಭೂ ಸ್ವರೂಪಗಳ ವೀಕ್ಷಣೆಗೆ ನೆರವಾಗುವ ‍ಸೌರಮೇಳಯುಕ್ತ ಕಕ್ಷೆಗಳಿಗೆ(ಸನ್ ಸಿಂಕ್ರೊನಿಟ್ ಆರ್ಬಿಟ್ಸ್) ಹಾರಿಬಿಡಲಾಗುತ್ತದೆ.

ಈ ಕಕ್ಷೆಗಳ ಎತ್ತರ ಸಾಮಾನ್ಯವಾಗಿ ಒಂದು ಸಾವಿರ ಕಿಲೋಮೀಟರ್ ಒಳಗೆ ಇರುತ್ತದೆ. ಅಮೆರಿಕ ಈ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದ ಮೊದಲ ರಾಷ್ಟ್ರವಾಯಿತು. ಆ ದೇಶದ 'ಲ್ಯಾಂಡ್ ಸ್ಯಾಟ್' ಉಪಗ್ರಹಗಳು ಭೂಮಿಯ ಮೊದಲ ದೂರ ಸಂವೇದಿ