ಪುಟ:Mysore-University-Encyclopaedia-Vol-1-Part-2.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದರಗಳೂ, ಉತ್ತರದ ಹೊಳಪು ಕಪ್ಪು ಬಣ್ಣದ ಮಡಕೆಗಳೂ ಪದರಗಳೂ ಶುಂಗರ ಕಾಲದ ಅವಶೇಷಗಳೂ ಕಂಡುಬಂದಿವೆ ಇವು ೪೦೦೦ ವರ್ಷಗಳ ಹಿಂದಿನಿಂದ ಗಂಗಾ ಬಯಲಿನಲ್ಲಿ ಪಸರಿಸಿದ್ದ ವಿವಿಧ ಸಂಸ್ಕೃತಿಗಳ ಬಗ್ಗೆ ಮಾಹಿತಿ ದೊರಕಿಸಿಕೊಡುತ್ತವೆ. (ಎಸ್.ಎನ್)

ಅಲಕನಂದ : ಗಂಗಾನದಿಯ ಜಲಮೂಲಗಳಲ್ಲಿ ಒಂದು, ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಟಿಬೆಟ್ಟಿನ ಗಂಗೋತ್ರಿ ಹಿಮನದಿಯಿಂದ ಸು.೨೮ ಕಿಮೀ ದೂರದ ಗೋಮುಖ್ ಎಂಬ ಗುಹೆಯಲ್ಲಿ ಸು.೬೬೦೦ ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ. ಆನಂತರ ಪೂರ್ವಾಭಿಮುಖವಾಗಿ ಹರಿದು ದೇವಪ್ರಯಾಗದ ಬಳಿ ಭಾಗೀರಥಿ ಜಲ ಮೂಲವನ್ನು ಸೇರುತ್ತದೆ. ಅಲ್ಲಿಂದ ಮುಂದೆ ಈ ಎರಡೂ ನದಿಗಳು ಸೇರಿ ಗಂಗಾನದಿಯಾಗಿ ಹರಿಯುತ್ತವೆ. ಸರಸ್ವತೀ ನದಿಯಲ್ಲದೆ ಇದಕ್ಕೆ ಅನೇಕ ಉಪನದಿಗಳಿವೆ. ನಂದಾಕಿನಿ ನಂದಪ್ರಯಾಗದಲ್ಲೂ ಪಿಂದಾರ ಕರ್ಣಪ್ರಯಾಗದಲ್ಲೂ ಮಂದಾಕಿನಿ ರುದ್ರಪ್ರಯಾಗದಲ್ಲೂ ಈ ನದಿಗೆ ಸೇರಿ ಆಯಾ ಸ್ಥಳಗಳನ್ನು ಪವಿತ್ರ ಸಂಗಮಕ್ಷೇತ್ರಗಳಾಗಿ ಮಾಡಿವೆ. (ಪಿ.ಡಿ.ಎಂ) ತ್ರಿಪಥಗಾಮಿನಿಯಾದ ಗಂಗೆ ದೇವಲೋಕದಲ್ಲಿ ಹರಿಯುವಾಗ ಈ ಹೆಸರನ್ನು ಪಡೆಯುತ್ತಾಳೆಂದು ಪುರಾಣದ ವಿವರಣೆ. ದಡದ ಮೇಲೆ ಬ್ರಹ್ಮಕಪಾಲವೆಂಬುದು ಪ್ರಸಿದ್ಧ ಪವಿತ್ರಸ್ಥಳ. ಬದರೀಯಾತ್ರೆಗೆ ಹೋಗುವವರೆಲ್ಲ ಇಲ್ಲಿ ಬಂದು ಪಿತೃಗಳಿಗೆ ಪಿಂದಪ್ರದಾನ ಮಾಡುವುದು ರೂಢಿ.ಇಲ್ಲಿ ಮಾಡಿದ ಶ್ರಾದ್ಧದಿಂದ ವಿಷ್ಣು ಪದ ದೊರೆಯುವುದೆಂದು ನಂಬಿಕೆ. (ಎಸ್.ಕೆ.ಆರ್)

