ಪುಟ:Mysore-University-Encyclopaedia-Vol-1-Part-2.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲಘನಿ ಪರ್ವತಗಳು - ಅಲಭ್ಯತೆ ಬಂದಾಗ ಮೊಟ್ಟೆಯ ಚೀಲದಂತಿರುತ್ತದೆ. ಇದು ಪ್ರಾಯಕ್ಕೆ ಬಂದಾಗ ಕುರುಳುಪಾದಿಯೆನ್ನುವುದಕ್ಕಾಗಲಿ ಅಥವಾ ಸಂದಿಪದಿಯೆನ್ನುವುದಕ್ಕಾಗಲಿ ಯಾವ ಆಧಾರವೂ ಇಲ್ಲ. ಆದರೆ ಇದರ ಭ್ರೂಣ ಬೆಳೆವಣಿಗೆಯ ಅಧ್ಯಯನದಿಂದ ಇದು ಕುರುಳುಪಾದಿ ವಿಭಾಗಕ್ಕೆ ಸೇರಿದ್ದೆಂದು ಸ್ಥಿರಪಡಿಸಬಹುದು. ಇದರ ಮೊಟ್ಟೆಗಳಿಂದ ನಾಪ್ಲಿಯಸ್ ಲಾರ್ವಾ ಹೊರಬರುತ್ತದೆ. ಇದು ಮುಂದೆ ಸೈಪ್ರಿಸ್ ಲಾರ್ವಾ ಆಗಿ ಪರಿವರ್ತನೆಗೊಳ್ಳುತ್ತದೆ. ಸಾಕ್ಯುಲೈನ ಪ್ರಾಣಿಯಿಂದ ಹುಟ್ಟಿ ಬರುವ ಸೈಪ್ರಿಸ್ ಲಾರ್ವಾಗೂ ಇತರ ಬಾರ್ನಕಲ್ ಪ್ರಾಣಿಗಳ ಸೈಪ್ರಿಸ್ ಪ್ರಾಣಿಗಳಿಗೂ ವ್ಯತ್ಯಾಸವೇನಿಲ್ಲ. ಆದರೆ ಈ ಪ್ರಾಣಿಯ ಸೈಪ್ರಿಸ್ ಲಾರ್ವಾಕ್ಕೆ ಅನ್ನನಾಳ, ಬಾಯಿಗಳಿರುವುದಿಲ್ಲ. ಈ ಸೈಪ್ರಿಸ್ ಯಾವುದಾದರೊಂದು ಏಡಿಯ ಉದರಕ್ಕೆ ಅಂಟಿಕೊಂಡು ಬೆಳೆದು ದೊಡ್ಡದಾಗಿ ಸಾಕ್ಯುಲೈನ ಜೀವಿಯಾಗಿ ಪರಿವರ್ತನೆ ಮಾಡುವುದು ಕಂಡುಬಂದಿದೆ. ಈ ಪರತಂತ್ರ ಜೀವಿ ಗಂಡು ಏಡಿಗಳ ಅತಿಥೇಯದಲ್ಲಿ ಹೆಣ್ಣು ಏಡಿಗಳ ಬಾಹ್ಯ ಲಕ್ಷಣಗಳುಂಟಾಗುವಂತೆ ಮಾಡುತ್ತವೆ. ಹೆಣ್ಣು ಏಡಿಗಳ ಆತಿಥೇಯದಲ್ಲಿ ಅವುಗಳ ಅಂಡಾಶಯ ಕ್ಷೀಣಿಸುವಂತೆ ಮಾಡುತ್ತವೆ. ಲಿಂಗಪರಿವರ್ತನೆ ಮಾಡುವ ಈ ವಿಧಾನವನ್ನು ಪರತಂತ್ರ ನಿರ್ವೀರ್ಯಗೊಳಿಸುವಿಕೆ ಎನ್ನುತ್ತೇವೆ. (ನೋಡಿ-ಕಠಿಣ್-ಚರ್ಮಿಗಳು) (ಎಲ್.ಎಸ್.