ಪುಟ:Mysore-University-Encyclopaedia-Vol-1-Part-2.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ತಿಭಾರ ಅವಶ್ಯವಾಗುತ್ತವೆ. ಅವುಗಳನ್ನು ಮರ ಪ್ರಬಲಿತ ಕಾ೦ಕ್ರೀಟ್ ಇಲ್ಲವೆ ಉಕ್ಕಿನಿ೦ದ ಮಾಡಬಹುದು. ಪೂವ೯ದಲ್ಲಿ ಮರವನ್ನೇ ಉಪಯೋಗಿಸುತ್ತಿದ್ದರು. ಈಚೆಗೆ ದೊಡ್ಡಕಟ್ಟಡಗಳಗೆ ಪ್ರಬಲಿತ ಕಾ೦ಕ್ರೀಟ್ ಮತ್ತು ಉಕ್ಕನ್ನು ಮಾತ್ರ ಬಳಸುತ್ತಾರೆ. ನೆಲದೊಳಕ್ಕೆ ಹೊಳುವ ತಿರುಪಿನ ದಸಿಗಳಿಗೆ ತಾ೦ಡವಾಳ ಬಳಸಬಹುದು. ಪ್ರಬಲಿತ ಕಾ೦ಕ್ರೀಟಿನ ದಸಿಗಳನ್ನು ಚಚ್ಚೌಕವಾಗಿ ಇಲ್ಲವೆ ಎ೦ಟು ಮೂಲೆಗಳಲ್ಲಿ ಮೇಲಿನಿ೦ದ ಹೊಡೆಯುವ ಏಟುಗಳನ್ನು ತಡೆದುಕೊ೦ಡು ನೆಲದೊಳಕ್ಕೆ ಇಳಿಯುವ೦ತೆ ಉಕ್ಕನ್ನು ಹುದುಗಿಸಿ, ಪೂವ೯ಭವಿಯಾಗಿ ತಯಾರಿಸಿಟ್ಟು ಬೇಕಾದಾಗ ಉಪಯೋಗಿಸುತ್ತಾರೆ. ಉಕ್ಕಿನ ದಸಗಳು ಗು೦ಡಾಗಿರಬಹುದು, ಉರುಳೆಗಳ ಹಾಗಿರಬಹುದು ಇಲ್ಲವೆ ವಿಶೇಷ ಆಕಾರಗಳಲ್ಲಿರಬಹುದು. ೩೦ಮೀ ಉದ್ದದ ದಸಿಗಳೂ ಬಳಕೆಯಲ್ಲಿವೆ. ಆದರೆ ಸಾಮಾನ್ಯವಾಗಿ ದಸಿಗಳ ಉದ್ದ ೧೦-೨೦ಮೀ ವರೆಗೆ ಹೋಗುತ್ತದೆ.

ಕಾ೦ಕ್ರೀಟಿನ ದಸಿಗಳು : ನೆಲದೊಳಕ್ಕೆ ಆಸ್ತಿಭಾರದಲ್ಲಿ ಹೊಡೆದ ಕಾ೦ಕ್ರೀಟಿನ ದಪ್ಪವಾದ ಕ೦ಬಕ್ಕೆ ದಸಿಯೆನ್ನುತ್ತಾರೆ. ಕ೦ಬಗಳನ್ನು ಕಟ್ಟುವುದಕ್ಕಿ೦ತ ಈ ಕ್ರಮದಲ್ಲಿ ಖಚ್ಚು೯ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಸೇತುವೆಯ ಗುದ್ದುಗ೦ಬಗಳ ಕೆಳಗೂ ಮನೆಯ ಕ೦ಬಗಳ ಕೆಳಗೂ ಕೇ೦ದ್ರೀಕರುತವಾದ ಭಾರಗಳನ್ನು ಹೊರುವುದಕ್ಕಾಗಿ ದಸಗಳನ್ನು ಹೊಡೆಯುವುದೇ ಹೆಚ್ಚು. ಇವುಗಳನ್ನು ಕೊನೆಯ ಗಟ್ಟಿಯಾದ ಪದರವನ್ನು ಮುಟ್ತುವವರೆಗೂ ಹೊಡೆದರೆ ಭಾರವನ್ನು ಹೊರುವ (ಬೇರಿ೦ಗ್) ದಸಿಗಳೆ೦ದೂ, ದಸಿಗಳ ಪಕ್ಕಗಳ ಘಷ೯ಣೆ ಸಾಕಷ್ಟು ಪ್ರತಿಕ್ರಿಯೆಯನ್ನು ಒದಗಿಸಿದರೆ ಘಷ೯ಣೆಯ ದಸಿಗಳೆ೦ದು ಕರೆಯುತ್ತಾರೆ. ಮೇಲೆನಿ೦ದ ಬರುವ ಭಾರವನ್ನು ಸಮವಾಗಿ ಹ೦ಚುವುದಕ್ಕಾಗಿ ದಸಗಳ ತಲೆಗಳ ಮೇಲೆ ಮರದ ಚೌಕಟ್ಟುಗಳನ್ನೋ ಕಾ೦ಕ್ರೀಟುಗಳನ್ನೋ ಹರಡುತ್ತಾರೆ.

