ಪುಟ:Mysore-University-Encyclopaedia-Vol-1-Part-2.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರ್ಥಕ್ರಿಯಕಾರಿತ್ವ-ಅರ್ಥ-ದರ್ಶನ

ಒಂದು ಅರ್ಥವನ್ನು ನಿರೂಪಿಸಲು ಎರಡು ಮಾನಸಿಕ ಪ್ರಕ್ರಿಯೆಗಳುಬೇಕು.ಒಂದು ಪ್ರತ್ಯಕ್ಷಾನುಭವ;ಮತ್ತೊಂದು ಪ್ರತಿರೂಪ.ಸಂವೆಧನೆ ಅಥವಾ ಪ್ರತಿರೂಪ ಜೊತೆ ಗೋಡಿದ್ದೇ ಆದರೆ ಒಂದು ಪ್ರತ್ಯಕ್ಷಾನುಭಾವದ ರೂಪದಲ್ಲಿ ಅಥವಾ ಒಂದು ರೂಪದಲ್ಲಿ ಅದಕ್ಕೆ ಅರ್ಥಪ್ರಪ್ತವಗುತ್ತದೆ.

ನೋಬಲ್ ಎ೦ಬಾತ ಎರಡು ಶಬ್ದಗಳ ನಡುವೆ ಇರುವ ವಿಲಕ್ಷಣವಾದ ಸಂಬಂಧವೇ ಅರ್ಥವೆ೦ದು ಪರಿಭಾವಿಸಿಕೊ೦ಡು,ಅರ್ಥದ ವಾಚ್ಯಾರ್ಥಗಳಿಗಿ೦ತಲೂ ಲಕ್ಷ್ಯಾರ್ಥಗಲಿಗೀ ಹೆಚ್ಹು ಪ್ರಾಶಸ್ತ್ಯವನ್ನು ಕೊಟ್ಟಿದಾನೆ.ಎಂದರೆ,ಅನೇಕ ವ್ಯಂಗ್ಯಾರ್ತಗಳುಳ್ಳ ಶಬ್ದಕ್ಕಿಂತ ಹೆಚ್ಚು ಅರ್ಥವತ್ತಾದುದು ಎಂದು ಭಾವಿಸಿದ್ದಾನೆ.ಆತ ತಾತ್ಪರ್ಯದ ತಾರ್ಕಿಕ ಸಂಬಂಧ ಮಾನಸಿಕವಾದ ಸಂಬಂಧಿಕ ಪ್ರಕ್ರಿಯೇಯೋದನೆ ಸಂಗತವಾಗುತ್ತದೆಯೆಂದು ವಾದಿಸಿದ.ಒಂದು ಅರ್ಥವನ್ನು ಅದಕಿಂತಲೂ ಹೆಚ್ಚಾಗಿ ಅದರ ಪೂರ್ಣತೆಯನ್ನು ಆ ಪದ ಕೊಡುವ ಸಂಬಂಧಗಳನ್ನು ಎಣಿಕೆ ಮಾಡಿ ಅಳೆಯಲು ಪ್ರಯತ್ನಿಸಿದ.

ಮತ್ತೊಂದು ಗಮನಾರ್ಹವಾದ ಪ್ರಯತ್ನ ಒಸಗುಡ್ ನ ಶಬ್ದಾರ್ಥ ವ್ಯತ್ಯಸಗಳ್ಳನ್ನು ಅಳೆಯುವ ಮಾಪಕ.ಇದು ಭಾವನೆಗಳ ಅರ್ಥದ ಅಳತೆಯನ್ನು ಪಡೆಯಲು ಯತ್ನಿಸುತ್ತದೆ.ಈ ಮಾಪನ ಪ್ರಕ್ರಿಯೆಯ ತಳದಲ್ಲಿ ಯಾವ ಭಾವವಿದೆಯೆಂದರೆ,ಪದಾರ್ಥದಲ್ಲಿ ಅದಕಿಂತ ಸೂಕ್ಷ್ಮವಾದ,ವಿವರಿಸಲು ಕಷ್ಟವಾದ ಅರ್ಥಗಳೂ ಇವೆ ಎಂಬುದು.ಈ ಒಳಾರ್ತಗಳನ್ನು ಅಳೆಯುವುದಕ್ಕೆ ಒಂದು ಹೊಸ ದಾರಿಯನ್ನು ಹಿಡಿಯಲಾಗಿದೆ.ಉದಾಹರಣೆಗೆ,ಅಡಿಗೆ ಮನೆ ಎಂಬುದಕ್ಕೆ ಇಪತ್ತು ಗುಣವಾಚಕಗಳನ್ನು ಉಪಯೋಗಿಸಬಹುದು.ಒಳ್ಳೆಯದು-ಕೆಟ್ಟದು,ಚಿಕ್ಕದು-ದೊಡ್ಡದು,ಶುಚಿಯಾದ್ದು-ಕೊಳಕಾದ್ದು-ಹೀಗೆ.ಈ ಭಿನ್ನ ಭಿನ್ನ ಗುನವಾಚಕಗಳ ಸಪ್ತಾಮ್ಷಿಕ ಸೂಚನಾಕ್ಷೆಯಲ್ಲಿ ಯಾವ ಅಂಕಗಳನ್ನು ಕೊದುತ್ತವೋ ಅವುಗಳ ಮೊತ್ತದ ನಮೂನೆ ಅವನ ಅರ್ಥವನ್ನು ಸೂಚಿಸುತ್ತದೆ.ಇದರ ಮೇಲಿನ ಸಾಮಾನ್ಯ ಟೇಕೆ ಏನೆಂದರೆ,ಈ ಶಬ್ದಾರ್ಥ ವ್ಯತ್ಯಾಸಗಳ ಪ್ರಮಾಣಗಳು ಅದರ ಅರ್ಥವನ್ನು ತಿಳಿಸದೇ ಅದರ ರಾಗೂದ್ಭೋಧಕ ಪ್ರಭಾವವನ್ನು ಮಾತ್ರ ತಿಳಿಸುತ್ತದೆ ಎಂದು.

ಅರ್ಥ ಅಳೆಯುವ ಈ ಪ್ರಯತ್ನಗಳು ವಿಶ್ವಾಸಾರ್ಹವಗಿಯೂ ಉಪಯುಕ್ತವಾಗಿಯೂ ಇವೆ.ಅರ್ಥಕ್ಕೆ ಅನೇಕ ಪರಿಮಾಣಗಳಿವೆ.ಆದ್ದರಿಂದ ಅದನ್ನು ಅಳೆಯುವ ಕ್ರಮಗಳು ಮುಂದುವರಿಯಬೇಕು.ಅರ್ಥದ ಅರ್ಥಗಳನ್ನು ವಿಂಗಡಿಸಿ ನೋಡಿ ತಿಳಿಯದಿದ್ದರೆ ಬಹುಮಟ್ಟಿನ ಅಪಾಯ,ವೈಮನಸ್ಯ, ತೊಂದರೆಗಳು ತಪ್ಪಿದ್ದಲ್ಲ.

