ಪುಟ:Mysore-University-Encyclopaedia-Vol-1-Part-2.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಮೂರ್ ನದಿ-ಆಮ್ಲ ಕೈಗಾರಿಕೆ ಈ ಎರಡೂ ಭಾಷೆಗಳು ಸೇರಿದಂತೆ 40 ವಿಮರ್ಶಾ ಗ್ರಂಥಗಳನ್ನೂ 500ಕ್ಕೂ ಹೆಚ್ಚು ವಿಮರ್ಶಾ ಲೇಖನಗಳನ್ನೂ ಬರೆದಿದ್ದಾರೆ,ಆಳವಾದ ಅಧ್ಯಯನ,ಪ್ರತಿಭೆ,ಪಾಂಡಿತ್ಯ ಕ್ಷೇತ್ರದಲ್ಲಿ ಮಹತ್ವ ಗಳಿಸಿದ್ದು,ವಿದ್ವಾಂಸರ ಆದರಕ್ಕೂ ಪಾತ್ರವಾಗಿದೆ,

ಆಮೂರ ಅವರ ವಿಮರ್ಶೆ ನಾಲ್ಕು ಸ್ತರಗಳಲ್ಲಿ ಪ್ರಕಟಗೊಂಡಿದೆ.ಕನ್ನಡ ಸಾಹಿತ್ಯ ವಿಮರ್ಶೆ ,ಇಂಗ್ಲಿಷ್ ನಲ್ಲಿ ಬಂದ ಭಾರತೀಯ ಸಾಹಿತ್ಯ,ಅಮೇರಿಕನ್ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ನಲ್ಲಿ ವಿಮರ್ಶೆ.ತಾತ್ವಿಕ ಮತ್ತು ಆನ್ವಯಿಕ ಆಧ್ಯಯನವೇ ಇವರ ವಿಮರ್ಶಾ ಕೃತಿಗಳಲ್ಲಿ ಕಾಣುವ ಮುಖ್ಯ ಆಂಶಗಳಾಗಿವೆ,ಮಹಾಕವಿ ಮಿಲ್ಟನ್ (1958 ) ,ಕೃತಿಪರೀಕ್ಷೆ (1970) ಸಮಕಾಲೀನ ಕಥೆ,ಕಾದಂಬರಿ (1988),ಭುವನದ ಭಾಗ್ಯ (1991), ವ್ಯವಸಾಯ (1992) .ಕಾಮಿಡಿ (1993) ,ಕನ್ನಡ ಕಥನ ಸಾಹಿತ್ಯ ಕಾದಂಬರಿ(1994),ಸಾತ್ವಿಕ ಕಥ (1995),ಆಧುನಿಕ ಕನ್ನಡ ಸಾಹಿತ್ಯ ವಿರಾಟ್ ಪುರುಷ (1998) ,ಕಾದಂಬರಿಯ ಸ್ವರೂಪ ಹೊಸ ಚಿಂತನೆ (1999),ದತ್ತಾತ್ತ್ರೇಯ ರಾಮಚಂದ್ರ ಬೇಂದ್ರೆ (2000) ,ಬೇಂದ್ರೆ ಕಾವ್ಯದ ಪ್ರತಿಮಾ ಲೋಕ (2000),ಅಮೃತ ವಾಹಿನಿ ( 2000),ಸೀಮೋಲ್ಲಂಫನ (2002),ಕನ್ನಡ ಸಣ್ಣಕಥೆ ( 2003)-ಇವು ಇವರ ಕೆಲವು ಪ್ರಮುಖ ವಿಮರ್ಶನ ಕೃತಿಗಳು.