ಪುಟ:Mysore-University-Encyclopaedia-Vol-1-Part-2.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯುಧಗಳು. ಅರ್ಧಚಂದ್ರಕಾರದ ಕೊಡಲಿಯ ಭಾಗವನ್ನು ಪಡೆದ ಈ ಸಾಧನವನ್ನು ಚಂದ್ರಾಯಧ ವೆಂದೂ ಕೆಲವು ಕಡೆ ಕರೆಯುತ್ತಾರೆ.ಜನಪದ ಕಥೆಗಳಲ್ಲಿ ವಿಶೇಷವಾಗಿ ಬಳಕೆಯಾಗಿರುವ ಚಂದ್ರಯಧ ಬಹುಶಃ ವಿಶಿಷ್ಟ ರೀತಿಯ ಖಡ್ಗ. ಕೊಡಲಿಗಳಲ್ಲಿ ಕೈಗೊಡಲಿ,ಎಡಗೊಡಲಿ ಮುಖ್ಯವಾದುವು.ಕೈಗೊಡಲಿ,ಸಣ್ಣ ಆಕಾರದ ಸಾಧನ.ಎಡಗೊಡಲಿ ಎರಡು ಕೈಯಿಂದಲೂ ದೊಡ್ಡ ವಸ್ತುಗಳನ್ನು ಕಡಿಯಲು ಬಳಸುವ ಭಾರವಾದ ಸಾಧನ.ಸುತ್ತಿಗೆಗಳೂ ಇದೇ ವರ್ಗಕ್ಕೆ ಸೇರಿದರೂ ದುಂಡಾದ ಭಾಗಗಳನ್ನು ಪಡೆದು ಗಟ್ಟಿಯಾದ ಪದಾರ್ಥಗಳನ್ನೂ ವಿಶೇಷವಾಗಿ ಕಲ್ಲು,ಲೋಹಗಳನ್ನೂ ಹೊಡೆಯಲು ಬಳಸಲಾಗುತ್ತದೆ.

೪ ಬರ್ಜಿಗಳು:ಬೇಟೆಗಾಗಿ ಬಳಸುವ ಈ ಉದ್ದವಾದ ಸಾಧನಗಳ ತುದಿಯಲ್ಲಿ ಮೊನಚಾದ,ಚೂಪಾದ ಲೋಹದ ಭಾಗವಿರುತ್ತದೆ.ತಿವಿಯಲು ಬಳಸುವ ಭರ್ಜಿಗಳು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಉಳಿದಿವೆ.ಹಂದಿಯ ಬೇಟೆಯಲ್ಲಿ ಬಳಸುವ ಭರ್ಜಿ,ಹಾವನ್ನು ಕೊಲ್ಲುವ ಭರ್ಜಿ,ಯುದ್ದಗಳಲ್ಲಿ ಬಳಸುವ ಭರ್ಜಿ ಅಥವಾ ಭಲ್ಲೆಗಳು ವಿಶಿಷ್ಟ ಆಕಾರಗಳಲ್ಲಿ ಇರುತ್ತವೆ.ಎಸೆಯುವ ಭಲ್ಲೆಗಳನ್ನೂ ಕಾಣಬಹುದು.ವಿಶ್ವದಾದ್ಯಂತ ಭರ್ಜಿಗಳು ಬಳಕೆಯಲ್ಲಿದೆ.ಭರ್ಜಿಯ ತುದಿ ಹರಿತವಾದ ಚಪ್ಪಟೆ ಬಾಯನ್ನು ಪಡೆದಿರಬಹುದು.ಇಲ್ಲವೆ ಚಪ್ಪಟೆ ಅಥವಾ ದುಂಡಾದ ಭಾಗದೊಡನೆ ಮೊನಚಾದ ಬಾಯನ್ನು ಪಡೆದಿರಬಹುದು.ಕಾವಿನ ಭಾಗ ಒಂದು ಮಾರಿನಾಷ್ಟಿದ್ದು ಮರದ,ಬಿದಿರಿನ ಭಾಗವಾಗಿರುತ್ತದೆ.ಲೋಹದ ಕಾವೂಗಳೂ ಇರಬಹುದು. ಖಡ್ಗಗಳು: ಕತ್ತರಿಸುವ,ತಿವಿಯುವ ಅಥವಾ ಎರಡು ಉದ್ದೇಶಗಳಿಗೂ ಬಳಸುವ ಬಗೆಗಳಿರುತ್ತವೆ.ಖಡ್ಗದ ಹಿಡಿ ಕಲಾತ್ಮಕವಾಗಿದ್ದು ಕೈಯಿಂದ ಜಾರಿಕೊಳ್ಳದಂತೆ ಮಡಿಕೆಗಳನ್ನು ಪಡೆದಿರುತದೆ.ಅನೇಕ ಬಗೆಯ ಖಡ್ಗಗಳ ಪ್ರತ್ಯೇಕವಾದ ಹೆಸರುಗಳನ್ನೂ ಕಾಣಬಹುದು.ಕತ್ತಿಗಳೆಲ್ಲ ಸಾಮಾನ್ಯವಾಗಿ ಒಂದೇ ಲೋಕದಿಂದ ಮಾಡಲ್ಪಟ್ಟಿರುತ್ತವೆ.ಕಠಾರಿಗಳನ್ನು ಈ ಗುಂಪಿಗೇ ಸೇರಿಸಬಹುದು.ಕಡಿಯುವ,ಇರಿಯುವ,ಚುಚ್ಚುವ,ಬಗೆಯುವ,ಹೆರೆಯುವ,ಹರಿಯುವ ಚಿಕ್ಕ ಚಿಕ್ಕ ಸಾಧನಗಳೂ ಈ ಗುಂಪಿಗೇ ಸೇರುತ್ತವೆ. ಕ್ಷೌರಿಕನ ಕತ್ತಿ ಮರದ ಹಿಡಿಯನ್ನು ಪಡೆದಿರುತ್ತದೆ.ಕುಡುಗೋಲು,ಚಾಕು,ಚೂರಿಗಳಿಗೂ ಹಿಡಿಗಳಿರುತ್ತವೆ.ಕುಡುಗೋಲಿನಲ್ಲಿ ಹತ್ತಾರು ಬಗೆಗಳಿವೆ.ಸೊಪ್ಪಿನ ಕುಡುಲು,ಉಜ್ಜುಗರಿ,ಕೈಗುಡುಲು,ಹರಿಗುಡುಲು,ಜವಣಿ ಕುಡುಲು ಮುಂತಾದುವು ಆಯಾ ಉದ್ದೇಶಕ್ಕೆ ತಕ್ಕಂತೆ ಬೇರೆಬೇರೆ ಆಕಾರದಲ್ಲಿಯೇ ಇರುತ್ತವೆ. ಕುಡುಲಿನ ಜಾತಿಗೆ ಸೇರಿದ, ಇನ್ನೂ ದೊಡ್ಡದಾದ ಮಚ್ಚು ಬಲಿಗೆ ಪ್ರಸಿದ್ದವಾದುದು. ಬಲಿಮಚ್ಚು ಅಥವಾ ಕಂದಲು ವಿಶಿಷ್ಟ ಉದ್ದೇಶಕಾಗಿ ಹಬ್ಬಗಳಲ್ಲಿ ಕುರಿಯನ್ನೊ ಕೋಣವನ್ನೋ ಮಾರಿಗೆ ಬಲಿಗೊಡಲು ಮಾತ್ರ ಬಳಸುವ ಸಾಧನವಾಗಿರುತ್ತದೆ. ಎರಡು ಕಡೆಯೂ ಬಾಯುಲಳ್ಳ ಮಚ್ಚುಗಳು ಮನೆಬಳಕೆಯ ವಸ್ತುಗಳಾಗಿವೆ.