ಅಲಕಪಾದಿಗಳು: ಸಿರ್ರಿಪೀಡಿಯ ಎಂದರೆ ಕೂದಲಿನಂತಹ ಕಾಲುಗಳುಳ್ಳ ಜೀವಿಗಳು. ಕ್ರಸ್ಟೇಷಿಯ ವರ್ಗದ ಒಂದು ಉಪವಿಭಾಗ, ಕುರುಳುಪಾದಿಗಳು ಇವುಗಳನ್ನು ಬಾರ್ನಕಲ್ಸ್(ಚಿಪ್ಪುಳ್ಳ ಪ್ರಾಣಿಗಳು) ಎಂದು ಕರೆಯುತ್ತಾರೆ. ಇವು ಸಾಮನ್ಯವಾಗಿ ಸಮುದ್ರದಲ್ಲಿ ತೇಲುವ ಮರದ ದಿಮ್ಮಿಗಳಿಗೂ ಹಡಗಿನ ತಳಕ್ಕೂ ಅಂಟಿಕೊಂಡು ಬದುಕುತ್ತವೆ. ಬಾರ್ನಕಲ್ ಗಳ ಪ್ರಭೇದಗಳಲ್ಲಿ ಸಾಮಾನ್ಯವಾಗಿ ಹಡಗುಗಳಿಗೆ ಅಂಟಿಕೊಂಡು ಪ್ರಾಣಿಗೆ ಲಿಪಾಸ್ ಎಂದು ಹೆಸರು. ಸಾಮಾನ್ಯ ರೂಢನಾಮ ಬಾತುಕೋಳಿಬಾರ್ನಕಲ್ (ಗೂಸ್ ಬಾರ್ನಕಲ್). ಇದು ಕ್ರಸ್ಟೇಷಿಯ ವರ್ಗದ ಯಾವ ಪ್ರಾಣಿಯನ್ನೂ ಹೋಲುವುದಿಲ್ಲ.ಉದ್ದವಾದ ಮಾಂಸಖಂಡಗಳ ತೊಟ್ಟಿನಿಂದ ಆಧಾರಕ್ಕೆ ಅಂಟಿಕೊಡಿರುತ್ತದೆ. ತೊಟ್ಟಿನ ತುದಿಯಲ್ಲಿ ಒಂದುರೊಡನೊಂದು ಬೆಸುಗೆ ಹಾಕಿದಂತೆ ಸೇರಿರುವ ಕಠಿಣವಾದ ಐದು ತಟ್ಟೆಗಳ ಚಿಪ್ಪು ಇದೆ. ಚಿಪ್ಪಿನ ಒಂದು ತುದಿಯಲ್ಲಿ ಸೀಳಿನಂತಿರುವ ಒಂದು ರಂಧ್ರವಿದೆ. ಪ್ರಾಣಿ ರಂಧ್ರದ ಮೂಲಕ ಸುರುಳಿಯಂತಿರುವ ತನ್ನ ಆರು ಜೊತೆ ಕುರುಳು ಕಾಲುಗಳನ್ನು ಬೇಕೆಂದಾಗ ಹೊರಚಾಚಬಲ್ಲದು, ಒಳಗೆ ಎಳೆದುಕೊಳ್ಳಬಲ್ಲದು. ಈ ಕಾಲುಗಳು ಅತ್ಯಂತ ಕಠಿಣವಾದ ಮತ್ತು ಒಂದರೊಡನೊಂದು ಭದ್ರವಾಗಿ ಹೆಣೆದುಕೊಂಡಿರುವ ರೋಮಗಳಂತಿರುವ ರಚನೆಗಳನ್ನು ಹೊಂದಿವೆ. ಲಿಪಾಸ್ ಪ್ರಾಣಿ ಅದರ ಕಾಲುಗಳನ್ನು ಹೊರಚಾಚಿ ಪೂರ್ಣವಾಗಿ ಬಿಡಿಸಿದಾಗ ಈ ರೋಮಗಳಂಥ ರಚನೆಗಳು ಒಂದು ರೀತಿಯ ಬಲೆಯಂತೆ ಕಾಣುತ್ತವೆ. ಇದರ ಸಹಾಯದಿಂದ ಅದು ನೀರನ್ನು ಶೋಧಿಸಿ ಅದರೊಳಗಿರುವ ಸೂಕ್ಷ್ಮ ಜೀವಿಗಳನ್ನು ಹಿಡಿದು ಆಹಾರವಾಗಿ ಸೇವಿಸುತ್ತದೆ. ಹಿಡಿದ ಮೇಲೆ ಕಾಲುಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆ. ಲಿಪಾಸ್ ಆಂಟಿಕೊಂಡಿರುವ ಈ ತೊಟ್ಟು ಉತ್ಪತ್ತಿ ಮಾಡುವ ಅಂಟಾದ ವಸ್ತುವಿನೊಳಗೆ ಆಡಗಿವೆ. ಆಹಾರ ಬೇಟೆಯಾಡುವ ವಿಧಾನವನ್ನು ಗಮನಿಸಿದ ಜೀವಶಾಸ್ತ್ರಜ಼್ ಹಕ್ಸ್ ಲೀ ಈ ಪ್ರಾಣಿಯನ್ನು ತಲೆಯ ಮೇಲೆ ನಿಂತು ಕಾಲಿನಿಂದ ಆಹಾರವನ್ನು ಬಾಯಿಗೆ ಬೀಳುವಂತೆ ಒದೆಯುವ ಪ್ರಾಣಿ ಎಂದು ವಿವರಿಸಿದ್ದಾನೆ.

ಬಲಾನಸ್: ಅಲಕಪಾದಿಗಳ ಗುಂಪಿಗೆ ಸೇರಿದ ಮತ್ತೊಂದು ಪ್ರಾಣಿ. ರಚನೆಯಲ್ಲಿ ಲಿಪಾಸನ್ನೇ ಹೋಲುತ್ತದೆ. ಆದರೆ ಇದಕ್ಕೆ ಲಿಪಾಸನಂತೆ ಉದ್ದವಾದ ತೊಟ್ಟು ಇಲ್ಲ. ಈ ಪ್ರಾಣಿ ತ್ರಿಕೋಣಾಕಾರದ ಗಟ್ಟಿ ಪದಾರ್ಥಕ್ಕೆ ಅಂಟಿಕೊಂಡಿರುವ ಗಟ್ಟಿಯಾದ ಚಿಪ್ಪಿನೊಳಗಿರುತ್ತದೆ. ಚಿಪ್ಪಿನ ಮೇಲುಭಾಗದಲ್ಲಿ ಒಂದು ದೊಡ್ಡ ರಂಧ್ರವಿದೆ. ಇದನ್ನು ಬಾಗಿಲುಗಳಂಥ ಕವಾಟವುಳ್ಳ ಒಂದು ಜೊತೆ ಚಿಪ್ಪುಗಳು ಮುಚ್ಚಿಕೊಂಡಿವೆ. ಚಿಪ್ಪುಗಳು ರಂಧ್ರದ ಮೂಲಕ ಪ್ರಾಣಿ ತನ್ನ ಪಾದಗಳನ್ನು ಹೊರಚಾಚಬಲ್ಲುದು. ಬಾರ್ನಕಲ್ ಗಳಿಗೆ ಮೃದ್ವಂಗಿ ಗಳಂತೆಯೇ ಶರೀರವು ಚಿಪ್ಪಿನಿಂದ ಅವೃತವಾಗಿರುವುದರಿಂದ ಇವನ್ನು ಮೃದ್ವಂಗಿಗಳೆಂದೇ ತಿಳಿಯಲಾಗಿತ್ತು. ಆದರೆ ಜೆ.ವಿ.ಥಾಮ್ ಸನ್ ಎಂಬ ನೌಕಾಪಡೆಯ ವೈದ್ಯ ಬಾರ್ನಕಲ್ ಗಳ ಲಾರ್ವಾ (ಡಿಂಬ)ಗಳು ಕ್ರಸ್ಟೇಷಿಯ ವರ್ಗದ ಲಾರ್ವಾಗಳನ್ನು ಹೋಲುತ್ತವೆಂದು ಕಂಡುಹಿಡಿದ (೧೮೩೦).ಆದ್ದರಿಂದ ಕುತೂಹಲ ಗೊಂಡ ಆ ವೈದ್ಯ ಬಾರ್ನಕಲ್ ಜೀವಿಯ ಮೊಟ್ಟೆಗಳನ್ನೂ ಭ್ರೂಣ ಬೆಳೆವಣಿಗೆಯ ಪ್ರಥಮ ಹಂತದಲ್ಲಿ ಪರೀಶೀಲಿಸಿದ. ಈ ಎರಡು ರೀತಿಯ ಮೊಟ್ಟೆಗಳಿಂದಲೂ ಒಂದೇ ರೀತಿ ಇರುವ ಲಾರ್ವಾ ಜೀವಿಗಳು ಹೊರಬಂದವು. ಇವೇ ನಾಪ್ಲಿಯಸ್ ಲಾರ್ವಾಗಳೂ. ಬರ್ನಕಲ್ ನಾಪ್ಲಿಯಸ್ ಲಾರ್ವಾಗಳಿಗೂ ಕ್ರಸ್ಟೇಷಿಯದ ನಾಪ್ಲಿಯಸ್ ಲಾರ್ವಾಗಳಿಗೂ ಕೇವಲ ಕೆಲವೇ ಸೂಕ್ಷ್ಮ ರಚನೆಗಳಲ್ಲಿ ಭಿನ್ನತೆಯಿದೆ. ನಾಪ್ಲಿಯಸ್ ಲಾರ್ವಾ ನೀರಿನಲ್ಲಿ ಈಸಿ ಬೆಳೆದು ಮುಂದೆ ಸ್ಕೈಪ್ರಿಸ್ ಎಂಬ ಮತ್ತೊಂದು ರೀತಿಯ ಲಾರ್ವಾ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಲಾರ್ವಾ ತನ್ನ ಶರೀರವನ್ನು ಎರಡು ಚಿಪ್ಪುಗಳಿಂದ ಮುಚ್ಚಿಕೊಂಡಿರುತ್ತದೆ. ಶರೀರದ ಮುಂಭಾಗದಲ್ಲಿ ಒಂದು ಜೊತೆ ವಿಚಿತ್ರರೀತಿಯ ಕುಡಿಮೀಸೆಗಳಿರುತ್ತವೆ. ಈ ಅವಸ್ಥೆಯಲ್ಲಿ ಅವಕ್ಕೆ ಆರು ಜೊತೆ ಪಾದಗಳಿರುತ್ತವೆ. ಅದರ ಕುಡಿಮೀಸೆಗಳಲ್ಲಿ ಅಂಟುಸಿಂಬಿ ಗಳಿದ್ದು ಸಕಾಲದಲ್ಲಿ ಯಾವುದಾದರೊಂದು ಗಟ್ಟಿ ಪದಾರ್ಥಕ್ಕೆ ಅಂಟಿಕೊಳ್ಳಲು ಸಹಾಯ ಮಾಡುತ್ತವೆ. ಈ ಜೀವಿ ಸಂಪೂರ್ಣವಾಗಿ ಅಂಟಿಕೊಂಡು ಮೇಲೆ ಅದರ ಶರೀರದ ಎರಡು ಚಿಪ್ಪುಗಳನ್ನು ವಿಸರ್ಜಿಸಿ ರೂಪಾಂತರಣ ಹೊಂದುತ್ತದೆ. ಬಾರ್ನಕಲ್ ಪ್ರಾಣಿ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ದಂತಕಥೆಗಳು ಪ್ರಚಾರದಲ್ಲಿವೆ. ಜೀವವಿಕಾಸದ ಬಗೆಗೆ ವಿವರಣೆ ನೀಡುವಾಗ ಕೆಲವರು ಇವೇ ಹೇಗೆ ಬದಲಾಗಿ ಮುಂದೆ ಸಮುದ್ರದ ಬಾತುಕೋಳಿಯಾದುವೆಂದು ಕಥೆಯರೂಪದಲ್ಲಿ ಹೇಳುತ್ತಾರೆ. ಇವೆಲ್ಲ ಕಾಲ್ಪನಿಕ ಕಥೆಗಳು. ಬಾತುಕೋಳಿಗೂ ಬಾರ್ನಕಲ್ ಪ್ರಾಣಿಗಳಿಗೂ ಯವ ಸಂಬಂಧವೂ ಇಲ್ಲ.

