ಪುಟ:Mysore-University-Encyclopaedia-Vol-1-Part-2.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಫ್ರಿಕ ಖಂಡ

ಪ್ರದೇಶದಲ್ಲಿ ಅತ್ಯಂತ ಬೆಲೆ ಬಾಳುವ ತಾಮ್ರದ ಗಣಿಗಳಿವೆ.ತಾಮ್ರದ ಜೊತೆಗೆ ಇಲ್ಲಿ ಮ್ಯಾಂಗನೀಸ್,ಸತು,ಕಬ್ಬಿಣ,ಟಂಗ್ಸ್ಟ್ನ್,ಪ್ಲಾಟಿನಂ,ಬೆಳ್ಳಿ ಮತ್ತು ಬಿಸ್ಮತ್ ಲೋಹಗಳು ದೊರೆಯುತ್ತದೆ.ಮ್ಯಾಂಗನೀಸ್ ಅದಿರು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ಆಫ್ರಿಕದ ಮೊರಾಕೊ,ಘಾನಗಳಲ್ಲಿ ದೊರೆಯುತ್ತದೆ.ಕಾಂಗೊ,ರೊಡೀಷಿಯಗಳಲ್ಲಿ ಕೊಬಾಲ್ಟ್ ದೊರೆಯುತ್ತದೆ.

ಬಾಕ್ಸೈಟ್ ಅದಿರಿಗೆ ಮತ್ತು ಘಾನ ದೇಶಗಳು ಹೆಸರು ಪಡೆದಿದೆ.ಟ್ಯೂನೀಸಿಯ ಮತ್ತು ಮೊರಾಕೊ ಫಾಸ್ಫೇಟನ್ನು ಒದಗಿಸುವ ರಾಜ್ಯಗಳು.ಸೀಸ ಮತ್ತು ತವರ ಉತ್ತರ ರೊಡೀಷಿಯ,ನೈಋತ್ಯ ಆಫ್ರಿಕ,ಮೊರಾಕೊ ಮತ್ತು ಕಾಂಗೊ ರಾಜ್ಯಗಳ ಮುಖ್ಯ ಖನಿಜಗಳು.

೧.ಮತುಭೂಮಿ ೨.ಅರೆ ಮರುಭೂಮಿಯ ವರಳ ಪೊದೆಗಳು ೩.ಚಾಲಿಮರವುಳ್ಳ ಒಣಹುಲ್ಲುಗಾವಲು ೪.ಸವನ್ನಾ ೫.ಹುಲುಸಾದ ಸದನ್ನಾ ಹುಲ್ಲುಗಾವಲು ೬.ಗಿನಿ,ಕಾಂಗೊ ಮತ್ತು ಮಡಗಾಸ್ಕರ್ ಗಳ ಮಳೆಯ ಕಾಡುಗಳು ೭.ಮೆಡಿಟರೇನಿಯನ್ ಮತ್ತು ಪೂರ್ವ ಆಫ್ರಿಕದ ಉನ್ನತ ಪ್ರದೇಶದ ಕಾಡುಗಳು. ೮.ಅಬಿಸೀನಿಯ(ಈಗಿನ ಇಥಿಯೋಪಿಯ)ಪ್ರಸ್ಥಭೂಮಿಯ ಹುಲ್ಲುಗಾವಲುಗಳು ೯.ಸಮಭಾಜಕ ವೃತ್ತದ ಪೂರ್ವ ಆಫ್ರಿಕ ಮತ್ತು ಮಡಗಾಸ್ಕರಿನ ಭೂಮಿಯ ಹುಲ್ಲುಗಾವಲುಗಳು ೧೦.ವೆಲ್ಡ್ ಹುಲ್ಲುಗಾವಲು ೧೧.ನಜಾರ್ ನ ತಾಳೆಮರದ ಪ್ರದೇಶ ೧೨.ಜೌಗು ಸಸ್ಯ ೧೩.ತೋಪುಗಳು

