ಪುಟ:Mysore-University-Encyclopaedia-Vol-1-Part-2.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಲ್ಯೂಸಿಯನ್ ಜೊಹಾನಸ್-ಅಲ್ಲಥಾಪ ಮತ್ಥು ಅತಿವಾಹಕತ್ವ ಮುಖ್ಯ ಚಿತ್ರಗಳೆಲ್ಲವನ್ನೂ ಗುಹೆಯ ಪ್ರಾರಂಭದಿಂದ ಸು೧೮-೩೦ಮೀ ದೂರದಲ್ಲೇ ಕಾಣಬಹುದು. ಗೂಳಿ,ಕಾಡುಹಂದಿ,ಕಾಡುಕುದುರೆ,ಕಾಟೆ,ಜಿಂಕೆ ಮುಂತಾದ ಹಲವು ಕಾಡೆಮ್ಮೆಗಳು ವರ್ಣರಂಜಿತ ಚಿತ್ರಗಳು ಇಲ್ಲಿಯ ವೈಶ್ಟಿಷ್ಟ್ಯ ಗೂಳಿಗಳ ಬಲಿಷ್ಟ್ಯ ಧೃಡಕಾಯ ಎದ್ದು ಕಾಣುತ್ತದೆ. ಶಿಲಾಯುಗದ ಕಾಲಕ್ಕೆ ಸೇರಿದ್ದರೂ ಇಲ್ಲಿಯ ಬಹುಪಾಲು ಚಿತ್ರಗಳು ಹಳೆಯ ಶಿಲಾಯುಗದ ಕೊನೆಯ ಭಾಗದಲ್ಲಿದ್ದ ಮ್ಯಾಗ್ಡಲೇನಿಯನ್ ಸಂಸ್ಕೃತಿಗೆ ಸೇರಿದ್ದವು. ಇಂಗಾಲ-೧೪ ವೈಘ್ನಾನಿಕ ವಿಧಾನದಿಂದ ಈ ಚಿತ್ರಗಳ ಕಾಲಮಾನ ಸು ಪ್ರಕಪೂ೨೦೦೦೦-೧೫೦೦೦ಗಳಷ್ಟು ಪುರಾತನದವೆಂದು ಗುರುತುಪಡಿಸಲಾಗಿದೆ. ಅಲ್ಯೂಸಿಯಸ್ ಜೊಹಾನಸ್:(೧೫೫೭-೧೬೩೮) ಜರ್ಮನ್ ಕಾಯಿದೆ ಪಂಡಿತ. ರಾಅಜನೀತಿಶಾಸ್ತ್ರತಗ್ನ, ಕೆಲ್ವಿನ್ನನ ಅನುಯಾಯಿ. ಲೌಕಿಕ ಮತ್ತು ಧರ್ಮಿಕ ನಿದರ್ಶನಗಳೊಂದಿಗೆ ಈತ ಸುಸಂಗಟಿತ ರಾಜನೀತಿಶಾಸ್ತ್ರವೊಂದನ್ನು ಬರೆದಿದ್ದಾನೆ(೧೬೧೦). ರಾಜನೀತಿಯ ಪಾಂಕ್ತವಾದ ಚರಿತ್ರೆ, ಆಧುನಿಕ ರಾಜನೀತಿಯ ವಿವರಗಳಿಂದ ಈ ಗ್ರಂಥ ಮುಖ್ಯವಾಗಿದೆ. ಸಮಾಜ ಅನೇಕ ಘಟಕಗಳಿಂದ, ಅನೇಕ ಸ್ತರಗಳಿಂದ ಕೂಡಿದ್ದು ಎಲ್ಲ ಗುಂಪುಗಳಿಗೂ ಸಾಮೂಹಿಕ ಸಮ್ಮತಿಯೇ ಆಧಾರವಾಗಿದೆ. ಹಾಗೆಯೆ ರಾಷ್ಟ್ರದ ಉಗಮ ವಿಕಾಸಗಳಿಗೆ ಸಾಮೂಹಿಕ ಸಮ್ಮತಿಯೇ ಅಡಿಗಲ್ಲು. ಸಾರ್ವಭೋಮ ಅಧಿಕಾರ ವ್ಯಕ್ತಿಯಲ್ಲಿಲ್ಲ, ಜನತೆಯಲ್ಲಿದೆ ಇವು ಆತ ಮಡಿಸಿರುವ ಮುಖ್ಯ ವಿಚಾರಗಳು. ಅಲ್ಪತಂತ್ರ: ಕೇವಲ ಕೆಲವರ ಕೈಯಲ್ಲಿ ಆಡಳಿತಾಧಿಕಾರ ಸೀಮಿತವಾಗಿರುವ ಆಡಳಿತ ಪದ್ಧತಿ(ಆಲಿಗಾರ್ಕಿ). ಅಲ್ಪಸಂಖ್ಯಾಧಿಪಥ್ಯವೆಂದೂ ಇದನ್ನು ಹೇಳಬಹುದು. ಪ್ರತಾಪ್ರಭುತ್ವದಲ್ಲೂ(ಡೆಮಾಕ್ರಸಿ) ಚುನಾಯಿತ ಪ್ರತಿನಿಧಿಗಳು ಕೆಲವರೇ ಆಡಳಿತ ನಡೆಸುವರಾದರೂ ಸರ್ಕಾರ ಪ್ರಜೆಗಳಿಗೆ ಹೊಣೆಯಾಗಿರುತ್ತದೆ. ಅಲ್ಪತಂತ್ರ ವ್ಯವಸ್ಥೆಯಲ್ಲಿ ತಾತ್ವಿಕವಾಗಿ ಆ ನಿರ್ಬಂಧವಿಲ್ಲ. ಪ್ರಾಚೀನ ಗ್ರೀಸಿನ ಥೀಬ್ಸ್, ಮೆಗಾರ, ಕಾರಿಂತ್ ಗಳಲ್ಲಿ ಇಂಥ ಸರ್ಕಾರವಿತ್ತು. ಕುಲೀನತಂತ್ರವೇ(ಅರಿಸ್ಟಾಕ್ರಸಿ) ಕಾಲಕ್ರಮೇಣ ಅಲ್ಪತಂತ್ರವಾಗಿ ಮಾರ್ಪಾಟಾಗುತ್ತದೆಂಬ ಅಭಿಪ್ರಾಯವಿದೆಯಾದರೂ ಆವೆರಡಕ್ಕೂ ಖಚಿತವಾದ ವ್ಯತ್ಯಾಸವಿದೆ. ಅಲ್ಪತಂತ್ರ ವ್ಯವಸ್ತೆ ಶ್ರೀಮಂತಾಧಿಪತ್ಯ. ಅಲ್ಲಿ ಆಡಳಿತವರ್ಗ ತನ್ನ ಹಿತ, ಮೇಲ್ಕೈ ಅಧಿಕಾರ ಭಧ್ರತೆಗಾಗಿ ಮಾತ್ರ ವ್ಯವಹರಿಸುತ್ತದೆ. ಕುಲೀನತಂತ್ರದಲ್ಲದರೋ ಆಡಳಿತ ಉತ್ತಮರ ಕೈಯಲ್ಲಿದ್ದು ಸಾರ್ವೈಅನಿಕ ಹಿತಚಿಂತನೆಯೇ ಅದರ ಗುರಿಯಾಗಿರುತ್ತದೆ. ಅಲ್ಪತಾಪ ಮತ್ತು ಅತಿವಾಹಕತ್ವ: ವಸ್ತುವಿನಲ್ಲಿರುವ ಅಣುಗಳ ಯಾದೃಚ್ಛಿಕ ಚಲನೆಯ ರೂಪ ಉಷ್ಣ ಉಷ್ಣದ ಮಾನ ಉಷ್ಣತೆ ಅಥವಾ ತಾಪ(ಟೆಂಪರೇಚರ್). ಅಧಿಕೋಷ್ಣ ಅಧಿಕತಾಪವನ್ನೂ ಅಲ್ಪೋಷ್ಣ ಅಲ್ಪತಾಪವನ್ನೂ ಉಂಟುಮಾಡುತ್ತದೆ. ಅಧಿಕೋಷ್ಣದಲ್ಲಿ ಅಣುಚಲನೆ ತೀವ್ರವಾಗಿಯೂ ಅಲ್ಪೋಷ್ಣದಲ್ಲಿ ಮಂದವಾಗಿಯೂ ಇರುತ್ತದೆ. ಹೀಗೆ ಅಣುಚಲನೆ ಮಂದವಾದಂತೆ ತಾಪ ಇಳಿಯುತ್ತದೆ. ಆದ್ದ್ರಿಂದ ಅಲ್ಪತಾಪವನ್ನು ಕೃತಕವಾಗಿ ಉಂಟುಮಾಡಲು ಅಣುಚಲನೆಯನ್ನು ಅತಿ ಮಂದಗೊಳಿಸಬೇಕು. ಲೋಹಗಳು ವಿದ್ಯುದ್ವಾಹಕಗಲು. ವಿದ್ಯುತ್ಪ್ರವಾಹ ಉಂಟಾಗುವುದು ಎಲೆಕ್ಟ್ರಾನ್ ಎಂಬ ಸಣ್ಣ ಕಣಗಳ ಚಲನೆಯಿಂದ. ಈ ಕಣಗಳು ತಡೆಯೀಲ್ಲದೆ ಚಲಿಸಿದರೆ ಆ ಲೋಹದ ವಾಹಕತ್ವ ಹೆಚ್ಚು ಎಂದೂ ಹಾಗಿಲ್ಲದಿದ್ದರೆ ವಾಹಕತ್ವ ಕಡಿಮೆ ಎಂದೂ ತಿಲಿಯುತೇವೆ. ವಾಹಕತ್ವ ಹೆಚ್ಚು ಎಂದೂ ಹಾಗಿಲ್ಲದಿದ್ದರೆ ವಾಹಕತ್ವ ಕಡಿಮೆ ಎಂದೂ ತಿಳಿಯುತ್ತೇವೆ. ವಾಹಕತ್ವ ಕಡಿಮೆಯಾಗುವುದರ ಕಾರಣ ಲೋಹದಲ್ಲಿರುವ ದೋಷ. ಜೋಡಣೆಗೊಂಡಿರುವ ಅಣುಗಳ ಸಮುದಾಯವೇ ಲೋಹ. ಇದರಲ್ಲಿ ಮಧ್ಯೆ ಮಧ್ಯೆ ಕ್ರಮ ತಪ್ಪಿ ಖಾಲಿ ಜಾಗವಿರುವುದುಂಟು. ಅದೇ ರೀತಿ ಅಣುಗಳು ಕ್ರಮ ಮೀರಿ ಅಲ್ಲಿ ಇಲ್ಲಿ ಸೇರಿರುವುದೂ ಉಂಟು. ಬೇರೆ ಒಂದು ಜಾತಿಯ ಅಣುವೂ ಸೇರಿರಬಹುದು. ಅನೇಕ ಅಣುಗಳು ಒಂದೊಂದು ಕಡೇ ಸೇರಿ ಲೋದಹದಲ್ಲಿ ಎಲ್ಲೆಗಳನ್ನು ಉಂಟುಮಾಡಲೂಬಹುದು. ಇವೆಲ್ಲವೂ ಲೋಹದಲ್ಲಿ ಕಂಡುಬರುವ ದೋಷಗಳೇ. ಇವೆಲ್ಲಕ್ಕಿಂತೂ ವಿದ್ಯುತ್ಪ್ರವಾಹದಲ್ಲಿ ಹೆಚ್ಚಾಗಿ ತಡೆಯನ್ನುಂಟುಮಾಡುವುದು ಅಣುಗಳು ಸ್ಥಿರವಾಗಿರದೆ ಆಂದೋಳನ ರೀತಿಯ ಚಲನೆಯಿಂದ ಕೂಡಿರುವ ಒಂದು ಪರಿಸ್ಥಿತಿ(ಈ ಆಂದೋಳನಕ್ಕೂ ತಾಪಕ್ಕೂ ನಿಕಟ ಸಂಬಂಧವಿದೆ). ಲೋಹದಲ್ಲಿ ಕಂಡುಬರುವ ರೋಧ ಬಹುಪಾಲು ತಾಪಕ್ಕನುಗುಣವಾಗಿರುವುದು ಸ್ವಾಭಾವಿಕ. ತಾಪ ಕಡಿಮೆಯಾದಂತೆ ರೋಧವೂ ಕಡಿಮೆಯಾಗುತ್ತದೆ. ೦k ತಾಪವನ್ನು ಸೇರುವ ಹೊತ್ತಿಗೆ ರೋಧ ಕ್ರಮೇಣವಾಗಿ ಕಡಿಮೆಯಾಗಿ ಅಂತ್ಯದಲ್ಲಿ ರೋಧ ಇಲ್ಲವಾಗುತ್ತದೆ. ಸಾಮಾನ್ಯವಾಗಿ ಲೋಹಗಳಲ್ಲಿ ದೋಷವಿರುವುದರಿಂದ ೦k ತಾಪದ ಹತ್ತಿರದಲ್ಲಿದ್ದರೂ ಅಲ್ಪಸ್ವಲ್ಪ ರೋಧ ಉಳಿದೇ ಇರುತ್ತದೆ. ಬಹಳ ಶುದ್ಧವಾದ ವಾಹಕವನ್ನು ಒಂದು ವಸ್ತುವಿನಿಂದ ತಯಾರಿಸಿದರೆ ದೋಷಗಳನ್ನು ಆದಷ್ಟು ಕಡಿಮೆ ಮಾಡಬಹುದು. ಅಲ್ಲದೆ ಹರಳಿನ ರೀತಿಯಲ್ಲಿ ವಾಹಕ ಇದ್ದರೆ ರೋಧ ಅಣುಚಲನೆಯಿಂದಲೇ ಎಂದು ಪರಿಗಣಿಸಬಹುದು. ಇಂಥ ಶುದ್ಧವಾಹಕವನ್ನು ಪಾದರಸದಿಂದ ತಯಾರಿಸಿ ವಿದ್ಯುತ್ ರೋಧವನ್ನು ಹೊಸದಾಗಿ ದ್ರವೀಕರಿಸಿದ ಹೀಲಿಯಂ ಅನ್ನು ಉಪಯೋಗಿಸಿಕೊಂಡು ಅಳೆಯಲು ಉದ್ಯುಕ್ತನಾದವನು ಮಹಾವಿಗ್ನಾನಿ ಕ್ಯಾಮರ್ಲಿಂಗ್ ಓನ್ಸ್. ಹೀಗೆ ಅಳೆದಾಗ ಪಾದರಸ ಎಣಿಸಿದಂತೆ ವರ್ತಿಸದೆ ತಾಪ ೪kಯಲ್ಲಿರುವಾಗಲೇ ರೋಧವನ್ನು ಕಳೆದುಕೊಂಡಿತು. ಈ ಹೊಸ ಗುಣ ಬಹಳ ಆಶ್ಚರ್ಯವುಂಟುಮಾಡಿತು. ರೋಧವೇ ಇಲ್ಲವೆಂದರೆ ಎಷ್ಟು ವಿದ್ಯುತ್ಪ್ರವಾಹವನ್ನಾದರೂ ಅದರ ಮೂಲಕ ಕಳುಹಿಸಲು ಸಾಧ್ಯ ಎಂಬುದಂತೂ ಅತ್ಯಾಶ್ಚರ್ಯವೇ ಸರಿ. ಹೀಗೆ ಒಂದು ನಿರ್ದಿಷ್ಟ ತಾಪದಲ್ಲಿ ಹೊಸದೊಂದು ರೋಧಕರಹಿತ ಗುಣವನ್ನು ತೋರ್ಪಡಿಸುವುದೇ ಅತಿವಾಹಕತ್ವ ಅಥವಾ ಅಧಿಕವಾಹಕತೆ( ಸೂಪರ್ ಕಂಡಕ್ಟಿವಿಟಿ). ಇಂಥವಾಹಕವನ್ನು ಅತಿವಿದ್ಯುತ್ವಾಹಕ ಅಥವಾ ಅಧಿಕವಾಹಕ ಎಂದು ಕರೆಯುವುದು ವಾಡಿಕೆ. ಈ ನಾಮಾಂಕಿತವನ್ನು ಕ್ಯಾಮರ್ಲಿಂಗ್ ಓನ್ಸ ಮಾಡಿದನು. ಈ ನಿರ್ದಿಷ್ಟ ತಾಪವನ್ನು(೪k)ಸಾಮಾನ್ಯ ವಾಹಕತ್ವದಿಂದ ಅತಿವಾಹಕತ್ವಕ್ಕೆ ಮಾರ್ಪಾಡಾಗುವ ತಾಪವೆನ್ನಬಹುದು(ಸಂಕ್ರಮಣ ಉಷ್ಣತೆ, ಟ್ರಾನ್ಸಿಷನ್ ಟೆಂಪರೇಚರ್). ಇಲ್ಲಿಂದ ೦k ವರೆಗೂ ಲೋಹ ಅತಿವಾಹಕವಾಗಿಯೇ ಇರುತ್ತದೆ. ಈ ವಿಶೇಷ ಗುಣವನ್ನು ತೋರ್ಪಡಿಸುವ ವಾಹಕಗಳು ಸಾಮಾನ್ಯವಾಗಿ ಸುತ್ತಮುತ್ತಲಿನ ತಾಪದಲ್ಲಿ (೩೦೦k) ಅಷ್ಟಾಗಿ ಒಳ್ಳೆಯ ವಾಹಕಗಳಾಗಿರುವುದಿಲ್ಲ. ಏಕೆಂದರೆ ಒಳ್ಳೆಯ ವಾಹಕಗಳಾದ ಕ್ಷಾರಲೋಹಗಳು ( ಲೀಥಿಯಂ,ಪೊಟ್ಯಾಸಿಯಮ್, ರುಬಿಡಿಯಮ್ ಮುಂತಾದವು) ಮತ್ತು ಉತ್ತಮ ಲೋಹಗಳಾದ ತಾಮ್ರ ಬೆಳ್ಳಿ ಚಿನ್ನ ಮುಂತಾದವುಗಳಲ್ಲಿ ಈ ಅತಿವಾಹಕತ್ವ ಕಂಡುಬಂದಿಲ್ಲ. ಈ ವಿಶೇಷ ಗುಣ ಇಂಥ ಹರಳಿನ ರಚನೆಗೆ (ಸ್ಟ್ರಕ್ಚರ್) ಸೇರಿದ್ದೆಂದು ಹೇಳಲಾಗುವುದಿಲ್ಲ. ಏಕೆಂದರೆ ಎಲ್ಲ ಹರಳಿನ ರಚನೆಗಳೂ ಅತಿವಾಹಕಗಳಲ್ಲಿ ಕಡುಬಂದಿವೆ. ತವರನ್ನು ತೆಗೆದುಕೊಂಡರೆ ಒಂದು ರಚನೆಯ ತವರ ಅತಿವಾಹಕವಾಗಿಯೂ ಇನ್ನೊಂದು ರಚನೆಯ ತವರ ಸಾಮಾನ್ಯವಾಗಿಯೂ ಇದೆ. ಅಂದರೆ ಒಂದೇ ಜಾತಿಯ ಅಣುಗಳು ಬೇರೆ ಬೇರೆ ಜೋಡಣೇಯಲ್ಲಿರುವುದರಿಂದಲೂ ಅಲ್ಲದೆ ಕೆಲವು ಮೂಲವಸ್ತುಗಳು ಸಾಮಾನ್ಯ ವಾಹಕಗಳಾಗಿಯೆ ಇರುವುದರಿಂದಲೂ ಇಓಥವುಗಳಲ್ಲಿಯೇ ವಿಶೆಷಗುಣ ಕಂಡುಬರುತ್ತದೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮಾರ್ಪಾಟನ್ನು