ಪುಟ:Mysore-University-Encyclopaedia-Vol-1-Part-2.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂದ್ರಿಚ್, ಈವೊ - ಆಂಧ್ರ ಪ್ರದೇಶ

ಮೂಲಕ ನುಗ್ಗುತ್ತದೆ. ವಿದ್ಯುನ್ಮಾನಗಳು ಧನ ಧ್ರುವದಿಂದ ಕಿರಣಗಳ ಕಡ್ಡಿಯಾಗಿ ಧನ ಧ್ರುವದ ಆಚೆಗೆ ಸ್ವಲ್ಪ ದೂರ ಇಟ್ಟಿರುವ ಓರೆಯಾಗಿ ಮಾಡುವ ಎರಡು ಫಲಕಗಳ ಮಧ್ಯೆ ನುಸಿಯುತ್ತವೆ. ಇನ್ನೊಂದು ಜೊತೆ ಫಲಕಗಳು ಮತ್ತೂ ಸ್ವಲ್ಪ ದೂರವಾಗಿರುತ್ತವೆ. ಈ ಎರಡು ಜೊತೆಗಳ ಸಮತಲಗಳು ಒಂದಕ್ಕೊಂದು ಸಮಕೋನವಾಗಿರುತ್ತವೆ. ಕೊನೆಯಲ್ಲಿ ಋಣ ವಿದ್ಯುತ್ತಿನ ಕಿರಣಗಳ ಕಡ್ಡಿ ಸ್ಫುರಣಮಾಡುವ ಗುಣವುಳ್ಳ ಪರದೆಯನ್ನು ಮುಟ್ಟಿ ಒಂದು ಪ್ರಕಾಶಮಾನವಾದ ಚುಕ್ಕಿಯನ್ನು ಉಂಟುಮಾಡುತ್ತದೆ.

  ಒಂದು ಜೊತೆ ಫಲಕಗಳ ನಡುವೆ ಸ್ಥಾನಶಕ್ತಿಯ ವ್ಯತ್ಯಾಸವನ್ನುಂಟುಮಾಡಿ ಇನ್ನೊಂದು ಸಂಬಂಧವನ್ನು ಕಡಿದರೆ ಪರದೆಯ ಮೇಲಿರುವ ಬೆಳಕಿನ ಚುಕ್ಕಿ ಓರೆಯಾಗುತ್ತದೆ. ಸ್ಥಾನಶಕ್ತಿಯ ವ್ಯತ್ಯಾಸ ಪರ್ಯಾಯ ವಿದ್ಯುತ್ತಿನದಾಗಿದ್ದರೆ ಓರೆಮಾಡುವ ಫಲಕದ ಸ್ಥಾನಕ್ಕೆ ಅನುಗುಣವಾಗಿ ಮಟ್ಟವಾಗಿಯಲಿ ಇಲ್ಲವೆ ಲಂಬವಾಗಿಯಾಗಲಿ, ಆ ಚುಕ್ಕಿ ಒಂದು ಸರಳರೇಖೆಯ ಮೇಲೆ ಸಂಚರಿಸುತ್ತದೆ. ಒಂದು ಜೊತೆ ಫಲಕಗಳಿಗೆ ಬದಲಾಗಿ ಕೊಳವೆಯ ಹೊರಗಡೆ ಎದುರುಬದುರಾದ ಸ್ಥಾನಗಳಲ್ಲಿ ಎರಡು ತಂತಿಯ ಸುರಳಿಗಳನ್ನಿಟ್ಟು ವಿದ್ಯುನ್ಮಾನಗಳ ಪ್ರವಾಹವನ್ನು ಓರೆಮಾಡಲು ಕಾಂತಕ್ಷೇತ್ರವನ್ನು ಉತ್ಪತ್ತಿಮಾಡುವ ಈ ತಂತಿಯ ಸುರಳಿಗಳ ಮೂಲಕ ವಿದ್ಯುತ್ಪ್ರವಾಹವನ್ನು ಕಳಿಸಿ ಇದೇ ರೀತಿಯ ಭಾಗವನ್ನು ಉಂಟುಮಾಡಬಹುದು.