ವ್ಯವಸಾಯ:ಆಫ್ರಿಕದ ಜನರ ಅತ್ಯಂತ ಮುಖ್ಯ ಉದ್ಯೋಗ ವ್ಯವಸಾಯ.ಸಾಕಷ್ಟು ಮಳೆ ಬೀಳುವ ಪ್ರದೇಶಗಳಲ್ಲಿ ವ್ಯವಸಾಯ ಅಲ್ಪ ಪ್ರಮಾಣದ ಮಳೆ ಬೀಳುವ ರಾಜ್ಯಗಳಲ್ಲಿ ದನಕರು ಮತ್ತು ಕುರಿಗಳನ್ನು ಸಾಕುವುದು ಇವರ ಮುಖ್ಯ ಜೀವನೋಪಾಯಗಳು.

ಸಂಪ್ರದಾಯಬದ್ಧವಾದ ವ್ಯವಸಾಯ ಉಷ್ಣವಲಯದ ಭಾಗದಲ್ಲಿ ಸಾಮನ್ಯವಾಗಿದೆ.ಇಲ್ಲಿಯ ಬೆಳೆಗಳು ಜೀವನಾಧಾರದವು.ವ್ಯವಸಾಯ ಪದ್ಧತಿಯೂ ವಿಚಿತ್ರವಾದುದು.ಹೊಲದ ಪಕ್ಕದಲ್ಲಿಯೇ ಹಳ್ಳಿ ಇರುತ್ತದೆ.ಮರ ಗಿಡಗಳನ್ನು ಸವರಿ ವ್ಯವಸಾಯಕ್ಕೆ ಅಳವಡಿಸಿಕೊಳ್ಳುತಾರೆ.ನೆಲಗಡಲೆ,ಗೆಣಸು,ಕೆಲವು ರೀತಿಯ ಕಾಳುಗಳು ಯಾಮ್ ಮತ್ತು ಕೆಸ್ಸವ ಎಂಬ ಗೆಣಸಿನ ಜಾತಿಯ ಗೆಡ್ಡೆಗಳು ಮುಂತಾದುವನ್ನು ಬೆಳೇಯುತ್ತಾರೆ.ನೀರಿನ ಸೌಲಭ್ಯವಿದ್ದಲ್ಲಿ ಜೋಳ ಮತ್ತು ಬತ್ತವನ್ನು ಸಹ ಬೆಳೆಯುತ್ತಾರೆ.ಒಂದು ಅಥವಾ ಎರಡು ಬೆಳೆಗಳನ್ನು ತೆಗೆದು ಆ ಭೂಮಿ ನಿಸ್ಸತ್ತ್ವವಾದಾಗ ಅದನ್ನು ಬಿಟ್ಟು ಮತ್ತೊಂದು ಜಾಗಕ್ಕೆ ಹೋಗುವರು.ಇದು ಇಲ್ಲಿನ ವ್ಯವಸಾಯದ ವೈಶಿಷ್ಟ್ಯ.ಈ ಪ್ರದೇಶದ ಇತರ ಉತ್ಪನ್ನಗಳು ತಾಳೆ(ಇದರಿಂದ ಎಣ್ಣೆ ಮತ್ತು ಕೊಬ್ಬರಿಯ ಹಾಗಿರುವ ತಿರುಳನ್ನು ತಯಾರಿಸಿ ಅನೇಕ ರೀತಿಯಲ್ಲಿ ಬಳಸುತ್ತಾರೆ),ಕೋಕೊ,ಕಾಫಿ,ಬಾಳೆ ಮತ್ತು ರಬ್ಬರ್.

ಪಶ್ಚಿಮ ಆಫ್ರಿಕ ತೀರಪ್ರದೇಶದಲ್ಲಿ ಗ್ಯಾಂಬಿಯದ ದಕ್ಷಿಣ ಕಾಂಗೊ,ಸಿಯಾರ ಲಿಯೋನ್ ಮತ್ತು ನೈಜೀರಿಯಾಗಳಲ್ಲಿ ತಾಳೆ ಎಣ್ಣೆ ಮಾತು ತಾಳೆ ತಿರುಳು ಹೆಸರುವಾಸಿಯಾಗಿದೆ.ಗಿನಿ ತೀರಪ್ರದೇಶದಲ್ಲಿರುವ ಅನೇಕ ದ್ವೀಪಗಳು,ಘಾನ,ಪಶ್ಚಿಮ ನೈಜೀರಿಯಗಳು ಕೋಕೊ ಬೆಳೆಗೆ ಹೆಸರುವಾಸಿಯಾಗಿದೆ.ಇಥಿಯೋಪಿಯಾ ಪ್ರಸಿದ್ಧ ಅರೇಬಿಕ ಕಾಫಿಗೆ ತವರುಮನೆ.ಕಾಫಿಯನ್ನು ಸಿಯಾರಲಿಯೋನ್,ಲೈಬೀರಿಯ,ಕಾಂಗೊ,ಅಂಗೋಲ ಮತ್ತು ಪೂರ್ವದ ಬೆಟ್ಟದ ಸೀಮೆಯಲ್ಲಿ ಹೇರಳವಾಗಿ ಬೆಳೆಯುತ್ತದೆ.ಮಳೆ ಹೇರಳವಾಗಿ ಬೀಳುವ ಸಮಭಾಜಕವೃತ್ತ ಪ್ರದೇಶದಲ್ಲಿ ಉಷ್ಣವಲಯದ ಕೆಲವು ಭಾಗಗಳಲ್ಲಿ ಬಾಳೆಹಣ್ಣನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ.ಕಾಂಗೊ ಮತ್ತು ಪಶ್ಚಿಮ ಆಫ್ರಿಕಗಳಲ್ಲಿ ರಬ್ಬರಿನ ಗಿಡಗಳು ಹೆಚ್ಚಗಿವೆ.

ನದೀ ಕೊಳ್ಳಗಳಲ್ಲಿ ಉತ್ತಮ ರೀತಿಯ ಸುಧಾರಿಸಿದ ವ್ಯವಸಾಯ ಪದ್ಧತಿ ರೂಢಿಯಲ್ಲಿದೆ.ಹತ್ತಿ,ಹೊಗೆಸೊಪ್ಪು,ಗೋದಿ,ಬಾರ್ಲಿ ಮತ್ತು ಅನೇಕ ರೀತಿಯ ಧಾನ್ಯಗಳನ್ನು ನದಿಯ ಬಯಲುಗಳಲ್ಲಿ ಬೆಳೆಯುತ್ತಾರೆ.

ಆಫ್ರಿಕದ ಹತ್ತಿಯ ಬೆಳೆ ದಿನೇ ದಿನೇ ಅಭಿವೃದ್ಧಿ ಹೊಂದುತ್ತದೆ.ಸೂಡಾನ್ ಮತ್ತು ಈಜಿಪ್ಟ್ ದೇಶಗಳು ಹತ್ತಿಯನ್ನು ಹೇರಳವಾಗಿ ಬೆಳೆಯುತ್ತವೆ.ಶ್ಯಾಕಲ್ ಎಂಬ ಜಗತ್ ಪ್ರಸಿದ್ಧವಾದ ಹತ್ತಿಗೆ ಈಜಿಪ್ಟ್ ಹೆಸರಾದ ರಾಷ್ಟ್ರ.ಕಾಂಗೊ,ಉಗಾಂಡ ಮತ್ತು ಗಿನಿ ತೀರದ ರಾಷ್ಟ್ರಗಳಲ್ಲೂ ಹತ್ತಿಯನ್ನು ಬೆಳೆಯುತ್ತಾರೆ.