ಜಿ.) ಅಲಘನಿ ಪರ್ವತಗಳು: ಪೆನ್ಸಿಲ್ವೇನಿಯ, ವರ್ಜಿನಿಯ ಸಂಸ್ಥಾನಗಳಲ್ಲಿ ಮತ್ತು ನ್ಯೂಯಾರ್ಕ್ ಸಂಸ್ಥಾನದ ಕೆಲವು ಭಾಗಗಳಲ್ಲಿ ಹಬ್ಬಿವೆ. ಹಡ್ಸನ್ ನದಿಯ ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುತ್ತವೆ. ಸರಾಸರಿ ಎತ್ತರ ೧೪೬೦ ಮೀ. ಪ್ರಮುಖವಾಗಿ ಅಪಲೇಷಿಯನ್ ಪರ್ವತಗಳ ಭಾಗ. ಹಿಮಯುಗದಲ್ಲಿ ಹಿಅಮಭರಿತವಾಗಿದ್ದುವು. ಹಿಮನದಿಗಳ ಪ್ರವಾಹ ತಂದ ಮೆಕ್ಕಲು ಮಣ್ಣಿನಿಂದಾಗಿ ಅನೇಕ ಆಳವಾದ ಕಣಿವೆಗಳು ಫಲವತ್ತಾಗಿವೆ. ಪ್ರಸ್ಥಭೂಮಿ ಪ್ರದೇಶ ಬಹು ಒರಟಾಗಿದೆ. ಆದ್ದರಿಂದ ಈ ಭಾಗದಲ್ಲಿನ ಅಲಘನಿ ಮುಂತಾದ ಅನೇಕ ನದಿಪಾತ್ರಗಳಲ್ಲಿ ಹಲವು ಜಲಪಾತಗಳಿವೆ. ಪ್ರಸ್ಥಭೂಮಿಯ ಅನೇಕ ಕಡೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗಿದೆ. ತರಕಾರಿಗಳನ್ನು ಬೆಳೆಯುವುದು ಇಲ್ಲಿನ ಅತಿ ಮುಖ್ಯ ಲಾಭದಾಯಕ ಉದ್ಯಮ. (ಜಿ.ಕೆ.ಜಿ.) ಅಲಬಾಮ : ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ ಸಂಯುಕ್ತ ಸಂಸ್ಥಾನದ ಆಗ್ನೇಯದಲ್ಲಿರುವ ಈ ರಾಜ್ಯವನ್ನು ಉತ್ತರದಲ್ಲಿ ಟೆನೆನ್ಸಿ, ಪೂರ್ವಕ್ಕೆ ಜಾರ್ಜಿಯ, ದಕ್ಷಿಣದಲ್ಲಿ ಫ್ಲಾರಿಡ, ಪಶ್ಚಿಮದಲ್ಲಿ ಮಿಸಿಸಿಪ್ಪಿ ಸಂಸ್ಥಾನಗಳು ಸುತ್ತುವರೆದಿವೆ. ವಿಸ್ತೀರ್ಣ ೧೩,೩೯೫೦. ಚ.ಕಿಮೀ. ಜನಸಂಖ್ಯೆ ೪,೩೬೯,೮೬೨ (೧೯೯೯). ರಾಜಧಾನಿ ಮಾಂಟ್ಗೊಮರಿ. ಅಲಬಾಮ: ಸಂಯುಕ್ತಸಂಸ್ಥಾನಕ್ಕೆ ಸ್ಪೇನ್ ದೇಶದಿಂದ ೧೭೯೫ ಮತ್ತು ೧೮೧೩ ರಲ್ಲಿ ಒಪ್ಪಿಸಲ್ಪಟ್ಟು, ೧೮೧೭ ರಲ್ಲಿ ಒಂದು ಸೀಮೆಯಾಗಿ ೧೮೧೯ ರಲ್ಲಿ ಪ್ರಾಂತ್ಯವಾಗಿ ಕೇಂದ್ರಕ್ಕೆ ಸೇರಿಸಲ್ಪಟ್ಟಿತು. ಒಳಯುದ್ಧ ಮುಗಿದ ಅನಂತರ ೧೮೬೫ ರಲ್ಲಿ ಮತ್ತೆ ಕೇಂದ್ರಕ್ಕೆ ಸೇರಿತು. ಮೆಕ್ಸಿಕೊ ಖಾರಿಯ ೮೦ ಕಿಮೀ ಉದ್ದನೆಯ ತೀರ ಪ್ರದೇಶವಲ್ಲದೆ ಅಪಲೇಷಿಯನ್ ಪರ್ವತಗಳ ದಕ್ಷಿಣದ ತುದಿಯವರೆಗಿರುವ ತೀರದ ಮೈದಾನದವರೆಗೂ ೨೧೩ ಕಿಮೀ ವಿಸ್ತರಿಸಿದೆ. ದಕ್ಷಿಣಭಾಗದಲ್ಲಿ ಇರುವುದರಿಂದ, ಮೇಲ್ಮೈ ಲಕ್ಷಣದ ಪರಿಣಾಮವಾಗಿ ಹಿತಕರವಾದ ಉಷ್ಣವಲಯದ ವಾಯುಗುಣವನ್ನು ಹೊಂದಿದೆ; ಬೇಸಗೆ ದೀರ್ಘವಾದರೂ ಉಷ್ಣ ಹೆಚ್ಚಿರುವುದಿಲ್ಲ. ಗಾಳಿ ತೇವವಾಗಿರುತ್ತದೆ. ಚಳಿಗಾಲ ಹ್ರಸ್ವವಲ್ಲದೆ ಹಿತಕರವಾಗಿರುತ್ತದೆ. ಉತ್ತರದ ಪರ್ವತ ಪ್ರದೇಶದಲ್ಲಿ ಸ್ವಲ್ಪ ಹಿಮ ಬೀಳುತ್ತದೆ. ಜನವಸತಿ ಪ್ರಾರಂಭವಾದುದು ಬಹು ಹಿಂದೆಯೇ; ಚಾರಿತ್ರಿಕ ಮತ್ತು ಆರ್ಥಿಕ ತೊಂದರೆಗಳು ಆಗಾಗ್ಯೆ ಬಂದರೂ ಬೆಳವಣಿಗೆ ಒಂದೇ ಸಮನಾಗಿ ಮುಂದುವ್ರಿದಿದೆ. ಹತ್ತೊಂಬತ್ತನೆಯ ಶತಮಾನ ಕಳೆಯುವವರೆಗೂ ಅದರ ಪ್ರಗತಿ ವಿಶೇಷವಾಗಿ ಕೃಷಿರಂಗದಲ್ಲಿತ್ತು: ಹತ್ತಿ ಅದರ ಸಂಪತ್ತಿನ ಬಹುಭಾಗವನ್ನೊದಗಿಸಿತು. ಈಗ ಧಾನ್ಯ, ನೆಲಗಡಲೆ, ಹಣ್ಣುಗಳು, ಕಾಯಿಪಲ್ಯಗಳಲ್ಲದೆ ಹತ್ತಿಯ್ಱನ್ನೂ ಬೆಳೆಸುತ್ತಾರೆ; ಪಶುಪಾಲನೆಯೂ ಬಹಳ ಹೆಚ್ಚಿದೆ. ಇತ್ತೀಚಿನ ದಶಕಗಳಲ್ಲಿ ಕಲ್ಲಿದ್ದಲು, ಕಬ್ಬಿಣಗಳ ಉತ್ಪಾದನೆ ಹೆಚ್ಚಿದೆ. ಅಲಬ್ಯಾಮದ ಕೈಗಾರಿಕಾ ಪ್ರಗತಿ, ಅದರ ಖನಿಜೋತ್ಪನ್ನಗಳ ಪ್ರಮಾಣಕ್ಕನುಸಾರವಾಗಿ ಮುಂದುವರಿದಿದೆ; ಈ ಉತ್ಪನ್ನವೇ ಇಡೀ ದೇಶದ ಉತ್ಪನ್ನದ ಮೂರನೆಯ ಎರಡರಷ್ಟಿದೆ; ಕಬ್ಬಿಣ, ಉಕ್ಕು, ನೇಯ್ಗೆ ಪದಾರ್ಥಗಳು, ಕಲ್ಲೆಣ್ಣೆ, ರಾಸಾಯನಿಕಗಳು, ಮರಮುಟ್ಟುಗಳು, ಕಾಗದ, ಸಂಸ್ಕರಿಸಿದ ಮಾಂಸದ 'ಪ್ಯಾಕ್' ಮಾಡುವುದು ಮತ್ತು ಯಂತ್ರೋಪಕರಣಗಳು ಇವು ಮುಖ್ಯವಾದುವು. ಶೇ.