ಪುಟ:Mysore-University-Encyclopaedia-Vol-1-Part-2.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯುಧ ಉಕ್ಕು - ಆಯುರ್ವೇದ

ಆಯುಧದ ಉಕ್ಕು: ಎಲ್ಲ ವಿಧದ ಆಯುಧಗಳನ್ನು ಕಡೆತದ ಯಂತ್ರಗಳಲ್ಲಿ (ಲೇತ್) ಉಪಯೋಗಿಸಲು ಬೇಕಾದ ಸಣ್ಣ ಸಣ್ಣ ಆಯುಧಗಳನ್ನೂ ( ಹತ್ಯಾರುಗಳು, ಬೈರಿಗೆಯ ತುಣುಕುಗಳು ಇತ್ಯಾದಿ) ತಯಾರಿಸಲು ಬಳಸುವ ವಿಶೇಷ ತರಹದ ಉಕ್ಕು. ಓಪನ್ ಹಾರ್ತ್ ನಲ್ಲಾಗಲಿ ಬೆಸೆಮರ್ ಮೂಸೆಯಲ್ಲಾಗಲಿ ತಯಾರಾಗುವ ಸಾಮಾನ್ಯವಾದ ಉಕ್ಕು ಮೆದು. ಇದನ್ನು ಗಟ್ಟಿಮಾಡದೆ ಆಯುಧಗಳಿಗೆ ಉಪಯೋಗಿಸಲು ಬರುವುದಿಲ್ಲ. ಇಂಗಾಲದ (ಕಾರ್ಬನ್) ಅಂಶವನ್ನು ಹೆಚ್ಚಿಸಿದರೆ ಉಕ್ಕು ಗದಸೇನೋ (ಹಾರ್ಡ್) ಆಗುತ್ತದೆ, ಆದರೆ ಇದು ಬಹಳ ಭಿದುರ. ಗಡಸಿನ ಜೊತೆಗೆ ಕಠಿಣ್ವಾಗಿಯೂ (ಟಫ಼್) ಇರಬೇಕು. ಇವೆರೆಡು ಗುಣಗಳು ಬರಲು ಇಂಗಾಲದ ಅಂಶವನ್ನು ಹೆಚ್ಚು ಮಾಡುವುದರ ಜೊತೆಗೆ ಕೆಲವು ವಿಶೇಷವಾದ ಲೋಹಗಳನ್ನು ನಿರ್ದಿಷ್ಟ ಪ್ರಮಾಣಗಳಲ್ಲಿ ಬೆರೆಸುತ್ತಾರೆ. ಸಾಮಾನ್ಯವಾಗಿ ಕ್ರೋಮಿಯಂ, ನಿಕ್ಕಲ್, ವೆನೇಡಿಯಂ, ಮ್ಯಾಲೆಬ್ಡೆನಂ ಮತ್ತು ಟಂಗ್ ಸ್ಟನ್ ಎಂಬ ಲೋಹಗಳನ್ನು ಬೆರೆಸುತ್ತಾರೆ. ಎಷ್ಟೆಷ್ಟು ಪ್ರಮಾಣಗಳಲ್ಲಿ ಇವನ್ನು ಬೆರೆಸಬೇಕೆಂಬುದು ಆಯುಧದ ಉಪಯೋಗದ ಅವಶ್ಯಕತೆಗಳನ್ನು ಅವಲಂಬಿಸಿದೆ. ಆಯುಧ ಉಕ್ಕುಗಳಲ್ಲಿ ಸಾವಿರಾರು ವಿಭಾಗಗಳಿವೆ. ಮುಖ್ಯವಾದ ಕೆಲವು ಉಕ್ಕುಗಳ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ: ಮಿಶ್ರಣ ಕ್ರೋಮಿಯಂ ಕ್ರೋಮಿಯಂ ಕ್ರೋಮಿಯ್ಂ ಕ್ರೋಮಿಯಂ ವಸ್ತು ಉಕ್ಕು ವೆನೇಡಿಯಂ ನಿಕ್ಕಲ್ಲ್ ಉಕ್ಕು ಮಾಲಿಬ್ಡೆನಂ ಕಾರ್ಬನ್% 0.9-1.1 0.5-1.0 0.4-0.75 0.4-0.75 ಮ್ಯಾಂಗನೀಸ್ 0.25 0.25 0.40 0.40 ಕ್ರೋಮಿಯಂ% 1.0-2.0 0.75-1.5 0.75-2.25 0.75-1.5 ವೆನೇಡಿಯಂ% - 0.20 - - ನಿಕ್ಕಲ್% - - 1.0-2.0 1.0-2.0 ಮಾಲಿಬ್ಡೆನಂ% - - - 0.2-0.5


