ಪುಟ:Mysore-University-Encyclopaedia-Vol-1-Part-2.pdf/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾವೂ ಕುಶಲವೈದ್ಯರೆಂದು ಪ್ರಶಂಸೆ ಮಾಡಿಕೊಳ್ಳುವವರು-ಸೆದ್ಧಸಾಧಕರು. ದೊಡ್ಡ ದೊಡ್ಡ ಗ್ರಂಥಗಳು, ಔಷಧಗಳು ಮತ್ತು ಉಪಕರಣಗಳು-ಮುಂತಾದವನ್ನು ಪ್ರದರ್ಶಿಸುತ್ತ ತಾವು ಶಾಸ್ತ್ರಜ್ನ್ಯರೆಂದು ನಟಿಸುವವರು ಛದ್ಮಚರರು.ಇವರಿಬ್ಬರ ಪ್ರಾಣಘಾತಕರೂ ಆಗಿರುತ್ತಾರೆ.

ಶಾಸ್ತ್ರಧೃ... ಮತ್ತು ಪ್ರತ್ಯಕ್ಷದ್ರುಶ್ತಿಗಳೆರಡನ್ನೂಹೊಂದಿರುವ ವೈದ್ಯನ ...ನ ಅಭಿವೃದ್ದಿಯಾಗುತ್ತದೆ.ಒಂದೇ ಶಸ್ತ್ರವನ್ನು ಓದಿರುವವ ಅನೇಕವೇಳೆ ದೃಢ ನಿರ್ಧಾರವನ್ನು ಕೈಗೊಳ್ಳಲು ಅಸಮರ್ಥನಾಗುತ್ತಾನಾದ್ದರಿಂದ ವೈದ್ಯ ಅನೇಕ ಶಾಸ್ತ್ರಗಳನ್ನು ತಿಳಿದವನಾಗಿರಬೇಕು. ಉತ್ತಮ ಸ್ಮರಣಶಕ್ತಿಯುಳ್ಳವನೂ ರೋಗಗಳ ಕಾರಣ ಮತ್ತು ಸ್ವರೂಪವನ್ನು ತಿಳಿದವನೂ ಜಿತೇಂದ್ರಿಯನೂ ಅಪತ್ಕಾಲದಲ್ಲಿ ದೃತಿಗೆಡದೆ ಚಿಕಿತ್ಸೆ ಮಾಡುವವನೂ ಉತ್ಕೃಷ್ತ ಔಷದ ಸಂಗ್ರಹವುಳ್ಳವನೂ ಆದ ವೈದ್ಯ ಮಾತ್ರ ಚಿಕಿತ್ಸೆ ಮಾಡಲು ಅರ್ಹನಾಗುತ್ತಾನೆ.

ರೋಗವೆಂಬ ಕೆಸರಿನಲ್ಲಿ ಬಿದ್ದು ನರಳುತ್ತಿರುವವರನ್ನು ಮೇಲೆತ್ತಲು ವೈದ್ಯ ಸಿದ್ದಹಸ್ತನಾಗಿರಬೇಕು.ಜೀವದಾನಕ್ಕಿಂತ ಮಿಗಿಲಾದ ದಾನ ಬೇರೊಂದಿಲ್ಲ.ಭೊತ ದಯೆಯೇ ವೈದ್ಯವೃತ್ತಿಯ ತಿರುಳು.


