ಪುಟ:Mysore-University-Encyclopaedia-Vol-1-Part-2.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲಿಸಮ್-ಅಲೆಕ್ಸಾಂಡರ್

ಅಲಿಸಮ್:ಬ್ರಾಸಿಕೇಸೀ (ಕ್ರುಸಿಫೆರೀ) ಕುಟುಂಬದ ಅಲಂಕಾರ ಸಸ್ಯ. ಗಿಡ ಕುಳ್ಳು ಬಗೆಯದು. ಎತ್ತರ 8-25 ಸೆಂಮೀ ಮಾತ್ರ. ಹಲವಾರು ಪುಟ್ಟ ಬಿಳಿ ಪುಷ್ಪಗಳ ಗುಚ್ಛಗಳಿಂದಾಗಿ ಇದು ನೋಡಲು ಬಲು ಅಂದ. ಸುವಾಸನೆ ಇದೆ. ಗುಂಪಿನಲ್ಲಿ, ಮಡಿಗಳ ಅಂಚಿನಲ್ಲಿ, ಕಾರ್ಪೆಟ್ ಮಡಿಗಳಲ್ಲಿ ಮತ್ತು ತೂಗುಬುಟ್ಟಿಗಳಲ್ಲಿ ಬೆಳೆಸಲು ಗಿಡ ಬಹು ಚೆನ್ನಾಗಿದೆ. ಇದನ್ನು ಪ್ರದರ್ಶನಾಲಯಗಳಲ್ಲಿ ಪ್ರದರ್ಶಿಸುವುದಕ್ಕೂ ಕುಂಡಗಳಲ್ಲಿ ಬೆಳೆಸಬಹುದು. ಬೀಜವನ್ನು ನೇರವಾಗಿ ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಬಿತ್ತನೆ ಮಾಡಿ, ಸಸಿಗಳು 5-8 ಸೆಂಮೀ ಎತ್ತರ ಬೆಳೆದ ಮೇಲೆ 15 ಸೆಂಮೀ ಅಂತರಕ್ಕೆ ಒಂದು ಸಸಿ ಇರುವಂತೆ ಉಳಿಸಿಕೊಂಡು ಉಳಿದವುಗಳನ್ನೆಲ್ಲ ಕಿತ್ತುಹಾಕಬೇಕು. ಬಿತ್ತನೆಯಾದ 15ನೆಯ ದಿವಸ ಒಂದು ಸಾರಿ ಗೊಬ್ಬರವನ್ನು ಮೇಲ್ಪದರವಾಗಿ ಕೊಡಬೇಕು. 20, 35 ಮತ್ತು 50ನೆಯ ದಿವಸಗಳಲ್ಲಿ 3 ಸಾರಿ ಹಿಂಡಿಯ ಗೊಬ್ಬರದ ದ್ರಾವಣವನ್ನು ಕೊಡಬೇಕು. 20, 30 ಮತ್ತು 40ನೆಯ ದಿವಸಗಳಲ್ಲಿ ತುದಿಯನ್ನು ಚಿವುಟಿದರೆ, ಗಿಡ ಹರಡಿಕೊಂಡು ಬೆಳೆದು 60 ದಿವಸಗಳಲ್ಲಿ ಪೂರ್ಣ ಹೂವಿಗೆ ಬರುತ್ತದೆ. ಮುಂದೆ 90-100 ದಿವಸಗಳಲ್ಲಿ ಬೀಜಗಳಾಗುತ್ತವೆ. ಸುಣ್ಣದ ಅಂಶವುಳ್ಳ ಹಗುರವಾದ ಭೂಮಿಯಲ್ಲಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಅಕ್ಟೋಬರ್‌ನಿಂದ ಜನವರಿ ತಿಂಗಳವರೆಗೆ ಮೈದಾನ ಪ್ರದೇಶಗಳಲ್ಲೂ ಮಾರ್ಚ್‌ನಿಂದ ಜೂನ್ ತಿಂಗಳವರೆಗೆ ಬೆಟ್ಟಗುಡ್ಡಗಳ ಪ್ರದೇಶಗಳಲ್ಲೂ ಬಿತ್ತನೆ ಮಾಡಬಹುದು.(ಕೆ.)

