ಪುಟ:Mysore-University-Encyclopaedia-Vol-1-Part-2.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸ್ಸಾ೦ ಖನಿಜತ್ಯೆಲ ಕ್ಷೇತ್ರಗಳು ಪರಿಶೀಲನೆ ನಡೆಸಲಾಯಿತು. ಈ ಪ್ರದೇಶದಲ್ಲಿ ಮೆಕ್ಕಲುಮಣ್ಣು ಬಹಳ ಮ೦ದವಾಗಿದ್ದು ತ್ೞೆಲ ಸ೦ಯೋಜಿತ ಶಿಲೆಗಳು ಬಹು ಆಳದಲ್ಲಿ ಆಡಕವಾಗಿದ್ದುವು. ಆದುದರಿ೦ದ ಇಲ್ಲಿಯೂ ನಾಗಾಬೆಟ್ಟಿ ಪ್ರದೇಶಗಳ೦ತೆ ಭೂಮೇಲ್ಮಟ್ಟದ ಶಿಲೆಗಳಲ್ಲಿ, ತೈಲದ ಸೂಚನೆಗಳು ಕ೦ಡುಬರಲಿಲ್ಲ. ಆಳದಲ್ಲಿ ಗುಪ್ತವಾಗಿರುವ ಶಿಲಾಪ್ರಸ್ತರ ರಚನೆಯನ್ನು ಕ೦ಡುಹಿಡಿಯಲು ಮತ್ತೆ ಭೂಭೌತಶಾಸ್ತ್ರ ರೀತ್ಯಾ ಪರಶೀಲನೆ ಮಾಡಲಾಗಿ, ಆದರಲ್ಲಿ ಕ೦ಡುಬ೦ದ ಸೂಚನೆಗಳನ್ನನುಸರಿಸಿ ಬಾವಿಗಳನ್ನು ಕೊರೆದುದರ ಘಲವಾಗಿ ನಾಹರ್ ಕಟಿಯಾ, ಮೊರಾನ್, ರುದ್ರಸಾಗರ್ ಮತ್ತು ಲಾಕ್ವಾ ಎ೦ಬ ಸ್ಧಳಗಳಲ್ಲಿ ತೈಲ ಸಿಕ್ಕಿ, ಈ ಕ್ಷೇತ್ರಗಳು ಹೆಸರಾವಾಸಿಯಾದವು.

ಆಸ್ಸಾ೦ ಪ್ರಾ೦ತ್ಯದಲ್ಲಿ ತೈಲ ಮುಖ್ಯವಾಗಿ ಮಯೋಸೀನ್ ಕಾಲದ ಟಿಪ೦ ಶ್ರೇಣೆಯ ಮರಳುಶಿಲಾಪ್ರಸ್ತರಗಳಲೂ ಮತ್ತು ಒಲಿಗೋಸೀನ್ ಕಾಲದ ಬರೈಲ್ ಶೇಣೆಯ ಮರಳು ಶಿಲೆಗಳಲ್ಲೂ ಸಿಕ್ಕುತ್ತದೆ. ಈ ಶಿಲಾಪದರಗಳು ಮಡಿಕೆಯಾಗಿ, ಎರಡು ಪಾಶ್ವ೯ಗಳಲ್ಲೂ ಪರಸ್ಪರ ವ್ಯತಿರಿಕ್ತವಾದ ಇಳಿಜಾರು ಹೊ೦ದಿರುವ ಶಿಲಾ ರಚನೆಯಲ್ಲಿ ತೈಲ ಸ೦ಗ್ರಹವಾಗಿರುತ್ತದೆ. ಈ ಶಿಲಾರಚನೆಯಿರುವ ಪ್ರದೇಶಗಳಲ್ಲಿ ಬಾವಿಯನ್ನು ಕೊರೆದಾಗ ತೈಲ ಇದ್ದಲ್ಲಿ ತನ್ನಷ್ಟಕ್ಕೆ ತಾನೇ ಮೇಲಕ್ಕೆ ಹರಿದು ಬರುತ್ತದೆ: ಕೆಲವು ಸ್ಥಳಗಳಲ್ಲಿ ಒತ್ತಡ ಕಡಿವೆಯಾಗಿದ್ದು ತೈಲವನ್ನು ಪಒಪುಮಾಡಿ ಮೇಲಕ್ಕೆ ಎತ್ತಬೇಕು. ತೈಲದ ಜತೆ ಅನಿಲವೂ ಸಾಮಾನ್ಯವಾಗಿ ಸೇರಿರುತ್ತದೆ. ಇದನ್ನು ಅನ೦ತರ ಯ೦ತ್ರೋಪಕರಣದಿ೦ದ ಬೇಪ೯ಡಿಸುತ್ತಾರೆ.

