ಪುಟ:Mysore-University-Encyclopaedia-Vol-1-Part-2.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲರಿಪು - ಅಲಸಂದೆ ವಿಶ್ವವು ಕೊನೆಗಾಣುತ್ತದೆ.ಏಕೆಂದರೆ ಶಕ್ತಿಯ ಸಂಪುರಣನ೯ ಅಧೋಗತಿಯ ಕಾರಣವಗಿ ಯಾವ ಕ್ರಿಯೆಯೂ ನಡೆಯುವುದಿಲ್ಲ.ಇದು ವಿಶ್ವದ ಉಶ್ನಮರಣವಾದಿಗಕಳ ಮತ.ವಿವಿಧ ಕ್ರಿಯೆಗಳಿಂದ ವಸ್ತುಗಳ ಎಂಟ್ರೋಪಿಯಲ್ಲಿ ಆದ ವ್ಯತ್ಯಾಸವನ್ನು ಮಾತ್ರ ಎರಡನೆಯ ನಿಯಮದಿಂದ ಗಣೆಸಬಹುದೇ ಹೂರೆತು ಎಂಟ್ರೋಪಿಯನ್ನೇ ಗುಣಿಸಲಾಗುವುದಲ್ಲಿ.ಈ ಕೊರೆತೆಯನ್ನೂ ಜಮ೯ನ್ ವಿಜ಼್ಣಾನಿ ನನ್೯ಸ್ಟ್ ಎಬುವವನು ತಾತ್ವಿಕವಾಗಿ ಹೋಗಲಾಡಿಸಿದ. ಈತನು ಪದಾಥ೯ಗಳ ಸಹಜಶೂನ್ಯ ಡಿಗ್ರಿ (273.1 ಸೆಂಟಿಗ್ರೇಡ್ ಡಿಗ್ರಿಗಳು) ಆದರೆ ಅವುಗಳು ಎಂಟ್ರೋಪಿ ಶೂನ್ಯವೆಂದೂ ಉಷಾಂಶ ಸಹಜಶೂನ್ಯ ಡಿಗ್ರಿಯ ಸಮೀಪದಲ್ಲಿದ್ದರೆ ಯಾವ ಕ್ರಿಯೆ ಜರುಗಿದರೂ ಎಂಟ್ರೋಪಿಯಲ್ಲಿ ವ್ಯತ್ಯಸವಾಗುವುದಿಲವೆಂದೂ ತೊರಿಸಿದ.ಇದಕ್ಕೆ ಮೂರನೆಯ ನಿಯಮವೆಂದು ಹೆಸರಿಟ್ಟಿದ್ದಾರೆ. ಈ ನಮ್ಮ ವಿಚರಗಳ ಸಾರಾಂಶವನ್ನು ಈ ರೀತಿ ನಿರೂಪಿಸಬಹುದು : ಪ್ರಕೃತಿ ವ್ಯಾಪಾರಗಳೆಲ್ಲ ಶಕ್ತಿಯು ಲಭ್ಯ ರೂಪದಿಂದ ಅಲಭ್ಯ ರೂಪಕ್ಕೆ ಮಾಪಾ೯ಡಾಗುತ್ತದೆ. ಪದಾಥ೯ಗಳ ಸಹಜಶೂನ್ಯ ಡಿಗ್ರಿಯ ಸಮೀಪದಲ್ಲಿದ್ದರೆ ಶಕ್ತಿ ವಿನಿಮಯವಾದರೂ ಶಕ್ತಿಯ ಅಲಭ್ಯತೆ ಹೆಚುವುದಿಲ್ಲ.