ಚಾಕುಗಳಲ್ಲೂ ಅನೇಕ ಆಕಾರಗಳನ್ನುಗುರುತಿಸ ಬಹುದು. ಹೆಂಗಸರು ಸದಾಕೊರಳಲ್ಲಿ ಧರಿಸುವ ಹಲ್ಲುಕಡ್ಡಿ, ಗುಗ್ಗೆಕಡ್ಡಿಗಳ ಜೊತೆಯಲ್ಲಿ ಕಿರುಬೆರಳುದ್ದದ ಕುಡಲಿನಾಕಾರದ ಬೆಳ್ಳಿಯ ಚಾಕುವನ್ನು ಇಟ್ಟಿರುತ್ತಾರೆ. ಸಣ್ಶ ಸಣ್ಶ ಚಾಕುಗಳನ್ನು ಪ್ರತಿಯೊಬ್ಬ ಪುರುಷನೂ ತನ್ನ ಸೊಂಟದಲ್ಲಿ ಕಟ್ಟಿಕೊಂಡಿರುವ ಬಗೆಯನ್ನು ಈಗಲೂ ವಿಶೇಷವಾಗಿ ಕಾಣಬಹುದು.

ಸೊಂಟದಪತಟ್ಟಿಯಂತೆ ಬಳಸುವ, ಊರುಗೋಲಿನಲ್ಲಿ ಹುದುಗಿಸಿಡುವ ಕತ್ತಿಗಳನ್ನು ಈಗಲೂ ವಸ್ತುಸಂಗ್ರಹಾಲಯಗಳಲ್ಲಿ ಕಾಣಬಹುದು.

(ಆ) ಎಸೆಯುವ ಸಾಧನಗಳು:i ಎಸೆಯುವ ಸಾಧನಗಳ ಗುಂಪ್ಪಿಗೆ ನೈಸರ್ಗಿಕ ವಸ್ತುಗಳೂ ತಯಾರಿಸಿದ ವಸ್ತುಗಳೂ ಸೇರುತ್ತವೆ.ದೊಣ್ಣೆಗಳು,ಭರ್ಜಿಗಳು,ಈಟಿಗಳು ತಯಾರಿಸಿಕೊಂಡ ಸಾಧನಗಳಾದರೆ ಕವಣೆಗೆ ಆರಿಸಿಕೊಳ್ಳುವ ವಸ್ತುಗಳು,ಕೆಲವು ಬಗೆಯ ಕೋಲುಗಳು ಎಸೆಯುವ ನೈಸರ್ಗಿಕ ಸಾಧನಗಳು. ಬಾಣದ ಬುಡಕ್ಕೆ ದಾರವನ್ನು ಕಟ್ಟಿ ಪ್ರಯೋಗಿಸಿದ ಮೇಲೆ ಮತ್ತೆ ಹಿಂದಕ್ಕೆ ಪಡೆದುಕೊಳ್ಳುವ ಸಾಧನಗಳೂ ಈ ಗುಂಪ್ಪಿನಲ್ಲೇ ಬರುತ್ತವೆ.ಬಿಲ್ಲುಬಾಣಗಳು, ಎಲ್ಲ ಬಗೆಯ ಚಿಮ್ಮವ,ಎಸೆಯುವ,ಪ್ರಯೂಗಿಸುವ ಸಾಧನಗಳು ಈ ವರ್ಗಕ್ಕೆ ಸೇರುತ್ತದೆ. ಆಧುನಿಕ ಫಿರಂಗಿ, ಬಂದೂಕು ಮುಂತಾದುವನ್ನೂ ಇಲ್ಲೆಯೇ ಹೆಸರಿಸಬಹುದು.

