ಪುಟ:Mysore-University-Encyclopaedia-Vol-1-Part-1.pdf/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅನ್ತರಿಕ್ಷ ಸನ್ಷೂಧನೆ

ಜೆಮಿನಿ-೭ ನೌಕೆಯಲ್ಲಿ ತಮ್ಮ ೧೪ ದಿನದ ಹಾರಾಟವನ್ನು ಪ್ರಾರಂಭಿಸಿದ ಹನ್ನೂಂದು ದಿನಗಳ ಅನಂತರ ವಾಲ್ಟರ್ ಷಿರ್ರಾ ಮತ್ತು ಥಾಮಸ್ ಸ್ಟ್ಯಾಫೂರ್ಡ್ ಎಂಬುವರು ಜೆಮಿನಿ-೫ರಲ್ಲಿ ಹಾರಿ ಅಂತರಿಕ್ಷದಲ್ಲಿ ಜೆಮಿನಿ-೭ ಎಂಬ ನೌಕೆಯನ್ನು ಸಂಧಿಸಿಧರು. ಎರಡೂ ನೌಕೆಗಳು ಕೆಲವು ಗಜಗಳವರೆಗೂ ಹತ್ತಿರ ಹತ್ತಿರ ಬಂದು ಸು. ೬ ಗಂಟೆಗಳ ಕಾಲ ಒಂದರ ಸುತ್ತ ಇನ್ನೊಂದು ಸುತ್ತುತ್ತಲೂ ಒಂದನ್ನೊಂದು ಚಿತ್ರೀಕರಿಸುತಲೂ ಇದ್ದವು. ಮಾರನೆಯ ದಿನ ಜೆಮಿನಿ-೬ ಹಿಂತಿರುಗಿತು.

  ೧೯೬೬ ಮಾರ್ಚ್ ೧೬ರಂದು ನೀಲ್ ಎ. ಅರ್ಮ್ ಸ್ಟ್ರಾಂಗ್ ಮತ್ತು ಡೇವಿಡ್ ಆರ್. ಸ್ಕಾಟ್ ಎಂಬುವರು ಜೆಮಿನಿ-೮ರಲ್ಲಿ ಹಾರಿ ಈ ಮೊದಲೇ ವ್ರುತ್ತಾಕಾರ ಪಥದಲ್ಲಿ ಭೂಮಿಯನ್ನು ಸುತ್ತುತ್ತಿದ್ದ ಅಜೆನಾ ರಾಕೆಟ್ಟಗೆ ತಮ್ಮ ನೌಕೆಯನ್ನು ಸೇರಿಸಿದರು. ೧೯೬೬ ಜುಲೈ ೧೮ ರಂದು ಜಾನ್-ಡಬ್ಲ್ಯು.ಯಂಗ್ ಮತ್ತು ಮೈಕೆಲ್ ಕಾಲಿನ್ಸ್ ಜೆಮಿನಿ-೧೦ರಲ್ಲಿ ಹಾರಿ ಹಿಂದಿನಂತೆಯೇ ಅಜೇನಾ ರಾಕೆಟ್ಟನ್ನು ಕೂಡಿಕೊಡರು. ಅನಂತರ ಇಚ್ಛಿತ ದಿಕ್ಕಿಗೆ ತಿರುಗಿ, ಸೂಕ್ತ ಸಮಯದಲ್ಲಿ ಅಚೇನಾ ಕಾಲಿನ್ಸ್ ತನ್ನ ನೌಕೆಯಿಂದ ಹೊರಬಂದು ಅಚೇನಾದಲ್ಲಿಟ್ಟಿದ್ದ ಉಲ್ಕಾಸಂಗ್ರಹಣೆಯ ಪೆಟ್ಟಿಗೆಯನ್ನು ತೆಗೆದುಕೊಂಡು ತನ್ನ ನೌಕೆಗೆ ಹಿಂತಿರುಗಿದ.
