ಪುಟ:Mysore-University-Encyclopaedia-Vol-1-Part-2.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪಾಕ-ಆಲ್ಬುಮೆನ್

ಗ್ಯಾಬ್ರೋ, ಆಲಿವೀನ್ ಗ್ಯಾಬ್ರೊ ನೊರೈಟ್ ಮತ್ತು ಟ್ರಾಕ್ಟೊಲೈಟ್ ಗಳು ಬಹುಮಟ್ಟಿಗೆ ಬ್ರಿಟನ್ನ್ನಿನ ಕಾರ್ನ್ ವಾಲ್, ಅಬರ್ಡೀನ್ ಷೈರ್ ಮತ್ತು ಸ್ಕಾಟ್ಲೆಂಡಿನ ಪಶ್ಚಿಮ ದ್ವೀಪಗಳಲ್ಲಿ ಹರಡಿವೆ. ಕ್ವಾರ್ಟ್ಸ್ ಗ್ಯಾಬ್ರೊಡೈಕ್ ಮತ್ತು ಸಿಲ್ಲುಗಳೋಪಾದಿಯಲ್ಲಿ ಬ್ರಿಟನ್, ಪೂರ್ವ ಅಮೆರಿಕ, ಗಯಾನ, ದಕ್ಷಿಣ ಮತ್ತು ಪಶ್ಚಿಮ ಆಸ್ಟ್ರೇಲಿಯಾಗಳಲ್ಲಿ ಕಂಡುಬಂದಿವೆ. ಬಹು ಪ್ರಸಿದ್ಧವಾದ ಅಮೆರಿಕಾದ ಸಡ್ ಬರಿ ಮತ್ತು ಡುಲುಪ್ ಬೃಹತ್ ಲೋಪೊಲಿತ್ ಗಳ ಬಹುಭಾಗ ಈ ಶಿಲೆಯಿಂದ ಕೂಡಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬುಷ್ ವೆಲ್ಡ್ ಲೋಪೊಲಿತ್ ಅನ್ನೂ ಹೆಸರಿಸಭುದು. ಅನಾರ್ಥಸೈಟ್ ಕೆನಡ, ನ್ಯೂಯಾರ್ಕ್ ಬಳಿಯ ಅಡಿರೋಂಡಾಕ್ಸ್ ಮತ್ತು ಸ್ಕ್ಯಾಂಡಿನೇವಿಗಳಲ್ಲಿ ಬ್ಯಾತೊಲಿತ್ ಗಳಾಗಿ ಕಂಡುಬರುತ್ತವೆ. ನಮ್ಮ ದೇಶದ ತಮಿಳುನಾಡಿನ ಸಿತ್ತಂಪುಂಡಿ, ಬಿಹಾರ್, ಒರಿಸ್ಸಾ ಮಾತು ಪಶ್ಚಿಮ ಬಂಗಾಲದ ಹಲವಾರು ಪ್ರದೇಶಗಳಲ್ಲಿ ಈ ಶಿಲೆಯನ್ನು ಕಾಣಬಹುದು.

ಡಾಲರ್ಮೈಟ್ ಗಳು ಪ್ರಪಂಚದ ಅನೇಕ ಕಡೆ ಸಮೂಹಗಳಾಗಿ ಕಂಡುಬಂದಿವೆ. ಪ್ರತಿ ಸಮೂಹದಲ್ಲಿ ಒಂದೇ ಹರವುಳ್ಳ ನೂರಾರು ಡೈಕುಗಳನ್ನು ಗುರುತಿಸಲು ಸಾಧ್ಯ ಒಂಟಿ ಡೈಕುಗಳು ಅಪೂರ್ವ. ಹಲವು ಪ್ರದೇಶಗಳಲ್ಲಿ ಈ ಶಿಲೆ ಸಿಲ್ ಆಕಾರವನ್ನೂ ತಳೆದಿದೆ. ಇವು ಸಹ ಬಣ್ಣದಲ್ಲಿ ಕಪ್ಪು. ಸಾಮಾನ್ಯವಾಗಿ ಪ್ಲೇಜಿಯೋಕ್ಲೇಸ್ ಮತ್ತು ಅಗೈಟ್ ಖನಿಜಗಳಿಂದಾಗಿದೆ. ಹಲವು ವೇಳೆ ಅಲಿವೀನ್ ಹೈಪರ್ ಸ್ತೀನ್ ಮತ್ತು ಕ್ವಾರ್ಟ್ಸ್ ಗಳನ್ನು ಅಲ್ಪಪ್ರಮಾಣದಲ್ಲಿ ಗುರುತಿಸಭುದು. ಇವುಗಳ ಇರುವಿಕೆಗನುಗುಣವಾಗಿ ಅಲಿವೀನ್ ಡಾಲರೈಟ್, ಹೈಪರ್ ಸ್ತೀನ್ ಡಾಲರೈಟ್ ಮತ್ತು ಕ್ವಾರ್ಟ್ಸ್ ಡಾಲರೈಟ್ ಎಂಬ ವಿಶೇಷ ಬಗೆಗಳೂ ಉಂಟು. ಖನಿಜ ಮತ್ತು ರಾಸಾಯನಿಕ ಸಂಯೋಜನೆಗಳಲ್ಲಿ ಇವುಗಳಿಗೂ ಗ್ಯಾಬ್ರೊಗಳಿಗೂ ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲ. ಆದರೆ ರಚನೆ ಅಥವಾ ವಿನ್ಯಾಸದಲ್ಲಿ ಪರಸ್ಪರ ಹೋಲಿಕೆಯಿಲ್ಲ. ಇದು ಒಂದು ವಿಶೇಷ ರೀತಿಯ ಹೆಣೆಗೆ ರಚನೆಯನ್ನು ತೋರಿಸುತ್ತದೆ. ಮುಖ್ಯ ಖನಿಜಗಳಾದ ಪ್ಲೇಜಿಯೊಕ್ಲೇಸ್ ಮತ್ತು ಅಗೈಟ್ ಒಂದರೊಡನೊಂದು ಹೆಣೆದುಕೊಂಡಿರುತ್ತದೆ. ಇದನ್ನು ಡಾಲರಿಟಿಕ್ ಅಥವಾ ಓಫಿಟಿಕ್ ವಿನ್ಯಾಸವೆನ್ನಲಾಗಿದೆ. ನಮ್ಮ ಕರ್ನಾಟಕದಲ್ಲಿ ನೂರಾರು ಡಾಲರೈಟ್ ಡೈಕುಗಳನ್ನು ಗುರುತಿಸಲಾಗಿದೆ.

