ಪುಟ:Mysore-University-Encyclopaedia-Vol-1-Part-2.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಕಲು ಅಲ್ಲಿ ಒ೦ದು ಆವರಣವನ್ನು ಕಟ್ಟಿ ಒಳಗಿನಿ೦ದ ನೀರನ್ನು ಪ೦ಪುಗಳಿ೦ದ ಎತ್ತುತ್ತಾರೆ.ಈ ಆವರಣಕ್ಕೆ ಹದಿಕಟ್ಟೆಯೆ೦ದು ಹೆಸರು.ಇದರ ದೆಸೆಯಿ೦ದ ಹೊಸದಾಗಿ ನೀರು ಆವರಣದೊಳಗೆ ಬ೦ದಹಾಗೆಲ್ಲ ಒಳಗಿನ ನೀರನ್ನು ಎತ್ತಿದಮೆಲೆ ನೆಲದಲ್ಲಿ ಅಗೆಯಲು ಪ್ರಾರ್೦ಭಿಸುತ್ತಾರೆ.ನಾಲೆಯ ಮಟ್ಟ ಬದಲಾವಣೆಯ ಕಟ್ಟೆಗಳು ವಿದ್ಯುದಾಗಾರಗಳಲ್ಲಿನ ನಾಲೆಗಳು ಇ೦ಥ ಕಡೆಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.ಹದಿಕಟ್ಟೆಯೊ ಆವರಣದ ತಳವೂ ನೀರಿನ ಒತ್ತಡದಿ೦ದ ಬಿರಿಯದ ಹಾಗೆ ಗಟ್ಟಿಯಾಗಿರಬೇಕು.ಸಾಮಾನ್ಯವಾಗಿ ಆವರಣದಲ್ಲಿ ನೀರೇ ಇಲ್ಲದಹಾಗೆ ಮಾಡುವುದು ರೂಡಿಯಿಲ್ಲ.ಅದಕ್ಕೆ ಖರ್ಚು ಹೆಚ್ಚಾಗುತ್ತದೆ.ಒಳಗೆ ಬರುವ ನೀರನ್ನು ಸುಮಾರಾಗಿ ಕದಿಮೆಮಾಡಿದರೆ ಸಾಕು.ಇದ್ದ ನೀರನ್ನು ತಗ್ಗಾದ ಗು೦ದಡಿಗಳಿಗೆ ಸಾಗಿಸಿ ಒ೦ದೇ ಸಮನಾಗಿ ಪಒಪು ಮಾಡಬಹುದು.ನೀರಿನ ಹಾಳ್ ಹೆಚ್ಚಾಗಿಲ್ಲದೆ ಪ್ರವಾಹ ಸುಮಾರಾಗಿರುವ ಕಡೆಗಳಲ್ಲ್ಲಿಜಿಗುಟುಮಣ್ಣನ ಕಟ್ಟೆಗಳನ್ನು ತಾತ್ಕಾಲಿಕವಾಗಿ ಕಟ್ಟಬಹುದು.ಅಥವಾ ಮರಳಿನಿ೦ದ ತುಂಬಿ ಹೊಲೆದ ಗೋಣಿಚೀಲಗಳನ್ನಿಟ್ತು ಚೀಲಗಳ ಸಂದುಗಳಲ್ಲಿ ಜೀಡಿಮಣ್ಣನ್ನು ತುಂಬಬಹುದು.ಆದರೆ ಹೊಳೆಗಳಲ್ಲಿ ಇಶ್ಟೂ ಸರಳವಾಗಿ ಕಟ್ಟೆಗಳು ಸಾಕಾಗುವುದಿಲ್ಲ.