ಪುಟ:Mysore-University-Encyclopaedia-Vol-1-Part-2.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಧ್ರಭಾಷೆ

ತೆಲುಗು ತೆಲಂಗಾಣದ (ತ್ರಿಲಿಂಗ) ಭಾಷೆ. ಅದು ಈಗಿನ ಆಂಧ್ರಪ್ರದೇಶದ ಭಾಷೆಯಾಗಿರುವುದರಿಂದ ಅದರ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಡಲಾಗಿದೆ.ತೆಲುಗು ರಾಜಮಹೇಂದ್ರಿಯಲ್ಲಿದ್ದ ಪೂರ್ವ ಚಾಳುಕ್ಯ ವಂಶದ ರಾಜರಾಜ ನರೇಂದ್ರನ (1033-43) ಆಸ್ಥಾನದಲ್ಲಿದ್ದ ನನ್ನಯನ (ನೋಡಿ-ನನ್ನಯ) ಕಾಲಕ್ಕೆ ಹಿಂದೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬ ವಿಷಯವನ್ನು ನಿರೂಪಿಸಲು ನಮಗೆ ತಕ್ಕಷ್ಟು ಆಧಾರಗಳು ದೊರೆತಿಲ್ಲ. ಬೆಜವಾಡದಲ್ಲಿರುವ(ವಿಜಯವಾಡ) ಒಂದು ಕಂಬದಲ್ಲಿ ಕೊರೆದಿರ