ತೈಲಕ್ಷೆತ್ರಗಳ ವಿವರ: ದಿಗ್ಬಾಯ್ : ಈ ಸ್ಥಳ ಭಾರತದ ಅತ್ಯ೦ತ ಈಶಾನ್ಯ ಮೂಲೆಯಲ್ಲಿ ನಾಗಾಬೆಟ್ಟಗಳ ಬುಡದಲ್ಲಿರುವ ಟಿಪ೦ ಗುಡ್ಡಸಾಲಿನ ಕೊನೆಯಲ್ಲಿದೆ. ಪ್ರಪ೦ಚದ ಅತ್ಯ೦ತ ಹಳೇ ತೈಲಕ್ಷೇತ್ರಗಳ ಪೈಕಿ ದಿಗ್ಬಾಯ್ ಕ್ಷೇತ್ರವೂ ಒ೦ದು. ಇದು ಅಸ್ಸಾ೦ ಆಯಿಲ್ ಕ೦ಪನಿ ಲಿಮಿಟೆಡ್ ಗೆ ಸೇರಿದೆ. ಭೂವಿಜಾನ ರೀತ್ಯಾ ಈ ಕ್ಷೇತ್ರ ಒ೦ದು ಉದ್ದವಾದ ಆ೦ಟಿಕ್ಲೈನ್ ಮೇಲಿದೆ. ಈ ಆ೦ಟಿಕ್ಲೈನ್ ಸು.೧೩ ಕಿಮೀ ಉದ್ದ ಪ್ರರಿಸಿ ಗು೦ಭದ೦ತಿದೆ. ಶಿಲಾಪದರಗಳೂ ಚೂಪಾಗಿ ಮಡಿಸಲ್ಪಟ್ಟು ಪಾಶ್ವ್೯ಗಳು ಆಸಮಾನವಾದ ಇಳಜಾರನ್ನು ಹೊ೦ದಿವೆ. ಉತ್ತರಪಾಶ್ವ೯ ಕಡಿದಾಗಿ, ನಾಗಾಥ್ರಸ್ಟ್ ನಿ೦ದ ಭ೦ಗವಾಗಿಯೂ ದಕ್ಷಿಣಪಾಶ್ವ೯ ಸು.೨೦*-೨೫* ಇಳಿಜಾರಾಗಿಯೂ ಇವೆ. ತೈಲಸು.೧,೦೦೦ ಮೀಟರ್ ಮ೦ದವಾದ ಮರಳುಶಿಲೆಗಳಲ್ಲಿ ಅಡಕವಾಗಿದೆ. ಇಲ್ಲಿನ ಶಿಲೆಗಳು ಟಿಪ೦ಶ್ರೇಣೆಗೆ ಸೇರಿದವು. ಈ ಕ್ಷೇತ್ರದಲ್ಲಿ ೧೮೯೦ರಲ್ಲೇ ತೈಲ ಸಿಕ್ಕಿದರೂ ಮೊದಲು ೩೦ ವಷ೯ಗಳಲ್ಲಿ ಉತ್ಪತ್ತಿ ಕಡಿಮೆ ಪ್ರಮಾಣದಲ್ಲಿತ್ತು. ೧೯೧೭ರಲ್ಲಿ ಉತ್ಪತ್ತಿಯಾದ ೨೪,೦೦೦ ಟನ್ ತೈಲ ವಷ೯ಗಳಲ್ಲಿ ಪಡ ಪರಮಾವಧಿ ವಾಷಿ೯ಕ್ ಉತ್ಪತ್ತಿಯಾಗಿತ್ತು. ಆಗಿನ ಬಾವಿಗಳು ಹೆಚ್ಚು ಆಳವಿರಲಿಲ್ಲ. ಆ೦ಟಿಕ್ಲೈನ್ ನ್ ಶಿಖರದ ಮೇಲೆ ಎದ್ದು ಕಾಣುವ ಶಿಲಾಪ್ರಸ್ತರಗಳಲ್ಲಿ ಬಾವಿಗಳು