ಅಲೀಘರ್ ,ಮಾರ್ಗರಿಟ ಯೊಸಿಫಾವ್ನ:ಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶಭಕ್ತಿ ಕವನಗಳಿಂದ ಕೀರ್ತಿ ಪಡೆದ ಕವಯಿತ್ರಿ. ಒಬ್ಬ ವೀರ ರಷ್ಯನ್ ಬಾಲಿಕೆಯ ಚಿತ್ರವನ್ನು ಚಿತ್ರಿಸುವ ಜೋ಼ಯೋ ಎಂಬ ಇವಳ ಕಾವ್ಯಕ್ಕೆ ಸ್ಟ್ಯಾಲಿನ್ ಬಹುಮಾನ ದೊರೆಯಿತು. ಜೀವನದ ಉತ್ಸಾಹ ಪೂರ್ಣ ಸ್ವೀಕಾರ ಇವಳ ಕವನಗಳ ಅಸ್ತಿಭಾರ.(ಎಲ್.ಎಸ್.ಎಸ್)

ಅಲುಬು:ಅವಶ್ಯವಲ್ಲದ ಸಸ್ಯ (ವೀಡ್). ಕಳೆ ಪರ್ಯಾಯ ನಾಮ. ಇವು ಸಾಗುವಳಿಗಾಗಿ ಆರಿಸಿಕೊಂಡ ಎಲ್ಲ ಪ್ರದೇಶಗಳ ಮೇಲೂ ಆಕ್ರಮಣ ನಡೆಸುತ್ತವೆ. ಈ ಗಿಡಗಳು ವಿವಿಧ ರೀತಿಯ ಮಣ್ಣು ಹವಾಗುಣಗಳ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬಾಳುತ್ತವೆ. ಮಂಜಿನ ವಾತಾವರಣದಲ್ಲಿಯೂ ಜೀವಿಸುವ ಸಾಮರ್ಥ್ಯ ಪಡೆದಿವೆ. ಸಾಗುವಳಿ ಮಾಡದ ಅಥವಾ ಬಂಜರು ಭೂಮಿಯಲ್ಲಿ ಪ್ರಬಲವಾಗಿರುವುವಲ್ಲದೆ ಪೈರಿನೊಂದಿಗೆ ನೀರು ಬೆಳಕು ಮತ್ತು ಆಹಾರಕ್ಕಾಗಿ ಅವು ಸತತ ಹೋರಾಟ ನಡೆಸುತ್ತವೆ. ಅವುಗಳ ಕ್ಷೀಣತೆ ಅಥವಾ ಪ್ರವರ್ಧಮಾನತೆ ಪೈರಿನ ಸ್ಥಿತಿಯನ್ನು ಅವಲಂಬಿಸಿದೆ. ದುರ್ಬಲ ಪೈರಿನಲ್ಲಿ ಕಳೆಯದೇ ಮೇಲುಗೈ. ಸರಿಯಾಗಿ ಬೆಳೆದ ಪೈರಿನ ನಡುವೆ ಕಳೆ ಇದ್ದೂ ಇಲ್ಲದಂತಾಗುವುದು.