ಉಷಾಂಶ ಸಹಜ ಶೂನ್ಯ ಡಿಗ್ರಿಯೇ ಇದ್ದರೆ ಶಕ್ತಿಯ ಅಲಭ್ಯತೆ ಶೂನ್ಯ. ಈ ನಮ್ಮ ವಿಚಾರಗಳ ಸಾರಾಂಶವನ್ನು ಈ ರೀತಿ ನಿರೂಪಿಸಬಹುದು ; ಪ್ರಕೃತಿ ವ್ಯಾಪಾರಗಳೆಲ್ಲ ಶಕ್ತಿಯು ಲಭ್ಯ ರೂಪದಿಂದ ಅಲಭ್ಯ ರೂಪಕ್ಕೆ ಮಾಪಾ೯ಡಾಗುತ್ತದೆ. ಪದಾಥ೯ಗಳ ಉಷಾಂಶ ಸಹಜಶೂನ್ಯ ಡಿಗ್ರಿಯ ಸಮೀಪದಲ್ಲಿದ್ದದರೆ ಶಕ್ತಿಯ ಅಲಭ್ಯತೆ ಹೆಚುವುದಿಲ್ಲ. ಉಷಾಂಶ ಸಹಜ ಶೂನ್ಯ ಡಿಗ್ರಿಯೇ ಇದ್ದರೆ ಶಕ್ತಿಯ ಅಲಭ್ಯತೆ ಶೂನ್ಯ. ಅಲರಿಪು ; ಭರತನಾಟ್ಯ ಮತ್ತು ಇತರ ನೃತ್ಯ ಪ್ರದಶ೯ನಗಳಲ್ಲಿ ದೇವಾಧಿದೇವತೆಗಳಿಗೆ ಪ್ರಾಥ೯ನಾರೂಪವಾಗಿ ಮಾಡುವ ಪ್ರಥಮ ನೃತ್ಯ. ಕೈಗಳನ್ನು ಅಂಜಲಿ ಬದ್ದವಾಗಿ ಹಿಡಿದು ಕೊಂಡು ಸಮಪಾದವಾಗಿ ನಿಂತು ಇಡೀ ದೇಹವನ್ನು ಚಲನೆಯ ಮೂಲಕ ದೇವರಿಗೆ ಅಪಿ೯ಸಕ್ಕದ್ದು. ಚಲನೆ ತಲೆಯಿಂದ ಮೊದಲ್ಗೂಂಡು ಕ್ರಮೇಣ ಕತ್ತು ಭುಜ ತೋಳುಗಳು ಸೊಂಟ ಮತ್ತು ಕಾಲುಗಳವರೆಗೆ ಅನುಕ್ರಮದಲ್ಲಿದ್ದು ದ್ವಿತೀಯ ಕಾಲುಗಳಲ್ಲಿ ತಾಳಲಯಬಧವಾಗಿ ನತಿ೯ಸತಕ್ಕದ್ದು. ಇದನ್ನು ಕಣಾ೯ಟಕ ಸಂಗೀತಪದ್ದತಿಯ ಚತುರಶ್ರ ತ್ಯಶ್ರ,ಮಿಶ್ರ,ಖಂಡ,ಸಂಕೀಣ೯,ಎಂಬ ಏದು ಮೂಲಜಾತಿಗಳಲ್ಲಿ ನತಿ೯ಸ ಬಹುದು. ಅದರೆ ಸಾಮಾನ್ಯವಾಗಿ ನಾವು ತ್ಯಶ್ರ,ಮಿಶ್ರ,ಚತುರಶ್ರ,ಜಾತಿಗಳಲ್ಲಿ ಅಲರಿಪು ಪ್ರದರ್ಶನ್ನು ರಂಗಭೂಮಿಗಳ ಮೇಲೆ ಕಾಣುತ್ತೆವೆ ಖಂಡ ಮತ್ತು ಸಂಕೀಣ೯ ಜಾತಿಯ ಅಲುರಿಪುಗಳು ಪ್ರದಶ೯ನಗಳು ಸ್ವಲ್ಪ ಅಪರೂಪ. ಅಲರಿಪುವಿನಲ್ಲಿ ತಲೆಯ ಮೊದಲ ಚಲನೆಗಳು ತ್ರಿಮೂತಿ೯ಗಳಾದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ವಂದನೆಯ ಕೆಲವರು ಅಭಿಪ್ರಾಯಪಡುತ್ತಾರೆ.ಇನ್ನು ಕೆಲವರು ಅಲರಿಪು ಎಂದರೆ ಅರಳುವಿಕೆ.ಅತ್ಮ ಚಲನೆಯ ಮೂಲಕ ಅರಳಿ ದೈವಕ್ಕೆ ಅಪಿ೯ತವಾಗುವುದು ಎಂದು ಹೇಳುತ್ತಾರೆ. ಮತ್ತೂ ಕೆಲವರು ಅಲರಿಪುವನ್ನು ಗೋಪಿಕಾವಸ್ತ್ರಾ ಪರಣದ ತಿರುಳನ್ನೊಳಗೊಂಡು, ತಾನು, ತನ್ನದು ಎಂಬ ಅಹಂಭಾಬವನ್ನು ತ್ಯಜಿಸಿ ದೇವರಿಗೆ ಶರಣಾಗಿ ಪ್ರಾಥಿ೯ಸುವ ನೃತ್ಯ ಎಂದು ಪರಿಗಣಿಸುತ್ತಾರೆ. ಅಲಸಂದೆ ; ಅಲಸಂದೆಯ ಎಳೆಯ ಕಾಯಿಗಳನ್ನು ತರಕಾರಿಯಾಗಿ ಉಪಯೋಗಿಸಲಾಗುತ್ತದೆ. ಇದರ ಕಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ,ಅನ್ನಾಂಗ 'ಬಿ' ಮತ್ತು ಲವಣಾಂಶಗಳನ್ನು ಹೊಂದಿರುತ್ತವೆ. ಮಣ್ಣು; ಇದನ್ನು ಹೆಚ್ಚಾಗಿ ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯಬಹುದು. ಕಾಲ; ವಷ೯ದಲ್ಲಿ ಈ ಬೆಳೆಯನ್ನು ಎರಡು ಸಲ ಬೆಳೆಯಬಹುದು.ಈ ಬೆಳೆಯನ್ನು ಮೇ-ಜುಲ್ಯ ಮತ್ತು ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಪ್ರಾರಂಭಿಸಬಹುದು ಗುಡ್ಡಗಾಡು ಪ್ರದೇಶಗಳಲ್ಲಿಜನವರಿ-ಫೆಬ್ರವರಿ ಸೂಕ್ತ ಕಾಲ.ಕರಾವಳಿ ಪ್ರದೇಶದಲ್ಲಿ ಬತ್ತದ ಕಟಾವಿನ ಅನಂತರ ಗದ್ದೆಗಳಲ್ಲಿ ಈ ಬೆಳೆಯನ್ನು ಬೆಳಸಬಹುದು. ತಳಿಗಳು ದಕ್ಶಿಣ ಒಣ ಪ್ರದೇಶಗಳಿಗೆ 1.ಪೂಸಾ ಫಲ್ಗುಣೆ : ಗಿಡಗಳು ಗಿಡವಾಗಿದ್ದು ಪೊದೆಯಾಕಾರದಲ್ಲಿವೆ. ಈ ತಳಿಯು ಚಳಿಗಾಲಕ್ಕೆ ಉತ್ತಮವಾದ ತಳಿ. ಕಾಯಿಗಳು 12.5 ಸೆಂಮೀ ಉದ್ದವಿದ್ದು ದಟ್ಟ ಕಡುಹುಸುರು ಬಣ್ಣದ್ದಾಗಿವೆ.ಬಿತ್ತನೆ ಮಾಡುವ 60 ಡಿವಸಗಳ ನಂತರ ಕಾಯಿಗಳು ಕೊಯ್ಲಿಗೆ ಬರುತ್ತವೆ. 2.ಪೊಸಾ ಬರಸಾತಿ : ಇದು ಬೇಗನ ಕಟಾವಿಗೆ ಬರುವ ತಿಳಿಯಾಗಿದೆ(45 ದಿನಗಳು)ಮತ್ತು ಮಳೆಗಾಲಕ್ಕೆ ಸೂಕ್ತವಾಗಿದೆ. 3.ಪೂಸಾ ದೋ ಫಸಲಿ:ಇದು ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು ಮಳೆಗಾಲ ಚಳಿಗಾಲಕ್ಕೆ ಯೋಗ್ಯವಾಗಿದೆ.