ಸಾಕ್ಯುಲೈನ್: ಅಲಕಪಾದಿಗಳ ವಿಭಾಗದಲ್ಲಿ ಆಶ್ಚರ್ಯಕರವಾದ ಪರತಂತ್ರ ಜೀವಿಗಳೂ ಇವೆ. ಇವುಗಳಿಗೂ ಬಾರ್ನಕಲ್ ಪ್ರಾಣಿಗಳಿಗೂ ಮತ್ತಿತ್ತರ ಸಂದಿಪದಿಗಳಿಗೂ ಬಾಹ್ಯವಾಗಿ ಯಾವ ರೀತಿಯಲ್ಲಿಯೂ ಹೋಲಿಕೆ ಇಲ್ಲ. ಕೆಲವು ಏಡಿಗಳಲ್ಲಿ ಅವುಗಳ ಉದರದ ತಳಭಾಗದಲ್ಲಿ ಒಂದು ರೀತಿಯ ಮಾಂಸದ ಮುದ್ದೆಯಂತಿರುವ ಮೃದುವಾದ ಗಡ್ಡೆಯನ್ನು ಕಾಣಬಹುದು. ಈ ಗಡ್ಡೆ ತನ್ನ ನೈಜರೂಪವನ್ನು ಸಂಪೂರ್ಣವಾಗಿ ಕೆಳೆದುಕೊಂಡಿರುವ ಒಂದು ಅಲಕಪಾದಿ. ಇದೊಂದು ಪರತಂತ್ರ ಜೀವಿ. ಇದರ ಹೆಸರು ಸಾಕ್ಯುಲೈನ. ಗಡ್ಡೆಯಂತೆ ಕಾಣುವ ಈ ಜೀವಿ ಏಡಿಯ ಶರೀರಕ್ಕೆ ತನ್ನ ಒಂದು ಚಿಕ್ಕ ತೊಟ್ಟಿನಂತಿರುವ ರಚನೆಯಿಂದ ಅಂಟಿಕೊಂಡಿದೆ. ಸೂಕ್ಶ್ಮ ದಾರಗಳಂತಿರುವ ಬೇರುಗಳಂಥ ರಚನೆಗಳನ್ನು ಏಡಿಯ ಶರೀರದ ಎಲ್ಲಾ ಭಾಗಗಳಿಗೂ ಹರಡುತ್ತದೆ. ಈ ರೀತಿಯ ರಚನೆಗಳು ಏಡಿಯ ಕಾಲಿನ ತುದಿಯವರೆಗೂ ಹರಡಿರುವುದನ್ನು ಕಾಣಬಹುದು. ಬೇರುಗಳಂಥ ಈ ರಚನೆಗಳಿಂದ ಸಾಕ್ಯುಲೈನ ಜೀವಿ ಏದಿಯ ಶರೀರದಿಂದ ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಹೀರಿಕೊಲ್ಲುತ್ತದೆ. ಅದಕ್ಕೆ ಆಹಾರವನ್ನು ಅಗಿಯಲು ದವಡೆಗಳಿಲ್ಲ. ಜೀರ್ಣೀಸಿಕೊಳ್ಳಲು ಜೀರ್ಣಾಂಗಗಳಿಲ್ಲ: ಚಲನೆಗೆ ಕಾಲುಗಳಿಲ್ಲ. ವಿವರಿಸಲು ಸರಿಯಾದ ರೂಪವೇ ಇಲ್ಲ! ಈ ರೀತಿಯಲ್ಲಿರುವ ಸಂಪೂರ್ಣ ಅಂಗವಿಕಾರವನ್ನು ಹೊಂದಿರುವ ಈ ಜೀವಿ ಪ್ರಾಪ್ತವಯಸ್ಸಿಗೆ