ಪುಟ:Mysore-University-Encyclopaedia-Vol-1-Part-2.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಧ್ರ ಪ್ರದೇಶ

ವಣಿತವಾಗಿವೆ.ಈತ ಸಾತವಾಹನ ಕುಲದಲ್ಲೀಯೇ ಅತ್ಯಂತ ಪ್ರಸಿದ್ಧ ದೊರೆ.ಅನಂತರ ಇವನ ಮಗನಾದ ಪುಲಮಾವಿ ರಾಜನಾದ.ಇವನ ಕಾಲದಲ್ಲಿ ಶಕರು ಅನೇಕ ಭಾಗಗಳನ್ನು ಗೆದ್ದುಕೊಂಡನು.ತರುವಾಯ ಆಳಿದ ಸಾತಕಣಿರ್ ಕ್ಷತ್ರಪ ರುದ್ರದಾಮನ ಮಗಳನ್ನು ವಿವಾಹವಾದ.ಆದರು ರುದ್ರದಾಮ ಕೊಂಕಣ ಮತ್ತು ನರ್ಮದಾ ಪ್ರದೇಶಗಳನ್ನು ಸಾತವಾಹನರಿಂದ ಕಿತ್ತುಕೊಂಡ.ಯಜ್ಞ್ ಶ್ರೀಸಾತಕಣೀಯೇ (170-199)ಸಾತವಾಹನರ ಕೊನೆಯ ಪ್ರಸಿದ್ಧ ದೊರೆ.ಈತ ಶಕರಾಜರ ಮೇಲೆ ಯುದ್ಧವನ್ನು ಮಾಡಿ ಅವರಿಂದ ಕೆಲವು ಪ್ರದೇಶಗಳನ್ನು ಕಿತ್ತುಕೊಂಡು,ಹೊಸ ನಮೂನೆಯ ಅನೇಕ ನಾಣ್ಯಗಳಿಂದ ದೊರೆಕಿವೆ.ಇವರು ಬಲಶಾಲಿಗಳಲ್ಲದೇ ಇದ್ದುದರಿಂದ,ಇಕ್ಷ್ವಾಕುವಂಶದ ವಾಸಿಷ್ಟೀಪುತ್ರ ಶ್ರೀಶಾಂತಮೂಲನೆಂಬಾತ ನಾಗಾರ್ಜುನಕೊಂಡ ಪ್ರಾಂತ್ಯದಲ್ಲಿ ಇಕ್ಷ್ವಾಕುವಂಶದ ರಾಜ್ಯವನ್ನು ಸ್ಥಾಪಿಸಿದ.ಪ್ರ.ಶ.ಸು 218ರ ಸಮಯಕ್ಕೆ ಸಾತವಾಹನರ ಸಾಮ್ರಾಜ್ಯದ ಪತನವಾಯಿತು.

       ನಾಗಾರ್ಜುನಕೊಂಡ ಪ್ರಾಂತ್ಯದಲ್ಲಿ ತಲೆ ಎತ್ತಿದ ಇಕ್ಷ್ವಾಕುವಂಶದಲ್ಲಿ ವಾಸಿಷ್ಟೀ ಪುತ್ರ ಶಾಂತಮೂಲ, ಶ್ರೀ ವೀರರುದ್ರಪದತ್ತ, ಎರಡನೇಯ ಶಾಂತಮೂಲ ಮತ್ತು ಎರಡನೇಯ ವೀರಪುರುಷದತ್ತರು ಆಳಿದರು.ಇವರ ಆಳ್ವಿಕಿಯಲ್ಲಿ ನಾಗಾರ್ಜುನಕೊಂಡ ಬಹುಭಾಗದಲ್ಲಿ ಬೌದ್ಧ ಶಿಲ್ಪಗಳು ನಿರ್ಮಿತವಾದವು.ಇವರ ಆಳ್ವಿಕೆ ಪ್ರ.ಶ.270ರಲ್ಲಿ ಕೊನೆಗೊಂಡಿತು.ಇಕ್ಷ್ವಾಕು ರಾಜರನ್ನು ಸೋಲಿಸಿ ಪಲ್ಲವ ಸಿಂಹವರ್ಮ ಆಂಧ್ರದೇಶದ ಬಹುಭಾಗಗಳಲ್ಲಿ ಪಲ್ಲವ ರಾಜ್ಯವನ್ನು ಸ್ಥಾಪಿಸಿದ.ಈತ ಧಾನ್ಯಕಟಕ (ಗುಂಟೂರು)ದಲ್ಲಿ ಒಬ್ಬ ಪ್ರಾಂತಾದಧಿಕಾರಿಯನ್ನು ನಿಯಮಿಸಿದ.ಸ್ವಲ್ಪ ಕಾಲದನಂತರ ಬಾದಾಮಿಯ ಚಾಳುಕ್ಯರು ಪಲ್ಲವರ ಪ್ರಾಬಲ್ಯವನ್ನು ಕಡಿಮೆ ಮಾಡಿದರು.