ಇನ್ನು ಬಹಿಸ್ಸರಣವರ್ಗದ ಸಾಲ್ಟ್ ಶಿಲಾಗುಂಪು. ಇದರಲ್ಲಿಯೂ ಖನಿಜ ಸಂಯೋಜನೆಯನ್ನನುಸರಿಸಿ ಹಲವಾರು ಪ್ರಭೇದಗಳಿವೆ. ಇವು ಬಣ್ಣದಲ್ಲಿ ಕಪ್ಪು ಅಥವಾ ಬೂದುಮಿಶ್ರಿತ ಕಪ್ಪು, ಜ್ವಾಲಾಮುಖದ ಶಿಲೆಯಾದ ಕಾರಣ ರಚನೆ ಅಸ್ಪಷ್ಟ. ಖನಿಜಕಣಗಳನ್ನು ಬರಿಗಣ್ಣಿನಿಂದ ಗುರುತಿಸಲು ಸಾಧ್ಯವಿಲ್ಲ. ಹಲವು ಬಾರಿ ನಾನಾ ಆಕಾರ ಮತ್ತು ಗಾತ್ರದ ಅನಿಲರಂಧ್ರಗಳಿರುವುದುಂಟು. ಇವು ಸಾಮಾನ್ಯವಾಗಿ ಸಿಲಿಕ, ಜಿಯೊಲೈಟ್, ಎಪಿಡೋಟ್, ಕ್ಯಾಲ್ಸೈಟ್ ಮುಂತಾಗಿ ವಿವಿಧ ಅನುಷಂಗಿಕ ಖನಿಜಗಳಿಂದ ತುಂಬಿರುತ್ತವೆ.

ಆದರೆ ಸೂಕ್ಷ್ಮದರ್ಶಕದ ಮೂಲಕ ಶಿಲೆಯನ್ನು ಪರೀಕ್ಷಿಸಿದಾಗ ಒಂದು ಬಗೆಯ ವಿಶೇಷ ರಚನೆಯನ್ನು ಕಾಣಬಹುದು. ಇದನ್ನು ಬೆಸಾಲ್ಟಿಕ್ ವಿನ್ಯಾಸವೆಂದೂ ಕರೆಯುತ್ತಾರೆ. ಸೂಕ್ಷ್ಮಸೂಜಿಯಾಕಾರಾದ ಪ್ಲೇಜಿಯೊಕ್ಲೇಸ್ ಗಳಿಂದುಂಟಾದ ಬಗೆಬಗೆಯ ಚೌಕಟ್ಟುಗಳ ನಡುವೆ ಅಗೈಟ್, ಆಲಿವೀನ್, ಮ್ಯಾಗ್ನಟೈಟ್ ಮುಂತಾದ ಖನಿಜಗಳ ಸೂಕ್ಷ್ಮಕಣಗಳು ಅಡಕವಾಗಿರುತ್ತವೆ. ಹಲವು ಸಂದರ್ಭಗಳಲ್ಲಿ ಪಾರ್ ಫಿರಿಟಿಕ್ ಅಥವಾ ಅಸಮಕಣರಚನೆಯೂ ಕಂಡುಬರುವುದುಂಟು. ಸೂಕ್ಷ್ಮ ವಿನ್ಯಾಸದ ನಡುವೆ ಅಲ್ಲಲ್ಲಿ ದೊಡ್ಡ ದೊಡ್ಡ ಖನಿಜದ ಹರಳುಗಳು ತೋರಿಬರುತ್ತವೆ. ಇವೇ ಪಾರ್ ಫಿರಿಟಿಕ್ ಬೆಸಾಲ್ಟ್ ಗಳು.

ಬೆಸಾಲ್ಟ್ ಬಹುಮಟ್ಟಿಗೆ ಪ್ಲೇಜಿಯೋಕ್ಲೇಸ್ ಮತ್ತುಅ ಅಗೈಟ್ ಗಳನ್ನು ಪ್ರಧಾನ ಖನಿಜಗಳಾಗಿ ಹೊಂದಿರುತ್ತದೆ. ಹಲವು ಸಂದರ್ಭಗಳಲ್ಲಿ ಆಲಿವೀನ್ ಅಥವಾ ಕ್ವಾರ್ಟ್ಸ್ ಸಹ ಅಲ್ಪ ಪ್ರಮಾಣದಲ್ಲಿರಬಹುದು. ಇವನ್ನು ಕ್ರಮವಾಗಿ ಆಲಿವೀನ್ ಬೆಸಾಲ್ಟ್ ಅಥವಾ ಕ್ವಾರ್ಟ್ಸ್ ಬೆಸಾಲ್ಟ್ ಎಂದು ಹೆಸರಿಸಲಾಗಿದೆ.