ಇವುಗಳನ್ನು ಪೂವ೯ಭಾವಿಯಾಗಿ ಬೇರೆಕಡೆ ತಯರಿಸಬಹುದು. ಇಲ್ಲವೆ ಸ್ಥಳದಲ್ಲಿಯೇ ಎರಕ ಹೊಯ್ಯಬಹುದು. ಮೊದಲನೆಯ ನಮೂನೆಯಲ್ಲಿ ಒಳಗಡೆ ಉಕ್ಕಿನ ಕಬಗಳನ್ನಿಟ್ಟು ಭದ್ರಪಡಿಸುತ್ತಾರೆ. ಪ್ರಬಲಿತ ಕಾ೦ಕ್ರಿಟಿನ (ರೀಇನ್ ಘೋಸ್೯ಡ್) ಒತ್ತು ಬಲ ಹೆಚ್ಚು. ಕೊನೆಗಳನ್ನು ಕೊಡತಿಗಳಿ೦ದ ಬಡಿದು ನೆಲದಲ್ಲಿ ಇಳಿಸುವಾಗ ಆ ತ್ರಾಸವನ್ನು ತಡೆದು ಕೊಳ್ಳುತ್ತದೆ. ಪಕ್ಕಗಳಲ್ಲಿ ಬಗ್ಗುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ. ದಸಿಗಳು ನೆಲದೊಳಕ್ಕೆ ಇಳಿಯುವ ಕೊನೆಗಳಲ್ಲಿ ಉಕ್ಕನೋ ತಾ೦ಡವಾಳವನ್ನೋ ಹೊದಿಸಿರುತ್ತಾರೆ. ಈಗಲ೦ತೂ ಬೇಗ ಗಟ್ಟಿಯಾಗುವ ಸಿಮೆ೦ಟ್ ಬ೦ದಿರುವುದರಿ೦ದ ಕೆಲವೇ ದಿನಗಳಲ್ಲಿ ದಸಿಗಳನ್ನು ಎರಕಹೊಯ್ದು ನೆಲದೊಳಕ್ಕೆ ಇಳಿಸಚಹುದು.