ಅರ್ಥಕ್ರಿಯಾಕಾರಿತ್ವ: ಸತ್ ಎಂಬ ಪದದ ಸ್ವರೂಪವೆಂಥದ್ದು ಎಂಬುದನ್ನು ವಿವರಿಸುವಾಗ ಈ ವಾದ ಬರುತ್ತದೆ.ಈ ಪ್ರಶ್ನೆಗೆ ಸ್ಥೂಲವಾಗಿ ಎರಡು ಬಗೆಯ ಉತ್ತರಗಳಿವೆ.ಹುಟ್ಟು ಸಾವಿಲ್ಲದೆ ಯಾವ ವಿಧವಾದ ಬದಲಾವಣೆಗೂ ಒಳಪಡದೆ ಎಲ್ಲಾ ಕಾಲಕ್ಕೂ ಸ್ಥಿರವಾಗಿ ಇರುವುದೇ ಸತ್ ಎಂಬುದು ಒಂದು.ಭಾರತದಲ್ಲಿ ವೇದಾಂತಿಗಳು,ಪಾಶತ್ಯರಲ್ಲಿ ಪಾರ್ಮನಿಡೀಸ್,ಪ್ಲೇಟೋ,ಹೇಗೆಲ್ ಮೊದಲಾದರು ಈ ರೀತಿಯಾದ ಉತ್ತರ ಕೊಡುತ್ತಾರೆ.ಇದಕ್ಕೆ ಪ್ರತಿಯದದ್ದು ಇನ್ನೊಂದು;ಸತ್ ಎಂದರೆ ಸದಾ ಕ್ರಿಯಕಾರಿಯಗಿರುವುದೇ ವಿನಾ ಏನು ಮಾಡದೆ ತಟಸ್ಥವಾಗಿರುವುದು ಸತ್ ಎಂದು ಕರೆಯಿಸಿಕೊಳ್ಳಲು ಯೋಗ್ಯವಲ್ಲ ಎಂಬುದು.ಭಾರತೀಯರು ಮುಖ್ಯವಾಗಿ ಕ್ರಿಯಪ್ರಧಾನತತ್ವವನ್ನು ಅನುಸರಿಸುವ ಭೌದ್ಧರು ಜೈನರು ಪೂರ್ವಮೀಮಾಮ್ಸಕರು ಪಾಶತ್ಯದಲ್ಲಿ ಹೆರಾಕ್ಲಿಟಸ್,ಪೊಟಾಗರಾಸ್,ವಿಲಿಯಂ ಜೇಮ್ಸ್,ಜಾನ್ ಧ್ಯುಯಿ,ಏನ್. ಶಿ. ಎಸ್.ಶಿಲ್ಲರ್ ಮೊದಲಾದವರು ಕ್ರಿಯಾಕಾರಿತ್ವ ತತ್ವವನ್ನು ಎತ್ತಿ ಹಿಡಿದವರು.ಇವರೆಲ್ಲರೂ ಕ್ರಿಯಾಕಾರಿಯಾಗಿರುವುದೇ ಸತ್ ಎಂದು ಒಪ್ಪಿದರೂ ಸತ್ಯದ ಸ್ವರೂಪ ಮತ್ತು ಪ್ರಮಣವೆನು ಎಂಬ ವಿಚಾರದಲ್ಲಿ ಭಿನಾಭಿಪ್ರಾಯಗಳಿವೆ.ಹೊರ ವಸ್ತುವಿಗೆ ಸಂವಾದಿಯಾದ ಜ್ಞಾನವೇ ಸತ್ಯದ ಸ್ವರೂಪ ಎಂದು ವಾಸ್ತವವಾದಿಗಳೆಲ್ಲರು ಒಪುತ್ತಾರೆ.ಬೌ ದ್ದರಲ್ಲಿ ವಿಗ್ನಾನವಾದಿಗಳು ಮಾತ್ರ ಇದನ್ನು ಒಪ್ಪುವುದಿಲ್ಲ.ಫಲಕಾರಿಯಾದುದೆ ಸತ್ಯವೆಂದು ಹೇಳುತ್ತಾರೆ.ವೈಷೆಶಿಕರು ವಾಸ್ತವವಾದಿಗಳಾದುದರಿನ್ದ ಸತ್ಯದ ಸ್ವರೂಪ ಫಲವೆಂದು ಒಪ್ಪುವುದಿಲ್ಲ.ಸಕ್ಕರೆ ಎಂದು ರುಜುವತ್ತಾದಬೇಕಾದರೆ ಅದು ನೀರಿನಲ್ಲಿ ಕರಗಬೇಕು.ಬಾಯಲ್ಲಿ ಹಾಕಿಕೊಂಡರೆ ಸಿಹಿಯಾಗಿರಬೇಕು.ಆದ್ದರಿಂದ ಸತ್ಯವನ್ನು ಸ್ಥಾಪಿಸುವುದು ಅದರಿಂದ ಉಂಟಾಗುವ ಫಲದಿಂದ ಎನ್ನುತಾರೆ.ಇದು ಪಾಸ್ಚ್ತ್ಯರಲ್ಲಿ ಎಸ್,ಸೀ .ಎಸ್.ಶಿಲ್ಲರ್ ಅಪ್ಪಟ ಫಲವಾಡೀ.ಜಾನ್ ದ್ಯುಯಿಯ ವಾದ ವಿಜ್ನಾನಿಕ ಮಾರ್ಗಕ್ಕೆ ಸಂಗತವಾದ ಫಲವಾದ.

ಅರ್ಥ-ದರ್ಶನ : ಅರ್ಥ ಎಂಬ ಶಬ್ಧಕ್ಕೆ ಅನೆಕಾರ್ಥಗಳು ಬಳಕೆಯಲ್ಲಿವೆ.ವಿಶಾಲಾರ್ಥದಲ್ಲಿ ಬಳಸಿದರೆ,ಮತ್ತೊಂದು ಸೂಚಿಸುವ,ಆದರೆ ಪ್ರತಿಕ್ರುತಿಯಾಗಿರದ,ಯಾವುದೇ ಒಂದು ವಸ್ತು ಇಲ್ಲವೇ ಕ್ರಿಯೆ ಅರ್ಥವತ್ತೆನ್ನಬಹುದು.ಅರ್ಥತ್ವದಿಂದಾಗಿ ಅದನ್ನು ಸಂಜ್ಞೆ ಅಥವಾ ಸಂಕೇತವನ್ನಲುಬಹುದು.ಭಾವಚಿತ್ರ ಒಬ್ಬನನ್ನು ಚಿತ್ರಿಸಿದರೂ ಅವನು ಅದರ ಅರ್ಥವಲ್ಲ;ಅವನ ವರ್ಣನೆಗಳ ಅರ್ಥ ಅವನಾಗಬಹುದು.ಮನಬಂದಂತೆ ಒಂದನ್ನು ಇನ್ನೊಂದಕ್ಕೆ ಪ್ರತೀಕವಗಿಸಬಹುದು.ತ್ರಿವರ್ಣದ್ವಜ ಭಾರತ ರಾಷ್ಟ್ರವನ್ನು ಪ್ರತಿನಿಧಿಸುವುದು ಉದಾಹರಣೆ.ಕೆಲವೊಂದು ಸ್ವಾಭಾವಿಕ ಸಂಬಂಧಗಳನ್ನು ಅನುಲಕ್ಷಿಸಿಯೂ ಪ್ರತೀಕಗಳನ್ನು ಬಳಸಬಹುದು.ಉದಾಹರಣೆಗೆ,ಉಂಗುರ ವಿವಾಹಕ್ಕೆ ಪ್ರತೀಕವಗಿರುವಂತೆ,ಕೆಲವೊಂದು ವಸ್ತುಗಳಿಗೆ ತಮ್ಮ ಸ್ವರೂಪಕ್ಕೆ ಸಂಬಂಧಿಸಿದ ಆದರೆ ಅರ್ಥಕ್ಕೆ ಮಾತ್ರ ಸಂಬಂಧಿಸಿದ ಹೆಸರುಗಳೂ ಇರುವುದುಂಟು.ಉದಾಹರಣೆ-ಮುಟ್ಟಿದರೆ ಮುನಿ.ಹೀಗೆ ವಿಶಾಲಾರ್ಥದಲ್ಲಿ ಎಲ್ಲ ಕಲೆಗಳ ,ವಿಜ್ಞಾನಗಳ,ಗುರಿಯು ವಸ್ತುಗಳ ಅರ್ಥ ಶೋಧನೆಯೇ ಎಂದರೆ ಸಲ್ಲುತ್ತದೆ.ಮನುಷ್ಯ ಪ್ರಾಣಿ ಇಲ್ಲದಿದ್ದರೂ ಧ್ವನಿಗಳು ವಸ್ತುಗಳು ಜಗತಿನಲ್ಲಿ ಇರಬಲ್ಲವು;ಆದರೆ ಅದು ಅರ್ಥವತ್ತಾದ ಪ್ರತೀಕವೆನಿಸುವುದು ಮನುಷ್ಯ ಬುದ್ದಿ ಇಂದ ಮಾತ್ರ,ಆದ್ದರಿಂದ ಎಲ್ಲ ಮನುಷ್ಯನ ವಿಚಾರಗಳು ಕಲ್ಪನೆಗಳೂ ಅರ್ಥದ ಪ್ರಕಾರ ಲೇಶಗಳೇ ಸರಿ.ಆದರೆ ಅತಿ ಪ್ರಸಿದ್ದವೂ ಅತಿ ಪರಿಚಿತವೂ ಆದ ಪ್ರತೀಕವೆನ್ದರೆ ಭಾಷೆಯೊಂದೇ.