ಮೇಲ್ಕಂಡ ಆಯುಧದ ಉಕ್ಕುಗಳನ್ನು ಮೂಸೆಯಿಂದ ಹೊರಬಂದು ಅಚ್ಚಾದ ಮೇಲೆ ಒಂದು ವೆಶೇಷವಾದ ಉಷ್ಣಸಂಸ್ಕಾರಕ್ಕೆ (ಹೀಟ್ ಟ್ರೀಟ್ಮೆಂಟ್) ಒಳಪಡಿಸಲಾಗುವುದು. ಪರಿಣಾಮವಾಗಿ ಅವುಗಳಿಗೆ ಬೇಕಾದ ವಿಶೇಷಗುಣಗಳು ಬರುತ್ತವೆ. ಮಿಶ್ರಲೋಹಗಳ ಪ್ರಮಾಣದ ಮೇಲೆಯೂ ಇಂಗಾಲ ಅಂಶದ ಮೇಲೆಯೂ ಅವಲಂಬಿಸಿ ಈ ಉಷ್ಣಸಂಸ್ಕಾರಗಳೂ ಸ್ವಲ್ಪ ಸ್ವಲ್ಪ ವ್ಯತ್ಯಾಸವಾಗುತ್ತವೆ. ಸಾಮಾನ್ಯವಾಗಿ ಈ ತರಹದ ಉಕ್ಕನ್ನು ಚೆನ್ನಾಗಿ ಕೆಂಪಗೆ ಕಾಯಿಸಿ, ತಕ್ಷಣ ಅದನ್ನು ನೀರಿನಲ್ಲಾಗಲಿ ಎಣ್ಣೆಯಲ್ಲಗಲಿ ಅದ್ದಿ ತಣ್ಣಗೆ ಮಾಡಿ (ಕ್ವೆಂಚಿಂಗ್) ಆಮೇಲೆ ಪುನಃ ಅವುಗಳನ್ನು ಸುಮಾರು 120-220 ಸೆಂ.ಗ್ರೇ. ವರೆಗೆ ನಿಧಾನವಾಗಿ ಕಾಯಿಸಿ, ನಿಧಾನವಾಗಿ ಆರಿಸಬೇಕು (ಹದಗೊಳಿಸುವಿಕೆ, ಟೆಂಪರಿಂಗ್)ಇಂಥ ಲೋಹ ಉಪಯೋಗಕ್ಕೆ ಸಿದ್ಧವಾಗುವುದು.

ಆಯುಧದ ಉಕ್ಕುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಅತಿವೇಗದ ಉಕ್ಕು (ಹೈಸ್ಪೀಡ್ ಸ್ಟೀಲ್). ಕೆಲವು ವಿಶೇಷ ಉಕ್ಕಿನಿಂದ ತಯಾರಿಸಲ್ಪಟ್ಟ ಯಂತ್ರಭಾಗಗಳನ್ನು ಹತ್ತರಿಸಲು, ನುಣುಪು ಮಾಡಲು ಸಾಮಾನ್ಯವಾದ ಆಯುಧದ ಉಕ್ಕು ಸಮರ್ಥವಲ್ಲ. ಸ್ವಲ್ಪಹೊತ್ತಿನಲ್ಲಿಯೇ ಆಯುಧ ಕೆಂಪಾಗಿ ತುದಿ ಮೆತ್ತಗಾಗಿ ಕೆಲಸವೇ ನಿಂತುಹೋಗುವುದು. ಕೆಲಸ ನಡೆಯುತ್ತಿರುವಾಗ ಉತ್ಪತ್ತಿಯಾಗುವ ಉಷ್ಣದಿಂದ ಕೆಂಪಾಗಿರುವಾಗಲೂ ತನ್ನ ಕಾಠಿಣ್ಯ ಕಳೆದುಕೊಳ್ಳದ ಒಂದು ತರಹದ ಉಕ್ಕು ಅವಶ್ಯ. ಇದೇ ಅತಿವೇಗದ ಉಕ್ಕು. ಇದನ್ನು ಸಾಮಾನ್ಯವಾಗಿ 18:4:1 ಉಕ್ಕು ಎಂದು ಕರೆಯುವುದು ವಾಡಿಕೆ. ಇದರಲ್ಲಿ ಕಾರ್ಬನ್ ಶೇ. 