೩೦ ಜನ ನೀಗ್ರೋಗಳು. ಮುಖ್ಯ ಪಟ್ಟಣಗಳು, ಬರ್ಮಿಂಗ್ ಹ್ಯಾಂ, ಮೊಬೈಲ್ ಮತ್ತು ಮಾಂಟ್ಗೊಮರಿ. ದಕ್ಷಿಣ ಪ್ರದೇಶದಲ್ಲಿನ ಗತವೈಭವವನ್ನು ‍‍‍‍‍‌ಜಾಪಕಕ್ಕೆ ತರುವಂಥ ರಾಜ್ಯದ ಚರಿತ್ರಾರ್ಹವಾದ, ಹಿಂದಿನ ಯುದ್ಧಪೂರ್ವ ಸ್ಥಳಗಳು ಮತ್ತು ಹಳೆಯ ದೊಡ್ಡ ಮರದ ತೋಪುಗಳನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. (ಸಿ.ಎಂ.) ಅಲಭ್ಯತೆ : ಒಂದು ವ್ಯವಸ್ಥೆ (ಸಿಸ್ಟಂ) ಹಠಾತ್ ಬದಲಾವಣೆ ಹೊಂದುವ ಸಾಧ್ಯತೆಯನ್ನು ಅಳತೆ ಮಾಡುವ ಅಂಕ (ಎಂಟ್ರೊಪಿ). ಈ ಅಂಕದ ಹೆಸರು ವ್ಯವಸ್ಠೆಯ ಅಲಭ್ಯತೆ. ಉಷ್ಣ ಚಲನಶಾಸ್ತ್ರದ (ಥರ್ಮೋಡೈನಮಿಕ್ಸ್) ಮತ್ತು ಸಂಖ್ಯಾಶಾಸ್ತ್ರ (ಸ್ಪ್ಯಾಟಿಸ್ಟಿಕ್ಸ್) ಇವುಗಳನ್ನು ಆಧರಿಸಿ ಅಲಭ್ಯತೆಯ ವ್ಯಾಖ್ಯೆ ನೀಡಬಹುದು. ಹೀಗೆ ದೊರೆಯುವ ಎರಡು ವ್ಯಾಖ್ಯೆಗಳೂ ಪರಸ್ಪರ ಸಂಗತವಾಗಿವೆ. ಉಷ್ಣಚಲನಶಾಸ್ತ್ರದ ಪ್ರಕಾರ ಅಲಭ್ಯತೆ ಎಸ್ ನ ಬೆಲೆಯನ್ನು ನೀಡುವ ಸಮೀಕರಣ ಉ‍ಷ್ಣ ಪರಿಣಾಮ, ಟಿ ನಿರಪೇಕ್ಷೆ ಉಷ್ಣತೆ. ಸಂಖ್ಯಾಶಾಸ್ತ್ರದ ಪ್ರಕಾರ ಅಲಭ್ಯತೆ ಒಂದು ವ್ಯವಸ್ಥೆಯ ಯಾದೃ‌ಚ್ಛಿಕತೆಯ ಮಾನ ಅಥವಾ ಕ್ರಮರಾಹಿತ್ಯದ ಅಥವಾ ಗೊಂದಲದ ಡಿಗ್ರಿ. ಉದಾಹರಣೆಗೆ, ವ್ಯವಸ್ಥೆಯನ್ನು ಒಂದು ಕೋಣೆಯಲ್ಲಿರುವ ಗಾಳಿಯ ಅಣುಗಳು ಎಂದು ಭಾವಿಸಬಹುದು. ಅಣುಚಲನ ಶಾಸ್ತ್ರದ (ನೋಡಿ- ಅಣುಚಲನವಾದ,-ವಸ್ತುವಿನ) ಪ್ರಕಾರ ಈ ಅಣುಗಳ ಯಾದೃಚ್ಛಿಕ ಚಲನೆಯೇ ಉಷ್ಣ. ಅಂದರೆ ಕೋಣೆಯಲ್ಲಿರುವ ಗಾಳಿಯ ಎಲ್ಲ ಅಣುಗಳೂ ೩.