ಬೆಸಾಲ್ಟ್ ಗುಂಪಿನ ಶಿಲೆಗಳು ದಕ್ಷಿಣ ಅಮೆರಿಕಾದ, ಬ್ರಿಟನ್ನಿನ ಉತ್ತರ ಭಾಗ, ಐಸ್ಲೆಂಡ್ ಮತ್ತು ಗ್ರೀನ್ ಲೆಂಡ್ ಜಾಡು ಮತ್ತು ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಪ್ರಮುಖವಾಗಿ ಕಂಡುಬಂದಿವೆ. ಇಲ್ಲೆಲ್ಲ ಇವು ಸಹಸ್ರಾರು ಚ.ಮೈ.ವಿಸ್ತೀರ್ಣವನ್ನಾಕ್ರಮಿಸಿವೆ. ನಮ್ಮ ದೇಶದಲ್ಲಿ ಇವುಗಳ ವ್ಯಾಪ್ತಿ ಸು. ೪,೮೨,೭೦೦ ಚ.ಕಿ.ಮೀ (ಬಿ.ವಿ.ಜಿ)

ಅಲ್ಪಾಕ: ಈಕ್ವೆಡೆರ್ ಮತ್ತು ಪೆರುದೇಶಗಳಿಂದ ಪೆಟಗೋನಿಯ ಬಯಲುಗಳವರೆಗೆ ಹಬ್ಬಿರುವ ದಕ್ಷಿಣ ಅಮೆರಿಕದ ಕಾಡಿನಲ್ಲಿ ನೆಲೆಸಿರುವ ಗ್ವಾನಕೋ ಎಂಬ ಮೃಗಸಂತತಿಗೆ ಸೇರಿದ ಪ್ರಾಣಿ (ಲಾಮ ಪಕೋಸ್). ಇದು ಒಂಟೆಯ ವಂಶಕ್ಕೆ ಸೇರಿದೆ. ಆ ಜಾತಿಗಳಿಗಿರುವಂತೆಯೇ ನೀಳವಾದ ಕತ್ತಿದೆ; ಆದರೆ ಕೊಂಕಾಗಿಲ್ಲ. ಇದಕ್ಕೆ ಡುಬ್ಬವೂ ಇಲ್ಲ. ಇವು ಲಾಮಗಳಿಗಿಂತಲೂ ಸಣ್ಣವು. ಆಲ್ಪಾಕ ನೋಡಲು ವಿಕಾರ. ಒರಗುವ ಕುರ್ಚಿಗೆ ಕಂಬಳಿ ಹೊದಿಸಿ ಅದಕ್ಕೆ ಒಂಟೆಯಂಥಹ ಉದ್ದನೆಯ ಕತ್ತನ್ನು ಜೋಡಿಸಿದಂತೆ ಇದರ ಆಕಾರ. ಏಷ್ಯ ಖಂಡದಲ್ಲಿ ಒಂಟೆಗಳು ಹಿಂದಿನಿಂದ ಉಪಯುಕ್ತವಾಗಿರುವಷ್ಟೇ ಬಹು ಪ್ರಾಚೀನ ಕಾಲದಿಂದ ದಕ್ಷಿಣ ಅಮೆರಿಕದ ಜನರಿಗೆ ಆಲ್ಪಾಕಗಳು ಉಪಯುಕ್ತವಾಗಿವೆ. ಮತ್ತಾವ ಮೃಗವೂ ಏರಲಾರದ ಎತ್ತರದಲ್ಲಿ ನೂರು ಪೌಂಡುಗಳಿಗೂ ಹೆಚ್ಚಿನ ತೂಕವನ್ನು ಇವು ಹೊರಬಲ್ಲವು. ಇದರ ಹಾಲು ಕುಡಿಯಬಹುದು. ಆದರೆ ಅಷ್ಟು ರುಚಿಯಾಗಿಲ್ಲ. ಮಾಂಸ ತಿನ್ನಬಹುದು. ಹೆಣ್ಣು ಆಲ್ಪಾಕ ೧೧ ತಿಂಗಳು ಗರ್ಭಧರಿಸಿ ಒಂದೇ ಒಂದು ಕರು ಈಯುತ್ತದೆ. ತುಂಬ ನವಿರಾಗಿಯೂ ಬಲವಾಗಿಯೂ ಇರುವ ಉಣ್ಣೆಗಾಗಿ ಆಲ್ಪಾಕಗಳು ಪ್ರಖ್ಯಾತ. ಪೆರುವಿನ ಜನ, ಇವನ್ನು ಸಹಸ್ರಾರು ವರ್ಷಗಳಿಂದ ಪಳಗಿಸಿಕೊಂಡು ಸಾಕುತ್ತಿದ್ದಾರೆ. ಈ ಉಣ್ಣೆ ಹೊಳೆಗೆಂಪಿನಿಂದ ಕಪ್ಪಿನವರೆಗೆ, ಬಿಳುಪಿನಿಂದ ಬಲು ಬಗೆಯ ಕಂದು ಬಣ್ಣಗಳವರೆಗೆ ಅನೇಕ ತರದ ಬಣ್ಣಗಳಲ್ಲಿ ದೊರೆಯುತ್ತದೆ. ಉಣ್ಣೆ ತುಂಬ ಉದ್ದವಾಗಿ ಜಡೆಗಟ್ಟಿರುತ್ತದೆ. ಬೊಲಿವಿಯ ಮತ್ತು ದಕ್ಷಿಣ ಪೆರುವಿನ ಪ್ರಸ್ಥಭೂಮಿಗಳಲ್ಲಿ, ೧೫,೦೦೦ ಗಳಿಗೂ ಹೆಚ್ಚಿನ ಎತ್ತರದಲ್ಲಿ ಇವುಗಳನ್ನು ವರ್ಷಾದ್ಯಂತ ದೊಡ್ಡ ದೊಡ್ಡ ದೊಡ್ಡಿಗಳಲ್ಲಿ ಸಾಕುತ್ತಾರೆ. ಉಣ್ಣೆಯಿಳಿಸುವ ಕಾಲದಲ್ಲಿ ಪ್ರತಿವರ್ಷವೂ ಇವುಗಳನ್ನು ಹಳ್ಳಿಗಳಿಗೆ ಹೊಡೆಯುತ್ತಾರೆ. ಅದರ ಉಣ್ಣೆಯಲ್ಲಿ ಎರಡು ವಿಧವುಂಟು. ಹವಾಸ್ಕ ಎಂಬುದು ಉದ್ದವೂ ಒರಟೂ ಆದ ಉಣ್ಣೆ. ಅದಕ್ಕಿಂತ ನವಿರಾಗಿಯೂ ಸಣ್ಣದಾಗಿಯೂ ಇರುವ ಉಣ್ಣೆಗೆ ಕುಂಬಿ ಎಂದು ಹೆಸರು. ಇಂಗ್ಲೆಂಡ್ ದೇಶ ಆಲ್ಪಾಕದ ಉಣ್ಣೆಯನ್ನು ತರಿಸಿಕೊಂಡು (೧೮೦೮) ಇದರಿಂದ ದಾರ ತೆಗೆಯಲು ಪ್ರಾರಂಬಿಸಿತು. ಈ ಉಣ್ಣೆಯನ್ನು ಹತ್ತಿಯ ನೂಲಿನೊಡನೆ ಮಿಶ್ರಿಸಿ ಹೊಳಪುಳ್ಳ ನಯವಾದ ಹಲವು ತರಹದ ನೂಲು ತಯಾರಿಸುತ್ತಾರೆ. ಆಲ್ಪಾಕ ಉಣ್ಣೆಯಿಲ್ಲದಿರುವ ಕೆಲವು ಬಟ್ಟೆಗಳಿಗೂ ಈ ಗುಣವಿರುವ ಕಾರಣಾ ಆಲ್ಪಾಕವೆಂದೇ ಹೆಸರು ಬಂದಿದೆ.