  ಈ ರೇಖೆಯನ್ನು ಕಾಲಕಾಲಕ್ಕೆ ಬದಲಾಗುವ ವ್ಯತ್ಯಾಸಗಳನ್ನು ತೋರಿಸುವ ವಕ್ರರೇಖೆಗೆ ಪರಿವರ್ತನ ಮಾಡಬೇಕಾದರೆ ಒಂದು ಕಾಲದ ಆಧಾರವನ್ನು ಒದಗಿಸುವುದಕ್ಕಾಗಿ ಈ ಪರ್ಯಾಯ ವಿದ್ಯುತ್ತಿಗೆ ಸಮಕೋನವಾದ ಇನ್ನೊಂದು ಬಾಗಿಸುವ ಬಲ ಬೇಕಾಗುತ್ತದೆ. ಇದಕ್ಕಗಿ ಓರೆಮಾಡುವ ಎರಡನೆಯ ಜೊತೆ ಫಲಕಗಳಿಗೆ ಒಂದು ನಿಯತವಾದ (ಕಾನ್ ಸ್ಟೆಂಟ್) ದರದಲ್ಲಿ ವಿದ್ಯುದ್ವಿಭವವನ್ನು ಪ್ರಯೋಗಿಸಬೇಕಾಗುತ್ತದೆ. ಆಗ ಪರ್ಯಾಯವಾಗುವ ಕ್ಷೇತ್ರದಿಂದ ಉದ್ಭವಿಸುವ ಓಲುಮೆಯ (ಡಿಪ್ಲೆಕ್ಷನ್) ದಿಕ್ಕಿಗೆ ಸಮಕೋನವಾಗಿರುವ ದಿಕ್ಕಿನಲ್ಲಿ ಚುಕ್ಕಿಯ ಸ್ಥಾನಪಲ್ಲಟ (ಡಿಸ್ ಪ್ಲೇಸ್ ಮೆಂಟ್) ಏಕರೀತಿಯ ಪ್ರಮಾಣದಲ್ಲಿರುತ್ತದೆ, ಆಗ ರೇಖೀಯ (ಲೀನಿತರ್) ಕಾಲದ ಆಧಾರವುಳ್ಳಾ ತರಂಗ ಬರುತ್ತದೆ. ಈ ರೀತಿಯಲ್ಲಿ ಸಮಕೋನದಲ್ಲಿರುವ ಸಮಕ್ಷೇತ್ರ ವಿನ್ಯಾಸದಲ್ಲಿ ಹೀಗೆ ಪರ್ಯಾಯವಾದ ತರಂಗದ ಆಕಾರವನ್ನು ಗುರುತು ಮಾಡಬಹುದು. ಬದಲಾಗುತ್ತಿರುವ ಎರಡು ಪರಿಮಾಣಗಳನ್ನು ಒಂದೇ ಕಾಲದಲ್ಲಿ ಪಎಇಶೀಲಿಸಬೇಕಾಗಿ ಬಂದಾಗ ಎರಡು ಕಿರಣಾಗಳ ಜಾಲಗಳ ಆಧೋವಾಟ ಕಿರಣಗಳ ಆಂದೋಲನ ಮಾಪಕವನ್ನು ಉಪಯೋಗಿಸಬಹುದು. ಆದರೆ ಡಡೆಲ್ ಮಾದರಿಯ ಅನೇಕ ಭಾಗಗಳಿರುವ ವಿದ್ಯುತ್ಕಾಂತ ಆಂದೋಲನಮಾಪಾಕವನ್ನು ಒಂದು ಯಂತ್ರದ ಮೂರು ನಿರ್ದಿಷ್ಟ ನೆಲೆಗಳಲ್ಲಿ ವಿದ್ಯುತ್ಪ್ರವಾಹ ಗಳು ಮತ್ತು ವಿದ್ಯುದ್ವಿಭವಗಳ ಹಾಗೆ ಅನೇಕ ಪರಿಣಾಮಗಳಲ್ಲಿ ಬದಲಾವಣೆಗಳನ್ನು ಪಪಿಶೀಲಿಸಲು ಉಪಯೋಗಿಸುತ್ತರೆ.
