೭೩೦ ಮೇಕೆ ಬಡವನ ಆಕಳು, ಆಕಳನ್ನು ಸಾಕುವುದಕ್ಕಿಂತ ಆಡನ್ನು ಸಾಕುವುದು ಸುಲಭ. ಒಂದು ಸಂಸಾರಕ್ಕೆ ಸಾಕಾಗುವಷ್ಟು ಹಾಲನ್ನು ಒಂದೆರಡು ಮೇಕೆಗಳು ಒದಗಿಸಬಲ್ಲವು. ಆಡಿನ ಹಾಲಿನಿಂದ ಗಟ್ಟಿ ಗಿಣ್ಣು (ಚೀಸ್) ತಯಾರಾಗುತ್ತದೆ. ಅಲ್ಲದೆ, ಬೆಚ್ಚನೆಯ ತುಪ್ಪಟ ಒದಗಿಸಿ, ಗೊಬ್ಬರ ಕೊಟ್ಟು, ಆಮೇಲೆ ಪುಷ್ಟಿಕರ ಮಾಂಸಾಹಾರವಾಗಿ ಕೊನೆಗೆ ನುಣುಪಾದ ತೊಗಲನ್ನು ಕೊಡುವುದರಿಂದ, ಆಡು ಆರ್ಥಿಕವಾಗಿಯೂ ಮಾನವನಿಗೆ ಲಾಭದಾಯಕ. ಠೀವಿಯಿಂದ ಗಂಭೀರವಾಗಿ, ಹೊಸಬರಿಗೂ ಅಂಜದ ನಿಟ್ಟಿಸುತ್ತ, ಹೆಜ್ಜೆ ಹಾಕುವ ಹೋತಕ್ಕೆ ಹೋಲಿಸಿ, ಗಂಭೀರವಾಗಿ ಠೀವಿಯಾಗಿ ಇರುವವನಿಗೆ ಈಗಲೂ ಅರಬ್ಬರ ಹೋತನೆಂದು ಕರೆಯುವುದು ರೂಢಿ. ಹಸುವಿನ ಹಾಲಿಗಿಂತಲೂ ಮೇಕೆ ಹಾಲು ಪುಷ್ಟಿಕರ. ಆಕಳ ಹಾಲನ್ನು ಕುಡಿದ ಮೇಲೆ ಹೊಟ್ಟೆಯಲ್ಲಿ ದಪ್ಪನಾಗಿ ಹೆಚ್ಚುಗಟ್ಟಿ ಕಡಗದ ಹಾಲೋಕಗಳಾಗುತ್ತದೆ; ಆದರೆ ಆಡಿನ ಹಾಲು ಕತ್ತೆಯ ಹಾಲಿನಂತೆ ತೀರಸಣ್ಣ, ಕರಗುವ ತೆಳುವಾದ ಚಕ್ಕೆಗಳಾಗುತ್ತದೆ. ಹಸುವಿನ ಹಾಲನ್ನು ಅರಗಿಸಿಕೊಳ್ಳಲು 2 ದಿನಗಳು ಹಿಡಿದರೆ, ಮೇಕೆ ಹಾಲು ಒಂದೇ ದಿನದಲ್ಲಿ ಅರಗುವುದು, ಆಡಿನ ಹಾಲಿನ ರಚನೆ, ಅರಗಣೆ ಹೆಂಗಸರ ಹಾಲಿನಂತೆ ಇರುತ್ತವೆ. ಇದರಿಂದಲೇ ಕೂಸಿಗೆ ತಾಯಿ ಹಾಲು ಇಲ್ಲದಾಗ ಆಕಳ ಹಾಲಿಗಿಂತ ಮೇಕೆ ಹಾಲು ಒಳ್ಳೆಯದು. ಇದಕ್ಕಾಗಿ ಯುರೋಪಿನಲ್ಲಿ ಆಡನ್ನು ಹಾಲೂಡಿಸುವ ದಾದಿ ಎನ್ನುವರು. ಹಸುವಿನ ಹಾಲು ಒಗ್ಗದವರಿಗೆ ಇದು ಸರಿಬೀಳಬಹುದು. ಆಕಳ ಹಾಲಿಗಿಂತಲೂ (ಶೇ.3.15) ಆಡಿನ ಹಾಲಿನಲ್ಲಿ (ಶೇ.3.5-514) ಕೊಬ್ಬು ಹೆಚ್ಚು. ಆಕಳಿಗೆ ಕ್ಷಯವಿದ್ದರೆ ಅದರ ಹಾಲಿನ ಮೂಲಕ ಜನರಿಗೆ ಹತ್ತಬಹುದು. ಆಡಿಗೆ ಕ್ಷಯ ಹತ್ತದು. ಆಕಳ ಹಾಲು ಆಮ್ಲವಾಗಿದ್ದರೆ, ಆಡಿನದು ಕಾರವಾಗಿರುವುದು. ಆಕಳ ಹಾಲಿಗಾಗಿ ಸಾಕಣೆಯ ಖರ್ಚು ದುಬಾರಿ, ಆಡಿನದು ತೀರ ಅಗ್ಗ, ಸುಲಭ. ಬಡವರೂ ಸಾಕುವ ಪ್ರಾಣಿ ಆಡು, ಮೇಕೆಯ ಹಾಲು ಮಹಾತ್ಮ ಗಾಂಧೀಜಿಯವರ ದಿನಬಳಕೆಯ ಅಚ್ಚುಮೆಚ್ಚಿನ ಆಹಾರವಾಗಿತ್ತು. ಅರಬ್ಬಿ ಜನರಿಗೆ ಮೇಕೆಯ ಹಾಲನ್ನು ಬಿಟ್ಟರೆ ಬೇರೆ ಹಾಲೇ ಸಿಗುವುದಿಲ್ಲ. ಅವರ ಒಂದೊಂದು ಸಂಸಾರವೂ ಆಡಿನ ಮಂದೆಯನ್ನು ಸಾಕಿರುತ್ತದೆ. ಭಾರತ, ಚೀನ, ಪಾಕಿಸ್ತಾನ ಟಿಬೆಟ್, ಯುರೋಪು, ಬ್ರಿಟಿಷ್ ದ್ವೀಪಗಳು, ಅಮೆರಿಕ, ಕೆನಡ ದೇಶಗಳಲ್ಲೂ ಕರಾವಿನ ಆಡುಗಳನ್ನು ಸಾಯಿಸಿದ್ದಾರೆ. ಆಡಿನ ಬಗೆಗಳು: ನಾಲ್ಕು ಬಗೆಗಳನ್ನು ಗುರುತಿಸಬಹುದು. 1.ನಿಗುರಿದ ಮೋಟು ಕಿವಿಗಳ, ಕೊಂಬಿರದ, ಮಾಂಸದ ತಳಿಯಾದ ಸಾಮಾನ್ಯ ಆಡು, 2. ಉದ್ದವಾಗಿ ಅಗಲಕ್ಕೆ ಜೋಲುಬಿದ್ದ ಕಿವಿಗಳ, ಕರಾವಿನ, ಸಿರಿಯದ, ನುಬಿಯನ್ ಇಲ್ಲವೇ ಈಜಿಪ್ಟಿನ ಆಡು. 3. ಜೋಲು ಕಿವಿಗಳ, ಗುಂಗುರುಗೂದಲ ತುಪ್ಪುಳಿನ, ಕುರಿ ಮೊಗದ ಟಿಬೆಟಿನ ಅಂಗೋರ ಆಡು, 4. ಅರೆಬರೆ ಜೋಲುಬಿದ್ದ ಕಿವಿಗಳ, ಮೋಟು ತುಪ್ಪುಳುಗೂದಲ, ಹಿಮಾಲಯ ಪರ್ವತಗಳ ಕಾಶ್ಮೀರಿ ಆಡು. ಕರಾವಿನ ಆಡುಗಳು : ಇವುಗಳ ಲಕ್ಷಣಗಳಿವು: ಅಚ್ಚುಕಟ್ಟಾದ ಉದ್ದನೆಯ ತಲೆಯಲ್ಲಿ ಅಗಲದ ಹಣೆಯಂತ ಬರಬರುತ್ತ ಚೂಪಾಗುವ ಮುಸುಡಿ; ತೆಳುವಾಗಿ ಮೋಟಾದ ಚೂಪು ಕೊಂಬುಗಳು; ಹೊಳೆವ ದೊಡ್ಡ ಕಣ್ಣುಗಳು; ಉದ್ದನೆಯ ದಪ್ಪಮೈಕಟ್ಟು; ಚಿಕ್ಕ ಎದೆ; ಚಾಚಿದ ರೊಂಡಿ ಮೂಳೆಗಳು, ಸಡಿಲವಾದ ಮೆದು ಚರ್ಮ: ನುಣುಪಾದ ತಳುಗೂದಲು; ದೂರದೂರವಿದ್ದು ಮುಂಬಾಗಿದ ಮೊಲೆ ತೊಟ್ಟುಗಳಿರುವ, ಮುಟ್ಟಲು ಸ್ಪಂಜಿನಂತೆ ಮೆದುವಾದ, ದೊಡ್ಡ ದುಂಡಾದ ಕೆಚ್ಚಲು. ಕರಾವಿನ ಆಡುಗಳಲ್ಲಿ ಬಗೆಬಗೆಯ ತಳಿಗಳಿವೆ. ಸ್ವಿಸ್ (ಆಲೈನ್), ನುಬಿಯನ್ ಆಡುಗಳು ಮುಖ್ಯವಾದವು. ಸ್ವಿಸ್ ಆಡಿಗೆ ಮೊನಚಾದ, ನೇರವಾದ ಕಿವಿಗಳಿರುತ್ತವೆ. ಇಂದಿಗೂ ಹೆಸರಾದ ಹೊಸ ತಳಿಗಳು ಸ್ವಿಸ್ ತಳಿಯಿಂದ ಮೂಡಿವೆ; ಇವುಗಳಲ್ಲಿ ಟಾಗೆನ್ಬರ್ಗ್, ಸಾನನ್ (ಕಣಿವೆಯ) ತಳಿಗಳು ಹೆಸರಾಗಿವೆ. ಇಂಗ್ಲೆಂಡಿನಲ್ಲಿ ಒಂದು ಸಾನೆನ್ ಆಡು ವರ್ಷಕ್ಕೆ 6400 ಪೌಂಡು ಹಾಲು ಕರೆದ ದಾಖಲೆಯಿದೆ. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಜನಪ್ರಿಯವಾದ ಟಾಗೆನ್ಬರ್ಗ್ ಬಣ್ಣ ಕಪ್ಪು, ಸಾನೆನ್ ಆಡಿನ ಬಣ್ಣ ಬಿಳಿ ಇಲ್ಲವೇ ಹಾಲಿನ ಕೆನೆಯ ಹಳದಿ ಬಿಳುಪು. ಮಾಲ್ಟಾದ ಆಡುಗಳಲ್ಲಿ ಮೂಡಣ ನಾಡುಗಳ ರಕ್ತವಿದೆ. ನುಬಿಯನ್ ಆಡು ಉತ್ತರ ಆಫ್ರಿಕಕ್ಕೆ, ಮುಖ್ಯವಾಗಿ ಈಜಿಪ್ಟಿಗೆ ಸೇರಿದ್ದು. ಎಲ್ಲ ಆಡುಗಳಿಗಿಂತಲೂ ಗಾತ್ರದಲ್ಲಿ ಇದೇ ಭಾರಿ. ಬೆಣ್ಣೆಗಾಗಿನ ಕರಾವಿನಲ್ಲಿ ನುಬಿಯನ್ ತಳಿಯ ಆಡನ್ನು ಮೀರಿಸಿದ್ದು ಇನ್ನೊಂದಿಲ್ಲ. ಇಂಗ್ಲೆಂಡಿನಲ್ಲಿ ಒಂದು ವರ್ಷದಲ್ಲಿ ಇಂಥದೊಂದು 4250 ಪೌಂಡು ಹಾಲು