       ಗೋದಾವರಿ ಮತ್ತು ಕ್ರಿಷ್ಣಾ ನದಿಗಳ ಪ್ರದೇಶ ಬೃಹತ್ಫಲಾಯನ,ಶಾಲಂಕಾಯನ ಮತ್ತು ವಿಷ್ಣುಕುಂಡಿನ ವಂಶದ ರಾಜರ ಆಳ್ವಿಕೆಗೆ ಒಳಪಟ್ಟಿತ್ತು.ವಿಷ್ಣುಕೊಂಡಿನ್ ವಂಶದ ಅರಸರು ವೆಂಗಿ ರಾಜ್ಯವನ್ನು ಸು.150 ವರ್ಷಗಳ ಕಾಲ ಆಳಿದರು.ವಿಕ್ರಮೇಂದ್ರ ವರ್ಮನಿಂದ ಸ್ಥಾಪಿತವಾದ ಈ ವಂಶದಲ್ಲಿ ಮಾಧವವರ್ಮ ಅತ್ಯಂತ ಪ್ರಸಿದ್ಧ ದೊರೆ.ಇವರೂ ಬಾದಾಮಿಯ ಚಾಳುಕ್ಯ ದೊರೆ ಎರಡನೇಯ ಪುಲಕೇಶಿ ಆಂಧ್ರ ದೇಶವನ್ನು ಗೆದ್ದು , ತನ್ನ ತಮ್ಮನಾದ ಕುಬ್ಬ ವಿಷ್ಣುವರ್ಧನನ ವಶಕ್ಕೆ ಒಪ್ಪಿಸಿದ.ಇದೇ ಮುಂದೆ ವೆಂಗಿಯ ಚಳುಕ್ಯ ವಂಶವೆಂದು ಪ್ರಸಿದ್ಧವಾಯಿತು.ಸುಮಾರು ಕ್ರಿ.ಶ.625ರಿಂದ ಆರಂಭವಾದ ಈ ರಾಜ್ಯ ಸು.450 ವರ್ಷಗಳ ಕಾಲ ಬಾಳಿತು.ಸು.753ರಿಂದ   972ರವರಿಗೆ ಚಳುಕ್ಯರಿಗೂ ರಾಷ್ಟ್ರಕೂತಟರಿಗೂ ಸತತ ಕದನಗಳು ನಡೆದವು.ಅನಂತರ ವೆಂಗಿಯ ರಾಜಕೀಯದಲ್ಲಿ ಚೋಳರು ಪ್ರವೇಶಿಸಿದರು.11ನೇಯ ಶತಮಾನದಿಂದ ಚಳುಕ್ಯ - ಚೋಳರ ಆಳ್ವಿಕೆ ಪ್ರಾರಂಭವಾಯಿತು.ಮಧುರೆಯ ಪಾಂಡ್ಯರು ಬಲಶಾಲಿಗಳಾದ ಮೇಲೆ ಚಳುಕ್ಯ-ಚೋಳರ ಪತನವಯಿತು.
       ಆಂಧ್ರ ಪ್ರದೇಶದ ಶ್ರೀಕಾಕುಳಂ , ವಿಶಾಖಪಟ್ಟಣ ಮುಂತಾದ ಕೆಲವು ಜಿಲ್ಲೆಗಳು ಪ್ರಾಚೀನ ಕಾಲದಿಂದ ಕಳಿಂಗ ರಾಜ್ಯದಲ್ಲಿ ಸೇರಿ ಹೋಗಿದ್ದವು.ಕರ್ನಟಕದ ಗಂಗವಾಡಿಯಿಂದ ಗಂಗರ ಮನೆತನವೊಂದು ಕಳಿಂಗಕ್ಕೆ ಹೋಗಿ ನೆಲೆಸಿ ಪ್ರಸಿದ್ಧವಾಯಿತು.5ನೇಯ ಶತಮಾನದಿಂದ 15ನೆಯ ಶತಮಾನದವರೆಗೆ ಆಂಧ್ರ ಮತ್ತು ಒರಿಸ್ಸದ ಅನೇಕ ಭಾಗಗಳು ಪೂರ್ವ ಗಂಗರ ರಾಜ್ಯಕ್ಕೆ ಸೇರಿದ್ದವು.ಇವರಲ್ಲಿ ಅನಂತರ ವರ್ಮ ಜೋಡಗಂಗ ಅತ್ಯಂತ ಪ್ರಸಿದ್ಧ.
       ಹೀಗೆ ವಿವಿಧ ಭಾಗಗಳಾಗಿ ಹರಿದು ಹಂಚಿ ಹೊಗಿದ್ದ ಆಂಧ್ರ ದೇಶವನ್ನು ಒಂದುಗೂಡಿನಸಿ ಎರಡನೇಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಕಾಕತೀಯರು.ಓರಂಗಲ್ಲನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ ಕಾಕತಿಯರ ಕಾಲದಲ್ಲಿ ತೆಲಗು ಭಾಷೆ,ಸಾಹಿತ್ಯಗಳು ವಿಶೇಷವಾಗಿ ಅಭಿವೃದ್ಧಿ ಹೊಂದಿದುವು.ಕಾಕತೀಯ ರಾಜರಲ್ಲಿ ಗಣಪತಿದೇವ (1198-1262)ಮುಖ್ಯನಾದವ.ತರುವಾಯ ಆಳಿದ ಇವನ ಮಗಳಾದ ರುದ್ರಮದೆವಿ(1262-96)ಭಾರತದ ಚರಿತ್ರೆಯಲ್ಲಿಯೇ ಮುಖ್ಯವಾದ ರಾಣಿಯರಲ್ಲೊಬ್ಬಳು.ಇವಳು ಸಮಲಕಾಲೀನ ರಾಜರನ್ನು ಸೋಲಿಸಿ ವಿಶಾಲವಾದ ಆಂಧ್ರವನ್ನು ಆಳುತ್ತಿದ್ದಳು.ಮೊಮ್ಮಗ ಪ್ರತಾಪರುದ್ರ       (1296-1323)ಅತಿ ಧೈರ್ಯದಿಂದ ಹೋರಾಡಿ ಮುಸ್ಲಿಮರನ್ನು ಮೊದಲು ಸೋಲಿಸಿದವನಾದರೂ ಆಂಧ್ರ ಮೂಸ್ಲಿಮರ ವಶವಾಯಿತು.ಸ್ವಲ್ಪಕಾಲದಲ್ಲೇ ಆಂಧ್ರರು ಮೂಸ್ಲಿಮರ ಪ್ರಭುತ್ವವನ್ನು ಕಿತೊಗೆಯಲು ಪ್ರಯತ್ನಿಸಿದರಾದರು ಸಮರ್ಥ ಸಾಮ್ರಾಜ್ಯವನ್ನು ಕಟ್ಟಲಾರದೆ ಹೋದರು.ಕಾಕತೀಯ ಸಾಮ್ರಾಜ್ಯದ ಪತನಾನಂತರ ಆಂಧ್ರ ಐದು ರಾಜ್ಯಗಳಾಗಿ ವಿಭಾಗವಾಯಿತು.ಕೊಂಡವೀಡು ರೆಡ್ಡಿರಾಜ್ಯ,ರಾಜಮಹೇಂದ್ರೀಯ ರೆಡ್ಡಿರಾಜ್ಯ, ವೆಲಮರಾಜ್ಯ, ಉತ್ತರ ತೆಲಂಗಾಣ ಮತ್ತು ವಿಜಯನಗರ ಸಾಮ್ರಾಜ್ಯ ಇವೇ ಆ ಐದು ರಾಜ್ಯಗಳು.1325ರಲ್ಲಿ ಸ್ಥಾಪಿತವಾದ ಕೊಂಡವೀಡು ರೆಡ್ಡಿರಾಜ್ಯದಲ್ಲಿ ಪ್ರೋಲಯ, ಅನಪೋತ.ಅನಮೇವ,ಪೆದ್ದಕೋಮಟಿವೇಮ ಮುಂತಾದ ರಾಜರು ಆಳಿದರು.ಕೊನೆಗೆ ಇದು ವಿಜಯನಗರ ರಾಜ್ಯದಲ್ಲಿ ಲೀನವಾಯಿತು.

ರಾಜರು ಆಳಿದರು.ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ದೊರೆಯೆನಿಸಿಕೊಂಡ.ತೆಲಗು ಮತ್ತು ಕನ್ನಡ ಕವಿಗಳಿಗೆ ಆಶ್ರಯದಾತನಾಗಿದ್ದ.ಇವನ ಕಾಲದಲ್ಲಿ ತೆಲಗು ಸಂಸ್ಕೃತಿ ಅಭಿವೃದ್ಧಿ ಹೊಂದಿತು.ಸುಲ್ತಾನರಿಗೂ ವಿಜಯನಗರದ ಅರಸುಗಳಿಗೆ ನಡೆದ ರಕ್ಕಸತಂಗಡಿ ಯದ್ಧದಿಂದ ವಿಜಯನಗರ ಸಾಮ್ರಾಜ್ಯದ ಅವನತಿ ಪ್ರಾರಂಭವಾಯಿತು.

      ಈ ಮಧ್ಯದಲ್ಲಿ ಹಸನ್ ಎಂಬುವನಿಂದ ಸ್ಥಾಪಿತವಾದ ಬಹುಮನಿ ರಾಜ್ಯ ಆಂಧ್ರದ ಕೆಲವು ಭಾಗಗಳನ್ನು ವಶಮಾಡಿಕೊಂಡಿತು.ನಾಲ್ಕನೆಯ ಮಹಮ್ಮದ್ ಷಾ ಎಂಬ ದೊರೆ ತೆಲಂಗಣಕ್ಕೆ ಸುಲ್ತಾನ್ ಕುಲಿ ಎಂಬುವನನ್ನು ಪ್ರಾಂತ್ಯಾಧಿಕಾರಿಯನ್ನಾಗಿ ನಿಯಮಿಸಿದ.ಈತ ತಾನೆ ಸ್ವತಂತ್ರನಾಗಿ 1518 ರಿಂದ ಕುತ್ಬ್ ಷಾಹಿ ರಾಜ್ಯ ಸ್ಥಾಪನೆ ಮಾಡಿದ.ಗೊಲ್ಕೊಂಡ ಇವನ ರಾಜಧಾನಿ.ಇದು ತೆಲಂಗಾಣದ ಎಲ್ಲ ಭಾಗಗಳನ್ನು ಒಳಗೊಂಡಿದ್ದಿತು.1687ರಲ್ಲಿ ಔರಂಗಜೇಬ ಗೊಲ್ಕೊಂಡಕ್ಕೆ ಮುತ್ತಿಗೆ ಹಾಕಿ ದೊರೆಯಾದ ಅಬುಲ್ ಹಸನ್ನನ್ನು ಕೊಲ್ಲಿಸಿದ.ಇದರಿಂದ ಆಂಧ್ರ ಪ್ರದೇಶ ಮೊಗಲ್ ಆಳ್ವಿಕೆಗೆ ಒಳಪಟ್ಟಿತು.ಈ ಪ್ರಾಂತ್ಯವನ್ನು  ನೋಡಿಕೊಳ್ಳುವುದಕ್ಕಾಗಿ ಮೊಗಲರು ಅಸಫ್ ಝಾ ಎಂಬುವನನ್ನು ಪ್ರಾಂತ್ಯಾಧಿಕಾರಿಯಾಗಿ ನಿಯಮಿಸಿ ನಿಜಾಮ-ಉಲ್-ಮುಲ್ಕ್ ಎಂಬ ಬಿರುದನ್ನು ಕೊಟ್ಟರು.ಇವನ ವಂಶದಲ್ಲಿ ನಾಸಿರ ಜಂಗ್,ಮುಸಾಫರ್ ಜಂಗ ಮತ್ತು ನಿಜಾಮ ಅಲಿ ಎಂಬ ರಾಜರು ಆಳಿದರು.