  ೧೯೬೬ ಸೆಪ್ಟೆಂಬರ್ ೧೨ರಂದು ಚಾರಲ್ಸ್ ಕೊನ್ರಾಡ್ ಮತ್ತು ರಿಚರ್ಡ್ ಎಫ್. ಗೋರ್ಡಾನ್ ಜೆಮಿನಿ-೧೧ರಲ್ಲಿ ಹಾರಿ ತಮ್ಮ ಮೊದಲ ಪಥದಲ್ಲಿಯೇ ಅಜೀನಾವೋಂದನ್ನು ಸೇರಿಕೊಂಡರು.ಈ ಅಜೇನಾವನ್ನುಪಯೋಗಿಸಿಕೊಂಡು ತಮ್ಮ ಪಥವನ್ನು ೧೩೦೦ ಕಿಮೀ.ಗಳ ಎತ್ತರಕ್ಕೆ ಏರಿಸಿಕೊಂಡರು. ಗೋರ್ಡಾನ್ ನೌಕಿಯಿಂದ ಹೊರಬಂದ ನೌಕೆಯನ್ನೂ ಅಚೇನಾವನ್ನೂ ಒಂದು ಉದ್ದದ ಹಗ್ಗದಿಂದ ಸೇರಿಸಿದ. ಅನಂತರ ಎರಡೂ ಒಂದರ ಮೇಲೊಂದು ನಿಧಾನವಾಗಿ ಸುತ್ತಿದವು.
  ೧೯೬೬ ನವೆಂಬರ್ ತಿಂಗಳಲ್ಲಿ ಜೇಮ್ಸ್ ಲೋವೆಲ್ ಮತ್ತು ಎಡ್ವಿನ್ ಆಲ್ಡ್ರಿನ್ ಜೆಮಿನಿ-೧೨ರಲ್ಲಿ ಹಾರಿದರು. ಆಲ್ಡ್ರಿನ್ ನೌಕೆಯಿಂದ ಹೊರಬಂದು ೫ ಗ೦ಟೆ ೩೭ ಮಿನಿಟುಗಳ ಕಾಲ ಇದ್ದ. ಈತ ಇತರ ಚಿತ್ರಗಳೊಂದಿಗೆ ಆಗ ಜರುಗಿದ್ದ ಸೂರ್ಯಗ್ರಹಣದ ಚಿತ್ರಗಳನ್ನೂ ತೆಗೆದ. ಜೆಮಿನಿ-೧೨ ಸಹ ಅಜೇನಾ ರಾಕೆಟ್ಟಿನ ಹತ್ತಿರ ಹೋಯಿತು. ಜೆಮಿನಿ-೧೧ರಂತೆಯೇ ನೌಕೆ ಮತ್ತು ಅಚೇನಾ ಹಗ್ಗದಿಂದ ಕಟ್ಟಲ್ಪಟ್ಟು ಒಂದರ ಮೇಲೊಂದು ಸುತ್ತಿದುವು.
  ಮೇಲೆ ಹೇಳಿದ ಜೆಮಿನಿ ಹಾರಾಟಗಳಲ್ಲಿ ವಿವಿಧ ವಿಧಾನಗಳಿಂದ ನೌಕೆಗಳು ಒಂದುನ್ನೊಂದು ಸಂಧಿಸುವಂತೆ ಮಾಡಿದರು.
