ಪುಟ:Mysore-University-Encyclopaedia-Vol-1-Part-2.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕಳ ತಳಿಗಳು ಭಾರತ; ಭಾರತದಲ್ಲೂ ಅವುಗಳ ಹುಟ್ಟಿನಲ್ಲೇ ಅನೇಕ ಗೋತ್ತಾದ ಗುಣಲಕ್ಷಣಗಳಿಂದ ಗುರುತು ಸಿಗುವ, ಆಕಳ ತಲಳಿಗಳು ಹಲವರಿವೆ. ಹುಟ್ಟುಗುನಗಳಲ್ಲಿ ಈ ತಳಿಗಳು ಯುರೋಪಿನಾವಕ್ಕಿಂತ ಏನೂ ಕಡಿಮೆಯಿಲ್ಲ. ಕೆಲವು ಪಂಗಡದ ಜನ ಕೆಲವು ಸೊಗಸಾದ ತಳಿಗಳನ್ನು ಸಾಕುತ್ತ ಬಂದಿರುವುದರಿಂದ ಇನ್ನೂ ಹಲವರು ಆಕಳ ಸಾಕಣಿಕೆಯನ್ನೇ ಹುಟ್ಟುಕೆಲಸವಾಗಿಟ್ಟುಕೋಂಡು ಚೆನ್ನಾಗಿ, ಒಳ್ಳೆಯ ತಳಿಯನ್ನೇ ಬೆಳೆಸುತ್ತಿರುವುದರಿಂದ ಇದು ಸಾಧ್ಯವಾಗಿದೆ. ಭಾರತದಲ್ಲಿ ನಾಲ್ಕು ಮೂಲ ಪಂಗಡಗಳಿವೆ: ಉತ್ತರದ ದೊಡ್ಡ ಬಿಳಿಯ ಆಕಳು; ತಲೆ ಕೊಂಬುಗಳ ವಿಶೇಷ ಲಕ್ಷಣಗಳಿರುವ ದಕ್ಷಿಣದ ಮೈಸೂರಿನವು;ಪಡುವಣದ ಕಾ ವಾಡದ ಗಿರ್ ದನಗಳು; ಭಾರತದಲ್ಲಿ ಎಲ್ಲೆಲ್ಲೂ ಗುಡ್ಡಗಾ ಡುಗಳಲ್ಲಿ ಇರುವ ಕಪ್ಪು, ಬೆರಕೆ ಬಣ್ಣದ ಸಣ್ಣ ದೇಹದವು.

  ಮುಂದುವರಿದ ದೇಶಗಳಲ್ಲಿ ಇದ್ದಂತೆ ಭಾರತದಲ್ಲೂ ತಳಿ ಎನ್ನಿಸಿಕೊಳ್ಳುವುವು ಇಲ್ಲದಿದ್ದರೂ ಕೆಲವು ಮುಖ್ಯ ತಳಿಗಳ ಲಕ್ಷಣಗಳನ್ನು ಗುರುತಿಸಬಹುದು. ಇಲ್ಲಿನ ದನಗಳ ಬೇರೆ ಬೇರೆ ಬಗೆಗಳ ಮೂಲ ಹೊರಗಿಂದ ದಾಳಿಯಿಟ್ಟ ಜನರ ವಲಸೆಗೆ ಸಂಬಂಧಿಸಿದೆ. ಅವರೊಂದಿಗೆ ಬಂದ ರಾಸುಗಳ ಮಂದೆಗಳು ನಾಡಿನ ಆಗಿನ ತಳಿಗಳೊಂದಿಗೆ ಬೆರೆತು ಹೊಸ ತಳಿಗಳು ಎದ್ದಿರಬೇಕು.
 ಉತ್ತರ ಭಾರತದ ಬೂದು, ಬಿಳಿ ಬಣ್ನದ ರಾಸುಗಳ ಎರಡು ತಂಡಗಳು ಎದ್ದು ಕಾಣುತ್ತವೆ. ಪಡುವಲದ ಕಾಂಕ್ರೇಜಿ ದನ ಒಂದು. ಇದರ ಹಣೆ ಅಗಲ, ಕೊಂಬು ದಪ್ಪ. ಆರ್ಯರು ವಲಸೆ ಬಂದರೆಂಬ ಪಡುವಲದ ಕರಾವಳಿಯ ಮೂಲಕ ಸಿಂಧು, ಗುಜರಾತ್, ರಾಜಪುಟಾಣಗಳಲ್ಲಿ ಈ ತಳಿಯೇ ಹೆಚ್ಚಾಗಿ ಕಾಣುವುದು. ಎರಡನೆಯ ತಂಡದಲ್ಲಿ ಬಿಳಿಯ ಬಣ್ಣದ, ಆಗಲಏರದ ಹಣೆಯ, ಗಿಡ್ಡ ಕೊಂಬಿನ, ಭಗನಾರಿ, ಹರಿಯಾನ, ರೂತ್, ಗಾವ್ಲೊ, ಓಂಗೋಲ್ ರಾಸುಗಳನ್ನು ಚೆನ್ನಾಗಿ ಗುರುತಿಸಬಹುದು. ಹಾಗೆಯೇ ಮಧ್ಯಪ್ರದೇಶ, ದಕ್ಷಿಣ ಭಾರತಗಳಲ್ಲೂ ಇವು ಅಲ್ಲಲ್ಲಿ ಕಾಣಬರುತ್ತವೆ. ಇವೆರಡು ತಂಡಗಳ ತಳಿಗಳ ಬೆರಕೆ ಆಪೂರ್ವವಲ್ಲ್ಲ. ರಾಜಪುಟಾಣದ ಮಾಳ್ವಿ ದನಗಳು ಕಾಂಕ್ರೇಜಿಗಳನ್ನು ಹೋಲುತ್ತವೆ. ಬಿಳಿಯ ರಾಸುಗಳಿಗೆ ಕಾಲುಕಂಬ ಎತ್ತಾರ, ಮೈಕಟ್ಟು ಕಿರಿದು, ತೂಕವು ಅಪ್ಪಿಲ್ಲ. ಬೂದು ಅಕಳು ತೂಕದವು, ಚೆನ್ನಾಗಿ ಕರೆಯುತ್ತವೆ. ಇವೆರಡರ ಅಡ್ದ ತಳಿಗಳೂ ಚೆನ್ನಾಗಿ ಹಾಲು ಕೊಡುತ್ತವೆ. ಹರಿಯಾನ, ಹಳ್ಳಿಕಾರ್, ಒಂಗೋಲ್ ಆಕಳು ಇಂಥವು. ಇವುಗಳೊಂದಿಗೆ ಕೃಷ್ಣಾಕಣಿವೆಯ ತಳಿ, ಕಾಂಗಯಾಮ್ (ಕೊಯಮತ್ತೂರು ತಳಿ),ಡೋಸಿ (ಹೈದರಾಬಾದ್ ತಳಿ)- ಇವೂ ಹೈನಿಗೆ ಪ್ರಸಿದ್ಧವಾಗಿವೆ.
     ಕೊಂಬುಗಳ ತಲೆಗಳ ವಿಶಿಷ್ಟ ಹೆಗ್ಗುರುತಿನವು ಮೈಸೂರು ತಳಿ. ಹಳ್ಳಿಕಾರ್, ಅಮೃತಮಹಲ್ ರಾಸುಗಳಲ್ಲಿ ಇದರ ಲಕ್ಷಣಗಳಿವೆ. ಅಂಧ್ರ ಮದರಾಸು, ಉತ್ತರ ಕರ್ನಾಟಕಗಳ ರಾಸುಗಳೂ ಅಷ್ಟೆ.
     ಕಾಠೇವಾಡದ ದಕ್ಷಣದವು ಗಿರ್ ತಳಿದನಗಳು. ಇವು ಕಛನಿಂದ ಆಂಧ್ರದ ತನಕ ಹರಡಿಕೊಂಡಿವೆ. ಭಾರತದ ಎಲ್ಲೆಡೆಗಳಲ್ಲೂ ಇರುವ ಸಣ್ಣ ರಾಸುಗಳ ಬಣ್ಣ ಮೈಕಟ್ಟು ಹೀಗೆಯೇ ಅನ್ನುವರಿತಿಲ್ಲ ಆ೦ತೂ ಬ೦ದೇ ತಳಿಯ ಲಕ್ಷಣಗಳು ಅಷ್ಟಾಗಿಲ್ಲ.
     ಆಮೃತಮಹಲ್: ಮೈಸೂರು ಸರಕಾರದ ನೆರವಿನಿಂದ ಶಾಸ್ತ್ರೀಯವಾಗಿ ಬೆಳೆಸಿ ಕಾಪಾಡಿರುವ ಹೆಸರಾದ ತಳಿಯಿದು. ಈ ತಳಿಯ ಹೋರಿಯನ್ನು ನಾಡಿನಲ್ಲಿ ಹಂಚಲಾಗಿದೆ. ಆಕಳು ಹೆಚ್ಚಾಗಿ ಹಾಲು ಕರೆಯವು. ಆದರೆ ಎತ್ತುಗಳು ಚುರುಕು, ರೋಷದವು. ದುಡಿಯುವುದಲ್ಲದೆ. ಕಪ್ಪವನ್ನೂ ತಡೆಯಬಲ್ಲವು.
      ಹಳ್ಳಿಕಾರ್: ಇದು ಸಾಧುವಾದ ಆಕಳು. ಈ ಮೈಸೂರು ತಳಿ ಕರಾವಿಗೆ ಹೆಸರಾಗಿದೆ. ಜೀವಾತುಗಳಿರುವ ಇದರ ಹಾಲು ಹಳದಿಯಾಗಿರುವುದು ಇದರ ವೈಶಿಷ್ಟ್ಯ.
      ಗಿರ್: ಕಾಠೇವಾಡದ ಗಿರ್ ಕಾಡುಗಳಲ್ಲಿ ಅಲ್ಲಲ್ಲಿ ಈ ತಳಿ ಚೊಕ್ಕವಾಗಿ ಉಳಿದಿವೆ. ಕರುಗಳಲ್ಲಿ ಗಿರ್ ತಳಿಯ ಲಕ್ಷಣ ಚೆನಾಗಿ ಇಳಿದು ಬಂದಿರುವುದರಿಂದ ದೂರ ದೂರದ ಪ್ರದೇಶಗಳಲ್ಲೂ ಈ ಲಕ್ಷಣಗಳನ್ನು ಗುರುತಿಸಬಹುದು. ಈ ಆಕಳು ಸಾಧು; ಚೆನ್ನಾಗಿ ಹಾಲು ಕೊಡುತ್ತದೆ.ನಿದ್ದೆಗಣ್ಣು ದೊಡ್ಡ ಹಣೆ, ಒಂದು ತೆರನಾಗಿ ಬಾಗಿದ ಕೊಂಬುಗಳು, ಉದ್ದನೆಯ ಚೋಲುಗಿವಿಗಳು. ಚಿವುಟಿದಂತಿರುವ ಕಿವಿ ತುದಿಗಳು ಇದರ ಲಕ್ಷಣಗಳು.ಬಿಳಿ, ಕೆಂಪು, ಕಂದು ಮಜ್ಜೆಗಳ ಮೈ ತೂಕವಾಗಿ ಬಲವಾಗಿರುವ ಎತ್ತು ಮಾಂಸದ ತಳಿ.