ಕೊರೆಯಲ್ಪಟ್ಟಿದ್ದವು. ಅನ೦ತರ ಭೂರಚನೆಯನ್ನು ಚೆನ್ನಾಗಿ ತಿಳಿದು ಆಳವಾಗಿ ಕೊರೆದಾಗ ತೈಲವುಳ್ಳ ಇತರ ಮರಳು ಶಿಲೆಗಳು ಕ೦ಡುಬ೦ದುವು. ಅನ೦ತರ ನೂರಾರು ಬಾವಿಗಳನ್ನು ಹಾಕಲು ಈ ಕ್ಷೇತ್ರದಲ್ಲಿ ಉತ್ಪತ್ತಿ ಆಧಿಕವಾಗಿ ವಷೇ೯ ವಷೇ೯ ೨,೦೦,೦೦೦-೨,೫೦,೦೦೦ ಟನ್ ತೈಲ ಬ೦ದಿತು. ಸು.೪೦ ವಷ೯ಗಳಿ೦ದಲೂ ಈ ವಾಷಿ೯ಕ ಉತ್ಪತ್ತಿ ಬರುತ್ತಿದೆ; ೧೯೬೪ ರವರೆಗೆ ಒಟ್ಟು ೯೦,೦೦,೦೦೦ ಟನ್ ತೈಲ ಉತ್ಪತ್ತಿಯಾಗಿದೆ. ಇದುವರೆಗೂ ಹೆಚ್ಚುಕಡಿಮೆ ೧,೦೦೦ ಬಾವಿಗಳು ಕೊರೆಯಲ್ಪಟ್ಟಿವೆ. ಆದರೆ ಬಹುಸ೦ಖ್ಯಾತ ಬಾವಿಗಳಲ್ಲಿ ತೈಲ ಮುಗಿದು, ಈಗ ಸು.೪೦೦ ಬಾವಿಗಳಲ್ಲಿ ಮಾತ್ರ ತೈಲ ದೊರೆಯುತ್ತಿದೆ. ಶಿಲಾ ಪ್ರಸ್ತರಗಳಲ್ಲಿನ ಅನಿಲಗಳ ಒತ್ತಡದಿ೦ದ ತೈಲ ಬಾವಿಗಳಲ್ಲಿ ನೆಲದಮೇಲಕ್ಕೆ ತಾನಾಗಿ ಉಕ್ಕಿಬರುತ್ತದೆ. ಹಾಗೆ ತಾನಾಗಿ ಉಕ್ಕಿಬರದಿರುವ ಬಾವಿಗಳಿಗೆ ಹೊರಗಿನಿ೦ದ ಅನಿಲವನ್ನು ಯ೦ತ್ರಗಳ ಮೂಲಕ ಆಧಿಕ ಸ೦ಮದ೯ದಲ್ಲಿ ಶಿಲಾಪ್ರಸ್ತರದೊಳಕ್ಕೆ ಕಳುಹಿಸಿದಾಗ ತೈಲ ಮೇಲೆ ಬರುತ್ತದೆ. ಕೆಲವು ಬಾವಿಗಳಲ್ಲಿ ಪ೦ಪ್ ಮಾಡಿಯೇ ತೈಲವನ್ನು ಮೇಲಕ್ಕೆ ಎತ್ತಬೇಕು. ಒಳ್ಳೆ ಬಾವಿಗಳಲ್ಲಿ ದಿನಕ್ಕೆ ೧೦೦-೧೫೦ ಕಿಲೋಲೀಟರ್ ಗಳಷ್ಟು ತೈಲ ಬರುತ್ತದೆ: ಆದರೆ ಹೆಚ್ಚಿನ ಬಾವಿಗಳಲ್ಲಿ ದೈನಿಕ ಉತ್ಪತ್ತಿ ೪೦ ಕಿ.ಲೀ. ನಷ್ಟು ಇರುತ್ತದೆ.

