ಪುಟ:Mysore-University-Encyclopaedia-Vol-1-Part-2.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲಿಘರ್- ಅಲಿವರ್ದಿಖಾನ್

ಅಲಿಗೇಟರುಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿರುವ ತ್ಯೆಮಾನ್ ಗಳನ್ನು ಕೆಲವು ವಿಧಗಳಲ್ಲಿ ಹೋಲುತ್ತವೆ. ಇವು ಸಾಮಾನ್ಯವಾಗಿ ಅಪಾಯಕಾರಿ ಪ್ರಾಣಿಗಳು. ಬಲಿತ ದೊಡ್ಡದಾದ ಅಲಿಗೇಟರುಗಳು ಮಕ್ಕಳನ್ನು ಹಿಡಿದು ಕೊಂದುಹಾಕಿದ್ದೂ ಉಂಟು. ಆದರೆ ಈಗ ೭ ಅಡಿಗಿಂತ ಉದ್ದದ ಅಲಿಗೇಟರುಗಳು ಅತಿ ವಿರಳ. ಇದರ ಮಾಂಸವನ್ನು ತಿನ್ನುವುದಕ್ಕೂ ಚರ್ಮವನ್ನು ಸೊಂಟಪಟ್ಟಿ, ಕೈಚೀಲ ತಯಾರಿಸುವುದಕ್ಕೂ ಉಪಯೋಗಿಸುತ್ತಾರೆ. ಅಲಿಗೇಟರ್ ಮರಳಲ್ಲಿ ಮೊಟ್ಟೆ ಇಡುತ್ತದೆ. ಸುಮಾರು ೩ ತಿಂಗಳು ಕಾವು ಕೂತಮೇಲೆ ಮೊಟ್ಟೆ ಒಡೆದು ಮರಿ ಹೊರಬರುವುದು. ಮೀನು, ಟರ್ಟಲ್ ಮುಂತಾದ ಶತ್ರುಗಳಿಂದ ಮರಿಗಳನ್ನು ಕಾಪಾಡಲು ತಾಯಿ ಮುತುವರ್ಜಿ ವಹಿಸುತ್ತದೆ. ಆ ಅಲಿಗೇಟರ್ ನೀರಿನಲ್ಲಿ ಈಜುವಾಗ ಅದರ ಬಾಲದ ಚಲನೆಯಿಂದ ಶಬ್ದವಾಗುತ್ತದೆ.

ಅಲಿಘತ್: ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ. ಜಿಲ್ಲಾ ಆಡಳಿತ ಮುಖ್ಯಪಟ್ಟಣ; ದೆಹಲಿಯಿಂದ ೧೨೮ಕಿಮೀ ದೂರದಲ್ಲಿದೆ. ವಿಸ್ತೀರ್ಣ ೩೬೫೦ ಚ.ಕಿಮೀ. ಜನಸಂಖ್ಯೆ ೩೬,೨೦,೪೩೬(೨೦೦೧). ಊರಿನ ಹಿಂದಿನ ಹೆಸರು ಕೊಯಿಲ್ ಅಥವಾ ಕೋಲ್. ಮುಸ್ಲಿಂ ಸಂತರ ಅನೇಕ ಗೋರಿಗಳಿವೆ. ೧೮೮೯ರಲ್ಲಿ ಸ್ಥಾಪಿತವಾದ ದೊಡ್ಡ ಲಯಾಲ್ ಗ್ರಂಥಭಂಡಾರವನ್ನು ಈಗ ಮಾಳವೀಯ ಗ್ರಂಥ ಭಂಡಾರ ಎಂದು ಕರೆಯುತ್ತಾರೆ. ಬೀಗಗಳು ಮುಂತಾದ ಲೋಹಪದಾರ್ಥಗಳು, ಜಮಖಾನಗಳು, ರತ್ನಗಂಬಳಿಗಳು ಇಲ್ಲಿ ಹೆಚ್ಚಾಗಿ ತಯಾರಾಗುತ್ತವೆ. ಇದು ಮುಸ್ಲಿಮರ ಪ್ರಸಿದ್ಧ ವಿದ್ಯಾಕೇಂದ್ರ. ೧೮೭೫ ರಲ್ಲಿ ಮುಸ್ಲಿಮರ ಅಭ್ಯುದಯಕ್ಕಾಗಿ ಬೆಳೆದು ಈಗ ಅಲಿಘರ್ ವಿಶ್ವವಿದ್ಯಾಲಯವಾಗಿದೆ. ಇದಕ್ಕೆ ಸಂಬಂಧಿಸಿದ ಕಾಲೇಜುಗಳು, ವೃತ್ತಿಶಿಕ್ಷಣ ಶಾಲೆಗಳು, ವಿವಿಧ ಕಲಾಶಾಲೆಗಳು ಅನೇಕ ಇವೆ. ಇಲ್ಲಿನ ನೇತ್ರವಿದ್ಯಾಕೇಂದ್ರ ತುಂಬ ಪ್ರಸಿದ್ಧಿ ಪಡೆದಿದೆ.