  ಆಂದ್ರಿಚ್, ಈವೊ :1892. ಯುಗೋಸ್ಲಾವಿಯದ ಕಾದಂಬರಿಕಾರ, ಕವಿ, ಕಥೆಗಾರ. ಒಂದನೆಯ ಮಹಾಯುದ್ಧಕ್ಕೆ ಮೊದಲು ಯುಗೋಸ್ಲಾವಿಯದ ಐಕ್ಯಕ್ಕಾಗಿ ಹೋರಾಡಿದುದರಿಂದ ಆಸ್ಟ್ರಿಯದ ಆಡಳಿತಗಾರರು ಬಂಧನದಲ್ಲಿಟ್ಟರು. ಸ್ವತಂತ್ರ ಯುಗೋಸ್ಲಾವಿಯದಲ್ಲಿ ರಾಯಭಾರಿ ಶಾಖೆಯಲ್ಲಿ ಕೆಲಸ ಮಾಡಿದ. ಎರಡನೆಯ ಮಹಾಯುದ್ಧ, ಯುಗೋಸ್ಲಾವಿಯದಲ್ಲಿ ಹೊಸ ರಾಜಕೀಯ ಪಂಥದ ಆಡಳಿತದ ಪ್ರತಿಷ್ಠಾಪನೆ - ಇವು ಹಲವುಸಾಹಿತಿಗಳ ಅಸ್ತಮಾನವನ್ನು ತಂದರೂ ಈತ ನಾಡಿನ ಅತ್ಯಂತ ಪ್ರಭಾವಯುತ, ಸನ್ಮಾನಿತ ಸಾಹಿತಿಗಳಲ್ಲಿ ಒಬ್ಬನಾಗಿ ಉಳಿದ. ಮನುಷ್ಯರ ನೋವಿನಲ್ಲಿ ಗಾಢವಾದ ಅನುಕಂಪ, ನಿಸರ್ಗದ ನಿಗೂಢತೆಯ ಎದುರಿನಲ್ಲಿ ಮನುಷ್ಯನ ಅಲ್ಪತ್ವಗಳು ಇವನ ಕೃತಿಗಳಲ್ಲಿ ಅಭಿವ್ಯಕ್ತಿ ಪಡೆದಿವೆ. ಇವನ ಶೈಲಿ ನಿಷ್ಕೃಷ್ಟವೂ ಅಡಕವೂ ಆಗಿದೆ. ಬೋಸ್ನಿಯ ರೈತವರ್ಗವನ್ನು ಅಸಾಧಾರಣ ಯಶಸ್ಸಿನಿಂದ, ಕಣ್ಣಿಗೆ ಕಟ್ಟುವ ಹಾಗೆ ಆತ್ಮೀಯವಾಗಿ ಈತ ಚಿತ್ರಿಸಿದ್ದಾನೆ. ಬೊಸ್ನಿಯವನ್ನು ಕುರಿತು ಈತ ಬರೆದಿರುವ ಮೂರು ಭಾಗದ ಕೃತಿಗೆ 1961ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.