      17ನೆಯ ಶತಮಾನದಿಂದ ಡಚ್ಚರು ,ಫ್ರೆಂಚರು ಮತ್ತು ಬ್ರಿಟಿಷರು ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ವ್ಯಾಪಾರದ ಸೋಗಿನಿಂದ ಕೋಟೆಗಳನ್ನು ಕಟ್ಟಿದ್ದರು.ನಿಜಾಮನ ಒಲವು ಕಡಿಮೆಯಾದ ಮೇಲೆ ಅವರು ಅವನಿಂದ ಕೆಲವು ಸರ್ಕಾರ ಜಿಲ್ಲೆಗಳನ್ನು ಬಳುವಳಿಯಾಗಿ ಪಡೆದು ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆಗೆ ಕಾರಣರದರು.ಮುಚಲಿಪಟ್ಟಣ, ಕೋಂಡವೀಡು,ವಿಶಖಪಟ್ಟಣ,ಶ್ರೀಕಾಕುಳ,ಗುಂಟೂರು,ರಾಜಮಹೇಂದ್ರಿ ಮುಂತಾದ ಕಡೆಗಳಲ್ಲಿ ಬ್ರಿಟಿಷರು ಜಮೀನ್ದಾರರನ್ನು ಪ್ರೋತ್ಸಾಹಿಸಿ,ಅವರನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದರು.ಹೀಗಾಗಿ ಈಸ್ಟ್ ಇಂಡಿಯಾ ಕಂಪನಿ ಆಂಧ್ರ ದೇಶದ ರಾಜ್ಯಭಾರದಲ್ಲಿ ವಿಶೇಷ ಆಸಕ್ತಿ ವಹಿಸಿ ಜನಾನುರಾಗಿ ಕಾರ್ಯಗಳನ್ನು ಕೈಗೊಂಡಿತು.
      ಆಂಧ್ರರು ಭಾರತದ ಸ್ವಾತಂತ್ರ್ಯ ಸಮರದ ಕರೆಗೆ ಒಗ್ಗೊಟ್ಟು ಒಂದುಗೂಡಿದರು.ವೀರೇಶಲಿಂಗ ಅವರ ಬರೆವಣಿಗೆ ಅದ್ದಕ್ಕೆ ಸಾಕಷ್ಟು ಪ್ರೊತ್ಸಾಹ ಕೊಟ್ಟಿತು.ನ್ಯಾಪತಿ ಸುಬ್ಬರಾವ್,ರಂಗಯ್ಯನಾಯ್ದು ರಮೇಶಂ,ಕೆ.ವಿ.ರೆಡ್ಡಿ,ಮಾಚರ್ಲ್ ರಾಮಚಂದ್ರ ರಾವ್ ಮುಂತಾದವರು ಆಂಧ್ರದಲ್ಲಿ ಭಾರತ ರಾಷ್ಟೀಯ ಕಾಂಗ್ರೆಸ್ ಸಂಸ್ಥೆ ಬೇರೂರುವಂತೆ ಮಾಡಿದರು.1981ರಲ್ಲಿ ಆಂಧ್ರದ್ ಪ್ರದೇಶ ಕಾಂಗ್ರೆಸ್ ಸಮಿತಿ ಸ್ಥಾಪಿತವಾಯಿತು.ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪ್ರಕಶಂ,ವೆಂಕತಪ್ಪಯ್ಯ,ಪಟ್ಟಾಭಿ ಸೀತರಾಮಯ್ಯ , ಸಾಂಬಮೂತಿರ್,ದೇಶೋದ್ಧ್ರಾರಕ ನಾಗೇಶ್ವರರಾವ್ ಮೊದಲದವರು ಭಾಗವಹಿಸಿದರು.