ಅಲ್ಪಿನಿಯ : ಅಲಂಕಾರದ ಎಲೆಸಸ್ಯ ಹಬ್ಬುವ (ಕ್ರೀಪಿಂಗ್) ಗುಪ್ತ ಕಾಂಡವಿದೆ. ಎಲೆ ನೀಳಾಕಾರ, ನಯವಾದ ಅಂಚು, ಮೊನಚು ಅಥವಾ ಲಾಂಬಾಗ್ರ ತುದಿ. ಮಿಶ್ರ ಹೂಗೊಂಚಲು, ಹೂ ಎಲೆ ಹೂದಳ ಕೂಡಿಕೆ ೬, ಎರಡು ವೃತ್ತ, ಮೊದಲನೆಯ ವೃತ್ತ ೩, ಕೊಳವೆ ಆಕಾರದ ಎರಡನೆಯ ವೃತ್ತ ೩. ಅಸಮಭಾಗ ಕೆಳಭಾಗ ದೊಡ್ಡದು; ಮತ್ತು ಉಳಿದ ಸಣ್ಣ ಬಂಜೆ ಕೇಸರ. ಹಣ್ಣು ಮೂರು ಕೋಶದ ಕ್ಯಾಪ್ ಸೂಲ್. ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಕುಂಡಗಳಲ್ಲಿ ತೇವಾಂಶವಿರುವ ಪ್ರದೇಶಗಳಲ್ಲಿಯೂ ಬೆಳೆಸಬಹುದು.

ಆಲ್ಪಿನಿಯ ಸ್ಯಾಂಕಿರೆ (ನ್ಯೂಗಿನಿಯದ ಮೂಲವಾಸಿ), ಆಲ್ಪಿನಿಯ ಗಲಾಂಗ, ಆಲ್ಪಿನಿಯ ಸ್ಟಿಸೀಯೋಸ ಮುಖ್ಯ ಪ್ರಭೇದಗಳು. ಆಲ್ಪಿನಿಯ ಕುಲದಲ್ಲಿ ೧೫೦ ಬಹುವಾರ್ಷಿಕ ಜಾತಿ ಪರ್ಣಸಸಿಗಳಿವೆ. ಈ ಸಸ್ಯಗಳನ್ನು ಗುಪಕಾಂಡದ ತುಂಡುಗಳಿಂದ ಸುಲಭವಾಗಿ ವೃಧ್ಧಿಸಬಹುದು. ಹೆಚ್ಚು ಫಲವತ್ತಾದ ಮಣ್ಣಿನಲ್ಲಿ ಬೆಳೆಸಿದರೆ, ಎಲೆಗಳ ಮೇಲೆ ಅಲಂಕಾರದ ಬಣ್ಣದ ಗೆರೆಗಳು ನಶಿಸಿಹೋಗುತ್ತವೆ. ಚೌಗಿಲ್ಲದ ಸದಾ ತೇವವಾಗಿರುವ ಸ್ಥಿತಿ ಅನುಕೂಲಕರ. (ಎಂ.ಎಚ್.ಎಂ) ಅಲ್ಬುಮೆನ್: ಕೋಳಿಮೊಟ್ಟೆಯೊಳಗಿರುವ ಬಿಳಿಯ ಭಾಗ. ಹರಳೆಣ್ಣೆಯಂತೆ ದ್ರವವೂ ಅಲ್ಲದ, ಘನವೂ ಅಲ್ಲದ ಸ್ಥಿತಿಯಲ್ಲಿರುವ ಈ ವಸ್ತುವನ್ನು ಕುದಿಯುವ ನೀರಿನಲ್ಲಿ ಸ್ವಲ್ಪ ಕಾಲ ಕಾಯಿಸಿದರೆ ಬಿಳುಪಾದ ಘನರೂಪಕ್ಕೆ ಬರುತ್ತದೆ ಅಲ್ಪಾಕ-ಆಲ್ಬುಮೆನ್