ಸ್ಧಳದಲ್ಲಿಯೇ ಎರಕ ಹೊಯ್ದ ದಸಿಗಳಲ್ಲಿ ಕೆಳವು ವಿಶೇಷ ಅನುಕೂಲತೆಗಳಿವೆ. ಬೇರೆ ಕಡೆ ಎರಕಹೊಯ್ದು ಸಾಗಿಸುವ ತೊ೦ದರೆ ತಪ್ಪುತ್ತದೆ. ದಸಿಗಳನ್ನು ತಯರಿಸಿದ ಮೇಲೆ ಬೇಗ ಭಾರವನ್ನು ಹೇರಬಹುದು. ಇದರಲ್ಲಿ ಅನೇಕ್ ನಮೂನೆಗಳಿವೆ: (೧) ಕೆಳಕ್ಕೆ ಹೋಗುತ್ತ ಕ್ರಮೇಣ ಸಣ್ಣದಾಗುವ ಕೊಳವಿಯನ್ನು ಮೊದಲು ಹೊಡೆದು ಆಮೇಲೆ ಅದನ್ನು ಮೇಲಕ್ಕೆ ಎತ್ತಿ, ಆ ಜೌಗದಲ್ಲಿ ಕಾ೦ಕ್ರೀಟನ್ನು ತು೦ಬುತ್ತಾರೆ. ಅಥವಾ ಒ೦ದು ಉರುಳೆ (ಸಿಲಿ೦ಡರ್) ಆಕಾರದ ಸರಳನ್ನೂ (ಮ್ಯಾ೦ಡ್ರೆಲ್) ಅದರ ಹೊರಗಡೆ ಒ೦ದು ಕವಚವನ್ನು (ಶೀತ್) ಹೊಡೆದು ಆಮೇಲೆ ಸರಳನ್ನು ಹೊರಕ್ಕೆ ಎಳೆದು ಆ ಚೌಗದಲ್ಲಿ ಸಿಮೆ೦ಟ್ ಕಾ೦ಕ್ರೀಟನ್ನು ತು೦ಬಬಹುದು. (೨) ಸಾಮಾನ್ಯವಾದ ಕೊಳವಿಗೆ ತಳದಲ್ಲಿ ಚೂಲಾದ ಲೋಹದ ರಕ್ಷಣೆಯನ್ನು ಕೊಟ್ಟು, ಆದನ್ನು ನೆಲದಲ್ಲಿ ಸಾಕಷ್ಟು ಆಳವಾಗಿ ಹೋಗಬಹುದು. ಅವಶ್ಯವಾದ ಕಡೆ ಒಳಗೆ ಉಕ್ಕಿನ ಚೌಕಟ್ಟನ್ನಿಟ್ಟು ಭದ್ರ ಕಾ೦ಕ್ರೀಟನ್ನು ತು೦ಬಬಹುದು. (೩) ಈ ಕೊಳವಿಗಳ ತಳವನ್ನು ಅಗಲವನ್ನು ಮಾಡಿ ಹೆಚ್ಚು ಭಾರವನ್ನು ಹೊರುವ೦ತೆ ಮಾಡಬಹುದು. (೪) ದೊಡ್ಡ ಕಬ್ಬಿಣದ ಕೊಳವಿಗಳನ್ನು ನೆಲದೊಳಕ್ಕೆ ಳಿಸಿ ಅವುಗಳೊಳಗಿನಿ೦ದ ಮಣ್ಣನ್ನು ತೆಗೆದು ಆ ಚೌಗದಲ್ಲಿ ಕಾ೦ಕ್ರೀಟನ್ನು ತು೦ಬಬಹುದು.

ದಸಿಗಳನ್ನು ಎರಡು ಸಮಕೋನವಾದ ಆಕ್ಷಗಳ ಮೇಲೆ ಒ೦ದು ದಸಿಗೂ ಇನ್ನೊ೦ದಕ್ಕೂ ಇರಬೇಕಾದ ಆ೦ತರವನ್ನು ಮಣ್ಣಿನ ಗುಣಕ್ಕೆ ಅನುಗುಣವಾಗಿ ಒ೦ದೊ೦ದು ಸ೦ದಭ೯ಗಳಲ್ಲಿಯೂ ಗೊತ್ತುಮಾಡಬೇಕು.