ಅಲಿಘರ್ ಚಳವಳಿ: ೧೯ನೇ ಶತಮಾನದ ಕೊನೆಯ ದಶಕದಲ್ಲಿ ರಾಷ್ಟ್ರೀಯ ಆಂದೋಲನದ ಬಗ್ಗೆ ಮುಸ್ಲಿಮರ ಮನೋಧರ್ಮ ಕೊಂಚ ಬದಲಾದುದನ್ನು ಸೂಚಿಸುವ ಒಂದು ಘಟನೆ. ರಾಮಮೋಹನರಾಯ್, ಟಿಳಕ್, ರಾನಡೆ ಮುಂತಾದ ಅನೇಕ ಸಮಾಜ ಸುಧಾರಕರ ನಿರಂತರ ಶ್ರಮದ ಫಲವಾಗಿ ಹಿಂದೂಗಳಲ್ಲಿ ಜನಜಾಗೃತಿಯುಂಟಾಗಿತ್ತು; ಅವರು ಇಂಗ್ಲಿಷ್ ವ್ಯಾಸಂಗ ಮಾಡಿ ಸರ್ಕಾರದ ಹುದ್ದೆಗಳನ್ನು ದೊಕಿಸಿಕೊಂಡಿದ್ದರು. ಮುಸ್ಲಿಮರು ಮಾತ್ರ ಹಿಂದುಳಿದಿದ್ದರು. ಹಿಂದೂಗಳಂತೆಯೇ ಅವರೂ ಆಧುನಿಕ ಶಿಕ್ಷಣ ಪಡೆದು ಮುಂದುವರಿಯಲೆಂಬ ಉದ್ದೇಶದಿಂದ ಆಗ ಮುಸಲ್ಮಾನರ ಮುಖಂಡರಾಗಿದ್ದ ಸರ್ ಸೈಯದ್ ಅವರ ಪ್ರೇರಣೆಯಂತೆ ಅಲಿಘರ್ನಲ್ಲಿ ಮಹಮ್ಮದ್ ಆಂಗ್ಲೊಓರಿಯಂಟಲ್ ಕಾಲೇಜ್ ಎಂಬ ವಿದ್ಯಾಸಂಸ್ಥೆ ಸ್ಥಾಪಿತವಾಯಿತು(೧೮೭೫). ಭಾರತದಲ್ಲಿ ಅಂದು ಬೀಸುತ್ತಿದ್ದ ರಾಜಕೀಯ ಮಾರುತದ ವೇಗ ಒತ್ತಡಗಳ ಸೂಕ್ಷ್ಮವನ್ನರಿತ ಬ್ರಿಟಿಷ್ ಅಧಿಕಾರವರ್ಗ ಹಿಂದೂ ಮುಸಲ್ಮಾನರ ಐಕ್ಯದಿಂದ ಒದಗಬಹುದಾದ ವಿಪತ್ತನ್ನು ಮನಗಂಡು ಅದನ್ನು ಆಗದಂತೆ ಮಾಡಲು ಯತ್ನಿಸಿದರು. ಹೆಚ್ಚಾಗಿ ಹಿಂದೂಗಳೇ ಇದ್ದ ಕಾಂಗ್ರೆಸ್ಸಿಗೆ ಮುಸ್ಲಿಮರು ಸೇರದಂತೆ ಮಾಡಲೆತ್ನಿಸಿದರು. ೧೮೮೩-೧೮೯೯ ಅಲಿಘರ್ ಕಾಲೇಜಿನ ಪ್ರಾಧ್ಯಾಪಕನಾಗಿದ್ದ ಬೆಕ್, ಸೈಯದ್ ಅಹಮದ್ ಮತ್ತು ಇತರ ಮುಸ್ಲಿಂ ಮುಖಂಡರ ಮನಸ್ಸನ್ನು ಕಾಂಗ್ರೆಸ್ಸಿಗೆ ವಿರೋಧವಾಗಿ ತಿರುಗಿಸುವ ಕಾರ್ಯದಲ್ಲಿ ಯಶಸ್ವಿಯಾದ; ಕಾಂಗ್ರೆಸ್ಸಿಗೆ ಸೇರಿದರೆಅಲ್ಪ ಸಂಖ್ಯಾತರಾದ ಮುಸ್ಲಿಮರಿಗೆ ಯಾವ ರೀತಿಯ ಪ್ರಯೋಜನವೂ ಇಲ್ಲ; ಅವರು ಬಹುಸಂಖ್ಯಾತರಾದ ಹಿಂದೂಗಳ ಅಡಿಯಾಳುಗಳಾಗಿ ಬಾಳಬೇಕಾಗುತ್ತದೆ ಎಂದು ಬೋಧಿಸಿದ. ಅವನ ಯತ್ನ ಫಲಿಸಿತು. ಸರ್ ಸೈಯದ ಅಹಮದ್ ಕೂಡ ಕಾಂಗ್ರೆಸ್ಸಿಗೆ ಸೇರುವುದರಿಂದ ಮುಸ್ಲಿಮರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ನಂಬಿದ. ಅಲಿಘರ್ ನಲ್ಲಿ ಹೀಗೆ ಪ್ರಾರಂಭವಾದ ಈ ಚಳವಳಿ, ಬ್ರಿಟಿಷ್ ರಾಜಕಾತಣಿಗಳ ಒಡೆದು ಆಳುವ ನೀತಿಯಿಂದ ಪುಷ್ಟಿಗೊಂಡು ಬೆಳೆಯಿತು.


ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ: ಸರ್ ಸೈಯದ್ ಅಹಮದ್ ಖಾನ್ ಅವರಿಂದ ಸ್ಥಾಪಿತವಾದ ಮಹಮ್ಮಡನ್ ಆಂಗ್ಲೊ ಓರಿಯಂಟಲ್ ಕಾಲೇಜು ಬೆಳೆದು ೧೯೨೦ರಲ್ಲಿ ವಿಶ್ವವಿದ್ಯಾನಿಲಯದ ರೂಪ ಪಡೆಯಿತು. ಮುಸ್ಲಿಮರಿಗೆ ಪೌಢವಿದ್ಯಾವಕಾಶವನ್ನು ಕಲ್ಪಿಸುವುದೇ ಇದರ ಉದೇಶ. ಇದರ ಅಧಿಕಾರ ವ್ಯಾಪ್ತಿ ಇದರ ವಿಶ್ವವಿದ್ಯಾನಿಲಯದ ಮಸೀದಿಯಿಂದ ೧೬ಕಿಮೀ ದೂರವಿರುವ ಪ್ರದೇಶಕ್ಕೆ ಮಾತ್ರಸೀಮಿತವಾಗಿದೆ. ಸ್ವಾತಂತ್ರ್ಯಾನಂತರ ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ನಿನ ನಿಬಂಧನೆಗೆ ಮತ್ತು ರಾಜ್ಯಾಂಗದ ನಿಯಮಗಳಿಗೆ ಅನುಸಾರವಾಗಿರುವಂತೆ ಈ ವಿಶ್ವವಿದ್ಯಾನಿಲಯದ ವ್ಯವಸ್ಥೆಯನ್ನು ಹೊಸದಾಗಿ ರೂಪಿಸಲಾಯಿತು. ರಾಜ್ಯದ ನಾನಾ ಕಡೆಗಳಿಂದ, ಜಾತಿ ಮತ ಮುಂತಾದ ಭೇದವಿಲ್ಲದೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಸ್ಥಳದಲ್ಲೇ ವಾಸಮಾಡಬೇಕೆಂಬ ನಿಯಮವಿದೆ. ಆದರೂ ಶೇಕಡ ೨೫ ರಷ್ಟು ಹೊರಗಿನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸು.೫೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಸತಿಗೆ ಏರ್ಪಾಟಿದೆ.