ಧರ್ಮಕ್ಕೆ ವಿರೋಧವಲ್ಲದ ರೀತಿಯಲ್ಲಿ ವೈಧ್ಯವೃತ್ತಿಯನ್ನು ನಡೆಸಬೇಕು. ಅಂತೆಯೇ ತನ್ನ ವೃತ್ತಿಪಾಲನೆಯಲ್ಲಿ ತಾನೂ ಪುರುಷಾರ್ಥಗಳಾನ್ನು ಸಾಧಿಸಬೇಕು. ಧರ್ಮಜ್ಞರು, ಧರ್ಮಪ್ರತಿಷ್ಠಾಪಕರು, ಅಧ್ಯಾತ್ಮವಿಧ್ಯಾಕುಶಲರು, ಗುರು, ಮಾತಾ ಪಿತೃಬಂಧುಗಳು ಮುಂತಾದವರು ಆರೊಗ್ಯವನ್ನು ರಕ್ಷಿಸುವುದು, ಆಯುರ್ವೇಧೋಕ್ತ ಆತ್ಮಜ್ಞಾನವನ್ನು ಅನುಷ್ಠಾನಕ್ಕೆ ತರುವುದು ಇವು ವೃತ್ತಿಯಲ್ಲಿ ಧರ್ಮಸಾಧನೆ.ರಾಜರು,ಧನಿಕರು ಮುಂತಾದವರ ರೋಗವನ್ನು ನಿವರಿಸಿ ಅವರು ಸಂತೋಷದಿಂದ ಕೊಡುವ ಧನವನ್ನು ಸಂಗ್ರಹಿಸುವುದು ತನ್ನನ್ನು ಅಶ್ರಯಿಸಿದವರನ್ನು ರಕ್ಷಿಸುವುದು ವೃತ್ತಿಯಲ್ಲಿ ಅರ್ಥಸಾಧನೆ,ವಿದ್ವಜ್ಜನರಿಂದ ಪ್ರಶಂಸೆ, ಸರ್ವರಿಂದಲೂ ಗೌರವ ಮತ್ತು ವೃತ್ತಿಕುಶಲತೆಗಳನ್ನು ಸಂಪಾದಿಸಿ ತನ್ಮುಲಕ ಇಷ್ಟಾರ್ಥಗಳನ್ನು ಹೊಂದುವುದು ಕಾಮಸಾದನೆ.ಈ ಮೂರರ ಸಮ್ಯಗನುಷ್ಯಾನರಿಂದ ಜನ್ಮಾಂತ್ಯದಲ್ಲಿ ಬ್ರಹ್ಮಸಾಯುಜ್ಯ-ಇವೇ ವೈದ್ಯನು ಸಾಧಿಸಬೇಕಾದ ವೃತ್ತಿಮೌಲ್ಯಗಳು.

ಎಲ್ಲ ಪ್ರಾಣಿಗಳಲ್ಲಿ ಮೈತ್ರಿ ಆರ್ತರಲ್ಲಿ ಕರುಣೆ,ಸುಲಭಸಾಧ್ಯವ್ಯಧಿಗಳನ್ನುಳ್ಳೆವರಲ್ಲಿ ಪ್ರೀತಿ,ಮರಣೋನ್ಮಖರಾದವರಲ್ಲಿ ಉಪೇಕ್ಷೆ ವೈದ್ಯವೃತ್ತಿಯ ನಾಲ್ಕು ಮುಖಗಳಾಗಿವೆ.ಒಳ್ಳೆಯ ಶಾಸ್ತ್ರ...ನ ಮತ್ತು ಪ್ರತ್ಯಕ್ಷಾನುಭವಗಳುಳ್ಳ ವೈದ್ಯ ಮೊದಲು ನಿರ್ವಯಿಸಿ ಅನ೦ತರ ಯುಕ್ತ ಚಿಕೆತ್ಸೆಯನ್ನು ಕೋಡಲೆ ಮಾಡಬೇಕು.ರೋಗವನ್ನು ಸರಿಯಾಗಿ ತಿಳಿಯದೆ ಚಿಕಿತ್ಸೆಯನ್ನು ಪ್ರಾರ೦ಬಿಸಿ ಯಶಶ್ವೀ ಔಷಧಿಗಳನ್ನು ಕೋಟ್ಟರೋ ಸಿದ್ಧಿ ನಿಶ್ಚಿತವಲ್ಲ. ...ನವೆ೦ಬ ದೀಪದ ಬೆಳಕಿನಲ್ಲಿ ಯಾವ ವೈದ್ಯನ ವೈದ್ಯತ್ವವೇ ಹೊರತು ರೋಗಿಯ ಆಯಸ್ಸಿಗೆ ವೈದ್ಯಪ್ರಭುವಲ್ಲ.ರೊಗಿಯ ಕೊನೆಯುಸಿರಿರುವವರೆಗೊ ಯುಕ್ತ ಚಿಕಿತ್ಸೆಗಳನ್ನು ಮಾಡಬೇಕು,ಮರಣ ಲಕ್ಷಣಗಳು ಕ೦ಡುಬರುತ್ತಿರುವ ರೋಗಿಗಳನೇಕರು ದೈವಕೃಪೆಯಿ೦ದ ಮೃತ್ಯವನ್ನು ಜಯಿಸುತ್ತಾರೆ.

ಚಿಕಿತ್ಸಾವೃತ್ತಿಯನ್ನು ಯಾರು ಕೇವಲ ಧನಾರ್ಜನೆಗಾಗಿಯೇ ಮಾಡುತ್ತಾರೋ ಅವರು ಕಾ೦ಚನರಾಶಿಯನ್ನು ಬಿಟ್ಟು ಮರಳಿನ ರಾಶಿಯನ್ನು ಸ೦ಪಾದಿಸುತ್ತಾರೆ. ರೋಗಿಯ ಪರೀಕ್ಷೆ:ಈವಿಷಯದಲ್ಲಿ ಆಯುರ್ವೇದ ಶಾಸ್ತ್ರ ಎರಡು ಪದ್ದತಿಗಳನ್ನು ತಿಳಿಸಿದೆ: ೧.ತ್ರಿವಿಧ ಪರೀಕ್ಷಾಪದ್ಧತಿ-ಪ್ರಶ.ಪೊ.೬-೭ನೆಯ ಶತಮಾನದಲ್ಲಿದ್ದೆನೆ೦ದು ಹೇಳಲಾಗುವ ಹಹರ್ಷಿ ಪುನರ್ವಸು ಆತ್ರೇಯನಿ೦ದ ಪತಿಪಾದಿಸಲ್ಪಟ್ಟ ಆರ್ಷ ಪದ್ದತ್ತಿ.ಆಪ್ತೋಪದೇಶ,ಪತ್ಯಕ್ಷ ಮತ್ತು ಅನುಮಾನಗಳೆ೦ಬ ಮೂರು ಮುಖ್ಯಪ್ರಮಾಣಗಳನ್ನೇ ಆಧರಿಸಿ ರೋಗಿಯನ್ನು ಪರೀಕ್ಷಿಸುವುದು ಇದರ ಮುಖ್ಯ ಲಕ್ಷ್ಣ. ಶಾಸ್ತ್ರಗ್ರ೦ಥಗಳ ಅಧ್ಯಯನ,ಗುರುಗಳು,ಪರಿಣತರು ಮತ್ತು ಆಪ್ತರುಗಳು (ರೋಗಕಲಾದಲ್ಲಿ ರೊಗಿಯೂ ಒಬ್ಬ ಆಪ್ತ)ಹೇಳಿಕೆಗಳಿ೦ದ ರೋಗ...ನವನ್ನು ಪಡೆಯುವುದು ಆಪ್ತೊಪದೇಶ;ವೈದ್ಯ ತನ್ನ ಪ೦ಚ ...ನೇ೦ದ್ರಿಯಗಳನ್ನೆ ಉಪಯೋಗಿಸಿ ರೋಗಿಯ ಶರೀರವನ್ನು ವಿಶದವಾಗಿ ಪರೀಕ್ಷಿಸುವುದರ ಮೂಲಕ ರೋಗ...ನವನ್ನು ಹೊ೦ದುವುದು ಪ್ರತ್ಯಕ್ಷ.ಪ್ರತ್ಯಕ್ಷಪರೀಕ್ಷೆಯ ವ್ಯಾಪ್ತಿಗೆ ಒಳಪಡದ ವಿಶಯಗಳನ್ನು,ತರ್ಕ,ಯುಕ್ತಿ,ಪ್ರಶ್ನೆಗಳಿ೦ದ ತಿಲಿದುಕೊಳ್ಳುವುದು ಅನುಮಾನ-ಈ ಮೂವರಲ್ಲಿ ಪ್ರತ್ಯಕ್ಷ ಪರೀಕ್ಷೆಗೆ ಹೆಚ್ಚು ಪ್ರಾಮುಖ್ಯ.

  ಪ್ರತ್ಯಕ್ಷಪರೀಕ್ಷೆಯಲ್ಲಿ ಚಕ್ಷುರಿ೦ದ್ರಿಯದಿ೦ದ ಶರೀರದ ವರ್ಣ,ಆ೦ಗಾ೦ಗಗಳ ಆಕಾರ ಮತ್ತು ಪ್ರಮಾಣಗಳು ಶ್ರೋತ್ರೇ೦ದ್ರಿಯದಿ೦ದ ಸ್ವರ ಮತ್ತು ಅ೦ಗಾವಯಾವಗಳಲ್ಲಾಗುವ ಶಬ್ದಗಳೊ ಪ್ರಾಣೇ೦ದ್ರಿಯದಿ೦ದ ಗಒಧವೊ ಸ್ಪರ್ಶನೇ೦ದ್ರಿಯದಿ೦ದ ಶೀತೋಷ್ಣಾದಿಗುಣಗಳು 






























































































































ಒಳ್ಳೆಯ ಶಾಸ್ತ್ರಜಝ್ಣೈಆ ಮತ್ತು ಪ್ರತ್ಯಕ್ಷಾನುಭವಗ