  iii. ಅಪಾಲೊ(ಅಪೊಲೊ) ಯೋಜನೆ: ಇದು ಮಾನವನನ್ನೊಳಗೊಂಡ ಅಂತರಿಕ್ಷಯಾನದ ಯೋಜನೆಗಳಲ್ಲೆಲ್ಲ ಅತ್ಯಂತ ಬೃಹತ್ತಾದ ಹಾಗೂ ಜಟಿಲವಾದ ಒಂದು ಯೋಜನೆ. ಮಾನವನನ್ನು ಚಂದ್ರನ ಮೀಲೆ ಕಾಲಿಡುವಂತೆ ಮಾಡಿ ಅನಂತರ ಅವನನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಬರುವಂತೆ ಮಾಡುವುದೇ ಇದರ ಮುಖ್ಯ ಉದ್ದೆಶ. ಈ ಯೋಜನೆಯನ್ನು ಕಾರ್ಯಗತ ಮಾಡಲು ಅದಕ್ಕನುಗುಣವಾಗಿ ಒಂದು ಅಂತತಿಕ್ಷನೌಕೆಯನ್ನು ಸಿದ್ಧಪಡಿಸುವುದರ ಅಗತ್ಯವನ್ನು ವಿಶೇಷಾಧ್ಯಯನಗಳಿಂದ ಮನಗಂಡು ಒಂದು ವಿಶೇಷ ನೌಕೆಯ ರಚನೆ ಸಾಧ್ಯವಾಯಿತು. ಇದೇ ಅಪೊಲೊ ಅಂತರಿಕ್ಷನೌಕೆ. ಈ ನೌಕೆ ಮೂರು ಭಾಗಗಳಿಂದ ಕೂಡಿದ್ದಾಗಿತ್ತು. ಅವು ಹೀಗಿವೆ:
 ೧)ಆಜ್ನಾಕೋಶ ಅಥವಾ ಕಮ್ಯಾಂಡ್ ಮಾಡ್ಯೂಲ್(ಸಿ.ಎಂ.): ಇದರಲ್ಲಿ ಮೂರು ಜನ ಕುಳಿತುಕೊಳ್ಳಲು, ಒತ್ತಡಕ್ಕೊಳಪಡಿಸಿದ ತಮ್ಮ ಉಡುಪುಗಳನ್ನು ತೆಗೆದುಹಾಕಿ ಆಹಾರ ಸೇವಿಸಲು, ಕೆಲಸ ಮಡಲು ಮತ್ತು ನಿದ್ರಿಸಲು ಅವಕಾಶವಿತ್ತು. ಇದಕ್ಕೆ ಐದು ಕಿಟಕಿಗಳಿದ್ದವು. ಇದರಲ್ಲಿ ಒಂದು ಗಣಕಯಂತ್ರವೂ ಸೇರಿದಂತೆ ವಿವಿಧ ರೀತಿಯ ಉಪಕರಣಗಳು ಮತ್ತು ನೌಕೆಯನ್ನು ನಡೆಸುವ ಎಲ್ಲಿ ರೀತಿಯ ನಿಯಂತ್ರಣಸಾಧನಗಳೂ ಇದ್ದವು. ಆದ್ದರಿಂದ ಆದುದರಿಂದ ಗಂಟೆಗೆ ೪೦,೦೦೦ ಕಿ.ಮೀ ವೇಗದಿಂದ ವಾತಾವರಣವನ್ನು ತಡೆಯುವಂತೆ ಇದರ ಹೊರಕ ವಚವನ್ನು ನಿರ್ಮಿಸಲಾಗಿತ್ತು. ಇದರ ಭಾರ ೫ ಟನ್ನುಗಳು, ಎತ್ತರ ೧೧ ಮತ್ತು ತಳದ ವ್ಯಾಸ ೧೩.