ಕಳೆ ಉಪಯೋಗಕರವೂ ಹೌದು; ಉಪದ್ರವಕಾರಿಯೂ ಹೌದು. ತಾತ್ಕಾಲಿಕವಾಗಿ ಅನುಪಯುಕ್ತ ಅಥವಾ ಪರಿತ್ಯಕ್ತ ಭೂಮಿಯ ಮೇಲೆ ಬೇರೆ ಏನೂ ಆಕ್ರಮಣ ನಡೆಸದಂತೆ ನಿರ್ಬಂಧಿಸುವಲ್ಲಿ ಕಳೆಯ ಪಾತ್ರ ಮಹತ್ವವುಳ್ಳದ್ದು. ಅದು ಮಣ್ಣಿನ ಸವೆತ ತಡೆಗಟ್ಟುವುದು; ನೀರು ಹರಿದು ಹೋಗುವ ವೇಗ ಕಡಿಮೆ ಮಾಡುವುದು. ಮೀನು ಮತ್ತಿತರ ಜಲಚರ ಪ್ರಾಣಿಗಳಿಗೆ ಪಾಚಿಕಳೆ ಸ್ವಭಾವಸಿದ್ಧ ಆಹಾರ. ಕೆಲವು ಕಳೆಗಳನ್ನು ಮನುಷ್ಯ ಆಹಾರ, ವಸ್ತ್ರಗಳಿಗೂ ಮತ್ತೆ ಕೆಲವನ್ನು ವಸತಿ ಸೌಕರ್ಯಕ್ಕಾಗಿಯೂ ದನಗಳ ಮೇವಿಗಾಗಿಯೂ ಔಷಧಿಗಳಿಗಾಗಿಯೂ ಉಪಯೋಗಿಸುತ್ತಾನೆ. ಹೂ ಬಿಟ್ಟಿರುವ ಕಳೆ ಆ ಪ್ರದೇಶಕ್ಕೆ ಅಲಂಕಾರ ತರುವುದುಂಟು.

ವ್ಯವಸಾಯ ರಂಗದಲ್ಲಿ ತಲೆದೋರುವ ಬೂಷ್ಟು, ಕ್ರಿಮಿಕೀಟಗಳಂಥ ಉಪದ್ರವಕಾರಿಗಳು ಉಂಟುಮಾಡುವ ಒಟ್ಟು ನಷ್ಟಕ್ಕಿಂತ ಅಲುಬು ಕಳೆಯಿಂದ ಆಗುವ ನಷ್ಟ ಹೆಚ್ಚಿನದು. ಫಸಲು ಕಲುಷಿತವಾದರೆ ಅದರ ಆದಾಯದ ಬೆಲೆ ಇಳಿಯುವುದು. ಕಳೆಯನ್ನೊಳಗೊಂಡ ಜಮೀನಿನ ಬೆಲೆ ತಗ್ಗುವುದು. ಬೇಸಾಯದ ವೆಚ್ಚ ಮತ್ತು ಸಾಮಾನು ಸರಂಜಾಮಿನ ಏರ್ಪಾಡು ಏರುವುದು. ಬೆಳೆಯ ಆಯ್ಕೆಯೂ ಪರಿಮಿತಿಗೊಳ್ಳುವುದು. ರೋಗರುಜಿನಗಳನ್ನು ಉಂಟುಮಾಡುವ ಬೂಷ್ಟು, ಕ್ರಿಮಿಕೀಟಗಳಿಗೆ ಕಳೆ ಆಶ್ರಯ ಕೊಟ್ಟು ಬೆಳೆಗಳ ಮೇಲೆ ಅವು ಆಕ್ರಮಣ ನಡೆಸಲು ಕಾರಣವಾಗುತ್ತದೆ. ಕಳೆ ಹೊಳೆಯನ್ನಾಗಲಿ ಚರಂಡಿಯನ್ನಾಗಲಿ ಪ್ರತಿಬಂಧಿಸಿ ತೊಡಕನ್ನುಂಟುಮಾಡಬಹುದು. ಸರೋವರಗಳನ್ನೂ ಕೊಳಗಳನ್ನೂ ಹೊದಿಕೆಯಂತೆ ಮುಚ್ಚಿದ್ದು ನೀರನ್ನು ಕಲುಷಿತಗೊಳಿಸಬಹುದು.

