ಪುಟ:Mysore-University-Encyclopaedia-Vol-1-Part-2.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೮ ಅಲೆಕ್ಸಾಂಡರ್ ಪೋಪರು

ಸರಿಯಾಗಿ ವಿಚಾರಿಸದೆ ಅಲೆಕ್ಸಾಂಡರ್ ಅವನನ್ನು ಕೊಂದುದಲ್ಲದೆ ಎಕ್ಬಟಾನದಲ್ಲಿದ್ದ ಅವನ ತಂದೆ ಪಮಿ೯ಯೋನನ್ನೂ ಕೊಲ್ಲಿಸಿದ. ಬ್ಯಾಕ್ಟ್ರಿಯದಿಂದ ಅಲೆಕ್ಸಾಂಡರ್ ಸೊಗ್ಡಿಯಾನದ (ತುಕಿ೯ಸ್ತಾನದ) ಮೇಲೆ ನುಗ್ಗಿದ. ಈ ಪ್ರಾಂತ್ಯ ಆಕ್ಸಸ್ ನದಿಯ ಅಚೆ ಪಷಿ೯ಯನ್ನರಿಗೆ ಸೇರಿತ್ತು. ಇಲ್ಲಿನ ಸಿಥಿಯನ್ನರು ಭಯಂಕರವಾಗಿ ಕಾದಾಡಿದರು. ಅದರೆ ಅಲೆಕ್ಸಾಂಡರ್ ಅವರನ್ನು ಜಯಿಸಿ ಜಕ್ಸಾಟ೯ಸ್ ನದಿಯ ತೀರವನ್ನು ತನ್ನ ಸಾಮ್ರಾಜ್ಯದ ಎಲ್ಲೆಯಾಗಿ ಗೊತ್ತು ಮಾಡಿದ. ಈ ಪ್ರದೇಶದಿಂದಲೇ ಮಂಗೋಲರ ತಂಡಗಳು ಪಾಶ್ಚಾತ್ಯ ದೇಶಗಳ ದಂಡಯಾತ್ರೆಯನ್ನು ಕೈಗೊಂಡವು.

  ದಂಗೆಯನ್ನಡಗಿಸಲು ಅಲೆಕ್ಸಾಂಡರ್ ಸಮರ್ಖಂಡ್ ನಲ್ಲಿದ್ದಾಗ ಒಂದು ದುರಂತ ನಡೆಯಿತು. ಅಲೆಕ್ಸಾಂಡರನ ನಡತೆ, ಪೌವಾ೯ತ್ಯ ನಡೆನುಡಿ ಬ್ಯಾಕ್ಟ್ರಿಯ ರಾಜಕುಮಾರಿ ರಾಕ್ಸಾನಳನ್ನು ಮದುವೆಯಾದದ್ದು, ಏಷ್ಯದವರನ್ನು ತನ್ನ ಸೈನ್ಯದಲ್ಲಿ ಸೇರಿಸಿದ್ದುದು ಅವನ ಸೈನಿಕರಿಗೆ ಸರಿಬೀಳಲಿಲ್ಲ. ಒಂದು ರಾತ್ರಿ ನಾಯಕ ಕುಡಿತದ ಅಮಲಿನಲ್ಲಿದ್ದಾಗ ಭಟ್ಟಂಗಿಗಳು ಇವನನ್ನು ಹೊಗಳುತ್ತಿದ್ದರು. ಇವನ ಪ್ರಿಯ ಮಿತ್ರನಾದ ಕ್ಲೀಟಸ್ ಗೆ ಈ ಹೊಗಳಿಕೆ ಹಿಡಿಸಲಿಲ್ಲ. ದಿಗ್ವಿಜಯಕ್ಕೆ ಫಿಲಿಪ್ ನ ಸೈನ್ಯವೇ ಕಾರಣವೆಂದೂ ಗ್ರಾನಿಕಸ್ ಕದನದಲ್ಲಿ ತಾನು ಅಲೆಕ್ಸಾಂಡರ್ ನನ್ನು ಬದುಕಿಸಿದುದಾಗಿಯೂ ಬಹಿರಂಗವಾಗಿ ಘೋಷಿಸಿದೆ, ಹೀಗೆ ಹಂಗಿಸಿದ್ದರಿಂದ ತಿವಿದು ಕೊಂದುಹಾಕಿದ. ಕುಡಿತದ ಅಮಲು ಕಳೆದ ಮೇಲೆ ಪಶ್ಚಾತ್ತಾಪಪಟ್ಟು, ಮೂರು ದಿನಗಳವರೆಗೂ ಊಟ ನಿದ್ರೆ ಇಲ್ಲದೆ ದುಃಖಿಸಿದ.
  ಅಲೆಕ್ಸಾಂಡರ್ ಪ್ರ.ಶ.ಪೂ. 327ರಲ್ಲಿ ಹಿಂದೂಸ್ಥಾನದ ಮೇಲೆ ದಂಡಯಾತ್ರೆ ಪ್ರಾರಂಭಿಸಿದ. ಹಿಂದೂಕುಷ್ ಪವ೯ಶವನ್ನು ದಾಟಿ, ಕಾಬೂಲಿಗೆ ಬಂದ. ತಕ್ಕ ಸೈನ್ಯ ವ್ಯವಸ್ಥೆಯನ್ನು ಮಾಡಿ, ಕಾಬೂಲಿನಿಂದ ಖೈಬರ್ ಕಣಿಗೆ ಬಂದು, ವಾಯವ್ಯದಲ್ಲಿ ಗುಡ್ಡಗಾಡಿನ ಜನರ ಮೇಲೆ ನುಗ್ಗಿದ. ಸಿಂಧೂನದಿಯನ್ನು ದಾಟಿದಾಗ ಸಮಥ೯ನಾದ ಪುರೂರವಸ್ ಮೇಲೆ ಯುದ್ದ ಮಾದಬೇಕಾಯಿತು. ಜೀಲಂ ನದಿಯ ತೀರದಲ್ಲಿ ಪುರೂರವಸ್ ಪ್ರಬಲವಾದ ಸೈಸ್ಯವನ್ನೂ ಆನೆಗಳನ್ನೂ ಸಿದ್ಧಪಡಿಸಿದ್ದ. ಅಲೆಕ್ಸಾಂಡರನ ಕುದುರೆಗಳು ಆನೆಗಳನ್ನು ನೋಡಿ ಬೆದರಿದವು. ಹಿಂದೂಸ್ಥಾನವನ್ನು ಜಯಿಸುವುದು ಕಷ್ಟವಾಯಿತು. ಚತುರನಾದ ಅಲೆಕ್ಸಾಂಡರ್ ಪಕ್ಕದಿಂದ ಆನೆಗಳ ಮೇಲೆ ದಾಈ ಮಾಡಿ ಅವಯಗಳನ್ನು ಗಾಬರಿ ಪಡಿಸಿದ. ಇದರಿಂದ ಅವು ಚೆಲ್ಲಾಪಿಲ್ಲಿಯಾಗಿ ಓಡಿಹೋದವು. ಪುರೂರವಸ್ ಶತ್ರುಗಳ ವಶನಾದ. ತನ್ನನ್ನು ರಾಜನನ್ನಾಗಿ ಕಾಣು ಎಂದು ಪುರೂರವಸ್ ಕೇಳಿಕೊಂಡ. ಆತ ತೋರಿಸಿದ ಧೈಯ೯ ಸಾಹಸಗಳನ್ನು ಕಂಡು ಮೆಚ್ಚಿ ಅಲೆಕ್ಸಾಂಡರ್ ಅವನ ದೇಶವನ್ನು ಮತ್ತೆ ಅವನಿಗೇ ಕೊಟ್ಟ, ಆನಂತರ ಪೂವಾ೯ಭಿಮುಖವಾಗಿ ನಂದರ ರಾಜ್ಯವನ್ನು ಗೆಲ್ಲಬೇಕೆಂದು ಹೊರಟ. ಅದರೆ ಸಟ್ಲೆಜ್ ನದಿಯ ತೀರದಲದಲಿ ಅವನ ಸೈನಿಕರು ಮುಂದಕ್ಕೆ ಹೋಗಲು ಅವಕಾಶ ಕೊಡದೆ ದಂಗೆಯೆದ್ದರು. ಅವರು ಜೈತ್ರಯಾತ್ರೆಗಳಿಂದ ದಣಿದಿದ್ದರು. ಆದರಲ್ಲೂ ನಂದರ ಸೈನ್ಯಶಕ್ತಿ ಅದ್ಭುತವಾದುದೆಂದು ತಿಳಿದಮೇಲೆ, ಏನು ಮಾಡಿದರೂ ಮಗಧ ರಾಜ್ಯದ ಮೇಲೆ ಯುದ್ದ ಮಾಡುವುದಿಲ್ಲವೆಂದು ಸಂಕಲ್ಪಿಸಿ ಹಿಂದಕ್ಕೆ ಹೋಗಬೇಕೆಂದು ಹಟಮಾಡಿದರು. ಕೊನೆಗೆ ಅಲೆಕ್ಸಾಂಡರ್ ಅವರ ಕೋರಿಕೆಗೆ ಒಪ್ಪಬೇಕಾಯತು. ಸಿಂಧೂನದಿಯನ್ನು ದಾಟಿ ಪ್ರ.ಶ.ಪೂ. 325ರಲ್ಲಿ ಸೂಸ ಪಟ್ಟಣವನ್ನು ಸೇರಿದ. ಅಲ್ಲಿಂದ ಬ್ಯಾಬಿಲಾನ್ ನಗರಕ್ಕೆ ಹೋದಾಗ ಅಕಸ್ಮಾತ್ತಾಗಿ ಜ್ವರ ಬಂದು ಕೇವಲ 32ನೆಯ ವಯಸ್ಸಿನಲ್ಲಿ (ಪ್ರ.ಶ.ಪೂ. 323) ನಿಧನನಾದ.