ಪುಟ:Mysore-University-Encyclopaedia-Vol-1-Part-2.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಲ್ಪವೃಷ್ಟಿ ವ್ಯವಸಾಯ ತೋರಿಸುವ ತಾಪ ಹ್ಯಾಪ್ನಿಯಂ ಲೋಹಕ್ಕೆ ಬಹಳ ಕನಿಷ್ಟವಾಗಿಯೂ (೦.೩೫K), ನೈಯೊಬಿಯಂ ಲೋಹಕ್ಕೆ ಹೆಚ್ಚಾಗಿಯೂ (೮K) ಇನ್ನುಳಿದವುಗಳಿಗೆ ಇವೆರಡರ ಅಂತರದಲ್ಲಿಯೂ ಇರುವುದಾಗಿ ಕಂಡುಬಂದಿದೆ. ಈವರೆಗೆ ೨೨ ಮೂಲವಸ್ತುಗಳು ಇನ್ನೂ ಹೆಚ್ಚಿನ ತಾಪದಲ್ಲಿರುವುದು ಗಮನಾರ್ಹವೆ ಸರಿ. ಉದಾಹರಣೆಗೆ ನೈಯೋಬಿಯಂ ನೈಟ್ರೈಡ್ ಗೆ ೧೫೫ K.ಅಲ್ಲದೆ ಮೂಲ ವಸ್ತುಗಳು ಅತಿವಾಹಕಗಳಲ್ಲದಿದ್ದರು ಮಿಶ್ರವಾದಾಗ ಈ ವಿಶೇಷಗುಣವನ್ನು ತೋರಿಸುವುದು ಇನ್ನೂ ಆಶ್ಚರ್ಯಕರ.ಉದಾಹರಣೆಗೆ,ಚಿನ್ನ ಮತ್ತು ಬಿಸ್ಮತ್. ಅತಿವಾಹಕದ ಮುಖ್ಯ ಲಕ್ಷಣಗಳು ವಿದ್ಯುತ್ ಗುಣ ಹಾಗೂ ಕಾಂತಗುಣಗಳ ಮೇಲೆ ಅವಲಂಬಿಸಿದೆ. ವಿದ್ಯುತ್ರೋಧಕ ಇಲ್ಲದಿರುವುದನ್ನು ಈಗಾಗಲೆ ಗಮನಿಸಿದ್ದೇವೆ. ಕಾಂತಗುಣವನ್ನು ಗಮನಿಸಿದರೆ ಮ್ಯಾಕ್ಸ್ ವೆಲ್ ನಿಯಮದ ಆಧಾರದ ಮೇಲೆ ಮತ್ತು ಓಮ್ ನಿಯಮದ ಪ್ರಕಾರ ಕಾಂತದ ರೇಖೆಗಳು ಕಾಲವನ್ನನುಸರಿಸದೆ ನಿಗದಿಯಾದಷ್ಟೇ ಇರಬೇಕು ಎಂಬುದು ನಮಗೆ ತಿಳಿದಿರಬಹುದು. ಅಂದರೆ ಅತಿವಾಹಕದೊಳಗೆ ಎಷ್ಟು ಕಾಂತರೇಖೆಗಳಿರುತ್ತವೋ ಅಷ್ಟು ಬದಲಾವಣೆಯಾಗದೆ ಹೊರಗಿನ ಕಾಂತಕ್ಷೇತ್ರವನ್ನು ತೆಗೆದ ಮೇಲೂ ಇದ್ದೇ ಇರುತ್ತದೆ. ಆದರೆ ಇದನ್ನು ಪ್ರಾಯೋಗಿಕವಾಗಿ ತೋರಿಸದೆ ಪ್ರಾರಂಭದಲ್ಲಿ ಸರಿಯೆಂದೇ ಭಾವಿಸಿದ್ದರು.