ಕರೆದಿದೆ. ಬೆಣ್ಣೆ ಕೂಡ ಹೆಚ್ಚಾಗಿರುವುದು. ನೀಳವಾಗಿ ಅಗಲವಾಗಿ ಜೋಲು ಬೀಳುವ ಕಿವಿಗಳು ಇದರ ಲಕ್ಷಣ. ಇಸ್ರೇಲ್, ಸಿರಿಯಗಳ ಆಡುಗಳಿಗೆ ದೊಡ್ಡ ಜೋಲು ಕಿವಿಗಳೂ, ಕೂದಲೂ ಇರುತ್ತವೆ. ಇವು ಕಪ್ಪಾಗಿರುವುದೇ ಸಾಮಾನ್ಯ ನುಬಿಯನ್ ಮತ್ತಿತರ ಜೋಲು ಕಿವಿಗಳ ತಳಿಗಳು ಇಂಗ್ಲೆಂಡಿಗೆ 1850ರಿಂದೀಚೆಗೆ ಬೇರೆ ಬೇರೆ ದಾರಿಗಳಿಂದ ಸಾಗಿಹೋದವು. ಪರ್ಷಿಯದವು, ಭಾರತದವು, ಸಿರಿಯಾದವು ಎಂಬ ಈ ಆಡುಗಳು ಇಂಗ್ಲೆಂಡಿನಲ್ಲಿ ದಾಖಲೆಯಾಗಿರುವ ಆಂಗ್ಲೋ ನುಬಿಯನ್ ಹೊಸ ತಳಿಯ ಹುಟ್ಟಿಗೆ ಕಾರಣವಾಗಿದೆ. ಇದೇ ತಳಿ ಅಮೆರಿಕದಲ್ಲಿ ನುಬಿಯನ್ ಎಂದೇ ಜನರ ಮೆಟೆಯಾಗಿದೆ. ಗದ್ದಿ, ಮಧ್ಯಪ್ರದೇಶ, ಮಲಬಾರ್, ಕಂಚಿ, ಜಮುನಾಪುರಿ ಗದ್ದಿ, ಗದ್ದಿ ಅಂಗೋರಗಳ ಅಡ್ಡ ತಳಿ-ಸೂರತ್ ಈ ತಳಿಗಳು ಭಾರತದಲ್ಲಿ ಹೆಸರಾದಂತಹವು. ಬಂಗಾಲ, ಯಮುನಾ ನದಿಯ ತೀರಪ್ರದೇಶಗಳಿಂದ ಬಂದ ಜಮುನಾಪುರಿ ಭಾರತದ ಮೇಕೆ ತಳಿಗಳಲ್ಲೆಲ್ಲ ಭಾರಿಯಾದದ್ದು, ಸರಾಸರಿ 45-70 ಕಿಗ್ರಾಂ ತೂಗುತ್ತದೆ. ಸುಲಭವಾಗಿ ಎಲ್ಲೆಡೆ ಒಗ್ಗಿಕೊಳ್ಳುತ್ತದೆ. ಇದರ ಬೆಲೆ ಹೆಚ್ಚು. ಉದ್ದನೆಯ ಗಿಳಿಮೂಗು, ಜೋಲು ಬಿದ್ದ ನೀಳ ಕಿವಿಗಳು, ಈ ತಳಿಯ ಲಕ್ಷಣಗಳು. ಬಿಳಿ, ಕರಿ ಪಟ್ಟೆಗಳಿರುವ ಮೈಬಣ್ಣ. ಒಂದು ಬಾರಿಗೆ ಈಯುವುದು ಒಂದೇ ಮರಿ, ಕರಾವಿನಲ್ಲಿ ಅಷ್ಟು ಹೆಸರಾಗಿಲ್ಲ. ಗುಜರಾತಿನ ಸೂರತ್ ಜಿಲ್ಲೆಯ, ಸಣ್ಣದಾಗಿ ಅಡಕವಾದ ಮೈಯ ಸೂರತಿ ತಳಿ ಅಷ್ಟಿಷ್ಟು ಹಾಲು ಕೊಡುವುದಕ್ಕಾಗಿ ಸಾಕುವುದುಂಟು. ಬಣ್ಣ ಬಿಳಿ, ಕೊಂಬಿಲ್ಲ. ಒಂದು ಬಾರಿಗೆ ಎರಡು, ಮೂರು, ಐದು ಮರಿಗಳನ್ನೂ ಹಾಕುವುದುಂಟು. ದಕ್ಷಿಣ ಭಾರತದ ವಿಶೇಷ ತಳಿ, ಮಲಬಾರ್, ಸಾಧಾರಣ ಮೇಕೆಗಿಂತ ಹೆಚ್ಚು ಹಾಲು ಕೊಡುತ್ತದೆ. ಕರಾವು, ಮಾಂಸಗಳಿಗಾಗಿ ಸಾಕುವ ಇನ್ನೊಂದು ಮೇಕೆ ತಳಿ ಕಂಚಿ, ನಮ್ಮ ಕಾಶ್ಮೀರಿ, (ತುರ್ಕಿಯ ಅಂಗೋರಾ ಜಿಲ್ಲೆಯ) ಅಂಗೋರಾ ತಳಿಗಳು ಮುಖ್ಯವಾಗಿ ತುಪ್ಪಟಕ್ಕಾಗಿ ಸಾಕುವ ಆಡುಗಳು; ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಅಮೆರಿಕ ಸಂಯುಕ್ತಸಂಸ್ಥಾನಗಳು, ನರಗಳಲ್ಲಿ ಅಂಗೋಡಾಗಳನ್ನು ಸಾಂದರು, ಇವು ಹಾ ಕರೆಯುವುದು ಕಡಿಮೆ. ಇವು ಒಣ ಹವೆಗೆ ಒಗ್ಗಿದರೂ, ಚಳಿಯನ್ನು ತಡೆಯಬಲ್ಲವು. ಕೊಂಬುಗಳು ಚಪ್ಪಟೆಯಾಗಿ, ಹಿಂಬಾಗಿ, ಸುರುಳಿಯಾಗಿರುತ್ತವೆ. ಕೂದಲು ಅಚ್ಚ ಬಿಳುಪು, ರೇಶಿಮೆಯಷ್ಟು ಮೆತು, ನುಣುಪು; ಮುಕ್ಕಾಲು ಭಾಗ ಕಾಲುಗಳು ಹಾಗೂ ಮೈಯ ತುಂಬ ಗುಂಗುರುಗುಂಗುರಾಗಿ ಬೆಳೆದಿರುತ್ತವೆ. 4-6' ಉದ್ದ ಬೆಳೆವ ತುಪ್ಪಳವನ್ನು ಆರು ತಿಂಗಳಿಗೊಮ್ಮೆ ಕತ್ತರಿಸಿ ತೆಗೆಯುವರು. ವರ್ಷದ ಕೊನೆಯ ತನಕ ಕತ್ತರಿಸದಿದ್ದರೆ, ೪- 12" ಉದ್ದ ಬೆಳೆಯುತ್ತದೆ. ವಸಂತಕಾಲದಲ್ಲಿ ತುಪ್ಪಳವನ್ನು ಕತ್ತರಿಸದಿದ್ದರೆ ಬೇಸಗೆಯಲ್ಲಿ ತಾನಾಗೇ ಉದುರಿಹೋಗುತ್ತದೆ. ಅಂಗೋರಾ ಆಡಿನ ಹೊಳಪಿನ ಕೂದಲ ನೂಲಿಗೆ ಮೊಹೇರ್ ಎಂದು ಹೆಸರು. ಇದರಿಂದ ಬೇಸಗೆಯಲ್ಲಿ ತೊಡುವ ತೆಳುವಾದ ಉಣ್ಣೆಯ ಉಡುಪನ್ನು ತಯಾರಿಸುತ್ತಾರೆ. ನೀಳ ಕೂದಲುಗಳಿಂದ ನಾಟಕ ಶಾಲೆಯ ಚೌರಿ, ಕೃತಕ ತಲೆಗೂದಲು, ಟೋಪಿ ಮುಂತಾದ ವೇಷ, ಅಲಂಕಾರಗಳ ವಸ್ತುಗಳು ತಯಾರಾಗುತ್ತವೆ. ಕಾಶ್ಮೀರದ ಶಾಲಿಗೆ ಜಗತ್ಪಸಿದ್ಧ ಕಾಶ್ಮೀರಿ ಆಡು, ಉಣ್ಣೆಯನ್ನು ಒದಗಿಸುವ ಇನ್ನೊಂದು ಬಗೆಯ ಆಡು, ಇದು ಅಂಗೋರಾಕ್ಕಿಂತ ಸಾಮಾನ್ಯ ಆಡನ್ನು ಹೋಲುತ್ತದೆ. ಬೇರೆ ಯಾವ ಆಡುಗಳಲ್ಲೂ ಈ ತಳಿಯ ಸಾಕಣೆ ಕೈಗೂಡಿಲ್ಲ. ಕಾಶ್ಮೀರದಲ್ಲಿ ಹಿಮಾಲಯದ ಇಳಿಜಾರು ತಪ್ಪಲುಗಳಲ್ಲಿ ಕಾಣಬರುತ್ತವೆ. ಅಲ್ಲಿ ಮಾತ್ರ ಇವನ್ನು ಸಾಕಬಹುದು. ಅಂಗೋರಾ ಆಡನ್ನು ಹೋಲುವ, ಇವುಗಳ ಕೂದಲು ಕೆಲಸಕ್ಕೆ ಬಾರದವು; ಅವುಗಳ ಬುಡದಲ್ಲಿ ಬೆಳೆವ ಪಾಷಂ ಎಂಬ ಬಲು ನುಣುಪಿನ ತೆಳುವಾದ ತುಪ್ಪುಳ ಬಲು ಬೆಲೆಯಾದ್ದು. ಈ ಪಾಷಂನಿಂದಲೇ ಬೆಲೆ ಬಾಳುವ ಸುಂದರವಾದ ಕಾಶ್ಮೀರಿ ಶಾಲುಗಳು ತಯಾರಾಗುವುದು. ಒಂದು ವರ್ಷಕ್ಕೆ ಒಂದು ಆಡಿನಿಂದ ದೊರೆವ ಉಣ್ಣೆಯ ಸರಾಸರಿ ತೂಕ ಸುಮಾರು 1 ಕಿಗ್ರಾಂ. ಒಂದು ಸೊಗಸಾದ ಶಾಲನ್ನು ತಯಾರಿಸಲು ಮೂವರು ನೇಯ್ದೆಯವರಿಗೆ 3 ತಿಂಗಳು ಹಿಡಿಯುತ್ತದೆ. ಆಡಿನ ತೊಗಲನ್ನು ಹದ ಮಾಡಿ ಜೋಡು, ಕೈಗವುಸು ಮುಂತಾದ ಅನೇಕ ಬಗೆಯ ವಸ್ತುಗಳನ್ನು ತಯಾರಿಸುತ್ತಾರೆ. ಮೊರಾಕೊ ತೊಗಲು ಹೆಸರುವಾಸಿ. ಸಾಕಣೆ : ಆಡನ್ನು ಕಟ್ಟುವಡೆ ಚಾವಣಿ, ಗೋಡೆ, ನೆಲಗಳಲ್ಲಿ ಇನಿತೂ ತೇವವಿರಬಾರದು. ಚೆನ್ನಾಗಿ ಗಾಳಿಯಾಡುತ್ತಿದ್ದರೇ ಆಡುಗಳಿಗೆ ಆರೋಗ್ಯ ಬಿರುಗಾಳಿ ತಂಗಾಳಿ ಬೀಸುವಂತಿರ ಬಾರದು. ಆಡುಗಳು ತಂಗುವ ಜಾಗದಲ್ಲಿ ಕೆಳಗೆ ಒಣಹುಲ್ಲು ಹಾಸಿರಬೇಕು. ಕಟ್ಟುವ ಜಾಗವನ್ನು ಬದಲಾಯಿಸುತ್ತಿದ್ದರೆ, ಹುಳುಗಳು ಹತ್ತವು. ಆಡುಗಳ ಕೊಟ್ಟಿಗೆ ದನಗಳದಷ್ಟು ದೊಡ್ಡದಿರಬೇಕಿಲ್ಲ. ಮೇವೂ ಕಡಿಮೆ. ಕಾಳುಗಳು (ಶೇ.15), ಸೊಪ್ಪು, ಹುಲ್ಲು, ಒಳ್ಳೆಯ ಮೇವು, ಉಪ್ಪು ನೀರು ಸಾಕಷ್ಟು ಕೊಡಬೇಕು. ಆಡಿನ ರೋಗಗಳು : ತೇವ, ಚಳಿಗಳಿಗೆ ಒಡ್ಡಿದಾಗ ಬರುವುದು ಪುಪ್ಪುಸುರಿತ (ನ್ಯುಮೋನಿಯ), ಆಡಿಗೂ ಒಂದು ತೆರನಾದ ಸಿಡುಬು ಹತ್ತುವುದು. ಸೋಂಕು ಹತ್ತಿಸಿ ಮೈಯಿಳಿಸುವ (ಬೂಸಲ ಬೇನೆ, ಬ್ರೂಸೆಲೋಸಿಸ್) ಆಡಿನ ಜ್ವರ, ಉಳಿದವು: ವಿಷಕಣದಿಂದಾ ಗುವ ಕುಂಟುವಂತೆ ಮಾಡುವ ಕಾಲು ಜಿರಸು (ಫುಟ್ರಾಟ್); ಕಣ್ಣುನೋವಿನ ಸೋಂಕು ಅಂಟುರೋಗವಾದ ಆಡುಕಜ್ಜಿ, ಮೈಮೇಲೆ ಕೂರಗಳು, ಉಣ್ಣೆಗಳು, ಕರುಳ ಹುಳು, ಲಾಡಿಹುಳು, ಈಲಿ ಚಪ್ಪಟೆಕ್ರಿಮಿ (ಲಿವರ್ ಫ್ಲಕ್). (ಕೆ.ಎ.ಕೆ.; ಎಚ್.ಆರ್.ಸಿ.) ಆಡುಗಳಿಗೆ ಬರುವ ಅಂಟುರೋಗಗಳಲ್ಲಿ ಬೊಬ್ಬೆರೋಗ, ದೊಡ್ಡ ರೋಗ, ನೆರಡಿರೋಗ ಮೊದಲಾದವು ಮುಖ್ಯವಾದುವು. ಇವು ಬಹು ಸೂಕ್ಷ್ಮವಾದ ಸಾಂಕ್ರಾಮಿಕ ರೋಗಾಣುಗಳಿಂದ ಬರುತ್ತವೆ. ಸಕಾಲದಲ್ಲಿ ಚುಚ್ಚುಮದ್ದು ಕೊಟ್ಟು ರೋಗ ಬಾರದಂತೆ ತಡೆಯಬಹುದು. ರೋಗ ತಗುಲಿದ ಅನಂತರ ಔಷಧೋಪಚಾರ ಪರಿಣಾಮಕಾರಿಯಲ್ಲ. ಅವಕ್ಕೆ ಬರುವ ಸಾಮಾನ್ಯರೋಗಗಳಲ್ಲಿ ಜೀರ್ಣಾಂಗಗಳಿಗೆ ಸಂಬಂಧಿಸಿದ ಅಜೀರ್ಣ, ಹೊಟ್ಟೆಯುಬ್ಬರ, ಭೇದಿ, ರಕ್ತಭೇದಿ ಮೊದಲಾದವು, ಶ್ವಾಸಕಾಂಗಗಳಿಗೆ ಸಂಬಂಧಪಟ್ಟ
ಪುಟ:Mysore-University-Encyclopaedia-Vol-1-Part-2.pdf/೨೨೪
ಗೋಚರ