ಆಧರಿಂದ ತತ್ತ್ವಶಾಸ್ತ್ರದಲ್ಲಿ ವಿವೇಚಿಸುವ ಅರ್ಥ ಭಾಷೆಗೆ ಮಾತ್ರ ಸಂಬಂಧಿಸಿದ್ದು. ತರ್ಕಶಾಸ್ತ್ರದಲ್ಲ್ಕಿ ಅರ್ಥವನ್ನು ಎರಡು ಬಗೆಗಳಾಗಿ ವಿನ್ಗದಿದಸಿದ್ದರೆ:೧.ಕರ್ತೃಪದ ಇಲ್ಲವೆ ಕ್ರಿಯಾಪದಕ್ಕಿರುವ ಅನ್ವಯವ್ಯಾಪ್ತಿ.ಯಾವುದಕ್ಕೆ ಒಂದು ಅನ್ವಯಿಸುವುದೆ೦ಬ ಜ್ಞಾನವಿದ್ದರೆ ಈ ಬಗೆಯ ಅರ್ಥಜ್ಞಾನವಿದೆಯೆನ್ನಬಹುದು.ರಾಮ ಎ೦ಬ ಪದ ದಶರಥಪುತ್ರನೆ೦ಬ ವ್ಯಕ್ತಿಗೆ ಅನ್ವಯಿಸುವುದೆ೦ಬ ಪರಿಜ್ಞಾನವೇ ಅವರ ವ್ಯಾಪ್ತಿ ನಿರ್ದೇಶಕ ಅರ್ಥ ೨. ಒಂದು ಪದದಿ೦ದ ಅಭಿಪ್ರೇತವಗಿರುವ ಅರ್ಥಸ್ವರೂಪ.ಪದ ಸೂಚಿಸುವ ಗುಣ ಹಾಗು ಲಕ್ಷಣಾದಿಗಳು ಇದರಲ್ಲಿ ಸೇರುತ್ತವೇ.ಇದು ಶ್ರೋತೃಗಳಿಗೆ ಬೇರೆ ಬೇರೆಯಾಗಿದ್ದರೆ ವೈಯಕ್ತಿಕ ಅರ್ಥ ಎಲ್ಲರಿಗೂ ಸಮಾನವಾಗಿರುವಾಗ ಸಾ೦ಕೇತಿಕ ಅರ್ಥ.ಮನುಷ್ಯ ಎ೦ದರೆ ಆಲೋಚನಾ ಸಮರ್ಥವುಳ್ಳ ಪ್ರಾಣಿಎ೦ಬುದು ಇದ್ದಕ್ಕೆ

ಉದಾಹರಣೆ. ತತ್ತ್ವಶಾಸ್ತ್ರದಲ್ಲಿ ಅರ್ಥಮೀಮಾ೦ಸೆಯನ್ನು ಕುರಿತು ಅನೇಕ ಸಿದ್ಧಾಂತಗಳು ಹುಟಿವೆ.ಪುರೋಭಾಗಿ ಎಂದರೆ ಧೋಷಗಳನ್ನು ಮಾತ್ರ ಎತ್ತಿ ಹಿಡಿಯುವವನು ಎಂದರ್ಥವೆ೦ಬ ವಾಕ್ಯವನ್ನು ನೋಡೋಣ.ಇಲ್ಲಿ ಅರ್ಥದ ಸ್ವರೂಪವೇನು? ಶಬ್ದದ ಶ್ರೋತೃಗ್ರಾಹ್ಯ.ಅ೦ಶವಾಗಲಿ,ಅದರ ಪಿರಿಣಾಮ ವಿಶೇಷವಾಗಲಿ,ಅರ್ಥವೆನಿಸಲಾರದೆ೦ಬುದು ಸ್ಪಷ್ಟ.ಶಬ್ದಾ೦ಶದಿಒದಾಚೆಗೆ ಅದು ಸೂಚಿಸುವೆ ಅರ್ಥವೊ೦ದಿರಬೇಕೆ೦ದಾಯಿತು.ಇದಾವುದು?ಇದೇ ತಾತ್ತ್ವಿಕರ ಮೀಮಾ೦ಸೆಗೆ ಮೂಲಸಮಸ್ಯೆ.

ಈ ಸಮಸ್ಯೆಯ ಪರಿಹಾರಕ್ಕೆ ಪಾಶ್ಚತ್ಯ ತತ್ತ್ವಶಾಸ್ತ್ರದಲ್ಲಿ ಶೋಧಿಸಿರುವ ವಾದಗಳನ್ನು ಮುಖ್ಯವಾಗಿ ಮೂರು ಗು೦ಪುಗಳಾಗಿ ವರ್ಗೀಕರಿಸಬಹುದು. ೧.ಅನ್ವಿತ ವಸ್ತುವೇ ಶಬ್ದದ ಅರ್ಥವೆ೦ಬ ಬಹುಪ್ರಚಲಿತ ವಾದವನ್ನು ಸಾನ್ವಯಸಿದ್ಧಾ೦ತ(ರೆಫರೆರೆನ್ಷಿಯಲ್ ಥಿಯರಿ)ಎನ್ನಬಹುದು.ರಾಮ ಮು೦ತಾದ ಅ೦ಕಿತನಾಮಗಳಿಗೆ ಅನ್ವಿತವ್ಯಕ್ತಿಯೇ ಅರ್ಥವೆ೦ದು ಇದರ ಆಶಯ.ಅನ್ವಿತ ವಸ್ತು ಸ೦ಬ೦ಧ ಮಾತ್ರ ಅರ್ಥವೆ೦ಬ ವಿವರಣೆಯೂ ಸಿದ್ಧಾ೦ತದ ಪ್ರಕಾರಾ೦ತರವೇ.ಈ ವಾದದ ಪುರಸ್ಕರ್ತಲ್ಲಿ ಜೆ.ಎಸ್.ಮಿಲ್ (ಎ ಸಿಸ್ಟಮ್ ಆಫ಼್ ಲಾಜಿಕ್),ಬರ್ಟ್ರೆ೦ಡ್ ರಸೆಲ್ (ಎನ್ ಇನ್ ಕ್ವೈರಿ ಇ೦ಟು ಮೀನಿ೦ಗ್ ಅ೦ಡ್ ಟ್ರೂತ್), ರುಡೋಲ್ಫ್ ಕಾರ್ ನಾಸ್ (ಇಂಟ್ರೊಡಕ್ಷನ್ ಟು ಸೆಮ್ಯಾ೦ಟಿಕ್ಸ್)ಇವರನ್ನು ಉಲ್ಲೇಖಿಸಬಹುದು.ಭಿನ್ನ ಶಬ್ದಗಳು ಸೀತೆಯ ಗ೦ಡ,ಭರತನ ಅಣ್ಣ ಇತ್ಯದಿ ಒಬ್ಬನೆ ವ್ಯಕ್ತಿಗೆ ಅನ್ವಯಿಸಬಹುದಾದ್ದರಿ೦ದ,ಇವೆಲ್ಲ ಸಮಾನರ್ಥವೆನ್ನುವುದು ಅಷ್ಟ ಸರಿಯಾಗುವುದಿಲ್ಲ.ಶಬ್ದಭೇದದಿ೦ದ ಅರ್ಥಭೇದವನ್ನು ಒಪ್ಪದೆ ಗತ್ಯ೦ತರವಿಲ್ಲ.ಅನ್ವಯಿಸುವಿಕೆ ಒ೦ದು ಶಾಬ್ದಿಕಕ್ರಿಯೆಯಾದರೆ,ಅರ್ಥಬೋಧಕತೆ ಒಬ್ಬ ವಕ್ತೈವಿನ ಕಾರ್ಯವೆ೦ಬುದನ್ನು ಮರೆಯುವ೦ತಿಲ್ಲ.ಅನ್ವಯಗಳಿಗೆಲ್ಲ ಅನ್ವಿತಬಾಹ್ಯಾರ್ಥವನ್ನು ನಿರ್ದೆಶಿಸುವುದೂ ಅಶಕ್ಯ.ಇಡಿಯ ವಾಕ್ಯ ವೊ೦ದಕ್ಕೂ ಇದೇ ರೀತಿ ಅನ್ವಿತವಾದ ಬಾಹ್ಯಾರ್ಥವನ್ನು ತೋರಿಸುವುದು ಹೇಗೆ?