ಭಾರತ ಸ್ವತಂತ್ರವಾದ ಮೇಲೆ ಆಂಧ್ರ ಮದರಾಸು ಪ್ರಾಂತ್ಯದಲ್ಲಿ ಸೇರಿಹೋಗಿತ್ತು.ಆಂಧ್ರಪ್ರಾಂತ್ಯ ರಚನೆಗೋಸ್ಕರ ಪೊಟ್ಟಿ ಶ್ರೀರಾಮುಲು ಉಪವಾಸ ಸತ್ಯಾಗ್ರಹವನ್ನು 2ಅಕ್ಟೋಬರ 1952ರಂದು ಆರಂಭಿಸಿ ಅದೇ ವರ್ಷ ಡಿಸೆಂಬರ 15ರಂದು ಮರಣಹೊಂದಿದರು.ಇದರಿಂದ ಆಂಧ್ರದಲ್ಲಿ ರಾಜಕೀಯ ಕ್ರಾಂತಿಯಾಯಿತು.ಪ್ರಧಾನಮಂತ್ರಿ ನೆಹರು 1953 ಅಕ್ಟೋಬರ 1ರಂದು ಕರ್ನೂಲಿನಲ್ಲಿ ಆಂಧ್ರಪ್ರದೇಶದ ಆರಂಭೋತ್ಸವವನ್ನು ಮಾಡಿದರು.ಈ ಮಧ್ಯದಲ್ಲಿ ತೆಲಂಗಾಣ ರಾಜ್ಯ ಸ್ವತಂತ್ರ್ಯವಾಗದೇ ನಿಜಾಮರ ಆಳ್ವಿಕೆಗೆ ಸೇರಿತ್ತು.ನಿಜಾಮರು ಸ್ವಾತಂತ್ರ್ಯವನ್ನು ಕೊಡಲು ನಿರಾಕರಿಸಿದುದರಿಂದ,ಭಾರತ ಸರ್ಕಾರ 1948ರಲ್ಲಿ ಪೊಲೀಸ್ ಕಾರ್ಯಾಚರಣೆಗೆ ಹೈದರಾಬಾದ್ ನಗರವನ್ನು ಮತ್ತು ತೆಲಂಗಾಣ ಜಿಲ್ಲೆಗಳನ್ನು ತನ್ನ ವಶಮಾಡಿಕೊಂಡಿತು.1956ರ ನವೆಂಬರ ಒಂದನೆಯ ತಾರೀಖು ಪ್ರಧಾನಿ ನೆಹರೂ ಆಂಧ್ರ ಜಿಲ್ಲೆಗಳು,ರಯಲ ಸೀಮೆ ಮುಂತಾದ ಎಲ್ಲಭಾಗಗಳೂ ಸೇರಿ , ತೆಲಗುಭಾಷೆ ಮಾತನಾಡುವ ಜನ ಒಂದಾದರು.ಪರಂಪರೆಯಿಂದ ಬಂದ ಆಂಧ್ರ ಎಂಬ ಹೆಸರು ಮುಂದುವರೆದು ಅದು ಆಂಧ್ರ ಪ್ರದೇಶವಾಯಿತು.

ಆಂಧ್ರರ ನಾಣ್ಯ್ಗಳು: ದಕ್ಷಿಣಾಪಥದಲ್ಲಿ ಆಳಿದ ಯಾವ ರಾಜ ಮನೆತನದವರೂ ಆಂಧ್ರರಷ್ಟು ವೈವಿಧ್ಯಪೂಣರ್ ನಾಣ್ಯಗಳನ್ನು ಅಚ್ಚು ಹಾಕಿಸಲಿಲ್ಲ.ಅಷ್ಟೇ ಅಲ್ಲದೆ ಆಂಧ್ರರ ನಾಣ್ಯಗಳು ಬಹಳ ಹೇರಳವಾಗಿಯೂ ದೊರೆತಿವೆ.ಸಾಮಾನ್ಯವಾಗಿ ಇವರ ನಾಣ್ಯಗಳನ್ನು