೦೪೮ ಮೀ * ೧.೫೨೪ * ೨.೭೪೩ ಮೀ.ಘನಗಾತ್ರದ ಕೋಣೆಯಲ್ಲಿ ಸುಮಾರು ೧೦೨೭ ಅಣುಗಳಿವೆಯೆಂದು ತಿಳಿದಿದೆ) ನಿರಂತರ ಯಾದೃಚ್ಛಿಕ ಚಲನೆಯಲ್ಲಿರುತ್ತವೆ. ಒಂದು ಊಹ್ಯ ಊರ್ದ್ವ ಸಮತಳದಿಂದ ಕೋಣೆಯನ್ನು ಎರಡು ಭಾಗಗಳಾಗಿ ವಿಭಾಗಿಸಲಾಗಿದೆಯೆಂದು ಭಾವಿಸಿದರೆ ಅಣುಗಳ ಯಾದೃಚ್ಛಿಕ ಚಲನೆಯಿಂದ ಯಾವುದೋ ಒಂದು ಗಳಿಗೆಯಲ್ಲಿ ಅವೆಲ್ಲವೂ ಒಂದು ಭಾಗದಲ್ಲಿ ನಿಬಿಡವಾಗಿ ಸೇರಿಸಿಕೊಳ್ಳಬಹುದು; ಇನ್ನೊಂದು ಭಾಗ ಆ ಗಳಿಗೆಯಲ್ಲಿ ಅತಿ ವಿರಳವಾಗಬಹುದು. ಹೀಗೆ ಆಗುವ ಸಂಭಾವ್ಯತೆಯನ್ನು (ಪ್ರಾಬಬಿಲಿಟಿ) ಗಣಿತಶಾಸ್ತ್ರದ ಪ್ರಕಾರ ಲೆಕ್ಕ ಹಾಕಿದಾಗ ಸುಮಾರು ೧೦೨೯೯ ೯೯೯ ೯೯೯ ೯೯೯ ೯೯೯ ೯೯೯ ೯೯೯ ೯೯೯ ೯೯೮ ಸೆಕೆಂಡುಗಳಷ್ಟು ಕಾಲ ಬೇಕಾಗಬಹುದು ಎಂದು ತಿಳಿಯಿತು. ವಿಶ್ವದ ಪ್ರಾಯಕ್ಕಿಂತಲೂ (೧೦೧೭ ಸೆಕೆಂಡುಗಳು) ಈ ಅವಧಿ ದೊಡ್ಡದು; ಸಾರಾಂಶವಿಷ್ಟೆ: ಕೋಣೆಯ ಒಂದು ಪಾರ್ಶ್ವ ನಿರ್ವಾತವೂ ಇನ್ನೊಂದು ಪಾರ್ಶ್ವ ಗಾಳಿ ಅಣುಗಳ ಅತಿ ನಿಬಿಡ ಸೇರ್ಪಡೆಯೂ ಆಗುವಂಥ ಘಟನೆ ಅಸಾಧ್ಯವಲ್ಲ; ಆದರೆ ಅತಿ ಅಸಂಭವನೀಯ. ಜಗತ್ತಿನ ಯಾವ ಎರಡು ಪದಾರ್ಥಗಳಿಗೆ ಉಷ್ಣಾಂಶ ವ್ಯತ್ಯಾಸವಿದ್ದರೂ ಉಷ್ಣಶಕ್ತಿಯು ತಾನಾಗಿಯೇ ಬಿಸಿ ವಸ್ತುವಿನಿಂದ ಶೀತವಸ್ತುವಿಗೆ ಹರಿಯುತ್ತದೆ. ಬೇಕಿದ್ದರೆ ನಮ್ಮ ಪ್ರಯತ್ನದಿಂದ ಇದನ್ನು ಶೀಘ್ರವಾಗಿ ಹರಿಯುವಂತೆ ಮಾಡಬಹುದು ಅಷ್ಟೆ. ಹೀಗೆ ಹರಿಯುವಾಗ ಉಷ್ಣಶಕ್ತಿಯ ಒಂದು ಭಾಗವನ್ನು ನಾವು ನಮಗೆ ಬೇಕಾದ ರೂಪಕ್ಕೆ ತಿರುಗಿಸಿಕೊಳ್ಳಬಹುದು. ಆದರೆ ಹರಿದದ್ದಾದ ಮೇಲೆ ಶೀತವಸ್ತು ಹೀರಿಕೊಂಡ ಶಕ್ತಿಯು ನಮಗೆ ಅಲಭ್ಯವಾಗುತ್ತದೆ. ಉಷ್ಣ ಪ್ರವಾಹವಾದಾಗಲೆಲ್ಲ-ಉಷ್ಣಪ್ರವಾಹವು ಯಾವಾಗಲೂ ಆಗುತ್ತಲೇ ಇರುತ್ತದೆ- ವಿಶ್ವದ ಶಕ್ತಿಯ ಸಂಗ್ರಹದಲ್ಲಿ ಹೀಗೆ ಸ್ವಲ್ಪ ಭಾಗವು ಅಲಭ್ಯರೂಪವನ್ನು ಪಡೆಯುತ್ತದೆ. ಜಗತ್ತಿನ ಯಾವ ಎರಡು ಪದಾರ್ಥಗಳಿಗೆ ಉಷ್ಣಾಂಶ ವ್ಯತ್ಯಾಸವಿದ್ದರೂ ಉಷ್ಣಶಕ್ತಿಯು ತಾನಾಗಿಯೇ ಬಿಸಿ ವಸ್ತುವಿನಿಂದ ಶೀತವಸ್ತುವಿಗೆ ಹರಿಯುತ್ತದೆ. ಬೇಕಿದ್ದರೆ ನಮ್ಮ ಪ್ರಯತ್ನದಿಂದ ಇದನ್ನು ಶೀಘ್ರವಾಗಿ ಹರಿಯುವಂತೆ ಮಾಡಬಹುದು ಅಷ್ಟೆ. ಹೀಗೆ ಹರಿಯುವಾಗ ಉಷ್ಣಶಕ್ತಿಯ ಒಂದು ಭಾಗವನ್ನು ನಾವು ನಮಗೆ ಬೇಕಾದ ರೂಪಕ್ಕೆ ತಿರುಗಿಸಿಕೊಳ್ಳಬಹುದು. ಆದರೆ ಹರಿದದ್ದಾದ ಮೇಲೆ ಶೀತವಸ್ತು ಹೀರಿಕೊಂಡ ಶಕ್ತಿಯು ನಮಗೆ ಅಲಭ್ಯವಾಗುತ್ತದೆ. ಉಷ್ಣ ಪ್ರವಾಹವಾದಾಗಲೆಲ್ಲ-ಉಷ್ಣಪ್ರವಾಹವು ಯಾವಾಗಲೂ ಆಗುತ್ತಲೇ ಇರುತ್ತದೆ-ವಿಶ್ವದ ಶಕ್ತಿಯ ಸಂಗ್ರಹದಲ್ಲಿ ಹೀಗೆ ಸ್ವಲ್ಪ ಭಾಗವು ಅಲಭ್ಯರೂಪವನ್ನು ಪಡೆಯುತ್ತದೆ. ಶೀತತಮ ಪದಾರ್ಥದಲ್ಲಿ ಮುಳುಗಿರುವ ಶಕ್ತಿಯು ನಮಗೆ ಅಲಭ್ಯವಾದುದರಿಂದ, ಪದಾರ್ಥದ ಉಷ್ಣಾಂಶವು ಹೆಚ್ಚಿದಂತೆಲ್ಲಾ ಲಭ್ಯಶಕ್ತಿಯು ಹೆಚ್ಚು ಎಂದು ಹೇಳುವ ಹಾಗಿಲ್ಲ. ಶಕ್ತಿಯನ್ನು ಬಳಸಿಕೊಳ್ಳಲು ನಮಗೆ ಮತ್ತೊಂದು ಶೀತಪದಾರ್ಥದ ಅಗತ್ಯವಿರುವುದರಿಂದ ಎಲ್ಲ ಪದಾರ್ಥಗಳ ಉಷ್ಣಾಂಶವೂ ಅಧಿಕವಾಗಿದ್ದರೆ ಆಗಲೂ ಶಕ್ತಿಯು ಅಲಭ್ಯವೇ. ಆದ ಕಾರಣ ಪದಾರ್ಥಗಳ ಉಷ್ಣಾಂಶಗಳ ವ್ಯತ್ಯಾಸ ಹೆಚ್ಚಿದಂತೆ ಶಕ್ತಿಯ ಲಭ್ಯತೆಯು ಹೆಚ್ಚುತ್ತದೆ. ಉಷ್ಣವಿನಿಮಯ ವ್ಯಾಪಾರಗಳಲ್ಲಿ ಬಿಸಿ ಪದಾರ್ಥವು ಆರಿ, ಶೀತ ಪದಾರ್ಥವು ಬಿಸಿಯಾಗುವುದರಿಂದ ಉಷ್ಣಾಂಶ ವ್ಯತ್ಯಾಸವು ಕಡಿಮೆಯಾಗುತ್ತದೆ. ಅಂದ್ರೆ ಶಕ್ತಿಯ ಲಭ್ಯರೂಪದಿಂದ ಅಲಭ್ಯರೂಪಕ್ಕೆ ಇಳಿಯುತ್ತದೆ. "ಶಕ್ತಿಯು ಅಲಭ್ಯತೆಯ ಪರಿಮಾಣಕ್ಕೆ-ಅಲಭ್ಯ ಶಕ್ತಿಯ ಪರಿಮಾಣಕ್ಕೆಲ್ಲ-ವಿಜಾನಿಯು ಎಂಟ್ರೋಪಿ ಎಂದು ಹೆಸರಿಟ್ಟಿದ್ದಾನೆ. ಒಂದು ವಸ್ತುವಿನ ಗಾತ್ರ (ಘನಾವಕಾಶ), ಒತ್ತಡ, ಉಷ್ಣಾಂಶಗಳು ಹೇಗೆ ಅದರ ಸ್ಥಿತಿವಿಧಾಯಕ ಪರಿಮಾಣ. ಕೆಲವು ಕ್ರಿಯೆಗಳಲ್ಲಿ ವಸ್ತುಗಳ ಗಾತ್ರ, ಉಷ್ಣಾಂಶಗಳು ಏರಬಹುದು, ಕೆಲವು ಕ್ರಿಯೆಗಳಲ್ಲಿ ಇವು ಇಳಿಯಬಹುದು; ಆದರೆ ಒಂದು ವ್ಯವಸ್ಥೆಯ ಎಂಟ್ರೋಪಿಯುಮಾತ್ರ ಎಲ್ಲ ಕ್ರಿಯೆಗಳಲ್ಲಿಯೂ ವೃದ್ಧಿಯಾಗುತ್ತದೆ. ಏಕೆಂದರೆ ಸಮಸ್ತ ಕ್ರಿಯೆಗಳಲ್ಲಿಯೂ ಒಂದಲ್ಲ ಒಂದು ಕಡೆ ಹೆಚ್ಚು ಪ್ರಮಾಣದಲ್ಲಿಯೋ, ಕಡಿಮೆ ಪ್ರಮಾಣದಲ್ಲಿಯೋ ಉಷ್ಣವಿನಿಮಯವಾಗುತ್ತದೆ. ಇದಾದರೆ, ಶಕ್ತಿಯ ಅಲಭ್ಯ ರೂಪವು ಹೆಚ್ಚುತ್ತದೆ, ಅಂದರೆ ಎಂಟ್ರೋಪಿಯು ವೃದ್ಧಿಯಾಗುತ್ತದೆ. ಇದರ ಅರ್ಥ: ಕಾಲ ಕಳೆದಂತೆ, ವಿಶ್ವದ ವಯಸ್ಸು ಹೆಚ್ಚಾದಂತೆ, ಎಂಟ್ರೋಪಿಯೂ ವೃದ್ಧಿಯಾಗುತ್ತ ಹೋಗುತ್ತದೆ ಎಂದು ಇದರಿಂದ ಕೆಲವು ವಿಜ್ಞಾನಿಗಳು ಎಂಟ್ರೋಪಿಯ ವೃದ್ಧಿಯನ್ನೇ ನಮ್ಮ ಇಂದ್ರಿಯಗಳು ಕಾಲಗತಿ ಎಂದು ಗ್ರಹಿಸುತ್ತವೆ ಎಂದು ಹೇಳುವಷ್ಟರಮಟ್ಟಿಗೆ ಹೋಗಿದ್ದಾರೆ. ಎಂಟ್ರೋಪಿ ಹೆಚ್ಚುತ್ತ ಹೆಚ್ಚುತ್ತ ಅಧಿಕತಮವಾದಾಗ, ಅಂದರೆ ಎಲ್ಲ ಪದಾರ್ಥಗಳ ಉಷ್ಣಾಂಶವೂ ಒಂದೇ ಆದಾಗ,