ಸೆನೆಗಾಲ್,ಗ್ಯಾಂಬಿಯ,ಉತ್ತರ ನೈಜೀರಿಯ ಮತ್ತು ಕಾಂಗೊ ರಾಷ್ಟ್ರಗಳ ಬೆಳೆಗಳಲ್ಲಿ ನೆಲಗಡಲೆಯೂ ಒಂದಾಗಿದೆ.ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಳಲ್ಲಿ ಜೋಳವನ್ನು ಮೇವಿಗಾಗಿಯೇ ಉಪಯೋಗಿಸುತ್ತಾರೆ.ಹೈವೆಲ್ಡ್ ಪ್ರದೇಶ ದಕ್ಷಿಣ ಆಫ್ರಿಕದಲ್ಲಿ ಜೋಳದ ಬೆಳೆಗೆ ಹೆಸರು ಪಡೆದಿದೆ.ಉಷ್ಣವಲಯದ ವಾಯುಗುಣವಿರುವ ಪ್ರದೇಶಗಳಲ್ಲಿ ಹೊಗೆಸೊಪ್ಪು ಅತಿ ಮುಖ್ಯ ಬೆಳೆ.ಸವನ್ನಾದ ನಾಡುಗಳಾದ ಸೂಡಾನ್,ಕಾಂಗೊ ಮತ್ತು ಮಡಗಾಸ್ಕರ್,ರೊಡೀಷಿಯ ಮತ್ತು ದಕ್ಷಿಣ ಆಫ್ರಿಕಗಳಲ್ಲೂ ಹೊಗೆಸೊಪ್ಪನ್ನು ಬೆಳೆಯುತ್ತಾರೆ.

ಉತ್ತರ ಆಫ್ರಿಕದ ಆಲ್ಜೀರಿಯ,ಟ್ಯೂನೀಷಿಯ ಮತ್ತು ಮೊರಾಕೊ ರಾಜ್ಯಗಳು ಗೋದಿ ಮಾತು ಬಾರ್ಲಿ ಉತ್ಪಾದನೆಯಲ್ಲಿ ಪ್ರಥಮಸ್ಥಾನ ಪಡೆಸಿವೆ.ಮೆಡಿಟರೇನಿಯನ್ ತೀರಪ್ರದೇಶದಲ್ಲಿ ಹಣ್ಣಿನ ತೋಟಗಳು ಬಹುಸಂಖ್ಯೆಯಲ್ಲಿವೆ.ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಇಲ್ಲಿ ಬೆಳೆಯುತ್ತಾರೆ.ಆಲಿವ್ ಮತ್ತು ದ್ರಾಕ್ಷಿ ತೋಟಗಳಿಗೆ ಈ ಪ್ರದೇಶ ಹೆಸರು ಪಡೆದಿದೆ.ಮೆಡಿಟರೆನಿಯನ್ ಹಣ್ಣುಗಳನ್ನು ಕೇಪ್ ಪ್ರಾಂತ್ಯ,ಟ್ರಾನ್ಸ್ ವಾಲ್,ನೇಟಾಲ್ ಮತ್ತು ದಕ್ಷಿಣ ರೊಡೀಷಿಯದಲ್ಲೂ ಬೆಳೆಯುವರು.