ಗ್ಯಾಬ್ರೋ, ಆಲಿವೀನ್ ಗ್ಯಾಬ್ರೊ ನೊರೈಟ್ ಮತ್ತು ಟ್ರಾಕ್ಟೊಲೈಟ್ ಗಳು ಬಹುಮಟ್ಟಿಗೆ ಬ್ರಿಟನ್ನ್ನಿನ ಕಾರ್ನ್ ವಾಲ್, ಅಬರ್ಡೀನ್ ಷೈರ್ ಮತ್ತು ಸ್ಕಾಟ್ಲೆಂಡಿನ ಪಶ್ಚಿಮ ದ್ವೀಪಗಳಲ್ಲಿ ಹರಡಿವೆ. ಕ್ವಾರ್ಟ್ಸ್ ಗ್ಯಾಬ್ರೊಡೈಕ್ ಮತ್ತು ಸಿಲ್ಲುಗಳೋಪಾದಿಯಲ್ಲಿ ಬ್ರಿಟನ್, ಪೂರ್ವ ಅಮೆರಿಕ, ಗಯಾನ, ದಕ್ಷಿಣ ಮತ್ತು ಪಶ್ಚಿಮ ಆಸ್ಟ್ರೇಲಿಯಾಗಳಲ್ಲಿ ಕಂಡುಬಂದಿವೆ. ಬಹು ಪ್ರಸಿದ್ಧವಾದ ಅಮೆರಿಕಾದ ಸಡ್ ಬರಿ ಮತ್ತು ಡುಲುಪ್ ಬೃಹತ್ ಲೋಪೊಲಿತ್ ಗಳ ಬಹುಭಾಗ ಈ ಶಿಲೆಯಿಂದ ಕೂಡಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬುಷ್ ವೆಲ್ಡ್ ಲೋಪೊಲಿತ್ ಅನ್ನೂ ಹೆಸರಿಸಭುದು. ಅನಾರ್ಥಸೈಟ್ ಕೆನಡ, ನ್ಯೂಯಾರ್ಕ್ ಬಳಿಯ ಅಡಿರೋಂಡಾಕ್ಸ್ ಮತ್ತು ಸ್ಕ್ಯಾಂಡಿನೇವಿಗಳಲ್ಲಿ ಬ್ಯಾತೊಲಿತ್ ಗಳಾಗಿ ಕಂಡುಬರುತ್ತವೆ. ನಮ್ಮ ದೇಶದ ತಮಿಳುನಾಡಿನ ಸಿತ್ತಂಪುಂಡಿ, ಬಿಹಾರ್, ಒರಿಸ್ಸಾ ಮಾತು ಪಶ್ಚಿಮ ಬಂಗಾಲದ ಹಲವಾರು ಪ್ರದೇಶಗಳಲ್ಲಿ ಈ ಶಿಲೆಯನ್ನು ಕಾಣಬಹುದು.

ಡಾಲರ್ಮೈಟ್ ಗಳು ಪ್ರಪಂಚದ ಅನೇಕ ಕಡೆ ಸಮೂಹಗಳಾಗಿ ಕಂಡುಬಂದಿವೆ. ಪ್ರತಿ ಸಮೂಹದಲ್ಲಿ ಒಂದೇ ಹರವುಳ್ಳ ನೂರಾರು ಡೈಕುಗಳನ್ನು ಗುರುತಿಸಲು ಸಾಧ್ಯ ಒಂಟಿ ಡೈಕುಗಳು ಅಪೂರ್ವ. ಹಲವು ಪ್ರದೇಶಗಳಲ್ಲಿ ಈ ಶಿಲೆ ಸಿಲ್ ಆಕಾರವನ್ನೂ ತಳೆದಿದೆ. ಇವು ಸಹ ಬಣ್ಣದಲ್ಲಿ ಕಪ್ಪು. ಸಾಮಾನ್ಯವಾಗಿ ಪ್ಲೇಜಿಯೋಕ್ಲೇಸ್ ಮತ್ತು ಅಗೈಟ್ ಖನಿಜಗಳಿಂದಾಗಿದೆ. ಹಲವು ವೇಳೆ ಅಲಿವೀನ್ ಹೈಪರ್ ಸ್ತೀನ್ ಮತ್ತು ಕ್ವಾರ್ಟ್ಸ್ ಗಳನ್ನು ಅಲ್ಪಪ್ರಮಾಣದಲ್ಲಿ ಗುರುತಿಸಭುದು. ಇವುಗಳ ಇರುವಿಕೆಗನುಗುಣವಾಗಿ ಅಲಿವೀನ್ ಡಾಲರೈಟ್, ಹೈಪರ್ ಸ್ತೀನ್ ಡಾಲರೈಟ್ ಮತ್ತು ಕ್ವಾರ್ಟ್ಸ್ ಡಾಲರೈಟ್ ಎಂಬ ವಿಶೇಷ ಬಗೆಗಳೂ ಉಂಟು. ಖನಿಜ ಮತ್ತು ರಾಸಾಯನಿಕ ಸಂಯೋಜನೆಗಳಲ್ಲಿ ಇವುಗಳಿಗೂ ಗ್ಯಾಬ್ರೊಗಳಿಗೂ ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲ. ಆದರೆ ರಚನೆ ಅಥವಾ ವಿನ್ಯಾಸದಲ್ಲಿ ಪರಸ್ಪರ ಹೋಲಿಕೆಯಿಲ್ಲ. ಇದು ಒಂದು ವಿಶೇಷ ರೀತಿಯ ಹೆಣೆಗೆ ರಚನೆಯನ್ನು ತೋರಿಸುತ್ತದೆ. ಮುಖ್ಯ ಖನಿಜಗಳಾದ ಪ್ಲೇಜಿಯೊಕ್ಲೇಸ್ ಮತ್ತು ಅಗೈಟ್ ಒಂದರೊಡನೊಂದು ಹೆಣೆದುಕೊಂಡಿರುತ್ತದೆ. ಇದನ್ನು ಡಾಲರಿಟಿಕ್ ಅಥವಾ ಓಫಿಟಿಕ್ ವಿನ್ಯಾಸವೆನ್ನಲಾಗಿದೆ. ನಮ್ಮ ಕರ್ನಾಟಕದಲ್ಲಿ ನೂರಾರು ಡಾಲರೈಟ್ ಡೈಕುಗಳನ್ನು ಗುರುತಿಸಲಾಗಿದೆ.