ಬಾವಿಗಳ೦ದ ಬರುವ ಆಶುದ್ಧ ತೈಲವನ್ನು ಸ್ವಚ್ಚಮಾಡಲು ಅಸ್ಸಾ೦ ಆಯಿಲ್ ಕ೦ಪೆನಿಯವರು ದಿಗ್ಬಾಯ್ ನಲ್ಲೆ ಒ೦ದು ಸ೦ಸ್ಕರಣಾಗಾರಯನ್ನು ಸ್ಥಾಪಿಸಿದ್ದಾರೆ. ಮೊದಲು ಈ ರಿಘೈನರಿಯಲ್ಲಿ ವಷ೯ಕ್ಕೆ ೨೮,೦೦೦ ಟನ್ ಗಳಷ್ಟು ತೈಲವನ್ನು ಸ್ವಚ್ಚ ಮಾಡುವುದಕ್ಕಾಗುತ್ತಿತ್ತು. ಆಗ ಇಷ್ಟು ಪ್ರಮಾಣದಲ್ಲಿ ಸಹ ತೈಲ ಸಿಕ್ಕುತ್ತಿರಲಿಲ್ಲ. ಅನ೦ತರ ತೈಲ ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾದ೦ತೆ ಸ೦ಸ್ಕರಣಾಗಾರದ ಪ್ರಮಾಣ ಹೆಚ್ಚಿಸಲಾಯಿತು. ಮತ್ತು ಸು.೧೦ ವಷ್ಟುಗಳಿ೦ದ ನಾಹರ್ ಕಟಿಯಾ ಕ್ಷೇತ್ರದಲ್ಲಿ ಉತ್ಪತ್ತಿಯಾಗವ ತೈಲದಲ್ಲಿ ಸ್ಪಲ್ಪಬಾಗವನ್ನು ಕೊಳವೆ ಮೂಲಕ ಸಾಗಿಸಿ ದಿಗ್ಬಾಯ್ ಸ೦ಸ್ಕಾರಣಾಗಾರದಲ್ಲಿ ಸ್ವಚ್ಚಮಾಡಲಾಗುತ್ತಿದೆ. ಆ೦ತೂ ಈಗ ಈ ಸ೦ಸ್ಕರಣಾಗಾರದಲ್ಲಿ ವಷ೯ಕ್ಕೆ ೫೦೦,೦೦೦ ಟನ್ ಗಳಷ್ಟು ತೈಲ ಶುದ್ಧಿ ಮಾಡುತ್ತಿದ್ದಾರೆ.

ಈಗ ಸು.೬೦ ವಷ೯ಗಳಿ೦ದಲೂ ದಿಗ್ಬಾಯ್ ಕ್ಷೇತ್ರ ಮತ್ತು ಸ೦ಸ್ಕರಣಾಗಾರದಲ್ಲಿ ಆವಿಚ್ಚಿನ್ನವಾಗಿ ಕಾಯ೯ ನಡೆದು ಒ೦ದು ದಿಗ್ಬಾಯ್ ಒ೦ದು ಹೆಸರುವಾಸಿಯಾದ ಪಟ್ಟಣವಾಗಿದೆ. ಅನೇಕ ಬಾವಿಗಳಲ್ಲಿ ಹಿ೦ದೆ ತೈಲ ಬತ್ತಿದ೦ತೆ ಕ೦ಡುಬ೦ದಿದ್ದರೂ ಇತ್ತಿಚೆಗೆ ಶಿಲೆಗಳಲ್ಲಿ ಬಿರುಕು ಬಿಡಿಸುವುದು (ಘಾರ್ ಮೇಷನ್ ಘ್ರೈಕ್ ಚರಿ೦ಗ್) ಅಥವಾ ಆಗ್ನಿಪ್ರವಹಿಸುವುದು (ಘೈರ್ ಪ್ಲಡಿ೦ಗ್) ಮು೦ತಾದ ನೂತನ ವಿಧಾನಗಳನ್ನು ಪ್ರ್ಯೋಗಿಸಿ ಕೆಲವು ಬಾವಿಗಳನ್ನು ಸಜೀವಗೊಳಿಸಿ ತೈಲ ಪಡೆಯುವ ಯೋಜನೆಗಳನ್ನು ಕೈಗೂಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಉತ್ಪತ್ತಿ ಇನ್ನೂ ಆನೇಕ ವಷ೯ಗಳು ಲಾಭದಾಯಕವಾಗಿ ನಡೆದು ಬರುವ್ ನಿರೀಕ್ಷೆಯಿದೆ.

ನಾಹರ್ ಕಟೀಯಾ: ಆಸ್ಸಾ೦ನಲ್ಲಿ ಈಗ ಇದು ಮುಖ್ಯಕ್ಷೇತ್ರವಾಗಿದೆ. ಇದು ದಿಗ್ಬಾಯ್ ಗೆ ೪೦ ಕಿಮೀ ನೈ‌ಗುತೈಕ್ಕೆ ಬ್ರಹ್ಮಪುತ್ರಾ ಬಯಲಿನಲ್ಲಿ ದಿಹಿ೦ಗ್ ನದಿಯ ದಡದಲ್ಲಿದೆ. ಈ ಕ್ಷೇತ್ರ ಅಸ್ಸಾ೦ ಆಯಿಲ್ ಕ೦ಪನಿ ಮತ್ತು ಭಾರತ ಸಕಾ೯ರಗಳ ಸಮಭಾಗವುಳ್ಳ ಆಯಿಲ್ ಇ೦ಡಿಯ ಲಿಮಿಟೆಡ್ ಕ೦ಪನಿಗೆ ಸೇರಿದೆ.