ಸಣ್ಣ ಸೇತುವೆಗಳಲ್ಲಿ ಒಂದರ ಪಕ್ಕದಲ್ಲೊಂದು ಮರದ ದಸಿಗಳನ್ನು ಎರಡು ಸಾಲು ದಸಿಗಳ ನಡುವೆ ಜೇದಿಮಣ್ಣನ್ನು ತುಂಬುವುದು ಒಂದು ಕ್ರಮ.ಮರದ ದಸಿಗಳಿಗೆ ಬದಲಾಗಿ ದೊಡ್ಡ ಸೇತುವೆಗಳಲ್ಲಿ ಒಂದಕ್ಕೊಂದು ತೊಡರಿಕೊಳ್ಳುವ ಊಕ್ಕಿನ ತಗಡಿನ ದಸಿಗಳನ್ನು ನಿಲ್ಲಿಸಬಹುದು.ಈ ದಸಿಗಳು ಪಾಯವನ್ನು ಹಾಕಬೇಕಾಗಿರುವ ಕಂಬರ ಜಾಗವನ್ನು ಸುತುವರಿಯುತ್ತವೆ.ಆಗ ಹೊರಗಿನಿಂದ ನೀರು ಆವರಣದೊಳಕ್ಕೆ ಬರುವುದಿಲ್ಲ.ಪಂಪುಗಳಿಂದ ಒಳಗಿನ ನೀರನ್ನು ಎತ್ತಬಹುದು.ಹದಿಕಟ್ಟೆಗಳು ಹೊರಗಡೆಇಂದ ಅವುಗಳ ಮೇಲೆ ಬೀಳುವ ಒತ್ತದವನ್ನು ತದೆಯುವಶ್ತು ಬಲವಾಗಿರಬೇಕು.ಹದಗುಕಟ್ಟೆಗಳಲ್ಲಿ (ಡಕ್ಸ್) ಆವರಣ ದೊಡ್ಡದಾಗಬೇಕಾದ ನೀರನೊಳಗೆ ಸುತ್ತಲೂ ಏರಿಯನ್ನು ಹಾಕಿ ಅದರ ಮದ್ಯದಲ್ಲಿ ಊಕ್ಕಿನ ತಗದಿನ ದಸಿಗಳನ್ನು ಹೊಡೆದು ನೀರು ಜಿನುಗುವುದನ್ನು ನಿಲ್ಲಿಸಬೇಕಾಗುತ್ತ್ದದೆ.ನದಿಯ ತಳದಲ್ಲಿ ಕೇವಲ ಮರಳೇ ಇದ್ದರೆ ಅಸ್ತಿಭಾರದ ಕೆಲಸ ಕಶ್ತವಾಗುತ್ತದೆ.ಖರ್ಚು ಶ್ರಮವೂ ಹೆಚ್ಚಾಗುತ್ತವೆ.ಹಡಗುಕಟ್ಟೆಗಳಲ್ಲಿ ಹಾಕಿದಹಾಗೆ ಸುತ್ತಲೂ ಮಣ್ಣಿನ ಏರಿಯನ್ನು ಹಾಕಿ ಊಕ್ಕಿನ ದಸಿಗಳನ್ನು ನಿಲ್ಲಿಸಿ ಒಳಗಿನ ಆವರಣದಿಂದ ನೀರನ್ನು ಎತ್ತಬೇಕಾಗುತ್ತದೆ.ನೀರಾವರಿ ಜಲಾಶಯದ ಕಟ್ಟೆಗಳನ್ನು ಕಟ್ಟುವಾಗ ಹಿಂದುಗಡೆ ನೀರಿನ ಆಳ ಹೆಚ್ಚಾಗಿರುತ್ತದೆ.ಊಕ್ಕಿನ ತಗಡಿನ ದಸಿಗಳಿಗೆ ಈ ಒತ್ತಡವನ್ನು ತಡೆಯುವುದು ಸಾದ್ಯವಗುವುದಿಲ್ಲ ಅದಕ್ಕಾಗಿ ತಾತ್ಕಾಲಿಕವಾಗಿ ಬಂದೋಬಸ್ತಾದ ಕಲ್ಲುಗಾರೆಯ ಗೋಡೆಯನ್ನು ಕಲ್ಲಿನ ಅಸ್ತಿಭಾರದ ಮೇಲೆ ಪ್ಪರಮಾವಧಿ ನೀರಿನ ಆಳದ ಒತ್ತಡವನ್ನು ತಡೆಯುವಸ್ತು ಅಗಲವಾಗಿ ಕಟ್ಟೆ ಮೇಲಕ್ಕೆ ಎತ್ತುತ್ತಾರೆ.