ಇನ್ನು ಬಹಿಸ್ಸರಣವರ್ಗದ ಸಾಲ್ಟ್ ಶಿಲಾಗುಂಪು. ಇದರಲ್ಲಿಯೂ ಖನಿಜ ಸಂಯೋಜನೆಯನ್ನನುಸರಿಸಿ ಹಲವಾರು ಪ್ರಭೇದಗಳಿವೆ. ಇವು ಬಣ್ಣದಲ್ಲಿ ಕಪ್ಪು ಅಥವಾ ಬೂದುಮಿಶ್ರಿತ ಕಪ್ಪು, ಜ್ವಾಲಾಮುಖದ ಶಿಲೆಯಾದ ಕಾರಣ ರಚನೆ ಅಸ್ಪಷ್ಟ. ಖನಿಜಕಣಗಳನ್ನು ಬರಿಗಣ್ಣಿನಿಂದ ಗುರುತಿಸಲು ಸಾಧ್ಯವಿಲ್ಲ. ಹಲವು ಬಾರಿ ನಾನಾ ಆಕಾರ ಮತ್ತು ಗಾತ್ರದ ಅನಿಲರಂಧ್ರಗಳಿರುವುದುಂಟು. ಇವು ಸಾಮಾನ್ಯವಾಗಿ ಸಿಲಿಕ, ಜಿಯೊಲೈಟ್, ಎಪಿಡೋಟ್, ಕ್ಯಾಲ್ಸೈಟ್ ಮುಂತಾಗಿ ವಿವಿಧ ಅನುಷಂಗಿಕ ಖನಿಜಗಳಿಂದ ತುಂಬಿರುತ್ತವೆ.

ಆದರೆ ಸೂಕ್ಷ್ಮದರ್ಶಕದ ಮೂಲಕ ಶಿಲೆಯನ್ನು ಪರೀಕ್ಷಿಸಿದಾಗ ಒಂದು ಬಗೆಯ ವಿಶೇಷ ರಚನೆಯನ್ನು ಕಾಣಬಹುದು. ಇದನ್ನು ಬೆಸಾಲ್ಟಿಕ್ ವಿನ್ಯಾಸವೆಂದೂ ಕರೆಯುತ್ತಾರೆ. ಸೂಕ್ಷ್ಮಸೂಜಿಯಾಕಾರಾದ ಪ್ಲೇಜಿಯೊಕ್ಲೇಸ್ ಗಳಿಂದುಂಟಾದ ಬಗೆಬಗೆಯ ಚೌಕಟ್ಟುಗಳ ನಡುವೆ ಅಗೈಟ್, ಆಲಿವೀನ್, ಮ್ಯಾಗ್ನಟೈಟ್ ಮುಂತಾದ ಖನಿಜಗಳ ಸೂಕ್ಷ್ಮಕಣಗಳು ಅಡಕವಾಗಿರುತ್ತವೆ. ಹಲವು ಸಂದರ್ಭಗಳಲ್ಲಿ ಪಾರ್ ಫಿರಿಟಿಕ್ ಅಥವಾ ಅಸಮಕಣರಚನೆಯೂ ಕಂಡುಬರುವುದುಂಟು. ಸೂಕ್ಷ್ಮ ವಿನ್ಯಾಸದ ನಡುವೆ ಅಲ್ಲಲ್ಲಿ ದೊಡ್ಡ ದೊಡ್ಡ ಖನಿಜದ ಹರಳುಗಳು ತೋರಿಬರುತ್ತವೆ. ಇವೇ ಪಾರ್ ಫಿರಿಟಿಕ್ ಬೆಸಾಲ್ಟ್ ಗಳು.

ಬೆಸಾಲ್ಟ್ ಬಹುಮಟ್ಟಿಗೆ ಪ್ಲೇಜಿಯೋಕ್ಲೇಸ್ ಮತ್ತುಅ ಅಗೈಟ್ ಗಳನ್ನು ಪ್ರಧಾನ ಖನಿಜಗಳಾಗಿ ಹೊಂದಿರುತ್ತದೆ. ಹಲವು ಸಂದರ್ಭಗಳಲ್ಲಿ ಆಲಿವೀನ್ ಅಥವಾ ಕ್ವಾರ್ಟ್ಸ್ ಸಹ ಅಲ್ಪ ಪ್ರಮಾಣದಲ್ಲಿರಬಹುದು. ಇವನ್ನು ಕ್ರಮವಾಗಿ ಆಲಿವೀನ್ ಬೆಸಾಲ್ಟ್ ಅಥವಾ ಕ್ವಾರ್ಟ್ಸ್ ಬೆಸಾಲ್ಟ್ ಎಂದು ಹೆಸರಿಸಲಾಗಿದೆ.