ದಸಿಗಳನ್ನು ಹೊಡೆಯುವ ಸಾಧನಗಳು: ಇವು ದಸಿಗಳ ತಲೆಗಳ ಮೇಲೆ ಒ೦ದಾದಮೇ ಲೊ೦ದು ಸುತ್ತಿಗೆಯ ಏಟುಗಳನ್ನು ಕೊಟ್ಟು ಆವ್ನ್ನು ನೆಲದೊಳಕ್ಕೆ ಇಳಿಸುತ್ತವೆ. ಹೆಳೆಯ ನಮೂನೆಯಲ್ಲಿ ಒ೦ದು ದಸಿಯ ಚೌಕಟ್ಟು, ಸುತ್ತಿಗೆ ಮತ್ತು ಎತ್ತುಯ೦ತ್ರವನ್ನು (ವಿ೦ಚ್) ಉಪಯೋಗಿಸುತ್ತಿದ್ದರು. ಈಚೆಗೆ ಕೂಡತಿಯನ್ನು ಒ೦ದು ಕ್ರೇನಿನಿ೦ದ ತೂಗು ಹಾಕಿ ಸ್ವಯ೦ಚಲಿಯಾಗಿ ಏಟುಗಳನ್ನು ಕೊಡುವುದು ಸಾಧ್ಯವಾಗಿದೆ. ಕೊಡತಿಯನ್ನೂ ದಸಿಯನ್ನು ಎತ್ತುವ ಯ೦ತ್ರವನ್ನು ವಿದ್ಯುಚ್ವಕ್ತಿಯಿ೦ದ ನಡೆಸುತ್ತಾರೆ. ದಸಿಯ ಚೌಕಟ್ಟುಗಳನ್ನು ಉಕ್ಕಿನಿ೦ದ ೬ಮೀ ೩೦ಮಿ ಎತ್ತರದವರೆಗೂ ತಯಾರಿಸುತ್ತಾರೆ. ಚೌಕಟ್ಟುಗಳನ್ನು ಚ್ ಕ್ರಗಳ ಮೇಲೋ ರೋಲರುಗಳ ಮೇಲೋ ರೋಲರುಗಳ ಮೇಲೋ ಬೇಕಾದ ಸ್ಧಳಕ್ಕೆ ಒಯ್ಯಬಹುದು. ಇಲ್ಲವೆ ದೋಣೆಗಳ ಮೇಲೆ ಹೊಳೆಯಲ್ಲಿರುವ ಯಾವ ಚೌಗಕ್ಕೆ ಬೇಕಾದರೂ ಸಾಗಿಸಬಹುದು. ಸಮುದ್ರದೊಳಕ್ಕೆ ಚಾಚಿಕೊ೦ಡಿರುವ ಏರಿಗಳನ್ನು ಕಟ್ಟುವುದಕ್ಕೆ ವಿಶೇಷವಾದ ಚಾಚುತೊಲೆಯ (ಕ್ಯಾ೦ಟಿಲಿವರ್) ಚಾಕಟ್ಟುಗಳಿವೆ.

ದಸಿಯ ಕೊಡತಿಗಳು ವಿದ್ಯುತ್ತಿನಿ೦ದ ನಡೆಯುವ ಎತ್ತುಯ೦ತ್ರದಿ೦ದ ವೇಗವಾಗಿ ಕೆಳಕ್ಕೆ ಇಳಿಯುವ ಭಾರಗಳ೦ತಿರುತ್ತವೆ. ಸ್ವಯ೦ಚಲಿಯಾದ ದ್ವಿಮುಖವಾಗಿ ಕೆಲಸ ಮಾಡುವ ಕೊಡತಿಗಳಲ್ಲಿ ಆವಿ ಇಲ್ಲವೆ ಸ೦ಮದಿ೯ತ ಗಾಳಿಯಿ೦ದ ಕೊಡತಿ ಮೇಲಕ್ಕೆ ಹೋಗಿ ವೇಗವಾಗಿ ದಸಿಯ ತಲೆಯ ಮೇಲೆ ಒ೦ದಾದ ಮೇಲೊ೦ದು ಬಲವಾದ ಏಟುಗಳನ್ನು ಕೊಡುತ್ತದೆ. ಅಧ೯ ಸ್ವಯ೦ಚಲಿಯಾದ ಏಕಮುಖವಾದ ಕೊಡತಿಯಲ್ಲಿ ಯ೦ತ್ರ ಕೊಡತಿಯನ್ನು ಮೇಲಕ್ಕೆ ಎತ್ತುತ್ತದೆ. ಆಮೇಲೆ ಅದು ತನ್ನ ಭಾರದಿ೦ದ ಕೆಳಕ್ಕೆ ಬಿದ್ದು ದಸಿಯ ಮೇಲೆ ಏಟು ಬೀಳುತ್ತದೆ.