ಈ ಹದಿಕಟ್ಟೆಯ ಪೂರ್ವಸಿದ್ಡತೆಗಳು ಬೇಕಾಗುತ್ತವೆ.ಹದಿಕಟ್ಟೆಗಾಗಿ ಆರಿಸಿದ್ಸ್ ಜಾಗದ ಮೇಲುಗಡೆ ಹೊಳೆಯ ತಳದಲ್ಲಿ ಮರಳು ಚೀಲಗಳನ್ನು ಸಾಕಶ್ತು ಅಗಲವಾಗಿ ಇಟ್ಟು,ನದುವಿನ ಸಂದುಗಳಲ್ಲಿ ಜೇಡಿಮಣ್ಣನ್ನು ತುಮ್ಬಿ ಬೇಸಗೆಯಲ್ಲಿ ಬರುವ ನೀರನ್ನು ಯಾವುದಾದರೂ ಒಂದುಪಕ್ಕಕ್ಕೆ ಅಂದರೆ ಆಗಲೇ ಕಟ್ಟಿರಬಹುದಾದ ಕಲ್ಲುಗಾರೆಯ ಕಟ್ಟೆಗೋ ಅಥವ ಕೆಳನದಿಗೋ ಸಾಗಿಸಬೇಕು.ಈ ಸಿದ್ದತೆಗಳಾದ ಮೇಲೆ ಹದಿಕಟ್ಟೆಯ ಅಸ್ತಿಭಾರದಲ್ಲಿ ಕಲ್ಲಿನ ತಳಹದಿ ಸಿಕ್ಕುವವರೆಗೂ ಆಗೆದು ಸುರ್ಕಿಕಾಂಕ್ರಿಟನ್ನು ತುಂಬಿ,ಹದಿಕಟ್ಟೆ ಗೊಡೆಯನ್ನು ಎತ್ತಿ ಜೊತೆಗೆ ಎರಡು ಪಕ್ಕಗಳಲ್ಲಿಯೊ ಆ ಗೊಡೆಯನ್ನೇ ನದಿ ಹರಿಯುವ ದಿಕ್ಕಿನಲ್ಲಿ ಸಮಕೊನವಾಗಿ ಮೇನಲಿನ ಮಟ್ಟದವರೆಗೂ ಎತ್ತಬೇಕಾಗುತ್ತದೆ.ಇಸ್ತೆ ಅಲ್ಲದೆ ಕಟ್ಟೆಯ ಆ ಮಟ್ಟದ ಅಗಲದ ಆಚೆಗೆ ಆವರಣದ ಕೆಳ ಬಾಗದಲ್ಲಿ ತಗ್ಗಾದ ತಾತ್ಕಾಲಿಕವಾದ ಕಲ್ಲುಗಾರೆಯ ಗೋದೆಯನ್ನು ಕಲ್ಲುಗಾರೆಯ ಅಕ್ಸಕ್ಕೆ ಸಮಾನಾಂತರವಾಗಿ ಕಟ್ಟೆ,ಅದು ಹೊಳೆಯ ತಳದ ಮೇಲಕ್ಕೆ ಒಂದೂವರೆ ಮೀಟರು ಎತರದವರೆಗು ಬಂದ ಮೇಲೆ ಅದರ ಮೇಲುಗಡೆಯೂ ಮರಳಿನ ಚೀಲಗಳನ್ನು ಇಟ್ಟು ಸಂದುಗಳಲ್ಲಿ ಜಿಗುಟಾದ ಜೇಡಿಮಣ್ಣನ್ನು ತುಂಬಿದರೆ ಸಾಕಾಗಬಹುದು.ಈಗ ಹದಿಕಟ್ಟೆಯ ಆವರಣ ಸಿದ್ಡವಾದ ಹಾಗಾಯಿತು.