ಇಲ್ಲಿ ಕಲೆ, ವಿಜಾನಗಳಿಗೆ ಸಂಬಂಧಪಟ್ಟ ಎಲ್ಲ ವಿಭಾಗಗಳೂ ಇವೆ. ವಿಜಾನಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಮತ್ತು ನೇತ್ರಶಾಸ್ತ್ರಕ್ಕೂ ಏಷ್ಯದಲ್ಲಿ ಅತ್ಯುತ್ತಮವಾದುದೆಂದು ಹೆಸರು ಪದೆದಿದೆ. ಇತ್ತೀಚೆಗೆ ಗ್ರಂಥಾಲಯವಿಜಾನ ಮುಂತಾದ ಅನೇಕ ಹೊಸಶಾಖೆಗಳನ್ನೂ ಸೇರಿಸಿದ್ದಾರೆ. ಇಲ್ಲಿನ ದೊಡ್ಡ ಗ್ರಂಥಾಲಯಕ್ಕೆ ಮೌಲಾನಾ ಅಬುಲ್ ಕಲ್ಂ ಆಜಾದರ ಹೆಸರನ್ನು ಕೊಟ್ಟಿದ್ದಾರೆ.

ಪೌಢಶಾಲೆಗಳನ್ನೂ ತನ್ನ ವ್ಯಾಪ್ತಿಗೆ ಒಳಪಡಿಸಿಕೊಂಡಿರುವ ಏಕೈಕ ವಿಶ್ವವಿದ್ಯಾಲಯ ವಿದು. ಇದರ ವ್ಯಾಪ್ತಿಗೆ ಒಳಪಟ್ಟಿರುವ ಐದು ಶಾಲೆಗಳಲ್ಲಿ ಒಂದು ಅಂಧ್ರಿಗಾಗಿ ಮೀಸಲಾದದ್ದು.

ಈ ವಿಶ್ವವಿದ್ಯಾನಿಲಯದಲ್ಲಿ ಸು.೩೦,೦೦೦ ವಿದ್ಯಾರ್ಥಿಗಳು, ೧೪೦೦ ಶಿಕ್ಷಕರು ಮತ್ತು ೬೦೦೦ ಶಿಕ್ಷಕೇತರ ಸಿಬ್ಬಂದಿ ಇದ್ದಾ. ೯೫ ವಿಭಾಗಗಳು ಮತ್ತು ೭೩ ಹಾಸ್ಟೆಲ್ ಗಳು ಹಾಗೂ ವಿವಿಧ ಕೋರ್ಸುಗಳು ಇವೆ. ಈ ವಿ.ವಿ.ನಿಲಯಕ್ಕೆ ಸೇರಿದಂತೆ ಜೆದ್.ಎಚ್.ಕಾಲೇಜ್ ಆರ್ಘ್ ಎಂಜಿನಿಯರಿಂಗ್ ಆಯ್ಯಂಡ್ ಟಿಕ್ನಾಲಜಿ, ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜು, ಡಾ.ಜಿಯಾ ಉದ್ದೀನ್ ಡೆಂಟರ್ ಕಾಲೇಜು, ಇನ್ ಸ್ಟಿಟ್ಯೂಟ್ ಆಫ್ ಆಫ್ತಾಲ್ಮಾಲಜಿ ಆಯಂಡ್ ಫುಡ್ ಕ್ರಾಫ್ಟ್ ಇನ್ ಸ್ಟಿಟ್ಯೂಟ್, ಅಕ್ಯಾಡೆಮಿಕ್ ಸ್ಟಾಫ್ ಕಾಲೇಜು ಮೊದಲಾದವು ಇವೆ.ವಿ.ವಿ.ನಿಲಯದ ಕ್ಯಾಂಪಸ್ ಸು.೪೬೮ ಹೆಕ್ಟೇರ್ ವ್ಯಾಪಿಸಿದೆ.