0.5-0.8, ಮ್ಯಾಂಗನೀಸ್ ಶೇ. 0.25, ಟಂಗ್ಸ್ಟನ್ ಶೇ. 18, ಕ್ರೋಮಿಯಂ ಶೇ. 4, ವೆನೇಡಿಯಂ ಶೇ.1 ಇರುತ್ತವೆ. ಇದರಲ್ಲಿಯೂ ಈ ಮಿಶ್ರಲೋಹದ ಉಷ್ಣಸಂಸ್ಕಾರ ಆವಶ್ಯಕ. ಅದನ್ನು ಸಾಮಾನ್ಯವಾಗಿ 1175*-1320* ಸೆಂ.ಗ್ರೇ ವರೆಗೆ ಕಾಯಿಸಿ ಎಣ್ಣೆಯಲ್ಲಾಗಲಿ ವಿಶೇಷವಾದ ದ್ರವ ಪದಾರ್ಥಗಳಲ್ಲಾಗಲಿ ಅದ್ದಿ ವಾತಾವರಣದ ಉಷ್ಣತೆಗೆ ಇಳಿಸಿ ಅದನ್ನು ಪುನಃ ಸುಮಾರು 540*-595* ಸೆಂ.ಗ್ರೇ ವರೆಗೆ ಕಾಯಿಸಿ ನಿಧಾನವಾಗಿ ಆರಿಸುತ್ತಾರೆ. ಮೂರನೆಯ ಬಾರಿ ಪುನಃ ಸುಮಾರು 320*-345* ಸೆಂ.ಗ್ರೇ ವರೆಗೆ ಕಾಯಿಸಿ ನಿಧಾನವಾಗಿ ಆರಿಸುತ್ತಾರೆ. (ಕೆ.ಆರ್)

ಆಯುರ್ವೇದ: ಭಾರತೀಯ ವೈದ್ಯ ಪದ್ಧತಿ. ಅಥರ್ವಣವೇದದ ಉಪವೇದವೆಂದೂ ಬ್ರಹ್ಮನಿಂದ ಬಂದಿದೆಯೆಂದೂ ಹೇಳಲಾಗಿದೆ. ಆದ್ದರಿಂದ ಇದು ವೇದದಷ್ಟೇ ಪ್ರಾಚೀನ, ಅಪೌರುಷೇಯ. ದಕ್ಷಪ್ರಜಾಪತಿ, ಅಶ್ವಿನಿ ದೇವತೆಗಳು, ಇಂದ್ರ-ಇವರಿಗೆ ಪರಂಪರಾಗತವಾಗಿ ಅಂದರೆ ಇಂದ್ರನಿಂದ ಭಾರದ್ವಾಜನಿಗೂ ಅವನಿಂದ ಇತರ ಋಷಿಗಳಿಗೂ ಉಪದೇಶಿಸಲ್ಪಟ್ಟಿದೆ ಎಂದಿದೆ. ನಮಗೆ ಗೋಚರವಾಗುವ ಎಲ್ಲ ದ್ರವ್ಯಗಳೂ ಪಂಚಮಹಾಭೂತಗಳ ಸಂಘಟನೆಯಿಂದಾಗಿವೆ. ಚೇತನಾದ್ರವ್ಯವೆನಿಸಿದ ಆತ್ಮನ ಸಂಯೋಗದಿಂದ ಜೀವರಾಶಿಗಳೇರ್ಪಡುತ್ತವೆ. ಈ ತತ್ತ್ವಕ್ಕನುಸಾರವಾಗಿ ಮನುಷ್ಯ ಪಂಚಭೂತ ಮತ್ತು ಆತ್ಮ ಸೇರಿ ಆಗಿರುವ ಪ್ರಾಣಿ. ಇತರ ಪ್ರಾಣಿ. ಸಸ್ಯ, ಖನಿಜ. ಗಾಳಿ, ನೀರು ಮುಂತಾದವುಗಳನ್ನು ಯುಕ್ತಿಯಿಂದ ಉಪಯೋಗಿಸಿಕೊಳ್ಳುತ್ತ ಮನುಷ್ಯ ತನ್ನ ಜೀವನವನ್ನು ಸಾಗಿಸುತ್ತಾನೆ. ಸಾಧನಚತುಷ್ಟಯಗಳಾದ ಧರ್ಮ, ಆರ್ಥ, ಕಾಮ ಮತ್ತು ಮೋಕ್ಷಗಳಿಗೆ ಇವನ ಶರೀರವೇ ಆಧಾರವಾದುದರಿಂದ ಇದನ್ನು ಯಾವ ಭಾದೆಯೂ ಇಲ್ಲದಂತೆ ಬಹುಕಾಲ ಕಾಪಾಡಲು ಪ್ರಯತ್ನ ಪಡುತ್ತಾನೆ. ಇದೇ ಆರೋಗ್ಯರಕ್ಷಣೆ.