ಈ ಭಾವನೆಯನ್ನು ತಿದ್ದಿದ ವ್ಯಕ್ತಿಗಳೆಂದರೆ ಮೈಸ್ನರ್ ಮತ್ತು ಒಷನ್ ಫೆಲ್ದ್ ಎಂಬ ಜರ್ಮನ್ ವಿಗ್ನಾನಿಗಳು. ಇವರು ಪ್ರಯೋಗದ ಮೂಲಕ ಅತಿವಾಹಕದಲ್ಲಿ ಕಂತರೇಖೆಗಳು ಹೊರದೂಡಲ್ಪಡುತ್ತವೆ ಎಓದು ತೋರಿಸಿ ಕಾಂತಗುಣ ಅಡ್ಡಕಾಂತೀಯ (ಡ್ಯ್ಯಮ್ಯಾಗ್ನಟಿಕ್) ಆಗಿರೌತ್ತದೆ ಎಂದು ದ್ರುಢೀಕರಿಸಿದರು. ಅಡ್ಡಕಾಂತೀಯ ಗುಣ ಎಂದರೆ ಒಂದು ವಸ್ತು ಪ್ರಬಲಕಾಂತಕ್ಷೇತ್ರಕ್ಕೆ ಒಳಗಾದರೆ ಅದು ಎಷ್ಟರ ಮಟ್ಟಿಗೆ ಕಾಂತಪ್ರಭಾವಕ್ಕೆ ಮಣಿಯುತ್ತದೆ ಎಂಬ ಸೂಚಕ ಸಂಖ್ಯೆ(x). ಇದು ಯಾವಾಗಲೂ ಋಣವಾಗಿಯೇ ಇರುತ್ತದೆ. (x=0). ಇದನ್ನೇ ಮೈಸರ್ ಸಾಧನೆಯೆಂದು ಕರೆಯುವುದುಂಟು. ವಿದ್ಯುನ್ನಿರೋಧ ಅವಧಿ ತಾಪದಲ್ಲಿ ಇಲ್ಲದಂತಾಗುವುದನ್ನು ಕಾಣಬಹುದು. ಇವುಗಳಲ್ಲಿ ಮುಖ್ಯವಾದ ರೋಧವೇ ಇಲ್ಲದಿರುವುದು ಮತ್ತು ಕಾಂತ ಬಲರೇಖೆಗಳನ್ನು ವಾಹಕದೊಳಗೆ ಹೋಗದಂತೆ ತಡೆಯುವುದು ಎಂಬ ಗುಣಗಳನ್ನು ಪರಿಗಣಿಸಲಾಗಿದೆ. ಅತಿವಾಹಕಗಳಲ್ಲಿ ನಿರೋಧವೆ ಇಲ್ಲ ಎಂದು ಹೇಳಿದರೆ ಹೆಚ್ಚಿನ ವಿದ್ಯುತ್ ಸಾಧ್ಯವೆಂದು ಮತ್ತು ಉಷ್ಣದಿಂದ ಶಕ್ತಿನಷ್ಟಕ್ಕೆ ಅವಕಾಶವಿಲ್ಲವೆಂದು ಗೊತ್ತಾಗುತ್ತದೆ. ಈ ಗುಣವನ್ನು ಉಪಯೋಗಿಸಿಕೊಂಡು ಹೆಚ್ಚು ಕಾಂತೀಯ ಕ್ಷೇತ್ರವನ್ನು ಪಡೆಯಲು ಸಾಧ್ಯವೆನಿಸುವುಧು ಸಹಜವೇ ಸರಿ. ಕಾರಣ ಅತೀ ವಾಹಕತ್ವವನ್ನು ಕಾಂತೀಯ ಕ್ಷೇತ್ರದಿಂದ ನಾಶಮಾಡಲು ಸಾಧ್ಯವಿರುವುದರಿಂದ ಸಾಮಾನ್ಯವಾಹಕದಿಂದ ಅತೀವಾಹಕವಾಗಿ ಮಾರ್ಪಾಡಾಗುವ ತಾಪವನ್ನು