ದನಕರು ಮತ್ತು ಕುರಿ ಸಾಕುವುದು ಆಫ್ರಿಕದಲ್ಲಿ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ.ಗಿನಿ ತೀರ,ಸುಡಾನ್,ಪೂರ್ವ ರಾಜ್ಯಗಳು ಮತ್ತು ದಕ್ಷಿಣ ಆಫ್ರಿಕದ ರಾಜ್ಯಗಳು ದನಕರುಗಳು ಮತ್ತು ಕುರಿಸಾಕಣೆಗೆ ಪ್ರಸಿದ್ಧವಾಗಿವೆ.ಬರ್ ಬರಿ ರಾಜ್ಯಗಳು(ಮೆಡಿಟರೇನಿಯನ್)ಮತ್ತು ಪೂರ್ವ,ದಕ್ಷಿಣ ಆಫ್ರಿಕದಲ್ಲಿ ಎಣ್ಣೆ ಅತಿ ಮುಖ್ಯವಾದ ರಫ್ತಿನ ವಸ್ತುಗಳಲ್ಲೊಂದು.ರೊಡೀಷಿಯ,ಅಂಗೋಲಗಳಲ್ಲಿ ಸಹ ಕುರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಕೈಗಾರಿಕೆಗಳು:ಬೃಹತ್ ಕೈಗಾರಿಕೆಗಳು,ಆಫ್ರಿಕದ ಯಾವ ರಾಜ್ಯದಲ್ಲೂ ಇಲ್ಲವೆಂದು ಹೇಳಬಹುದು.ಇಲ್ಲಿ ಕೈಗಾರಿಕೆ ಇನ್ನೂ ಶೈಶವಾವಸ್ಥೆಯಲೀ ಇದೆ.ಈಗ ಇರುವ ಕೆಲವೇ ಕೈಗಾರಿಕೆಗಳು ಹೆಚ್ಚಾಗಿ ವ್ಯವಸಾಯ ಅಥವಾ ಖನಿಜಗಳ ಉತ್ಪಾದನೆಗೆ ಸಂಬಂಧಿಸಿದುವು.ರಫ್ತು ಮಾಡುವ ಕಚ್ಚಾಪದಾರ್ಥಗಳನ್ನು ಸಿದ್ಧಪಡಿಸುವ ಅನೇಕ ಕೈಗಾರಿಕೆಗಳು ಇಲ್ಲಿವೆ.ಕೈಗಾರಿಕೆಯ ಪ್ರಗತಿ ಎರಡನೆಯ ಮಹಾಯುದ್ಧಾನಂತರ ಹೆಚ್ಚಾಗಿ ನಡೆದಿದೆ ಎಂದು ಹೇಳಬಹುದು.

ಬೃಹತ್ ಕೈಗಾರಿಕೆಗಳು ಅಲ್ಲೊಂದು ಇಲ್ಲೊಂದು ಇತ್ತೀಚೆಗೆ ಸ್ಥಾಪಿಸಲ್ಪಟ್ಟಿವೆ.ಭಾರಿ ಪ್ರಮಾಣದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ದಕ್ಷಿಣ ಆಫ್ರಿಕದ ಗಣರಾಜ್ಯದಲ್ಲಿ ಸ್ಥಾಪಿಸಿದ್ದಾರೆ.ಇಲ್ಲ್ಲಿ ರಫ್ತು ಪದಾರ್ಥಗಳನ್ನು ಅಣಿಗೊಳಿಸುವ ಮತ್ತು ಆಹಾರ ಪದಾರ್ಥಗಳನ್ನು ಸಿದ್ಧಗೊಳಿಸುವ ಅನೇಕ ಕಾರ್ಖಾನೆಗಳಿವೆ.

ಇಲ್ಲಿಯ ಕೈಗಾರಿಕೆಯಲ್ಲಿ ಚರ್ಮವನ್ನು ಹದ ಮಾಡುವುದು,ಮರದ ದಿಮ್ಮಿಗಳನ್ನು ಸಿದ್ಧಪಡಿಸುವುದು,ಹತ್ತಿ ಬಟ್ಟೆ ಕೈಗಾರಿಕೆ,ತಾಮ್ರವನ್ನು ಕರಗಿಸುವುದು ಮತ್ತು ಯಂತ್ರೋಪಕರಣಗಳನ್ನು ತಯಾರಿಸುವುದು ಮುಖ್ಯವಾಗಿವೆ.ಈ ಕೈಗಾರಿಕೆಗಳು ಕೆನ್ಯ,ರೊಡೀಷಿಯ,ಈಜಿಪ್ಟ್,ಕಾಂಗೊ ಮತ್ತು ಪಶ್ಚಿಮ ಆಫ್ರಿಕದಲ್ಲಿ ಹೆಚ್ಚಾಗಿವೆ.ತಾಮ್ರವನ್ನು ಕರಗಿಸುವ