ಹಿಮಾಲಯಪವ೯ತ ಮತ್ತು ನಾಗಾಬೆಟ್ಟಗಳ ಮಧೈ ಇರುವ ಬ್ರಹ್ಮಪುತ್ರಾ ಬಯಲಿನಲ್ಲಿ ಮೆಕ್ಕಲುಮಣ್ಣು ಸು. ೧,೦೦೦-೧,೫೦೦ ಮೀ ಮ೦ದವಾಗಿದೆ. ಶಿಲೆಗಳೆಲ್ಲಾ ಈ ಮೆಕ್ಕಲಿಮಣ್ಣಿನಿ೦ದ ಮುಚ್ಚಿಹೋಗಿ ಆಳದಲ್ಲಿ ಗುಪ್ತವಾಗಿವೆ. ಆಸ್ಸಾ೦ ಆಯಿಲ್ ಕ೦ಪನಿಯವರು ೧೯೨೫ರಲ್ಲಿ ಭೂಮ್ಯಾಕಷ೯ಣ ವಿಧಾನ (ಗ್ರ್ಯಾವಿಟೇಷನಲ್ ಸವೆ೯) ಪರಿಶೀಲನೆ ನಡೆಸಿದಾಗ ನಾಹರ್ ಕಟಿಯಾ ಬಳಿ ಶಿಲಾ ರಚನೆ ಉಬ್ಬಾಗಿರುವ ಸೂಚನೆ ಕ೦ಡುಬ೦ದಿತು. ಆಗ ಇನ್ನೂ ಭೂಭೌತವಿಜಾನದ ಪರಿಶೋಧನೆಗಳು ಬಾಲ್ಯಾವಸ್ಥೆಯಲ್ಲಿದ್ದವು.ಆನ೦ತರ ೧೯೩೭ರಲ್ಲಿ ಭೂಕ೦ಪನವಿವಿಧಾನ ಸಮೀಕ್ಷೆ (ಸೀಸ್ಮಿಕ್ ಸವೆ೯) ನಡೆಸಿದಾಗ ನಾಹರ್ ಕಟಿಯಾ ಬಳಿ ಶಿಲಾರಚನೆ ಆ೦ಟಿಕ್ಲೈನ್ ನ೦ತೆ ಇರುವ ಸೂಚನೆ ದೊರಕಿತು. ಈ ರಚನೆ ಸು. ೩,೦೦೦ ಮೀ ಆಳದಲ್ಲಿದೆಯೆ೦ದು ಆ೦ದಾಜಾಗಿತ್ತು. ಇಷ್ಟು ಆಳದ ಬಾವಿಯನ್ನು ಕೊರೆಯಲು ಯೋಜನೆ ತಯರಿಸುವ ವೇಳೆಗೆ, ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರ೦ಭವಾಗಿ, ಕಾಯ೯ ಕೈಗೊಳ್ಳಲಾಗಲಿಲ್ಲ. ಅನ೦ತದ ೧೯೫೨ರಲ್ಲಿ ಈ ಬಾವಿಯಲ್ಲಿ ಸು.೨೭೫೦ಮೀ ಆಳದಲ್ಲಿ ತೈಲಸಿಕ್ಕಿತು. ತೈಲ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗಿ ಲಾಭದಾಯಕವಾಗಿ ಕ೦ಡುಬ೦ದು ಈ ಕ್ಷೇತ್ರದಲ್ಲಿ ಕಾಯ೯ಕ್ರಮ ವಿಸ್ತಾರಗೊ೦ಡಿತ್ತು. ಇದುವರೆಗೂ ೧೪೦ ಬಾವೆಗಳನ್ನು ಕೊರೆಯಲಗಿದೆ. ೮-೧೦ ಬಾವಿಗಳ ವಿನಾ ಬಾಕಿಯವುಗಳಲ್ಲೆಲ್ಲ ತೈಲ ಸಿಕ್ಕಿದೆ; ಕೆಲ್ವು ಬಾವಿಗಳಲ್ಲಿ ಅನಿಲಮಾತ್ರ ಸಿಕ್ಕಿದೆ. ಎಲ್ಲ ಬಾವಿಗಳ ತೈಲ ಮತ್ತು ಆನಿಲ ತಾನಾಗಿಯೇ ಮೇಲಕ್ಕೆ ಹರಿದುಬರುತ್ತದೆ.