Tc K ಯಿಂದ ಗುರುತಿಸಿದೆ. ಅದಕ್ಕಿಂತ ಕಡಿಮೆ ತಾಪದಲ್ಲಿ ಒಂದು ನಿರ್ದಿಷ್ಟ ಕಾಂತಕ್ಷೇತ್ರದಿಂದ ಈ ವಿಶೇಷಗುಣವನ್ನು ನಾಶಮಾಡಲುಇರುವ ಸಂಬಂಧವನ್ನು ತೋರಿಸಿದೆ. ಕಾಂತಕ್ಷೇತ್ರ ಈ ನಿರ್ದಿಷ್ಟ ಬೆಲೆಗಿಂತ ಕಡಿಮೆ ಇದ್ದರೆ ಈ ಗುಣವನ್ನು ನಾಶಮಾಡಲು ಸಾಧ್ಯವಿಲ್ಲ ಈ ಕಾಂತಕ್ಷೇತ್ರವನ್ನು ವಿದ್ಯುತ್ಪ್ರವಾಹದಿಂದಾದರೂ ಪಡೆಯಬಹುದಾದ್ದರಿಂದ ಅತಿವಾಹಕಕ್ಕೆ ಒಂದು ನಿರ್ದಿಷ್ತ ವಿದ್ಯುತ್ಪ್ರವಾಹದ ಮೇಲೆ ಕಳುಹಿಸಲು ಸಾಧ್ಯವಿಲ್ಲ. ಮೈಸ್ನರ್ ಮತ್ತು ಓಷನ್ ಫಿಲ್ಡ್ ಅತಿವಾಹಕತ್ವವನ್ನು ಸಾಧಾರಣವಾಹಕತ್ವವಾಗಿಯೂ ಮತ್ತು ಸಾಧಾರಣ ವಾಹಕತ್ವವನ್ನು ಅತಿವಾಹಕತ್ವವಾಗಿಯೂ ಕಾಂತಕ್ಷೇತ್ರದಿಂದ ಬದಲಾಯಿಸಿ ಒಂದು ಸ್ವಿಚ್ ರೀತಿ ಉಪಯೋಗಿಸಬಹುದೆಂದು ತೋರಿಸಿದ್ದಾರೆ.ಇದಲ್ಲದ ಅತಿವಾಹಕವನ್ನು ಉಪಯೋಗಿಸಿಕೊಂಡು ಒಂದು ತಂತಿಯ ಸುರುಳಿಯಲ್ಲಿ ಯಾವುದಾದರೊಂದು ವಿಧದಿಂದ ವಿದ್ಯುತ್ಪ್ರವಾಹವೇರ್ಪಡುವಂತೆ ಮಾಡಿದರೆ ಆ ಪ್ರವಾಹ ವರ್ಷಗಟ್ಟಲೆ ಕುಂದದೆ ಇರುವುದೆಂದು ಕಂಡುಹಿಡಿದಿದ್ದಾರೆ. ಇದನ್ನೆ ಚಿರವಿದ್ಯುತ್(ಪರ್ಸಿಸ್ಟಂಟ್ ಕರೆಂಟ್) ಎನ್ನುವುದು. ಈ ವಿಶೇಷ ಶಕ್ತಿಯನ್ನು ಕಂಪ್ಯೂಟರ್ ನಲ್ಲಿ ಗ್ನಾಪಕಶಕ್ತಿಯನ್ನು ಕೂಡಿಡುವ ಅಂಗವಾಗಿ ಉಪಯೋಗಿಸುವುದು ಸಾಧನೀಯವಾಗಿ ಕಂಡುಬಂದಿದೆ. ಇದರಿಂದ ಈ ಭಾಗದಲ್ಲಿ ಸಂಶೋಧನೆಯೂ ಇನ್ನು ಹಚ್ಚಿನ ರೀತಿಯಲ್ಲಿ ನಡೆಯುತ್ತಿದೆ. ಒಂದೇ ತರಹದ ಲೋಹದಲ್ಲಿಯೇ ಅನೇಕ ರೀತಿಯ ಸಮಸ್ಥಾನಗಳಿರುವುದರಿಂದ(ಐಸೋಟೋಪ್ಸ್) ಅಣುವಿನ ತೂಕಕ್ಕೆ ಹಾಗೂ ಅತಿವಾಹಕತ್ವಕ್ಕೆ ಪರಿವರ್ತನೆಯಾಗುವ ತಾಪಕ್ಕೂ ಪಾಯೋಗಿಕವಾಗಿ ಸಂಬಂಧವನ್ನು ಕಂಡುಹಿಡಿದಿದ್ದಾರೆ.