   ೨) ಸೇವಾಕೋಶ ಅಥವಾ ಸರ್ವಿಸ್ ಮಾಡ್ಯೂಲ್(ಎಸ್. ಎಂ): ಇದರಲ್ಲಿ ಒಂದು ದೊಡ್ಡ ರಾಕೆಟ್ಟು ಮತ್ತು ಸುತ್ತಲೂ ಅಳವಡಿಸಿರುವ ನಾಲ್ಕು ಸಣ್ಣ ರಾಕೆಟ್ಟುಗಳಿದ್ದವು. ಅವಕ್ಕೆ ಬೇಕಾಗುವ ನೋದಕಗಳನ್ನೂ ಇದರಲ್ಲೇ ತುಂಬಲಾಗುತ್ತಿತ್ತು. ಅಪಾಲೊ ತನ್ನ ಪಥವನ್ನು ಸರಿಪಡಿಸಿ ಕೊಳ್ಳಲು, ಬೀಕಾದಾಗ ತನ್ನ ವೇಗವನ್ನು ಕಡಿಮೆ ಅಥವಾ ಹೆಚ್ಚು ಮಾಡಿಕೊಳ್ಳಲು, ಈ ರಾಕೆಟ್ಟುಗಳನ್ನುಪಯೋಗಿಸಲಾಗುತ್ತಿತ್ತು. ನೌಕೆ ಭೂಮಿಯ ವಾತಾವರಣ ದೊಳಕ್ಕೆ ಪ್ರವೇಶಿಸುವ ಮುಂಚಿ ಇದನ್ನು ಸಿ. ಎಂ. ನಿಂದ ಬೇರ್ಪಡಿಸಲಾಗುತ್ತಿತ್ತು. ಸರ್ವಿಸ್ ಮಾಡ್ಯೂಲನ ಭಾರ ೨೪ ಟನ್ನುಗಳು. ಎತ್ತರ ೨೩' ಮತ್ತು ತಳದ ವ್ಯಾಸ ೧೩'
   ೩)ಚಂದ್ರಕೋಶ ಅಥವಾ ಲೂನಾರ್ ಮಾಡ್ಯೂಲ್( ಎಲ್. ಎಂ): ಇದೇ ಚಂದ್ರನ ಮೇಲೆ ಇಳಿಯುವ ಅಪಾಲೊ ನೌಕೆಯ ಭಾಗ. ಚಂದ್ರನಲ್ಲಿಳಿಯುವಾಗ ಅದರ ವೇಗವನ್ನು ಕಡಿಮೆ ಮಾಡಲು, ಪಥದಲ್ಲಿ ಅಕ್ಕಪಕ್ಕಕ್ಕೆ ಚಲಿಸುವ ಮತ್ತು ಚಂದ್ರನ ಮೇಲೆಂದ ಪುನ್ಃ ಹಾರಲು ಬೇಕಾಗುವ ರಾಕೆಟ್ಟುಗಳನ್ನು ಹಾಗು ಇಂಧನಗಳನ್ನು ಈ ಭಾಗದಲ್ಲಿ ಇದ್ದವು. ಚಂದ್ರನ ಮೇಲಿಳಿದು ನಿಲ್ಲಲು ಬೇಕಾಗುವ ನಾಲ್ಕು ಕಾಲುಗಲಳಿದ್ದವು. ಈ ಕಾಲುಗಳಲ್ಲಿ ಆಘಾತ ತಡೆಗಳಿದ್ದವು. ಇದರಲ್ಲಿ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಸಲಕರಣೆಗಳು, ಭೂಮಿಯೊಡನೆ ಮತ್ತು ಸಿ. ಎಮ್. ನೊಡನೆ ಸಂಪರ್ಕವೇರ್ಪಡಿಸುವ ರೇಡಿಯೋ ಅನಂತರ ಆ ಭಾಗ ಅಲ್ಲಿಂದ ಮೇಲೇರಿ ಚಂದ್ರನನ್ನು ಸುತ್ತುಹಾಕುತ್ತಿರುವ ಅಪಲೊವಿನ ಕೂಡಿಕೊಳ್ಳುತ್ತಿತ್ತು. ಇದರ ಭಾರ ೧೪ ೧/೨ ಟನ್ನುಗಳು, ಎತ್ತರ ಸು. ೨೦' ಮತ್ತು ತಳದ ವ್ಯಾಸ ೧೩'.
   ೪೩ ೧/೨ ಟನ್ನುಹಳಷ್ಟು ತೂಕವುಳ್ಳ ಅಪಾಲೊವನ್ನು ಚಂದ್ರನಲ್ಲಿ ಕಳುಹಿಸುವುದು ಸುಲಭದ ವಿಚಾರವಲ್ಲ. ಇದಕ್ಕಾಗಿ ೭೬ ಲಕ್ಷ ಪೌಂಡುಗಳ ನೂಕುಬಲವನ್ನು ಉತ್ಪಾಧಿಸಬಲ್ಲ ಸ್ಯಾಟರ್ನ್-೫ ಎಂಬ ರಾಕೆಟ್ ವಾಹನವನ್ನು ನಿರ್ಮಿಸಲಾಯಿತು. ೩ ಹಂತಗಳ ಈ ವಾಹನ ೩೬ ಮಹಡಿಹಳ ಎತ್ತರವಿದ್ದು(೩೬೩') ೩೩' ವ್ಯಾಸವಿತ್ತು ಈ ರಾಕೆಟ್ಟು ತನ್ನಲ್ಲಿರುವ ಇಂಧನವನ್ನು ಸೆಕೆಂಡರಿ ೧೩.೬ ಟನ್ನುಹಳಷ್ಟು ಉರಿಸುತ್ತ ೫೦೦ ಜೆಟ್ ವಿಮಾನಗಳಂತೆ ಹೆಚ್ಚು ಶಕ್ತಿಯನ್ನು ಪಡೆಯುತ್ತಿತ್ತು.
   ಮೊದಲು ಅಪೊಲೊವನ್ನು, ಸ್ಯಾರ್ಟನ್-೫ ರಾಕೆಟ್ಟಿನೊಡನೆ, ಭೂಕಕ್ಷೆಗೆ ಹಾರಿಸಲಾಗುತ್ತಿತ್ತು. ಅಲ್ಲಿಂದ ಸೂಕ್ತ ಸಮಯದಲ್ಲಿ ಸ್ಯಾರ್ಟನ್-೫ ಮತ್ತೆ ಕಾರ್ಯಾರಂಭಿಸಿ ಅವೆರಡೂ ಭೂಮೋಕ್ಷ ವೇಗವನ್ನು ಪಡೆದು ಭೂಮಿಯ ಆಕರ್ಷಣೆಯನ್ನು ತಪ್ಪಿಸಿಕೊಂಡು ಚಂದ್ರನತ್ತ ಪ್ರಯಾಣ ಬೆಳೆಸುತ್ತಿದ್ದವು. ಅಂತರಿಕ್ಷಯಾನಿಗಳನ್ನು ಹೊತ್ತ ಅಪೊಲೊ ಮಾರ್ಗಮಧ್ಯದಲ್ಲಿ ಸ್ಯಾಟರ್ನ್-೫ರಿಂದ ಕಳಚಿಕೊಂಡು ಮುಂದೆ ಸಾಗುತ್ತಿತ್ತು. ಸಾಗುವ ದಾರಿಯಲ್ಲಿ ಪಥವ್ಯತ್ಯಾಸಗಳೇನಾದರೂ ಇದ್ದರೆ ಅವನ್ನು ಒಂದೆರಡುಸಾರಿ ಸರಿಪಡಿಸಿಕೊಳ್ಳಲಾಗುತ್ತಿತ್ತು. ಸುಮಾರು ೬೫ ಗಂಟೆಗಳ ಪ್ರಯಾಣದ ಅನಂತರ ಅವರು ಚಂದ್ರನ ಹತ್ತಿರ ಬರುತ್ತಿದ್ದರು. ಆಗ ಚಂದ್ರನ ಗುರುತ್ವಾಕರ್ಷಣೆಗೊಳಗಾಗಿ ಅಪಲೊ ಚಂದ್ರನ "ಹಿಂಭಾಗಕ್ಕೆ" ಬರುತ್ತಿತ್ತು. ಹೀಗೆ ಬರುತ್ತಿರುವಾಗ ಅಪಾಲೊವನ್ನು ಹಿಂದಕ್ಕೆ ತಿರುಗಿಸಿ ಸರಿಯಾದ ಸಮಯದಲ್ಲಿ ಅದರ ರಾಕೆಟ್ಟ್ಟನ್ನುರಿಸಿ ವೇಗವನ್ನು ಕಡಿಮೆ ಮಾಡಲಾಗುತ್ತಿತ್ತು. ಆದ್ದರಿಂದ ಅಪಾಲೊ ಚಂದ್ರಾನನ್ನು ಸುತ್ತತೊಡಗುತ್ತಿತ್ತು.