ಅಲುಬು ಕಳೆಯನ್ನು ವಾರ್ಷಿಕ, ದ್ವೈ ವಾರ್ಷಿಕ ಮತ್ತು ಬಹುವಾರ್ಷಿಕ ಗಿಡಗಳನ್ನಾಗಿ ವರ್ಗೀಕರಿಸಲಾಗಿದೆ. ಕಾಕಲ್ಬರ್, ಕ್ರ್ಯಾಬ್ಗ್ರಾಸ್, ಫಾಕ್ಸ್ಟೇಲ್ ವ್ಯವಸಾಯದ ಭೂಮಿಯಲ್ಲಿ ಸಾಮಾನ್ಯವಾಗಿ ಬೆಳೆಯುವ ಕಳೆ ಸಸ್ಯಗಳು ವಾರ್ಷಿಕ ಗುಂಪಿಗೆ ಸೇರಿವೆ. ದ್ವೈ ವಾರ್ಷಿಕ ಕಳೆಯ ಗುಂಪು ವೈಲ್ಡ್ ಕ್ಯಾರಟ್, ಬರ್ಡಾಕ್ ಮುಂತಾದ ಕೆಲವೇ ಕಳೆಗಳನ್ನು ಹೊಂದಿದೆ. ಬಹುವಾರ್ಷಿಕ ಕಳೆಯ ಗುಂಪಿನಲ್ಲಿ ನಟ್ಗ್ರಾಸ್, ಪ್ರಿಕ್ಲಿಪಿಯರ್, ರೆಡ್ ಸಾರೆಲ್, ಪಂಕ್ ಚರ್ ವೈನ್ ಮುಂತಾದುವನ್ನು ಸೇರಿಸಲಾಗಿದೆ.

ಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಕಾಣಬರುವ ಕಳೆಯ ಹಣ್ಣು ಮತ್ತು ಬೀಜಗಳ ಪ್ರಸಾರ ಬಹಳ ವಿಧಗಳಲ್ಲಾಗುವುದು. ಹಣ್ಣು ಬೀಜಗಳ ರಚನೆಯಲ್ಲಿನ ಮಾಪಾರ್ಡುಗಳು ಗಾಳಿ, ನೀರು ಮತ್ತು ಪ್ರಾಣಿಗಳಿಂದ ಪ್ರಸಾರವಾಗಲು ಅನುಕೂಲವಾಗಿವೆ. ಅವು ಪ್ರಾಣಿಗಳ ರೋಮಕ್ಕೆ ಅಂಟಿಕೊಳ್ಳಬಹುದು, ಗೊರಸಿಗೆ ಸಿಕ್ಕಿಕೊಳ್ಳಬಹುದು, ಅಥವಾ ಜೀರ್ಣಾಂಗದ ಜಾಡಿನಲ್ಲಿ ಹಾದು ಹೊರಬಂದು ಪ್ರಸಾರವಾಗಬಹುದು. ಹರಿಯುವ ನೀರು ಲಕ್ಷೋಪಲಕ್ಷ ಬೀಜಗಳನ್ನು ಕೊಂಡೊಯ್ದು ವಿಶಾಲ ಪ್ರದೇಶಗಳಲ್ಲಿ ಹರಡುವುದು. ಸರಿಯಾಗಿ ಶುದ್ಧಿಗೊಳಿಸದ ಬೀಜ ಬಿತ್ತುವ ಬೇಜವಾಬ್ದಾರಿತನ, ಹೊರದೇಶಗಳಿಗೆ ರಫ್ತು ಮಾಡುವ ಬಿತ್ತನೆಬೀಜವನ್ನು ಒಣ ಹುಲ್ಲು, ಆಹಾರ ಸಾಮಗ್ರಿ, ಗಿಡ ಶೇಖರಣೆ ಮುಂತಾದುವುಗಳೊಂದಿಗೆ ಕಳಿಸುವ ನಿರ್ಲಕ್ಷ್ಯ ಇವೂ ಕಳೆಯ ಪ್ರಸಾರಕ್ಕೆ ಕಾರಣವಾಗುತ್ತವೆ. ಬಹುಶಃ ಇದೇ ಕಾರಣದಿಂದಾಗಿ ಅಮೆರಿಕ, ಕೆನಡ ದೇಶಗಳಲ್ಲಿನ ಅನೇಕ ಜಾತಿಯ ಕಳೆಗಳು ಯುರೋಪ್ ಮತ್ತಿತ್ತರ ಏಷ್ಯ ಪ್ರದೇಶಗಳಿಗೆ ಸಾಗಿ ಬಂದಿರಬಹುದು.