ಆರೋಗ್ಯವು ಆಹಾರ, ದೇಶ, ಕಾಲ, ನಿದ್ರೆ, ಬ್ರಹ್ಮಚರ್ಯ, ನಡೆವಳಿಕೆ ಮುಂತಾದವುಗಳನ್ನವಲಂಬಿಸಿದೆ. ಇವುಗಳಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಆರೋಗ್ಯ ಕೆಡುವುದು. ಈ ಅವಸ್ಥೆಯೇ ರೋಗ. ಆರೋಗ್ಯದಲ್ಲೂ ಶರೀರ ಮತ್ತು ಮನಸ್ಸುಗಳ ಸ್ಥಿತಿಗೆ ಪಂಚಭೂತಗಳೇ ಕಾರಣ. ಪಂಚೇಕೃತವಾದ ಭೌತಿಕ ದ್ರವ್ಯಗಳಲ್ಲಿ ಪ್ರಧಾನವಾದುವು ವಾಯು, ಅಗ್ನಿ ಮತ್ತು ಉದಕ. ಇವು ಶರೀರದಲ್ಲಿ ವಾಯು, ಪಿತ್ತ ಮತ್ತು ಕಫ಼ ರೂಪದಲ್ಲಿವೆ. ಇವುಗಳ ಗುಣಕರ್ಮಗಳು ಶರೀರಾವಯವಗಳಿಗೆ (ಧಾತುಗಳಿಗೆ) ಸಮಾನವಾಗಿದ್ದರೆ ದೇಹಪೋಷಣೆಯನ್ನೂ ವಿಷಮವಾಗಿದ್ದರೆ ರೋಗ ಮತ್ತು ಮರಣವನ್ನೂ ಉಂಟುಮಾಡುವುವು. ನಿತ್ಯಜೀವನದಲ್ಲಿ ಆಹಾರಾದಿಗಳ ವ್ಯತ್ಯಾಸವಾಗುತ್ತಿದ್ದು ವಾತ, ಪಿತ್ತ ಮತ್ತು ಕಫ಼ಗಳು ಹೆಚ್ಚುಕಡಿಮೆಯಾಗಿ ಧಾತುಗಳನ್ನು ದೂಷಿಸುವುದರಿಂದ ಇವುಗಳಿಗೆ ದೋಷಗಳೆಂದು ಹೆಸರು ಬಂದಿದೆ. ಧಾತುಗಳು ಬಲಿಷ್ಠವಾಗುವವರೆಗೂ ಆಹಾರಾದಿಗಳ ಹೆಚ್ಚುಕಡಿಮೆಯಿಂದ ಯಾವ ಬಾಧೆಯೂ ತೋರುವುದಿಲ್ಲ. ಆಗ ದೋಷಗಳ ಬಲ ಕಡಿಮೆಯಾಗಿರುವುದು. ಇದಕ್ಕೆ ವಿರುದ್ಧವಾಗಿದ್ದರೆ ದುಷ್ಟದೋಷಗಳು ರೋಗಕ್ಕೆ ಕಾರಣವಾಗುತ್ತವೆ. ಸರಿಯಾದ ವ್ಯಾಯಾಮ, ಸ್ನಿಗ್ಧಾಹಾರ ಮತ್ತು ಹಸಿವು ಇರುವ ಮನುಷ್ಯನಿಗೆ ವಿರುದ್ಧವಾದುವು ಪೀಡಿಸುವುದಿಲ್ಲ. ಆದರೂ ಅಭ್ಯಾಸವಿರುವ ಆಹಾರವನ್ನು ಮಿತವಾಗಿಯೇ ಸೇವಿಸಬೇಕು.