  ಅನಂತರ ಸಿ. ಎಂ. ಒಳಗಿಂದ ಇಬ್ಬರು ಯಾನಿಗಳು ಎಲ್. ಎಂ. ಒಳಕ್ಕೆ ನುಸುಳುತ್ತಿದ್ದರು. ಅಲ್ಲಿ ಎಲ್. ಎಂ.ನ ಉಪಕರಣಗಳೆಲ್ಲವೂ ಸರಿಯಾಗಿವೆಯೇ ಎಂದು ನೋಡಿಕೊಳ್ಳುತ್ತಿದ್ದರು. ಅನಂತರ ಎಲ್. ಎಂ. ತನ್ನ ರಾಕೆಟ್ಟನ್ನುರಿಸಿ ಸಿ.ಎಂ.ನಿಂದ ಬೀರ್ಪಟ್ಟು ಆತ ದೀರ್ಘವೃತ್ತಪಥದಲ್ಲಿ ಸುತ್ತುತ್ತ ಚಂದ್ರನನ್ನು ಆ ಆಕಾಶಕಾಯದ ಮೇಲ್ಮೈಯಿಂದ ೧೬ ಕಿ.ಮೀ. ಎತ್ತರದವರೆಗೆ ಸಮೀಪಿಸುಟತ್ತಿತ್ತು. ಪುನಃ ತನ್ನ ಎಂಜಿನ್ನುಗಲನ್ನುರಿಸಿ ಎಲ್. ಎಂ ಚಂದ್ರನ ಮೇಲಿಳಿಯತ್ತಿತ್ತು.
   ಆನಂತರ ಯನಿಗಳು ತಮ್ಮ ಅಂತರಿಕ್ಷ ಉಡುಪನ್ನು ಧರಿಸಿ ಎಲ್. ಎಂ.ನಿಂದ ಹೊರಬಿದ್ದು ಚಂದ್ರನ ಮೇಲೆ ಕಾಲಿಡುತ್ತಿದ್ದರು. ಅಲ್ಲಿಯ ಕಲ್ಲುಗಳು ಮತ್ತು ಧೂಳನ್ನು ಸಂಗ್ರಹಿಸುತ್ತಿದ್ದರು. ಸಾಧ್ಯವಾದಲ್ಲಿ ಕೆಲವೆಡೆ ಕಂಪನಮಾಪಕ, ಕಾಂತ ಮಾಪಕ ಮತ್ತು ಲೇಸರ್ ಪ್ರತಿಫಲಕವನ್ನು ನೆಡುತ್ತಿದ್ದರು. ಇವು ಬಹಳ ಕಾಲದವರೆಗೆ ತಮ್ಮ ಮಾಪನ ಮಾಹಿತಿಗಳನ್ನು ಭೂಮಿಗೆ ಕಳುಹಿಸಿದವು. (ಲೇಸರ್ ಫಲಕಗಳು ಇನ್ನೂ ಬಳಕೆಯಲ್ಲಿವೆ). ಯಾನಿಗಳು ಇನ್ನೂ ಸ್ವಲ್ಪ ಕಾಲ ಚಂದ್ರನ ಮೇಲೆ ಕೆಲವು ಪ್ರಯೋಗಗಳನ್ನು ನಡೆಸಿ ಎಲ್. ಎಂ.ಗೆ ಹಿಂತಿರುಗುತ್ತಿದ್ದರು. ಕೆಲವು ಗಂಟೆಹಳ ನಿದ್ರೆಯ ಆನಂತರ ಮೇಲೆ ಸುತ್ತುತ್ತಿರುವ ಮಾತೃನೌಕೆಯನ್ನು (ಸಿ.ಎಂ. ಮತ್ತು ಎಸ್. ಎಂ.) ಸೇರಲು ಸಿದ್ಧವಾಗುತ್ತಿದ್ದರು.