ಬೆಸಾಲ್ಟ್ ಗುಂಪಿನ ಶಿಲೆಗಳು ದಕ್ಷಿಣ ಅಮೆರಿಕಾದ, ಬ್ರಿಟನ್ನಿನ ಉತ್ತರ ಭಾಗ, ಐಸ್ಲೆಂಡ್ ಮತ್ತು ಗ್ರೀನ್ ಲೆಂಡ್ ಜಾಡು ಮತ್ತು ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಪ್ರಮುಖವಾಗಿ ಕಂಡುಬಂದಿವೆ. ಇಲ್ಲೆಲ್ಲ ಇವು ಸಹಸ್ರಾರು ಚ.ಮೈ.ವಿಸ್ತೀರ್ಣವನ್ನಾಕ್ರಮಿಸಿವೆ. ನಮ್ಮ ದೇಶದಲ್ಲಿ ಇವುಗಳ ವ್ಯಾಪ್ತಿ ಸು. ೪,೮೨,೭೦೦ ಚ.ಕಿ.ಮೀ (ಬಿ.ವಿ.ಜಿ)

ಅಲ್ಪಾಕ: ಈಕ್ವೆಡೆರ್ ಮತ್ತು ಪೆರುದೇಶಗಳಿಂದ ಪೆಟಗೋನಿಯ ಬಯಲುಗಳವರೆಗೆ ಹಬ್ಬಿರುವ ದಕ್ಷಿಣ ಅಮೆರಿಕದ ಕಾಡಿನಲ್ಲಿ ನೆಲೆಸಿರುವ ಗ್ವಾನಕೋ ಎಂಬ ಮೃಗಸಂತತಿಗೆ ಸೇರಿದ ಪ್ರಾಣಿ (ಲಾಮ ಪಕೋಸ್). ಇದು ಒಂಟೆಯ ವಂಶಕ್ಕೆ ಸೇರಿದೆ. ಆ ಜಾತಿಗಳಿಗಿರುವಂತೆಯೇ ನೀಳವಾದ ಕತ್ತಿದೆ; ಆದರೆ ಕೊಂಕಾಗಿಲ್ಲ. ಇದಕ್ಕೆ ಡುಬ್ಬವೂ ಇಲ್ಲ. ಇವು ಲಾಮಗಳಿಗಿಂತಲೂ ಸಣ್ಣವು. ಆಲ್ಪಾಕ ನೋಡಲು ವಿಕಾರ. ಒರಗುವ ಕುರ್ಚಿಗೆ ಕಂಬಳಿ ಹೊದಿಸಿ ಅದಕ್ಕೆ ಒಂಟೆಯಂಥಹ ಉದ್ದನೆಯ ಕತ್ತನ್ನು ಜೋಡಿಸಿದಂತೆ ಇದರ ಆಕಾರ. ಏಷ್ಯ ಖಂಡದಲ್ಲಿ ಒಂಟೆಗಳು ಹಿಂದಿನಿಂದ ಉಪಯುಕ್ತವಾಗಿರುವಷ್ಟೇ ಬಹು ಪ್ರಾಚೀನ ಕಾಲದಿಂದ ದಕ್ಷಿಣ ಅಮೆರಿಕದ ಜನರಿಗೆ ಆಲ್ಪಾಕಗಳು ಉಪಯುಕ್ತವಾಗಿವೆ. ಮತ್ತಾವ ಮೃಗವೂ ಏರಲಾರದ ಎತ್ತರದಲ್ಲಿ ನೂರು ಪೌಂಡುಗಳಿಗೂ ಹೆಚ್ಚಿನ ತೂಕವನ್ನು ಇವು ಹೊರಬಲ್ಲವು. ಇದರ ಹಾಲು ಕುಡಿಯಬಹುದು. ಆದರೆ ಅಷ್ಟು ರುಚಿಯಾಗಿಲ್ಲ. ಮಾಂಸ ತಿನ್ನಬಹುದು. ಹೆಣ್ಣು ಆಲ್ಪಾಕ ೧೧ ತಿಂಗಳು ಗರ್ಭಧರಿಸಿ ಒಂದೇ ಒಂದು ಕರು ಈಯುತ್ತದೆ. ತುಂಬ ನವಿರಾಗಿಯೂ ಬಲವಾಗಿಯೂ ಇರುವ ಉಣ್ಣೆಗಾಗಿ ಆಲ್ಪಾಕಗಳು ಪ್ರಖ್ಯಾತ. ಪೆರುವಿನ ಜನ, ಇವನ್ನು ಸಹಸ್ರಾರು ವರ್ಷಗಳಿಂದ ಪಳಗಿಸಿಕೊಂಡು ಸಾಕುತ್ತಿದ್ದಾರೆ. ಈ ಉಣ್ಣೆ ಹೊಳೆಗೆಂಪಿನಿಂದ ಕಪ್ಪಿನವರೆಗೆ, ಬಿಳುಪಿನಿಂದ ಬಲು ಬಗೆಯ ಕಂದು ಬಣ್ಣಗಳವರೆಗೆ ಅನೇಕ ತರದ ಬಣ್ಣಗಳಲ್ಲಿ ದೊರೆಯುತ್ತದೆ. ಉಣ್ಣೆ ತುಂಬ ಉದ್ದವಾಗಿ ಜಡೆಗಟ್ಟಿರುತ್ತದೆ. ಬೊಲಿವಿಯ ಮತ್ತು ದಕ್ಷಿಣ ಪೆರುವಿನ ಪ್ರಸ್ಥಭೂಮಿಗಳಲ್ಲಿ, ೧೫,೦೦೦ ಗಳಿಗೂ ಹೆಚ್ಚಿನ ಎತ್ತರದಲ್ಲಿ ಇವುಗಳನ್ನು ವರ್ಷಾದ್ಯಂತ ದೊಡ್ಡ ದೊಡ್ಡ ದೊಡ್ಡಿಗಳಲ್ಲಿ ಸಾಕುತ್ತಾರೆ. ಉಣ್ಣೆಯಿಳಿಸುವ ಕಾಲದಲ್ಲಿ ಪ್ರತಿವರ್ಷವೂ ಇವುಗಳನ್ನು ಹಳ್ಳಿಗಳಿಗೆ ಹೊಡೆಯುತ್ತಾರೆ. ಅದರ ಉಣ್ಣೆಯಲ್ಲಿ ಎರಡು ವಿಧವುಂಟು. ಹವಾಸ್ಕ ಎಂಬುದು ಉದ್ದವೂ ಒರಟೂ ಆದ ಉಣ್ಣೆ. ಅದಕ್ಕಿಂತ ನವಿರಾಗಿಯೂ ಸಣ್ಣದಾಗಿಯೂ ಇರುವ ಉಣ್ಣೆಗೆ ಕುಂಬಿ ಎಂದು ಹೆಸರು. ಇಂಗ್ಲೆಂಡ್ ದೇಶ ಆಲ್ಪಾಕದ ಉಣ್ಣೆಯನ್ನು ತರಿಸಿಕೊಂಡು (೧೮೦೮) ಇದರಿಂದ ದಾರ ತೆಗೆಯಲು ಪ್ರಾರಂಬಿಸಿತು. ಈ ಉಣ್ಣೆಯನ್ನು ಹತ್ತಿಯ ನೂಲಿನೊಡನೆ ಮಿಶ್ರಿಸಿ ಹೊಳಪುಳ್ಳ ನಯವಾದ ಹಲವು ತರಹದ ನೂಲು ತಯಾರಿಸುತ್ತಾರೆ. ಆಲ್ಪಾಕ ಉಣ್ಣೆಯಿಲ್ಲದಿರುವ ಕೆಲವು ಬಟ್ಟೆಗಳಿಗೂ ಈ ಗುಣವಿರುವ ಕಾರಣಾ ಆಲ್ಪಾಕವೆಂದೇ ಹೆಸರು ಬಂದಿದೆ.

ಅಲ್ಪಿನಿಯ : ಅಲಂಕಾರದ ಎಲೆಸಸ್ಯ ಹಬ್ಬುವ (ಕ್ರೀಪಿಂಗ್) ಗುಪ್ತ ಕಾಂಡವಿದೆ. ಎಲೆ ನೀಳಾಕಾರ, ನಯವಾದ ಅಂಚು, ಮೊನಚು ಅಥವಾ ಲಾಂಬಾಗ್ರ ತುದಿ. ಮಿಶ್ರ ಹೂಗೊಂಚಲು, ಹೂ ಎಲೆ ಹೂದಳ ಕೂಡಿಕೆ ೬, ಎರಡು ವೃತ್ತ, ಮೊದಲನೆಯ ವೃತ್ತ ೩, ಕೊಳವೆ ಆಕಾರದ ಎರಡನೆಯ ವೃತ್ತ ೩. ಅಸಮಭಾಗ ಕೆಳಭಾಗ ದೊಡ್ಡದು; ಮತ್ತು ಉಳಿದ ಸಣ್ಣ ಬಂಜೆ ಕೇಸರ. ಹಣ್ಣು ಮೂರು ಕೋಶದ ಕ್ಯಾಪ್ ಸೂಲ್. ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಕುಂಡಗಳಲ್ಲಿ ತೇವಾಂಶವಿರುವ ಪ್ರದೇಶಗಳಲ್ಲಿಯೂ ಬೆಳೆಸಬಹುದು.

ಆಲ್ಪಿನಿಯ ಸ್ಯಾಂಕಿರೆ (ನ್ಯೂಗಿನಿಯದ ಮೂಲವಾಸಿ), ಆಲ್ಪಿನಿಯ ಗಲಾಂಗ, ಆಲ್ಪಿನಿಯ ಸ್ಟಿಸೀಯೋಸ ಮುಖ್ಯ ಪ್ರಭೇದಗಳು. ಆಲ್ಪಿನಿಯ ಕುಲದಲ್ಲಿ ೧೫೦ ಬಹುವಾರ್ಷಿಕ ಜಾತಿ ಪರ್ಣಸಸಿಗಳಿವೆ. ಈ ಸಸ್ಯಗಳನ್ನು ಗುಪಕಾಂಡದ ತುಂಡುಗಳಿಂದ ಸುಲಭವಾಗಿ ವೃಧ್ಧಿಸಬಹುದು. ಹೆಚ್ಚು ಫಲವತ್ತಾದ ಮಣ್ಣಿನಲ್ಲಿ ಬೆಳೆಸಿದರೆ, ಎಲೆಗಳ ಮೇಲೆ ಅಲಂಕಾರದ ಬಣ್ಣದ ಗೆರೆಗಳು ನಶಿಸಿಹೋಗುತ್ತವೆ. ಚೌಗಿಲ್ಲದ ಸದಾ ತೇವವಾಗಿರುವ ಸ್ಥಿತಿ ಅನುಕೂಲಕರ. (ಎಂ.ಎಚ್.ಎಂ) ಅಲ್ಬುಮೆನ್: ಕೋಳಿಮೊಟ್ಟೆಯೊಳಗಿರುವ ಬಿಳಿಯ ಭಾಗ. ಹರಳೆಣ್ಣೆಯಂತೆ ದ್ರವವೂ ಅಲ್ಲದ, ಘನವೂ ಅಲ್ಲದ ಸ್ಥಿತಿಯಲ್ಲಿರುವ ಈ ವಸ್ತುವನ್ನು ಕುದಿಯುವ ನೀರಿನಲ್ಲಿ ಸ್ವಲ್ಪ ಕಾಲ ಕಾಯಿಸಿದರೆ ಬಿಳುಪಾದ ಘನರೂಪಕ್ಕೆ ಬರುತ್ತದೆ