(tcm1/2=ಸ್ಥಿರಾಂಕ). ಇದನ್ನು ಕಂಡುಹಿಡಿಯುವ ಮೊದಲೆ ಫ್ರೋಲಿಶ್ ಎಂಬ ವಿಗ್ನಾನಿ ತನ್ನ ವಾದದ ಆಧರದ ಮೇಲೆ ಈ ತರಹದ ಸಂಬಂಧವನ್ನು ಸೂಚಿಸಿದ್ದ. ಇದು ದ್ರುಢವಾದಾಗಿನಿಂದ ಫೋಲಿಷ್ ವಾದಕ್ಕೆ ಮನ್ನಣೆ ಹೆಚ್ಚಾಯಿತು. ಇದೇ ರೀತಿಯ ವಾದವನ್ನು ಅದೇ ಕಾಲದಲ್ಲಿ ಬರ್ಡೀನ್ ಎಂಬ ವಿಗ್ನಾನಿ ಪ್ರತಿಪಾದಿಸಿದ್ದ. ಇವರಿಬ್ಬರ ವಾದ ವಿದ್ಯುತ್ಪ್ರವಾಹಕ್ಕೆ ಕಾರಣವಾದ ಎಲೆಕ್ಟ್ರಾನ್ ಗಳು ಪರಮಾಣುಗಳ ಆಂದೋಳನ ರೀತಿಯ ಚಲನೆಯಿಂದಾದ ಫೋನಾನುಗಳ ಮೂಲಕ ಒಂದಕ್ಕೊಂದು ಪ್ರಭಾವಯುತವಾಗಿ ಫರ್ಮಿಮಟ್ಟದಲ್ಲಿ ಎಲೆಕ್ಟ್ರಾನ್ ಗಳು ಒಂದು ದುಂಡುಗೋಳ ಎಂಬಂತೆ ವಿಂಗಡವಾದಾಗ ಈ ಅತಿವಾಹಕತ್ವ ಉಓಟಾಗಲು ಸಾಧ್ಯ ಎಂದು ತಿಳಿಸಿತು. ಈ ದುಂಡುಗೋಳ ಹಾಗೂ ಒಳಗೆ ತೋರಿಸುವ ಫರ್ಮಿಮಟ್ಟಕ್ಕೂ ಒಂದು ಫೋನಾನಿನ ಶಕ್ತಿಯ ಅಂತರವಿದೆ. ಮುಂದಿನ ಬದಲಾವಣೆ ಎಲೆಕ್ಟ್ರಾನಿನ ಭ್ರಮಣೆಗೆ(ಸ್ಪಿನ್) ಸಂಬಂಧಿಸಿದಂತೆ ಇರುವ ಎರಡು ಸಂಗತಿಗಳು. ಒಂದೊಂದಕ್ಕೂ ಶೂನ್ಯ ಉಷ್ಣತೆಯಲ್ಲಿಯೂ ಶಕ್ತಿಯಿರುವುದು ಕ್ವಂಟಮ್ ಸಿದ್ಧಾಂತದಿಂದ ಕಂಡುಬಂದಿದೆ.ಅತಿವಾಹಕತ್ವಕ್ಕೆ ಸಮರ್ಥ ಕಾರಣಗಳನ್ನು ಕೊಟ್ಟವರು ಬಾರ್ಡೀನ್, ಕೂಪರ್, ಶ್ರೇಪ್ರರ್ ಎಂಬ ವಿಗ್ನಾನಿಗಳು. ಇವರು ಪ್ರತಿಪಾದಿಸಿದ ಸಿದ್ಧಾಂತವನ್ನು ಬಿ ಸಿ ಎಸ್ ಸಿದ್ಧಾಂತವೆಂದು ಕರೆಯುತ್ತಾರೆ. ಅಲ್ಪವೃಷ್ಟಿ ವ್ಯವಸಾಯ: ಅಲ್ಪವ್ರುಷ್ಟಿ ಅನಿಶ್ಚಿತ ವೃಷ್ಟಿ ಪ್ರದೇಶದಲ್ಲಿ ಬಳೆ ತೆಗೆಯುವ ಸಾಗುವಳಿ ಪದ್ಧತಿ(ಡ್ರೈ ಫಾರ್ಮಿಂಗ್). ಇದಕ್ಕೆ ಒಣವ್ಯವಸಾಯ ಎಂದೂ ಕರೆಯುತ್ತಾರೆ. ಪಂಜಾಬ್, ರಾಜಸ್ತಾನ್, ಉತ್ತರಪ್ರದೇಶ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ್ ಮತ್ತು ತಮಿಳುನಾಡು ರಾಜ್ಯಗಳ ಮಳೆಕೊರತೆಯ ಪ್ರದೇಶಗಳಲ್ಲಿ ಈ ರೂಢಿ ಇದೆ. ಭಾರತದ ಒಟ್ಟು ಸಾಗುವಳಿ ಪ್ರದೇಶದ ಸು. ಶೇ.೨೨ ರಷ್ಟು ಭಾಗ ಒಣ ಬೇಸಾಯಕ್ಕೆ ಒಳಪಟ್ಟಿದೆ. ಈ ಪ್ರದೇಶಗಳಲ್ಲಿ ಮಳೆ ೧೫-೩೫ ಸೆಂ. ಮೀ. ವರೆಗೆ ಬೀಳುವುದು. ದೇಶದ ವಾಯುವ್ಯ ಭಾಗದಲ್ಲಿ ಮತ್ತು ಮಹಾರಷ್ಟ್ರದಲ್ಲಿ ಮಳೆ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಆಗುವುದು. ಕರ್ನಾಟಕ ತಮಿಳುನಾಡು ಮತ್ತು ಆಂಧ್ರಪ್ರ್ದೇಶ ರಾಜ್ಯಗಳ ಕೆಲ ಭಾಗಗಳಲ್ಲಿ ಹಿಂಗಾರು ಮಳೆ ಚಳಿಗಾಲದಲ್ಲಿ ಬೀಳುವುದು. ಇಲ್ಲೆಲ್ಲ ಅಲ್ಪ ಪ್ರಮಾಣದಲ್ಲಿ ಮಳೆಯಾಗುವುದಲ್ಲದೆ ಮಳೆಗಾಲದಲ್ಲೂ ಮಳೆ ಬೀಳದ ದಿನಗಳು ಹೆಚ್ಚು. ಹೀಗಾಗಿ ಮೇಲಿಓದ ಮೇಲೆ ತೀವ್ರ ಅನಾವೃಷ್ಟಿ. ದಕ್ಷಿಣದ ತಪ್ಪಲಿನ ಎರೆ ಭೂಮಿಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ಇಂಗುವುದರಿಂದ ಬೆಳೆಗಳಿಗೆ ಮಳೆ ನೀರು ಸಾಕಾಗುವುದಿಲ್ಲ. ಅಲ್ಪಯೃಷ್ಟಿ ಪ್ರದೇಶಗಳಲ್ಲಿ ಮುಖ್ಯವಾಗಿ ಸಜ್ಜೆ, ನವಣೆ, ರಾಗಿ, ಜೋಳ, ಸಾಸಿವೆ ಮುಂತಾದವುಗಳನ್ನು ಬೆಳೆಯುತ್ತಾರೆ. ಉತ್ತರ ಭಾರತದಲ್ಲಿ ಸಂಗ್ರಹಿಸಿಟ್ಟ ನೀರಿರುವ ಪ್ರದೇಶದಕಲ್ಲಿ ಚ್ಳಿಗಾಲದ ಉಪಬೆಳೆಗಾಗಿ ಕಡಲೆ, ಬಾರ್ಲಿ. ಸಾಸಿವೆ, ಎಣ್ಣೇಕಾಳು ಮತ್ತು ಗೋಧಿಗಳನ್ನು ಬೆಳೆಯುತ್ತಾರೆ. ಗೋರಿಕಾಯಿ, ಉದ್ದು, ಹೆಸರು ಮುಂತಾದ ದ್ವಿಧಳಧಾನ್ಯಗಳನ್ನು ಸಜ್ಜೆಯ ಜೊತೆ ಮಿಶ್ರ ಬೆಳೆಯಾಗಿ ಬೆಳೆಸುವುದು ಸಾಮಾನ್ಯ. ಗುಜರಾತ್, ಮಹಾರಷ್ಟ್ರ ಮತ್ತು ದಖನ್ನಿನ್ ತಪ್ಪಲಿನ ಕೆಲಭಾಗಗಳಲ್ಲಿ ಸಜ್ಜೆ, ದ್ವಿದಳಧಾನ್ಯ, ಎಳ್ಳನ್ನು ಬೆಳೆಸುವ ಕ್ರಮವಿದೆ. ಕೆಲವು ಮಜ್ಜೆರೆ( ಹೆವಿ ಬ್ಲಾಕ್ ಸಾಯಿಲ್) ಭೂಮಿಗಳಲ್ಲಿ ಅಗಸೆ, ಗೋಧಿ ಬೆಳೆಗಳನ್ನು ಚಳಿಗಾಲದ ಬೆಳೆಗಳಾಗಿ ತೆಗೆಯುತ್ತಾರೆ. ದಖ್ಖನ್ನಿನ ತಪ್ಪಲಿನ ಮಧ್ಯೆ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಜೋಳ, ಶೇಂಗ(ಕಡಲೆಕಾಯಿ) ಮತ್ತು ಹತ್ತಿ ಪ್ರಮುಖ ಬೆಳೆಗಳಾಗಿವೆ. ದಕ್ಷಿಣ ಕರ್ನಾಟಕದ ಅಲ್ಪವೃಷ್ಟಿ ಪ್ರದೇಶಗಳಲ್ಲಿ ರಾಗಿ ಪ್ರಧಾನ ಬೆಳೆ. ಇಟಲಿಯ ಕಿರುಧಾನ್ಯದ(ಮಿಲೆಟ್) ಪೈರನ್ನು ಕರ್ನಾಟಕ ಮತ್ತು ತಮಿಳುನಾಡಿನ ಕೆಂಪು ಭೂಮಿಯಲ್ಲಿ ಬೆಳೆಸುತ್ತಾರೆ. ತೊಗರಿ, ಉದ್ದುಗಳನ್ನು ರಾಗಿಯಂತ ದವಸಧಾನ್ಯಗಳ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆಸುವರು. ಕೆಲ ಒಣ ಪ್ರದೇಶಗಳಲ್ಲಿ ಒಣಗಡಲೆಯನ್ನು ಜೋಳ ಅಥವಾ ಸಜ್ಜೆಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುವುದಿದೆ.