ಪುಟ:Mysore-University-Encyclopaedia-Vol-1-Part-1.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತರಿಕ್ಷ ಸಂಶೋಧನೆ ಇಂದಿನ ಅಂತರಿಸಕ್ಷ ನಿಲ್ದಾಣಗಳಲ್ಲಿ ತುಂತುರುಸ್ನಾನ (ಶವರ್) ವ್ಯವಸ್ಧೆಯೂ ಇರುತ್ತದೆ.ಅಂತರಿಕ್ಷದಲ್ಲಿ ಭೂಮಿಯನ್ನು ಸುತ್ತುವ ಗಗನಯಾತ್ರಿಗಳಿಗೆ ಇದೀಗ ವರ್ಷಾನುಗಟ್ಟಲೆ ಆಹಾರ, ನೀರು ಹಾಗೂ ಇತರ ಅಗತ್ಯಗಳನ್ನು ಒದಗಿಸಲು ಸಾಧ್ಯವಿದೆ. ಮುಂದೆ ಶುಕ್ರ ಮತ್ತು ಮಂಗಳ ಗ್ರಹಗಳಿಗೆ ಹೋಗಬೇಕಾದರೆ ತಿಂಗಳುಗಟ್ಟಲೆ ಭೂಮಿಯಿಂದ ದೂರವಿರುವ ಪರಿಸರದಲ್ಲಿ ಸುಮಾರು ೫-೭ ತಿಂಗಳು ಅಥವಾ ಇನ್ನೂ ಹೆಚ್ಚು ಕಾಲ ಪ್ರಯಾಣ ಮಾಡಬೆಕಾಗುತ್ತದೆ.ಇಷ್ಟು ದಿನಗಳ ಕಾಲ ಮನುಷ್ಯನ ಆವಶ್ಯಕತೆಗಳನ್ನು ಪೂರೈಸಬೇಕಾದರೆ ನೌಕೆಯ ಭಾರ ಬಹಳ ಹೆಚ್ಚಾಗುತ್ತದೆ. ಆದ್ದರಿಂದ ಆವಶ್ಯಕತೆಗಳ ಪೂರೈಕೆಗೆ ಇತರ ಮಾರ್ಗಗಳನ್ನು ಯೋಚಿಸುತ್ತಾರೆ. ಡಕ್ ವೀಡ್ ಫ್ರಾಂಡ್ಸ್ ಸಸ್ಯಗಳು ಮನುಷ್ಯ ಹೊರಗೆಡಹಿದ ಇಂಗಾಲಾಮ್ಲವನ್ನುಪಯೋಗಿಸಿಕೊಂಡು ಆಮ್ಲಜನಕವನ್ನು ಕೊಡಬಲ್ಲುವು.ಅಲ್ಲದೆ ಇವುಗಳನ್ನು ಮನುಷ್ಯ ತಿನ್ನಲೂಬಹುದು. ಆದ್ದರಿಂದ ಈ ಸಸ್ಯಗಳ ಮೇಲೆ ಅಧ್ಯಯನ ನಡೆಯಲು ಪ್ರಾರಂಭವಾಯಿತು. ಹಾಗೆಯೇ ಮಾನವವಿಸರ್ಜನೆಗಳನ್ನು ಇತರ ಉಪಯೋಗಕಾರೀ ಅಂಶಗಳಾಗಿ ಮಾರ್ಪಡಿಸುವ ವಿಥಾನಗಳ ಕಡೆ ಈಗ ವಿಜಾನಿಗಳ ಗಮನ ಹರಿದಿದೆ.

ಮನುಷ್ಯ ಅಂತರಿಕ್ಷಕ್ಕೇರಿದಾಗ ಅವನು ನೋಡುವುದೆಲ್ಲುವು ವಿಶಾಲವಾದ ಮತ್ತು ಅಪರಿಚಿತವಾದ ಪ್ರದೇಶಗಳು. ಉಳಿದೆಲ್ಲ ಲೌಕಿಕ ವ್ಯವಹಾರಿಗಳಿಂದ ಆತನು ದೂರವಾಗಿ ಏಕಾಂತತೆಯನ್ನು ಅನುಭವಿಸುತ್ತಾನೆ. ಇದು ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಿ ಆತನ ನಿರ್ಣಾಯಕ ಶಕ್ತಿ ಕುಂದಬಹುದು .ಈ ತೊಂದರೆಯನ್ನು ತಪ್ಪಿಸಬೇಕಾದರೆ ಮೊದಲು ಆತನು ಬಹಳ ಧೈರ್ಯಶಾಲಿಯಾಗಿರಬೇಕು , ಸರಿಯಾದ ತರಬೇತಿಯನ್ನು ಪಡೆದಿರಬೇಕು, ಅಂತರಿಕ್ಷದಲ್ಲಿರುವಾಗ ಆತನೊಡನೆ ಸತತನವಾಗಿ ರೇಡಿಯೋ ಸಂಪರ್ಕವಿರಬೇಕು. ಇಬ್ಬರು ಮೂವರು ಪ್ರಯಾಣ ಮಾಡುವಾಗ ಈ ಏಕಾಂತತೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ.

ಅಂತರಿಕ್ಷಯಾನಕ್ಕೆ ಜನರನ್ನು ಆರಿಸಿಕೊಳ್ಳುವಾಗ ಬಹಳ ಕಠಿಣ ಪರೀಕ್ಷೆಗಳಿಗೆ ಅವರನ್ನು ಒಳಪಡಿಸಲಾಗುತ್ತದೆ. ಹೀಗಾಗಿ ಆರಿಸಿ ಬಂದವರು ಧೈಢಕಾಯರೂ ಧೈರ್ಯವಂತರು ಸ್ದಿರಮನೋಭಾವದವರೂ ತುರ್ತುಪರಿಸ್ದಿತಿಗಳಲ್ಲಿ ಸರಿಯಾದ ನಿರ್ಣಯಗಳನ್ನು ಮಾಡುವವರೂ ಆಗಿರುತ್ತಿದ್ದರು. ಆರಿಸಿ ಬಂದ ಮೇಲೆ ಅವರಿಗೆ ವರ್ಷಗಟ್ಟಲೆ ಕಠಿಣ ತರಬೇತಿಯನ್ನು ಕೊಡಲಾಗುತ್ತದೆ. ಇವುಗಳಲ್ಲಿ ಮುಖ್ಯವಾದುವು: ಬಲಗಲನ್ನು ತಡೆಯುವಿಕೆ; ತೂಕರಹಿತಸ್ಥಿತಿಯಲ್ಲಿರುವ ;ಉಷ್ಣವೈಪರೀತ್ಯಗಳನ್ನು ತಡೆಯುವಿಕೆ- ಮುಂತಾದುವು. ಈ ಎಲ್ಲವುಗಳನ್ನೂ ಏಕಾಂಗಿಯಾಗಿ ಹೆಚ್ಚುಕಾಲದವರೆಗೂ ಅವರು ಅನುಭವಿಸಿ ತಾಳಬೇಕಾಗಿತ್ತು.ಈ ರೀತಿಯ ಕಠಿಣ ತರಬೇತಿಯಿಲ್ಲದಿದ್ದರೆ ಇಂದು ಅಂತರಿಕ್ಷಯಾನ ಕೈಗೊಳ್ಳುವುದು ಕಷ್ಟ . ೧ ರಷ್ಯದೇಶದ ಮಾನವಸಹಿತ ಅಂತರಿಕ್ಷನೌಕೆಗಲಳು: ೧ ವಸ್ತಾಕ್ ಶೀರ್ಷಿಕೆಯ ಅಂತರಿಕ್ಷ ನೌಕೆಗಳು: ಮಾನವನನ್ನು ಮೊದಲು ಅಂತರಿಕ್ಷಕ್ಕೆ ಕಳುಹಿಸಿದ್ದು ರಷ್ಯ ೧೯೬೧ ಏಪ್ರಿಲ್ ೧೨ರಂದು ವಸ್ತಾಕ್ -೧ ಏಂಬ ನೌಕೆಯಲ್ಲಿ ಯೂರಿ ಗಗಾರಿನ್ ಭೂಮಿಯನ್ನು ಒಂದ ಸಾರಿ ಸುತ್ತಿ ಪ್ರಪಂಚದ ಮೊದಲ ಗಗನಯಾತ್ರಿಯಾದ .ಆತನ ಅಂತರಿಕ್ಷೆಯನ್ನಕ್ಕೆ ಬೇಕಾದ ಒಟ್ಟು ಸಮಯ ೧೦೮ ಮಿನಿಟುಗಳು, ೧೯೬೧ ಆಗಸ್ಟ್ ೬ರಂದು ಹರ್ ಮನ್ ಟಿಟೋವ್ ಎಂಬಾತ ವಸ್ತಾಕ್- ೨ರಲ್ಲಿ ಭೂಮಿಯನ್ನು ೧೭ ಸಾರಿ ಸುತ್ತಿ ಒಟ್ಟು ೨೬ಗಂಟೆ ೨ ಮಿನಿಟುಗಳ ಕಾಲ ಅಂತರಿಕ್ಷೆದಲ್ಲಿದ್ದ . ಇತರ ಪ್ರಯೋಗಗಳ ಜೊತೆಗ ಹವಾಮಾನ ಮತ್ತು ಭೂಬೌತಶಾಸ್ತ್ರಾಧ್ಯಾಯನಗಲನ್ನು ನಡೆಸಿದೆ.೧೯೬೨ ಆಗಸ್ಟ್ ೨ ರಂದು ಅಯ್ಂಡ್ರಿಯಸ್ ನಿಕೊಲೆಯೇವ್ ಎಂಬುವನನ್ನು ಚವಸ್ತಕ್ -೩ರಲ್ಲಿ ಅಂತರಿಕ್ಷಕ್ಕೆ ಹಾರಿಸಲಾಯಿತು. ಮಾರನೆಯ ದಿನ ಪಾವೆಲ್ ಪಾಪೋವಿಚ್ ಎಂಬಾತನನ್ನೊಳಗೊಂಡ ವಸ್ತಾಕ್-೪ನ್ನು ವಸ್ತಾಕ್-೩ರ ಪಧದಲ್ಲಿಯೆ ಹಾರಿಸಿದರು. ಇವೆರಡು ನೌಕೆಗಳೂ ಸುಮಾರು ೫ಕಿ.ಮೀ. ಹತ್ತಿರ ಬಂದುವು. ಇವಕ್ಕೆ ಪರಸ್ಪರ ರೇಡಿಯೋಸಂಪರ್ಕವಿತ್ತು. ನಿಕೊಲೆಯೇವ್ ಭೂಮಿಯನ್ನು ೬೪ ಸುತ್ತುಹಾಕಿ ೯೪ ಗಂಟೆ ೨೨ ಮಿನಿಟುಗಳು ಕಾಲ ಅಂತರಿಕ್ಷದಲ್ಲಿದ್ದ. ಪಾಪೋವಿಚ್ ೪೮ ಸುತ್ತುಹಾಕಿ ೭೦ ಗಂಟೆ ೫೦ ಮಿನಿಟುಗಳ ಕಾಲ ಅಂತರಕ್ಷದಲ್ಲಿದ್ದ ,ಇವರಿಬ್ಬರೂ ಸು. ೬ ಮಿನಿಟಿಗಳ ಅಂತರದಲ್ಲಿ ಮತ್ತು ಒಬ್ಬರಿಂದೊಬ್ಬರಿಗೆ ೨೪೦.ಕಿ ಮೀ. ಗಳ ದೂರದಲ್ಲಿ ಭೂಮಿಗೆ ಬಂದು ಇಳಿದರು. ೧೯೬೩ ಜೂನ್ ೧೪ರಲ್ಲಿ ವೆಲೆರಿ ಬೈಕೋವ್ಸ್ಕಿ ಎಂಬಾತನನ್ನು ವಸ್ತಾಕ್-೫ರಲ್ಲಿ ಹಾರಿಸಿದರು. ಎರಡು ದಿನಗಳ ಅನಂತರ ವ್ಯಾಲೆಂತೀನಾ ತೆರೆಷ್ಕೋವಾ ಎಂಬುವಳನ್ನು ವಸ್ತಾಕ್-೫ರಲ್ಲಿ ಭೂಮಿಯ ಸುತ್ತ ಕಹಾರಿಸಿದರು.ಬೈಕೋವಿಸ್ಕಿಯು ೮೧ ಸುತ್ತು ಹಾಕಿ ೧೧೯ಗಂಟೆ ೬ ಮಿನಿಟುಗಳ ಕಾಲ ಮತ್ತು ತೆರೆಷ್ಕೋವಾ ೪೮ಸುತ್ತು ಹಾಕಿ ೭೮ಗಂಟೆ ೫೦ ಮಿನಿಟುಗಳು ಕಾಲ ಅಂತರಿಕ್ಷದಲ್ಲಿದ್ದರು .ಈ ಪ್ರಯೊಗದಲ್ಲಿ ಅಂತರಿಕ್ಷ ಹಾರಾಟ ಮಹಿಳೆಯ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡಿದರು.ವ್ಯಾಲೆಂಟೀನಾ ಟೆರೆಷ್ಕೋವಾ ಪ್ರಪಂಚದ ಮೊದಳ ಮಹಿಳಾ ಅಂರತರಿಕ್ಷಯಾನಿ.ಅಲ್ಲಿಂದೀಚೆಗೆ ಅನೇಕ ಮಹಿಳೆಯರು ಅಂತರಿಕ್ಷಯಾನ ಮಾಡಿ ಬಂದಿದ್ದರೆ.

೨. ವಸ್ಕೋದ್ ಶೀರ್ಷಿಕೆಯೆ ಅಂತರಿಕ್ಷ ನೌಕೆಗಳು: ೧೯೬೫ ಅಕ್ಟೋಬರ್ ೧೨ ರಂದು ಮೂರು ಜನರನ್ನು ಹೊತ್ತು ವಸ್ಕೋದ್-೧ ಎಂಬ ನೌಕೆಯನ್ನು ಕಹಾರಿಸಲಾಹಿತು. ಇದರಲ್ಲಿ ಕಮ್ಯಾಂಡರ್ ವ್ಲದೀಮಿಯರ್ ಕಮರೋವ್, ವೈದ್ಯ ಬೊರಿಸ್ ಎಗರೋವ್ ಮತ್ತು ವಿಗ್ಗ್ನನಿ ಕಾಸ್ಟ್ಂಟಿನ್ ಫಿಯೋಕ್ಟಿಟೋವ್ -ಈ ಮೂವರು ಇದ್ದರು. ವಸ್ಕೋದ್ ನೌಕೆಗಳ ಪಧಗಳು ವಸ್ತಾಕ್ ಗಳ ಪಧಗಳಿಗಿಂತ ಎತ್ತರದಲ್ಲಿದ್ದವು. ಹಾರಾಟಗಳಲ್ಲಿ ಯಾನಿಗಳು ಅಂತರಿಕ್ಷ ಉಡುಪುಗಳನ್ನು ಧರಿಸಿರಲಿಲ್ಲ ವಸ್ಕೋದ್ಗಲು ಭೂಮಿಗೆ ಇಳಿಯುವಾಗ ಪ್ಯಾರಾಚೂಟ್ ಜೊತೆಗೆ ಒಂದು ರಾಕೆಟ್ ಯಂತ್ರವನ್ನು ಉಪಯೋಗಿಸಿದುವು.

೧೯೬೫ ಮಾರ್ಚ್೧೮ ರಂದು ವಸ್ಕೋದ್- ೨ ಎಂಬ ನೌಕೆಯಲ್ಲಿ ಪಾವೆಲ್ ಬೆಲ್ಯಾಯೇವ್ ಮತ್ತು ಅಲೆಕ್ಸಿಲಿಯನೋವ್ ಎಂಬುವರನ್ನು ಹಾರಿಸಿದರು. ಈ ಯಾನದ ನಡುವೆ ೧೨ ಮಿನಿಟುಗಳ ಕಾಲ ನೌಕೆಯಿಂದ ಹೊರಬಂದ ಲಿಯನೋವ್ ಅಂತರಿಕ್ಷದಲ್ಲಿ ತೇಲಿದ. ಲಿಯನೋವ್ ಹೊರಗೆ ಬಂದಾಗ ಆತನಿಗೂ ನೌಕೆಗೂ ಒಂದು 'ಹಗ್ಗ' ಕಟ್ಟಲ್ಪಟ್ಟಿತ್ತು. ಅಲ್ಲದೆ ಆತ ಒಂದು ಪ್ರತ್ಯ್ ಕ ಉಡುಪನ್ನು ಧರಿಸಿದ್ದ. ಆತನಿಗೆ ಬೇಕಾದ ಪ್ರಾಣರಕ್ಷಣಾಪರಿಕರಗಳೆಲ್ಲವನ್ನೂ ಆ ಉಡುಪುನಲ್ಲಿಯೇ ಅಳವಡಿಸಲಾಗಿತ್ತು. ಈ ಮೊದಲ 'ಅಂತರಿಕ್ಷ ನಡಿಗೆ'ಯನ್ನು ಟೆಲಿವಿಷನ್ ಮೂಲಕ ಭೂಮಿಗೆ ಪ್ರಸಾರಮಾಡಲಾಯಿತು.

೨. ಸೊಯೂಕಜ್ ಶೀರ್ಷಿಕೆಯ ಅಂಕರಿಕ್ಷ ನೌಕೆಗಳು; ೧೯೬೭ ಏಪ್ರಿಲ್ ೨೩ರಂದು ಸೊಯೂಜ್-೧ ಎಂಬ ನೌಕೆಯಲ್ಲಿ ವ್ಲದೀಮಿಯರ್ ಕಮರೋವ್ ಎಂಬಾತನನ್ನು ಹಾರಿಸಿದರು. ಆತ ಸು. ೨೪ ಗಂಟೆಗಳ ಕಾಲ ಅಂತರಿಕ್ಷದಲ್ಲಿ ಹಾರಾಡಿದ. ಆದರೆ ಭೂಮಿಗೆ ಮರಳುವಾಗ ಪ್ಯಾರಾಚೂಟ್ ಸರಿಯಾಗಿ ಬಿಚ್ಚಿಕೊಳ್ಳದೆ ನೌಕೆ ಹಾಗೆಯೇ ಕೆಳೆಗೆ ಬಿದ್ದು ಆತ ಮರಣಹೊಂದಿದ.