ಕಳೆಯನ್ನು ನಿಯಂತ್ರಿಸುವುದರಲ್ಲಿ ಉಳುಮೆ ಅಥವಾ ಬೇಸಾಯ ಅತ್ಯಂತ ಪರಿಣಾಮ ಕಾರಿಯೂ ಮಿತವ್ಯಯದ್ದೂ ಆದ ಮಾರ್ಗ. ಕಳೆಕೀಳುವುದು, ಸುಡುವುದು, ಕತ್ತರಿಸುವುದು, ಇವೂ ನಿಯಂತ್ರಣದ ಹಲವು ವಿಧಗಳು. ಕಳೆ ವಿಸ್ತರಿಸಿದಂತೆಲ್ಲ ಹೊಸ ಕಳೆ ನಾಶಕಗಳೂ ಬಳಕೆಗೆ ಬರುತ್ತಿವೆ. ಕಳೆನಾಶಕಗಳಲ್ಲಿ ಎರಡು ವಿಧ. ಆರಿಸಿದ ಕಳೆನಾಶಕ ಮತ್ತು ಆರಿಸದ ಕಳೆನಾಶಕ. ಐರನ್ ಸಲ್ಫೇಟ್, ಕಾಪರ್ ನೈಟ್ರೇಟ್ ಮುಂತಾದ ಆರಿಸಿದ ಕಳೆನಾಶಕವನ್ನು ಮಿಶ್ರಿತ ಕಳೆಯಮೇಲೆ ನಿಶ್ಚಿತ ಪ್ರಮಾಣದಲ್ಲಿ ಸಿಂಪಡಿಸಿದರೆ ಬೇಡವಾದ ಕಳೆಮಾತ್ರ ನಾಶವಾಗುತ್ತದೆ. ಆರಿಸದ ಕಳೆನಾಶಕಗಳಾದ ಸೋಡಿಯಮ್ ಮತ್ತು ಅಮೋನಿಯಮ್ ಥೈಯೋಸೈನೈಟ್, ಅಮೋನಿಯಮ್ ಸಲ್ಫೇಟ್ ಪೆಟ್ರೋಲಿಯಂ ಎಣ್ಣೆ ಸಿಂಪಡಿಸಿದಾಗ ಅವುಗಳೊಂದಿಗೆ ಸಂಪರ್ಕ ಪಡೆಯುವ ಎಲ್ಲ ಕಳೆಯೂ ನಾಶವಾಗುತ್ತದೆ. ಭಾರತದಲ್ಲಿ 2,4-ಡಿ(2,4-ಡೈಕ್ಲೋರೋ ಫೀನೈಲ್, ಅಸಿಟಿಕ್ ಆಮ್ಲ) ಅಥವಾ ಎಂ. ಸಿ. ಪಿ. ಎ. (2-ಮೀಥೈಲ್ 4 ಫೀನಾಕ್ಸಿ ಅಸಿಟಿಕ್ ಆಮ್ಲ) ಹುಲ್ಲು ಕಳೆಯನ್ನುಳಿದು ಮಿಕ್ಕೆಲ್ಲ ವಾರ್ಷಿಕ ಕಳೆಯ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.(ಕೆ.ಎಂ)

ಅಲೆಕ್ಸಾಂಡರ್:ಪ್ರ.ಶ.ಪೂ. 356-323.) ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜನಾದ ಇತ ಅರಿಸ್ಟಾಟಲ್ ಎಂಬ ತತ್ವಜ್ನ್ಯಾನಿಯ ಶಿಷ್ಯ.. ಈತ ಇತಿಹಾಸದ ಒಂದು ಬಹುದೋಡ್ಡ ಸಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದನು. ಇವನ ಸಾಮ್ರಾಜ್ಯ ಗ್ರೀಸಿನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು. ಪರ್ಷಿಯ ಸಾಮ್ರಾಜ್ಯವನ್ನು ಸೋಲಿಸಿ ಭಾರತದವರೆಗೂ ದಂಡೆತ್ತಿ ಬಂದ ಮಹಾನಾಯಕ. ತಂದೆ ಫಿಲಿಪ್, ರಾಜನಾಗಿ ದೇಶವನ್ನು ಸುಭದ್ರ ತಳಹದಿಯ ಮೇಲೆ ಸತತವಾಗಿ ದುಡಿದು ಮಗನ ಪ್ರಗತಿಗೆ ಕಾರಣನಾದ. ತಂದೆಯ ಮರಣಾನಂತರ ಪ್ರ.ಶ.ಪೂ. 336ರಲ್ಲಿ ತನ್ನ 20ನೆಯ ವಯಸ್ಸಿನಲ್ಲಿ ಅಲೆಕ್ಸಾಂಡರ್ ಪಟ್ಟಕ್ಕೆ ಬಂದು ದೇಶದಲ್ಲಿ ತಲೆ ಎತ್ತುತ್ತಿದ್ದ ಅಶಾಂತಿ ಅನಾಯಕತೆಗಳನ್ನು ನಿವಾರಿಸಿದ. ತಂದೆಯಂತೆ ರಾಜ್ಯವಿಸ್ತರಣೆಗೆ ಮನಸ್ಸು ಮಾಡಿದ. ಬಾಲ್ಯದಲ್ಲೇ ತಂದೆಯ ನೇತೃತ್ವದಲ್ಲಿ ಪಡೆದ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಇವನಲ್ಲಿದ್ದ ಪ್ರತಿಭೆಯೂ ಸೇರಿ ಯುವಕ ಅಲೆಕ್ಸಾಂಡರನ ವ್ಯಕ್ತಿತ್ವ ಪ್ರಜ್ವಲಿಸತೊಡಗಿತು. ಈತ ಎತ್ತರವಾದ ಆಳು, ಸ್ಫುರದ್ರೂಪಿ, ದೇಹದಾರ್ಢ್ಯವುಳ್ಳ, ಸಂಕಲ್ಪದಂತೆ ಗುರಿಸಾಧಿಸುವ ದೃಢಬುದ್ಧಿ ಹೊಂದಿದ್ದ ಈತನಲ್ಲಿ ತಾಯಿಯ ಬುದ್ಧಿವಿಚಾರ, ಅಹಂಕಾರ, ಉದ್ರೇಕಗಳು ಸೇರಿಕೊಂಡಿದ್ದವು.

ಗ್ರೀಕ್ ನಾಗರಿಕತೆ ಸಂಸ್ಕೃತಿಗಳನ್ನು ಈತ ಬಹುವಾಗಿ ಮೆಚ್ಚಿದ. ಹೋಮರನ ಇಲಿಯಡ್ ಮಹಾಕಾವ್ಯ ಇವನ ತುದಿನಾಲಗೆಯಲ್ಲಿತ್ತು. ಪ್ರಸಿದ್ಧ ವಿದ್ವಾಂಸನಾದ ಅರಿಸ್ಟಾಟಲ್ ಇವನ ಗುರು. ತತ್ತ್ವಶಾಸ್ತ್ರ, ವೈದ್ಯ, ವಿಜ್ಞಾನಗಳಲ್ಲಿ ಅಪಾರ ಆಸಕ್ತಿಯುಳ್ಳವ. ಗ್ರೀಕ್ ರಾಜ್ಯಗಳನ್ನು ಸೋಲಿಸಿದನಾದರೂ ತಂದೆಯಂತೆ ಉದಾರ ನೀತಿಯನ್ನನುಸರಿಸಿ ಅವರ ಬೆಂಬಲವನ್ನು ಗಳಿಸಿಕೊಂಡ. ತಂದೆಯ ಕೊಲೆಗೆ ಕಾರಣರೆಂದು ಕಂಡುಬಂದ ಲೈಸೆಸ್ಟಿಸ್ನ ರಾಜರನ್ನು ತೀರಿಸಿ ತನ್ನ ವೈರಿಗಳೆನಿಸಿದ ಇತರರನ್ನೂ ನಿರ್ನಾಮ ಮಾಡಿದ. ಅನಂತರ ದಕ್ಷಿಣಕ್ಕೆ ತಿರುಗಿ ಥೆಸಲೆಯನ್ನು ಗಿಟ್ಟಿಸಿ ಗ್ರೀಕ್ ಒಕ್ಕೂಟದಲ್ಲಿ ಮುಂದಿನ ಏಷ್ಯ ದಿಗ್ವಿಜಯ ಕಾರ್ಯದ ಮಹಾದಂಡನಾಯಕನಾಗಿ ಆಯ್ಕೆಯಾದ. ಆದರೂ ಉತ್ತರ ಗ್ರೀಸಿನ ಇಲಿರಿಯ ಮತ್ತು ಥ್ರೇಸ್ ಪ್ರದೇಶಗಳಲ್ಲಿ ಅಲೆಕ್ಸಾಂಡರನಿಗೆ ವಿರುದ್ಧವಾಗಿ ದಂಗೆಗಳಾದುವು. ಆದರೆ ಅಲೆಕ್ಸಾಂಡರ್ ತತ್ಕ್ಷಣ ಆ ಪ್ರದೇಶಗಳಿಗೆ ಹೋಗಿ ದಂಗೆಗಳನ್ನು ಅಡಗಿಸಿದ. ಥ್ರೇಸ್ನಲ್ಲಿ ಯಾರೋ ಅಲೆಕ್ಸಾಂಡರನನ್ನು ಕೊಂದುಹಾಕಿದರೆಂಬ ಸುಳ್ಳು ಸಮಾಚಾರ ಥೀಬ್ಸ್ ನಗರದಲ್ಲಿ ಹರಡಿ ಥೀಬ್ಸನ್ನರು ಮ್ಯಾಸಿಡೋನಿಯದ ರಕ್ಷಣ ಸೈನ್ಯಗಳಿಗೆ ಮುತ್ತಿಗೆ ಹಾಕಿದರು. ಅಲೆಕ್ಸಾಂಡರ್ ಥೀಬ್ಸ್ ನಗರದ ಮೇಲೆ ದಾಳಿಮಾಡಿ ಆ ನಗರವನ್ನು ನಾಶ ಮಾಡಿದ. ಹೆಂಗಸರು, ಮಕ್ಕಳು ಎಂದು ಲಕ್ಷಿಸದೆ ಸು. 30,000 ಥೀಬ್ಸನ್ನರನ್ನು ಸೆರೆಹಿಡಿದು ಗುಲಾಮರನ್ನಾಗಿಸಿದ. ಗ್ರೀಕರ ಸೊಲ್ಲು ಅಡಗಿ ಅವರು ಅಲೆಕ್ಸಾಂಡರನನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳ ಬೇಕಾಯಿತು. ಗ್ರೀಸ್ ದೇಶ ಅಲೆಕ್ಸಾಂಡರನ ಹತೋಟಿಗೆ ಒಳಗಾಯಿತು.

ಅಲೆಕ್ಸಾಂಡರನ ದಂಡಯಾತ್ರೆ:ಗ್ರೀಸಿನಲ್ಲಿ ಸುಭದ್ರ ಆಡಳಿತವನ್ನು ಸ್ಥಾಪಿಸಿ, ತನ್ನ ಜೀವನದ ಮಹತ್ತ್ವಾಕಾಂಕ್ಷೆಯನ್ನು ಸಾಧಿಸಲು ಸಂಕಲ್ಪ ಮಾಡಿದ. ಪರ್ಷಿಯ ದೇಶ ಗ್ರೀಸಿನಲ್ಲಿ ತನಗೆ ಮಾಡಿದ ದೌರ್ಜನ್ಯಕ್ಕೋಸ್ಕರ ಸೇಡು ತೀರಿಸಿಕೊಳ್ಳುವುದು; ಪ್ರಪಂಚವನ್ನೇ