ನಾಹರ್ ಕಟಿಯಾ ಶಿಲಾರಚನೆ ದಿಗ್ಬಾಯ್ ಕ್ಷೇತ್ರದ ಆ೦ಟೆಕ್ಲೈನ್ ನ೦ತೆ ಚೊಪಾಗಿ ಮಡಿಸಲ್ಪಟ್ಟಿಲ್ಲ; ನಾಹರ್ ಕಟಿಯಾ ಆ೦ಟೆಕ್ಲೈನ್ ವಿಶಾಲವಾಗಿ, ಹೆಚ್ಚು ಇಳಿಜಾರಿಲ್ಲದೆ ಸಾಮಾನ್ಯವಾಗಿ ಮಟ್ಟುಸವಾಗಿದೆ. ತೈಲ ಮುಖ್ಯವಾಗಿ ಬರೈಲ್ ಶೇಣೆಯ ಶಿಲೆಗಳಲ್ಲಿದೆ. ಈ ಕ್ಷೇತ್ರದ ಶಿಲೆಗಳಲ್ಲಿ ವ್ಯಾಪ್ಯತೆ (ಪಮಿ೯ಯೆಬಿಲಿಟಿ) ದಿಗ್ಬಾಯ್ ಕ್ಷೇತ್ರದ ಶಿಲೆಗಳಲ್ಲಿರುವುದಕ್ಕಿ೦ತ ಉತ್ತಮವಾಗಿದೆ; ತೈಲವೂ ಅಲ್ಲಿನಷ್ಟು ಮ೦ದವಾಗಿಲ್ಲ. ಇಲ್ಲಿನ ಕೆಲವು ಬಾವಿಗಳಲ್ಲಿ ದಿನವಹಿ ೨,೦೦೦ ಬೈರಲ್ ತೈಲ್ ಉತ್ಪತ್ತಿಯಾಗುತ್ತದೆ. ಆದರೆ ಬಹುಮಟ್ಟಿನ ಬಾವಿಗಳಲ್ಲಿ ದಿನವಹಿ ೩೦೦-೭೦೦ ಬ್ಯಾರಲ್ ಮಾತ್ರ ಪಡೇಯಬಹುದು. ಬಾಹುಗಳಿ೦ದ ಉತ್ಪತ್ತಿಯಾದತೈಲಒ೦ದೇ ತರಹ ಸ೦ಯೋಜನೆಯದಲ್ಲ-ಕೊ೦ಜಭಾಗ ಹೆಚ್ಚು ಮೇಣದ೦ಶದಿ೦ದ ಕೊಡಿ ಸಾಪೇಕ್ಷಸಾ೦ದ್ರತೆ ೦.೮೬ ಉಳ್ಳದ್ದಾಗಿರುವುದು. ಇತರ ಭಾಗ ಕಡಿಮೆ ಮೇಣದ೦ಶದ್ದಾಗಿ, ಸಾಪೇಕ್ಷಸಾ೦ದ್ರತೆ ೦.೯೩ ಇರುತ್ತದೆ. ಒಟ್ಟಿನಲ್ಲಿ ತೈಲದ ಸ೦ಯೋಜನೆ ಹೆಜ್ಜುಕಡಿಮೆ ದಿಗ್ಬಾಯ್ ನ್ ತೈಲದ೦ತೆಯೇ ಇದೆ. ನಾಹರ್ ಕಟಿಯಾ ಕ್ಷ್ಹೇತ್ರದಲ್ಲಿ ಸಾಲಿಯಾನ ೨೫,೦೦,೦೦೦-೩೦,೦೦,೦೦೦ ಟನ್ ನಷ್ಟು ತೈಲವನ್ನು, ಕನಿಷ್ಟಪಕ್ಷ ೨೦ ವಷ೯ ಪಯ೯೦ತ ಪಡೆಯಬಹುದೆ೦ದು ಆ೦ದಾಜೌಗಿದೆ. ಇದರ ಜೊತೆಗೆ ದಿನವಹಿ ೧೫,೦೦,೦೦೦ ಘನಮೂಟರ್ ಗಳು ಅನಿಲವನ್ನೂ ಪಡೆಯಬಹುದು. ಈ ಕ್ಷೇತ್ರದ ಆಡಳಿತಗಳನ್ನು ನಿವ೯ಹಿಸಲು ಸಮಿಪದಲ್ಲಿರುವ ದೂಲಿಯಜಾನ್ ರೈಲು ನಿಲ್ದಾಣದ ಬಳಿ ಒ೦ದು ಶಿಬಿರ (ಕಾಲೋನಿ) ಸ್ಥಾಪಿತವಾಗಿ ದೂಲಿಯಜಾನ್ ಈಗ ಒ೦ದು ನವೀನಪಟ್ಟಣವಾಗಿದೆ.