೧೧) ಸ್ವತಂತ್ರ ಚಾಲನೆಯ ಆಯುಧಗಳು: ಪ್ರಾಣಿಗಳನ್ನೂ ಶತ್ರುಗಳನ್ನೂ ಇದ್ದಕ್ಕಿದ್ದಂತೆ ಗಾಯಗೊಳಿಸುವ, ಬಂಧಿಸುವ ಸಾಧನಗಳು ಈ ವರ್ಗಕ್ಕೆ ಸೇರುತ್ತದೆ. ಬೋನುಗಳೂ ಈ ದೃಷ್ಟಿಯಿಂದ ಆಯುಧಗಳೇ. ಆಳವಾದ ಗುಳಿಗಳನ್ನು ತೋಡಿ ಸಲಾಕೆಗಳನ್ನು ವಿಷಮುಳ್ಳುಗಳನ್ನು ನೆಟ್ಟ ಶತ್ರುಗಳನ್ನು ಗಾಯಗೊಳಿಸಿದ ಪ್ರಸಂಗಗಳು ಜನಪದ ಕಥೆಗಳಲ್ಲಿ, ಲಾವಣಿಗಳು ವಿಶೇಷವಾಗಿ ಬರುತ್ತವೆ.
ಇ)ಆತ್ಮ‍ರಕ್ಷಣೆಯ ಸಾಧನೆಗಳು: ಎಲ್ಲ ಬಗೆಯ ಆಯುಧಗಳು ಒಂದಲ್ಲ ಒಂದು ರೀತಿಯಲ್ಲಿ ಆತ್ಮ‍ರಕ್ಷಣೆಯ ಸಾಧನೆಗಳು. ಆದರೂ ಅದಕ್ಕಾಗಿಯೇ ಮೀಸಲಾದ ಸಾಧನ ಸಲಕರಣೆಗಳೂ ಮುಖ್ಯವಾಗಿ ಗಮನಿಸಬೇಕಾದುವು. ಪ್ರಾಚೀನ ಕಾಲದಿಂದಲೂ ಬಳಸಲ್ಪಡುತ್ತಿರುವ ಗುರಾಣಿ ಇದಕ್ಕೆ ಒಳ್ಳೆಯ ಉದಾಹರಣೆ. ಕೆಲವು ಸಂದರ್ಭಗಳಲ್ಲಿ ಅದರ ಮೇಲುಹೊದಿಕೆಯಲ್ಲಿ ಚೂಪಾದ ಭಾಗಗಳಿದ್ದು ಅದೂ ಆಯುಧವಾಗಿಯೇ ಬಳಸಲ್ಪಡಬಹುದು. ಉಕ್ಕೆನ ರಕ್ಷಾಕವಚಗಳು ಶಿರಸ್ತ್ರಾಣಗಳು, ಕೈಕಟ್ಟು, ಕಾಲ್ಕಟ್ಟುಗಳೂ ಆತ್ಮರಕ್ಷಣೆಯ ಸಾಧನಗಳು.
  

ಆಯುಧಗಳಲ್ಲಿ ಪವಿತ್ರವಾದ ಸಾಧನಗಳೂ ಕೆಲವಿದೆ. ತಮ್ಮ ಕುಲಗುರುವೊ, ಮನೆತನದ ಹಿರಿಯರೊ ಬಳಸಿದ ಆಯುಧವಿಶೇಷಗಳನ್ನು ಮನೆಗಳಲ್ಲಿಟ್ಟು ಪೂಜಿಸುವ ವಾಡಿಯಿದೆ. ಕೆಲವು ದೈವಗಳ ಆರಾಧನೆಯಲ್ಲಿ ಆ ದೈವದ ಆಯುಧವಿಶೇಷವನ್ನೇ ಇಟ್ಟು ಪೂಜಿಸುವ ಬಗೆಯನ್ನು ಕಾಣಬಹುದು. ಭೈರವನ ಪೂಜೆಯಲ್ಲಿ ತ್ರಿಶೂಲ, ಸಿದ್ದಪ್ಪಾಜಿಯ ಪೂಜೆಯಲ್ಲಿ ಕಂಡಾಯ ಮುಂತಾದವು. ಮಾದೇಶ್ವರನ ಭಕ್ತರು ತಮ್ಮ ಕುಲದೈವ ಹಿಡಿದ ಕೋಲನ್ನೇ ಪೂಜಿಸುತ್ತಾರೆ.