ಈ ವಿ.ವಿ.ನಿಲಯಕ್ಕೆ ಪ್ರಪಂಚದ ನಾನಾ ಕಡೆಗಳಿಂದ ಮುಖ್ಯವಾಗಿ ಆಫ್ರಿಕ, ಆಗ್ನೇಯ ಏಷ್ಯಗಳಿಂದ- ವಿದ್ಯಾರ್ಥಿಗಳು ಓದಲು ಬರುತ್ತಾರೆ. ಇಲ್ಲಿ ಇಂಗ್ಲಿಷ್,ಹಿಂದಿ,ಉರ್ದು, ಅರಯಬಿಕ್, ಪರ್ಷಿಯನ್ , ಸಂಸ್ಕೃತ, ತೆಲುಗು, ತಮಿಳು, ಬಂಗಾಳಿ, ಮಲಿಯಾಳಂ,ಮರಾಠಿ, ಪಂಜಾಬಿ, ಕಾಶ್ಮೀರಿ.ಫ್ರೆಂಚ್, ಟರ್ಕಿಷ್, ಜರ್ಮನ್ ಮತ್ತು ರಷ್ಯನ್ ಭಾಷೆಗಳನ್ನು ಕಲಿಯಲು ಅವಕಾಶವಿದೆ.

ಅಲಿವರ್ದಿಖಾನ್: ಉದ್ಯಮಶೀಲತೆ ಮತ್ತು ಪರಾಕ್ರಮದಿಂದ ಬಂಗಾಲದ ಆಡಳಿತವನ್ನು ಪಡೆದು ೧೭೪೦-೧೭೫೬ರವರೆಗೆ ಸ್ವತಂತ್ರವಾಗಿ ಆಳಿದವ. ಹಿಂದಿನ ಹೆಸರು ಮಿರ್ಜಾ ಮಹಮದ್ ಅಲಿ. ತಂದೆಯ ಕಡೆಯಿಂದ ಅರಬ್ಬೀಯರ, ತಾಯಿಯ ಕಡೆಯಿಂದ ತುರ್ಕೀಯರ ಸಂಬಂಧ ಉಳ್ಳವ. ಬಿಹಾರ್ ಪ್ರಾಂತ್ಯಾಧಿಕಾರಿ ಪೂಜಾ ಉದ್ದೀನನ ಕೈಕೆಳಗೆ ಕೆಲಸಮಾಡಿ ದಕ್ಷ ಆಡಳಿತಗಾರನೆಂದು ಹೆಸರು ಪಡೆದಿದ್ದ. ಆಧಿಕಾರಕ್ಕೆ ಬಂದುದು ಕೌರ್ಯದಿಂದ. ಹದಿನಾರು ವರ್ಷಗಳ ಕಾಲ ರಾಜ್ಯವಾಳಿದ. ಆ ಕಾಲದಲ್ಲಿ ಬಂಗಾಲ ಅನೇಕ ಉತ್ಕಟ ಸಮಸ್ಯೆಗಳನ್ನೆದುರಿಸಬೇಕಾಗಿತ್ತು. ಜಮೀನ್ದಾರರೂ ವ್ಯಾಪಾರಿಗಳೂ ಮತ್ತು ಮಿಲಿಟರಿ ಸರದಾರರೂ ಬಂಗಾಲದಲ್ಲಿ ಅಶಾಂತಿಯನ್ನು ಉಂಟುಮಾಡಿದ್ದರು. ಜೊತೆಗೆ ಪರಕೀಯರ ವ್ಯಾಪಾರ ಸಂಸ್ಥೆಗಳನ್ನು ಹತೋಟಿಗೊಳಪಡಿಸಬೇಕಾಗಿತ್ತು. ಮರಾಠರ ದಾಳಿಗಳು ಮತ್ತು ಪಠಾಣರ ದಂಗೆಗಳು ಸಂದಿಗ್ಧ ಪರಿಸ್ಥಿತಿಯನ್ನುಂಟುಮಾಡಿದ್ದುವು. ಬಂಗಾಲದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು, ಖಾನ್ ಸಮರ್ಥವಾಗಿ ಹೋರಾಡಿದ. ಹಿಂದೂ ಮತ್ತು ಮಹಮದೀಯ ಅಧಿಕಾರಿಗಳ ಸಹಾಯದಿಂದ ಸುಭದ್ರವಾದ ಆಡಳಿತವನ್ನು ನೀಡಲು ಸತತವಾಗಿ ಪ್ರಯತ್ನಪಟ್ಟ.