  ಆಂದ್ರೆಯಾನಿ, ಜೋವನಿ ಬ್ಯಾಟಿಸ್ಟ:1578-1652. ಇಟಲಿಯ ನಾಟಕಕಾರ, ನಟ. ಹಲವಾರು ಪ್ರಹಸನಗಳನ್ನು ಬರೆದರೂ ಹೆಸರು ಉಳಿದಿರುವುದು ಬೈಬಲ್ ಕಥೆಯನ್ನು ಅನುಸರಿಸಿ ಬರೆದ, ಅದ್ಭುತ ಕಾಲ್ಪನಿಕ ಪ್ರಹಸನ ಆಡೆಮೋದಿಂದ. ಇದು ಮಿಲ್ಟನ್ ಕವಿಗೆ ತನ್ನ ಮಹಾಕಾವ್ಯ ಪ್ಯಾರಡೈಸ್ ಲಾಸ್ಟ್ ಬರೆಯಲು ಸೂಚನೆಕೊಟ್ಟಿತ್ತೆಂದು ಹೇಳಲಾಗಿದೆ.
  ಆಂಧ್ರಪತ್ರಿಕಾ :ಪ್ರಸಿದ್ಧ ತೆಲುಗು ಪತ್ರಿಕೆಗಳಲ್ಲೊಂದು. ದೇಶೋದ್ಧಾರಕ ನಾಗೇಶ್ವರರಾವ್ ಪಂತುಲು ಬೊಂಬಾಯಿಯಲ್ಲಿ ವಾರಪತ್ರಿಕೆಯಾಗಿ ಸ್ಥಾಪಿಸಿದರು (1909). ಅನಂತರ ಮದರಾಸಿಗೆ ವರ್ಗಾವಣೆ ಹೊಂದಿ (1914) ಜನ ಪ್ರಿಯ ದಿನಪತ್ರಿಕೆಯಾಯಿತು. ಇದು ಆಂಧ್ರಪ್ರದೇಶದ ಮೊದಲ ಸುವ್ಯವಸ್ಥಿತ ದೈನಂದಿನ ಪತ್ರಿಕೆ. ಆಂಧ್ರ ಪ್ರಾಂತ್ಯ ರಚನೆಯ ಬಗ್ಗೆ ಇದು ತೋರಿದ ಮಧ್ಯಮ ನೀತಿ, ಒಂದನೆಯ ಮಹಾ ಯುದ್ಧ, ಅನಂತರದ ಭಾರತ ರಾಷ್ಟ್ರೀಯ ಚಳವಳಿಯಲ್ಲಿ ಇದು ತೋರಿದ ಧೋರಣೆಗಳಿಂದಾಗಿ ಜನ ಪ್ರಿಯ ರಾಷ್ಟ್ರಪತ್ರಿಕೆ ಎನ್ನಿಸಿಕೊಂಡಿತು. 1969ರಲ್ಲಿ ಆಂಧ್ರಪತ್ರಿಕೆಯು ತನ್ನ ಸ್ವಂತ ಕಚೇರಿಯನ್ನು ದೆಹಲಿಯಲ್ಲಿ ಸ್ಥಾಪಿಸಿತು. ಇದರ ಸ್ವರ್ಣಮಹೋತ್ಸವ 1964ಲ್ಲಾಯಿತು. ಜೊತೆಪತ್ರಿಕೆಗಳಾಗಿ ವಾರಪತ್ರಿಕೆಯೂ ಭಾರತಿ ಎಂಬ ಮಾಸಿಕವೂ ಜನಮನ್ನಣೆ ಗಳಿಸಿವೆ. ಕೇಂದ್ರ ಕಾರ್ಯಾಲಯ ಹೈದರಾಬಾದ್ ನಲ್ಲಿದೆ.