ಕೆಲವು ಆಯುಧಗಳಲ್ಲಿ ವಿಷವನ್ನೂ ಲೇಪಿಸಿ ಬಳಸುವ ವಾಡಿಕೆಯಿದೆ. ಕೆಲವು ಆಯುಧವಿಶೇಷಗಳಲ್ಲಿ ಅನೇಕ ನಂಬಿಕೆಗಳೂ ಮನೆಮಾಡಿಕೊಂಡಿರುತ್ತವೆ. ಮದುವೆಗಳಲ್ಲಿ ವರನ ಕೈಯಲ್ಲಿ ಬಣ್ಣದ ವಸ್ತ್ರ ಸುತ್ತಿದ ಕಠಾರಿಯನ್ನು ಕೊಡುವ ವಾಡಿಕೆ ಈಗಲೂ ನಡೆದುಬಂದಿದೆ.ಅಂಕೋಲೆದೊಣ್ಣೆಯನ್ನು ಕೈಯಲ್ಲಿ ಹಿಡಿದು ಹೊರಟರೆ,ಮನೆಗಳಲ್ಲಿ ಇರಿಸಿದರೆ,ಭೊತ ಪ್ರೇತಗಳು ಹತ್ತಿರ ಸುಳಿಯವು ಎಂದು ಕೆಲವು ಕಡೆ ನಂಬಲಾಗಿದೆ.ಭೂತಗಳನ್ನು ಬಿಡಿಸುವ ವಿಶಿಷ್ಟ ಆಕಾರದ ಬೆಳ್ಳಿಯ ಹಿಡಿಯ ಕೋಲುಗಳೂ ಇರುತ್ತವೆ.ಕಳ್ಳರು ಬಳಸುವ ಕನ್ನಗತ್ರಿಯೂ ಗಮನಿಸಬೇಕಾದ ಆಯುಧವೇ

ರೈತ ಬಳಸುವ ಸಾಧನಗಳಲ್ಲಿ ವ್ಯವಸಾಯ ಹಾಗೂ ಮನೆಬಳಕೆಯ ಸಾಧನಗಳೇ ಆಯುಧಗಳೂ ಆಗುತ್ತವೆ.ಮೂಲನಿವಾಸಿಗಳ ಆಯುಧಗಳನ್ನು ಈ ದೃಷ್ಟಿಯಿಂದಲೇ ಪರಿಗಣಿಸಬೇಕಾಗುತ್ತದೆ. ಹಾರೆ,ಗುದ್ದಲಿ,ಪಿಕಾಸಿ,ಬಾಚಿ,ಕಳೆಕೊಕ್ಕೆ,ಕುಡುಲು,ಕೊಡಲಿ ಮುಂತಾದುವು ಆಯುಧಗಳೂ ಹೌದು,ರೈತನ ಸಾಧನಗಳೂ ಹೌದು.ಆಯುಧಪೂಜೆ ಕರ್ನಾಟಕದಲ್ಲಿ ಒಂದೆ ವಿಶಿಷ್ಟ ಆಚರಣೆಯಾಗಿ ಬೆಳೆದಿದೆ.ನವರಾತ್ರಿಯ ಕಾಲದಲ್ಲಿ ನಡೆಯುವ ಈ ಪೂಜೆ ಗ್ರಾಮಾಂತರ ಪ್ರದೇಶಗಳಲ್ಲೂ ವ್ಯಾಪಿಸಿದ್ದು ಈ ಸಂದರ್ಭದಲ್ಲಿ ವಾಹನಗಳನ್ನೂ ವ್ಯವಸಾಯ ಸಾಧನಗಳನ್ನೂ ಆಯುಧವಿಶೇಷಗಳನ್ನೂ ಇಟ್ಟು ಪೂಜಿಸಲಾಗುವುದು.