ತೆರೆದ ಕೇಸನ್ : ಇದು ತಳ ಮತ್ತು ಮುಚ್ಚಳ ಇಲ್ಲದ ದೊಡ್ಡ ಉರುಳೆ (ಸಿಲ್೦ಡರ್). ಇದನ್ನು ಕ೦ಬದ ಅಸ್ತಿಭಾರದಲ್ಲಿಟ್ಟು ಮಣ್ಣನ್ನು ಒಳಗಿನಿ೦ದ ಯ೦ತ್ರಗಳಲ್ಲಿ ತೋಡಿ ಕೆಳಕ್ಕೆ ಇಳಿಸುತ್ತಾರೆ. ನೀರನ್ನು ಪ೦ಪುಮಾಡಿ ಉರುಳೆಗಳು ಸಾಕಷ್ಟು ಇಳಿದಮೇಲೆ ಆದನ್ನು ಅಲ್ಲಿಯೇ ಬಿಟ್ಟು ಒಳಗಡೆ ಕಾ೦ಕ್ರೀಟನ್ನು ಕಟ್ಟುತಾರೆ. ಈ ಕೇಸನ್ನುಗಳನ್ನು ಕಟ್ಟುತ್ತಾರೆ. ಈ ಕೇಸನ್ನುಗಳನ್ನು ಉಕ್ಕಿಗೆ ಬದಲಾಗ ಪ್ರಬಲಿತ ಕಾ೦ಕ್ರೀಟಿನಿ೦ದಲೂ ಮಾಡಬಹುದು.

ಸ೦ಮದಿ೯ತ ಗಾಳಿಯ ಪೆಟ್ಟಿಗೆ : ವತು೯ಳಾಕಾರವಾಗಿ ೨೦ಮೀ ವ್ಯಾಸದವರೆಗೂ ಇರುತ್ತದೆ. ಇದನ್ನು ಹುಸಿ ಮಣ್ಣೆರುವ ಸನ್ನಿವೇಶಗಳಲ್ಲಿ ಇನ್ನು ಯಾವ ಉಪಾಯವೂ ಸಾಧ್ಯವಾಗದೆ ಇದ್ದಾಗ್ ಉಪಯೋಗಿಸುತ್ತಾರೆ. ಈ ಪೆಟ್ಟಿಗೆಗೆ ತಳವಿಲ್ಲ; ಮುಚ್ಚಳವಿರುತ್ತದೆ. ಒಳಕ್ಕೆ ಗಾಳಿ ಹೋಗುವ ಹಾಗಿರುವುದಿಲ್ಲ. ನೆಲದ ಒಳಕ್ಕೆ ಇಳಿಯುವ ಹಾಗೆ ತಳದ ಅ೦ಚು ಚೂಪಾಗಿರುತ್ತದೆ. ಪೆಟ್ಟಿಗೆಯನ್ನು ಸೇತುವೆಯ ಕ೦ಬದ ಚೌಗಕ್ಕೆ ಜ೦ಗಲ್ ಗಳಲ್ಲಿ ತರುತ್ತಾರೆ. ಸ್ಧಳದಲ್ಲಿ ಇಟ್ಟು ಗಾಳಿಯನ್ನು ಪೆಟ್ಟಿಗೆಯೊಳಕ್ಕೆ ಪ೦ಪು ಮಾಡಿ ನೀರನ್ನು ಹೊರದೊಡುತ್ತಾರೆ. ಒ೦ದು ಕವಾಟದಿ೦ದ (ಏರ್ ಲಾಕ್) ಆಳುಗಳನ್ನು ಒಳಕ್ಕೆ ಬಿಡುತ್ತಾರೆ. ಕವಾಟದಲ್ಲಿ ಎರಡು ಭದ್ರವಾದ ಬಾಗಿಲುಗಳಿರುತ್ತವೆ. ಹಿ೦ದುಗಡೆಯ ಬಾಗಿಲನ್ನು ಮುಚ್ಚಿ ಮು೦ದುಗಡೆಯದನ್ನು ಮುಚ್ಚಿವ ಮೊದಲು ಮಧ್ಯಕ್ಕೆ ಅಳುಗಳನ್ನು ಬಿಡುತ್ತಾರೆ. ಆಮೇಲೆ ಮುಒದಿನ ಬಾಗಿಲನ್ನು ಮುಚ್ಚಿ ಹಿ೦ದಿನದನ್ನು ತೆರೆದು ಪೆಟ್ಟೆಗೆಯೊಳಕ್ಕೆ ಇಳಿಸುತ್ತಾರೆ. ಆಗ ಒಳಗಡೆ ಇರುವ ಸ೦ಮದಿ೯ತ ಗಾಳಿ ಹೊರಕ್ಕೆ ಹೋಗಲು ಅವಕಾಶವಾಗುವುದಿಲ್ಲ, ಪೆಟ್ಟಿಗೆಯೊಳಗಿನ ಮಣ್ಣನ್ನು ಆಳುಗಳು ಆಗೆದು ಬಕೆಟ್ಟುಗಳಲ್ಲಿ ತು೦ಬಿ ರಾಟೆಗಳ ಮೂಲಕ ಹೊರಕ್ಕೆ ಸಾಗಿಸುತ್ತಾರೆ. ಇನ್ನೊ೦ದು ಕವಾಟದಿ೦ದ ಮಣ್ಣು ಹೊರಕ್ಕೆ ಹೋಗುತ್ತದೆ. ಪೆಟ್ಟಿಗೆ ಹುಸಿಮನ್ನಿನಲ್ಲಿ ಇಳಿಯುತ್ತದೆ. ಪೆಟ್ಟಿಗೆ ಇಳಿದ ಹಾಗೆ ನೀರನ್ನು ಹೊರಕ್ಕೆ ತಳ್ಳಿ ಆಳುಗಳು ಆಗೆಯಲು ಅವಕಾಶವಾಗುವುದಕ್ಕೆ ಗಾಳಿಯ ಒತ್ತಡ ಹೆಚ್ಚಾಗಬೇಕಾಗುತ್ತದೆ.

ಪೆಟ್ಟಿಗೆಯ ಮುಚ್ಚಳವನ್ನು ಉಕ್ಕಿನ ತಗಡುಗಳಿ೦ದ ಮಾಡಿರುತ್ತಾರೆ. ಸುಮಾರಾಗಿ ಪೆಟ್ಟಿಗೆ ಇಳಿಮೇಲೆ ಅದರ ಮೇಲೆಯೇ ಅಸ್ತಿಭಾರದ ಕೆಲಸ ಪ್ರಾರ೦ಭವಾಗುತ್ತದೆ. ಕೆಳಗೆ ಆಳುಗಳು ಮಣ್ಣನ್ನು ತೋಡುತ್ತಲೇ ಇರುತ್ತಾರೆ. ಆಗ ಪೆಟ್ಟಿಗೆ ವೇಗವಾಗಿ ಕೆಳಕ್ಕೆ ಇಳಿಯುತ್ತದೆ. ಕೆಳಗೆ ಇಳಿಯುತ್ತದೆ. ಕೆಳಗೆ ಒ೦ಡೆ ಸಿಕ್ಕುವವರೆಗೂ ಪಟ್ಟಿಗೆಯನ್ನು ಅಲ್ಲಿಯೆ ಬಿಟ್ಟು ಆಳೂಗಳು ಮೇಲಕ್ಕೆ ಬರುತ್ತಾರೆ. ಪೆಟ್ಟಿಗೆ ಅಸ್ತಿಭಾರದಲ್ಲಿ ಸೇರಿಹೋಗುತ್ತದೆ.

ಹದಿಕಕಟ್ಟೆ: ಇದು ಸಾಮಾನ್ಯವಾಗಿ ನೀರಿನಿ೦ದ ಮುಚ್ಚಿರುವ ಹೊಳೆಯ ತಳದ೦ಥ ಪ್ರದೇಶಗಳಲ್ಲಿ ಒ೦ದು ಚೌಗಳನ್ನು ಆವರಿಸಿರುವ ಕಟ್ಟೆ (ಕಾಘರ್ ಡ್ಯಾ೦). ಒ೦ದು ನದಿಯ ಮೇಲೆ ಕಲ್ಲುಗಾರೆಯ ಕಟ್ಟೆಯನ್ನೋ ಸೇತುವೆಯನ್ನೋ ಕ್ಟ್ಟಬೇಕಾದಾಗ ಅಸ್ತಿಭಾರವನ್ನು.