ಆದ್ದರಿ೦ದ ಅಭಿಪ್ರಾಯಸಿದ್ಧಾ೦ತ (ಐಡಿಯೇಷನಲ್ ಥಿಯರಿ) ಎ೦ಬ ಮತ್ತೋ೦ದು ಅರ್ಥವಿವರಣೆ ಹೊರಡುವ೦ತಾಯಿತು.ಜಾನ್ ಲಾಕ್ (ಎಸ್ಸೆ ಕನ್ನರ್ನಿ೦ಗ್ ಹ್ಯೂಮನ್ ಅ೦ಡರ್ ಸ್ಟ್ಯಾ೦ಡಿ೦ಗ್)ಈ ವಾದದ ಮುಖ್ಯ ಪ್ರವರ್ತಕ.ಭಾಷೆಯಿರುವುದೇ ಅಭಿಪ್ರಾಯಗಳು.ವಕ್ತೈತನ್ನ ವೈಯಕ್ತಿಕ ವಿಚಾರಗಳ ಪ್ರಕಟಣೆಗಾಗಿ ಭಾಷೆಯನ್ನು ಬಳಸುತ್ತಾನೆ.ಇದೇ ಅಭಿಪ್ರಾಯ ಶ್ರೋತ್ರುವಿನಲ್ಲೂ ಮೂಡಿದಾಗ ಅರ್ಥಗ್ರಾಹ್ಯವಾದ೦ತೆ.ಈ ಸಿದ್ಧಾ೦ತದ ಪರಿಷ್ಕ್ರತ ರೂಪಗಳು ಹೆನ್ರಿ ಲಿಯೊನಾರ್ಡ್ ನ ಎನ್ ಇ೦ಟ್ರೋಡಕ್ಷನ್ ಟು ಪ್ರಿನ್ಸಿಪಲ್ ಆಫ಼್ ರೀಸನ್ ಇತ್ಯಾದಿಗಳಲ್ಲಿ ಕಾಣಬರುತ್ತದೆ.ಜೀವನ ವೆಚ್ಚ ಏರುತ್ತಿದೆ ಎ೦ಬ೦ಥ ಸಣ್ಣ ವಾಕ್ಯಗಳಲ್ಲಿಯೇ ಆಗಲಿ ಪ್ರತಿ ಶಬ್ದಕ್ಕೂ ಅದರ ಹಿ೦ದಿನ ಅಭಿಪ್ರಾಯದ ವಿಶಿಷ್ಟಸ್ವರೂಪ ಬೇರೆಯಾಗಿ ಅನುಭವಕ್ಕೆ ಬರುತ್ತದೆಯೆ?ಈ ವಾದದಲ್ಲಿ ಅಭಿಪ್ರಾಯ,ಅರ್ಥ-ಇವಕ್ಕೆ ಅನ್ಯೋನ್ಯಾಶ್ರಯ ದೋಷವೂ ತಪ್ಪದು.