ರೋಗಕ್ಕೆ ಕಾರಣವಾದುದನ್ನು (ರೋಗಹೇತು) ವರ್ಜಿಸುವುದು, ರೋಗಲಕ್ಷಣಗಳಿಂದ (ಲಿಂಗ) ವಿಷಮ ದೋಷಗಳ ವೃದ್ಧಿಕ್ಷಯಗಳನ್ನು ಕಂಡುಹಿಡಿದು, ಅವುಗಳನ್ನು ಸಮಸ್ಥಿತಿಯಲ್ಲಿರಿಸಿ ಧಾತುಗಳ ಬಲವನ್ನು ಹೆಚ್ಚಿಸುವುದು(ಔಷಧ)- ಈ ವೈದ್ಯಪದ್ಧತಿಯ ತತ್ವಗಳು. ಹೇತುಲಿಂಗೌಷಧ ಜ್ಞಾನವನ್ನನುಸರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಎಲ್ಲಾ ಕಾಲಕ್ಕೂ ವಿಹಿತವಾಗಿವೆ. ಶರೀರದಲ್ಲಿ ಉತ್ಪತ್ತಿಯಾಗುವ ವಾತವಿಣ್ಮೂತ್ರಾದಿಗಳ ವೇಗಗಳನ್ನು ತಡೆಯುವುದು. ವೇಗವಿಲ್ಲದಿರುವಾಗ ಅದನ್ನು ಉಂಟುಮಾಡುವುದಕ್ಕೆ ಪ್ರಯತ್ನಿಸುವುದು ಎಲ್ಲ ರೋಗಗಳಿಗೂ ಸಾಮಾನ್ಯ ಕಾರಣವಾಗುವುವು. ಶಾರೀರಿಕ ಕ್ರಿಯೆಯಲ್ಲಿ ವ್ಯತ್ಯಾಸವಾಗಿ ಉಂಟಾಗುವ ರೋಗಕ್ಕೆ ನಿಜರೋಗವೆಂದೂ ಅಪಘಾತ, ಅಗ್ನಿ, ವಿಷ ಮುಂತಾದ ಹೊರಗಿನ ಕಾರಣಗಳಿಂದ ಸಂಭವಿಸುವ ರೋಗಕ್ಕೆ ಆಗಂತುಕವೆಂದೂ ಹೆಸರು. ಆಗಂತುಕದಲ್ಲಿ ಬಾಧೆಯಾದ ಆನಂತರ ದೂಷವೈಷಮ್ಯ ಕಂಡುಬರುವುದು. ಚಿಕಿತ್ಸೆಯನ್ನು ದೋಷಕ್ಕೆ ತಕ್ಕಂತೆಯೂ ವ್ಯಾಧಿಗೆ ತಕ್ಕಂತೆಯೂ ಎಂದರೆ ದೋಷಪ್ರತ್ಯನೀಕ ಮತ್ತು ವ್ಯಾಧಿಪ್ರತ್ಯನೀಕವೆಂದು ಎರಡು ಭಾಗ ಮಾಡುವುದುಂಟು. ರೋಗ ತನ್ನ ಸ್ಪಷ್ಟ ರೂಪವನ್ನು ಹೊಂದುವುದಕ್ಕೆ ಮೊದಲು ಶೋಧನ ಅಥವಾ ಶಮನಕ್ರಿಯೆಗಳಿಂದ ದೋಷಗಳನ್ನು ಸರಿಪಡಿಸುವುದು ದೋಷಪ್ರತ್ಯನೀಕ. ರೋಗ ಸ್ಪಷ್ಟವಾಗಿ ಮುಂದುವರಿಯುತ್ತಿದ್ದರೆ ರೋಗಹರಣಮಾಡುವ ಸಿದ್ಧೌಷಧ ಪ್ರಯೋಗ ವ್ಯಾಧಿಪ್ರತ್ಯನೀಕವೆನಿಸುವುದು. ಚಿಕಿತ್ಸೆಗೆ ಕೇವಲ ಔಷಧಗಳೇ ಅಲ್ಲದೆ ಕ್ಷಾರ ಕರ್ಮ, ಶಸ್ತ್ರಕರ್ಮ ಮತ್ತು ಅಗ್ನಿಕರ್ಮಗಳೆಂಬ ಬೇರೆ ಬೇರೆ ಉಪಾಯಗಳಿವೆ. ಕ್ಷಾರ ಮತ್ತು ಅಗ್ನಿಕರ್ಮಗಳು ದುರ್ಮಾಂಸ, ವಿಷದಂಶ ಮುಂತಾದುವನ್ನು ಸುಡುವುದರಲ್ಲೂ ಶಸ್ತ್ರಕರ್ಮ, ಶಲ್ಯಾಹರಣ, ವಿದ್ರಧಿ (ಕುರು ಅಥವ ಬಾವು), ಅಧಿಮಾಂಸ, ಅಸ್ಥಿಭಗ್ನ ಮುಣ್ತಾದವುಗಳಲ್ಲೂ ಉಪಯೋಗವಾಗಿವೆ. ನಾಡೀಪರೀಕ್ಷೆ, ಪಂಚಕರ್ಮ, ಲೋಹಾದಿಗಳ ಭಸ್ಮ ಪ್ರಯೋಗಗಳು ಚಿಕಿತ್ಸೆಯಲ್ಲಿ ಬಹಳ ಉಪಯುಕ್ತವಾಗಿವೆ. ವೈದ್ಯರು ತ್ಮಗೆ ಬೇಕಾದ ಔಷಧಿಗಳನ್ನು ತಾವೇ ತಯಾರಿಸಿಕೊಳ್ಳುವುದು, ಏಕಮೂಲಿಕಾ ಪ್ರಯೋಗ, ಪಥ್ಯಕ್ರಮ, ಋತುಗಳಿಗೆ ತಕ್ಕ ಆಹಾರ ವಿಹಾರ ನಿಯಮಗಳು- ಇವೆ ಆಯುರ್ವೇದದ ವೈಶಿಷ್ಟ್ಯಗಳು.

ದೀರ್ಘಯಸ್ಸು, ಸ್ಮೃತಿ, ಮೇಧಾಶಕ್ತಿ ಮುಂತಾದುವನ್ನು ಪಡೆಯುವುದಕ್ಕೆ ರಸಾಯನ ಪ್ರಯೋಗಗಳುಂಟು. ಮನುಷ್ಯ ನೆಮ್ಮದಿಯಾಗಿದ್ದುಕೊಂಡು ತನ್ನ ವಂಶಾಭಿವೃದ್ಧಿ ಹಾಗೂ ಸುಖಸಂತೋಷಕ್ಕಾಗಿ ಸತ್ಸಂತಾನವನ್ನು ಪಡೆಯುವುದಕ್ಕೋಸ್ಕರ ವಾಜೀಕರಣಾವೆಂಬ ವಿಧಿಯುಂಟು. ಇವೆಲ್ಲವನ್ನೂ ಒಳಗೊಂಡಿರುವ ಆಯುರ್ವೇದವನ್ನು ಶಲ್ಯ, ಶಾಲಾಕ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದತಂತ್ರ (ವಿಷಚಿಕಿತ್ಸಾ) ರಸಾಯನ ತಂತ್ರ ಮತ್ತು ವಾಜೀಕರಣತಂತ್ರಗಳೆಂದು ಎಂಟುವಿಧವಾಗಿ ಮಾಡಿದ್ದಾರೆ.

ಇತಿಹಾಸ: ಭೂಲೋಕದಲ್ಲಿ ರೋಗರುಜಿನಗಳು ಜನರನ್ನು ಪೀಡಿಸುತ್ತಿರುವುದರಿಂದ ತಮ್ಮ ಪುರುಷಾರ್ಥಸಾಧನೆಗಳಿಗೆ ವಿಘ್ನವಾಗುತ್ತಿರುವುದನ್ನು ನಿವಾರಿಸುವುದಕ್ಕಾಗಿ ಹಿಂದೆ ಭಾರದ್ವಾಜನೇ ಮೊದಲಾಗಿ ಅನೇಕ ಮಹರ್ಷಿಗಳು ಹಿಮಾಲಯದ ತಪ್ಪಲಲ್ಲಿ ಸಭೆ ಸೇರಿದರು. ಇವರೆಲ್ಲರ ತೀರ್ಮಾನದಂತೆ ಭಾರದ್ವಾಜ ಇಂದ್ರನ ಬಳಿಗೆ ಹೋಗಿ