  ಆಂಧ್ರ ಪ್ರದೇಶ :ಭಾರತದ ಒಂದು ರಾಜ್ಯ ದಕ್ಷಿಣದಿಂದ ಮಧ್ಯಭಾರತವನ್ನು ಮುಟ್ಟುವಂತಿರುವ ಈ ರಾಜ್ಯ ಭಾರತದ 965 ಕಿಮೀ ಪೂರ್ವ ತೀರವನ್ನೊಳಗೊಂಡಿದೆ. ಉ.ಅಕ್ಷಾಂಶ 77 - 85 ,ಪೂರ್ವರೇಖಾಂಶ 12-19 ಯವರೆಗೆ ಹರಡಿರುವ ಈ ರಾಜ್ಯವನ್ನು ಉತ್ತರದಲ್ಲಿ ಒರಿಸ್ಸ, ಛತ್ತೀಸ್ ಘರ್ ಮತ್ತು ಮಹಾರಾಷ್ಟ್ರ ರಾಜ್ಯಗಳೂ ದಕ್ಷಿಣದಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳೂ ಪೂರ್ವದಲ್ಲಿ ಬಂಗಾಲಕೊಲ್ಲಿಯೂ ಪಶ್ಚಿಮದಲ್ಲಿ ಕರ್ನಾಟಕ ರಾಜ್ಯ ಸುತ್ತುವರೆದಿವೆ. 23 ಜಿಲ್ಲೆಗಳನ್ನೂ 210 ನಗರ ಪಟ್ಟಣಗಳನ್ನೂ 28,123 ಗ್ರಾಮಗಳನ್ನೊಳಗೊಂಡ ಈ ರಾಜ್ಯದ ಒಟ್ಟು ವಿಸ್ತೀರ್ಣ 2,75,069 ಚಕಿಮೀ. ಜನಸಂಖ್ಯೆ 7,61,11,243 (2001). ರಾಜಧಾನಿ ಹೈದರಾಬಾದ್.
  ಮೇಲ್ಕೈ ಲಕ್ಷಣಾಗಳು : ದಕ್ಷಿಣ ಭಾರತದಲ್ಲಿ ದಖನ್ ಪ್ರಸ್ಥಭೂಮಿಯ ಉತ್ತರ ಪ್ರದೇಶವನ್ನೊಳಗೊಂಡಿರುವ ಈ ರಾಜ್ಯವನ್ನು ಮೂರು ಭಾಗವಾಗಿ ವಿಂಗಡಿಸಬಹುದು. 1 ದಖನ್ ಪ್ರಸ್ಥಭೂಮಿ: ಮಧ್ಯಭಾಗವನ್ನೊಳಗೊಂಡಿದೆ. ಇದನ್ನು ತೆಲಂಗಾಣ ಪ್ರಸ್ಥಭೂಮಿ ಎನ್ನುತ್ತಾರೆ. ಇದು ದಕ್ಷಿಣದಲ್ಲಿ ಚಿತ್ತೂರಿನಿಂದ ಉತ್ತರದಲ್ಲಿ ಆದಿಲಾಬಾದ್ ವರೆಗೆ ಹಬ್ಬಿದೆ. ದಕ್ಷಿಣಭಾಗದಲ್ಲಿ ಕಿರಿದಾಗಿದ್ದು ಉತ್ತರಕ್ಕೆ ಹೋದಂತೆಲ್ಲ ಅಗಲವಾಗುತ್ತದೆ. 2 ಪೂರ್ವಘಟ್ಟಗಳ ಪ್ರದೇಶ : ಇದು ದಕ್ಷಿಣದಲ್ಲಿ ಶೇಷಾಚಲ (ತಿರುಪತಿ) ಮತ್ತು ಪಾಲ್ ಕೊಂಡ ಬೆಟ್ಟಗಳಿಂದ ಉತ್ತರದಲ್ಲಿ ಶ್ರೀಕಾಕುಳಂ ಜಿಲ್ಲೆಯ ಉತ್ತರಭಾಗದವರೆಗೆ ಹಬ್ಬಿದೆ. ನಲ್ಲಮಲ ಎಂಬ ಹೆಸರಿನ ಈ ಪೂರ್ವ ಘಟ್ಟಗಳು 430 ಕಿಮೀ ಉದ್ದವಾಗಿ ಸರಾಸರಿ 30 ಕಿಮೀ ಅಗಲವಾಗಿವೆ.