ಹೀಗೆ ನಿರ್ಮಿತವಾದ ಗುಂಡಿಯಿಂದ ವಿದ್ಯುತ್ತಿನ ಪಂಪುಗಳನ್ನು ಹೂಡಿ,ಹಗಲೂ ರಾತ್ರಿ ನೀರನ್ನು ಎತ್ತಿ ಕೆಳಗಿನ ಕಟ್ಟೆ ಆಚೆಗೆ ಸಾಗಿಸಬೇಕು.ನೆಲ ಕಾಣುವ ಹಾಗಾದ ಮೇಲೆ ಅಗೆಯುವುದನ್ನು ಪ್ರಾರಂಭಿಸಿ ಆಗದೆ ಮಣನ್ನು ಹೊರಕ್ಕೆ ಸಾಗಿಸಬಹುದು.ರಾತ್ರಿಯಲ್ಲ ಕೂಡಿಹಾಕಿಕೊಂಡ ನೀರನ್ನು ಪಂಪು ಮಾಡಿ ಬೆಳಗಾಗುವ ವೇಳೆಗೆ ಮತ್ತೆ ನೆಲ ಕಾಣುವಂತೆ ಅಣೆಮಾಡಬೇಕು.ಕೆಳಗಡೆ ಬಂಡೆ ಸಿಕ್ಕಿದಾಗ ಕುಳಿಗಳನ್ನು ತೋಡಿ ಡೈನಮೈಟಿನಿಂದ ಕಲ್ಲನ್ನು ಸಿದಿಸಿ,ಕಲ್ಲಿನ ಚೂರುಗಳನ್ನು ಎತ್ತಿ ಹಾಕಬೇಕು.ನೀರಿನಲ್ಲಿ ಸಿಡಿವುದ್ದನ್ನು ಊಪಯೋಗಿಸುವಾಗ ಬಿಳಿಯ ಬತ್ತಿಯನ್ನು (ವೈಟ್ ಫ಼್ಯೂಸ್ ಕಾಯಿಲ್) ಬಳಸಬೇಕು.ಹೀಗೆ ಗಟ್ಟಿಯಾದ ಬಂಡೆ ಸಿಕ್ಕುವವರೆಗೂ ಅಗೆತವನ್ನು ಮುಂದುವರಿಸಬೇಕು.ಆಮೇಲೆ ಅಸ್ತಿಭಾರವನ್ನು ಶುಭ್ರ್ವಾಗಿ ನೀರನ್ನು ಹೋಸ್ ಕೊಳವಿಗಳನ್ನು ಉಪಯೋಗಿಸಿ ತೋಳೆದು ನೀರಿಗೆ ಸಿಮೆಂಟನ್ನು ಕಲಸಿ ಅದನ್ನು ಅಸ್ತಿಭರದ ಮೇಲೆ ಕಾಂಕ್ರಿಟನ್ನು ಹಾಕಬಹುದು ಸಾಮಾನ್ಯವಾಗಿ ಕೊಂಚ ಸಿಮೆಂಟನ್ನು ಬೆರೆಸಿದ ಸುರ್ಕಿಕಾಂಕ್ರಿಟನ್ನು ಹಾಕಿದರೆ ಸಾಕು.ಕಟ್ಟೆ ಬಹಳ ಎತ್ತರವಾಗಿದ್ದರೆ ಒಂದು ಭಾಗ ಸಿಮೆಂಟ್,ಎರೆದಡು ಜಲ್ಲಿ,ನಾಲ್ಕು ಮರಳನ್ನು ಬೆರೆಸಿದ ಸಿಮೆಂಟ್ ಕಾಂಕ್ರಿಟನ್ನು ಅಸ್ತಿಭಾರದಲ್ಲಿ ಹಾಕಬೇಕು ಇಲ್ಲಿಗೆ ಕಟ್ಟೆಯ ಅಸ್ತಿಭಾರ ಮುಗಿದಂತೆ.ಅದರ ಮೆಲೆ ಕಟ್ಟೆಯ ಕಲ್ಲುಗಾರೆಯ ಕೆಲಸವನ್ನು ಪ್ರಾರಂಭಿಸಬಹುದು.