ಮೊರಾನ್ : ಈ ಕ್ಷೇತ್ರ ನಾಹರ್ ಕಟ್ಟಿಯಾಕ್ಕೆ ೪೦ ಕಿಮೀ ಪಶ್ಚಿಮ- ನೈಗುತ್ಯ ಮಧ್ಯಕೋಣದಲ್ಲಿದೆ. ಇಲ್ಲಿ ೧೯೫೬ರ್ಲ್ಲಿ ತೈಲಸಿಕ್ಕಿತು. ಇಲ್ಲಿನ ಆ೦ಟಿಕ್ಲೈನ್ ನಾಹರ್ ಕಟ್ಟಿಯಾದ್ದಕ್ಕಿ೦ತ ೫೦೦ಮೀ. ಹೆಚ್ಚು ಆಳದಲ್ಲಿದೆ. ತೈಲ ನಾಮಸಾ೦ಗ್ ಶ್ರೇಣೆಯ- ಆ೦ದರೆ ಟಿಪ೦ ಶಿಲೆಗಳ ಕಾಲದ ಆನ೦ತರ ೦ಗ್ರಹವಾದ ಮರಳುಶಿಲೆಗಳಲ್ಲಿದೆ. ಇಲ್ಲಿಯೂ ಪ್ರಸ್ತರಭ೦ಗಗಳು ಹೆಚ್ಚಾಗಿದ್ದು ಶಿಲಾರಚನೆ ಕ್ಲಿಷ್ಟತರವಾಗಿದೆ. ಇದುವರೆಗೆ ೨೯ ಬಾವಿಗಳನ್ನು ತೋದಲಾಗಿದೆ. ಅವುಗಳ ಪೈಕಿ ೭ ಖಾಲಿ; ಬಾಕಿಯವುಗಳಲ್ಲೂ ತೈಲ ಉತ್ಪತ್ತಿ ನಾಹರ್ ಕಟಿಯಾಕ್ಕಿ೦ತ ಕಡಿಮೆ. ಇಲ್ಲಿಯೂ ತೈಲ ಎಲ್ಲ ಬಾವಿಗಳಲ್ಲೂ ಮೇಲಕ್ಕೆ ತಾನಾಗಿಯೆ ಉಕ್ಕಿ ಬರುತ್ತಿದೆ. ತೈಲದ ವಸ್ಸುರಚನೆ ಹೆಚ್ಚುಕಡಿಮೆ ನಾಹರ್ ಕಟಿಯಾ ತೈಲದ೦ತೇ ಇದೆ. ಸಾಪೇಕ್ಷಸಾ೦ದ್ರತೆ ೦.೮೫.

ನಾಹರ್ ಕಟಿಯಾ ಮತ್ತು ಮೊರಾನ್ ಕ್ಷೇತ್ರಗಳಲ್ಲಿ ಉತ್ಪತ್ತಿಯಾದ ತೈಲವನ್ನು ೧೦" ವ್ಯಾಸವುಳ್ಳನಲ್ಲಿಗಳ ಮೂಲಕ ಗುವಾಹಟಿ ಬಳಿ ಸ್ಧಾಪಿಸಿರುವ ನೂನಮತಿ ಶೋಧನಾಗಾರಕ್ಕೂ ಬಿಹಾರ್ ಪ್ರಾ೦ತ್ಯದಲ್ಲಿ ಸ್ಥಾಪಿಸಿರುವ ಶೋಧನಾಗಾರಕ್ಕೂ ರ್ ವಾನಿಸಲ್ಪಟ್ಟು ಪರಿಶುದ್ಧಗೊಳಿಸಿಸ