      ಕಾಂಕ್ರೇಜ್: ಕಛ್ ಕೊಲ್ಲಿ, ಸಿಂಧು ಪ್ರಾಂತ್ಯ, ಆಹಮದಾಬಾದು ಈ ಚೊಕ್ಕ ತಳಿಯ

ತವರು. ಈ ತಳಿಯನ್ನು ಅಮೆರಿಕದಲ್ಲಿ ಅಲ್ಲಿನವೊಂದಿಗೆ ಕೂಡಿಸಿ ಮಾಂಸದ ಒಳ್ಳೆಯ ತಳಿಗಳನ್ನು ತೆಗೆದಿರುವರು. ಈ ತಳಿಯ ಆಕಳು ಚೆನ್ನಾಗಿ ಹಾಲು ಕೊಡುತ್ತದೆ. ಬಿಳಿ, ಬೂದು ಬಣ್ಣದವೂ ಕಪ್ಪಿನ ಮೇಲಿನ ಬೂದು ಬಣ್ಣದವೂ ಕಪ್ಪಿನ ಮೇಲಿನ ಬೂದು ಬಣ್ನದವೂ ಹೇರಳ.

      ಓಂಗೋಲ್: ಆಂಧ್ರಪ್ರದೇಶದ ನೆಲ್ಲೂರು, ಗುಂಟೂರುಗಳಲ್ಲಿ ಈ ತಳಿ ಹೆಚ್ಚು ಪುಷ್ಟವಾಗಿ ಬೆಳೆದು ರೋಗಗಳನ್ನು ತಡೆವಂತಿರುತ್ತವೆ. ನಸು ಬಿಳಿಬಣ್ಣದ ಈ ತಳಿಯ ಎತ್ತುಗಳು ಕೆಲಸಲಕ್ಕೂ ಆಕಳು ಕರಾವಿಗೂ ಹೆಸರಾಗಿವೆ.
      ಹರಿಯಾಣ: ಹಳೆಯ ಪಂಜಾಬು, ದೆಹಲಿ ಪ್ರದೇಶಗಳ ಈ ತಳಿ ರಾಜಸ್ತಾನ ಪ್ರಾಂತ್ಯದಲ್ಲಿ ಹೆಸರಾಗಿ ಬಳಕೆಯಲ್ಲಿದೆ. ಎತ್ತುಗಳು ದುಡಿಮೇಗೂ ಆಕಳು ಕರಾವಿಗೂ ಚೆನ್ನಾಗಿ ಬರುತ್ತವೆ. ಈ ತಳಿಗಳು ಬೆಳ್ಳಗೆ ಮಾಟವಾಗಿ ಬೆಳೆದು ನೋಡಲು ಅಂದವಾಗಿರುತ್ತವೆ.ಈ ತಳಿಯನ್ನು ಪಂಜಾಬು ಸರಕಾರ ಚೆನ್ನಾಗಿ ಬೆಳೆಸಿದೆ.
      ಸಿಂಧಿ: ಸಿಂಧೂ ಪ್ರಾಂತ್ಯದ ಗುಡ್ಡದ ಸೀಮೆಯ ತಳಿ. ಇದರ ಬಲು ಚೊಕ್ಕವಾದ ತಂಡಕ್ಕೆ ಲಾಸಬೆಲಾ ಎನ್ನುತ್ತಾರೆ. ಈ ತಳಿಯವು ಹೊಸ ಪರಿಸರಕ್ಕೆ ಚೆನ್ನಾಗಿ ಹೊಂದಿಕೊರಿಡು ಕಷ್ಟ ಮತ್ತು ರೋಗಗಳಮ್ನ ತಡೆದುಕೊಳ್ಳುತ್ತವೆ. ಕೆಂಪು ಈ ತಳಿಯ ಬಣ್ಣವಾದರೂ ಬೆರಕೆ ಹಳದಿಯಿರಿದ ಕರಿ ಕಂದಿನ ತನಕ ಇದರ ಬಣ್ಣ ಇರಬಹುದು. ಮೊಗದ ಮೇಲೆ.