ಅಸ್ತ್ರಗಳು:ಪ್ರಾಚೀನ ಭಾರತದ ಯುದ್ದಗಳಲ್ಲಿ ಸೈನಿಕರು ಉಪಯೋಗಿಸುತ್ತಿದ್ದ ಆಯುದಗಳು ಚರಿತ್ರೆಯ ಕಾಲಕ್ಕಿಂತ ಪೂರ್ವದಲ್ಲಿ ಬಳಕೆಯಲ್ಲಿದ್ದ ಆಯುಧಗಳ ವಿ‌‌‍ಶಯ ತಿಳಿಯಬೇಕಾದರೆ ಅದಕ್ಕೆ ರಾಮಾಯಣ,ಮಹಾಭರತ ಮತ್ತು ಇತಿಹಾಸಗಳೇ ನಮಗಿರತಕ್ಕ ಆದಾರ.ಈ ಅಸ್ತಿಗಳು ಆ ಕಾಲದ ನಮ್ಮ ಪೂರ್ವಜರಿಗೆ ಪರಿಚಿತವಾಗಿದ್ದುವೆಂದು ಸಾಧಿಸಬೇಕಾದರೆ ಆ ಮಹಾಕಾವ್ಯಗಳೂ ಪ್ರಾಚೀನಗ್ರಂಥಗಳೂ ವಾಸ್ತವಿಕ ಸಂಗತಿಗಳನ್ನೇ ತಿಳಿಸುತ್ತವೆಯೆಂದು ಸಾದಿಸಬೇಕಾದ ಅವಶ್ಯಕತೆಯೇನಿಲ್ಲ,ಅವು ಚಾರಿತ್ರಿಕ ವಿಶ್ಯಗಳನ್ನು ಪ್ರತಿಪಾದಿಸಬಹುದು ಅಥವಾ ಇಲ್ಲದಿರಬಹುದು:ಅವುಗಳಲ್ಲಿ ಆಯೊಧಗಳ ವಿಚಾರ ಬಂದಿದೆ ಎಂಬುದಷ್ತೇ ನಮ್ಮ ಉದ್ದೇಶಕ್ಕೆ ಸಾಕು.ಆ ಮಹಾಕಾವ್ಯಗಳು ರಚಿತವಾಗುವುದಕ್ಕೆ ಮೊದಲೇ ಈ ಆಯುಧಗಳು ಬೆಳಕಿಗೆ ಬಂದಿರಲೇಬೇಕು.ಹಾಗಿಲ್ಲದಿದ್ದಲ್ಲಿ ಯಾವ ಗ್ರಂಥಕರ್ತವಾಗಲಿ ತನ್ನ ಗ್ರಂಥಗಳಲ್ಲೂ ಕಥೆಗಳಲ್ಲೂ ಯೋದರು ಬಳಸುತ್ತಿದ್ದ ಆಯುಧಗಳ ವಿವರಗಳನ್ನು ಕೊಡುತ್ತಿರಲಿಲ್ಲ.ಅವನು ಎಷ್ಟೇ ಭಾವನಾಪ್ರಧಾನವಾದ ಲೇಖಕನಾಗಿದ್ದರೂ ತನ್ನ ಗ್ರಂಥದಲ್ಲಿ ಅವುಗಳನ್ನು ಬರೆಯುತ್ತಿರಲಿಲ್ಲ. ಪರಶುರಾಮ ಪರಶುವನ್ನು ಎಂದರೆ ತನ್ನ ಗಂಡುಗೊಡಲಿಯನ್ನು ಯಾವಾಗಲೂ ಬಳಿಯಲ್ಲಿಟ್ಟುಕೊಂಡಿರುತ್ತಿದ್ದನಂತೆ.ಶ್ರೀಕೃಷ್ಣ ತನ್ನ ಚಕ್ರದಿಂದ ಶತ್ರುಗಳನ್ನು ವಧಿಸುತ್ತಿದ್ದ. ಅರ್ಜುನ ಸುವರ್ಣದ ವಜ್ರಕವಚವನ್ನು ಧರಿಸುತ್ತಿದ್ದನಂತೆ. ಕ್ರೀಡಾಸ್ಪರ್ಧೆಗಳಲ್ಲಿ ಅರ್ಜುನ ಕತ್ತಿಯಿಂದಲೂ ಬಿಲ್ಲಿನಿಂದಲೂ ವಿಸ್ಮಯಕರವಾದ ಕೈಚಳಕವನ್ನು ಪ್ರದರ್ಶಿಸುತ್ತಿದ್ದನಂತೆ. ತನ್ನ ರಥ ರಭಸದಿಂದ ಧಾವಿಸುತ್ತಿದ್ದಂತೆಯೇ ಆತ ಒಂದು ಕೋಣದ ಕೊಂಬಿನ ಟೊಳ್ಳಿನೊಳಗೆ ೨೧ ಬಾಣಗಳನ್ನು ಬಿಟ್ಟನೆಂದೂ ಪ್ರತೀತಿ ಇದೆ. ಚಕ್ರದಂಥ ತನ್ನ ಸುತ್ತುಬಳೆಯನ್ನುಎಸೆಯುವುದರಲ್ಲಿ ಅವನು ಒಮ್ಮೆಯಾದರೂ ಗುರಿತಪ್ಪಲಿಲ್ಲ. ಪದಾತಿ ಸೈನ್ಯದವರು ಈಟಿಗಳನ್ನು ಅಗಲಗತ್ತಿಗಳನ್ನು ಹೊಂದಿರುತ್ತಿದ್ದರು ಎಂದು ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ.ಬೆಂಕಿಯನ್ನುಗುಳುವ ಅಗ್ರ್ಯಸ್ತ್ರಗಳು ಬಹು ಪ್ರಾಚೀನಕಾಲದಲ್ಲೆ ಜನರಿಗೆ ತಿಳಿದಿದ್ದುವು.ಅತ್ಯಂತ ಸಮರ್ಪಕವಾದ ಎಲ್ಲ ಅಥಾರಗಳನ್ನೂ ಪರಿಶೀಲಿಸಿ,ಸರ್ ಎಚ್.ಎಲಿಯಟ್ ಎಂಬ ಪ್ರಸಿದ್ದ ಪಾಸ್ಚಾತ್ಯ ವಿಮರ್ಶಕ ಪ್ರಾಚೀನ ಭಾರತೀಯರಿಗೆ ಈ ಅಗ್ರ್ಯಸ್ತ್ರಗಳು ತಿಳಿದಿದ್ದ ವೆಂದು ಹೇಳಿದ್ದಾನೆ ಆ ಬಾಣಗಳು ತುದಿಯಿಂದ ಕಿಡಿಗಳನ್ನು ಕಾರುತ್ತಿದ್ದವು.ಅವುಗಳನ್ನು ಒಂದು ಬೊಂಬಿನಿಂದ ಹಾರಿಸುತ್ತಿದ್ದರು.ಸಿಡಿಮದ್ದು,ಗಂಧಕ ಅಥವಾ ಪೆಟ್ಲುಪ್ಪಿನಿಂದ ತಯಾರಿಸಿದ ಮಿಶ್ರವಸ್ತುವಿನ್ ತಯಾರಿಕೆಯ ವಿಧಾನ ಬಹುಶ್ಃ ಚರಿತ್ರೆಗೆ ಪೂರ್ವದ ಕಾಲಕ್ಕೆ ಅವಶೇಷವಾಗಿ ಹೋಗಿರಬೇಕು.ಮನುವಿನ ಕಾಲಕ್ಕೆಲ್ಲ ಕಬ್ಬಿಣ ಬಳಕೆಗೆ ಬಂದಿತ್ತು ಬೆತ್ತದಿಂದ ತಯಾರಿಸಿದ ಬಿಲ್ಲುಗಳೂ ತುದಿಯಲ್ಲಿ ಕಬ್ಬಿಣ್ದದ ಕೂರಲಗುಳ್ಳ ಬಾಣಗಳೂ ಭಾರತೀಯರ ಬಳಿ ಇದ್ದುವೆಂದು ಗ್ರೀಕ್ ಚರಿತ್ರಕಾರ ಹೆರೋಡಾಟಸ್ ತಿಳಿಸಿದ್ದಾನೆ.ಅಲೆಕ್ಸಾಂಡರನ ದಂದಯಾತ್ರೆಯ ಕಾಲಕ್ಕೆ ಭಾರತೀಯರು ಕೂರಲಗಿನ ಬಾಣ್ಗಳಿಂದಲೂ ಗುರಾಣೆಗಳಿಂದಲೂ ಸನ್ನದ್ಥರಾಗಿ ಗ್ರೀಕರನ್ನು ಎದುರಿಸಿದ ವಿಷಯವನ್ನು ಚರಿತ್ರೆಯಲ್ಲಿ ಓದಿದ್ದೇವೆ.ಸಾಂಚಿಯ ಅರೆಯುಬ್ಬು ಕೆತ್ತನೆಯ ಶಿಲ್ಪಕಲಾಕ್ರಿತಿಗಳಲ್ಲಿ ಕಲಾಳುಗಳ ಕೈಯಲ್ಲಿ ಬಿಲ್ಲುಗಳಿರುವುದನ್ನೂ ನೋಡಬಹುದು.ಭಿಲ್ಸಾತೋಪಿನ ಶಿಲ್ಪದಲ್ಲಿ ಬಿಲ್ಲು ,ಬಾಣ,ಕಠಾರಿ,ಖುಡ್ಗು,ತ್ರಿಕೋಣಾಕಾರದ ತುದಿಯ ಈಟಿ,ಕೂಡಲಿ,ಕವಣಿ ,ಗಂಡುಗೊಡಲಿ ಮತ್ತು ತ್ರಿಶೂಲಗಳಿವೆ.ಇವುಗಳನ್ನೆ ಉದಯಗಿರಿಯ ಶಿಲ್ಪಕಲಾಕ್ರಿತಿಗಲ್ಲೂ ನೋಡಬಹುದು.ಅಲ್ಲಿನ ಬಾಣಗಳು ೩-೫ ಗಳಷ್ಟು ಉದ್ದವಾಗಿವೆ.ಅವುಗಳಲ್ಲಿ ಕೆಲವು ಮಂದಿ ಯೋಧರು ಬಾಣಗಳಿಗೆ ಬದಲಾಗಿ ತುದಿಯಲ್ಲಿ ಕಚ್ಚುಗಳನ್ನು ಕೆತ್ತಿರುವ ಆಯುಧಗಳನ್ನು ಉಪಯೋಗಿಸುವುದನ್ನು ಕಾಣಬಹುದು.ಕೆಲವು ಮಂದಿ ರಾವುತರ ಬಳಿ ಎರಡು ಈಟಿಗಳಿವೆ.ಅವು ಸೌನಿಯವೆಂಬ ಹೆಸರಿನ ಈಟಿಗಳಂತಿವೆ.ಕೆಲವರ ಗುರಾ ೨ ೩ ಉದ್ದವಾಗಿಯೂ ೧.೫ ಅಗಲವಾಗಿಯು ಇವೆ.ಅವು ಯೋಧನನ್ನು ತಲೆಯಿಂದ ಮೊಣಕಾಲವರೆಗೆ ರಕ್ಷಿಸಲು ಸಹಾಯವಾಗಿವೆ.ಇನ್ನು ಕೆಲವು ರಾವುತರ ಗುರಾಣಿಗಳು ಸುಮಾರು ೨ ಉದ್ದವಾದ ಗಂಟೆಯ ಆಕಾರದಲ್ಲಿವೆ;ಅವುಗಳ ತಲಬಾಗ ಗುಂಡಾಗಿದೆ.ಸಿದ್ದಾರ್ಥ ಬೇರೆ ಯಾರೂ ಹೆದೆಯೇರಿಸುವುದಕ್ಕೀ ಆಗದಿದ್ದ ಬಿಲ್ಲಿಗೆ ಹೆದೆಯೇರಿಸುತ್ತಿದ್ದ ನಂತೆ ಮತ್ತು ಆದರಿಂದ ಬಹುದೂರದಲ್ಲಿರುವ ಕಬ್ಬಿಣದ ಲಕ್ಷ್ಯಗಳನ್ನು ಬೇದಿಸುತ್ತಿದ್ದನಂತೆ.ಅವನ ಬಾಣಪ್ರಯೋಗದಿಂದ ಚಿಲುಮೆ ಉಕ್ಕಿದ ವಿಚಾರವನ್ನು ಫಾಹಿಯಾನ್ ತನ್ನ ಗ್ರಂಥದಲ್ಲಿ ತಿಳಿಸಿದ್ದಾನೆ.